ಕೇಂದ್ರ ಸಾಹಿತ್ಯ ಅಕಾಡೆಮಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಕೇಂದ್ರ ಸಾಹಿತ್ಯ ಅಕಾಡೆಮಿ ಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ. ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ.ಇದನ್ನು ೧೯೫೪ರಲ್ಲಿ ಸ್ಥಾಪಿಸಲಾಯಿತು.ಸಂಶೋಧನೆ,ಪ್ರಕಾಶನ,ಗ್ರಂಥಾಲಯ, ಸೆಮಿನಾರುಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ ೧೯೫೫ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ. ಭಾರತದ ಈ ಕೆಳಕಂಡ ೨೪ ಭಾಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಅಸ್ಸಾಮಿ, ಬಂಗಾಳಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಷ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಹಾಗು ಉರ್ದು

ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಕಾರ್ಯ ಸುಮಾರು ೧೨ ತಿಂಗಳು ನಡೆಯುತ್ತದೆ. ವಿಜೇತರಿಗೆ ೧ ಲಕ್ಷ ರೂ ನಗದು ಹಾಗು ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ. ಭಾರತೀಯ ಭಾಷೆಗಳ ಉತ್ತಮ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಕನ್ನಡ ಭಾಷೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು[ಬದಲಾಯಿಸಿ]

}

ಟಿಪ್ಪಣಿ:೧೯೫೭ ಮತ್ತು ೧೯೬೩ರಲ್ಲಿ ಯಾವುದೇ ಪ್ರಶಸ್ತಿಗಳನ್ನು ನೀಡಲಾಗಿಲ್ಲ. ಒಟ್ಟು ೫೫ ಪ್ರಶಸ್ತಿಗಳು ಕನ್ನಡ ಲೇಖಕಗರಿಗೆ ಸಂದಿದೆ..
ವರ್ಷ ಲೇಖಕ ಕೃತಿ
೧೯೫೫ ಕುವೆಂಪು ಶ್ರೀ ರಾಮಾಯಣ ದರ್ಶನಂ (ಪುರಾಣ)
೧೯೫೫ ರಂ.ಶ್ರೀ.ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ (ಸಾಹಿತ್ಯದ ಚರಿತ್ರೆ)
೧೯೫೮ ದ.ರಾ.ಬೇಂದ್ರೆ ಅರಳು-ಮರಳು (ಕವನ)
೧೯೫೯ ಶಿವರಾಮ ಕಾರಂತ ಯಕ್ಷಗಾನ ಬಯಲಾಟ (A treatise on folk-drama)
೧೯೬೦0 ವಿ.ಕೆ.ಗೋಕಾಕ್ ದ್ಯಾವ -ಪೃಥ್ವಿ (ಕವನ)
೧೯೬೧ ಎ.ಆರ್.ಕೃಷ್ಣಶಾಸ್ತ್ರೀ ಬೆಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ (ವಿಮರ್ಶೆ)
೧೯೬೨ ದೇವುಡು ನರಸಿಂಹ ಶಾಸ್ತ್ರಿ ಮಹಾಕ್ಷತ್ರಿಯ (ಕಾದಂಬರಿ)
೧೯೬೪ ಬಿ.ಪುಟ್ಟಸ್ವಾಮಯ್ಯ ಕ್ರಾಂತಿ ಕಲ್ಯಾಣ (ಕಾದಂಬರಿ)
೧೯೬೫ ಎಸ್.ವಿ.ರಂಗಣ್ಣ ರಂಗ ಬಿನ್ನ್ನಪ (Philosophical reflections)
೧೯೬೬ ಪು.ತಿ.ನರಸಿಂಹಾಚಾರ್ ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ)
೧೯೬೭ ಡಿ.ವಿ.ಗುಂಡಪ್ಪ ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions)
೧೯೬೮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣ ಕಥೆಗಳು (12-13) (ಸಣ್ಣ ಕಥೆಗಳು )
೧೯೬೯ ಎಚ್.ತಿಪ್ಪೇರುದ್ರಸ್ವಾಮಿ ಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಸಾಂಸ್ಕೃತಿಕ ಅಧ್ಯಯನ)
೧೯೭೦ ಶಂಬಾ ಜೋಷಿ ಕರ್ನಾಟಕ ಸಂಸ್ಕ್ಟತಿಯ ಪೂರ್ವ ಪೀಠಿಕೆ (ಸಾಂಸ್ಕೃತಿಕ ಅಧ್ಯಯನ)
೧೯೭೧ ಆದ್ಯ ರಂಗಾಚಾರ್ಯ ಕಾಳಿದಾಸ (ಸಾಹಿತ್ಯಕ ವಿಮರ್ಶೆ)
೧೯೭೨ ಎಸ್.ಎಸ್.ಭೂಸನೂರಮಠ ಶೂನ್ಯ ಸಂಪಾದನೆಯ ಪರಾಮರ್ಶೆ (Commentary)
೧೯೭೩ ಎಮ್.ವಿ.ಸೀತಾರಾಮಯ್ಯ ಅರಳು ಬರಳು (ಕವನ)
೧೯೭೪ ಗೋಪಾಲಕೃಷ್ಣ ಆಡಿಗ ವರ್ಧಮಾನ (ಕವನ)
೧೯೭೫ ಎಸ್.ಎಲ್.ಭೈರಪ್ಪ ದಾಟು (ಕಾದಂಬರಿ)
೧೯೭೬ ಎಂ.ಶಿವರಾಮ್ ಮನ ಮಂಧನ (ಮನೋವೈಜ್ಞಾನಿಕ ಅದ್ಯಯನ)
೧೯೭೭ ಕೆ.ಎಸ್.ನರಸಿಂಹಸ್ವಾಮಿ ತೆರೆದ ಬಾಗಿಲು (ಕವನ)
೧೯೭೮ ಬಿ.ಜಿ.ಎಲ್.ಸ್ವಾಮಿ ಹಸುರು ಹೊನ್ನು (ಪ್ರವಾಸ ಕಧನ)
೧೯೭೯ ಎ.ಎನ್.ಮೂರ್ತಿ ರಾವ್ ಚಿತ್ರಗಳು ಪತ್ರಗಳು (Reminiscences)
೧೯೮೦ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅಮೆರಿಕದಲ್ಲಿ ಗೋರೂರು (ಪ್ರವಾಸ ಕಥನ)
೧೯೮೧ ಚನ್ನವೀರ ಕಣವಿ ಜೀವ ಧ್ವನಿ (ಕವನ)
೧೯೮೨ ಚದುರಂಗ ವೈಶಾಖ (ಕಾದಂಬರಿ)
೧೯೮೩ ಯಶವಂತ ಚಿತ್ತಾಲ ಕಥೆಯಾದಳು ಹುಡುಗಿ (ಸಣ್ಣ ಕಥೆಗಳು)
೧೯೮೪ ಜಿ.ಎಸ್.ಶಿವರುದ್ರಪ್ಪ ಕಾವ್ಯಾರ್ಥ ಚಿಂತನ (ಸಾಹಿತ್ಯ ವಿಮರ್ಶೆ)
೧೯೮೫ ತ.ರಾ.ಸುಬ್ಬರಾಯ ದುರ್ಗಾಸ್ತಮಾನ (ಕಾದಂಬರಿ)
೧೯೮೬ ವ್ಯಾಸರಾಯ ಬಲ್ಲಾಳ ಬಂಡಾಯ (ಕಾದಂಬರಿ)
೧೯೮೭ ಪೂರ್ಣಚಂದ್ರ ತೇಜಸ್ವಿ ಚಿದಂಬರ ರಹಸ್ಯ (ಕಾದಂಬರಿ)
೧೯೮೮ ಶಂಕರ ಮೊಕಾಶಿ ಪುಣೇಕರ ಅವಧೇಶ್ವರಿ (ಕಾದಂಬರಿ)
೧೯೮೯ ಹಾ.ಮಾ.ನಾಯಕ ಸಂಪ್ರತಿ (Belles- Lettres)
೧೯೯೦ ದೇವನೂರು ಮಹಾದೇವ ಕುಸುಮ ಬಾಲೆ (ಕಾದಂಬರಿ)
೧೯೯೧ ಚಂದ್ರಶೇಖರ ಕಂಬಾರ ಸಿರಿ ಸಂಪಿಗೆ (ನಾಟಕ)
೧೯೯೨ ಸು.ರಂ.ಎಕ್ಕುಂಡಿ ಬಕುಳದ ಹೂವುಗಳು (ಕವನ)
೧೯೯೩ ಪಿ.ಲಂಕೇಶ್ ಕಲ್ಲು ಕರಗುವ ಸಮಯ (ಸಣ್ಣ ಕಥೆಗಳು)
೧೯೯೪ ಗಿರೀಶ್ ಕಾರ್ನಾಡ್ ತಲೆದಂಡ (ನಾಟಕ)
೧೯೯೫ ಕೀರ್ತಿನಾಥ ಕುರ್ತಕೋಟಿ ಉರಿಯ ನಾಲಗೆ (ವಿಮರ್ಶೆ)
೧೯೯೬ ಜಿ.ಎಸ್.ಆಮೂರ ಭುವನದ ಭಾಗ್ಯ (ಸಾಹಿತ್ಯ ವಿಮರ್ಶೆ)
೧೯೯೭ ಎಂ.ಚಿದಾನಂದ ಮೂರ್ತಿ ಹೊಸತು ಹೊಸತು (ವಿಮರ್ಶೆ)
೧೯೯೮ ಬಿ.ಸಿ.ರಾಮಚಂದ್ರ ಶರ್ಮ ಸಪ್ತಪದಿ (ಕವನ)
೧೯೯೯ ಡಿ.ಆರ್. ನಾಗರಾಜ್ ಸಾಹಿತ್ಯ ಕಥನ (ಪ್ರಬಂಧಗಳು)
೨೦೦೦ ಶಾಂತಿನಾಥ ದೇಸಾಯಿ ಓಂ ನಮೋ (ಕಾದಂಬರಿ)
೨೦೦೧ ಎಲ್. ಎಸ್. ಶೇಷಗಿರಿ ರಾವ್ ಇಂಗ್ಲೀಷ್ ಸಾಹಿತ್ಯ ಚರಿತ್ರೆ (ಸಾಹಿತ್ಯಿಕ ಇತಿಹಾಸ)
೨೦೦೨ ಎಸ್.ನಾರಾಯಣ ಶೆಟ್ಟಿ ಯುಗಸಂಧ್ಯಾ (Epic)
೨೦೦೩ ಕೆ.ವಿ.ಸುಬ್ಬಣ್ಣ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (ಪ್ರಬಂಧಗಳು)
೨೦೦೪ ಗೀತಾ ನಾಗಭೂಷಣ ಬದುಕು (ಕಾದಂಬರಿ)
೨೦೦೫ ರಾಘವೇಂದ್ರ ಪಾಟೀಲ್ ತೇರು (ಕಾದಂಬರಿ)
೨೦೦೬ ಎಂ.ಎಂ.ಕಲ್ಬುರ್ಗಿ ಮಾರ್ಗ - ೪ (ಪ್ರಬಂಧಗಳು)
೨೦೦೭ ಕುಂ.ವೀರಭದ್ರಪ್ಪ ಅರಮನೆ (ಕಾದಂಬರಿ)
೨೦೦೮ ಶ್ರೀನಿವಾಸ ಬಿ.ವೈದ್ಯ ಹಳ್ಳ ಬಂತು ಹಳ್ಳ (ಕಾದಂಬರಿ)
೨೦೦೯ ವೈದೇಹಿ (ಜಾನಕಿ ಶ್ರೀನಿವಾಸ ಮೂರ್ತಿ) ಕ್ರೌಂಚ ಪಕ್ಷಿಗಳು (ಸಣ್ನ ಕಥೆಗಳು)
೨೦೧೦ ರಹಮತ್ ತರೀಕೆರೆ ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ)
೨೦೧೧ ಗೋಪಾಲಕೃಷ್ಣ ಪೈ ಸ್ವಪ್ನ ಸಾರಸ್ವತ (ಕಾದಂಬರಿ)
೨೦೧೨ ಎಚ್.ಎಸ್.ಶಿವಪ್ರಕಾಶ್ ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ)
2013 ಸಿ.ಎನ್. ರಾಮಚಂದ್ರನ್ ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ)