ಶಿರಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

[[ಚಿತ್ರ:]]ಶಿರಾ ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ರತ್ನಗಿರಿಯ ರಂಗಪ್ಪ ನಾಯಕನಾಳಿದ ಸ್ಥಳ ೧೬೮೬ರಲ್ಲಿ ಮುಘಲರ ವಶವಾಗಿ ಫೌಜುದಾರಿ ಕೇಂದ್ರವಾಯಿತು. ನಂತರದ ದಿನಗಳಲ್ಲಿ ಹೈದರ್ ಆಲಿಯಿಂದ ಆಳಲ್ಪಟ್ಟಿತು. ಇಲ್ಲಿನ ಬಲಾಢ್ಯವಾದ ಕಲ್ಲಿನ ಕೋಟೆ ಸುತ್ತಲೂ ಕಂದಕವನ್ನು ಹೊಂದಿದೆ. ಕೆರೆಯ ಪಕ್ಕದಲ್ಲೇ ಇರುವುದರಿಂದ ರಾಜರ ಆಳ್ವಿಕೆಯಲ್ಲಿ ಮಳೆಗಾಲದಲ್ಲಿ ಕಂದಕಗಳಿಗೆ ನೀರನ್ನು ಹರಿದು ಬಿಟ್ಟು, ಅದರಲ್ಲಿ ಮೊಸಳೆಯಂತಹ ಜಲಚರಗಳನ್ನು ಸಾಕಿ ಶತ್ರುಗಳಿಂದ ರಕ್ಷಿಸಿಕೊಳ್ಳುತ್ತಿದ್ದರು. ಸಿರಾ ಕೋಟೆಯಲ್ಲಿ ಮುಘಲ್ ಅಧಿಕಾರಿ ದಿಲಾವರ್ ಖಾನ್ ಬೆಳೆಸಿದ ಸುಂದರ ಉದ್ಯಾನವನವೇ ಹೈದರಾಲಿ ಲಾಲ್ ಬಾಗ್ ನಿರ್ಮಿಸಲು ಸ್ಪೂರ್ತಿ ನೀಡಿತ್ತು.

ಇದು ಜಿಲ್ಲಾ ಕೇಂದ್ರದಿಂದ ೫೦ ಕಿ.ಮೀ ದೂರವಿದೆ.

ಬರಗೂರು ಸಿರಾ ತಾಲೂಕಿನ ಪ್ರಮುಖ ಸ್ಥಳ. ಬರಗೂರು ರಾಮಚಂದ್ರಪ್ಪನವರು ಜನಿಸಿದ ಸ್ಥಳ.

ನಾದುರು ಸಿರಾ ಸಿರಾ ತಾಲೂಕಿನ ಪ್ರಮುಖ ಸ್ಥಳ ೭೦೦ ವರುಷ ದೆವಸ್ತನವು ಇದೆ

ಸಾಕ್ಷಿಹಳ್ಳಿ ಸಿರಾ ತಾಲ್ಲೂಕಿನ ಒಂದು ಹಳ್ಳಿ ಇಲ್ಲಿ ಮಣ್ಣಮ್ಮ ದೇವಿಯ ದೇವಾಲಯವಿದೆ ಈ ದೇವಾಲಯವು ಸುಮಾರು ೯೦ ವರ್ಷಗಳ ಹಳೆಯದಾಗಿದ್ದು ೨೪೦ ವರ್ಷಗಳ ಶಾಸನವನ್ನು ಹೇಳುತ್ತದೆ ಇದು ಜಿಲ್ಲಾಕೇಂದ್ರದಿಂದ ೭೦ ಕಿ, ಮೀ. ದೂರವಿದೆ

ಮಾಗೋಡು ಸಿರಾ ತಾಲ್ಲೂಕಿನ ಒಂದು ಸಾದಾರಣ ಹಳ್ಳಿ ಇಲ್ಲಿ ರಂಗನಾಥಸ್ವಾಮಿ (ನಾರಾಯಣ ಸ್ವಾಮಿ) ದೇವಾಲಯವಿದೆ ಈ ದೇವಸ್ಥಾನವು ೧೨೦ ವರ್ಷಗಳ ಹಳೆಯದ್ದು ಇಲ್ಲಿ ರಂಗನಾಥ ಸ್ವಾಮಿಯ ಚರಿತ್ರೆ ತುಂಬಾ ಕುತೂಹಲಕಾರಿಯಾಗಿದೆ ಕುತೂಹಲ ವೇನೆಂದರೆ ಇಲ್ಲಿಯ ಪವಾಡ ತುಂಬಾ ಪ್ರಸಿದ್ದಿಯಾಗಿದೆ ಈ ದೇವಸ್ಥಾನಕ್ಕೆ ರಾಜಧಾನಿ ಬೆಂಗಳೂರಿನಿಂದ ಆಗಮಿಸುತ್ತಾರೆ ರಂಗನಾಥಸ್ವಾಮಿ ಇದೇ ಗ್ರಾಮದಲ್ಲಿ ಉಕ್ಕಿನ ಧನ್ನುಸ್ಸಿನ ರೂಪದಲ್ಲಿ ಬಬ್ಬೂರು ರುರಂಗಪ್ಪನಿಗೆ ಸಿಕ್ಕಿದ್ದರು ಹಾಗೂ ಮುಂದಿನದಿನಗಳಲ್ಲಿ ಶ್ರೀಬಬ್ಬೂರುರಂಗನಾಥಸ್ವಾಮಿ ಅಥವಾ ಶ್ರೀಮಾಗೋಡು ಎಂದು ಪ್ರಸಿದ್ದಿಯಾಯಿತು.

ಬೇವಿನಹಳ್ಳಿ ಸಿರಾ ತಾಲ್ಲೂಕಿನ ಒಂದು ಹಳ್ಳಿ ಇಲ್ಲಿ ಸಾಂಸ್ಕ್ರತಿಕ ವೀರನೆಂದೇ ಖ್ಯಾತನಾದ ಜುಂಜಪ್ಪ ದೇವರು ನೆಲೆಸಿದ್ದಾನೆ. ಅಲ್ಲದೇ ಇಲ್ಲಿ ಕರ್ನಾಟಕದ ಹೆಸರಾಂತ ಜಾನಪದ ಕಲೆಯಾದ ಸೋಮನ ಕುಣಿತ ಮತ್ತು ಅರೆ ವಾದ್ಯ ಕಲಾವಿದರು ಹೆಚ್ಚಾಗಿ ಕಂಡುಬರುತ್ತಾರೆ.


' ಓಜುಗುಂಟ ಸಿರಾ ತಾಲೊಕಿನ ಒಂದು ಸಾದರಣ ಹಳಿ ಓಜುಗುಂಟ ಪದದ ಅರ್ಥ ಓಜು ಏಂದರ ಪಂಡಿತ ಗುಂಟ ಏಂದರೆ ಕೆರ,ಎಂದಾರ್ಥ

"http://kn.wikipedia.org/w/index.php?title=ಶಿರಾ&oldid=318007" ಇಂದ ಪಡೆಯಲ್ಪಟ್ಟಿದೆ