ಮಹಾಬಲ ಸೀತಾಳಭಾವಿ

ವಿಕಿಪೀಡಿಯ ಇಂದ
Jump to navigation Jump to search


ಮಹಾಬಲ ಸೀತಾಳಭಾವಿಯವರು ಉತ್ತರಕನ್ನಡದ ಸಿದ್ಧಾಪುರದಲ್ಲಿ ೧೯೮೩ರಲ್ಲಿ ಜನಿಸಿದರು. ಇವರು ಯುವ ಪತ್ರಕರ್ತರಾಗಿ, ವಿದ್ವಾಂಸರಾಗಿ ಪ್ರಸಿದ್ದರು.

ಆರಂಭಿಕ ಜೀವನ[ಬದಲಾಯಿಸಿ]

ಮಹಾಬಲ ಸೀತಾಳಭಾವಿಯವರ ತಂದೆಯ ಹೆಸರು ವಿಶ್ವೇಶ್ವರ ಭಟ್ ಸೀತಾಳಭಾವಿ. ಬಾಲ್ಯದಿಂದಲೂ ಅವರಿಗೆ ಸಿನಿಮಾ ಹಾಗೂ ಸಾಹಿತ್ಯ ವಿಚಾರಗಳಲ್ಲಿ ಆಸಕ್ತಿ ಇತ್ತು. ಇವರು ಸಂಸ್ಕೃತ ಹಾಗೂ ಆಂಗ್ಲ ಭಾಷೆಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಶಿಕ್ಷಣ[ಬದಲಾಯಿಸಿ]

ಮಹಾಬಲ ಸೀತಾಳಭಾವಿಯವರು ತಮ್ಮ ಉನ್ನತ ವಿದ್ಯಾಬ್ಯಾಸವನ್ನು ಮೈಸೂರಿನಲ್ಲಿ ಪಡೆದರು. ಅವರು ಸಂಸ್ಕ್ರತ ತರ್ಕಶಾಸ್ತ್ರ ವಿದ್ವತ್ ,ಮಾಧ್ಯಮ ಹಾಗು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದರು.

ವೃತ್ತಿ ಜೀವನ[ಬದಲಾಯಿಸಿ]

ಉದಯ ಟಿವಿ, ಸುವರ್ಣ ನ್ಯೂಸ್ ವಾಹಿನಿಗಳಲ್ಲಿ ಹಾಗೂ ಉದಯವಾಣಿಯಲ್ಲಿ ದುಡಿದಿರುವ ಅವರು ಪ್ರಸ್ತುತ ಕನ್ನಡಪ್ರಭ ದೈನಿಕದ ಉಪ ಸುದ್ದಿ ಸಂಪಾದಕರಾಗಿದ್ಧಾರೆ. ಇವರ ಪತ್ನಿ ರೇಖಾ, ಮಗಳು ಸುಷೀಮಾ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.[೧]

ಆಸಕ್ತಿಯ ಕ್ಷೇತ್ರಗಳು[ಬದಲಾಯಿಸಿ]

ಪ್ರವಾಸ

 • ಛಾಯಗ್ರಹಣ

ಮುಖ್ಯ ಕೃತಿಗಳು[ಬದಲಾಯಿಸಿ]

 • ನಿತ್ಯಜೀವನಕ್ಕೆ ಹತ್ತಿರದ ಸುಭಾಷಿತಗಳು
 • ನೂರೆಂಟು ಸುಭಾಷಿತಗಳು
 • ಮ್ಯಾನೇಜ್ಮೆಂಟ್ ಭಗವದ್ಗೀತೆ
 • ಚಾಣಕ್ಯನೀತಿ
 • ಆಂಟನ್ ಚೆಕಾ‌ಫ್ ಕಥೆಗಳು
 • ಲೋಕಪಾಲ: ಯಾಕಿಷ್ಟು ಗೊಂದಲ
 • ನಾಯಕತ್ವದ ದಾರಿ ಪಂಚತಂತ್ರದ ಮಾದರಿ
 • ಚಾಟು ಕವಿತೆಗೆ ಚುಟುಕು ಕತೆ
 • ವಾರನ್ ಬಫೆಟ್
 • ವಂದನಾಶಿವ
 • ಸುಂದರಲಾಲ ಬಹುಗುಣ
 • ೧೦೮ ಹಳೆ ಆಚಾರ ಹೊಸ ವಿಚಾರ
 • ಮ್ಯಾನೇಜ್ಮೆಂಟ್ ಕತೆಗಳು
 • ಇಂಟರ್ನೆಟ್ ಕಥೆಗಳು[೨]

ಅನುವಾದಿಸಿದ ಕೃತಿಗಳು[ಬದಲಾಯಿಸಿ]

 • ಪ್ರಿಯಂವದೆಯ ಸ್ವಗತ ಹಿಂದಿಗೆ ಅನುವಾದಗೊಂಡಿದೆ
 • ಆಂಟನ್ ಚೆಕಾ‌ಫ್ ಕಥೆಗಳು
 • ಭಾಸನ ಐದು ನಾಟಕಗಳು
 • ಅಭಿಜ್ಞಾನ ಶಾಕುಂತಲ

ಪ್ರಶಸ್ತಿಗಳು[ಬದಲಾಯಿಸಿ]

 • ಚೆನೈ ಅಂತರಾಷ್ಟ್ರೀಯ ಕಿರುಚಿತ್ರ ಮಂಡಳಿಯ ಪ್ರಶಂಸೆ
 • ಮುಂಬೈ,ದೆಹಲಿ ಹಾಗೂ ಅಮೇರಿಕಾ ಕನ್ನಡ ಸಂಘದ ಪ್ರಶಸ್ತಿ
 • ೨೦೦೫ರ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತ ಸಂಘದ ಪ್ರಶಸ್ತಿ (೨೦೦೫)
 • ಛಾಯಗ್ರಹಣಕ್ಕೆ ಎರಡು ಬಾರಿ ರಾಜ್ಯ ಪ್ರಶಸ್ತಿ[೩]

ಉಲ್ಲೇಖ[ಬದಲಾಯಿಸಿ]

 1. https://www.youtube.com/channel/UCjElJyiXmQXnWmceQ1JyKrA
 2. https://books.google.com
 3. https://www.youtube.com/watch?v=HWxR2IVu7tY