ಅರಸೀಕೆರೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅರಸೀಕೆರೆ
ಅರಸೀಕೆರೆ ನಗರದ ಪಕ್ಷಿನೋಟ
ಅರಸೀಕೆರೆ ರೈಲ್ವೆ ಜಂಕ್ಷನ್
India-locator-map-blank.svg
Red pog.svg
ಅರಸೀಕೆರೆ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಹಾಸನ
ನಿರ್ದೇಶಾಂಕಗಳು 13.30° N 76.25° E
ವಿಸ್ತಾರ
 - ಎತ್ತರ
 km²
 - ೮೦೬ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೪೫,೧೬೬
 - ೫,೬೦೦/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೩ ೨೦೧
 - +೦೮೧೭೯
 - ಕೆಎ-೧೩

ಅರಸೀಕೆರೆ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ. ತೆಂಗಿನಕಾಯಿ ಬೆಳೆಗೆ ಹಾಗು ಮಾರಾಟಕ್ಕೆ ಇದೊಂದು ಪ್ರಮುಖ ಕೇಂದ್ರ. ಹೊಯ್ಸಳರ ಕಾಲದ ಅರಸಿ ಎಂಬ ರಾಣಿಯೋರ್ವಳು ಈ ಊರಿನಲ್ಲಿ ಕೆರೆಯೊಂದನ್ನು ನಿರ್ಮಿಸಿದ ಕಾರಣಕ್ಕೆ ಈ ಹೆಸರು ಬಂದಿದೆ. ಈ ತಾಲ್ಲೂಕಿನಲ್ಲಿರುವ ಪ್ರಮುಖ ಪ್ರಮುಖ ಸ್ಠಳಗಳೆಂದರೆ ಹೊಯ್ಸಳರ ಕಾಲದ ಶಿವಾಲಯ,ಯಾದಾಪುರದ ಶ್ರಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿ ಬೆಟ್ಟ ,ಮಲ್ಲೇಶ್ವರ ಬೆಟ್ಟ ,ಮಾಲೆಕಲ್ಲು ತಿರುಪತಿ,

ಶಿವಾಲಯ.
ಶಿವಾಲಯ.

ಶ್ರಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿ[ಬದಲಾಯಿಸಿ]

ಈ ಪುಣ್ಯ ಕ್ಷೇತ್ರವು ಅರಸೀಕೆರೆಯಿಂದ ಸುಮಾರು ೮ ಕಿಲೋಮಿಟರ್ ದೂರದಲ್ಲಿರುವ ಯಾದಾಪುರ ಎಂಬ ಗ್ರಾಮದಲ್ಲಿದೆ. ಇಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಸಾವಿರಾರು ಭಕ್ತಾಧಿಗಳು ರಾಜ್ಯದ ವಿವಿಧ ಸ್ಠಳಗಳಿಂದ ಆಗಿಮಿಸಿ ಭಕ್ತಿಯಿಂದ ಬೆಟ್ಟವನ್ನು ಹತ್ತಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಇಲ್ಲಿ ಪ್ರತಿದಿನ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಇರುತ್ತದೆ.

ಮಾಲೆಕಲ್ಲು ತಿರುಪತಿ [ಬದಲಾಯಿಸಿ]

ಈ ಕ್ಷೇತ್ರವು ಅರಸೀಕೆರೆಯಿಂದ ೨ ಕಿಲೋಮೀಟರ್ ದೂರದಲ್ಲಿದೆ. ಇದು ಚಿಕ್ಕ ತಿರುಪತಿ ಎಂದೆ ಪ್ರಸಿದ್ಧವಾಗಿದೆ. ಸಾವಿರಾರು ಮೆಟ್ಟಿಲುಗಳಿರುವ ದೊಡ್ಡ ಬೆಟ್ಟ ದ ಮೇಲೆ ವೆಂಕಟೇಶ್ವವ ಸ್ವಾಮಿ & ತಾಯಿ ಲಕ್ಷ್ಮೀ ದೇವಿಯವರ ದೇವಾಲಯವಿದ್ದು ೨೦೦ ವರ್ಷಗಳ ಇತಿಹಾಸ ಇದೆ ಹಾಗೂ ಕೆಳಗಡೆಯು ಸವಿಸ್ತಾರವಾದ ವೆಂಕಟೇಶ್ವರಸ್ವಾಮಿ ದೇವಸ್ಠಾನವಿದೆ. ಪ್ರತಿ ವರ್ಷ ಜಾತ್ರಾಮಹೋತ್ಸವ ವಿಜ್ರುಂಭಣೆಯಿಂದ ಜರುಗುತ್ತದೆ ಮತ್ತು ಇಲ್ಲಿ ಎಂದೂ ಬತ್ತದಂಥ ಹೊಂಡ ಇದೆ.

'ಶ್ರೀ ಮಹಾದೇಶ್ವರ ಸ್ವಾಮಿ ಮತ್ತು ಶ್ರೀ ರಾಮಲಿಂಗೇಶ್ವರ ಸ್ವಾಮಿಮತ್ತು ಶ್ರೀ ಲಕ್ಶ್ಮಿ ಭೈರವೇಶ್ವರ ಸ್ವಾಮಿ'[ಬದಲಾಯಿಸಿ]

ಈ ಮೂರು ದೆವಾಲಯಗಳು ಅರಸಿಕೆರೆಯಿಂದ ಸುಮಾರು ೧೫ ಕಿಲೋಮಿಟರ್ ದೂರವಿರುವ ನಾಗೇನಹಳ್ಳಿ ಗ್ರಾಮದಲ್ಲಿ ಇವೆ. ಇದು ಹಾರನಹಳ್ಳಿಗೆ ಸಮೀಪವಿದೆ ಇಲ್ಲಿ ಪ್ರತಿ ವರ್ಷ ಹೋಳಿ ಹುಣ್ಣಿಮೆಯಿಂದ ಎರಡು ದಿನಗಳು ವಿಜ್ರುಂಭಣೆಯಿಂದ ಜಾತ್ರಾಮಹೋತ್ಸವ ಜರುಗುತ್ತದೆ

  • ನಾಗೇನಹಳ್ಳಿ
  • ಬಾಣಾವರ ' - ಅರಸೀಕೆರೆಯಿಂದ ೧೪ ಕಿಲೋಮೀಟರ್ ದೂರದಲ್ಲಿ ಬಾಣಾವರ ಎಂಬ ಹೋಬಳಿ ಇದ್ದು ಅಲ್ಲಿ ೩೦೦ ವರ್ಷಗಳಷ್ಟು ಹಳೆಯ (ಚೋಳರು ನಿರ್ಮಿಸಿದ) ಸ್ವಾಮಿ ತಿಮ್ಮಪ್ಪನ ದೆವಸ್ಥಾನಗಳು ಇವೆ.


ಇಲ್ಲಿ ರೈಲ್ವೆ ಜಂಕ್ಷನ್ ಇದ್ದು, ಮೈಸೂರು,ಬೆಂಗಳೂರು,ಮಂಗಳೂರು,ಹಾಸನ,ಶಿವಮೊಗ್ಗ,ಹುಬ್ಬಳ್ಳಿ,,ಚಿಕ್ಕಮಗಳೂರಿಗೆ ಉತ್ತಮ ಸಾರಿಗೆ ಸೌಲಭ್ಯಗಳಿವೆ.


ಶ್ರೀ ಕರಿಯಮ್ಮ ದೇವಿ ದೇವಲಯ ಮಾವುತನಹಳ್ಳಿ ( ಜಾವಗಲ್ ಸಮೀಪ)ಇಲ್ಲಿ ಪ್ರತಿ ವಷ್ರ ಜಾತ್ರಾಮಹೋತ್ಸವ ನಡೆಯಲಿದೆ.

ಬಾಣಾವರ : ಬಾಣಾವರ ಪಟ್ಟಣವು ಹಾಸನ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಇದು ಅರಸೀಕೆರೆ ತಾಲ್ಲೂಕಿಗೆ ಸೇರಿದ ಗಡಿ ಪ್ರದೇಶವಾಗಿರುತ್ತದೆ. ಬಾಣಾವರದಲ್ಲಿ ಅನೇಕ ಇತಿಹಾಸ ಪ್ರಸಿದ್ಧ ದೇವಾಲಯಗಳಿದ್ದು, ಅದರಲ್ಲಿ ಬಾಣೇಶ್ವರ ದೇವಾಲಯ, ಚನ್ನಕೇಶವ ದೇವಾಲಯ, ರಾಮೇದೇವರ ಗುಡ್ಡ ಮುಂತಾದವು. ಇಲ್ಲಿನ ಬಾಣೇಶ್ವರ ದೇವಾಲಯವು ಕ್ರಿ.ಶ. ೧೧೦೭ ರಲ್ಲಿ ನಿರ್ಮಿಸಿದ್ದೆಂದು ಇತಿಹಾಸದಿಂದ ತಿಳಿದು ಬಂದಿರುತ್ತದೆ. ಅಲ್ಲದೆ ಇಲ್ಲಿಗೆ ಸಮೀಪದ ರಾಮೇದೇವರ ಗುಡ್ಡದಲ್ಲಿ ಶ್ರೀ ರಾಮನು ಯಜ್ಞ ಕೈಗೊಂಡಿದ್ದು, ಈಗಲೂ ಇಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಬಾರದೆ ಇದ್ದ ಪಕ್ಷದಲ್ಲಿ ಇಲ್ಲಿ ಯಜ್ಞವನ್ನು ಮಾಡಿದರೆ ಖಂಡಿತ ಮಳೆ ಬಂದೇ ಬರುತ್ತದೆ. ರಾಮಾಯಣದ ಪ್ರಮುಖ ಪ್ರದೇಶವನ್ನಾಗಿ ಈ ಸ್ಥಳವನ್ನು ಗುರ್ತಿಸುತ್ತಾರೆ. ಅಲ್ಲದೆ ಇತ್ತೀಚಿಗೆ ಇಲ್ಲಿನ ಚನ್ನಕೇಶವ ದೇವಾಲಯದಲ್ಲಿ ಅನಾಥವಾಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಖ್ಯಾತ ಜ್ಯೋತಿಷಿಗಳಾದ ಶ್ರೀ ಭಾನು ಪ್ರಕಾಶ್ ಶರ್ಮರವರ ನೇತೃತ್ವದಲ್ಲಿ ದೇವಾಲಯವನ್ನು ನಿರ್ಮಿಸಿದ್ದು, ಈ ದೇವಿಯ ಇನ್ನೊಂದು ವೈಶಿಷ್ಟವೇನೆಂದರೇ ಈ ದೇವಿಯ ಮೂರ್ತಿಯು ಮೈಸೂರಿನ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕಿಂತ ಒಂದು ಅಡಿ ಎತ್ತರವಿರುವುದು !!!


. ಗರುಡನಗಿರಿ.

"http://kn.wikipedia.org/w/index.php?title=ಅರಸೀಕೆರೆ&oldid=483526" ಇಂದ ಪಡೆಯಲ್ಪಟ್ಟಿದೆ