ರಾ.ಶಿವರಾಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾ.ಶಿವರಾಂ

'ರಾ.ಶಿ.'[೧][೨] ಎಂದೇ ಪ್ರಸಿದ್ದರಾಗಿರುವ ರಾಮಸ್ವಾಮಯ್ಯ ಶಿವರಾಂ(೧೯೦೪ - ೧೯೮೪) ರವರು ಕನ್ನಡ ಸಾಹಿತ್ಯದ ಹೆಸರಾಂತ ಹಾಸ್ಯ ಲೇಖಕರಲ್ಲಿ ಒಬ್ಬರು. ವೃತ್ತಿಯಿಂದ ವೈದ್ಯ[೩] ರಾದರೂ ಕೊರವಂಜಿ[೪] ಪತ್ರಿಕೆಯ ಸ್ಥಾಪಕರೂ ,ಸಂಪಾದಕರೂ ಆಗಿದ್ದರು.[೫]

ವಿದ್ಯಾರ್ಥಿ ಜೀವನ[ಬದಲಾಯಿಸಿ]

  • ಬಡತನದಲ್ಲಿಯೇ ೧೯೨೫ ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮುಗಿಸಿದರು. ಬಿ.ಎ. ಮಾಡಿದ ನಂತರ ಎಂ.ಎ. ಮಾಡಿ ಮುಂದಕ್ಕೆ ಎಂ.ಬಿ.ಬಿ.ಎಸ್. ಮಾಡು ಎನ್ನುವ ಸಲಹೆ ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ನವರು ಇತ್ತರು. ಶಿವರಾಂ ಮೆಡಿಕಲ್ ಕಾಲೇಜನ್ನೇ ಸೇರಿದರು. ವೈದ್ಯಕೀಯ ಓದುವಾಗ ತಮ್ಮ ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಚೆನ್ನಾಗಿರಲಿಲ್ಲ.
  • ಈ ನಡುವೆ ಅವರು ತಂದೆಯನ್ನು ಕಳೆದುಕೊಂಡರು. ದೊಡ್ಡ ಪರಿವಾರದ ಜವಾಬ್ದಾರಿ ಹಿರಿ ಮಗನಾದ ಶಿವರಾಂ ಹೆಗಲಿಗೆ ಏರಿತ್ತು. ನಾಗಮ್ಮ ಎಂಬುವರೊದನೆ ವಿವಾಹವೂ ಜರುಗಿತ್ತು. ಹಣದ ಬಿಕ್ಕಟ್ಟಿನಿಂದಾಗಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ ಸಿನೆಮಾ ರಂಗಕ್ಕೆ ಸೇರಲು ಪ್ರಯತ್ನಿಸಿದರು.
  • ವ್ಯಾಯಾಮ ಪಟು, ಸಾಹಿತಿ ಕೆ.ವಿ.ಅಯ್ಯರ್ ರವರಿಂದ ಫೋಟೊ ತೆಗೆಸಿಕೊಂಡು 'ಮೃಚ್ಚಕಟಿಕಾ' ಎನ್ನುವ ಸಿನೆಮಾ ತೆಗೆಯುತ್ತಿದ್ದ ಭವನಾನಿಯವರಿಗೆ ಕೊಟ್ಟರು. ಒಂದು ಸಣ್ಣ ಪಾರ್ಟೂ ಸಿಕ್ಕಿತ್ತು. ಆದರೆ ಟಿ.ಪಿ.ಕೈಲಾಸಂ ರವರು ಶಿವರಾಂರವರಿಗೆ ಬುದ್ದಿ ಹೇಳಿ ಮತ್ತೇ ವೈದ್ಯಕೀಯ ಶಿಕ್ಷಣ ಮುಂದುವರೆಸುವಂತೆ ಪ್ರೇರೇಪಿಸಿದರು. ಇದರ ಫಲವಾಗಿ ೧೯೩೦ ರಲ್ಲಿ ಶಿವರಾಂ ಡಾ.ಶಿವರಾಂ[೬] ಆದರು.

ಕೊರವಂಜಿ[ಬದಲಾಯಿಸಿ]

  • ಪಂಚ್ ಮೊಡಿಗೆ ಒಳಗಾಗಿ ಕೊರವಂಜಿ ಮಾಸಪತ್ರಿಕೆ ಶುರುವಾಗಿದ್ದು ೧೯೪೨ ರಲ್ಲಿ. ಆಗ ಅದಕ್ಕೆ ಬರೆಯುತ್ತಿದ್ದವರು ಮುಖ್ಯವಾಗಿ ರಾಶಿಯವರಲ್ಲದೇ ನಾ ಕಸ್ತೂರಿ, ಜಿ.ಪಿ.ರಾಜರತ್ನಂ, ಎಸ್.ಎನ್.ಶಿವಸ್ವಾಮಿ ಮುಂತಾದವರು. ಬರಹಗಾರರು ಕಡಿಮೆ ಇದ್ದದ್ದರಿಂದ ಒಬ್ಬರೇ ಲೇಖಕರು ಬೇರೆ ಬೇರೆ ಹೆಸರುಗಳಿಂದ ಬರೆಯುತ್ತಿದ್ದರು.
  • ಉದಾಹರಣೆಗೆ ನಾಕ. ರೇವಣ್ಣ, ಪಾಟಾಳಿ, ಕರೀಂ ಖಾನ್ ಎಲ್ಲಾ ನಾ.ಕಸ್ತೂರಿಯೇ. ರಾಶಿಯವರು ಪಾಪಿ, ಬಚ್ಚಾ ಎನ್ನುವ ಹೆಸರುಗಳಿಂದಾಗಿ ಬರೆಯುತ್ತಿದ್ದರು. 'ಕುಹಕಿಡಿಗಳು' ಮತ್ತು 'ಉರಿಗಾಳು' ಎಂಬ ಅಂಕಣದಲ್ಲಿ ರಾಶಿಯವರು ವರ್ತಮಾನದ ವಿಷಯಗಳನ್ನು ಕುರಿತು ಚುಟುಕಾಗಿ ವಿಡಂಬನೆ ಮಾಡುತ್ತಿದ್ದರು. ತುಷಾರ ಮಾಸಪತ್ರಿಕೆಯಲ್ಲಿ ರಾಶಿಯವರು ಬರೆಯುತ್ತಿದ್ದ ತಿಂಗಳ ತಿಳಿಗಾಳು ಎಂಬ ಅಂಕಣ ಜನಪ್ರಿಯವಾಗಿತ್ತು.
  • ಕೊರವಂಜಿಯ ಪ್ರಾರಂಭದ ವರ್ಷಗಳಲ್ಲಿ ಆಗಿನ್ನೂ ವಿದ್ಯಾರ್ಥಿಯಾಗಿದ್ದ ಆರ್.ಕೆ.ಲಕ್ಷ್ಮಣ್ ರ ವ್ಯಂಗ್ಯ ಚಿತ್ರಗಳು ಪ್ರಕಟವೂ ಆದವು. ಕಾಲಕ್ರಮೇಣ ಟಿ.ಸುನಂದಮ್ಮ , ದಾಶರಥಿ ದೀಕ್ಷಿತ್, ಅರಾಸೆ, ಕೇಫ ಅವರುಗಳ ಲೇಖನಗಳು ಬರತೊಡಗಿದವು. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಬಿ ಜಿ ಎಲ್ ಸ್ವಾಮಿ ಯವರ 'ಮೀನಾಕ್ಷಿಯ ಸೌಗಂಧ' ಎಂಬ ನೀಳ್ಗವನ ಮತ್ತು ಬುಳ್ಳ (ವೇದಾಂತಂ ಶ್ರೀನಿವಾಸ್) ಅವರ 'ಊಟೋಪಚಾರ' ಎಂಬ ನಗೆಬರಹ ತುಂಬಾ ಜನಪ್ರಿಯವಾಗಿದ್ದವು. ೧೯೬೬ ರಲ್ಲಿ ಕೊರವಂಜಿ ಪತ್ರಿಕೆಯ ಪ್ರಕಟಣೆ ಅಂತ್ಯವಾಯಿತು.

ರಾಶಿಯವರ ಕೃತಿಗಳು[ಬದಲಾಯಿಸಿ]

ರಾಶಿಯವರು ಅನೇಕ ನಗೆಬರಹಗಳು, ನಗೆಹನಿಗಳು, ಆರೋಗ್ಯ , ಕಥೆಗಳು, ಕಾದಂಬರಿಗಳು, ವೈಚಾರಿಕ ಲೇಖನಗಳು, ಮೊದಲಾದವನ್ನು ರಚಿಸಿದ್ದಾರೆ.

ನಗೆಬರಹಗಳು[ಬದಲಾಯಿಸಿ]

  1. ತುಟಿ ಮೀರುದುದು
  2. ಕೆಣಕೋಣು ಬಾ
  3. ಇಂದಾನೊಂದು ಕಾಲದಲ್ಲಿ
  4. ಕೊರವಂಜಿಯ ಪಡುವಣ ಯಾತ್ರೆ
  5. ನಗುಸರಸಿ ಅಪ್ಸರೆಯರು
  6. ಕೊರವಂಜಿ ಕಂಡ ನಗು ಸಮಾಜ
  7. ಕೊರವಂಜಿ ಕಂಡ ನಗು ವ್ಯಕ್ತಿಗಳು
  8. ಕೊರವಂಜಿ ಕಂಡ ನಗು ದರ್ಬಾರಿಗಳು
  9. ಕೊರವಂಜಿ ಕಂಡ ನಗು ಸಂಸಾರಿಗಳು

ನಗೆಹನಿಗಳು[ಬದಲಾಯಿಸಿ]

  1. ಥಳುಕು ತುಣುಕು
  2. ನಗೆಗೆರೆ ಚಿತ್ರಗಳು
  3. ನಗು

ಕಳ್ಳರ ಕಥೆಗಳು[ಬದಲಾಯಿಸಿ]

  1. ಜಗ್ಗೋ

ಜಿ

  1. ಬುದ್ದೋಜಿ

ದೆವ್ವಗಳ ಕಥೆಗಳು[ಬದಲಾಯಿಸಿ]

  1. ಪೋಂತಿಯಾಗೋ
  2. ಅಂಚೆಪೇದೆಯ ಅಂತರ್ ಹೆಂಡತಿ

ದೈಹಿಕ ಆರೋಗ್ಯ[ಬದಲಾಯಿಸಿ]

  1. ಅಲರ್ಜಿ
  2. ಆದರ್ಶ ಆರೋಗ್ಯ
  3. ನಮ್ಮ ಅಡಿಗೆ ಪಥ್ಯದ ಊಟ

ಮಾನಸಿಕ ಆರೋಗ್ಯ[ಬದಲಾಯಿಸಿ]

  1. ಮನೋನಂದನ
  2. ಮನಮಂಥನ -ಮನಮಂಥನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಿಕ್ಕಿತು.
  3. ಭಯ: ಸರಳ ವಿಶ್ಲೇಷಣೆ

ವಿಚಾರ ಸಾಹಿತ್ಯ[ಬದಲಾಯಿಸಿ]

  1. ಮನನ
  2. ಮೃಗಶಿರ ಕಾಲ
  3. ಪಶ್ಯಾಮಿ ಕಥೆಗಳು
  4. ಯೋಚಿಸಿದರೆ

ವ್ಯಕ್ತಿ ಚಿತ್ರಗಳು[ಬದಲಾಯಿಸಿ]

  1. ಜಿ.ಪಿ.ರಾಜರತ್ನಂ
  2. ಟಿ.ಪಿ.ಕೈಲಾಸಂ

ಕಾದಂಬರಿಗಳು[ಬದಲಾಯಿಸಿ]

  1. ಪಂಪಾಪತಿಯ ಕೃಪೆ
  2. ಹರಿದ ಉಯಿಲು
  3. ಮಧುವನದಲ್ಲಿ ಮೇಳ
  4. ಕಾರ್ತೀಕ ಸೋಮವಾರ

ಕವನ ಸಂಗ್ರಹ[ಬದಲಾಯಿಸಿ]

  • ಸಾಕ್ಷಿ ಸಂಕಲಿಕೆ

ಇಂಗ್ಲೀಷ್ ಕೃತಿಗಳು[ಬದಲಾಯಿಸಿ]

  1. Kailasam & I
  2. Ananda & Experience
  3. Ananda & the great three Acharyas
  4. Death & Nachiketas
  5. Moral & Health

ಪ್ರಶಸ್ತಿಗಳು[ಬದಲಾಯಿಸಿ]

  1. ೧೯೭೪ ರಲ್ಲಿ ರಾಜ್ಯ ಸಾಹಿತ್ತ್ಯ ಅಕೆಡಮಿ ಪ್ರಶಸ್ತಿ
  2. ೧೯೭೬ ರಲ್ಲಿ ಕೇಂದ್ರ ಸಾಹಿತ್ಯ ಅಕೆಡಮಿ ಪ್ರಶಸ್ತಿ


ಉಲ್ಲೇಖಗಳು[ಬದಲಾಯಿಸಿ]

  1. http://www.sallapa.com/2013/11/blog-post_5971.html
  2. http://kannada.oneindia.com/news/2005/11/06/rashi.html
  3. http://www. prajavani.net/news/article/2013/ 05/ 14/168889.html
  4. http://aparanjimag.in/php/about.php
  5. "ಆರ್ಕೈವ್ ನಕಲು". Archived from the original on 2020-09-23. Retrieved 2017-08-05.
  6. https://ommeodinodi.wordpress.com/tag/%E0%B2%B0%E0%B2%BE-%E0%B2%B6%E0%B2%BF/