ದೇವರಾಯನ ದುರ್ಗ
| ದೇವರಾಯನದುರ್ಗ | |
| ದೇವರಾಯನದುರ್ಗ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ತುಮಕೂರು |
| ನಿರ್ದೇಶಾಂಕಗಳು | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೭೨ ೧೪೬ - +೦೮೧೬ - ಕೆಎ-೦೬ |
ದೇವರಾಯನದುರ್ಗ ತುಮಕೂರಿನಿಂದ ೧೬ ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ ೧೦ ಕಿ.ಮೀ. ದಾಟಿದರೆ , ದೇವರಾಯನದುರ್ಗ ಕಾಡು ಗೋಚರಿಸುತ್ತದೆ.ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ.ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ ೮ನೆ ಶತಮಾನದ ಶಂಕರಾರ್ಚಯ ಕಟ್ಟಿರು ಸುಂದರವಾದ ದೇವಲಾಯವಿದೆ. ಹಾಗೆ ಸಮಿಪದಲ್ಲಿ "ನಾಯಕನ ಕೆರೆ" ಎಂಬ ಸುಂದರ ಮತ್ತು ಮನೊಹರವಾದ ಕೆರೆ ಇದೆ.
ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ,ಹಳೆಯ ಕೊಟೆ,ಸೂರ್ಯಾಸ್ತ ನೊಡಲು ಸುಂದರಾವಾದ ಜಾಗ ಕೂಡ ಇದೆ.ದೇವರಾಯನದುರ್ಗದ ಸಮೀಪವಿರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ದೇವರಾಯನ ದುರ್ಗದ ಕಾಡಿನಲ್ಲಿ ಚಿರತೆ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಆದರೆ ಇದು ಅಭಯಾರಣ್ಯವಲ್ಲದಿದ್ದರಿಂದ ಕಾಣಲು ಸಿಗುವುದು ಅಪರೂಪ. ಇತ್ತೀಚಿನ ವರದಿ ಪ್ರಕಾರ ದೇವರಾಯನದುರ್ಗದಲ್ಲಿ ಹುಲಿ ಕೂಡ ಪತ್ತೆಯಾಗಿದೆ.
ದುರ್ಗದ ಮೇಲೆ ಸರ್ಕಾರದ ಪ್ರವಾಸಿ ಬಂಗಲೆಗಳಿವೆ. ಜಿಲ್ಲೆಯ ಪೋಲಿಸ್ ನಿಸ್ತಂತು ಜಾಲದ ನಿಯಂತ್ರಣ ಕೇಂದ್ರವೂ ಸಹ ಇದೆ. ಬೆಟ್ಟದ ತುದಿಯಿಂದ ನಿಂತು ನೋಡಿದರೆ ಸುಮಾರು ೨೫ ಕಿ.ಮೀ. ದೂರದಲ್ಲಿರುವ ಶಿವಗಂಗೆ ಬೆಟ್ಟ ಕಾಣುತ್ತದೆ. ಸುತ್ತಲೂ ಹತ್ತಾರು ಕೆರೆಗಳು ನೀರಿನಿಂದ ತುಂಬಿರುವುದೂ ಸಹ ಗೋಚರಿಸುತ್ತದೆ.
ಇಲ್ಲಿನ ನರಸಿಂಹ ದೇವರ ಜಾತ್ರೆಯು ಬಹಳ ಪ್ರಸಿದ್ದ. ಪ್ರತಿ ವರ್ಷವೂ ಇಲ್ಲಿ ನೆಡೆಯುವ ಜಾತ್ರೆಗೆ ಸಾವಿರಾರು ಜನರು ಸೇರುತ್ತಾರೆ. ಹತ್ತಿರದಲ್ಲಿರುವ ದುರ್ಗದ ಹಳ್ಳಿಯಲ್ಲಿರುವ ಶ್ರೀ ವಿದ್ಯಾಶಂಕರ ಸ್ವಾಮಿಯ ದೇವಾಲಯವೂ ಬಹಳ ಸುಂದರವಾಗಿದೆ. ಈ ದೇವಾಲಯವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ, ಇದು ದೇವರಾಯನ ದುರ್ಗಕ್ಕೆ ಹೋಗುವ ದಾರಿಯಲ್ಲಿರುವ ನಾಮದ ಚಿಲುಮೆಗೆ ಕೇವಲ ೩ ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರಕ್ಕೆ ತುಮಕೂರಿನ ಬಳಿ ಇರುವ ಟಿ.ವಿ.ಎಸ್. ಕಂಪನಿಯವರ ಪ್ರೊತ್ಸಾಹ ನಿರಂತರವಾಗಿ ದೊರಕಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |