ಕನಕಪುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕನಕಪುರ
India-locator-map-blank.svg
Red pog.svg
ಕನಕಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ರಾಮನಗರ
ನಿರ್ದೇಶಾಂಕಗಳು 12.55° N 77.417° E
ವಿಸ್ತಾರ
 - ಎತ್ತರ
7.20 km²
 - 637 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
47060
 - 6536.11/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 562 117
 - +08117
 - 

ಕನಕಪುರ ರಾಮನಗರ ಜಿಲ್ಲೆ ಯ ಪ್ರಮುಖ ತಾಲ್ಲೂಕು.

ತಲುಪುವ ವಿಧಾನ[ಬದಲಾಯಿಸಿ]

ಕನಕಪುರ ಬೆಂಗಳೂರಿನಿಂದ ಸುಮಾರು ೫೫ ಕಿ.ಮೀ ಇದೆ. ಬೆಂಗಳೂರಿನಿಂದ ಅನೇಕ ಬಸ್ ಗಳು ಕನಕಪುರಕ್ಕೆ ಇವೆ. ರಸ್ತೆ ಸಹ ಬಹಳ ಚೆನ್ನಾಗಿದೆ. ಸ್ವಂತ ವಾಹನಗಳ ಮೂಲಕ ಸಹ ಇಲ್ಲಿಗೆ ತಲುಪಬಹುದು. ಆದರೆ ಕನಕಪುರದ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗುವ ರಸ್ತೆಯನ್ನು ನೋಡಿದರೆ ಸಾಕು ಅಲ್ಲಿನ ರಾಜಕಾರಿಣಿಗಳ ಕಚಡಾ ರಾಜಕೀಯ ತಿಳಿಯುತ್ತದೆ. ಅಲ್ಲಿ ಅನೇಕ ಸು೦ದರವಾದ ಪರ್ವತಗಳೂ ಕಾಣಸಿಗುತ್ತದೆ.. ಅವೆ೦ದರೆ,ಬಿಳೀಕಲ್ಲು ಬೆಟ್ಟ,,ಸ೦ಗಮ,ಬಸವನ ಬೆಟ್ಟ,,ಶಿವನಾ೦ಕಾರೇಶ್ವರ,ಇನ್ನೂ ಮು೦ತಾದ ಪ್ರೆಕ್ಶನಿಯ ಸ್ತಳ ಸಿಗುತ್ತವೆ.

ಕನಕಪುರದ ಪ್ರಮುಖ ಆಕರ್ಷಣೆಗಳು[ಬದಲಾಯಿಸಿ]

ಕನಕಪುರ ಬಹಳ ಸುಂದರವಾದ ತಾಲೂಕು. ಅಲ್ಲಿ ಅನೇಕ ರಮಣೀಯ ಸ್ಥಳಗಳು, ಸುಂದರವಾದ ದೇವಸ್ತಾನಗಳು ಇವೆ. ಅದರಲ್ಲಿ ಮೊದಲನೆಯದಾಗಿ ಒಂದು ಪುರಾತನವಾದ ದೇವಸ್ತಾನದ ಬಗ್ಗೆ ತಿಳಿಸಲು ಬಯಸಿದ್ದೇನೆ.ನಂತರ ನಿದಾನವಾಗಿ ಮುಂದುವರಿದು ಬೇರೆ ದೇವಸ್ತಾನಗಳ,ರಮಣೀಯ ಸ್ಥಳಗಳ ಬಗ್ಗೆ ತಿಳಿಸುತೇನೆ

ಕನಕಪುರದಿಂದ ಸಂಗಮಕ್ಕೆ ಹೋಗುವ ದಾರಿಯಲ್ಲಿ ಸಂಗಮಕ್ಕಿಂತ ೧ ಕಿ.ಮೀ ಮುಂಚೆ ಎಡಭಾಗಕ್ಕೆ ಒಂದು ಕಿರಿದಾದ ರಸ್ತೆ ಇದೆ ಆ ರಸ್ತೆಯಲ್ಲಿ ಹಾಗೆ ಮುಂದೆ ನಡೆದರೆ 'ಕೊಗ್ಗೆ ದೊಡ್ಡಿ'ಎಂಬ ಹಳ್ಳಿಯಿದೆ. ಆ ಹಳ್ಳಿಯನ್ನು ದಾಟಿ ಹೋದರೆ ಮುಂದೆ ಸಾಗಿದರೆ ಸುಮಾರು ೫ ಕಿ.ಮೀ ದೂರದಲ್ಲಿ ಮಡಿವಾಳ (ತಂಬಡಗೇರಿ)ಎಂಬ ಚಿಕ್ಕ ಹಳ್ಳಿಯಿದೆ ಆ ಹಳ್ಳಿಯ ಮೂಲಕ ಹಾದು ಹೋದರೆ ಸುಮಾರು ೧ ಕಿ.ಮೀ ದೂರದಲ್ಲಿ ಶ್ರೀ ಶಿವನಂಕಾರೇಶ್ವರ ಸ್ವಾಮಿಯ ದೇವಸ್ಥಾನವಿದೆ.

ದೇವಸ್ಥಾನದ ಇತಿಹಾಸ

ಈ ದೇವಸ್ಥಾನವು ತುಂಬಾ ಪ್ರಾಚೀನ ಕಾಲದ್ದಾಗಿದ್ದು, ತುಂಬಾ ಪುರಾತನವಾದ ಇತಿಹಾಸವನ್ನು ಹೊಂದಿದೆ ಎಂದು ದೇವಸ್ಥಾನದ ಕಟ್ಟಡವನ್ನು ನೋಡುವುದರಿಂದ ತಿಳಿಯಬಹುದಾಗಿದೆ ಹೊರತು ಬೇರೆ ಯಾವುದೇ ಪುರಾವೆಗಳು ನಮಗೆ ದೊರೆತಿರುವ ಉದಾಹರಣೆಗಳಿಲ್ಲ.

ಆ ದೇವಸ್ಥಾನದ ಪುರೋಹಿತರ ಹೇಳಿಕೆಯ ಪ್ರಾಕಾರ ಈಗಿರುವ ದೇವಸ್ಥಾನಕ್ಕಿಂತ ಮೊದಲು ದೇವಸ್ಥಾನದ ಮುಂಭಾಗದ ಬಲ ಬದಿಯಲ್ಲಿ ಸುಮಾರು ೨೫೦ಮೀ ದೂರದಲ್ಲಿ ಈಗಿರುವ ದೇವಸ್ಥಾನಕ್ಕಿಂತ ದೊಡ್ಡದಾದ ದೇವಸ್ಥಾನವಿದ್ದು ಅದರ ಅಳಿವಿನ ಬಗ್ಗೆ ಈ ಕೆಳಗಿನಂತೆ ಹೇಳಲಾಗಿದೆ.

ದೇವಸ್ಥಾನದ ಹಿಂಭಾಗಕ್ಕೆ ಸುಮಾರು ೨ ಕಿ.ಮೀ ದೂರದಲ್ಲಿ ಆ ದೇವಸ್ಥಾನದ ಪುರೋಹಿತರು ಮತ್ತು ಅವರ ಸಂಭಂದಿಕರು ವಾಸವಾಗಿದ್ದು ಅದನ್ನು ತಂಬಡಗೇರಿ ಎಂದು ಕರೆಯಲಾಗಿದೆ, ಈಗಲೂ ಅದು ತಂಬಡಗೇರಿ ಏಂಬ ಹೆಸರಿನಿಂದಲೇ ನಾಮಾಂಕಿತಗೊಂಡಿದೆ.ದೇವಸ್ಥಾನದ ಬದಿಯಲ್ಲಿ ಚಿಕ್ಕದಾದ ಹೊಳೆಯೊಂದು ಹರಿಯುತ್ತಿದ್ದು ಮಳೆಗಾಲದ ಸಮಯದಲ್ಲಿ ಸುತ್ತಮುತ್ತಲಿನ ಬೆಟ್ಟಗಳಿಂದ ಮತ್ತು 'ಚಿಕ್ಕೊಂಡನಹಳ್ಳಿ ಕೆರೆ' ಎಂಬ ದೊಡ್ಡ ಕೆರೆಯಿಂದ ಬರುವ ಅತಿ ಹೆಚ್ಚು ನೀರಿನಿಂದ ಆ ಹೊಳೆ(ತೊರೆ)ಯಲ್ಲಿ ನೀರಿನ ಪ್ರಮಾಣ ಅಧಿಕವಾಗಿರುತ್ತದೆ. ಅಂದು ಮಳೆಗಾಲದ ಒಂದು ದಿನ ಮಧ್ಯಾಹ್ನ ಆ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಎಂದೂ ಕಾಣದ ಹುಚ್ಚು ಹೊಳೆ ಹರಿದು ಬಂದಿತು.ಆ ಹೊಳೆಯ ರಭಸವು ಸುತ್ತ-ಮುತ್ತಲಿನ ಬೆಟ್ಟಗಳಿಗೆ ನಡುಕವನ್ನುಂಟು ಮಾಡಿತ್ತು. ಆ ಗಂಗೆಯು ನೇರವಾಗಿ ಹರಿದು ಬರುತ್ತಿರಲು ಹೊಳೆಯ ದಡದಲ್ಲಿದ್ದ ತಂಬಡಗೇರಿಯನ್ನು ಕೊಚ್ಚಿಕೊಂಡು ಹೋಗುವ ಮುನ್ಸೂಚನೆ ಕಂಡು ಬಂತು.ಆ ಕೂಡಲೇ ಶಿವನಂಕಾರೇಶ್ವರ ಸ್ವಾಮಿಯು ತನ್ನ ಭಕ್ತರನ್ನು ರಕ್ಷಿಸಲು ಗಂಗೆಗೆ ಅಡ್ಡಲಾಗಿ ಮಂಡಿಯೂರಿ ಕುಳಿತರಂತೆ, ಗಂಗೆಯು ಎಷ್ಟು ಬೇಡಿದರೂ ಮುಂದೆ ಹೋಗಲು ಬಿಡದೆ ಕುಳಿತರಂತೆ. ಆ ಸಮಯದಲ್ಲಿ ಗಂಗೆಯು ಮುಂದೆ ಹೋಗಲು ಯಾವ ದಾರಿಯೂ ಇಲ್ಲದೆ ತನ್ನ ಬಲ ಭಾಗಕ್ಕೆ ಮಾತ್ರ ದಾರಿಯಿದ್ದು ಆ ಭಾಗದಲ್ಲಿ ಶಿವನಂಕಾರೇಶ್ವರ ಸ್ವಾಮಿಯ ದೇವಸ್ಥಾನವಿತ್ತು. ಆಗ ಶಿವನಂಕಾರೇಶ್ವರ ಸ್ವಾಮಿಯು ತನ್ನ ಗುಡಿ ಹೋದರೂ ಸರಿಯೇ ತನ್ನ ಭಕ್ತರು ಉಳಿಯಬೇಕೆಂದು ಆ ಗಂಗೆಗೆ ತನ್ನ ದೇವಸ್ಥಾನದ ಕಡೆ ದಾರಿ ನೀಡಿದರಂತೆ. ಆ ಸಮಯದಲ್ಲಿ ಗಂಗೆಯು ಆ ಸ್ವಾಮಿಯ ಗುಡಿಯನ್ನು ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ.ಈಗಲೂ ಸಹ ಆ ಹಳೆಯ ದೇವಸ್ಥಾನದ ಅವಶೇಷಗಳು ಅಂದರೆ ಕಟ್ಟಡದ ಕಲ್ಲುಗಳು ಅಲ್ಲಿಯೇ ಚಲ್ಲಾಂಪಿಲ್ಲಿಯಾಗಿ ಬಿದ್ದಿವೆ. ದೇವಸ್ಥಾನದ ಗೋಪುರದ ಕಳಸವು ಆ ಗಂಗೆಯೊಡನೆ ಕೊಚ್ಚಿಕೊಂಡು ಬಂದು ಸಂಗಮದ ಹತ್ತಿರ ಯಾವುದೋ ಆಳವಾದ ಜಾಗದಲ್ಲಿ ಮುಳುಗಿದೆ ಎಂದು ಕೆಲವರು ಹೇಳುತ್ತಾರೆ. ಅನಂತರ ಸ್ವಾಮಿಯ ಭಕ್ತರು ಹಳೆ ದೇವಸ್ತಾನದ ಕೆಲವು ಅವಶೇಷಗಳನ್ನು ತಂದು ಪಕ್ಕದಲ್ಲಿ ಸುಮಾರು ೨೫೦ಮೀ ದೂರದಲ್ಲಿ ದೊಡ್ಡದಾದ ದೇವಸ್ಥಾನವೊಂದನ್ನು ಕಟ್ಟಿದ್ದಾರೆ, ಅದೇ ಈಗಿನ 'ಶ್ರೀ ಶಿವನಂಕಾರೆಶ್ವರ ಸ್ವಾಮಿ ಸನ್ನಿಧಿ'. ಅಲ್ಲಿನ ಹಿರಿಯರು ಹೇಳುವಂತೆ ಆ ಹಿಂದಿನ ದೇವಸ್ಥಾನವು ಸುಮಾರು ೧೦೧ಅಂಕಣದಷ್ಟಿದ್ದು, ಈಗಿನ ದೇವಸ್ತಾನವು ಸುಮಾರು ೩೦ ರಿಂದ ೪೦ ಅಂಕಣವಿದೆ ಎಂದು ಹೇಳಲಾಗುತ್ತಿದೆ.ಆ ದೇವಸ್ಥಾನದಲ್ಲಿ ೩ ಪುಟ್ಟ ಗುಡಿಗಳಿವೆ. ಅವುಗಳಲ್ಲಿ ಒಂದರಲ್ಲಿ ಶಿವನಂಕಾರೇಶ್ವರ ಸ್ವಾಮಿ ಇನ್ನೊಂದರಲ್ಲಿ ವೀರಭದ್ರ ಸ್ವಾಮಿ ಮತ್ತೊಂದರಲ್ಲಿ ಸ್ವಾಲಗಿತ್ತಿಯಮ್ಮ ತಾಯಿ ನೆಲೆಸಿದ್ದಾರೆ. ಈ ಮೂರು ಪುಟ್ಟ ಗುಡಿಗಳ ಪಕ್ಕದಲ್ಲಿ ಒಂದು ಬಸವನ ವಿಗ್ರಹವಿದೆ, ಆ ವಿಗ್ರಹದಲ್ಲಿ ಬಸವಣ್ಣ ಸ್ವಾಮಿಯು ಮಂಡಿಯೂರಿ ಕುಳಿತಿದ್ದು ಅದರ ಬಾಯಿಯ ಭಾಗವನ್ನು ಕತ್ತರಿಸಲಾಗಿದೆ. ಬಸವಣ್ಣನ ಬಾಯಿಯನ್ನು ಕತ್ತರಿಸಿರುವ ಹೆನ್ನೆಲೆಯಲ್ಲಿ ಈ ಕೆಳಗಿನ ಕತೆಯು ರೂಡಿಯಲ್ಲಿದೆ. ಅಲ್ಲಿನ ಕೆಲವು ಹಿರಿಯ ನಾಗರಿಕರು, ಭಕ್ತರು, ಮತ್ತು ಪುರೋಹಿತರ ಹೇಳಿಕೆಯ ಪ್ರಕಾರ ಆ ಬಸವ‌‌ ದೈವದತ್ತವಾಗಿ ಜನಿಸಿದ್ದು, ರಾತ್ರಿಯಲ್ಲಿ ಒಬ್ಬ ರೈತನ ಹೊಲದಲ್ಲಿ ಮೆಯ್ಯಲು ಹೋಗುತ್ತಿದ್ದು, ನಂತರ ಹಗಲಿನಲ್ಲಿ ದೇವಸ್ತಾನದಲ್ಲಿ ಬಂದು ಮಲಗುತ್ತಿತ್ತು. ಆ ಹೊಲದ ಮಾಲಿಕನಿಗೆ ರಾತ್ರಿಯಲ್ಲಿ ಯಾವ ಹಸು ಬಂದು ಮೆಯ್ಯುತ್ತಿದೆ ಎಂದು ತಿಳಿಯದೆ ಅದನ್ನು ತಿಳಿಯುವ ಸಲುವಾಗಿ ಒಂದು ದಿನ ರಾತ್ರಿಯಿಡೀ ಕಾಯುತ್ತಾ ಮಚ್ಚು ಹಿಡಿದು ಕುಳಿತನಂತೆ. ಎಂದಿನಂತೆ ಬಸವಣ್ಣ ರಾತ್ರಿಯಲ್ಲಿ ಬಂದು ಮೆಯ್ಯುತ್ತಿರಲು ಸಿಟ್ಟೀಗೆದ್ದ ರೈತನು ತಾಳ್ಮೆಯನ್ನು ಕಳೆದುಕೊಂಡು ಅದರ ಮೊಖವನ್ನು ಕೊಚ್ಚಿದನಂತೆ. ಆಗ ಬಸವಣ್ಣನು ಮೆಯ್ಯಲು ಬಾಯಿ ಇಲ್ಲದೆ ದೇವಸ್ತಾನದ ಬಾಗಿಲಲ್ಲಿ ಬಂದು ಮಲಗಿರಲು ಮುಂಜಾನೆ ಆ ರೈತನು ಬಂದು ನೋಡಲು ಸತ್ಯ ತಿಳಿದ ರೈತನು ಮರುಗಿದನಂತೆ. ಈ ಕತೆಯ ಸತ್ಯಾಂಶದ ಸಂಕೇತವಾಗಿ ದೇವಸ್ತಾನದ ಮುಂಭಾಗದಲ್ಲಿ ಆ ರೈತನು ಮಚ್ಚು ಹಿಡಿದು ನಿಂತಿರುವ ವಿಗ್ರಹವನ್ನು ಕೆತ್ತಲಾಗಿದೆ. ದೇವಸ್ತಾನದ ಹಿಂಭಾಗದ ಗೋಡೆಗೆ ಹೊಂದಿಸಿದಂತೆ ತೇರನ್ನು ನಿಲ್ಲಿಸಲು ಜಾಗವನ್ನು ಮಾಡಲಾಗಿದೆ.

ಮುಂದುವರಿಯುತ್ತದೆ


ಕಬ್ಬಾಳು ಶಕ್ತಿ ದೇವತೆಯ ಪವಿತ್ರ ಕ್ಷೇತ್ರ

ಕನಕಪುರದಿಂದ ಸಾತನೂರು ರಸ್ತೆಯಲ್ಲಿ ಸುಮಾರು ೨೦ ಕಿ. ಮೀ ದೂರ ಕ್ರಮಿಸಿದರೆ ಕಬ್ಬಾಳು ಕ್ಷೇತ್ರವಿದೆ . ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಬಂದು ಕಬ್ಬಾಳಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಇದೂಂದು ಪುರಾತನ ಇತಿಹಾಸವುಳ್ಳ ಪವಿತ್ರ ಕ್ಷೇತ್ರಗಳಲ್ಲಿ ಇದು ಕೂಡ ಒಂದು.

ಕನಕಪುರದ ಕೋಟೆಯ ಬಗ್ಗೆ: ಕನಕಪುರದ ಕೋಟೆ ಅರ್ಕಾವತಿ ನದಿ ತೀರದಲ್ಲಿದ್ದು ಇದನ್ನು ಕಟ್ಟಿಸಿದ್ದು ವಿಜಯನಗರ ಸಾಮ್ರಾಜ್ಯಾದ ಚನ್ನಪಟ್ಟಣ್ಣ ಸಂಸ್ಥಾನದ ಅಧಿಪತಿ ಶ್ರೀ ಜಗದೇವರಾಯ - ಈತ ಬಣಜಿಗ ಸಮುದಾಯಕ್ಕೆ ಸೇರಿದ್ದವನಾಗಿದ್ದನು ಈ ಕೋಟೆಯು ಟಿಪ್ಪು ಸುಲ್ತಾನನ ಯುದ್ದ ಯುಕ್ತಿಯ ರಾಜಕೀಯದಲ್ಲಿ ಎರಡು ಭಾರಿ ಅಗ್ನಿಗೆ ಆಹುತಿಯಾಗಿ ಬಹುಶಃ ನಾಶವಾಹಿತು ಮುಂದುವರೆಯುವುದು

"http://kn.wikipedia.org/w/index.php?title=ಕನಕಪುರ&oldid=481515" ಇಂದ ಪಡೆಯಲ್ಪಟ್ಟಿದೆ