ಕುಣಿಗಲ್
| ಕುಣಿಗಲ್ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ತುಮಕೂರು |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 773 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (೨೦೦೧) - ಸಾಂದ್ರತೆ |
30,291 - /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 572130 - +91-8132 - KA-06 |
ಕುಣಿಗಲ್ ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿ ಇರುವ ದೊಡ್ಡ ಕೆರೆಯು ಪ್ರಖ್ಯಾತವಾಗಿದೆ.ಕುಣಿಗಲ್ ತಾಲ್ಲೂಕಿನ ಇತಿಹಾಸವನ್ನು ಗಮನಿಸಿದಾಗ ಶಿಲಾಯುಗದ ನೆಲೆಗಳನ್ನು ಸಹ ನಾವು ಕಾಣಬಹುದಾಗಿದೆ.ಹುಲಿಯೂರುದುರ್ಗದ ಹೇಮಗಿರಿತಪ್ಪಲು,ತಿಪ್ಪಸಂದ್ರಗಳಲ್ಲಿ ಶಿಲಾಯುಗದ ಅವಶೇಷಗಳು ಕಾಣಬರುತ್ತವೆ. ಕುಣಿಗಲ್ ನಾಡಿನ ಕೆಲ ಭಾಗ ಕದಂಬರ ಆಳ್ವಿಕೆಗೂ ಸೇರಿರಬಹುದಾದ ಸಾಧ್ಯತೆಯನ್ನು ಎಸ್.ಶ್ರೀಕಂಠಶಾಸ್ತ್ರಿಯವರು ದಾಖಲಿಸಿದ್ದಾರೆ.ನಮಗೆ ನೇರವಾಗಿ ಆಳಿದಬಗ್ಗೆ ನಿಕರ ದಾಖಲೆಗಳು ಕಂಡುಬರುವುದು ಗಂಗರ ಕಾಲದಿಂದ. ಗಂಗಾವಾಡಿ ೯೬೦೦೦ ಕ್ಕೆ ಒಳಪಡುವ ಪ್ರದೇಶದಲ್ಲಿ ಕುಣಿಗಲ್ ಸಹ ಇದೆ.ಗಂಗರ ಪ್ರಸಿದ್ಧನಾದ ದೊರೆ ಶ್ರೀಪುರುಷನು (ಕ್ರಿ.ಶ.೭೨೫-೭೮೮)ಕುಣಿಗಲ್ಲಿನ ಐತಿಹಾಸಿಕ ಪ್ರಸಿದ್ಧ ಕೆರೆ ದೊಡ್ಡಕೆರೆಯನ್ನು ಕ್ರಿ.ಶ.೮ನೇ ಶತಮಾನದ ಕೊನೆಯಭಾಗದಲ್ಲಿ ನಿರ್ಮಿಸಿದಬಗ್ಗೆ ನಂತರದ ಶಾಸನವೊಂದು ಉಲ್ಲೇಖಿಸುತ್ತದೆ.ಗಂಗರು ರಾಷ್ಟ್ರಕೂಟರಿಗೆ ಸೋತನಂತರ ಚಾಲುಕ್ಯ ಮಾನ್ದಾತ ಎಂಬ ಸಾಮಂತನು ಕುಣಿಗಲ್ಲನ್ನು ಆಳುತ್ತಿದ್ದನು. ಆಗ ದೊಡ್ಡಕೆರೆಯು ಒಡೆದು ಹೋದಾಗ ಕ್ರಿ.ಶ.೯೬೩ರ ಸುಮಾರಿನಲ್ಲಿ ದುರಸ್ಥಿಯನ್ನು ಮಾಡಿಸುತ್ತಾನೆ. ನಂತರ ಬಂದ ರಾಷ್ಟ್ರಕೂಟ ಕಂಭರಾಯ ಎಂಬುವವನು ಕುಣಿಗಲ್ಲಿನಲ್ಲಿ ಒಂದು ಕೋಟೆಯನ್ನು ಸುಮಾರು ಕ್ರಿ.ಶ.೯೮೯ರಲ್ಲಿ ನಿರ್ಮಿಸುತ್ತಾನೆ.ಗಂಗರ ಹಾಗೂ ರಾಷ್ಟ್ರಕೂಟರ ಪತನಾಂತರ ಕುಣಿಗಲ್ ಚೋಳರ ಆಳ್ವಿಕೆಗೆ ಒಳಪಡುತ್ತದೆ. 'ರಾಜೇಂದ್ರ ಚೋಳಪುರಂ' ಎಂದು ಕುಣಿಗಲ್ಲನ್ನು ಶಾಸನಗಳಲ್ಲಿ ಕರೆದಿದೆ. ನಂತರ ಕುಣಿಗಲ್ ಹೊಯ್ಸಳ ಆಳ್ವಿಕೆಗೆ ಒಳಪಡುತ್ತದೆ. ಇವರ ಕಾಲದ ಸೋಮೇಶ್ವರ ದೇವಾಲಯ ಕೆರೆಯ ಏರಿಯಮೇಲೆ ಇರುವುದನ್ನು ಕಾಣಬಹುದು. ಹೊಯ್ಸಳರ ನಂತರ ವಿಜಯನ್ಗರದ ಅರಸರ ಆಳ್ವಿಕೆಗೆ ಕುಣಿಗಲ್ ಒಳಪಟ್ಟ ಬಗ್ಗೆ ಶಾಸನಗಳಿಂದ ತಿಳಿಯ ಬಹುದು.ಬುಕ್ಕರಾಯನು ಕ್ರಿ.ಶ.೧೩೬೯ರ ಸುಮಾರಿನಲ್ಲಿ ಕುಣಿಗಲ್ ದೊಡ್ಡ ಕೆರೆಗೆ ಒಂದು ತೂಬನ್ನು ಮಾಡಿಸಿ ಶಾಸನವನ್ನು ಹಾಕಿಸಿದ್ದಾನೆ. ವಿಜಯನಗರದ ಸಾಮಂತನಾಗಿದ್ದ ತಮ್ಮೇಗೌಡನೆಂಬ ಸಾಮಂತನು ಕುಣಿಗಲನ್ನು ಆಳಿದ ಬಗ್ಗೆ ಜಾನಪದ ಸಾಹಿತ್ಯಗಳು ಮಾಹಿತಿ ನೀಡುತ್ತದೆ. ನಂತರ ಇಮ್ಮಡಿ ಕೆಂಪೇಗೌಡ ಮತ್ತು ಮುಮ್ಮಡಿ ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಬಗ್ಗೆ ಕಾಣಬಹುದು. ಹುಲಿಯೂರಿನಲ್ಲಿ ಕೆಂಪೇಗೌಡನು ಕ್ರಿ.ಶ.೧೫೮೦ರ ಸುಮಾರಿನಲ್ಲಿ ದುರ್ಗವನ್ನು ಕಟ್ಟುವ ಮೂಲಕ ಅದು ಹುಲಿಯೂರು ದುರ್ಗ ಎಂದಾಯಿತು. ಅದೇ ವೇಳೆಗೆ ಹುತ್ರಿದುರ್ಗದಲ್ಲಿ ಸಹ ಕೋಟೆಯೊಂದನ್ನು ನಿರ್ಮಿಸಿದರು.ಈಗಾಗಿ ಕೆಂಪೇಗೌಡನ ಆಳ್ವಿಕೆಗೆ ಈ ಪ್ರದೇಶ ಸೇರಿದ್ದ ಬಗ್ಗೆ ತಿಳಿಯುತ್ತದೆ. ಹಂದಲಗೆರೆ (ತಾವರೆಕೆರೆ ಪಂಚಾಯ್ತಿ)ಗ್ರಾಮದಲ್ಲಿನ ಅಪ್ರಕಟಿತ ಶಾಸನವೊಂದರಲ್ಲಿ (ಕಾಲ ಕ್ರಿ.ಶ.೧೬೬೩)ದತ್ತಿಯನ್ನು ಬಿಟ್ಟ ಬಗ್ಗೆ ತಿಳಿಯಬಹುದಾಗಿದೆ. ಶಾಸನ ಸಾಕಷ್ಟು ತೃಟಿತಗೊಂಡಿರುವುದರಿಂದ ಅದನ್ನು ಓದಲಾಗಿಲ್ಲ. ಕೆಂಪೇಗೌಡನ ನಾಟಕ ಶಾಲೆಯ ಶೃಂಗಾರಮ್ಮನು ಹುಲಿಯೂರುದುರ್ಗದ ಪಕ್ಕದಲ್ಲಿ ಶೃಂಗಾರ ಸಾಗರ ಎಂಬ ಕೆರೆಯನ್ನು, ಅಗ್ರಹಾರವನ್ನು ನಿರ್ಮಿಸಿದ ಬಗ್ಗೆ ಶಾಸನಗಳು ತಿಳಿಸುತ್ತವೆ. ೧೬ನೇಶತಮಾನದಲ್ಲಿ ಎಡಿಯೂರಿನಲ್ಲಿ ಸಿದ್ಧಲಿಂಗೇಶ್ವರ ಯತಿಯು ಪವಾಡ ಮೆರೆದು ಕಗ್ಗೆರೆಯಲ್ಲಿ ಶಿವೈಕ್ಯವಾದ ಬಗ್ಗೆ ಐತಿಹ್ಯವಿದೆ.ನಂತರ ಮೈಸೂರಿನ ಓಡೆಯರ್ ಹಾಗೂ ಹೈದರ್, ಟಿಪ್ಪುಸಹ ಆಳಿದರು ಇಲ್ಲಿ ಅಶ್ವ ವರ್ಧಕ ಶಾಲೆಯನ್ನು ಹೈದರ್ ಸ್ಥಾಪಿಸಿದನು.