ಸದಸ್ಯ:Deeksha.B.Poojary/ನನ್ನ ಪ್ರಯೋಗಪುಟ-2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಿಲಿಪಂಜಿ ಕುಣಿತ[ಬದಲಾಯಿಸಿ]

ಬೆಳ್ತಂಗಡಿ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಕೆಲವು ಗ್ರಾಮಗಳಲ್ಲಿ ಮುಖ್ಯವಾಗಿ ಪುದುವೆಟ್ಟು, ನಿಡ್ಲೆ, ಕಳೆಂಜ, ಕೊಕ್ಕಡ, ಬೆಳಾಲು, ಉಜಿರೆ, ಮುಂಡಾಜೆ, ಕಡಿರುದ್ಯಾವರ ಮುಂತಾದ ಕಡೆಗಳಲ್ಲಿ ಈ ಕುಣಿತ ಪ್ರಚಲಿತದಲ್ಲಿದೆ. ಹುಲಿ ಮತ್ತು ಹಂದಿಗಳೇ ಪ್ರಧಾನ ವೇಷಗಳಾಗಿರುವುದರಿಂದ ಇದಕ್ಕೆ ಪಿಲಿಪಂಜಿ ಕುಣಿತ ಎಂಬ ಹೆಸರು ಔಚಿತ್ಯಪೂರ್ಣವಾಗಿದೆ. ದಕ್ಷಿಣ ಕನ್ನಡದ ಮೊಗೇರರು ವರ್ಷಕ್ಕೆ ಒಂದಾವರ್ತಿ ಸುಗ್ಗಿ ಹುಣ್ಣಿಮೆಯಿಂದ ಒಂದು ವಾರದ ಕಾಲೀ ಕುಣಿತವನ್ನು ನಡೆಸುತ್ತಾರೆ. ತಂಡದಲ್ಲಿ ಮುಖ್ಯವಾಗಿ ಒಂದು ಹುಲಿ ವೇಷ ಒಂದು ಹಂದಿ ವೇಷ, ಎರಡು ಜಿಂಕೆಗಳ ವೇಷಗಳು ಹಾಗೂ ಒಬ್ಬ ಬೇಟೆಗಾನಿರುತ್ತಾನೆ. ಒಬ್ಬ ದುಡಿ ಬಾರಿಸುತ್ತಾ ಹಾಡು ಹೇಳಿದರೆ ಇನ್ನೊಬ್ಬ ಇದಕ್ಕೆ ಧ್ವನಿಗೂಡಿಸುತ್ತಾನೆ. ಹೀಗೆ ತಂಡದಲ್ಲಿ ಒಟ್ಟು ಏಳು ಮಂದಿ ಇರುತ್ತಾರೆ. ಆಯಾ ವೇಷಧಾರಿಗಳು ಆಯಾ ಪ್ರಾಣಿಗಳ ಸಾಂಕೇತಿಕ ಮುಖವಾಡವನ್ನು ತಲೆಗೆ ಕಟ್ಟಿಕೊಂಡಿರುತ್ತಾರೆ. ದುಂಡಾಗಿರುವ ಮುಖ, ತೆರೆದಬಾಯಿ, ಚೂಪುಹಲ್ಲು ಹಾಗೂ ಹೊರಚಾಚಿದ ನಾಲಿಗೆಯ ಹುಲಿಯ ಮುಖವಾಡವಿರುತ್ತದೆ. ಹಂದಿಯ ಮುಖವಾಡ ಹಾಳೆಯನ್ನು ಶಂಕು ಆಕಾರದಲ್ಲಿ ಬಗ್ಗಿಸಿ ಉದ್ದ ಮೂತಿಯಂತೆ ಮಾಡಿ ಅದಕ್ಕೆರಡು ಕಣ್ಣುಗಳನ್ನು ಬಿಡಿಸಿರುವುದು. ಹಂದಿಯ ಮುಖವಾಡ ಜಿಂಕೆಮುಖವಾಡಗಳಲ್ಲಿ ಎರಡು ಕೊಂಬುಗಳು ಉದ್ದವಾಗಿರುತ್ತವೆ. ಈ ಮುಖವಾಡಗಳನ್ನು ಅಡಿಕೆ ಹಾಳೆಗೆ ಮಸಿ, ಅರಶಿಣ ಹಾಗೂ ಜೇಡಿ ಮಣ್ಣಿನ ಮಿಶ್ರಣವನ್ನು ಬಳಿದು ತಯಾರಿಸುತ್ತಾರೆ. ಭತ್ತದ ಹುಲ್ಲಿಗೆ ಒಣಗಿದ ಬಾಳೆನಾರನ್ನು ಸುತ್ತಿ ತಯಾರಿಸಿದ ಬಾಲವನ್ನು ಸೊಂಟಕ್ಕೆ ಕಟ್ಟಿಕೊಂಡಿರುತ್ತಾರೆ. ಹಂದಿ ಮತ್ತು ಜಿಂಕೆಯ ಬಾಲ ಚಿಕ್ಕದಾಗಿದ್ದರೆ ಹುಲಿಯಬಾಲ ಉದ್ದವಾಗಿರುತ್ತದೆ. ಎಲ್ಲ ವೇಷಧಾರಿಗಳೂ ಬಿಳಿಪಂಚೆಯನ್ನು ಮೊಣಕಾಲಿನಿಂದ ಮೇಲಕ್ಕೆ ಕಚ್ಚೆಕಟ್ಟಿಕೊಂಡಿರುತ್ತಾರೆ. ಅರಶಿಣ, ಮಸಿ, ಜೇಡಿಮಣ್ಣನ್ನು ಮುಖಕ್ಕೆ ಹಚ್ಚಿಕೊಂಡಿರುತ್ತಾರೆ. ಹುಲಿಯ ಮೈಮೇಲೆ ಗುಣಿಸು ಗುರುತುಗಳನ್ನು ಹಾಕಿಕೊಳ್ಳುತ್ತಾರೆ. ಜಿಂಕೆಯ ಮೈಮೇಲೆ ಚುಕ್ಕೆಗಳಿರುತ್ತವೆ.ಹಂದಿ ವೇಷಕ್ಕೆ ಕಪ್ಪು ಬಣ್ಣವನ್ನು ಹೆಚ್ಚು ಬಳಸಿದರೆ ಹುಲಿಯ ವೇಷಕ್ಕೆ ಹಳದಿ ಬಣ್ಣವನ್ನು ಉಪಯೋಗಿಸುತ್ತಾರೆ. ಜಿಂಕೆಗಳ ವೇಷಕ್ಕೆ ಹೆಚ್ಚಾಗಿ ಬಿಳಿ ಬಣ್ಣಗಳು ಉಪಯೋಗವಾಗುತ್ತವೆ. ಬೇಟೆಗಾರ ಮುಖಕ್ಕೆ ಮಾತ್ರ ಬಣ್ಣದ ಚುಕ್ಕಿಗಳನ್ನು ಹಾಕಿಕೊಂಡು ಕಪ್ಪು ಕನ್ನಡಕ ಧರಿಸುತ್ತಾನೆ. ಪ್ಯಾಂಟು, ಅಂಗಿ ಹಾಗೂ ತಲೆಗೆ ಹ್ಯಾಟು ಇರುತ್ತದೆ. ಕೈಯಲ್ಲಿ ಕೋವಿ ಹಿಡಿದುಕೊಂಡು ಇರುತ್ತಾನೆ. ಈತನನ್ನು ‘ದೊರೆ’ ಎಂದು ಕರೆಯುತ್ತಾರೆ. ಹಾಡುಗಾರರು ದೈನಂದಿನ ಉಡುಗೆಗಳಲ್ಲಿರುತ್ತಾರೆ. ಹೀಗೆ ವೇಷ ಹಾಕಿದ ಅನಂತರ ಗುರಿಕಾರನ ಆರಣಭದ ಕುಣಿತ ನಡೆಯುತ್ತದೆ. ಒಬ್ಬ ದುಡಿ ಬಾರಿಸುತ್ತಾ ಪಿಲಿಪಂಜಿ ಪಾಡ್ದನ ಹೇಳುತ್ತಾನೆ. ಇನ್ನೊಬ್ಬ ಅದನ್ನು ಪುನರಾವರ್ತಿಸುತ್ತಾರೆ. ಕುಣಿತದಲ್ಲಿ ಹಾಡು ನಿಧಾನಗತಿಯಿಂದ ಸಾಗುತ್ತದೆ. ಜಿಂಕೆ ವೇಷದವರು ಕೈಕಾಲುಗಳನ್ನೂರಿ ಕುಪ್ಪಳಿಸುತ್ತಾರೆ. ಹುಲಿ ಮತ್ತು ಹಂದಿ ಎದುರುಬದುರಾಗಿ ನಿಂತು ಬೆನ್ನನ್ನು ಪೂರ್ತಿ ಬಗ್ಗಿಸಿ ಕೈಕಾಲುಗಳನ್ನು ಸಮಾನಾಂತರವಾಗಿ ಬೀಸಿ ಮುಂದಕ್ಕೆ ಹಿಂದಕ್ಕೆ ಕುಣಿಯುತ್ತಿರುತ್ತಾರೆ. ಹಾಡುಗಾರರು ದೈನಂದಿನ ಉಡುಗೆಗಳಲ್ಲಿರುತ್ತಾರೆ. ಹೀಗೆ ವೇಷ ಹಾಕಿದ ಅನಂತರ ಗುರಿಕಾರನ ಮನೆಯಲ್ಲಿ ಆರಂಭವಾದ ಕುಣಿತ ನಡೆಯುತ್ತದೆ. ಒಬ್ಬ ದುಡಿ ಬಾರಿಸುತ್ತಾ ಪಿಲಿಪಂಜಿ ಪಾಡ್ದನ ಹೇಳುತ್ತಾನೆ. ಇನ್ನೊಬ್ಬ ಅದನ್ನು ಪುನರಾವರ್ತಿಸುತ್ತಾರೆ. ಕುಣಿತದಲ್ಲಿ ಹಾಡು ನಿಧಾನಗತಿಯಿಂದ ಸಾಗುತ್ತದೆ. ಜಿಂಕೆ ವೇಷದವರು ಕೈಕಾಲುಗಳನ್ನೂರಿ ಕುಪ್ಪಳಿಸುತ್ತಾರೆ. ಹುಲಿ ಮತ್ತು ಹಂದಿ ಎದುರುಬದುರಾಗಿ ನಿಂತು ಬೆನ್ನನ್ನು ಪೂರ್ತಿ ಬಗ್ಗಿಸಿ ಕೈಕಾಲುಗಳನ್ನು ಸಮಾನಾಂತರವಾಗಿ ಬೀಸಿ ಮುಂದಕ್ಕೆ ಹಿಂದಕ್ಕೆ ಕುಣಿಯುತ್ತಿರುತ್ತಾರೆ. ಬೇಟೆಗಾರ ಹುಲಿ, ಹಂದಿಗಳಿಗೆ ಆಗಾಗ ಗುರಿ ಇಡುತ್ತಾನೆ. ಪ್ರಾಣಿಗಳು ತಪ್ಪಿಸಿಕೊಳ್ಳುತ್ತವೆ. ಕುಣಿತದ ಸಂದರ್ಭದಲ್ಲಿ ಆಯಾ ಪ್ರಾಣಿಗಳು ತಮ್ಮ ತಮ್ಮ ದ್ವನಿಯಲ್ಲಿ ಅರಚುತ್ತಿರುತ್ತವೆ. ‘ಪಿಲಿಪೋವು ಪಾಂಜರೊಡಾಂಡ್, ಪಂಜಿಪೋದು ಚೀಮುಳ್ಳುಡಾಂಡೆ’ ಎನ್ನುವಲ್ಲಿಗೆ ಹಾಡಿನ ಹಾಗೂ ಕುಣಿತಗಳು ಮುಕ್ತಾಯವಾಗುತ್ತದೆ. ಹೀಗೆ ಗ್ರಾಮದಲ್ಲಿ ಮನೆ ಮನೆಗೆ ಹೋಗುತ್ತಾರೆ. ಮನೆಗೆ ಹೋದ ಕೂಡಲೆ ಪಿಲಿಪಂಜಿಲು ಬೆತ್ತೆರ್ ಎಂದು ಹೇಳುತ್ತಾರೆ. ಮನೆಯವರು ಕುಣಿತಕ್ಕೆ ಅನುಮತಿ ಕೊಡುತ್ತಾರೆ. ಕುಣಿತ ಆರಂಭವಾಗುತ್ತದೆ. ಮನೆಮನೆಗೆ ಹೋಗಿ ಕುಣಿಯುವ ಕುಣಿತವಾದುದರಿಂದ ಹೆಚ್ಚಾಗಿ ರಾತ್ರಿ ಪೂರ್ತಿ ನಡೆಯುತ್ತದೆ. ಸಂಭಾವನೆಯಾಗಿ ಪ್ರತಿ ಮನೆಯಲ್ಲಿಯೂ ಅಕ್ಕಿ ತೆಂಗಿನಕಾಯಿ ಹಾಗೂ ಹಣ ದೊರೆಯುತ್ತದೆ. ಪಿಲಿಪಂಜಿ ಕುಣಿತದ ಕೊನೆಯ ದಿನ ಪಿಲಿಪಂಜಿ ಪೂಜೆಯು ನಡೆಯುತ್ತದೆ. ಇದು ಗುರಿಕ್ಕರನ ಮನೆಯಲ್ಲಿಯೇ ನೆರವೇರುತ್ತದೆ. ಪಿಲಿಚಾಮುಂಡಿ ದೈವಕ್ಕೆ ಅವಲಕ್ಕಿ, ಎಳನೀರು, ಅಗೆಲು ಬಡಿಸಿ ಪ್ರಾರ್ಥನೆ ಮಾಡುತ್ತಾರೆ. ಸೂರ್ಯೋದಯ ಆದ ಕೂಡಲೇ ಕಾಸರಕನ ಮರದ ಬುಡಕ್ಕೆ ಹೋಗಿ ‘ಬಿರಿಯುವ’ ಕ್ರಮ ಇದೆ. ಮುಖವಾಡಗಳನ್ನು ಆ ಮರದ ಬುಡದಲ್ಲಿಟ್ಟು ಕಾಯಿ ಒಡೆದು ಸ್ನಾನ ಮಾಡಿ ಅವರವರ ಮನೆಗೆ ತೆರಳುತ್ತಾರೆ. ಹೀಗೆ ಒಂದು ವಾರಗಳ ಕಾಲ ಈ ಕುಣಿತ ನಡೆಯುತ್ತದೆ. ಮುಖವಾಡಗಳನ್ನು ತೆಂಗು ಇಲ್ಲವೇ ಹಲಸಿನ ಮರಗಳಿಗೆ ನೇತು ಹಾಕುತ್ತಾರೆ. ಇದನ್ನು ಯಾರೂ ಮುಟ್ಟಬಾರದೆಂಬ ನಂಬಿಕೆ.[೧]

ಸಿದ್ಧವೇಷ[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ವಾಸ ಮಾಡುತ್ತಿರುವ 'ಗೌಡ' ಜನಾಂಗದವರು ಸುಗ್ಗಿ ಹುಣ್ಣಿಮೆಯ ಸಂದರ್ಭದಲ್ಲಿ ‘ಸಿದ್ಧವೇಷ’ ಕುಣಿಯುತ್ತಾರೆ. ನಿಗದಿ ಪಡಿಸಿದ ದಿನ ಹಳ್ಳಿಯ ಹಿರಿಯನೊಬ್ಬನ ನೇತೃತ್ವದಲ್ಲಿ ಆಸಕ್ತ ಗೌಡ ಯುವಕರು ಊರಿನ ಭೂತದ ಛಾವಡಿಯಲ್ಲೋ, ಗುರಿಕಾರನ ಮನೆಯಲ್ಲೋ ಒಟ್ಟು ಸೇರಿ ‘ಸಿದ್ಧವೇಷ’ ಕುಣಿಯಲು ದಿನ ನಿಶ್ಚಯ ಮಾಡುತ್ತಾರೆ. ಕನಿಷ್ಠ ಏಳೆಂಟು ಮಂದಿ ಯುವಕರು ಕುಣಿತಕ್ಕೆ ನಿಲ್ಲುತ್ತಾರೆ. ಅತ್ಯಂತ ಹಾಸ್ಯಪ್ರಜ್ಞೆ ಇರುವಾತನು ‘ಬ್ರಾಹ್ಮಣ’ನ ವೇಷವನ್ನು ಹಾಕುತ್ತಾನೆ. ಇನ್ನೊಬ್ಬ ದಾಸಯ್ಯನ ವೇಷವನ್ನೂ ಉತ್ಸಾಹಿಯೂ ಕ್ರಿಯಾಶೀಲನೂ ಆಗಿರುವಾತ ಮತ್ತೊಬ್ಬ ಸನ್ಯಾಸಿಯ ವೇಷ ಹಾಕಲು ತಯಾರಾಗುತ್ತಾನೆ. ಇವಿಷ್ಟು ಸಿದ್ಧವೇಷದ ಪಾತ್ರಗಳು.[೨]

ವೇಷಭೂಷಣ[ಬದಲಾಯಿಸಿ]

ಕುಣಿತದವರು ತಲೆಗೆ ಕೆಂಪುಬಣ್ಣದ ಮುಂಡಾಸನ್ನು ಸುತ್ತಿಕೊಳ್ಳುತ್ತಾರೆ. ಮುಂಡಾಸಿನ ಒಂದು ತುದಿ ಬಲ ಕಿವಿಯ ಕಡೆಯಿಂದ ಭುಜಕ್ಕೆ ಇಳಿದಿರುತ್ತದೆ. ಬಿಳಿ ಪಂಚೆಯ ಕಚ್ಚೆ ಹಾಕಿ ಮೈಗೆ ಬನಿಯನ್ ಧರಿಸುತ್ತಾರೆ. ಕೆಲವು ಕಡೆ ಅಂಗಿ ಹಾಕುವ ಕ್ರಮವೂ ಉಂಟು. ಸೊಂಟಕ್ಕೆ ಗಟ್ಟಿಯಾಗಿ ದಟ್ಟಿಯೊಂದನ್ನು ಬಿಗಿಯುತ್ತಾರೆ. ದಾಸಯ್ಯನು ಕೆಂಪು ಶಾಲು ಹೊದ್ದು ಕೈಯಲ್ಲಿ ಶಂಖ ಮತ್ತು ಜಾಗಟೆಯನ್ನು ಹಿಡಿದಿರುತ್ತಾನೆ. ಬ್ರಾಹ್ಮಣ ವೇಷದಾರರಿಗೆ ಬಿಳಿ ಪಂಚೆಯ ಕಚ್ಚಿ, ತಲೆಗೆ ಜುಟ್ಟು ಗೋಣಿನಾರಿನ ಹಗ್ಗದಿಂದ ತಯಾರಿಸಿದ ಜನಿವಾರವಿರುತ್ತದೆ. ಮೈಗೆ ಗಂಧ, ಹಣೆಗೆ ನಾಮ ಇರುತ್ತದೆ. ಕುಣಿತದ ಮುಖ್ಯ ವೇಷವೆಂದರೆ ‘ಸನ್ಯಾಸಿ’ಯದು. ಈತನ ದೇಹಕ್ಕೆ ಒಣಗಿದ ಬಾಳೆಎಲೆಗಳನ್ನು ದೇಹವು ಕಾಣದಂತೆ ಕಟ್ಟಲಾಗುತ್ತದೆ. ಕಂಗಿನ ಹಾಳೆಯನ್ನು ಶಂಖುವಿನಾಕಾರದಲ್ಲಿ ಮಡಿಸಿ ತಲೆಗೆ ಬೋರಲಾಗಿ ಇಟ್ಟುಕೊಂಡು ತಲೆಯನ್ನು ಮರೆಸುತ್ತಾರೆ. ಹಸಿ ಬಾಳೆಎಲೆಯನ್ನು ತಂದು ಗರಗಸದಂತೆ ಕತ್ತಲು ಮುಖಕ್ಕೆ ಅಡ್ಡವಾಗಿ ಕಟ್ಟಿ ಇಡೀ ಮುಖವನ್ನು ಮರೆಮಾಚುತ್ತಾರೆ.

ದಿಂಬಸಾಲೆ[ಬದಲಾಯಿಸಿ]

ನಿಗುರಿ ನಿಂತ ಶಿಶ್ನದಂತೆ ಮಾಡಿ ಸೊಂಟದ ಮುಂಭಾಗಕ್ಕೆ ಕಟ್ಟಿಕೊಳ್ಳುತ್ತಾರೆ. ಸನ್ಯಾಸಿಯ ಕೈಯಲ್ಲಿ ದೊಣ್ಣೆಯೊಂದು ಇರುತ್ತದೆ. ವೇಷಗಳೆಲ್ಲ ಸಿದ್ಧವಾದ ಮೇಲೆ ರಾತ್ರಿಯಾಗುತ್ತಲೇ ಊರು ಸುತ್ತಲು ಹೋಗುತ್ತಾರೆ. ಎಲ್ಲರು ‘ಡಿಂಬಸಾಲೆ’ ಎಂಬ ಸೊಲ್ಲನ್ನು ಹೇಳುತ್ತಾ ಮುಂದುವರಿಯುತ್ತಾರೆ. ತಾವು ಕುಣಿತ ಮಾಡಲಿರುವವರ ಮನೆಗೆ ಹೋಗಿ ಅವರನ್ನು ಎಬ್ಬಿಸುತ್ತಾರೆ. ದೀಪದ ವ್ಯವಸ್ಥೆ ಮಾಡಿಕೊಂಡು ಕುಣಿತವನ್ನು ಆರಂಭಿಸುತ್ತಾರೆ. ಆರಂಭದಲ್ಲಿ ಸನ್ಯಾಸಿ ಮಾತ್ರ ಮರೆಯಲ್ಲಿರುತ್ತಾನೆ. ಕುಣಿತಗಾರರು ವೃತ್ತಾಕಾರವಾಗಿ ನಿಂತು ಹಾಡಿನ ಒಂದು ಸೊಲ್ಲನ್ನು ಹಾಡುತ್ತಾರೆ. ಹೀಗೆ ನಾಲ್ಕು ಹೆಜ್ಜೆಗಳಲ್ಲಿ ವೃತ್ತಾಕಾರವಾಗಿ ಕುಣಿಯುತ್ತಾರೆ. ಪ್ರತಿ ನಾಲ್ಕನೆ ಹೆಜ್ಜೆಗೆ ಕುಣಿತದವರು ವೃತ್ತದ ಮಧ್ಯಕ್ಕೆ ಚಾಚಿಕೊಂಡು ಕೇಂದ್ರಿಕೃತವಾಗುತ್ತಾರೆ. ಅದೇ ಸಂದರ್ಭದಲ್ಲಿ ಎರಡು ಕೈಗಳನ್ನು ಬಲವಾಗಿ ತಾಡಿಸಿ ಚಪ್ಪಾಳೆಯ ಸ್ವರ ಹೊರಡಿಸುತ್ತಾರೆ. ಹೀಗೆ ಹಾಡು ಕುಣಿತ ಮುಂದುವರೆಯುತ್ತಿದ್ದಾಗ ‘ಶೃಂಗೇರಿ ಮರದಿಂದ’ ಎಂಬ ಸೊಲ್ಲನ್ನು ಸೇರಿಸುತ್ತಿದ್ದಂತೆ ಮರೆಯಾಗಿದ್ದ ಸನ್ಯಾಸಿ ಥಟ್ಟನೆ ಅಂಗಳದಲ್ಲಿ ಪ್ರತ್ಯಕ್ಷನಾಗುತ್ತಾನೆ. ದೊಣ್ಣೆಯನ್ನು ನೆಲದಲ್ಲಿ ಊರುತ್ತಾ ಕುಂಟನಂತೆ ಹೆಜ್ಜೆ ಹಾಕಿ ಲಂಘಿಸಿಕೊಂಡು ಬರುವ ಸನ್ಯಾಸಿ ಕುಣಿತದವರ ವೃತ್ತವನ್ನು ಭೇದಿಸಿ ಒಳಕ್ಕೆ ನುಗ್ಗುತ್ತಾನೆ. ಅದೇ ಸಂದರ್ಭದಲ್ಲಿ ಬ್ರಾಹ್ಮಣರು ಅಂಗಳದ ಬಲಬದಿಗೂ, ದಾಸಯ್ಯ ಅಂಗಳದ ಎಡಬದಿಗೂ ಬಂದು ಕುಳಿತುಕೊಳ್ಳುತ್ತಾರೆ. ಸನ್ಯಾಸಿ ವೃತ್ತದೊಳಗೆ ಪ್ರವೇಶಿಸುತ್ತಿದ್ದಂತೆ ಕುಣಿತದವರು ತಮ್ಮ ಗಾತ್ವನ್ನು ಕುಗ್ಗಿಸಿ ದೇಹವನ್ನು ಬಗ್ಗಿಸಿ ಕುಣಿತದ ವೇಗವನ್ನು ಹೆಚ್ಚಿಸುತ್ತಾರೆ. ಅದೇ ಪ್ರಮಾಣದಲ್ಲಿ ತನ್ನ ವೇಗವನ್ನು ಹೆಚ್ಚಿಸಿಕೊಂಡ ಸನ್ಯಾಸಿಯು ವೃತ್ತದೊಳಗೆ ಕುಂಟುತ್ತಾ ಅಹಹಾ..ಕುಹಹಾ..ಎಂಬ ಅಸಂಬದ್ದ ಪ್ರಲಾಪ ಮಾಡುತ್ತಾ ಅಡ್ಡಾದಿಡ್ಡಿಯಾಗಿ ಸುತ್ತುತ್ತಿರುತ್ತಾನೆ ಕೊನೆಗೆ ಕುಣಿತದ ಅನಂತರ ಅವರೆಲ್ಲಾ ಅಂಗಳದ ಬದಿಗೆ ಸರಿದು ಸನ್ಯಾಸಿಗೆ ಮುಖ್ಯಸ್ಥಳವನ್ನು ಬಿಟ್ಟು ಕೊಡುತ್ತಾರೆ. ಅಷ್ಟರಲ್ಲಿ ದಾಸಯ್ಯನು ಶಂಖ ಊದುತ್ತಾ, ಜಾಗಟೆ ಭಾರಿಸುತ್ತಾ ಬರುತ್ತಾನೆ. ಬ್ರಾಹ್ಮಣ ಜನಿವಾರವನ್ನು ನೀವುತ್ತಾ ಬಾಯಲ್ಲಿ ಮಂತ್ರ ಹೇಳುತ್ತಾ ವಟಗುಟ್ಟುತ್ತಿರುತ್ತಾನೆ. ಕೊನೆಗೆ ಅವರಿಬ್ಬರನ್ನು ಅಂಗಳದ ಸುತ್ತಾ ಓಡಾಡಿಸುತ್ತಾ ಸನ್ಯಾಸಿಯ ತನ್ನ ಶಿಶ್ನವನ್ನು ಇವರಿಬ್ಬರಿಗೂ ತಾಗಿಸಲು ಯತ್ನಿಸುತ್ತಾನೆ. ಕೊನೆಗೆ ಬ್ರಾಹ್ಮಣ ಹಾಗೂ ದಾಸಯ್ಯ ಬದಿಗೆ ಸರಿಯುತ್ತಾರೆ ಸನ್ಯಾಸಿ ಒಬ್ಬನೇ ಉಳಿಯುತ್ತಾನೆ. ಇದೇ ರೀತಿ ತನ್ನ ಚೇಷ್ಟೆಯನ್ನು ಮುಂದುವರಿಸುತ್ತಿರುತ್ತಾನೆ. ಮನೆಯವರು ಭತ್ತ, ಅಕ್ಕಿ, ಹಣದ ರೂಪದಲ್ಲಿ ಸಂಭಾವನೆ ಕೊಡುತ್ತಾರೆ. ಅದನ್ನು ಹೆಗಲಿಗೇರಿಸಿಕೊಂಡು ಇಡೀ ಸಮೂಹ ಮುಂದಿನ ಮನೆಗೆ ಹೋಗುತ್ತದೆ. ಹೀಗೆ ಹೋಗುವಾಗ ದಾರಿಗೆದುರಾಗಿ ಸಿದ್ಧವೇಷದ ಇನ್ನೊಂದು ತಂಡ ಸಿಗಬಾರದು ಎಂದಿದೆ. ಎದುರಾದರೆ ಸಿದ್ಧರ ಬಗೆಗೆ ಮರಗಳ ಬಗೆಗೆ ಪ್ರಶ್ನೋತ್ತರ ನಡೆಯುತ್ತದೆ. ಸರಿಯಾದ ಉತ್ತರ ಬಾರದಿದ್ದಲ್ಲಿ ಹೊಡೆದಾಟಗಳೂ ನಡೆಯುದಿದೆ. ಹಾಗಾಗಿ ಎರಡು ತಂಡಗಳು ಮುಖಾಮುಖಿಯಾಗುವುದನ್ನು ತಪ್ಪಿಸಿಕೊಂಡು ಹೋಗುತ್ತಾರೆ. ಸುಗ್ಗಿ ಹುಣ್ಣಿಮೆಯ ದಿನದಂದು ಈ ಕುಣಿತ ಮುಕ್ತಾಯಗೊಳ್ಳುತ್ತದೆ. ಆ ದಿನ ತಂಡದವರೆಲ್ಲ ಒಟ್ಟುಸೇರಿ ಕೋಳಿಕೊಯ್ದು, ರೊಟ್ಟಿ ತಯಾರಿಸಿ, ಹೆಂಡದ ಜೊತೆಗೆ ‘ಪುರುಷರು’ ಎಂಬ ಪೂಜೆ ನೆರವೇರಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. https://www.udayavani.com/kannada/news/art-culture/211831/folklore-spells-of-life-love
  2. https://havyakarigagi.wordpress.com/2015/04/