ಮಹಾಬಲ ಸೀತಾಳಭಾವಿ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮಹಾಬಲ ಸೀತಾಳಭಾವಿಯವರು ಉತ್ತರಕನ್ನಡದ ಸಿದ್ಧಾಪುರದಲ್ಲಿ ೧೯೮೩ರಲ್ಲಿ ಜನಿಸಿದರು. ಇವರು ಯುವ ಪತ್ರಕರ್ತರಾಗಿ, ವಿದ್ವಾಂಸರಾಗಿ ಪ್ರಸಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]ಮಹಾಬಲ ಸೀತಾಳಭಾವಿಯವರ ತಂದೆಯ ಹೆಸರು ವಿಶ್ವೇಶ್ವರ ಭಟ್ ಸೀತಾಳಭಾವಿ. ಬಾಲ್ಯದಿಂದಲೂ ಅವರಿಗೆ ಸಿನಿಮಾ ಹಾಗೂ ಸಾಹಿತ್ಯ ವಿಚಾರಗಳಲ್ಲಿ ಆಸಕ್ತಿ ಇತ್ತು. ಇವರು ಸಂಸ್ಕೃತ ಹಾಗೂ ಆಂಗ್ಲ ಭಾಷೆಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಶಿಕ್ಷಣ
[ಬದಲಾಯಿಸಿ]ಮಹಾಬಲ ಸೀತಾಳಭಾವಿಯವರು ತಮ್ಮ ಉನ್ನತ ವಿದ್ಯಾಬ್ಯಾಸವನ್ನು ಮೈಸೂರಿನಲ್ಲಿ ಪಡೆದರು. ಅವರು ಸಂಸ್ಕ್ರತ ತರ್ಕಶಾಸ್ತ್ರ ವಿದ್ವತ್ ,ಮಾಧ್ಯಮ ಹಾಗು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದರು.
ವೃತ್ತಿ ಜೀವನ
[ಬದಲಾಯಿಸಿ]ಉದಯ ಟಿವಿ, ಸುವರ್ಣ ನ್ಯೂಸ್ ವಾಹಿನಿಗಳಲ್ಲಿ ಹಾಗೂ ಉದಯವಾಣಿಯಲ್ಲಿ ದುಡಿದಿರುವ ಅವರು ಪ್ರಸ್ತುತ ಕನ್ನಡಪ್ರಭ ದೈನಿಕದ ಉಪ ಸುದ್ದಿ ಸಂಪಾದಕರಾಗಿದ್ಧಾರೆ. ಇವರ ಪತ್ನಿ ರೇಖಾ, ಮಗಳು ಸುಷೀಮಾ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.[೧]
ಆಸಕ್ತಿಯ ಕ್ಷೇತ್ರಗಳು
[ಬದಲಾಯಿಸಿ]- ಸಂಸ್ಕ್ರತ
- ಕನ್ನಡ
- ಆಂಗ್ಲ ಸಾಹಿತ್ಯ
- ವಿದೇಶಿ ಸಿನಿಮಾ
- ಛಾಯಗ್ರಹಣ
ಮುಖ್ಯ ಕೃತಿಗಳು
[ಬದಲಾಯಿಸಿ]- ನಿತ್ಯಜೀವನಕ್ಕೆ ಹತ್ತಿರದ ಸುಭಾಷಿತಗಳು
- ನೂರೆಂಟು ಸುಭಾಷಿತಗಳು
- ಮ್ಯಾನೇಜ್ಮೆಂಟ್ ಭಗವದ್ಗೀತೆ
- ಚಾಣಕ್ಯನೀತಿ
- ಆಂಟನ್ ಚೆಕಾಫ್ ಕಥೆಗಳು
- ಲೋಕಪಾಲ: ಯಾಕಿಷ್ಟು ಗೊಂದಲ
- ನಾಯಕತ್ವದ ದಾರಿ ಪಂಚತಂತ್ರದ ಮಾದರಿ
- ಚಾಟು ಕವಿತೆಗೆ ಚುಟುಕು ಕತೆ
- ವಾರನ್ ಬಫೆಟ್
- ವಂದನಾಶಿವ
- ಸುಂದರಲಾಲ ಬಹುಗುಣ
- ೧೦೮ ಹಳೆ ಆಚಾರ ಹೊಸ ವಿಚಾರ
- ಮ್ಯಾನೇಜ್ಮೆಂಟ್ ಕತೆಗಳು
- ಇಂಟರ್ನೆಟ್ ಕಥೆಗಳು[೨]
ಅನುವಾದಿಸಿದ ಕೃತಿಗಳು
[ಬದಲಾಯಿಸಿ]- ಪ್ರಿಯಂವದೆಯ ಸ್ವಗತ ಹಿಂದಿಗೆ ಅನುವಾದಗೊಂಡಿದೆ
- ಆಂಟನ್ ಚೆಕಾಫ್ ಕಥೆಗಳು
- ಭಾಸನ ಐದು ನಾಟಕಗಳು
- ಅಭಿಜ್ಞಾನ ಶಾಕುಂತಲ
ಪ್ರಶಸ್ತಿಗಳು
[ಬದಲಾಯಿಸಿ]- ಚೆನೈ ಅಂತರಾಷ್ಟ್ರೀಯ ಕಿರುಚಿತ್ರ ಮಂಡಳಿಯ ಪ್ರಶಂಸೆ
- ಮುಂಬೈ,ದೆಹಲಿ ಹಾಗೂ ಅಮೇರಿಕಾ ಕನ್ನಡ ಸಂಘದ ಪ್ರಶಸ್ತಿ
- ೨೦೦೫ರ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತ ಸಂಘದ ಪ್ರಶಸ್ತಿ (೨೦೦೫)
- ಛಾಯಗ್ರಹಣಕ್ಕೆ ಎರಡು ಬಾರಿ ರಾಜ್ಯ ಪ್ರಶಸ್ತಿ[೩]