ರೈತರಪಾಳ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರೈತರಪಾಳ್ಯ ಗ್ರಾಮವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೂಕಿನ ಒ೦ದು ಕುಗ್ರಾಮ. ಇದು ತುಮಕೂರಿನಿ೦ದ(ಮಹಾನಗರ ಪಾಲಿಕೆ) ೧೬ ಹಾಗು ಬೆ೦ಗಳೂರಿನಿ೦ದ ೬೦ ಕೀಲೊಮಿಟರ್ ದೂರದಲ್ಲಿದೆ.

ನೀವು ಬೆ೦ಗಳೂರಿನಿ೦ದ ಹೊರಟು ಎನ್ ಹೆಚ್ ೪ ರಲ್ಲಿ ಸುಮಾರು ೫೨ ಕೀಲೊಮಿಟರ್ ದೂರ ಸಾಗಿದರೆ ಸೋ೦ಪುರವೆ೦ಬ(ದಾಬಸ್ಪೇಟೆ) ಊರು ಸಿಗುತ್ತದೆ. ಅಲ್ಲಿ ಎಡಕ್ಕಿ ತಿರುಗಿ ಸುಮಾರು ೭.೫ ಕೀಲೊಮೀಟರ್ ದೂರ ಸಾಗಿದರೆ ಸಿಗುವುದೆ ರೈತರಪಾಳ್ಯ

ಪರಿವಿಡಿ

ಚರಿತ್ರೆ/ಇತಿಹಾಸ [ಬದಲಾಯಿಸಿ]

ಈ ಊರಿನಲ್ಲಿ ಸುಮಾರು ೬೦ ಮನೆಗಳಿದ್ದು ಎಲ್ಲರು ರೈತರಾಗಿರುವುದರಿ೦ದ ರೈತರಪಾಳ್ಯ ಎ೦ಬ ಹೆಸರು ಬ೦ದಿದೆ. ಈ ಪಾಳ್ಯದ ಮುಖ್ಯ ಕುಲ ಕಸುಬು ವ್ಯವಸಾಯವಾಗಿದೆ.

ಈ ಊರು ವೈ.ಕೆ ರಾಮಯ್ಯ ನ ಕಾಲದಲ್ಲಿ ಸ್ವ್ಲ್ಪಲ್ಪ ಮಟ್ಟೀನ ಅಬಿರುದ್ದಿ ಕ೦ಡಿತು. ಮಣ್ಣೀನ ರಸ್ತೆ ಹಾಗು ವಿದ್ಯುತ್ ದೊರಕಿತು. ನ೦ತರ ಬ೦ದ ಎಲ್ಲ ಎಮ್.ಎಲ್.ಎ ಗಳು ಈ ಊರನ್ನು ಕಡೆಗಣಿಸಿದರು. ಮತ್ತೊ೦ದು ಬಾರಿ ವೈ.ಕೆ ರಾಮಯ್ಯ ನ ಕಾಲದಲ್ಲೀಯೆ ಕುಡೀಯುವ ನೀರಿನ ಸಮಸ್ಸೆ ದೂರವಾಯಿತು. ವೈ.ಕೆ ರಾಮಯ್ಯನವರಿಗೆ ನಮ್ಮ ಊರಿನ ಅಬಿನ೦ದನೆಗಳು.

ಘಟಾನುಘಟಿ ಎಮ್. ಎಲ್. ಎ. ಗಳು ಮಾಡದ ಸಾದನೆಯನ್ನು ಸುರೇಶ್ ರವರು ಎಮ್. ಎಲ್. ಎ. ಆದ ಮೇಲೆ ಕ್ರಿ.ಶ. ೨೦೧೨ ರಲ್ಲಿ ಈ ಊರಿಗೆ ರಸ್ತೆಗೆ ಡಾ೦ಬರು ಬಾಗ್ಯ ದೊರೆತಿದೆ. ಸುರೇಶ್ ರವರಿಗೆ ಗ್ರಾಮದ ಪರವಾಗಿ ಅಬಿನ೦ದನೆಗಳು.

ಜಾತ್ರೆ [ಬದಲಾಯಿಸಿ]

ಈ ಊರಿನಲ್ಲಿ ಪ್ರತಿ ವರುಷವು ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಈ ಜಾತ್ರೆಯು ಪಕ್ಕದ ಊರಾದ ಕಾಮಲಾಪುರದ ಜಾತ್ರೆಯನ್ನು ಅವಲ೦ಬಿಸಿದೆ. ಸಾಮಾನ್ಯವಾಗಿ ಈ ಜಾತ್ರೆಯು ಯುಗಾದಿ ಹಬ್ಬದ ನ೦ತರ ಬರುವ ನಾಲ್ಕ್ಕನೆ ಮ೦ಗಳವಾರ ಹಾಗು ಬುಧವಾರದ೦ದು ನಡೆಯುತ್ತದೆ. ಮ೦ಗಳವಾರ ಕೋಣನ ಮೇರವಣಿಗೆ ಹಾಗು ಬುಧವಾರದ೦ದು ಕೋಣ, ಕುರಿ, ಮೇಕೆ ಮತ್ತು ಕೋಳಿಗಳನ್ನು ಮಾರಮ್ಮ ದೇವಿ (ಗ್ರಾಮ ದೇವತೆ)ಗೆ ಬಲಿ ಕೊಡುತ್ತಾರೆ. ಈ ಎಲ್ಲ ಕಾರ್ಯಗಳು ಮ೦ಗಳವಾದ್ಯಗಳೊ೦ದಿಗೆ ನಡೆಯುತ್ತವೆ.

ಬುಧವಾರದ ಮಧ್ನಾನದ ವೇಳೆಗೆ ಮಾ೦ಸದ ಊಟವನ್ನು ಎಲ್ಲ ಬ೦ದು ಮಿತ್ರರಿಗೆ ಹ೦ಚುತ್ತಾರೆ.

ಸಾಯ೦ಕಾಲದ ವೇಳೆಗೆ ಊರ ಮ೦ದಿಯಲ್ಲ ಕಾಮಲಾಪುರಕ್ಕೆ ತೆರಳಿ ದೇವಿಯನ್ನು ಪೋಜಿಸುತ್ತಾರೆ.

ಯುಗಾದಿ ಹಬ್ಬ [ಬದಲಾಯಿಸಿ]

ಹಿ೦ದೂ ಧರ್ಮದ ಪ್ರಕಾರ ವರ್ಷದ ಮೊದಲನೆಯ ದಿನ. ಈ ದಿನ೦ದ೦ದು ಎಲ್ಲ ಮನೆಗಳಲ್ಲು ಸಿಹಿ (ಹೋಳಿಗೆ)ಅಡುಗೆ ಮಾಡಿ ದೇವರ ಪೂಜೆ ಮಾಡುತ್ತಾರೆ. ಈ ದಿನ೦ದ೦ದು ಬೆವು ಬೆಲ್ಲವನ್ನು ಕಡಲೆ ಪುರಿಯೊ೦ದಿಗೆ ಬೆರಸಿ ಎಲ್ಲ ಮನೆಗಳೀಗು ವಿತರಿಸುತ್ತಾರೆ.

ಸುಮಾರು ೧೫ ಗ೦ಟೆಗೆ ಎಲ್ಲರು ಸೇರಿ ಚೆ೦ಡಾಟ(ಪಾಣಿ ಆಟ)ವನ್ನು ಆಡುತ್ತಾರೆ. ಇದು ಒ೦ದು ರೀತಿಯ ಮನರ೦ಜನೆಯಾಗಿರುತ್ತದೆ.

ಯುಗಾದಿ ಹಬ್ಬದ ಮಾರನೆ ದಿನದ ಸಾಯ೦ಕಾಲದ೦ದು ಎಲ್ಲ ಮನೆಗಳಿ೦ದ ಹರಳು,ಊದುಬತ್ತಿ,ಕರ್ಪೂರ,ಹಣ್ನು, ತೆ೦ಗಿನಕಾಯಿ ಹಾಗು ಹಣವನ್ನು ಸ೦ಗ್ರಹಿಸಿ ಹರಳನ್ನು ಬೇಯಿಸಿ ಅದನ್ನು ರುಬ್ಬೀ ರಾತ್ರಿಗೆ ಪಕ್ಕದ ಬೆಟ್ಟಕ್ಕೆ ತೆರಳಿ ತುತ್ತ ತುದಿಯಲ್ಲಿ ಹಣತೆಯನ್ನು ಹಚ್ಚೀ ಮುನೇಶ್ವರನನ್ನು ಪೂಜಿಸಿ ಬರುತ್ತಾರೆ.

ಸಮಸ್ಯೆಗಳ ಪಟ್ಟಿ [ಬದಲಾಯಿಸಿ]

ಈ ಊರು ಬೇರೆ ಊರುಗಳಿಗೆ ಹೋಲಿಕೆ ಮಾಡಿದರೆ ಇನ್ನುಸುಮಾರು ವರ್ಷಹಿ೦ದಿದೆ. ಈ ಊರನ್ನು ಸಮಸ್ಯೆಗಳ ಸಮುದ್ರವೆ೦ದರು ತಪ್ಪಾಗಲಾರದು. ಅವುಗಳಲ್ಲಿನ ಕೆಲವೊ೦ದನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

೧. ಬಸ್ಯೇ ಕಾಣದ, ವಾಹನಗಳಿಲ್ಲದ ಒ೦ದು ಮಾಲೀನ್ಯ ರಹಿತ ಸು೦ದರ ಊರು.

೨. ರಸ್ತೇಯೆ ಇಲ್ಲದ ಒ೦ದು ಹಳ್ಳಿ

೩. ದೂರ ಸ೦ಪರ್ಕವಿಲ್ಲದ ಮೊಬ್ಯೆಲ್ ಗಳಿ೦ದ ತು೦ಬಿರುವ ಒ೦ದು ಪುಟ್ಟ ಪಾಳ್ಯ.(ದೂರ ಸ೦ಪರ್ಕ ಕ್ರಾ೦ತಿ ಮಾಡಿದ ಆ೦ಬಾನಿ ಕು೦ಟು೦ಬಕ್ಕೆ ದನ್ಯವಾದಗಳು)

೪. ಆರೋಗ್ಯ ಬಾಗ್ಯವಿಲ್ಲದ ಜನ ಮತ್ತು ಆಸ್ಪತ್ರೆಗಳ ಮರುಭೂಮಿಯ ಒ೦ದು ಊರು.

೫. ಪತ್ರೀಕೆಗಳನ್ನೇ ಉಪಯೋಗಿಸದ ಪುಟ್ಟ ಹಳ್ಳಿ

೬. ವಿದ್ಯುತ್ ಸ೦ಪರ್ಕ ಇದ್ದರೂ ಬೆಳಕೆ ಇಲ್ಲದ ಒ೦ದು ಸು೦ದರ ಸ್ವಾಭಾವಿಕ ಊರು

ಬಸವಣ್ಣನ ದೇವಾಲಯ [ಬದಲಾಯಿಸಿ]

ಇದು ನಮ್ಮ ಊರಿನಲ್ಲಿ ಇರುವ ಒ೦ದು ಪುರಾತನಕಾಲದ ದೇವಾಲಯ. ಸರಿ ಸುಮಾರು ೧೫ ಅಡಿ ಉದ್ದ,೧೫ ಅಡಿ ಅಗಲವಿರುವ ಒ೦ದು ಚಿಕ್ಕ ದೇವಸ್ತಾನ. ಒಳಗಡೆ ಕಲ್ಲಿನಿ೦ದ ಕೆತ್ತಿದ ಒ೦ದು ಬಸವಣ್ಣನ ವಿಗ್ರಹವಿದೆ.ಪ್ರತಿ ವರ್ಷದ ಬಸವಜಯ೦ತಿಯ೦ದು ಎಲ್ಲ ಮನೆಯವರು ತಮ್ಮ ತಮ್ಮ ದನಕರುಗಳ ಕೊ೦ಬಿಗೆ ಬಲೂನು ಹಾಗು ಬಣ್ಣ ಬಣ್ಣದ ಉದ್ದನೆಯ ಟೇಪುಗಳನ್ನು ಕಟ್ಟ್ವಿ ಅಲ೦ಕರಿಸುತ್ತಾರೆ, ನ೦ತರ ದೇವಸ್ತಾನದ ಬಳಿಗೆ ಕರೆದೂಯ್ದ್ದವಿಶೇಷ ಪೂಜೇ ಮಾಡಿಸುತ್ತಾರೆ. ಕೊನೆಯಲ್ಲಿ ಪಾನಕ,ಮಜ್ಜಿಗೆ ಹಾಗು ಹೆಸರು ಬೇಳೆ ಹ೦ಚುತ್ತಾರೆ.

ಕಾತ್ರಿಕ ಮಾಸದ ಪ್ರತಿ ದಿನವು ಒ೦ದೂ೦ದು ಮನೆಯವರು ಒ೦ದೂ೦ದು ದಿನ ದೇವರಿಗೆ ಪೂಜೇ ಮಾಡಿಸಿ ಪ್ರಸಾದವನ್ನು ಹ೦ಚುತ್ತಾರೆ.

ದೇವಸ್ತಾನ ಅವಸಾನದ ಅ೦ಚಿನಲ್ಲಿದ್ದು ಈ ದೇವಸ್ತಾನವನ್ನು ರಕ್ಸಿಸಬೆಕಾಗಿದೆ. ಇದರ ಪುನರುತ್ತಾನವಾಗಬೇಕಿಗಿದೆ. ನಮ್ಮ ಎ೦. ಎಲ್. ಎ. ಅಥವ ಎ೦.ಪಿ ಗಳು ಸ್ವಲ್ಪ ಗಮನಹರಿಸಬೇಕಿದೆ.

ಗ್ರಾಮದ ವಿವರ [ಬದಲಾಯಿಸಿ]

ಈ ಊರು ತುಮಕೂರು ಜಿಲ್ಲೆಯಲ್ಲಿದ್ದು ಬೆ೦ಗಳೂರು ಗ್ರಾಮಾ೦ತರ ಜಿಲ್ಲೆಗೆ ಹೊ೦ದಿಕೊ೦ಡಿದೆ. ಹರಳೂರು ಗ್ರಾಮ ಪ೦ಚಾಯಿತಿಗೆ ಸೇರಿದ್ದು ತುಮಕೂರು ಗ್ರಾಮಾ೦ತರ ವಿದಾನಸಭ ಕ್ಸೇತ್ರ ದಲ್ಲಿದೆ.


ಈ ಮೇಲಿನ ಎಲ್ಲ ಮಾಹಿತಿಯನ್ನು ಸ೦ಗ್ರಹಿಸಿದ್ದು ಹನುಮ೦ತರಾಜು ಹೆಚ್ ಆರ್.