ನಾಗೇಂದ್ರ ಕುಮಾರ್ ಸಿಂಗ್
ನಾಗೇಂದ್ರ ಕುಮಾರ್ ಸಿಂಗ್ | |
---|---|
ಜನನ | ಅಕ್ಟೋಬರ್ ೧೫, ೧೯೫೮ ಮೌ, ಉತ್ತರ ಪ್ರದೇಶ |
ವಾಸಸ್ಥಳ | ದೆಹಲಿ |
ರಾಷ್ಟ್ರೀಯತೆ | ಭಾರತ |
ಕಾರ್ಯಕ್ಷೇತ್ರ | ಕೃಷಿ ವಿಜ್ಞಾನಿ |
ಸಂಸ್ಥೆಗಳು | ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಪ್ಲಾಂಟ್ ಬಯೋಟೆಕ್ನಾಲಜಿ |
ಅಭ್ಯಸಿಸಿದ ವಿದ್ಯಾಪೀಠ | ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ |
ಪ್ರಸಿದ್ಧಿಗೆ ಕಾರಣ | ಸಸ್ಯ ಜೈವಿಕ ತಂತ್ರಜ್ಞಾನ ಮತ್ತು ಜೀನೋಮಿಕ್ಸ್ ನಲ್ಲಿ ಸಂಶೋಧನೆ |
ಗಮನಾರ್ಹ ಪ್ರಶಸ್ತಿಗಳು | ರಫಿ ಅಹಮದ್ ಕಿಡ್ವೈಯ್ ಪ್ರಶಸ್ತಿ |
ನಾಗೇಂದ್ರ ಕುಮಾರ್ ಸಿಂಗ್ ರವರೊಬ್ಬ ಭಾರತೀಯ ಕೃಷಿ ವಿಜ್ಞಾನಿ. ಅವರು ಜೈವಿಕ ತಂತ್ರಜ್ಞಾನದ ರಾಷ್ಟ್ರೀಯ ಸಂಶೋಧನಾ ಕೇಂದ್ರದಲ್ಲಿ ಐಸಿಎಆರ್(ICAR)ಅಡಿಯಲ್ಲಿ,ಇಂಡಿಯನ್ ಅಗ್ರಿಕಲ್ಚರಲ್ ಸಂಶೋಧನಾ ಸಂಸ್ಥೆ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಾಧ್ಯಾಪಕರಾಗಿದ್ದಾರೆ. ಇವರು ಗೋಧಿ ಮತ್ತು ಅಕ್ಕಿ ಜೀನೋಮ್ನ ತುಲನಾತ್ಮಕ ವಿಶ್ಲೇಷಣೆಯಲ್ಲಿ ಮಹತ್ವದ ಬೆಳವಣಿಗೆಗಳನ್ನು ಮಾಡಿದ್ದಾರೆ. ಸಸ್ಯ ಜೀನೋಮಿಕ್ಸ್ ಮತ್ತು ಬಯೋಟೆಕ್ನಾಲಜಿಯ ಪ್ರದೇಶದಲ್ಲಿನ ತನ್ನ ಸಂಶೋಧನೆಗೆ ಅವರು ವಿಶೇಷವಾಗಿ ಹೆಸರುವಾಸಿಯಾಗಿದ್ದಾರೆ. ಹಾಗೂ ಅಕ್ಕಿ,ಟೊಮೆಟೊ ಮತ್ತು ಪಿಜನ್ಪೀ ಜೀನೋಮ್ಗಳು ಮತ್ತು ಗೋಧಿ ಶೇಖರಣಾ ಪ್ರೋಟೀನ್ಗಳ ಗ್ರಹಿಕೆ ಮತ್ತು ಗೋಧಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುವಿಕೆಗೆ ಸಂಭಂದಿಸಿದ ಅವರ ಕೊಡುಗೆಗಾಗಿ ಅವರು ಹೆಸರುವಾಸಿಯಾಗಿದ್ದಾರೆ.
ಜನನ ಮತ್ತು ಜೀವನ
[ಬದಲಾಯಿಸಿ]ನಾಗೇಂದ್ರ ಕುಮಾರ್ ಸಿಂಗ್ ರವರು ೧೫ ಅಕ್ಟೋಬರ್ ೧೯೫೮ ರಂದು ಉತ್ತರಪ್ರದೇಶದಲ್ಲಿ ಜನಿಸಿದರು.[೧]ನಾಗೇಂದ್ರ ಕುಮಾರ್ ರವರು ಅಕ್ಟೋಬರ್ ೧೫,೧೯೫೮ ರಂದು ಉತ್ತರಪ್ರದೇಶದ ಮೌ ಜಿಲ್ಲೆಯ ರಾಜ್ಪುರ್ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ದಿವಂಗತ ಶ್ರೀ ಇಂದ್ರಾಸನ್ ಸಿಂಗ್ ರವರು ಉತ್ತರಪ್ರದೇಶದ ಬ್ಲಾಕ್ ಡೆವಲಪ್ಮೆಂಟ್ ಆಫೀಸ್ನಲ್ಲಿ ಹಳ್ಳಿ ಮಟ್ಟದ ಅಧಿಕಾರಿಯಾಗಿದ್ದರು. ೧೯೬೪-೬೮ ರಲ್ಲಿ ಟಿಲಸಾವಾ ಗ್ರಾಮದ ಪ್ರಾಥಮಿಕ ಪಾಠಶಾಲದಲ್ಲಿ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು,೧೯೬೯-೭೧ರಲ್ಲಿ ಜೂನಿಯರ್ ಹೈಸ್ಕೂಲ್,ಜಹನಗಾಂಜ್;ಮೆಟ್ರಿಕ್ಯುಲೇಷನ್ ಮತ್ತು ವೆಸ್ಲಿ ಹೈಯರ್ ಸೆಕೆಂಡರಿ ಶಾಲೆ,ಅಜಮ್ಘಡ್ನಿಂದ ಹಿರಿಯ ದ್ವಿತೀಯಕ; ೧೯೭೧-೭೫. ನಂತರ ಅವರು ಬಿ.ಎಸ್.ಸಿ(ಕೃಷಿ) ೧೯೭೮ ಮತ್ತು ಎಂ.ಎಸ್.ಸಿ(ಕೃಷಿ) ೧೯೮೦ ರಲ್ಲಿ ಜೆನೆಟಿಕ್ಸ್ ಮತ್ತು ಪ್ಲಾಂಟ್ ಬ್ರೀಡಿಂಗ್ ಇನ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್,ಬನಾರಸ್ ಹಿಂದೂ ಯುನಿವರ್ಸಿಟಿ, ವಾರಣಾಸಿ. ಬಿ.ಎಸ್.ಸಿ(ಕೃಷಿ) ಮತ್ತು ಎಂ.ಎಸ್.ಸಿ(ಕೃಷಿ), ಎರಡೂ ವಿಶ್ವವಿದ್ಯಾನಿಲಯದಲ್ಲೂ ಸಿಂಗ್ ರವರಿಗೆ ಬಿ.ಎಚ್.ಯು(BHU) ಮೂಲಕ ಚಿನ್ನದ ಪದಕಗಳನ್ನು ನೀಡಲಾಯಿತು.[೨]
ವೃತ್ತಿಪರ ಸಾಧನೆಗಳು
[ಬದಲಾಯಿಸಿ]ನಾಗೇಂದ್ರ ಕುಮಾರ್ ರವರ ವೃತ್ತಿಪರ ಜೀವನವು ೧೯೮೧ ರಲ್ಲಿ ಪ್ರಾರಂಭವಾಯಿತು.
- ೧೯೮೧-೧೯೮೮.ರಿಸರ್ಚ್ ಅಸೋಸಿಯೇಟ್,ಅಡಿಲೇಡ್ ವಿಶ್ವವಿದ್ಯಾಲಯ:
ಈ ಅವಧಿಯಲ್ಲಿ ಸಿಂಗ್ ರವರು ಗೋಧಿಯಲ್ಲಿ ಪ್ರೋಟೀನ್ಗಳ ಬಗೆಗಿನ ಸಂಶೋಧನೆಯಲ್ಲಿ ಪ್ರೋಟೀನ್ಗಳ ಒಂದು ವರ್ಗವನ್ನು ಕಂಡುಹಿಡಿದು ಅದಕ್ಕೆ "ಟ್ರೈಟಿಸಿನ್" ಎಂದು ಹೆಸರಿಸಿದರು.[೩] ಟ್ರೈಟಿಸಿನ್ ಎಂಬುದು ಸಣ್ಣ ಪ್ರಮಾಣದಲ್ಲಿ ಗೋಧಿ ಬೀಜದಲ್ಲಿ ಕಂಡುಬರುವ ಲೆಗ್ಯೂಮ್ ವಿವಿಧ ಸಂಗ್ರಹ ಪ್ರೋಟೀನ್ ಆಗಿದೆ. ಗೋಧಿಯ ಪೌಷ್ಟಿಕಾಂಶದ ಗುಣಮಟ್ಟವನ್ನು ಹೆಚ್ಚಿಸಲು ಇದು ಕುಶಲತೆಯಿಂದ ಕೂಡಿದೆ.
- ೧೯೮೬-೧೯೯೧ ಅವಧಿಯಲ್ಲಿ ಸಿಂಗ್ರವರು ಗೋಧಿಯ ಗ್ಲುಟನ್ ಪ್ರೋಟೀನ್ಗಳ ಬೇರ್ಪಡಿಸುವಿಕೆಗಾಗಿ ಕೆಲಸ ಮಾಡಿದರು.[೪]
- ೧೯೯೧-೧೯೯೪ ಅವಧಿಯಲ್ಲಿ ಅವರು CFTRI ನಲ್ಲಿನ ಆಣ್ವಿಕ ಜೀವಶಾಸ್ತ್ರ ಘಟಕವನ್ನು ಅಭಿವೃದ್ಧಿಪಡಿಸಿದರು. ಟ್ರಾನ್ಸ್ಜೆನಿಕ್ , ಐಸೋಜೆನಿಕ್ ಮತ್ತು ಟಿಶ್ಯೂಕಲ್ಚರ್ ಪ್ರದೇಶದಲ್ಲಿ ಇವರು ಎರಡು ಪೇಟೆಂಟ್ಗಳನ್ನು ಅರ್ಪಿಸಿದರು. ನಂತರ ಜೈವಿಕ ತಂತ್ರಜ್ಞಾನದಲ್ಲಿ ತಮ್ಮ ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿದರು.
- ೨೦೧೦ ಅವಧಿಯಲ್ಲಿ ಸಿಂಗ್ ರವರು ಇಂಡಿಯನ್ ಅಗ್ರಿಕಲ್ಚರಲ್ ಸಂಶೋಧನಾ ಸಂಸ್ಥೆ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಾಧ್ಯಾಪಕರಾಗಿದ್ದರು.
ಪ್ರಶಸ್ತಿಗಳು
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
- ಚಿನ್ನದ ಪದಕ ವಿಜೇತ , ಬಿ.ಎಸ್.ಸಿ.,ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ೧೯೭೮.[೫]
- ಚಿನ್ನದ ಪದಕ ವಿಜೇತ ,ಎಮ್ .ಎಸ್.ಸಿ. ,ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ , ೧೯೮೦.[೬]
- ಸಿ.ಎಸ್.ಐ.ಆರ್.ಒ.(CSIRO) ಪೋಸ್ಟ್ ಡಾಕ್ಟರಲ್ ಪ್ರಶಸ್ತಿ ,ಸಿ.ಎಸ್.ಐ.ಆರ್.ಒ.(CSIRO),ಆಸ್ಟ್ರೇಲಿಯಾ, ೧೯೮೬.[೭]
- ನ್ಯಾಷನಲ್ ರಿಸರ್ಚ್ ಫೆಲೋಶಿಪ್ ಎರಡನೇ ಕ್ವೀನ್ ಎಲಿಜಬೆತ್ ಪ್ರಶಸ್ತಿ ,ಉದ್ಯೋಗ ಇಲಾಖೆ, ಶಿಕ್ಷಣ ಮತ್ತು ತರಬೇತಿ ,ಗವರ್ನಮೆಂಟ್ ಆಫ್ ಆಸ್ಟ್ರೇಲಿಯಾ ,೧೯೮೮.[೮]
- ಫೆಲೋ ಆಫ್ ದ ಸೊಸೈಟಿ ,ಇಂಡಿಯನ್ ಸೊಸೈಟಿ ಆಫ್ ಜೆನೆಟಿಕ್ಸ್ ಅಂಡ್ ಪ್ಲಾಂಟ್ ಬ್ರೀಡಿಂಗ್ ,ನವದೆಹಲಿ ,೧೯೯೮.[೯]
- ನ್ಯಾಷನಲ್ ಬಯೋಸೈನ್ಸ್ ಅವಾರ್ಡ್ ಫಾರ್ ಕ್ಯಾರಿಯರ್ ಡೆವಲಪ್ಮೆಂಟ್ ,ಡಿಬಿಟಿ(DBT),ಭಾರತ ಸರ್ಕಾರ ,ನವದೆಹಲಿ, ೨೦೦೨.[೧೦]
- ಸದಸ್ಯ ,ಡಿಬಿಟಿ (DBT) ಟಾಸ್ಕ್ ಫೋರ್ಸ್ ಬೇಸಿಕ್ ರಿಸರ್ಚ್ ಇನ್ ಮಾಲಿಕ್ಯುಲರ್ ಬಯಾಲಜಿ,೨೦೦೪.
- ಉಪಾಧ್ಯಕ್ಷರು ,ಪ್ಲಾಂಟ್ ಬಯೋಕೆಮಿಸ್ಟ್ರಿ ಮತ್ತು ಜೈವಿಕ ತಂತ್ರಜ್ಞಾನದ ಸೊಸೈಟಿ ,ನವದೆಹಲಿ ,ಭಾರತ, ೨೦೦೬.
- ಫೆಲೋ ಆಫ್ ಅಕಾಡೆಮಿ ,ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ,ನವದೆಹಲಿ,ಭಾರತ, ೨೦೦೭.[೧೧]
- ರಫಿ ಅಹ್ಮದ್ ಕಿಡ್ವಾಯ್ ಪ್ರಶಸ್ತಿ, ಐಸಿಎಆರ್(ICAR),ಇಬ್ಡಿಯಾ,೨೦೦೭.[೧೨]
- ಫೆಲೋ ಆಫ್ ದ ಅಕಾಡೆಮಿ ,ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ, ೨೦೧೧.
- ಫೆಲೋ ಆಫ್ ದ ಅಕಾಡೆಮಿ , ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಭಾರತ, ೨೦೧೧.[೧೩]
- ಸೆಕ್ರಟರಿ ,ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸ್, ೨೦೧೧.
- ವಿಶೇಷ ಅಲುಮ್ನಿ ಪ್ರಶಸ್ತಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ೨೦೧೨.[೧೪]
- ನಾರ್ಮನ್ ಬೊರಿಯಾಗ್ ಪ್ರಶಸ್ತಿ ಐಸಿಎಆರ್(ICAR),ಭಾರತ, ೨೦೧೫.[೧೫]
ಉಲ್ಲೇಖಗಳು
[ಬದಲಾಯಿಸಿ]