ಎ.ಎನ್.ಮೂರ್ತಿರಾವ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಎ.ಎನ್.ಮೂರ್ತಿರಾಯರು'

ಡಾ. ಎ.ಎನ್.ಮೂರ್ತಿ ರಾವ್ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾಯರು) (ಜೂನ್. ೧೬ ೧೯೦೦ - ೨೪ ಆಗಸ್ಟ್ ೨೦೦೩)- ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಬರಿಯ ಶತಾಯುಷಿಯಷ್ಟೇ ಅಲ್ಲದೇ, ಮೂರು ಶತಮಾನಗಳಲ್ಲಿ ( ೧೯,೨೦,೨೧ನೆಯ ಶತಮಾನಗಳು) ಬದುಕಿದ ಅತ್ಯಂತ ಅಪರೂಪದ ವ್ಯಕ್ತಿ.

ಪರಿವಿಡಿ

[ಬದಲಾಯಿಸಿ] ಜನನ,ಮೂರ್ತಿರಾಯರ ಪರಿವಾರ

ಮಂಡ್ಯ ಜಿಲ್ಲೆಯ "ಅಕ್ಕಿಹೆಬ್ಬಾಳು", ಅವರ ಜನ್ಮಸ್ಥಳ. ತಂದೆ-ತಾಯಿಗಳು : ಶ್ರೀ ಎ. ಸುಬ್ಬರಾವ್, ಶ್ರೀಮತಿ ಪುಟ್ಟಮ್ಮ, ಹೆಂಡತಿ- ಶ್ರೀಮತಿ ಜಯಲಕ್ಷ್ಮಿ, (ಮೂರ್ತಿರಾಯರ ರಚನೆಗಳಲ್ಲಿ 'ಲಲಿತೆ,' ಯೆಂದು ಸಂಬೋಧಿಸಲ್ಪಡುತ್ತಾರೆ.) ಮಕ್ಕಳು :

  • 'ಎ. ಎನ್. ಸುಬ್ಬರಾಮಯ್ಯ',
  • 'ಎ. ಎನ್. ನಾಗರಾಜ್',
  • 'ಎ. ಎನ್ ರಾಮಚಂದ್ರರಾವ್,'

[ಬದಲಾಯಿಸಿ] ವಿದ್ಯಾಭ್ಯಾಸ

'ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲು'. 'ಮೈಸೂರಿನ ಮಹಾರಾಜಾ ಕಾಲೇಜಿ'ನಲ್ಲಿ ಎಂ. ಎ ; (ಇಂಗ್ಲೀಷ್ ಸಾಹಿತ್ಯದಲ್ಲಿ)

[ಬದಲಾಯಿಸಿ] ವೃತ್ತಿ

೧. ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಉಪಾಧ್ಯಾಯವೃತ್ತಿ- ೧೯೨೫-೧೯೨೭ ೨. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕ-೧೯೨೭-೧೯೪೦ ೩. ಶಿವಮೊಗ್ಗದ ಇಂಟರ್ಮೀಡಿಯೆಟ್ ಕಾಲೇಜಿನಲ್ಲಿ ಉಪಪ್ರಾಧ್ಯಾಪಕ-೧೯೪೦-೧೯೪೩

[ಬದಲಾಯಿಸಿ] ಗೌರವಕೆಲಸಗಳು

೧. ಕಾರ್ಯದರ್ಶಿ, ಕನ್ನಡಸಾಹಿತ್ಯ ಪರಿಷತ್ತು-೧೯೫೪ ೨. ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು-೧೯೫೪-೫೬ ೩. ಕೇಂದ್ರ ಸಾಹಿತ್ಯ ಅಕ್ಯಾಡಮಿಯ ಕನ್ನಡ ಸಲಹ ಸಮಿತಿಯ ಕನ್ವೀನರ್ ಛೇರ್ಮನ್ ೪. ದಕ್ಷಿಣ ಭಾಷಾ ಪುಸ್ತಕ ಟ್ರಸ್ಟ್ ನ ಕನ್ನಡ ಕನ್ವೀನರ್- ಛೇರ್ಮನ್ ೫. ಭಾರತೀಯ ಆಕಾಶ್ ವಾಣಿ ಯ 'ಕೇಂದ್ರೀಯ ಕಾರ್ಯಕ್ರಮಗಳ ಸಲಹಾಕಮಿಟಿ', ಯ ಸದಸ್ಯರಾಗಿ ೪ ವರ್ಷಗಳಕಾಲ ಸೇವೆ.

ಪ್ರಬಂಧಗಳ ಮೂಲಕ ಇವರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ೧೯೩೭ರಲ್ಲಿ ಇವರ ಮೊದಲ ಕೃತಿ "ಹೂವುಗಳು"(ಪ್ರಬಂಧ ಸಂಕಲನ) ಪ್ರಕಟವಾಯಿತು. ಎಂಟು ಪ್ರಬಂಧಗಳ ಈ ಸಂಕಲನವು ಇಂದಿಗೂ ಒಂದು ಮಾದರಿ ಕೃತಿಯಾಗಿದೆ. ವೈಚಾರಿಕ ನಾಸ್ತಿಕವಾದಿಯಾದ ರಾಯರ "ದೇವರು" ಎಂಬ ಕೃತಿಗೆ "ಪಂಪ" ಪ್ರಶಸ್ತಿ ಲಬಿಸಿದೆ ಮತ್ತು ಆಂಗ್ಲ ಭಾಷೆಗೆ ತರ್ಜುಮೆಯಾಗಿ ವಿಶ್ವಪ್ರಸಿಧ್ಧವಾಗಿದೆ.

[ಬದಲಾಯಿಸಿ] ಕನ್ನಡ ಕೃತಿಗಳು

[ಬದಲಾಯಿಸಿ] ಅನುವಾದಗಳು

  • 'ಸಾಕ್ರೆಟೀಸನ ಕೊನೆಯ ದಿನಗಳು' (ಪ್ಲೇಟೋನ 'Enthyphro','Crito',Apology',Phaedo'-ಸಂವಾದಗಳ ಅನುವಾದ)
  • 'ಹವಳದ ದ್ವೀಪ (ಆರ.ಎಂ.ಬ್ಯಾಲಂಟಯಿನ್ ನ 'The Coral Island' ನ ಸಂಗ್ರಹಾನುವಾದ)
  • 'ಯೋಧನ ಪುನರಾಗಮನ'(ಅನುವಾದಿತ ಕಥೆಗಳು)
  • 'ಪಾಶ್ಚಾತ್ಯ ಸಣ್ಣ ಕಥೆಗಳು' (ಅನುವಾದಿತ ಕಥೆಗಳು)
  • 'ಅಮೆರಿಕನ್ ಸಾಹಿತ್ಯ ಚರಿತ್ರೆ'
  • 'ಇಂಡಿಯ, ಇಂದು ಮತ್ತು ನಾಳೆ' (ಜವಹರಲಾಲ್ ನೆಹರೂರ 'India Today and Tomorrow' ಪುಸ್ತಕದ ಅನುವಾದ)
  • 'ಚಂಡಮಾರುತ '(ಶೇಕ್ಸ್ ಪಿಯರ್' ನ ' The Tempest' ಅನುವಾದ)

[ಬದಲಾಯಿಸಿ] ಲಲಿತ ಪ್ರಬಂಧಗಳು

  • 'ಹಗಲುಗನಸುಗಳು'
  • 'ಮಿನುಗು ಮಿಂಚು'
  • 'ಅಲೆಯುವ ಮನ'
  • 'ಜನತಾ ಜನಾರ್ದನ'
  • 'ಸಮಗ್ರ ಲಲಿತ ಪ್ರಬಂಧಗಳು'
  • 'ಸಮಗ್ರ ಲಲಿತ ಪ್ರಬಂಧಗಳು '(ವಿಸ್ತ್ರತ ಆವೃತ್ತಿ)

[ಬದಲಾಯಿಸಿ] ರೂಪಾಂತರಗಳು

  • 'ಆಷಾಢಭೂತಿ '(ಮೋಲಿಯರನ 'ತಾರ್ತುಫ್'ನಾಟಕದ ರೂಪಾಂತರ).

"ಆಶಾಡಭೂತಿ "ಯನ್ನು ಆಧರಿಸಿ ಎಂ.ವಿ.ಕೃಷ್ಣಸ್ವಾಮಿಯವರು ಸುಬ್ಬಾಶಾಸ್ತ್ರಿಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ.ನಮನ

[ಬದಲಾಯಿಸಿ] ವಿಮರ್ಶೆ

  • 'ಷೇಕ್ಸ್ ಪಿಯರ್'-ಪೂರ್ವಭಾಗ
  • 'ಮಾಸ್ತಿಯವರ ಕಥೆಗಳು'
  • 'ಪೂರ್ವ ಸೂರಿಗಳೊಡನೆ'
  • 'ಸಾಹಿತ್ಯ ಮತ್ತು ಸತ್ಯ'
  • 'ವಿಮರ್ಶಾತ್ಮಕ ಪ್ರಬಂಧಗಳು',

[ಬದಲಾಯಿಸಿ] ಇತರ

  • 'ಚಿತ್ರಗಳು ಪತ್ರಗಳು'
  • 'ಬಿ.ಎಂ.ಶ್ರೀಕಂಠಯ್ಯ' (ವಿಮರ್ಶಾತ್ಮಕ ಜೀವನ ಚರಿತ್ರೆ)
  • 'ಅಪರವಯಸ್ಕನ ಅಮೆರಿಕಾ ಯಾತ್ರೆ' (ಪ್ರವಾಸ ಕಥನ)
  • 'ಸಂಜೆಗಣ್ಣಿನ ಹಿನ್ನೋಟ' (ಆತ್ಮಚರಿತ್ರೆ)
  • 'ದೇವರು (ವಿಚಾರ)
  • 'ಜನತಾ ಜನಾರ್ದನ' (ಲೇಖನಗಳು)
  • 'ಗಾನ ವಿಹಾರ' (ಲೇಖನಗಳು)
  • 'ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ'

[ಬದಲಾಯಿಸಿ] ಪುರಸ್ಕಾರಗಳು

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು