ಹೆಚ್.ಡಿ.ಕುಮಾರಸ್ವಾಮಿ

ವಿಕಿಪೀಡಿಯ ಇಂದ
(ಹೆಚ್ ಡಿ ಕುಮಾರಸ್ವಾಮಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ
H. D. Kumaraswamy


In office
೦೩-ಫೆಬ್ರುವರಿ-೨೦೦೬ – ೦೯-ಅಕ್ಟೋಬರ-೨೦೦೭
Governor ಟಿ. ಎನ್. ಚರ್ತುವೇದಿ
Preceded by ಧರಮ್ ಸಿಂಗ್
Succeeded by ಬಿ.ಎಸ್. ಯಡಿಯೂರಪ್ಪ

ಜನನ ಡಿಸೆಂಬರ್ ೧೬, ೧೯೫೯ (1959-12-16) (ವಯಸ್ಸು ೫೨)
ರಾಮನಗರ, ಕರ್ನಾಟಕ
ರಾಜಕೀಯ ಪಕ್ಷ ಜನತಾದಳ(ಎಸ್)
ಪತಿ/ಪತ್ನಿ ಅನಿತಾ ಕುಮಾರಸ್ವಾಮಿ
ಮಕ್ಕಳು ೧ ಮಗ
ನಿವಾಸ ಬೆಂಗಳೂರು, ಭಾರತ
Alma mater ವಿಜಯಾ ಕಾಲೇಜ,ಬೆಂಗಳೂರು (ಪಿಯುಸಿ)
ನ್ಯಾಶನಲ್ ಕಾಲೇಜ ,ಬೆಂಗಳೂರು (ಬಿಎಸ್ಸಿ)
ಧರ್ಮ ಹಿಂದು ವಕ್ಕಲಿಗ
ಅಂತರ್ಜಾಲ ತಾಣ http://kumaraswamy.bengalu.ru/

ಹೆಚ್.ಡಿ. ಕುಮಾರಸ್ವಾಮಿ (ಜನನ: ೧೯ ಡಿಸೆಂಬರ್,೧೯೫೯) ಕರ್ನಾಟಕದ ೧೮ನೆ ಮುಖ್ಯಮಂತ್ರಿ. ಕುಮಾರಸ್ವಾಮಿ, ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತೃತೀಯ ಪುತ್ರ ಹಾಗು ಕರ್ನಾಟಕ ರಾಜ್ಯ ಜನತಾದಳ (ಎಸ್) ಪಕ್ಷದ ಶಾಸಕಾಂಗ ನಾಯಕ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಕೂಡ.

[ಬದಲಾಯಿಸಿ] ಜೀವನ

ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರ ಜನ್ಮ ಡಿಸೆಂಬರ್ ೧೯, ೧೯೫೯ರಲ್ಲಾಯಿತು.ರಾಜಕೀಯ ಅನುಭವವಿಲ್ಲದಿದ್ದರೂ ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ೧೯೯೮ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು ೧೯೯೯ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡ ಕುಮಾರಸ್ವಾಮಿ, ೨೦೦೪ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು. ಕಾಂಗ್ರೆಸ್ ಮತ್ತು ಜನತಾದಳ(ಎಸ್) ಮೈತ್ರಿಕೂಟದ ಸರ್ಕಾರ ಸ್ಥಾಪನೆಯ ಕಾಲದಲ್ಲಿ ಕುಮಾರಸ್ವಾಮಿ ಜನತಾದಳದ ಕಾರ್ಯಾಧ್ಯಕ್ಷರಾರಾದರು. ೨೦೦೫ ಡಿಸೆಂಬರ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯದೊಂದಿಗೆ ಬದಲಾದ ರಾಜಕೀಯ ಪರಿಸ್ಥಿತಿ ಹಾಗು ಕಾಂಗ್ರೆಸ್ ಮತ್ತು ಜನತಾದಳದಿಂದ ನಿರ್ಗಮಿಸಿದ್ದ ಸಿದ್ದರಾಮಯ್ಯನವರ ನೆಡುವಿನ ಮೈತ್ರಿಯ ಮಾತುಕತೆಯಿಂದ ಅಸಂತುಷ್ಟರಾದ ಕುಮಾರಸ್ವಾಮಿ ೧೮ ಜನವರಿ, ೨೦೦೬ರೊಂದು, ತಮ್ಮ ತಂದೆ ಎಚ್.ಡಿ. ದೇವೇಗೌಡರ ಇಚ್ಚೆಯ ವಿರುದ್ದ, ತಮ್ಮ ಪಕ್ಷದ ೪೬ ಶಾಸಕರೊಡನೆ ರಾಜ್ಯಪಾಲರೊಡನೆ ಕಾಂಗ್ರೆಸ್‌ನ ಧರಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲ ಹಿಂದೆಗೆದುಕೊಂಡರು. ಕುಮಾರಸ್ವಾಮಿ ಫೆಬ್ರುವರಿ ೩, ೨೦೦೬ರೊಂದು ಭಾರತೀಯ ಜನತಾ ಪಕ್ಷದ ಸಹಕಾರದೊಂದಿಗೆ ಸ್ಥಾಪಿಸಲಾದ ನೂತನ ಸರ್ಕಾರದ ನೇತೃತ್ವ ವಹಿಸಿ ಕರ್ನಾಟಕದ ೧೮ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೨೦೦೭ ನವೆಂಬರ್ ೨ ರಂದು ಬಿ.ಜೆ.ಪಿ.ಗೆ ಅಧಿಕಾರ ಹಸ್ತಾಂತರಿಸದೆ ಬಹುಮತ ಕಳೆದುಕೊಂಡರು .




ವೈಯಕ್ತಿಕ ಉಪಕರಣಗಳು
ನಾಮವರ್ಗಗಳು
ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು