ಎಸ್.ವಿ.ರಂಗಣ್ಣ
ಎಸ್.ವಿ.ರಂಗಣ್ಣನವರು ೧೮೯೮ ಡಿಸೆಂಬರ ೨೪ ರಂದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಹುಟ್ಟಿದರು. ತಂದೆ ವೆಂಕಟಸುಬ್ಬಯ್ಯ, ತಾಯಿ ವೆಂಕಟಲಕ್ಷ್ಮಮ್ಮ.೧೯೨೧ರಲ್ಲಿ ಎಮ್.ಏ.ಪದವಿ ಪಡೆದ ರಂಗಣ್ಣನವರು ಅಗಲೆ ಅಲ್ಲಿ ಅಧ್ಯಾಪಕರಾಗಿದ್ದರು. ೧೯೫೪ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು.
ರಂಗಣ್ಣನವರು ತಮ್ಮ ವಿಮರ್ಶಾಕೃತಿಗಳಿಗಾಗಿ ಹೆಸರಾದವರು.
ಕನ್ನಡ ಕೃತಿಗಳು [ಬದಲಾಯಿಸಿ]
- ಕುಮಾರವ್ಯಾಸ
- ಶೈಲಿ
- ಹೊನ್ನಶೂಲ
- ಪಾಶ್ಚಾತ್ಯ ಗಂಭೀರ ನಾಟಕಗಳು
- ರಂಗಬಿನ್ನಪ
- ಕವಿಕಥಾಮೃತ
- ಕೋಲ್ ಕೋಲ್ ಕೂಡಿ ಬರಲಿ
- ಕುಮಾರವ್ಯಾಸ ವಾಣಿ
- ವಿಡಂಬನೆ
- ಹಾಸ್ಯ
ಇಂಗ್ಲಿಷ್ ಕೃತಿಗಳು [ಬದಲಾಯಿಸಿ]
- ಬಿ.ಎಂ.ಶ್ರೀಕಂಠಯ್ಯ
- ಓಲ್ಡ ಟೇಲ್ಸ್ ರಿಟೋಲ್ಡ
- ಆನ್ ದಿ ಸೆಲ್ಫ್
ಪುರಸ್ಕಾರ [ಬದಲಾಯಿಸಿ]
‘ ರಂಗಬಿನ್ನಪ’ ಕೃತಿಗೆ ೧೯೬೫ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ.
ರಂಗಣ್ಣನವರು ೧೯೭೬ ರಲ್ಲಿ ಶಿವಮೊಗ್ಗಾದಲ್ಲಿ ಜರುಗಿದ ೪೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಎಸ್.ವಿ.ರಂಗಣ್ಣ ಅವರಿಗೆ ೫೫ ವರ್ಷ ತುಂಬಿದ ಮತ್ತು ಸರ್ಕಾರಿ ಸೇವೆಯಿಂದ ವಿಶ್ರಾಂತಿ ಪಡೆದ ಸಂದರ್ಭದಲ್ಲಿ ೧೯೫೪ರ ಜನವರಿ ೨೬ರಂದು, ಅವರ ಮಿತ್ರರೂ ಶಿಷ್ಯರೂ ಒಪ್ಪಿಸಿದ ಸ್ಮರಣ ಸಂಚಿಕೆ ಬಾಗಿನ. ಇದರ ಸಂಪಾದಕತ್ವವನ್ನು ನೀನಾಸಂ, ಹೆಗ್ಗೋಡುವಿನ ಕೆ.ವಿ.ಸುಬ್ಬಣ್ಣ ಹಾಗೂ ಹೆಸರಾಂತ ಪ್ರಾಧ್ಯಾಪಕ, ಅಂಕಣಕಾರ ಹಾ.ಮಾ.ನಾಯಕ ವಹಿಸಿಕೊಂಡಿದ್ದರು.
ಎಸ್.ವಿ.ರಂಗಣ್ಣನವರು ೧೯೮೭ರಲ್ಲಿ ನಿಧನರಾದರು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |