ಭದ್ರಾವತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭದ್ರಾವತಿ
ಭದ್ರಾವತಿ ನಗರದ ಪಕ್ಷಿನೋಟ
ಭದ್ರಾವತಿಯಲ್ಲಿರುವ ೧೩ನೇ ಶತಮಾನದ ಲಕ್ಷ್ಮಿ ನರಸಿಂಹ ದೇವಾಲಯದ ಎಡಗೋಪುರ
India-locator-map-blank.svg
Red pog.svg
ಭದ್ರಾವತಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಶಿವಮೊಗ್ಗ
ನಿರ್ದೇಶಾಂಕಗಳು 13.5° N 75.42° E
ವಿಸ್ತಾರ ೬೭ km²
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ

 - /ಚದರ ಕಿ.ಮಿ.
ಮೇಯರ್
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೭-೩೦೧/೩೦೨/೩೦೩
 - +೦೮೨೮೨
 - KA ೧೪

ಭದ್ರಾವತಿ ಭಾರತ ದೇಶದ, ಕರ್ನಾಟಕ ರಾಜ್ಯದ, ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಕೈಗಾರಿಕಾ ಪಟ್ಟಣ. ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಇದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ೨೫೫ ಕಿಲೋಮೀಟರ್ ಮತ್ತು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ ೧೮ ಕಿಲೋಮೀಟರ್ ದೂರದಲ್ಲಿದೆ. ಈ ಪಟ್ಟಣವು ೬೭ ಚದರ ಕಿ.ಮೀ ಕ್ಷೇತ್ರಫಲ ಮತ್ತು ೨೦೦೧ ಜನಗಣತಿಯ ಪ್ರಕಾರ ೧೬೦,೬೬೨ ಜನ ಸಂಖ್ಯೆ ಹೊಂದಿದೆ.

ಪರಿವಿಡಿ

ಚರಿತ್ರೆ [ಬದಲಾಯಿಸಿ]

ಭದ್ರಾವತಿಯ ಹೆಸರು ಅದರ ಮೂಲಕ ಹರಿಯುವ ಭದ್ರಾ ನದಿಯಿಂದ ಉತ್ಪನ್ನವಾಗಿದೆ. ಹಿಂದೆ ಬೆಂಕಿಪುರ (ಅಥವಾ ವೆಂಕಿಪುರ) ಎಂದು ಕರೆಯಲ್ಪಟ್ಟಿತ್ತು. ಇತ್ತೀಚಿನ ಚರಿತ್ರೆಯಲ್ಲಿ ಭದ್ರಾವತಿಯು ೧೯೧೮ರಲ್ಲಿ ಸ್ಥಾಪಿಸಲಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಹೆಸರಾಯಿತು. ಅನಂತರ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಎಂದು ನಾಮಕರಣಗೊಂಡ ಇದು ಒಂದು ದೊಡ್ಡ ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಸೌಕರ್ಯ ಹೊಂದಿದ್ದು ಭದ್ರಾವತಿಯ ಮುಖ್ಯ ಭಾಗವಾಗಿದೆ. ಕಾರ್ಖಾನೆಗಳ ನಗರ ಎಂಬ ಪ್ರಖ್ಯಾತಿಯನ್ನು ಹೆಚ್ಚಿಸಿದ್ದು ೧೯೩೬ರಲ್ಲಿ ಸ್ಥಾಪಿಸಲಾದ ಒಂದು ಕಾಗದ ಕಾರ್ಖಾನೆ, ಮೈಸೂರು ಕಾಗದ ಕಾರ್ಖಾನೆ.

ಭೌಗೋಳಿಕ [ಬದಲಾಯಿಸಿ]

ಭದ್ರಾವತಿಯು ಕರ್ನಾಟಕದ ಮಧ್ಯಭಾಗದಲ್ಲಿ, ಶಿವಮೊಗ್ಗ ಜಿಲ್ಲೆಯ ದಕ್ಷಿಣ-ಪೂರ್ವ ಕೋನೆಯಲ್ಲಿದೆ. ಭದ್ರಾವತಿಯು ೧೩° ೫೦' ಉ ಅಕ್ಷಾಂಶ ಹಾಗೂ ೭೫° ೪೨' ಪೂ ರೇಖಾಂಶದಲ್ಲಿದೆ. ಭದ್ರಾವತಿ ತಾಲ್ಲೂಕು ಪಶ್ಚಿಮಕ್ಕೆ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಜೊತೆಗೆ, ಉತ್ತರಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಜೊತೆಗೆ, ಪೂರ್ವಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಜೊತೆಗೆ ಮತ್ತು ದಕ್ಷಿಣಕ್ಕೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಜೊತೆಗೆ ಗಡಿಯನ್ಲು ಹಂಚಿಕೊಂಡಿದೆ. ಭದ್ರಾವತಿಯು ಸಮುದ್ರ ಮಟ್ಟದಿಂದ ೫೮೦ ಮಿ (೧೯೦೦ ಅಡಿ) ಮೇಲಿದೆ.

ಸಂಪರ್ಕ [ಬದಲಾಯಿಸಿ]

ರಸ್ತೆ [ಬದಲಾಯಿಸಿ]

ಬೆಂಗಳೂರಿನಿಂದ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು ಮತ್ತು ತರೀಕೆರೆ ಮೂಲಕ ಸಾಗುವ ಬೆಂಗಳೂರು-ಹೊನ್ನಾವರ NH-206 ಹೆದ್ದಾರಿ(ಬಿ.ಹೆಚ್ ರಸ್ತೆ)ಯ ಮೂಲಕ ಭದ್ರಾವತಿಯನ್ನು ತಲುಪಬಹುದು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ಬಸ್ಸುಗಳು ಭದ್ರಾವತಿಯಲ್ಲಿಯೂ ನಿಲ್ಲಿಸುತ್ತವೆ ಮತ್ತು ಪ್ರಯಾಣಕ್ಕೆಸುಮಾರು ಆರು ಘಂಟೆ ಸಮಯ ತೆಗೆದುಕೊಳ್ಳುತ್ತವೆ. ಚಿತ್ರದುರ್ಗ, ದಾವಣಗೆರೆ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಕೆಲವು ಸ್ಥಳಗಳು ಮುಂತಾದ ಬೇರೆ ಬೇರೆ ಕೆಲವು ಸ್ಥಳಗಳಿಂದ ಭದ್ರಾವತಿಗೆ ನೇರವಾಗಿ ರಸ್ತೆ ಸಂಪರ್ಕವಿದೆ. ಜಿಲ್ಲಾಕೇಂದ್ರ ಶಿವಮೊಗ್ಗವು ಕರ್ನಾಟಕದ ಎಲ್ಲಾ ಭಾಗಗಳಿಂದ ಚೆನ್ನಾಗಿ ರಸ್ತೆಯ ಮೂಲಕ ಸಂಪರ್ಕಿಸಲ್ಪಟ್ಟಿರುವುದರಿಂದ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಭದ್ರಾವತಿ ತಲುಪಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳ ಸೌಲಭ್ಯವಿದೆ.

ರೈಲು [ಬದಲಾಯಿಸಿ]

ಬೀರೂರು - ಶಿವಮೊಗ್ಗ ರೈಲ್ವೆ ಹಳಿ ಭದ್ರಾವತಿ ನಗರದ ಮೂಲಕ ಹಾದು ಹೋಗುತ್ತದೆ ಪ್ರತಿದಿನ ಬೆಂಗಳೂರಿನಿಂದ ಶಿವಮೊಗ್ಗ ಚಲಿಸುವ ಹಲವಾರು ರೈಲುಗಳು ಭದ್ರಾವತಿಯಲ್ಲಿ ನಿಲ್ಲುತ್ತವೆ. ಬೆಂಗಳೂರಿನಿಂದ ಬೀರೂರು ಜಂಕ್ಷನ್ ತನಕ ರೈಲಿನಲ್ಲಿ ಬಂದು, ಅಲ್ಲಿಂದ ರೈಲು ಅಥವಾ ಬಸ್ಸಿನಲ್ಲಿ ಭದ್ರಾವತಿಗೆ ಬರಬಹುದು. ಬೀರೂರಿಂದ ಭದ್ರಾವತಿಗೆ ಬರಲು ಸುಮಾರು 1 ತಾಸು ಹಿಡಿಯುತ್ತದೆ. ಧಾರವಾಡ - ಮೈಸೂರು ರೈಲು ಕೂಡ ಭದ್ರಾವತಿಯ ಮೂಲಕ ಹಾದುಹೋಗುತ್ತದೆ. ಬೆಂಗಳೂರು - ಶಿವಮೊಗ್ಗ ಇಂಟರ್ ಸಿಟಿ ರೈಲಿನಲ್ಲಿ ಕೂಡ ಭದ್ರಾವತಿಗೆ ಪ್ರಯಾಣಿಸಬಹುದು.

ವಿಮಾನ [ಬದಲಾಯಿಸಿ]

ಭದ್ರಾವತಿಗೆ ಅತಿ ಸಮೀಪದ ವಿಮಾನ ನಿಲ್ದಾಣ ಹುಬ್ಬಳ್ಳಿ. ಹುಬ್ಬಳ್ಳಿ ಭದ್ರಾವತಿಯಿಂದ ಸುಮಾರು ೧೭೦ ಕಿ.ಮಿ ದೂರದಲ್ಲಿದೆ. ಹುಬ್ಬಳ್ಳಿಗೆ ಬೆಂಗಳೂರಿನಿಂದ ಮತ್ತು ಬೆಳಗಾವಿಯಿಂದ ವಿಮಾನ ಹಾರಾಡುತ್ತದೆ. ಬೆಂಗಳೂರು ಅಥವಾ ಮಂಗಳೂರಿನವರಗೆ ವಿಮಾನದಲ್ಲಿ ಪ್ರಯಾಣಿಸಿ, ಅಲ್ಲಿಂದ ಭದ್ರಾವತಿಗೆ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ ಪ್ರಯಾಣಿಸಬಹುದು. ಈಗ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸಿದ್ಢ ಆಗುತ್ತಿದೆ.

ಕೈಗಾರಿಕೆಗಳು [ಬದಲಾಯಿಸಿ]

ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ - VISL

ಮೈಸೂರು ಕಾಗದ ಕಾರ್ಖಾನೆ - MPM

ಪ್ರವಾಸೀ ತಾಣಗಳು [ಬದಲಾಯಿಸಿ]

ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ - ಇದು ೧೩ನೇ ಶತಮಾನದ ಹೊಯ್ಸಳ ಶೈಲಿಯ ದೇವಾಲಯ. ಭದ್ರಾವತಿಯ ಹಳೆನಗರ ಭಾಗದಲ್ಲಿದೆ. ಸುಂದರ ಶಿಲ್ಪಕಲೆ ಹಾಗೂ ಭಗ್ನಶಿಲ್ವಗಳನ್ನು ಹೊಂದಿರುವ ಇದು ಈಗ ಕರ್ನಾಟಕ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿದೆ.

ಭದ್ರಾ ಅಭಯಾರಣ್ಯ - ೧೯೫೧ರಲ್ಲಿ ಜಗರ ಕಣಿವೆ ಅಭಯಾರಣ್ಯ ಎಂದು ಸ್ಥಾಪಿಸಲ್ಪಟ್ಟಿತ್ತು. ಸುತ್ತಲೂ ಇರುವ ಲಕ್ಕವಳ್ಳಿ ಕಾಡನ್ನೂ ಸೇರಿಸಿ ೧೯೭೨ರಲ್ಲಿ ಇದನ್ನು ಭದ್ರಾ ಅಭಯಾರಣ್ಯ ಎಂದು ಮಾಡಲಾಯಿತು. ಈಗ ಇದು ೪೯೨ ಚದರ ಕಿ.ಮಿ.ಗಳಷ್ಟಿದೆ. ಇದರಲ್ಲಿ ಮುತ್ತೋಡಿ ಮತ್ತು ಲಕ್ಕವಳ್ಳಿ ಎಂಬ ಎರಡು ವಿಭಾಗಗಳಿವೆ. ಇಲ್ಲಿ ಇರುವ ಕೆಲವು ಪ್ರಾಣಿಗಳೆಂದರೆ ಹುಲಿ, ಚಿರತೆ, ಕಾಡುನಾಯಿ, ನರಿ, ಆನೆ, ಕರಡಿ, ಸಾಂಬಾರ್, ಜಿಂಕೆ, ಲಂಗೂರ್, ದೊಡ್ಡ ಮಲಬಾರ್ ಅಳಿಲು, monitor lizard, barking deer, wild boar, bonnet macaque, slender loris ಇತ್ಯಾದಿ. ಬುಲ್ ಬುಲ್, ಮರಕುಟುಕ, ಪಾರಿವಾಳಗಳು, shama, Malabar whistling thrush, hornbills, drongos and paradise flycatcher ಮುಂತಾದವು ಇಲ್ಲಿನ ಪಕ್ಷಿಗಳು. ಕೇಂದ್ರ ಸರ್ಕಾರದ ಟೈಗರ್ ಪ್ರಾಜೆಕ್ಟ್ ಈ ಅಭಯಾರಣ್ಯವನ್ನು ಒಳಗೊಂಡಿದೆ. ಅಕ್ಟೋಬರ್ ನಿಂದ ಫೆಬ್ರವರಿ ಇಲ್ಲಿನ ಭೇಟಿಗೆ ಒಳ್ಳೆಯ ಸಮಯ. ಇಲ್ಲಿ ಅರಣ್ಯ ಇಲಾಖೆಯ ಒಂದು ಜಂಗಲ್ ರೆಸಾರ್ಟ್ ಇದೆ. ಮೊದಲೇ ಕಾಯ್ದಿರಿಸಿಕೊಂಡು ರಾತ್ರಿ ತಂಗಬಹುದು.

ಭದ್ರಾ ನದಿ ಯೋಜನೆ (ಬಿ.ಆರ್.ಪ್ರಾಜೆಕ್ಟ್) - ಇದು ಭದ್ರಾವತಿಯಿಂದ ೨೦ ಕಿ.ಮಿ. ದೂರದ ಲಕ್ಕವಳ್ಳಿಯಲ್ಲಿದೆ. ಇದು ಸರ್ ಎಂ. ವಿಶ್ವೇಶ್ವರಯ್ಯನವರಿಂದ ರೂಪಿಸಲ್ಪಟ್ಟ ಅಣೆಕಟ್ಟು. ಭದ್ರಾವತಿ ಮತ್ತು ತರೀಕೆರೆ ತಾಲ್ಲೂಕಿನ ಪ್ರದೇಶಗಳ ನೀರಾವರಿ ಇದರಿಂದ ಆಗುತ್ತದೆ. ಇಲ್ಲಿ ಒಂದು ಸಣ್ಣ ವಿದ್ಯುತ್ ಉತ್ಪಾದನಾ ಘಟಕವೂ ಕೂಡ ಇದೆ. ಪಿಕ್ನಿಕ್ ಗೆ ಒಂದು ಉತ್ತಮ ತಾಣ.

ಕೂಡಲಿ - ಭದ್ರಾ ನದಿ ಹಾಗೂ ತುಂಗಾ ನದಿಗಳು ಸೇರುವ ಜಾಗ. ಭದ್ರಾವತಿಯಿಂದ ಹೊಳೆಹೊನ್ನೂರು ದಿಕ್ಕಿನಲ್ಲಿ 15 ಕಿ.ಮೀ. ದೂರದಲ್ಲಿದೆ.

ಗೊಂದಿ - ದೇವಸ್ಥಾನ, ಗುಹೆ ಹಾಗೂ ಚೆಕ್ ಡ್ಯಾಂ ಇರುವ ಸ್ಥಳ.

ಸುಣ್ಣದಹಳ್ಳಿ- ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಪಕ್ಕದಲ್ಲಿ ಭದ್ರಾ ನದಿ ಹರಿಯುತ್ತದೆ. ಭದ್ರಾವತಿಯಿಂದ ಸುಮಾರು ೪ ರಿಂದ ೫ ಕಿ.ಮಿ ಆಗುತ್ತದೆ.

ಪ್ರಮುಖ/ಪ್ರಸಿದ್ಧ ವ್ಯಕ್ತಿಗಳು [ಬದಲಾಯಿಸಿ]

ಗ್ರಂಥಾಲಯ [ಬದಲಾಯಿಸಿ]

* ಹಳೇನಗರ ಶಾಖಾ ಗ್ರಂಥಾಲಯ
* ಕಾಗದನಗರ ಶಾಖಾ ಗ್ರಂಥಾಲಯ
* ನ್ಯೂಟೌನ್ ಶಾಖಾ ಗ್ರಂಥಾಲಯ
* ಅಂಬೇಡ್ಕರ್ ಶಾಖಾ ಗ್ರಂಥಾಲಯ
* ಸಂಚಾರಿ ಗ್ರಂಥಾಲಯ 
* ವಾಚನಾಲಯ ಮಿಲಿಟರಿ ಕ್ಯಾಂಪ್

ಹೊರಗಿನ ಕೊಂಡಿಗಳು [ಬದಲಾಯಿಸಿ]

"http://kn.wikipedia.org/w/index.php?title=ಭದ್ರಾವತಿ&oldid=324825" ಇಂದ ಪಡೆಯಲ್ಪಟ್ಟಿದೆ