ಮಿರ್ಟೇಸೀ
Myrtle family | |
---|---|
Myrtus communis foliage and flowers | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಮಿರ್ಟೇಲ್ಸ್ |
ಕುಟುಂಬ: | ಮಿರ್ಟೇಸೀ Juss.[೧] |
Genera | |
About 130; see list |
ಮಿರ್ಟೇಸೀ ಅಥವಾ ಮಿರ್ಟಲ್ ಕುಟುಂಬವು ಮಿರ್ಟೇಲ್ಸ್ ಗಣದಲ್ಲಿ ಇರಿಸಲಾಗಿರುವ ದ್ವಿದಳ ಸಸ್ಯಗಳ ಕುಟುಂಬವಾಗಿದೆ. ಮಿರ್ಟಲ್, ಪೊಹುಟುಕಾವಾ, ಬೇ ರಮ್ ಟ್ರೀ, ಲವಂಗ, ಪೇರಲ, ನೇರಳೆ, ಅಕಾ (ಫೀಜೋವಾ), ಮಸಾಲೆ ಮತ್ತು ನೀಲಗಿರಿ ಈ ಗುಂಪಿನ ಕೆಲವು ಗಮನಾರ್ಹ ಸದಸ್ಯಗಳು. ಮಿರ್ಟಸ್ ಕಮ್ಯೂನಿಸ್ ಮತ್ತು ಕ್ಯಾಲಿಸ್ಟೀಮಾನ್ ಲ್ಯಾನ್ಸಿಯೊಲೇಟಸ್ ಪ್ರಭೇದಗಳು ಅಲಂಕಾರ ಸಸ್ಯಗಳಾಗಿ ಜನಪ್ರಿಯ. ಈ ಕುಟುಂಬದ ಎಲ್ಲ ಪ್ರಭೇದಗಳು ಮರಗಳಾಗಿದ್ದು, ಸುಗಂಧ ತೈಲಗಳನ್ನು ಹೊಂದಿರುತ್ತವೆ ಮತ್ತು ಹೂಗಳ ಭಾಗಗಳು ನಾಲ್ಕು ಅಥವಾ ಐದರ ಗುಣಾಕಾರಗಳಲ್ಲಿ ಇರುತ್ತವೆ.
ಗುಣಲಕ್ಷಣಗಳು
[ಬದಲಾಯಿಸಿ]ಎಲೆಗಳು ನಿತ್ಯಹರಿದ್ವರ್ಣವಾಗಿದ್ದು, ಹೆಚ್ಚಾಗಿ ವಿರುದ್ಧವಾಗಿ, ಸರಳವಾಗಿ ಮತ್ತು ಸಾಮಾನ್ಯವಾಗಿ ಸಂಪೂರ್ಣವಾಗಿರುತ್ತವೆ (ಅಂದರೆ, ಹಲ್ಲಿನ ಅಂಚು ಇಲ್ಲದೆ). ಹೂವುಗಳು ಐದು ದಳಗಳ ಮೂಲ ಸಂಖ್ಯೆಯನ್ನು ಹೊಂದಿವೆ. ಆದರೂ ಹಲವಾರು ಪ್ರಭೇದಗಳಲ್ಲಿ ದಳಗಳು ಅತಿ ಸೂಕ್ಷ್ಮ ಅಥವಾ ಇರುವುದೇ ಇಲ್ಲ. ಕೇಸರಗಳು ಸಾಮಾನ್ಯವಾಗಿ ಅನೇಕ ಸಂಖ್ಯೆಗಳಲ್ಲಿ, ಪ್ರಖರ ಬಣ್ಣಗಳನ್ನು ಹೊಂದಿದ್ದು ಎದ್ದು ಕಾಣುವಂತೆ ಇರುತ್ತವೆ.
ಎಲೆಯಂಚು ಏಕತ್ರ. ಎಲೆಗಳಲ್ಲಿ ತೈಲಗ್ರಂಥಿಗಳುಂಟು. ಕಾಂಡದ ತೊಗಟೆ ಪದರ ಪದರಗಳಾಗಿ ಸುಲಿದು ಬೀಳುತ್ತದೆ. ಹೂಗಳು ಉಭಯ ಲಿಂಗಿಗಳು. ಸೈಮ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪುಷ್ಪಪೀಠ ಹೆಚ್ಚು ಕಡಿಮೆ ಅಂಡಾಶಯದೊಂದಿಗೆ ಸೇರಿಕೊಂಡಿದೆ. ಪ್ರತಿಯೊಂದು ಹೂವಿನಲ್ಲಿ ನೀಚಸ್ಥಾನದ ಅಂಡಾಶಯವೂ ಉಂಟು. ನೀಲಗಿರಿತೈಲದ ಮರದಲ್ಲಿ ಪುಷ್ಪಪತ್ರ ಒಂದು ತೆರನ ಟೊಪ್ಪಿಯಂತಿದ್ದು ಹೂ ಅರಳುವಾಗ ಬಿದ್ದು ಹೋಗುತ್ತದೆ. ಕೇಸರಗಳು ಬಿಡಿ ಬಿಡಿಯಾಗಿರಬಹುದು ಇಲ್ಲವೆ ಅನೇಕ ಕಟ್ಟುಗಳಾಗಿ ವಿಭಾಗವಾಗಿರಬಹುದು. ಫಲ ಬೆರಿ, ಸಂಪುಟ, ಅಷ್ಟಿಫಲ ಹೀಗೆ ವಿಭಿನ್ನ ತೆರನಾಗಿದೆ.
ವೈವಿಧ್ಯತೆ
[ಬದಲಾಯಿಸಿ]ಇತ್ತೀಚಿನ ಅಂದಾಜಿನ ಪ್ರಕಾರ ಮಿರ್ಟೇಸೀ ಸುಮಾರು 132 ಜಾತಿಗಳಲ್ಲಿ ಸುಮಾರು 5,950 ಪ್ರಭೇದಗಳನ್ನು ಒಳಗೊಂಡಿದೆ.[೨][೩] ಈ ಕುಟುಂಬವು ವಿಶ್ವದ ಉಷ್ಣವಲಯದ ಮತ್ತು ಬೆಚ್ಚಗಿನ-ಸಮಶೀತೋಷ್ಣ ಪ್ರದೇಶಗಳಲ್ಲಿ ವ್ಯಾಪಕ ಹರಡಿಕೊಂದಿದೆ, ಮತ್ತು ಇದು ವಿಶ್ವದ ಅನೇಕ ಜೀವವೈವಿಧ್ಯತೆಯ ತಾಣಗಳಲ್ಲಿ ಸಾಮಾನ್ಯವಾಗಿದೆ. ಚಿಲಿ ಮತ್ತು ಅರ್ಜೆಂಟೀನಾದಲ್ಲಿನ ಮೆಟ್ರೊಸೈಡೆರೋಸ್ ಹೊರತುಪಡಿಸಿ, ಕೋಶದಂಥ ಹಣ್ಣುಗಳಾದ ನೀಲಗಿರಿ, ಕೋರಿಂಬಿಯಾ, ಅಂಗೋಫೊರಾ, ಲೆಪ್ಟೊಸ್ಪೆರ್ಮಮ್ ಮತ್ತು ಮೆಲೆಯುಕಾ ಅಮೆರಿಕ ಖಂಡದಲ್ಲಿ ಇಲ್ಲ. ತಿರುಳಿರುವ ಹಣ್ಣುಗಳನ್ನು ಹೊಂದಿರುವ ಪ್ರಭೇದಗಳು (ಸೀಬೆ ಇತ್ಯಾದಿ) ಆಸ್ಟ್ರೇಲಿಯಾ ಮತ್ತು ಮಲೇಷ್ಯಾ ( ಆಸ್ಟ್ರೇಲಿಯಾ ಪರಿಸರ ವಲಯ ) ಮತ್ತು ನಿಯೋಟ್ರೊಪಿಕ್ಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತವೆ. ನೀಲಗಿರಿ ಆಸ್ಟ್ರೇಲಿಯಾದ ಹೆಚ್ಚು ಆರ್ದ್ರ ಭಾಗಗಳಲ್ಲಿ ಪ್ರಬಲವಾದ, ಸರ್ವವ್ಯಾಪಿ ಮರವಾಗಿದೆ ಮತ್ತು ಫಿಲಿಪೈನ್ಸ್ ನ ಉತ್ತರದವರೆಗೂ ವಿರಳವಾಗಿ ಬೆಳೆಯುತ್ತವೆ. ರೆಗ್ನಾನ್ಸ್ ನೀಲಗಿರಿ ವಿಶ್ವದ ಅತಿ ಎತ್ತರದ ಹೂಬಿಡುವ ಸಸ್ಯವಾಗಿದೆ. ಆಸ್ಟ್ರೇಲಿಯಾದ ಇತರ ಪ್ರಮುಖ ತಳಿಗಳು ಕ್ಯಾಲಿಸ್ಟೆಮನ್ (ಬಾಟಲ್ ಬ್ರಷ್), ಸಿಜೈಜಿಯಂ ಮತ್ತು ಮೆಲಲೂಕಾ (ಪೇಪರ್‌ಬಾರ್ಕ್ಸ್). ಆಸ್ಟ್ರೇಲಿಯಾ ಮೂಲದ ಓಸ್ಬೋರ್ನಿಯಾ ಕುಲದ ಪ್ರಭೇದಗಳು ಮ್ಯಾಂಗ್ರೋವ್‍ಗಳಾಗಿವೆ. ಯುಜೇನಿಯಾ, ಮಿರ್ಸಿಯಾ ಮತ್ತು ಕ್ಯಾಲಿಪ್ರ್ಯಾಂಥೆಸ್‍ಗಳು ನಿಯೋಟ್ರೊಪಿಕ್ಸ್‌ನಲ್ಲಿನ ದೊಡ್ಡ ತಳಿಗಳಲ್ಲಿ ಸೇರಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ Angiosperm Phylogeny Group (2009). "An update of the Angiosperm Phylogeny Group classification for the orders and families of flowering plants: APG III". Botanical Journal of the Linnean Society. 161 (2): 105–121. doi:10.1111/j.1095-8339.2009.00996.x. Archived from the original (PDF) on 2017-05-25. Retrieved 2013-06-26.
- ↑ Christenhusz, M. J. M.; Byng, J. W. (2016). "The number of known plants species in the world and its annual increase". Phytotaxa. Magnolia Press. 261 (3): 201–217. doi:10.11646/phytotaxa.261.3.1.
- ↑ Govaerts, R. et al. (12 additional authors). 2008. World Checklist of Myrtaceae. Royal Botanic Gardens, Kew. xv + 455 pp.