ವಿಷಯಕ್ಕೆ ಹೋಗು

ಮ್ಯಾಂಡ್ರಿಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಂಡ್ರಿಲ್
ಬರ್ಲಿನ್ ಮೃಗಾಲಯದಲಿ ಗಂಡು ಮ್ಯಾಂಡ್ರಿಲ್
Conservation status
CITES Appendix I (CITES)[]
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಪ್ರೈಮೇಟ್ಸ್
ಕುಟುಂಬ: ಸರ್ಕೋಪಿತೇಸಿಡೇ
ಕುಲ: ಮ್ಯಾಂಡ್ರಿಲಸ್
ಪ್ರಜಾತಿ:
M. sphinx
Binomial name
Mandrillus sphinx
ಮ್ಯಾಂಡ್ರಿಲ್ ವಿತರಣೆ
Synonyms

Simia sphinx Linnaeus, 1758

ಮ್ಯಾಂಡ್ರಿಲ್ ಪಶ್ಚಿಮ ಆಫ್ರಿಕದ ಸಮಭಾಜಕರೇಖೆಯ ಪ್ರದೇಶದಲ್ಲಿ ಕಾಣಬರುವ ಒಂದು ಜಾತಿಯ ಕೋತಿಪ್ರೈಮೇಟ್ ಗಣದ ಸರ್ಕೊಪೈಸಿಡೀ ಕುಟುಂಬಕ್ಕೆ ಸೇರಿದೆ. ಜಾತಿಯ ವೈಜ್ಞಾನಿಕ ಹೆಸರು ಮ್ಯಾಂಡ್ರಿಲಸ್. ಇದರಲ್ಲಿ ಮ್ಯಾ. ಸ್ಫಿಂಕ್ಸ್ (ಮ್ಯಾಂಡ್ರಿಲ್) ಮತ್ತು ಮ್ಯಾ. ಲ್ಯೂಕೊಫಿಯಸ್ (ಡ್ರಿಲ್) ಎಂಬ ಎರಡು ಬಗೆಗಳುಂಟು. ದಟ್ಟಕಾಡುಗಳಲ್ಲಿ ಇವುಗಳ ವಾಸವಾದರೂ ಕಾಲಕಳೆಯುವುದು ಹೆಚ್ಚಾಗಿ ನೆಲದ ಮೇಲೆಯೇ.

ದೇಹರಚನೆ

[ಬದಲಾಯಿಸಿ]

ಇವುಗಳಲ್ಲಿ ಹೆಚ್ಚು ದೃಢಕಾಯದ ಕೋತಿ ಎನಿಸಿದ ಮ್ಯಾಂಡ್ರಿಲ್ ಕೋತಿಯ ದೇಹ ತಲೆಯೂ ಸೇರಿದಂತೆ 60-75 ಸೆಂ.ಮೀ ಉದ್ದ ಇದೆ. ಬಾಲ ಮೋಟು 5-7.5 ಸೆಂ.ಮೀ. ಉದ್ದದ್ದು.[][] ಯಾವಾಗಲೂ ನೆಟ್ಟಗೆ ನಿಂತಂತೆ ಇರುತ್ತದೆ. ಕೋತಿಯ ತೂಕ ಸುಮಾರು 54 ಕಿ.ಗ್ರಾಂ. ಮ್ಯಾಂಡ್ರಿಲ್ಲಿನ ದೇಹದ ಬಣ್ಣ ಬೆನ್ನಭಾಗದಲ್ಲಿ ಹಸುರುಮಿಶ್ರಿತ ಕಂದು, ಹೊಟ್ಟೆಭಾಗದಲ್ಲಿ ಹಳದಿ, ಮ್ಯಾಂಡ್ರಿಲ್ಲಿನ ದೇಹ ಕೆಂಚು. ಎರಡು ಬಗೆಗಳಲ್ಲೂ ಗಡ್ಡ, ಶಿಖೆ ಮತ್ತು ಅಯಾಲುಗಳುಂಟು.[] ಅಂತೆಯೇ ಎರಡರಲ್ಲೂ ಮೂಗಿನ ಮೂಳೆಯ ಆಚೀಚೆ ಮುಖದಲ್ಲಿ ಏಣುಗಳಿವೆ. ಮ್ಯಾಂಡ್ರಿಲ್ಲಿನ ಮುಖದಲ್ಲಿ ಆಚೀಚೆ ಒಂದು ಮುಖ್ಯ ಏಣೂ ಅದಕ್ಕೆ ಸೇರಿದಂತೆ ಆರು ತೋಡುಗಳೂ ಉಂಟು. ಇದರ ಮೇಲೆ ಇರುವ ಚರ್ಮ ಊದಾ ಮತ್ತು ನೀಲಿ ಬಣ್ಣದಾಗಿದ್ದು[] ಮೂಗಿನ ಏಣು ತುದಿ ಮತ್ತು ಬಾಯಿಗಳು ಉಜ್ಜ್ವಲ ಕೆಂಪು ಬಣ್ಣಕ್ಕಿವೆಯಾಗಿ ಇಡೀ ಮುಖ ಎದ್ದು ಕಾಣುವಂತಿದೆ. ಹೆಣ್ಣಿನ ಮುಖದಲ್ಲಿ ಈ ವರ್ಣವೈವಿಧ್ಯ ಇಲ್ಲ. ಮ್ಯಾಂಡ್ರಿಲ್ಲಿನ ಮೂತಿಯಲ್ಲಿ ಕೇವಲ ಎರಡು ಉಬ್ಬುಗಳಿವೆ ಮತ್ತು ಇದರ ಬಣ್ಣ ಕಪ್ಪು, ಆದರೆ ಎರಡು ಪ್ರಭೇದಗಳಲ್ಲೂ ಪೃಷ್ಠಭಾಗ ಕೆಂಪುಮಿಶ್ರಿತ ಊದಾಬಣ್ಣದ್ದಾಗಿದೆ.

ಸ್ವಭಾವ

[ಬದಲಾಯಿಸಿ]

ಮ್ಯಾಂಡ್ರಿಲ್‌ಗಳು ತುಂಬ ಬಲಶಾಲಿ ಹಾಗೂ ಧೈರ್ಯಶಾಲಿಗಳು. ಜೊತೆಗೆ ಬಲು ಹರಿತವಾದ ಹಲ್ಲುಗಳಿರುವುದರಿಂದ ಸಂದರ್ಭ ಬಂದಾಗ ವೈರಿಗಳೊಂದಿಗೆ ಉಗ್ರವಾಗಿ ಕಾದಾಡಬಲ್ಲವು. ಇವು ದೊಡ್ಡ ದೊಡ್ಡ ಗುಂಪುಗಳಲ್ಲಿ ಜೀವನ ನಡೆಸುವುವು. ವಯಸ್ಸಾದ ಗಂಡು ಗುಂಪಿಗೆ ನಾಯಕ.

ಆಹಾರ, ಆಯಸ್ಸು

[ಬದಲಾಯಿಸಿ]

ಇವು ಸರ್ವಭಕ್ಷಿಗಳು. ಗೆಡ್ಡೆ ಬೇರುಗಳಿಂದ ಹಿಡಿದು ಕೀಟ, ಕಪ್ಪೆ, ಓತಿ, ಹಾವು ಮುಂತಾದವನ್ನೂ ತಿನ್ನುತ್ತವೆ. ಇವುಗಳ ಆಯಸ್ಸು ಸುಮಾರು 32-40 ವರ್ಷಗಳೆನ್ನಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Abernethy, K.; Maisels, F. (2019). "Mandrillus sphinx". IUCN Red List of Threatened Species. 2019: e.T12754A17952325. doi:10.2305/IUCN.UK.2019-3.RLTS.T12754A17952325.en. Retrieved 19 November 2021.
  2. Linné, C. v. (1758). "Simia sphinx". Systema naturæ. Regnum animale. Vol. 1 (10th ed.). Sumptibus Guilielmi Engelmann. p. 25.
  3. ೩.೦ ೩.೧ Dixson 2015, p. 16.
  4. Kingdon, Jonathan (2015). The Kingdon Field Guide to African Mammals. Bloomsbury Publishing. p. 129. ISBN 978-1-4729-1236-7.
  5. Dixson 2015, p. 17.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: