ವಿಷಯಕ್ಕೆ ಹೋಗು

ಏಷ್ಯನ್ ಕ್ರೀಡಾಕೂಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏಷ್ಯಾದ ಕ್ರೀಡಾಕೂಟದ ಲೋಗೊ-Asian Games logo

ಏಷ್ಯನ್ ಕ್ರೀಡಾಕೂಟ', ಹಾಗೂ ಏಷ್ಯಾಡ್,[] ಎಂದೂ ಕರೆಯಲಾಗುವ ಬಹು-ಕ್ರೀಡೆಗಳ ಕ್ರೀಡಾಕೂಟವು ನಾಲ್ಕು ವರ್ಷಕ್ಕೊಮ್ಮೆ ಏಷ್ಯಾದ ಎಲ್ಲಾ ದೇಶಗಳ ಕ್ರೀಡಾಪಟುಗಳ ನಡುವೆ ಆಡಲಾಗುತ್ತದೆ. ಏಷ್ಯನ್ ಕ್ರೀಡಾಕೂಟವು ಭಾರತದ ನವದೆಹಲಿಯ ಮೊದಲ ಕ್ರೀಡಕೂಟದಿಂದ ೧೯೭೮ರ ಕ್ರೀಡಕೂಟದ ತನಕ ಏಷ್ಯನ್ ಗೇಮ್ಸ್ ಫೆಡೆರೆಷನ್‌ನಿಂದ ನಿಯಂತ್ರಸಲ್ಪಟ್ಟಿತ್ತು. ೧೯೮೨ರ ಕ್ರೀಡಕೂಟದಿಂದ ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ದಿಂದ ಆಯೋಜಿಸಲ್ಪಡಲಾಗುತ್ತಿದೆ.[] ಈ ಕ್ರೀಡಾಕೂಟವು ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿಯಿಂದ ಮಾನ್ಯತೆ ಪಡೆದಿದ್ದು, ಒಲಂಪಿಕ್ ಕ್ರೀಡಾಖೂಟದ ನಂತರ, ಅತಿ ದೊಡ್ಡ ಬಹು-ಕ್ರೀಡೆಗಳ ಕ್ರೀಡಾಕೂಟವಾಗಿದೆ.[][] ಇದುವರೆಗೂ ಒಂಬತ್ತು ದೇಶಗಳು ಆತಿಥ್ಯವನ್ನು ವಹಿಸಿಕೊಂಡಿವೆ. ಇಸ್ರೇಲ್ಅನ್ನು ಹೊರತು ಪಡಿಸಿ, ಈವರೆಗೂ ನಲವತ್ತಾರು ರಾಷ್ಟ್ರಗಳು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿವೆ. ಕಳೆದ ಕ್ರೀಡಕೂಟವು ಸೌತ್ ಕೊರಿಯಾದ ಇಂಚಿಯಾನ್ ನಗರದಲ್ಲಿ ಸೆಪ್ಟಂಬರ್ ೧೯ರಿಂದ ಅಕ್ಟೋಬರ್ ೪ ೨೦೧೪ ರವರೆಗೆ ನಡೆದಿತ್ತು.

1951 ರಲ್ಲಿ ಭಾರತದಲ್ಲಿ ನೆಡೆದ ದೆಹಲಿಯಲ್ಲಿ ನಡದ ಮೊದಲ ಏಷ್ಯಾ ಕ್ರೀಡಾಕೂಟದ ಉದ್ಘಾಟನೆ

ಇತಿಹಾಸ

[ಬದಲಾಯಿಸಿ]

೧೩ ಫೆಬ್ರವರಿ ೧೯೪೯ ರಲ್ಲಿ ಏಷ್ಯನ್ ಅಥ್ಲೆಟಿಕ್ ಫೆಡರೇಷನ್ ಅಧಿಕೃತವಾಗಿ ನವದಹೆಲಿಯಲ್ಲಿ ಉದ್ಘಾಟಿಸಲಾಯಿತು, ಜೊತೆಯಲ್ಲಿ ದೆಹಲಿಯನ್ನು ಮೊದಲ ಆತಿಥ್ಯ ನಗರವಾಗಿ ೧೯೫೦ ರಲ್ಲಿ ನೆಡಸಬೇಕೆಂದು ಘೋಷಿಸಲಾಯಿತು.[][]

ಚಿಹ್ನೆಗಳು

[ಬದಲಾಯಿಸಿ]

ಒಲಂಪಿಕ್ ಕ್ರೀಡಾಕೂಟದಂತೆಯೇ, ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಕೂಡ ಅವರ ಆದರ್ಶಗಳನ್ನು ಚಿಹ್ನೆಗಳ ಮೂಲಕ ಪ್ರತಿನಿಧಿಸುತ್ತವೆ:

  • ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ
  • ಏಷ್ಯಾನ್ ಕ್ರೀಡಾಕೂಟದ ಜ್ಯೋತಿ
  • ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಗೀತೆ

ಹಿಂದಿನ 16 ಕ್ರೀಡಾಕೂಟಗಳ ವಿವರ

[ಬದಲಾಯಿಸಿ]
ಹಿಂದಿನ 16 ಕ್ರೀಡಾಕೂಟಗಳ & 2014 ರ 17ನೇ ಕ್ರೀಡಾಕೂಟದ ವಿವರ
ವರ್ಷ .. ಆತಿಥ್ಯ ನಗರ ದೇಶ ಭಾಗವಹಿಸಿದದೇಶಗಳು,ಸಂಖ್ಯೆ ಅಥ್ಲೀಟ್‘ಗಳು - ಕ್ರೀಡೆ
1951 ನವದೆಹಲಿ ಭಾರತ 11 489 6
1954 . ಮನಾಲಿ ಫಿಲಿಫೇನ್ಸ್ 19 970 8
1958 . ಟೋಕಿಯೋ ಜಪಾನ್ 16 1820 13
1962 . ಜಕಾರ್ತಾ ಇಂಡೋನೇಷ್ಯಾ 12 1460 13
1966 . ಬ್ಯಾಂಕಾಕ್ ಥಾಯ್‘ಲೆಂಡ್ 16 1945 14
1970 ಬ್ಯಾಂಕಾಕ್ ಥಾಯ್‘ಲೆಂಡ್ 16 2400 13
1974 . ಟೆಹರಾನ್ ಇರಾನ್ 13 3010 16
1978 . ಬ್ಯಾಂಕಾಕ್ ಥಾಯ್‘ಲೆಂಡ್ 19 3842 19
1982 ನವದೆಹಲಿ ಭಾರತ 33 3411 21
1986 .. ಸೋಲ್ ದಕ್ಷಿಣ ಕೊರಿಯಾ 27 4839 25
1990 . ಬೀಜಿಂಗ್ ಚೈನಾ 36 6122 29
1994 ಹೊರೋಷಿಮಾ ಜಪಾನ್ 42 6828 34
1998 ಬ್ಯಾಂಕಾಕ್ ಥಾಯ್‘ಲೆಂಡ್ 41 6554 36
2002 ... ಬೂಸಾನ್ ದಕ್ಷಿಣ ಕೊರಿಯಾ 44 7711 38
2006 . ದೋಹಾ ಕತಾರ್ 45 9520 39
2010 . ಗುವಾಂಗ ಜೌ ಚೀನಾ 45 9704 42
2014 . ಇಂಚಿಯಾನ್ ದಕ್ಷಿಣ ಕೊರಿಯಾ 45 9501 36
2018 . ಜಕಾರ್ತಾ ಮತ್ತು ಪಾಲೆಂಬಾಂಗ್ ಇಂಡೋನೇಷ್ಯಾ ಮತ್ತು ದಕ್ಷಿಣ ಸುಮಾತ್ರ 45 40 (465)
  • ಇಂಡೋನೇಷ್ಯಾದ ರಾಜಧಾನಿಯಾದ ಜಕಾರ್ತಾ ಮತ್ತು ದಕ್ಷಿಣ ಸುಮಾತ್ರ ಪ್ರಾಂತ್ಯದ ರಾಜಧಾನಿ ಪಾಲೆಂಬಾಂಗ್. (ದಕ್ಷಿಣ ಸುಮಾತ್ರ ಪ್ರಾಂತ್ಯದ ರಾಜಧಾನಿ ಪಾಲೆಂಬಾಂಗ್.ಬ್ಯಾಂಡಂಗ್ ಮತ್ತು ಪಶ್ಚಿಮ ಜಾವಾ ಮತ್ತು ಬಾಂಟೆನ್ ಪ್ರಾಂತ್ಯಗಳಲ್ಲಿನ ಸ್ಥಳಗಳು.}

ಭಾಗವಹಿಸುವಿಕೆ

[ಬದಲಾಯಿಸಿ]
2006 ರ ಏಷ್ಯಾನ್ ಕ್ರೀಡಾಕೂಟ

ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ(ಒಸಿಎ)ದಲ್ಲಿ ಮಾನ್ಯತೆ ಪಡೆದ ೪೫ ಸದಸ್ಯ ರಾಷ್ಟ್ರಗಳು ಭಾಗವಹಿಸಲು ಅರ್ಹರಾಗಿರುತ್ತಾರೆ. ಏಳು ದೇಶಗಳಾದ ಭಾರತ, ಇಂಡೋನೇಷ್ಯಾ, ಜಪಾನ್, ಫಿಲಿಪ್ಪೀನ್ಸ್, ಶ್ರೀಲಂಕಾ, ಸಿಂಗಾಪುರ ಮತ್ತು ಥೈಲ್ಯಾಂಡ್ ಕ್ರೀಡಾಕೂಟದ ಎಲ್ಲಾ ಆವೃತ್ತಿಗಳಲ್ಲೂ ಸ್ಪರ್ದಿಸಿದ್ದವು.

ಭಾಗವಹಿಸುವ ದೇಶಗಳು

[ಬದಲಾಯಿಸಿ]
ಕ್ರ. ಸಂಖ್ಯೆ ದೇಶಗಳು ಕ್ರ.ಸಂಖ್ಯೆ ದೇಶಗಳು ಕ್ರ.ಸಂಖ್ಯೆ ದೇಶಗಳು
1 ಅಫ್ಘಾನಿಸ್ತಾನ (65) 16 ಉತ್ತರ ಕೊರಿಯಾ (168) 31 ಫಿಲಿಪೈನ್ಸ್ (272)
2   ಬಹ್ರೇನ್ (109) 17 ದಕ್ಷಿಣ ಕೊರಿಯಾ (807) 32   ಕತಾರ್ (222)
3   ಬಾಂಗ್ಲಾದೇಶ (117) 18   ಕುವೈತ್ (24) 33   ಸೌದಿ ಅರೇಬಿಯಾ (169)
4   ಭೂತಾನ್ (24) 19   ಕಿರ್ಗಿಸ್ತಾನ್ (211) 34   ಸಿಂಗಾಪುರ್ (265)
5   ಬ್ರೂನಿ (15) 20 ಲಾವೋಸ್ (142) 35   ಶ್ರೀಲಂಕಾ (173)
6   ಕಾಂಬೋಡಿಯಾ (45) 21   ಲೆಬನಾನ್ (28) 36   ಸಿರಿಯಾ (73)
7  ಚೀನಾ (845) 22   ಮಕಾವು (109) 37   ಚೀನೀ ತೈಪೆ (588)
8   ಹಾಂಗ್ ಕಾಂಗ್ (580) 23   ಮಲೇಷಿಯಾ (426) 38   ತಜಾಕಿಸ್ತಾನ್ (112)
9   ಭಾರತ (572) 24   ಮಾಲ್ಡೀವ್ಸ್ (146) 39   ಥೈಲ್ಯಾಂಡ್ (829) [103]
10   ಇಂಡೋನೇಷ್ಯಾ (938) (ಅತಿಥೇಯ) [86] 25 ಮಂಗೋಲಿಯಾ (269) 40   ಈಸ್ಟ್ ಟಿಮೋರ್ (69)
11   ಇರಾನ್ (387) 26   ಮ್ಯಾನ್ಮಾರ್ (112) 41   ತುರ್ಕಮೆನಿಸ್ತಾನ್ (72)
12   ಇರಾಕ್ (56) 27   ನೇಪಾಳ (185) 42   ಯುನೈಟೆಡ್ ಅರಬ್ ಎಮಿರೇಟ್ಸ್ (138)
13   ಜಪಾನ್ (762) 28   ಓಮನ್ (47) 43   ಉಜ್ಬೇಕಿಸ್ತಾನ್ (232)
14   ಜೋರ್ಡಾನ್ (35) 29   ಪಾಕಿಸ್ತಾನ (310) 44   ವಿಯೆಟ್ನಾಂ (352)
15   ಕಝಾಕಿಸ್ತಾನ್ (440) 30   ಪ್ಯಾಲೆಸ್ಟೈನ್ (88) 45   ಯೆಮೆನ್ (32)
ಒಟ್ಟು 4990 - 3072 - 3599 ಒಟ್ಟು=11661

[]

Game name ಏಷ್ಯಾನ್ ಗೇಮ್ಸ್ ಇತಿಹಾಸದಲ್ಲಿ, ೨೦೧೪ರ ಇಂಚೆಯಾನ್ ಕ್ರೀಡಾಕೂಟವನ್ನು ಸೇರಿದಂತೆ, ೪೪ ಕ್ರೀಡೆಗಳನ್ನು ಪ್ರದರ್ಶಿಸಲಾಗಿದೆ.

ಉಲ್ಲೇಖ

[ಬದಲಾಯಿಸಿ]
  1. China's Great Leap: The Beijing Games and Olympian Human Rights Challenges. Seven Stories. ISBN 9781583228432.
  2. "OCA History". OCA. Archived from the original on 22 ಮೇ 2011. Retrieved 14 August 2010.
  3. "Asian Games Taps Three-Time Olympic Sportscaster For New Sports Radio Talk Show". Sports Biz Asia. 8 February 2010. Retrieved 8 September 2010.
  4. "Fully renovated basketball arena ready for Asian Games". Sports City. 22 July 2009. Archived from the original on 13 ಜೂನ್ 2010. Retrieved 8 September 2010.
  5. "亚运会是从什么时候开始举办的,每几年举办一次?". wangchao.org. Archived from the original on 7 ಸೆಪ್ಟೆಂಬರ್ 2013. Retrieved 14 August 2010.
  6. "亚运会的前世今生:前身远东运动会 中国成绩优异". Sina. 4 August 2010. Retrieved 14 August 2010.
  7. "ATHLETES ABOUT ASIAN GAMES; 'Assalamu'alaikum', 2018 Asian Games open". Archived from the original on 2018-11-06. Retrieved 2018-08-18.

ರೂಪ