ಚಂದ್ರಶೇಖರ್ (ನಟ)
ಗೋಚರ
ಚಂದ್ರಶೇಖರ್ | |
---|---|
Born | - |
Died | ಜನವರಿ ೨೭, ೨೦೧೮ |
Nationality | ಭಾರತೀಯ |
Other names | ಕೆನಡಾ ಚಂದ್ರು |
Occupation | ಸಿನೆಮಾ ನಟ |
Years active | ೧೯೬೯-೧೯೮೪, ೨೦೦೪-೨೦೧೭ |
Known for | ನಟನೆ |
Notable work | ಎಡಕಲ್ಲು ಗುಡ್ಡದ ಮೇಲೆ, ಮಾನಸ ಸರೋವರ |
ಕೂದುವಳ್ಳಿ ಚಂದ್ರಶೇಖರ್ ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಟ. ೬೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ ಮತ್ತು ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ[೧]. ಹಲವಾರು ಚಿತ್ರಗಳಲ್ಲಿ ಪೋಷಕ ನಟ ಮತ್ತು ಖಳನಟನ ಪಾತ್ರಗಳಲ್ಲಿ, ಹಾಗೂ ಕೆಲವು ಚಿತ್ರಗಳಲ್ಲಿ ನಾಯಕನಟನ ಪಾತ್ರದಲ್ಲಿ ನಟಿಸಿದ್ದಾರೆ. ೧೯೭೩ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ’ಎಡಕಲ್ಲು ಗುಡ್ಡದ ಮೇಲೆ’ ಸಿನೆಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿ ಪ್ರಸಿದ್ಧಿಯಾಗಿದ್ದರು. ಇವರು ಕೆನಡಾ ಚಂದ್ರು ಎಂಬ ಹೆಸರಿನಿಂದಲೂ ಗುರುತಿಸಲ್ಪಡುತ್ತಿದ್ದರು. ಅವರು ೨೭ ಜನವರಿ ೨೦೧೮ ರಂದು ಹೃದಯಾಘಾತದಿಂದ ಮರಣ ಹೊಂದಿದರು.
ಸಿನೆಮಾ ಪಯಣ
[ಬದಲಾಯಿಸಿ]- ೧೯೬೯ರಲ್ಲಿ ’ನಮ್ಮ ಮಕ್ಕಳು’ ಚಿತ್ರದ ಮೂಲಕ ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿದ [೨] ಅವರು ವಂಶವೃಕ್ಷ , ರಾಜ ನನ್ನ ರಾಜ, ಶಿವಲಿಂಗ, ಅಸ್ತಿತ್ವ, ರೋಸ್, ಕಾರಂಜಿ, ಜೀವ, ಪೂರ್ವಾಪರ, ಮಳೆ ಬಂತು ಮಳೆ, ಮಾನಸ ಸರೋವರ ಮುಂತಾದ ಸಿನೆಮಾಗಳಲ್ಲಿ ನಟಿಸಿದ್ದರು.
- ಡಾ.ರಾಜ್ಕುಮಾರ್’ರೊಂದಿಗೆ ’ರಾಜ ನನ್ನ ರಾಜ’ ಚಿತ್ರದಲ್ಲಿ ಚಂದ್ರಶೇಖರ್ ನಟಿಸಿದ್ದಾರೆ. ವಿಷ್ಣುವರ್ಧನ್ರೊಂದಿಗೂ ನಟಿಸಿದ್ದಾರೆ.
- ೧೯೮೪ರಲ್ಲಿ ಮದುವೆಯ ನಂತರ ಕೆನಡಾದಲ್ಲಿ ನೆಲೆಸಿದ್ದು ಸಿನೆಮಾ ನಟನೆಯಿಂದ ಬಿಡುವು ತೆಗೆದುಕೊಂಡಿದ್ದರು[೩].
- ೨೦೦೪ರಲ್ಲಿ ಸಿನೆಮಾಗೆ ಮರಳಿಬಂದು ’ಪೂರ್ವಾಪರ’ ಎಂಬ ಚಿತ್ರವನ್ನು ನಿರ್ದೇಶಿಸಿ ಅದರಲ್ಲಿ ಗೀತಾ ಜೊತೆಗೆ ನಟಿಸಿದ್ದರು.
- ನಮ್ಮ ಮಕ್ಕಳು
- ಹಂಸಗೀತೆ
- ಶಂಕರ್ ಗುರು
- ಸಂಪತ್ತಿಗೆ ಸವಾಲ್
- ವಂಶವೃಕ್ಷ
- ಎಡಕಲ್ಲು ಗುಡ್ಡದ ಮೇಲೆ
- ಪೂರ್ವಾಪರ
- ರಾಜ ನನ್ನ ರಾಜ
- ಮಾನಸ ಸರೋವರ
- ಶಿವಲಿಂಗ
- ಅಸ್ತಿತ್ವ
- ರೋಸ್
- ಕಾರಂಜಿ
- ಮಳೆ ಬಂತು ಮಳೆ
- ಜೀವ
- ಮನೆಬೆಳಕು
- ಪುನರ್ಮಿಲನ
- ದೇವರದುಡ್ಡು
- ಅವಳಿ ಜವಳಿ
- ಮುಯ್ಯಿಗೆ ಮುಯ್ಯಿ
- ಶಂಕರ್ ಗುರು
- ಗುರುಶಿಷ್ಯರು
- ಚಕ್ರವರ್ತಿ
- ರಾಜು ಕನ್ನಡ ಮೀಡಿಯಂ
- ೩ ಗಂಟೆ ೩೦ ದಿನ ೩೦ ಸೆಕೆಂಡು
ನಿಧನ
[ಬದಲಾಯಿಸಿ]ಕೆನಡಾ ದೇಶದ ಒಟ್ಟಾವದಲ್ಲಿ ವಾಸವಾಗಿದ್ದ ಅವರು ೨೭ ಜನವರಿ ೨೦೧೮ ರಂದು ಹೃದಯಾಘಾತದಿಂದ ಮರಣ ಹೊಂದಿದರು. ಅವರು ಪತ್ನಿ ಶೀಲಾ ಮತ್ತು ಮಗಳು ತಾನಿಯಾರನ್ನ ಅಗಲಿದ್ದಾರೆ. ’3 ಗಂಟೆ 30 ದಿನ 30 ಸೆಕೆಂಡ್’ ಅವರು ನಟಿಸಿದ ಕೊನೆಯ ಸಿನಿಮಾ ಆಗಿದ್ದು, ಮರಣದ 10 ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.[೫]
ಉಲ್ಲೇಖಗಳು
[ಬದಲಾಯಿಸಿ]- ↑ Edakallu Chandrashekhar Back To Direction Archived 2017-05-01 ವೇಬ್ಯಾಕ್ ಮೆಷಿನ್ ನಲ್ಲಿ., ಚಿತ್ರಲೋಕ.ಕಾಂ. ೧೪ಅಕ್ಟೋಬರ್೨೦೧೫
- ↑ ದಿ ಹಿಂದೂ, Jan 28, 2018
- ↑ Bangalore Mirror
- ↑ The news minute
- ↑ ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ Archived 2018-01-27 ವೇಬ್ಯಾಕ್ ಮೆಷಿನ್ ನಲ್ಲಿ., ಕನ್ನಡಪ್ರಭ, 27 Jan 2018