ತುಮಕೂರು
| ತುಮಕೂರು | |
| ರಾಜ್ಯ | ಕರ್ನಾಟಕ |
| ಜಿಲ್ಲೆ | ತುಮಕೂರು] |
| ನಿರ್ದೇಶಾಂಕಗಳು | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ - ಸಾಂದ್ರತೆ |
- {{{population_density}}}/ಚದರ ಕಿ.ಮಿ. |
| ಜಿಲ್ಲಾಧಿಕಾರಿ | |
| ಅಂತರ್ಜಾಲ ತಾಣ: www.tumkurcity.gov.in | |
ತುಮಕೂರು - ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬೆಂಗಳೂರಿನಿಂದ ೭೦ ಕಿ.ಮಿ. ದೂರದಲ್ಲಿದೆ.
ತುಮಕೂರು-ಬೆಂಗಳೂರಿನ ಹೆದ್ದಾರಿಯಲ್ಲಿರುವ ಕ್ಯಾತಸಂದ್ರದ ಬಳಿ ಇರುವ ವೀರಶೈವ ಪುಣ್ಯಕ್ಷೇತ್ರವಾದ ಶ್ರೀ ಸಿದ್ದಗಂಗಾ ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೫ ವರ್ಷದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ನೆಡೆದಾಡುವ ಶಿವನೆಂದೇ ಪ್ರಖ್ಯಾತರಾಗಿದ್ದಾರೆ.
ಸಿದ್ಧಗಂಗಾ ಮಠದ ಸಮೀಪ ಇರುವ ಕ್ಯಾತ್ಸಂದ್ರ, ತಟ್ಟೆಇಡ್ಲಿ ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ ಸಿದ್ದರ ಬೆಟ್ಟವು ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿರುವ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಮತ್ತು ಕಗ್ಗೆರೆ ನಾಡಿನ ಪ್ರಮುಖ ವೀರಶೈವ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ ತಿಪಟೂರು ತೆಂಗಿನ ಕೃಷಿಗೆ ಹೆಸರಾಗಿದ್ದು ಕಲ್ಪತರು ನಾಡು ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. ದೇವರಾಯನ ದುರ್ಗ ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ.
ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು ಹೆಚ್.ಎಂ.ಟಿ, ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ.
ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. ತುಮಕೂರು ವಿಶ್ವವಿದ್ಯಾಲಯ ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ ಗುಬ್ಬಿ ನಾಟಕ ಕಂಪನಿಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ ಗುಬ್ಬಿಯವರು.
ಪರಿವಿಡಿ |
ತುಮಕೂರು ಜಿಲ್ಲೆಯ ತಾಲ್ಲೂಕುಗಳು[ಬದಲಾಯಿಸಿ]
ತುಮಕೂರು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳು[ಬದಲಾಯಿಸಿ]
- ಸರ್ಕಾರಿ ಹಿರಿಯ ಪ್ರಾಥಮಿಕ ಪಾಟ ಶಾಲೆ, ಹುರುಳಗೆರೆ. ಗುಬ್ಬಿ ತಾಲ್ಲೋಕ್, ಚಂದ್ರಶೇಕರ ಪುರ ಹೋಬಳಿ
- ತುಮಕೂರು ವಿಶ್ವವಿದ್ಯಾಲಯ
- ಶ್ರೀ ವಿಶ್ವಭಾರತಿ ವಿದ್ಯಾ ಸಂಸ್ಥೆ,ಮಲ್ಲಸಂದ್ದ್ರ
- ದಿಗ್ವಿಜಯ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯ,ಹಡವನಹಳ್ಳಿ ಗೆಟ್,ತುರುವೆಕೆರೆ/ತಾ/ ದೂ:೭೭೬೦೯೮೦೮೬೭
- ಶ್ರೀದೇವಿ ಶಿಕ್ಷಣ ಸಂಸ್ಠೆ
- ಸಿದ್ಧಗಂಗಾ ಶಿಕ್ಷಣ ಸಂಸ್ಠೆ
- ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಠೆ
- ಹೆಚ್.ಎಮ್.ಎಸ್ ಶಿಕ್ಷಣ ಸಂಸ್ಠೆ
- ಸಿ.ಐ.ಟಿ (ಚನ್ನಬಸವೇಶ್ವರ) ಶಿಕ್ಷಣ ಸಂಸ್ಠೆ
- ಅಕ್ಷಯ ಶಿಕ್ಷಣ ಸಂಸ್ಠೆ
- ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಠೆ
- ಸರ್ವೋದಯ ಶಿಕ್ಷಣ ಸಂಸ್ಠೆ
- ಸೇಂಟ್ ಜೋಸೇಫ್ ಶಿಕ್ಷಣ ಸಂಸ್ಠೆ
- ಶ್ರೀ ಸಪ್ತಗಿರಿ ಶಿಕ್ಷಣ ಸಂಸ್ಠೆ
- ಶ್ರೀ ಮಾರುತಿ ಶಿಕ್ಷಣ ಸಂಸ್ಠೆ
- ವಿದ್ಯಾನಿಕೇತನ ಶಿಕ್ಷಣ ಸಂಸ್ಠೆ
- ವಿದ್ಯೋದಯ ಫೌಂಡೇಶನ್
- ಕೌಟಿಲ್ಯ ಅಕಾಡೆಮಿ ಆಫ್ ಮ್ಯಾನೇಜ್ ಮೆಂಟ್
- ಶ್ರೀ ವಿದ್ಯಾವಾಹಿನಿ ಶಿಕ್ಷಣ ಸಂಸ್ಠೆ
- ಎಸ್.ವಿ.ಎಸ್ ಪಿಯು ಕಾಲೇಜು
ಶ್ರೀ ಉರಿಗದ್ದಿಗೇಶ್ವರ ಗ್ರಾಮಾಂತರ ಪ್ರೌಡಶಾಲೆ, ಬೆಟ್ಟಹಳ್ಳಿ ಮಠ. ಶ್ರೀ ಉರಿಗದ್ದೀಗೇಶ್ವರ ಬೆರಳಚ್ಚು ತರಬೇತಿ ಕೇಂದ್ರ, ಬೆಟ್ಟಹಳ್ಳಿ ಮಠ, ಶ್ರೀ ಉರಿಗದ್ದಿಗೇಶ್ವರ ಅಂಗ್ಲ ಮಾಧ್ಯಮ ಶಾಲೆ, ಸಂತೇಪೇಟೆ, ಬೆಟ್ಟಹಳ್ಳಿಮಠ, ಶ್ರೀ ಉರಿಗದ್ದಿಗೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು
ತುಮಕೂರು ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳು/ಪ್ರಮುಖರು/ಸ್ಠಳಗಳು[ಬದಲಾಯಿಸಿ]
- ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರರು
- ಶ್ರೀ ಸಿದ್ದಗಂಗಾ ಕ್ಷೇತ್ರದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮಿಗಳು
- ಟಿ ವಿ ಎನ್ ಮೂರ್ತಿ, ಭಾರತೀಯ ಜೇಸಿಸ್ ನ ೨೦೦೫ರ ರಾಷ್ಠ್ರೀಯ ಅಧ್ಯಕ್ಷರು ಹಾಗೂ ತುಮಕೂರು ಜಿಲ್ಲಾ ಗೌರವ ವನ್ಯಜೀವಿ ಪಾಲಕರು
- ಕರ್ನಾಟಕದಲ್ಲಿನ ನಾಟಕಗಳ ಹರಿಕಾರ, ಪ್ರಸಿದ್ಧ ಗುಬ್ಬಿ ಕಂಪನಿಯ ಸಂಸ್ಥಾಪಕ ಗುಬ್ಬಿ ವೀರಣ್ಣ
- ಬ೦ಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ(ಹುಟ್ಟಿದ್ದು ಸಿರಾ ತಾಲ್ಲೂಕಿನ ಬರಗೂರಿನಲ್ಲಿ)
- ಚಲನಚಿತ್ರ ನಟ, ಜಗ್ಗೇಶ್ (ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದವರು)
- ಕವಿ, ಸಾಹಿತಿ, ಶಿಕ್ಷಣತಜ್ಞ ಕವಿತಾಕೃಷ್ಣ
- ಪತ್ತೇದಾರಿ ಕಾದಂಬರಿಕಾರ ಕ್ಯಾತ್ಸಂದ್ರ ಚಂದ್ರಶೇಖರ್
- ಹಾಸ್ಯ ಲೇಖಕ ಗೌಡನಕಟ್ಟೆ ತಿಮ್ಮಯ್ಯ
- ಚಲನಚಿತ್ರ ಸಾಹಿತಿ ಕುಣಿಗಲ್ ನಾಗಭೂಷಣ್
- ಚಲನಚಿತ್ರ ಸಾಹಿತಿ ಚಿ. ಉದಯಶಂಕರ್
- ಸಹ ನಟ ಕುಣಿಗಲ್ ರಾಮನಾಥ್
- ಶಿಕ್ಷಣ ತಜ್ನರು{ ಮಾರುತಿ.ಎನ್,ಎನ್} ದೂ ೭೭೬೦೯೮೦೮೬೭
ಶ್ರೀ ಉರಿಗದ್ದೇಶ್ವರ ಮಠ, ಬೆಟ್ಟಹಳ್ಳಿಮಠ, ಕುಣಿಗಲ್ ತಾಲ್ಲೂಕು,
- Rangaayana Raghu Chalana Chitra Nataru
Pavagada Kottur
ತುಮಕೂರು ಜಿಲ್ಲೆಯ ಪ್ರಸಿದ್ಧ ಸ್ಥಳಗಳು[ಬದಲಾಯಿಸಿ]
- ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಾಲಯ
- ಸಿದ್ದಗಂಗ ಮಠ
- ದೇವರಾಯನದುರ್ಗ - ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವಸ್ಥಾನ
- ನಾಮದ ಚಿಲುಮೆ
- ವಿದ್ಯಾ ಶಂಕರ ದೇವಸ್ಥಾನ
- ಗೂಳೂರು ಗಣಪತಿ ದೇವಸ್ಥಾನ
- ಕೈದಾಳ ಚನ್ನಕೇಶವ ದೇವಸ್ಥಾನ
- ಮಂದರ ಗಿರಿ ಜೈನ ದೇವಸ್ಥಾನ
- ನಿಜಗಲ್ಲು ಬೆಟ್ಟ ಮತ್ತು ಕೋಟೆ
- ಗೊರವನಹಳ್ಳಿ ಲಕ್ಷ್ಮಿದೇವಸ್ಥಾನ
- ಮಧುಗಿರಿ ಬೆಟ್ಟ ಮತ್ತು ಕೋಟೆ
- ಚನ್ನರಾಯನ ದುರ್ಗ
- ಸಿದ್ದರ ಬೆಟ್ಟ
- ಕ್ಯಾಮೇನಹಳ್ಳಿ ಜಾತ್ರೆ
- ಬೋರನ ಕಣಿವೆ
- ಮೈದಾಡಿ
- ಮಾರ್ಕೋನಹಳ್ಳಿ ಆಣೆಕಟ್ಟು
- ಕುಣಿಗಲ್ - ಸೋಮೇಶ್ವರ ದೇವಸ್ಥಾನ
- ಹೆಬ್ಬೂರು
- [ಹ೦ದನಕೆರೆ]]:೧೨ಸೋಪಾನದ ಬಾವಿ,ರೇವಣ್ಣಸಿದ್ಡೇಶ್ವರ ಮಠ,ಶ್ರೀಗ೦ಗಾದರೇಶ್ವರ ದೇವಸ್ಥಾನ
- ಬೇವಿನಹಳ್ಳಿ ಪುರಾಣ ಪ್ರಸಿದ್ದ ಜುಂಜಪ್ಪ ದೇವರ ದೇವಸ್ಥಾನ ಹಾಗೂ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಇಲ್ಲಿ ದೀಪಾವಳಿಯ ನಂತರದ ಸೋಮವಾರ ಬ್ರುಹತ್ ಜಾತ್ರೆ ನಡೆಯುತ್ತದೆ.
- ರೈತರಪಾಳ್ಯ ವೆ೦ಬ ನೊಡ ಬೆಕಾದ ಒ೦ದು ಮನರ೦ಜನೆಯ ಪುಟ್ಟ ಸು೦ದರ ಕುಗ್ರಾಮ.
ಹುತ್ರಿದುರ್ಗ ಬೆಟ್ಟ: ಇಲ್ಲಿ ನಾಡಪ್ರಭುಕೇಂಪೇಗೌಡರು ಕಟ್ಟಿಸಿರುವ ಬೃಹತ್ ಕೋಟೆ ಮತ್ತು ಶ್ರೀ ಗಂಗಾಧರೇಶ್ವರ ದೇವಸ್ಥಾನ. ಪಾತಾಳ ಗಂಗೆ, ಸಂಕೋಲೆ ಬಸವಣ್ಣನ ದೇವರು, ಪ್ರಸಿದ್ಧ ಕಾಡಪ್ಪನವರ ಮಠ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಈ ಬೃಹತ್ ಬೆಟ್ಟದಲ್ಲಿ ಕಾಣಬಹುದು. ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದ್ದು, ಇದು ಬೆಂಗಳೂರಿನಿಂದ ಸುಮಾರು ೮೦ ಕಿ.ಮಿ. ದೂರವಿದ್ದು, ಈ ಬೆಟ್ಟಕ್ಕೆ ಬರಲು ಬೆಂಗಳೂರಿನಿಂದ ಹಲವು ಖಾಸಗಿ ಮತ್ತು ಸರ್ಕಾರಿ ಬಸ್ ಗಳಿವೆ. ಬೆಂಗಳೂರಿನಿಂದ ಮಾಗಡಿ ಮುಖಾಂತರ ಬಂದು ಕಲ್ಯ, ಹೊಸಪಾಳ್ಯ ಕ್ಕೆ ಸೇರುವ ಮುನ್ನ ಎಡಕ್ಕೆ ತಿರುವುಪಡೆದರೆ, ಕತ್ತರಿಘಟ್ಟ, ಹಾಲುವಾಗಿಲು ನಂತರ ಸಂತೇಪೇಟೆಯಲ್ಲಿ ಇಳಿದು ನಂತರ ಬೆಟ್ಟಕ್ಕೆ ಹೋಗಬಹುದು. ಮೇಲಿನಂತೆಯೆ ಮಾಗಡಿಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಬಂದು ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬಲ್ಲಕ್ಕೆ ತಿರುವು ಪಡೆದು ಯಲಗಲವಾಡಿ ಸೇರುವ ಮುನ್ನ ಬಲ ತಿರುವು ಪಡೆದು ಹೊಢಾಘಟ್ಟ ಮಾರ್ಗವಾಗಿ ಬಂದು ನಂತರ ಚಿಕ್ಕ ಬೆಟ್ಟದರಸ್ತೆಯಲ್ಲಿ ಸಾಗಿದ ನಂತರ ಆದಿ ಹನುಮಂತರಾಯ ಸ್ವಾಮಿ ದೇವಸ್ಥಾನದ ನಂತರ ಬಲ ತಿರುವು ಪಡೆದರೆ ಹುತ್ರಿದುರ್ಗ ಬೆಟ್ಟಕ್ಕೆ ಹೋಗಬಹುದು.
- ಮತ್ತೀಕೆರೆ ಗುಬ್ಬಿ , ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿ ಬಾಗದಲ್ಲಿರುವ ಒಂದು ಸುಂದರ ಗ್ರಾಮ
ಸಲ್ಲಾಪುರದಮ್ಮ ಮತ್ತು ಕೊಲ್ಲಾಪುರದಮ್ಮ ಎಂಬ ದೇವಸ್ಥಾನವು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಗಿಡದ ಕೆಂಚನಹಳ್ಳಿಯಲ್ಲಿ ನೆಲೆಸಿದ್ದು ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ. ಅಲ್ಲದೇ ಹೆಸರಾಂತ ಅಂಜನೇಯ ಸ್ವಾಮಿಯು ಇದೇ ತಾಲ್ಲೂಕಿನ ಅಂದರೆ ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿಯ ಕಲ್ಲುದೇವನಹಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಯೂ ಸಹ ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.
ಇದನ್ನೂ ನೋಡಿ[ಬದಲಾಯಿಸಿ]
ಕುಣಿಗಲ್ ದೊಡ್ಡಕೆರೆ ಮತ್ತು ಕುದುರೆ ಪಾರ್ಮಗಳನ್ನು ನೀವು ನೋಡಬಹುದು ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯಲ್ಲಿರುವ ಹುತ್ರಿದುರ್ಗ ಬೆಟ್ಟದಲ್ಲಿ ಶ್ರೀ ನಾಡಪ್ರಭು ಕೇಂಪೇಗೌಡರು ನಿರ್ಮೀಸಿರುವ ದೇವಸ್ಥಾನ ಮತ್ತು ಸುಂದರವಾದ ಕೋಟೆಗಳನ್ನು ನೀವು ನೋಡಬಹುದು ಮತ್ತು ಬೆಟ್ಟದ ತುದಿಯಲ್ಲಿ ನಾಡ ಪ್ರಭು ಕಟ್ಟಿಸಿರುವ ಕಲ್ಯಾಣಿ ಮತ್ತು ದೇವಸ್ಥಾನಗಳನ್ನು ನೋಡಬಹುದು ಅಲ್ಲದೇ ಚಲನಚಿತ್ರಗಳ ಚಿತ್ರಿಕರಣಕ್ಕೆ ಯೋಗ್ಯವಾದ ಸ್ಥಳವಾಗಿದ್ದು , ಅಲ್ಲದೇ ಸುಂದರ ವಾದ ಬೆಟ್ಟಗುಡ್ಡಗಳ ವಾತಾವರಣ ನೋಡುಗರ ಕಣ್ಮನ ತಣಿಸುತ್ತವೆ. ಅಲ್ಲದೇ ಇಲ್ಲಿರುವ ಕೋಟೆ ಕೊತ್ತಲುಗಲುಗಳನ್ನು ನೋಡಬಹುದು ಮತ್ತು ಈ ಬೆಟ್ಟದಿಂದ ಶಿವಗಂಗೆ ಬೆಟ್ಟಕ್ಕಿರುವ ಸುರಂಗ ಮಾರ್ಗವನ್ನು ಸಹ ನಾವು ತಿಳಿಯಬಹುದಾಗಿದೆ. ಇತ್ತೀಚಿಗಷ್ಟೆ ಕ್ಷೇತ್ರ ಮರುವಿಂಗಡಣೆಯಿಂದ ಕುಣಿಗಲ್ ತಾಲ್ಲೂಕನ್ನು ತುಮಕೂರು ಲೋಕಸಬಾ ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾಕ್ಷೇತ್ರಕ್ಕೆ ಸೇರಿಸಲ್ಪಟ್ಟಿದೆ.