ಸದಸ್ಯ:Vittu prasanna/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನವರತ್ನ ರಾಮ್[ಬದಲಾಯಿಸಿ]

ಬಾಲ್ಯ ಜೀವನ[ಬದಲಾಯಿಸಿ]

ನವರತ್ನ ರಾಮ್ ಕನ್ನಡದ ನಗೆ ಬರಹ ಮಾತ್ರಿಂಕರೆಂದೆ ಪ್ರಸಿದ್ದರು. ಬೆಂಗಳೂರಿನ ಸರ್ಕಾರಿ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಕೃಷಿ ಕಾಲೇಜು ಸೇರಿ ಪದವೀಧರರಾದರು. ನಾಟಕ ರಚನೆ, ಅಭಿನಯ, ಸಂಗೀತ, ನೀಲಕಮಲ್ ಆರ್ಕೇಸ್ಟಾ, ಕಲಾ ಮಂದಿರಗೆಳೆಯರೊಂದಿಗೆ ಸೇರಿ ನಾಟಕ ತಂಡವನ್ನು ಸೃಷ್ಟಿಸಿದರು. ಅವರು ಜನಿದ್ದು ೩ ಡಿಸೆಂಬರ್ ೧೯೩೨ ಸುಸಂಸ್ಕೃತ ಮನೆತನದಲ್ಲಿ ಹುಟ್ಟಿದರು. ತಾಯಿ ಪುಟ್ಟಮ್ಮ, ತಂದೆ ನವರತ್ನ ರಾಮರಾಯರು ಹಿಂದಿನ ಕಾಲದ ಮೈಸೂರು ಸಂಸ್ಥಾನದ ಸರ್ಕಾರದಲ್ಲಿ ಆಡಳಿತದಲ್ಲಿ ಕೆಲಸ ಮಾಡುತ್ತಿದ್ದರು. ಮಾಸ್ತಿಯವರ ಸಮಕಾಲೀನರಾಗಿದ್ದ ನವರತ್ನ ರಾಮರಾಯರು ಮಾಸ್ತಿಯವರ ಮೇಲೂ ಪ್ರಭಾವ ಬೀರಿದವರು ಅವರ ಜೀವನದ ನೆನಪುಗಳು ಕುರಿತು ‘ಕೆಲವು ನೆನಪುಗಳು’ ಬರಹ ಬಂದಿದೆ. ಅವರು “ರಾಜಸೇವ ಪುಸ್ತಕ” ಎಂಬ ಬಿರುದನ್ನು ಆಗಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಪಡೆದಿದ್ದರು. ತಂದೆ ನವರತ್ನ ರಾಮರಾಯರ ಹೆಸರಿನ ಬಲದಿಂದ ತಮ್ಮನು ಲೋಕ ಗುರುತಿಸಬಾರದು ಎಂಬುದು ನವರತ್ನರಾಮ್ ಅವರ ಉದ್ದೇಶವಾಗಿತ್ತು. ಹೀಗಾಗಿ ಅವರು “ಎನ್. ರಾಮ್” ಎಂಬ ಹೆಸರಿನಿಂದಲೇ ಬರೆಯುತ್ತಿದ್ದರು. ನಂತರ ಕಾಲಕ್ರಮೇಣವಾಗಿ ಅದು “ನವರತ್ನ ರಾಮ್” ಎಂದೇ ಪ್ರಸಿದ್ದಿಯನ್ನು ಪಡೆದುಕೊಂಡಿತು. ಅವರು ಅಕ್ಟೋಬರ್ ೧೭,೧೯೯೧ ರಲ್ಲಿ ನಿಧನ ಅದರು. ಅವರಿಗೆ ಆರತಿ, ಅಂಜಲಿ ಮತ್ತು ಆಶ್ರಮಿ ಎಂಬ ಮೂರು ಹೆಣ್ಣು ಮಕ್ಕಳು ಇದ್ದರು.

ಸಾಧನೆಗಳು[ಬದಲಾಯಿಸಿ]

ವ್ಯವಸಾಯ ಇಲಾಖೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ ರಾಮ್ ಅವರು ಕನ್ನಡ ಸಂಸ್ಕೃತಿ ಇಲಾಖೆನಿರ್ದೇಶಕರೂ ಆಗಿದ್ದರು. ವಿಶ್ವ ಕನ್ನಡ ಸಮ್ಮೆಳನದಲ್ಲೂ ಪಾತ್ರ ವಹಿಸಿದ್ದರು. “ಸುಧಾ”ದಲ್ಲಿ ಪ್ರಕಟವಾಗುತ್ತಿದ್ದ÷ “ನೀವು ಕೇಳಿದಿರಿ” ವಿಭಾಗದ ಪ್ರಶ್ನೆಗಳಿಗೆ ಉತ್ತರ ಬರೆಯುತ್ತಿದ್ದ ಬೀಚಿ ಅವರು ನಿಧನರಾದ ಮೇಲೆ “ಚಿತ್ತಾ” ಎಂಬ¬ ಹೆಸರಿನಲ್ಲಿ ಅದನ್ನು ನವರತ್ನ ರಾಮ್ ಮುಂದುವರಿಸಿದರು. ಚಿತ್ತಾ ಗಂಡೋ ಹೆಣ್ಣೋ ಎಂಬುದು ಅನೇಕರಿಗಿದ್ದ ಕುತೂಹಲ. ಕೊನೆಯವರೆಗೆ ಗುಟ್ಟು ಬಿಟ್ಟು ಕೊಡದೆ ಆ ರೀತಿಯಲ್ಲಿ ಉಳಿಯಿತು.


ಪ್ರಸಿದ್ದ ಕೃತಿಗಳು[ಬದಲಾಯಿಸಿ]

ಪ್ಯಾರಿಸಿನಿಂದ ಪ್ರೇಯಸಿಗೆ, ನವರತ್ನ ರಾಮಾಯಣ, ಹೂವೊಂದು ದುಂಬಿ ನೂರೊಂದು, ೬೭ ಹ್ಯಾರಿಸ್ ರಸ್ತೆ, ಜಗವೆಲ್ಲ ಒಂದೇ ಸಿವ, ನೆರೆಹೊರೆಯವರ ಹೊರೆ, ಹಾಲು ಹಾಲಾಹಲ, ಕಲ್ಲರಳಿ ಹೂವಾಯಿತು, ಜೀವ ಯಾವ ಕುಲ, ಆತ್ಮ ಯಾವ ಕುಲ.

ನಾಟಕಗಳು[ಬದಲಾಯಿಸಿ]

“ಚಿತ್ರ ಕಲಾವಿದರು” ನಾಟಕ ತಂಡ “ಅಕ್ಕ ಪಕ್ಕ”, “ಕೆಂಬೂತ”, “ಕನಸು ನನಸು” ಮುಂತಾದ ನಾಟಕಗಳನ್ನು ಬರೆದಿದ್ದರೆ.[೧]

ಪ್ರಶಸ್ತಿಗಳು[ಬದಲಾಯಿಸಿ]

ಚಲನಚಿತ್ರದಲ್ಲೂ ಅವರಿಗೆ ಅಪಾರ ಆಸಕ್ತಿ ಇತ್ತು. ಪುಟ್ಟಣ್ಣ ಕಣಗಾಲ್ ಅವರ “ಗೆಜ್ಜೆ ಪೂಜೆ” ಮತ್ತು ಇನ್ನೂ ಹಲವು ಚಿತ್ರಗಳಿಗೆ ಕಥೆ, ಸಂಭಾಷಣೆ ಬರೆದಿದ್ದಾರೆ. ಗೆಜ್ಜೆ ಪೂಜೆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದರು.

ಉಲ್ಲೇಖಗಳು[ಬದಲಾಯಿಸಿ]

  1. http://www.sallapa.com/2013/09/blog-post_5170.html