ಶಂಖ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆತ್ತಿದ ಶಂಖಗಳು

ಶಂಖವು ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದಲ್ಲಿ ಕ್ರಿಯಾವಿಧಿಯ ಮತ್ತು ಧಾರ್ಮಿಕ ಮಹತ್ವದ ಹೊರಚಿಪ್ಪು. ಇದು ಹಿಂದೂ ಮಹಾಸಾಗರದಲ್ಲಿ ಕಾಣಿಸುವ ದೊಡ್ಡ ಪರಭಕ್ಷಕ ಸಮುದ್ರ ಶಂಬುಕವಾದ ಟರ್ಬಿನೆಲಾ ಪೈರಮ್‍ನ ಚಿಪ್ಪು. ಹಿಂದೂ ಪುರಾಣದಲ್ಲಿ, ಶಂಖವು ಹಿಂದೂ ಸಂರಕ್ಷಕ ದೇವರಾದ ವಿಷ್ಣುವಿನ ಪವಿತ್ರ ಲಾಂಛನವಾಗಿದೆ. ಈಗಲೂ ಇದನ್ನು ಹಿಂದೂ ಧರ್ಮಾಚರಣೆಯಲ್ಲಿ ಕಹಳೆಯಾಗಿ ಬಳಸಲಾಗುತ್ತದೆ, ಮತ್ತು ಹಿಂದೆ ಇದನ್ನು ಯುದ್ಧ ಕಹಳೆಯಾಗಿ ಬಳಸಲಾಗಿತ್ತು. ಹಿಂದೂ ಧರ್ಮಗ್ರಂಥಗಳಲ್ಲಿ ಶಂಖವನ್ನು ಖ್ಯಾತಿ, ದೀರ್ಘಾಯಸ್ಸು ಮತ್ತು ಸಮೃದ್ಧಿಯನ್ನು ನೀಡುವಂಥದ್ದು, ಪಾಪದ ಶುಭ್ರಕಾರಿ ಮತ್ತು ಸಂಪತ್ತಿನ ದೇವತೆ ಹಾಗೂ ವಿಷ್ಣುವಿನ ಪತ್ನಿಯಾದ ದೇವತೆ ಲಕ್ಷ್ಮಿಯ ನಿವಾಸ ಎಂದು ಹೊಗಳಲಾಗಿದೆ.

ಹಿಂದೂ ಕಲೆಯಲ್ಲಿ ಶಂಖವನ್ನು ವಿಷ್ಣುವಿನ ಸಂಬಂಧದಲ್ಲಿ ತೋರಿಸಲಾಗುತ್ತದೆ. ನೀರಿನ ಸಂಕೇತವಾಗಿ, ಇದನ್ನು ಸ್ತ್ರೀ ಫಲವತ್ತತೆ ಮತ್ತು ನಾಗಗಳೊಂದಿಗೆ ಸಂಬಂಧಿಸಲಾಗುತ್ತದೆ. ಶಂಖವು ಕೇರಳ ರಾಜ್ಯದ ರಾಜ್ಯ ಲಾಂಛನವಾಗಿದೆ ಮತ್ತು ತಿರುವಾಂಕೂರು ರಾಜ್ಯ ಮತ್ತು ಕೊಚ್ಚಿ ರಾಜ್ಯದ ರಾಷ್ಟ್ರ ಲಾಂಛನ ಕೂಡ ಆಗಿತ್ತು. ಚಿಪ್ಪು ವಸ್ತುವಿನಿಂದ ತಯಾರಿಸಲಾದ ಒಂದು ಪುಡಿಯನ್ನು ಆಯುರ್ವೇದದಲ್ಲಿ ಹೊಟ್ಟೆಯ ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ.[೧]

ಈ ಚಿಪ್ಪು ಪಿಂಗಾಣಿಯಂತೆ ಇರುತ್ತದೆ (ಅಂದರೆ ಚಿಪ್ಪಿನ ಮೇಲ್ಮೈಯು ದೃಢ, ಗಟ್ಟಿ, ಹೊಳಪುಳ್ಳದ್ದು, ಮತ್ತು ಪಿಂಗಾಣಿಯಂತೆ ಸ್ವಲ್ಪ ಅರೆಪಾರದರ್ಶಕವಾಗಿದೆ). ಚಿಪ್ಪಿನ ಮುಖ್ಯಕಾಯದ ಒಟ್ಟಾರೆ ಆಕಾರವು ಆಯತದಂತೆ ಅಥವಾ ಶಂಕುವಿನಂತೆ ಇರುತ್ತದೆ. ಆಯತ ರೂಪದಲ್ಲಿ, ಇದು ಮಧ್ಯದಲ್ಲಿ ಉಬ್ಬಿರುತ್ತದೆ, ಆದರೆ ಪ್ರತಿ ಕೊನೆಯಲ್ಲಿ ಕಿರಿದಾಗುತ್ತ ಹೋಗುತ್ತದೆ. ಮೇಲಿನ ಭಾಗವು (ಇಳಿಗೊಳವೆ) ಬಿರಡೆ ತಿರುಪಿನ ಆಕಾರವಿರುತ್ತದೆ, ಮತ್ತು ಕೆಳಗಿನ ಭಾಗವು (ಶಿಖರ/ಶೃಂಗ) ತಿರುಚಿಕೊಂಡಿದ್ದು ಮತ್ತು ಕಿರಿದಾಗುತ್ತ ಹೋಗುತ್ತದೆ. ಇದರ ಬಣ್ಣವು ಮಂದವಾಗಿದ್ದು, ಮೇಲ್ಮೈಯು ಗಟ್ಟಿ, ಭಿದುರವಾಗಿ ಮತ್ತು ಅರೆಪಾರದರ್ಶಕವಾಗಿರುತ್ತದೆ. ಎಲ್ಲ ಶಂಬುಕ ಚಿಪ್ಪುಗಳಂತೆ, ಒಳಭಾಗವು ಪೊಳ್ಳಾಗಿರುತ್ತದೆ. ಚಿಪ್ಪಿನ ಒಳಮೈಗಳು ಬಹಳ ಹೊಳಪುಳ್ಳವಾಗಿರುತ್ತದೆ, ಆದರೆ ಹೊರ ಮೇಲ್ಮೈಯು ಹೆಚ್ಚಿನ ಗಂತಿರಚನೆಯನ್ನು ಪ್ರದರ್ಶಿಸುತ್ತದೆ. ಹಿಂದೂ ಧರ್ಮದಲ್ಲಿ, ಚೂಪಾದ ಕೊನೆಗಳಿರುವ ಹೊಳಪುಳ್ಳ, ಬಿಳಿ, ಮೃದು, ಭಾರದ ಶಂಖವು ಬಹಳ ಬೇಡಿಕೆಯಲ್ಲಿದೆ.

ಸುತ್ತುವಿಕೆಯ ದಿಕ್ಕನ್ನು ಆಧರಿಸಿ ಎರಡು ಬಗೆಯ ಶಂಖಗಳಿವೆ: ದಕ್ಷಿಣಾವರ್ತಿ ಶಂಖ ಮತ್ತು ವಾಮಾವರ್ತಿ ಶಂಖ. ದಕ್ಷಿಣಾವರ್ತಿ ಶಂಖವು ಈ ಪ್ರಜಾತಿಯ ಬಹಳ ಅಪರೂಪವಾದ ಎಡಚ ರೂಪವಾಗಿದೆ. ಚಿಪ್ಪಿನ ಸುತ್ತುಗಳು ಅಥವಾ ಸುರುಳಿಗಳು ಅಪ್ರದಕ್ಷಿಣವಾಗಿ ವಿಸ್ತರಿಸುತ್ತವೆ. ದಕ್ಷಿಣಾವರ್ತ ಶಂಖವು ವಿಷ್ಣುವನ್ನು ಸಂಕೇತಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Shankh (Shankha) Bhasma". Retrieved 2016-12-29.
"https://kn.wikipedia.org/w/index.php?title=ಶಂಖ&oldid=867820" ಇಂದ ಪಡೆಯಲ್ಪಟ್ಟಿದೆ