ಭಾರತೀಯ ಕ್ರಿಕೆಟ್ ತಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭಾರತ ಕ್ರಿಕೆಟ್ ತಂಡ ಇಂದ ಪುನರ್ನಿರ್ದೇಶಿತ)
ಭಾರತ
ಭಾರತದ ಧ್ವಜ
ಸಿಬ್ಬಂದಿ
ನಾಯಕರೋಹಿತ್ ಶರ್ಮಾ
ತರಬೇತುದಾರರುರಾಹುಲ್ ದ್ರಾವಿಡ್
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ICC ದರ್ಜೆಪೂರ್ಣ ಸದಸ್ಯ (೧೯೨೬)
ICC ಪ್ರದೇಶಏಷ್ಯಾ
ICC ಶ್ರೇಯಾಂಕಗಳು ಪ್ರಸ್ತುತ [೧] ಅತ್ಯುತ್ತಮ
ಟೆಸ್ಟ್ ೧ನೇ ೧ನೇ (1 April 1973)
ODI ೧ನೇ ೧ನೇ (January 2013)
T20I ೧ನೇ ೧ನೇ (28 March 2014)
ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್v.  ಇಂಗ್ಲೆಂಡ್ at ಲಾರ್ಡ್ಸ್, ಲಂಡನ್; 25–28 June 1932
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರದರ್ಶನಗಳು೨ (೨೦೧೯-೨೦೨೧ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶರನ್ನರ್ ಅಪ್ (೨೦೧೯-೨೧, ೨೦೨೧-೨೩)
ಏಕದಿನ ಅಂತಾರಾಷ್ಟ್ರೀಯ
ಮೊದಲ ODIv.  ಇಂಗ್ಲೆಂಡ್ at ಹೆಡಿಂಗ್ಲೀ, ಲೀಡ್ಸ್; 13 July 1974
ವಿಶ್ವಕಪ್ ಪ್ರದರ್ಶನಗಳು೧೩ (೧೯೭೫ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೧೯೮೩, ೨೦೧೧)
ಟಿ20 ಅಂತಾರಾಷ್ಟ್ರೀಯ
ಮೊದಲ T20Iv.  ದಕ್ಷಿಣ ಆಫ್ರಿಕಾ at ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್; 1 December 2006
ಟಿ20 ವಿಶ್ವಕಪ್‌ ಪ್ರದರ್ಶನಗಳು೮ (೨೦೦೭ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೦೭)
೧೧ ಮಾರ್ಚ್ ೨೦೨೪ರ ಪ್ರಕಾರ

ಭಾರತೀಯ ಕ್ರಿಕೆಟ್ ತ೦ಡ ಭಾರತ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಭಾರತ ತ೦ಡ ಮೊದಲ ಟೆಸ್ಟ್ ಪ೦ದ್ಯವನ್ನು ಜೂನ್ ೨೫, ೧೯೩೨ ರಲ್ಲಿ ಇ೦ಗ್ಲೆ೦ಡಿನ ಲಾರ್ಡ್ಸ್ ಮೈದಾನದಲ್ಲಿ ಆಡಿತು.

ಭಾರತದ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡವು 25 ಜೂನ್ 1932 ರಂದು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್‌ನಲ್ಲಿ ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿತು, ಟೆಸ್ಟ್ ಕ್ರಿಕೆಟ್ ಸ್ಥಾನಮಾನವನ್ನು ಪಡೆದ ಆರನೇ ತಂಡವಾಯಿತು. ಭಾರತ ತನ್ನ ಮೊದಲ ಟೆಸ್ಟ್ ಗೆಲುವಿಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ 1952 ರವರೆಗೆ ಕಾಯಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಐವತ್ತು ವರ್ಷಗಳಲ್ಲಿ, 196 ಟೆಸ್ಟ್‌ಗಳಲ್ಲಿ ಕೇವಲ 35 ಗೆಲುವುಗಳೊಂದಿಗೆ ಯಶಸ್ಸು ಸೀಮಿತವಾಗಿತ್ತು.[೨]

ಭಾರತೀಯ ಕ್ರಿಕೆಟ್ ತಂಡವು ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಐ.ಸಿ.ಸಿ. ಸ್ಥಾನ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.

ಇತಿಹಾಸ[ಬದಲಾಯಿಸಿ]

ಬೆಳವಣಿಗೆ[ಬದಲಾಯಿಸಿ]

ಭಾರತೀಯ ತ೦ಡದ ಆರ೦ಭಿಕ ವರ್ಷಗಳ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸಿ ಕೆ ನಾಯುಡು, ಲಾಲಾ ಅಮರ್ನಾಥ್, ಮೊಹಮ್ಮದ್ ನಿಸಾರ್ ಮೊದಲಾದವರು. ಸ್ವಾತ೦ತ್ರ್ಯಾನ೦ತರ ಭಾರತ ಆಡಿದ ಮೊದಲ ಪ೦ದ್ಯ ೧೯೪೮ ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಬ್ರಿಸ್ಬೇನ್ ನಲ್ಲಿ. ಭಾರತದ ನಾಯಕತ್ವವನ್ನು ಲಾಲಾ ಅಮರ್ನಾಥ್ ವಹಿಸಿದ್ದರೆ ಆಸ್ಟ್ರೇಲಿಯಾದ ನಾಯಕತ್ವವನ್ನು ಡಾನ್ ಬ್ರಾಡ್ಮನ್ ವಹಿಸಿದ್ದರು. ಭಾರತದ ಮೊದಲ ಟೆಸ್ಟ್ ವಿಜಯ ಬ೦ದದ್ದು ಇ೦ಗ್ಲೆ೦ಡಿನ ವಿರುದ್ಧ ಮದರಾಸಿನಲ್ಲಿ ೧೯೫೨ ರಲ್ಲಿ.[೩] ಮೊದಲ ಸರಣಿ ಗೆಲುವು ಬ೦ದಿದ್ದು ಅದೇ ವರ್ಷ ಪಾಕಿಸ್ತಾನದ ವಿರುದ್ಧ.

೫೦ ಮತ್ತು ೬೦ ರ ದಶಕದ ಕೆಲವು ಪ್ರಸಿದ್ಧ ಆಟಗಾರರಲ್ಲಿ ವಿನೂ ಮ೦ಕಡ್, ಹೇಮು ಅಧಿಕಾರಿ, ಮನ್ಸೂರ್ ಅಲಿ ಖಾನ್ ಪಟೌಡಿ, ಚ೦ದೂ ಬೋರ್ಡೆ ಮೊದಲಾದವರನ್ನು ಹೆಸರಿಸಬಹುದು. ಭಾರತದ ಹೊರಗೆ ಮೊದಲ ಟೆಸ್ಟ್ ವಿಜಯ ಬ೦ದದ್ದು ನ್ಯೂಜೀಲೆ೦ಡ್ ನ ವಿರುದ್ಧ ೧೯೬೮ ರಲ್ಲಿ.[೪]

೭೦ ರ ದಶಕದಲ್ಲಿ ಭಾರತೀಯ ಕ್ರಿಕೆಟ್ ನ ನಾಲ್ಕು ಮುಖ್ಯ ಬೌಲರ್ ಗಳು ಬಿಷನ್ ಸಿ೦ಗ್ ಬೇಡಿ, ಎರಾಪಳ್ಳಿ ಪ್ರಸನ್ನ, ಬಿ ಎಸ್ ಚ೦ದ್ರಶೇಖರ್ ಮತ್ತು ಶ್ರೀನಿವಾಸ್ ವೆ೦ಕಟರಾಘವನ್. ಇದೇ ಕಾಲದಲ್ಲಿಯೇ ಪ್ರಸಿದ್ಧ ಬ್ಯಾಟುಗರರಾದ ಸುನಿಲ್ ಗವಾಸ್ಕರ್ ಮತ್ತು ಗು೦ಡಪ್ಪ ವಿಶ್ವನಾಥ್ ಬೆಳಕಿಗೆ ಬ೦ದರು. ಈ ದಶಕದ ಕೊನೆಗೆ ಕಪಿಲ್ ದೇವ್ ಉತ್ತಮ ಆಲ್‍ರೌ೦ಡರ್ ಆಗಿ ಬೆಳೆದರು.[೫]

೮೦ ರ ದಶಕದಲ್ಲಿ ಮಹಮದ್ ಅಜರುದ್ದೀನ್, ರವಿ ಶಾಸ್ತ್ರಿ, ಸಂಜಯ್ ಮಾಂಜ್ರೇಕರ್, ಕ್ರಷ್ಣಮಾಚಾರಿ ಶ್ರೀಕಾಂತ್, ಮದನ್ ಲಾಲ್, ಮಣಿ೦ದರ್ ಸಿ೦ಗ್ ಮೊದಲಾದವರು ಪ್ರಸಿದ್ಧರಾದರು. ೧೯೮೩ ರಲ್ಲಿ ಭಾರತ ವಿಶ್ವ ಕಪ್ ಅನ್ನು ಗೆದ್ದಿತು. ಮತ್ತೆ ೧೯೮೫ ರಲ್ಲಿ ಆ೦ತಾರಾಷ್ಟ್ರೀಯ ಚಾ೦ಪಿಯನ್‍ ಶಿಪ್ ಅನ್ನು ಆಸ್ಟ್ರೇಲಿಯಾದಲ್ಲಿ ಗೆದ್ದಿತು. ೧೯೮೬ ರಲ್ಲಿ ಇ೦ಗ್ಲೆ೦ಡಿನಲ್ಲಿ ಗೆದ್ದ ಟೆಸ್ಟ್ ಸರಣಿ ಇದುವರೆಗೆ ಭಾರತದ ಹೊರಗೆ ಭಾರತದ ಕೊನೆಯ ಟೆಸ್ಟ್ ಸರಣಿ ವಿಜಯವಾಗಿದೆ. ಇದೇ ದಶಕದಲ್ಲಿ ಗವಾಸ್ಕರ್ ೧೦,೦೦೦ ರನ್ನುಗಳನ್ನು ದಾಟಿದ ಮೊದಲ ಬ್ಯಾಟುಗಾರರಾದರು. ೩೪ ಶತಕಗಳನ್ನು ಸಹ ದಾಖಲಿಸಿದರು.

೯೦ ರ ದಶಕದ ಆರ೦ಭದಲ್ಲಿ ತೆ೦ಡೂಲ್ಕರ್ ಮತ್ತು ಅನಿಲ್ ಕು೦ಬ್ಳೆ ಪ್ರಸಿದ್ಧರಾದರು. ೧೯೯೯ ರಲ್ಲಿ ಅನಿಲ್ ಕು೦ಬ್ಳೆ ಒ೦ದೇ ಇನಿ೦ಗ್ಸಿನಲ್ಲಿ ಹತ್ತೂ ವಿಕೆಟ್ ಗಳನ್ನು (ಪಾಕಿಸ್ತಾನ) ಪಡೆದ ಎರಡನೆಯ ಬೌಲರ್ ಆದರು. ಸಚಿನ ತೆ೦ಡೂಲ್ಕರ್ ಅನೇಕ ದಾಖಲೆಗಳನ್ನು ನಿರ್ಮಿಸುತ್ತಿದ್ದ೦ತೆ (ಏಕದಿನ ಪ೦ದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು ಮತ್ತು ಅತಿ ಹೆಚ್ಚು ಶತಕಗಳು, ಇತ್ಯಾದಿ), ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮೊದಲಾದವರು ಅ೦ತಾರಾಷ್ಟ್ರೀಯ ಕ್ರಿಕೆಟ್‍ ನಲ್ಲಿ ಹೆಜ್ಜೆಯೂರತೊಡಗಿದರು.

ಅಂತರರಾಷ್ಟ್ರೀಯ ಪಂದ್ಯಾವಳಿಗಳು[ಬದಲಾಯಿಸಿ]

ತಂಡವು ಐದು ಪ್ರಮುಖ ICC ಪಂದ್ಯಾವಳಿಗಳನ್ನು ಗೆದ್ದಿದೆ, ಎರಡು ಬಾರಿ ಕ್ರಿಕೆಟ್ ವಿಶ್ವಕಪ್ (1983 ಮತ್ತು 2011), ICC T20 ವಿಶ್ವಕಪ್ ಒಮ್ಮೆ (2007) ಮತ್ತು ICC ಚಾಂಪಿಯನ್ಸ್ ಟ್ರೋಫಿಯನ್ನು ಎರಡು ಬಾರಿ (2002 ಮತ್ತು 2013) ಗೆದ್ದಿದೆ. ಅವರು ವಿಶ್ವಕಪ್‌ನಲ್ಲಿ ಎರಡು ಬಾರಿ (2003 ಮತ್ತು 2023), T20 ವಿಶ್ವಕಪ್‌ನಲ್ಲಿ ಒಮ್ಮೆ (2014), ಚಾಂಪಿಯನ್ಸ್ ಟ್ರೋಫಿ ಎರಡು ಬಾರಿ (2000 ಮತ್ತು 2017) ಮತ್ತು ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳಲ್ಲಿ ಮೊದಲ ಎರಡು ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿ ಮುಗಿಸಿದ್ದಾರೆ ( 2021, 2023). ವೆಸ್ಟ್ ಇಂಡೀಸ್ ನಂತರ ವಿಶ್ವಕಪ್ ಗೆದ್ದ ಎರಡನೇ ತಂಡ ಮತ್ತು 2011 ರ ಕ್ರಿಕೆಟ್ ವಿಶ್ವಕಪ್ ಗೆದ್ದ ನಂತರ ತವರು ನೆಲದಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡವಾಗಿದೆ.

ಅವರು 1984, 1988, 1990-91, 1995, 2010, 2016, 2018, 2023 ರಲ್ಲಿ ಎಂಟು ಬಾರಿ ಏಷ್ಯಾ ಕಪ್ ಗೆದ್ದಿದ್ದಾರೆ ಮತ್ತು ಮೂರು ಬಾರಿ ರನ್ನರ್ ಅಪ್ (1997, 2004, 2008) ಗಳಿಸಿದ್ದಾರೆ. 2022ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವೂ ಚಿನ್ನದ ಪದಕ ಗೆದ್ದಿತ್ತು. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಮೇಸ್ ಅನ್ನು ಐದು ಬಾರಿ ಗೆದ್ದಿರುವುದು ಇತರ ಸಾಧನೆಗಳು.

ಅಂತಾರಾಷ್ಟ್ರೀಯ ಮೈದಾನಗಳು[ಬದಲಾಯಿಸಿ]

ಭಾರತೀಯ ಕ್ರಿಕೆಟ್ ತಂಡ is located in India
ನರೇಂದ್ರ ಮೋದಿ
ನರೇಂದ್ರ ಮೋದಿ
ಸವಾಯಿ ಮಾನ್ಸಿಂಗ್
ಸವಾಯಿ ಮಾನ್ಸಿಂಗ್
ಬಾರಾಬತಿ
ಬಾರಾಬತಿ
ವೈ.ಎಸ್.ರಾಜಶೇಖರ ರೆಡ್ಡಿ
ವೈ.ಎಸ್.ರಾಜಶೇಖರ ರೆಡ್ಡಿ
ವಾಂಖೆಡೆ
ವಾಂಖೆಡೆ
ಬ್ರಬೋರ್ನ್
ಬ್ರಬೋರ್ನ್
MCA
MCA
ಈಡನ್ ಗಾರ್ಡನ್ಸ್
ಈಡನ್ ಗಾರ್ಡನ್ಸ್
ACA
ACA
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ತಿರುವನಂತಪುರಂ
ತಿರುವನಂತಪುರಂ
HPCA
HPCA
ರಾಜೀವ್ ಗಾಂಧಿ, ಹೈದರಾಬಾದ್
ರಾಜೀವ್ ಗಾಂಧಿ, ಹೈದರಾಬಾದ್
ಚಿನ್ನಸ್ವಾಮಿ
ಚಿನ್ನಸ್ವಾಮಿ
ಚಿದಂಬರಂ
ಚಿದಂಬರಂ
ಐ ಎಸ್ ಬಿಂದ್ರಾ
ಐ ಎಸ್ ಬಿಂದ್ರಾ
ಹೋಳ್ಕರ್
ಹೋಳ್ಕರ್
ರಾಜೀವ್ ಗಾಂಧಿ, ಡೆಹ್ರಾಡೂನ್
ರಾಜೀವ್ ಗಾಂಧಿ, ಡೆಹ್ರಾಡೂನ್
VCA
VCA
JSCA
JSCA
SCA
SCA
ಏಕಾನಾ
ಏಕಾನಾ
ಭಾರತದ ಕೆಲವು ಪ್ರಸಿದ್ಧ ಕ್ರಿಕೆಟ್ ಮೈದಾನಗಳ ಸ್ಥಳಗಳು

ಪಂದ್ಯಾವಳಿಯ ಇತಿಹಾಸ[ಬದಲಾಯಿಸಿ]

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್[ಬದಲಾಯಿಸಿ]

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್
ವರ್ಷ ಲೀಗ್ ಹಂತ ಫೈನಲ್ ಹೋಸ್ಟ್ ಫೈನಲ್ ಅಂತಿಮ ಸ್ಥಾನ
ಸ್ಥಾನ ಪಂದ್ಯ ಕಡಿತ ಅಂ.ಸ್ಪ ಅಂ. PCT
ಗೆ ಸೋ ಡ್ರಾ ಟೈ
೨೦೧೯-೨೦೨೧[೬] ೧/೯ ೧೭ ೧೨ ೭೨೦ ೫೨೦ ೭೨.೨ ಇಂಗ್ಲೆಂಡ್ರೋಸ್ ಬೌಲ್, ಇಂಗ್ಲೆಂಡ್  ನ್ಯೂ ಜೀಲ್ಯಾಂಡ್ ಗೆ ೮ ವಿಕೆಟ್‌ಗಳಿಂದ ಸೋತಿತು ರನ್ನರ್ ಅಪ್
೨೦೨೧-೨೦೨೩[೭] ೨/೯ ೧೮ ೧೦ ೨೧೬ ೧೨೭ ೫೮.೮ ಇಂಗ್ಲೆಂಡ್ ದಿ ಓವಲ್, ಇಂಗ್ಲೆಂಡ್  ಆಸ್ಟ್ರೇಲಿಯಾ ಗೆ 209 ರನ್‌ಗಳಿಂದ ಸೋತಿತು ರನ್ನರ್ ಅಪ್

ಕ್ರಿಕೆಟ್ ವಿಶ್ವ ಕಪ್[ಬದಲಾಯಿಸಿ]

ವರ್ಷ ಸುತ್ತು ಪಂದ್ಯ ಜಯ ಸೋಲು ಟೈ
ಇಂಗ್ಲೆಂಡ್ ೧೯೭೫ ಮೊದಲ ಸುತ್ತು
ಇಂಗ್ಲೆಂಡ್ ೧೯೭೯
ಇಂಗ್ಲೆಂಡ್Wales ೧೯೮೩ ಚಾಂಪಿಯನ್‌
ಭಾರತಪಾಕಿಸ್ತಾನ ೧೯೮೭ ಸೆಮಿ ಫೈನಲ್ಸ್
ಆಸ್ಟ್ರೇಲಿಯಾನ್ಯೂ ಜೀಲ್ಯಾಂಡ್ ೧೯೯೨ ಮೊದಲ ಸುತ್ತು
ಭಾರತಪಾಕಿಸ್ತಾನಶ್ರೀಲಂಕಾ ೧೯೯೬ ಸೆಮಿ ಫೈನಲ್ಸ್
ಇಂಗ್ಲೆಂಡ್Walesಸ್ಕಾಟ್ಲೆಂಡ್ಐರ್ಲೇಂಡ್ ಗಣರಾಜ್ಯನೆದರ್ಲ್ಯಾಂಡ್ಸ್ ೧೯೯೯ ಸೂಪರ್ ೬
ದಕ್ಷಿಣ ಆಫ್ರಿಕಾಜಿಂಬಾಬ್ವೆಕೀನ್ಯಾ ೨೦೦೩ ರನ್ನರ್ ಅಪ್ ೧೧
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ೨೦೦೭ ಗುಂಪು ಹಂತ
ಭಾರತಬಾಂಗ್ಲಾದೇಶಶ್ರೀಲಂಕಾ ೨೦೧೧ ಚಾಂಪಿಯನ್‌
ಆಸ್ಟ್ರೇಲಿಯಾನ್ಯೂ ಜೀಲ್ಯಾಂಡ್ ೨೦೧೫ ಸೆಮಿ ಫೈನಲ್ಸ್
ಇಂಗ್ಲೆಂಡ್Wales ೨೦೧೯ ಸೆಮಿ ಫೈನಲ್ಸ್ ೧೦
ಭಾರತ ೨೦೨೩ ರನ್ನರ್ ಅಪ್ ೧೧ ೧೦
ಒಟ್ಟು ೨ ಕಪ್ಗಳು ೯೬ ೬೩ ೩೦

ಟಿ20 ವಿಶ್ವಕಪ್[ಬದಲಾಯಿಸಿ]

ಟಿ20 ವಿಶ್ವಕಪ್ ದಾಖಲೆ
ವರ್ಷ ಸುತ್ತು ಸ್ಥಾನ ಪಂದ್ಯ ಜಯ ಸೋಲು ಟೈ NR
ದಕ್ಷಿಣ ಆಫ್ರಿಕಾ ೨೦೦೭ ಚಾಂಪಿಯನ್‌ ೧/೧೨
ಇಂಗ್ಲೆಂಡ್ ೨೦೦೯ ಸೂಪರ್ 8 ೭/೧೨
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ೨೦೧೦ ೮/೧೨
ಶ್ರೀಲಂಕಾ ೨೦೧೨ ೫/೧೨
ಬಾಂಗ್ಲಾದೇಶ ೨೦೧೪ ರನ್ನರ್ ಅಪ್ ೨/೧೬
ಭಾರತ ೨೦೧೬ ಸೆಮಿ ಫೈನಲ್ಸ್ ೪/೧೬
ಒಮಾನ್ಸಂಯುಕ್ತ ಅರಬ್ ಸಂಸ್ಥಾನ ೨೦೨೧ ಸೂಪರ್ ೧೨ ೬/೧೬
ಆಸ್ಟ್ರೇಲಿಯಾ ೨೦೨೨ ಸೆಮಿ ಫೈನಲ್ಸ್ ೩/೧೬
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ಅಮೇರಿಕ ಸಂಯುಕ್ತ ಸಂಸ್ಥಾನ ೨೦೨೪ ಅರ್ಹತೆ ಪಡೆದಿದ್ದಾರೆ
ಒಟ್ಟು ೧ ಕಪ್ಗಳು ೮/೮ ೪೫ ೨೮ ೧೫

ಪ್ರಸ್ತುತ ತಂಡ[ಬದಲಾಯಿಸಿ]

ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.

ಹೆಸರು ವಯಸ್ಸು ಬ್ಯಾಟಿಂಗ್ ಶೈಲಿ ಬೌಲಿಂಗ್ ಶೈಲಿ ಟಿಪ್ಪಣಿ
ಬ್ಯಾಟರ್ಸ್
ರುತುರಾಜ್ ಗಾಯಕ್ವಾಡ್ 27 Right-handed
ಶುಭಮನ್ ಗಿಲ್ 24 Right-handed Right-arm off spin
ಶ್ರೇಯಸ್ ಅಯ್ಯರ್ 29 Right-handed Right-arm leg spin
ಯಶಸ್ವಿ ಜೈಸ್ವಾಲ್ 22 Left-handed Right-arm leg spin
ಸರ್ಫರಾಜ್ ಖಾನ್ 26 Right-handed Right-arm leg break
ವಿರಾಟ್ ಕೊಹ್ಲಿ 35 Right-handed Right-arm medium
ರಜತ್ ಪಾಟಿದಾರ್ 30 Right-handed
ದೇವದತ್ ಪಡಿಕ್ಕಲ್ 23 Left-handed
ರೋಹಿತ್ ಶರ್ಮಾ 36 Right-handed Right-arm off break ನಾಯಕ
ರಿಂಕು ಸಿಂಗ್ 26 Left-handed Right-arm off break
ಸೂರ್ಯಕುಮಾರ್ ಯಾದವ್ 33 Right-handed Right-arm off spin
ವಿಕೆಟ್ ಕೀಪರ್‌
ಶ್ರೀಕರ್ ಭಾರತ್ 30 Right-handed
ಇಶಾನ್ ಕಿಶನ್ 25 Left-handed
ಕೆ.ಎಲ್.ರಾಹುಲ್ 31 Right-handed
ಸಂಜು ಸ್ಯಾಮ್ಸನ್ 29 Right-handed
ರಿಷಭ್ ಪಂತ್ 26 Left-handed
ಆಲ್ ರೌಂಡರ್
ರವಿಚಂದ್ರನ್ ಅಶ್ವಿನ್ 37 Right-handed Right-arm off spin
ಶಿವಂ ದುಬೆ 30 Left-handed Right-arm medium
ರವೀಂದ್ರ ಜಡೇಜಾ 35 Left-handed Slow left-arm orthodox
ಹಾರ್ದಿಕ್ ಪಾಂಡ್ಯ 30 Right-handed Right-arm medium-fast ODI, T20I ಉಪನಾಯಕ
ಅಕ್ಷರ್ ಪಟೇಲ್ 30 Left-handed Slow left-arm orthodox
ವಾಷಿಂಗ್ಟನ್ ಸುಂದರ್ 24 Left-handed Right-arm off spin
ಪೇಸ್ ಬೌಲರ್‌
ಜಸ್ಪ್ರೀತ್ ಬುಮ್ರಾ 30 Right-handed Right-arm fast ಟೆಸ್ಟ್ ಉಪನಾಯಕ
ದೀಪಕ್ ಚಹಾರ್ 31 Right-handed Right-arm medium
ಅವೇಶ್ ಖಾನ್ 27 Right-handed Right arm fast-medium
ಮುಖೇಶ್ ಕುಮಾರ್ 30 Right-handed Right arm medium
ಪ್ರಸಿದ್ಧ್ ಕೃಷ್ಣ 30 Right-handed Right arm medium
ಉಮ್ರಾನ್ ಮಲಿಕ್ 24 Right-handed Right-arm fast
ಮೊಹಮ್ಮದ್ ಶಮಿ 33 Right-handed Right-arm fast
ಅರ್ಷದೀಪ್ ಸಿಂಗ್ 25 Left-handed Left-arm medium-fast
ಮೊಹಮ್ಮದ್ ಸಿರಾಜ್ 30 Right-handed Right-arm fast
ಶಾರ್ದೂಲ್ ಠಾಕೂರ್ 32 Right-handed Right-arm medium
ಸ್ಪಿನ್ ಬೌಲರ್‌
ರವಿ ಬಿಷ್ಣೋಯ್ 33 Right-handed Right-arm leg spin
ಯುಜ್ವೇಂದ್ರ ಚಹಾಲ್ 30 Left-handed Right-arm off-break
ಕುಲದೀಪ್ ಯಾದವ್ 29 Left-handed Left-arm wrist spin

ಉಲ್ಲೇಖಗಳು[ಬದಲಾಯಿಸಿ]

  1. "ICC Rankings". icc-cricket.com.
  2. "Top 10 Teams With Most Wins In Test Cricket". 30 August 2019. Archived from the original on 10 March 2023. Retrieved 10 February 2023.
  3. "England in India, 1951–52". ESPNcricinfo. Archived from the original on 9 May 2006. Retrieved 8 March 2022.
  4. "India in New Zealand Test Series, India in New Zealand Test Series 1967/68 score, Match schedules, fixtures, points table, results, news". ESPNcricinfo. Archived from the original on 18 January 2022. Retrieved 16 January 2022.
  5. "30th January 1994: When Kapil Dev became the leading wicket-taker in the world". 30 January 2019. Archived from the original on 14 January 2023. Retrieved 14 January 2023.
  6. "ICC World Test Championship 2019–2021 Table". ESPNcricinfo. Archived from the original on 12 August 2021. Retrieved 29 August 2021.
  7. "ICC World Test Championship (2021-2023) Points Table". Archived from the original on 1 August 2019. Retrieved 6 December 2021.