ವಿಷಯಕ್ಕೆ ಹೋಗು

ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು
ಭಾರತ
೨೦೧೯ ←
೧೯ ಏಪ್ರಿಲ್ – ೧ ಜೂನ್ ೨೦೨೪ → ೨೦೨೯

ಲೋಕಸಭೆಯ ಎಲ್ಲಾ ಸ್ಥಾನಗಳು
ಬಹುಮತಕ್ಕೆ೨೭೨ ಸ್ಥಾನಗಳು ಬೇಕಾಗಿವೆ
 
Shri Narendra Damodardas Modi.jpg
Mallikarjun_Kharge.jpg
ನಾಯಕ ನರೇಂದ್ರ ಮೋದಿ ಮಲ್ಲಿಕಾರ್ಜುನ ಖರ್ಗೆ
ಪಾರ್ಟಿ ಭಾಜಪ ಕಾಂಗ್ರೆಸ್
Alliance ಎನ್‌ಡಿಎ ಐಎನ್‌ಡಿಐಎ
Leader since ೨೬ ಮೇ ೨೦೧೪ ೨೬ ಅಕ್ಟೋಬರ್ ೨೦೨೨
ನಾಯಕನ ಸೀಟ್ ವಾರಣಾಸಿ ಸ್ಪರ್ಧೆಯಿಲ್ಲ
Last election ೩೭.೩೬%, ೩೦೩ ಸ್ಥಾನಗಳು ೧೯.೪೯%, ೫೨ ಸ್ಥಾನಗಳು
Current seats ೨೯೫ ೫೦
Seats needed Steady Increase ೨೨೨

ಕ್ಷೇತ್ರವಾರು ಸ್ಥಾನಗಳು.

Incumbent ಪ್ರಧಾನಮಂತ್ರಿ

ನರೇಂದ್ರ ಮೋದಿ
ಭಾಜಪ

ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು ೧೯ನೇ ಏಪ್ರಿಲ್ ೨೦೨೪ ರಿಂದ ೧ನೇ ಜೂನ್ ೨೦೨೪ರವರೆಗೆ ನಡೆಯಲಿವೆ. ಸದ್ಯ ಇರುವ ೧೮ನೇ ಲೋಕಸಭೆಯ ೫೪೩ ಸ್ಥಾನಗಳಿಗೆ ಹೊಸ ಸದಸ್ಯರನ್ನು ಚುನಾಯಿಸಲಾಗುತ್ತದೆ. ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿದ್ದು ಒಟ್ಟು ೪೪ ದಿನಗಳ ಕಾಲ ಚುನಾವಣಾ ಚಟುವಟಿಕೆಗಳು ನಡೆಯಲಿವೆ.[][] ೪ನೇ ಜೂನ್ ೨೦೨೪ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಪ್ರಸ್ತುತ ಲೋಕಸಭೆಯ ಅವಧಿ ಜೂನ್ ೧೬ರಂದು ಕೊನೆಗೊಳ್ಳಲಿದೆ. ೯೬ ಕೋಟಿ ಮತದಾರರು ಮತ ಚಲಾಯಿಸಲಿದ್ದು, ೨೦೧೯ರ ಚುನಾವಣೆಗಿಂತಲೂ ೧೫ ಕೋಟಿ ಹೆಚ್ಚುವರಿ ಮತದಾರರಿದ್ದಾರೆ.

ವೇಳಾಪಟ್ಟಿ

[ಬದಲಾಯಿಸಿ]

ಮೊದಲ ಹಂತದ ಮತದಾನ ಏಪ್ರಿಲ್ ೧೯ರಂದು ನಡೆಯಲಿದ್ದು, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಕೇರಳ, ಮಿಝೋರಮ್, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಮ್, ತಮಿಳುನಾಡು, ಪಂಜಾಬ್, ತೆಲಂಗಾಣ, ಉತ್ತರಾಖಂಡ ರಾಜ್ಯಗಳಲ್ಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ಪಾಂಡಿಚೆರಿ, ದಾದ್ರಾ-ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿವೆ. ಎರಡನೆ ಹಂತದ ಚುನಾವಣೆಗಳು ಎಪ್ರಿಲ್ ೨೬ರಂದು ಕರ್ನಾಟಕ, ರಾಜಸ್ಥಾನ ತ್ರಿಪುರ, ಮಣಿಪುರ ರಾಜ್ಯದಲ್ಲಿಯೂ ಮೂರನೆ ಹಂತದ ಚುನಾವಣೆಗಳು ಮೇ ೭ರಂದು ಛತ್ತೀಸ್‌ಗಡ್ ಮತ್ತು ಅಸ್ಸಾಂ ರಾಜ್ಯದಲ್ಲಿಯೂ ನಾಲ್ಕನೇ ಹಂತದ ಚುನಾವಣೆಗಳು ಮೇ ೧೩ರಂದು ಒಡಿಶಾ ಝಾರ್ಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿಯೂ ಐದನೇ ಹಂತದ ಮೇ ೨೦ರಂದು ಚುನಾವಣೆಗಳು ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿಯೂ ಏಳನೇ ಹಂತದ ಚುನಾವಣೆಗಳು ಜೂನ್ ೧ರಂದು ಉತ್ತರಪ್ರದೇಶ, ಬಿಹಾರ ಮತ್ತು ಪ. ಬಂಗಾಳ ರಾಜ್ಯಗಳಲ್ಲಿ ನಡೆಯಲಿವೆ[].

ಚುನಾವಣಾ ಹಂತಗಳು ಮತ್ತು ನಡೆಯಲಿರುವ ರಾಜ್ಯಗಳು[]
ಹಂತ ರಾಜ್ಯ/ಕೇಂ.ಪ್ರದೇಶಗಳು ಚುನಾವಣಾ ದಿನಾಂಕ
೧ನೇ ಹಂತ ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ,
ಮಣಿಪುರ, ಮೇಘಾಲಯ, ಮಿಜೋರಾಂ, ಒಡಿಶಾ, ರಾಜಸ್ಥಾನ, ಸಿಕ್ಕಿಂ,
ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ,
ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ,
ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೆರಿ
೧೯ ಎಪ್ರಿಲ್
೨ನೇ ಹಂತ ಅಸ್ಸಾಂ, ಛತ್ತೀಸ್‌ಗಢ, ಬಿಹಾರ, ಕರ್ನಾಟಕ, ಕೇರಳ, ಮಧ್ಯಪ್ರದೇಶ,
ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರಾ, ಉತ್ತರ ಪ್ರದೇಶ,
ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ
೨೬ ಎಪ್ರಿಲ್
೩ನೇ ಹಂತ ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗೋವಾ, ಗುಜರಾತ್, ಕರ್ನಾಟಕ,
ಮಧ್ಯ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ,
ಜಮ್ಮು ಮತ್ತು ಕಾಶ್ಮೀರ, ದಾದ್ರಾ-ನಗರ್ ಹವೇಲಿ ಮತ್ತು ದಮನ್-ದಿಯು
೭ ಮೇ
೪ನೇ ಹಂತ ಆಂಧ್ರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ,
ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ
೧೩ ಮೇ
೫ನೇ ಹಂತ ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ,
ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್
೨೦ ಮೇ
೬ನೇ ಹಂತ ಬಿಹಾರ, ಹರ್ಯಾಣ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ,
ಪಶ್ಚಿಮ ಬಂಗಾಳ, ದಿಲ್ಲಿ ಎನ್‌ಸಿಟಿ
೨೫ ಮೇ
೭ನೇ ಹಂತ ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಪಂಜಾಬ್, ಒಡಿಶಾ,
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಡ
೧ ಜೂನ್

ಇದೇ ಸಮಯದಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆ ಚುನಾವಣೆಗಳೂ ನಡೆಯಲಿದ್ದು, ೧೬ ರಾಜ್ಯಗಳ ಪೈಕಿ ೩೫ ಸ್ಥಾನಗಳಿಗೆ ಉಪಚುನಾವಣೆಯೂ ಸಹ ನಡೆಯಲಿದೆ.

ವೇಳಾಪಟ್ಟಿ ಹಂತ
ಅಧಿಸೂಚನೆ ದಿನಾಂಕ ೨೦ ಮಾರ್ಚ್ ೨೮ ಮಾರ್ಚ್ ೧೨ ಎಪ್ರಿಲ್ ೧೮ ಎಪ್ರಿಲ್ ೨೬ ಎಪ್ರಿಲ್ ೨೯ ಎಪ್ರಿಲ್ ೭ ಮೇ
ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕ ೨೭ ಮಾರ್ಚ್ ೪ ಎಪ್ರಿಲ್ ೧೯ ಎಪ್ರಿಲ್ ೨೫ ಎಪ್ರಿಲ್ ೩ ಮೇ ೬ ಮೇ ೧೪ ಮೇ
ನಾಮಪತ್ರ ಪರಿಶೀಲನೆ ೨೮ ಮಾರ್ಚ್ ೫ ಎಪ್ರಿಲ್ ೨೦ ಎಪ್ರಿಲ್ ೨೬ ಎಪ್ರಿಲ್ ೪ ಮೇ ೭ ಮೇ ೧೫ ಮೇ
ನಾಮಪತ್ರ ವಾಪಸ್ ೩೦ ಮಾರ್ಚ್ ೮ ಎಪ್ರಿಲ್ ೨೨ ಎಪ್ರಿಲ್ ೨೯ ಎಪ್ರಿಲ್ ೬ ಮೇ ೯ ಮೇ ೧೭ ಮೇ
ಚುನಾವಣಾ ದಿನಾಂಕ ೧೯ ಎಪ್ರಿಲ್ ೨೬ ಎಪ್ರಿಲ್ ೭ ಮೇ ೧೩ ಮೇ ೨೦ ಮೇ ೨೫ ಮೇ ೧ ಜೂನ್
ಮತ ಎಣಿಕೆ ೪ ಜೂನ್ ೨೦೨೪
ಫಲಿತಾಂಶ ಘೋಷಣೆ ೬ ಜೂನ್ ೨೦೨೪
ಲೋಕಸಭಾ ಕ್ಷೇತ್ರಗಳು ೧೦೨ ೮೯ ೯೪ ೯೬ ೪೯ ೫೭ ೫೭

ಸಂಕ್ಷಿಪ್ತ ಪಕ್ಷಿನೋಟ

[ಬದಲಾಯಿಸಿ]

ಚುನಾವಣೆ

[ಬದಲಾಯಿಸಿ]

ಸಂವಿಧಾನದ ೮೩ನೆ ವಿಧಿಯಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ಲೋಕಸಭಗೆ ಚುನಾವಣೆಗಳು ನಡೆಯಬೇಕು ಎಂದು ತಿಳಿಸಲಾಗಿದೆ. ಈ ಚುನಾವಣೆಯಲ್ಲಿ ನೋಂದಾಯಿತ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಹೆಸರಿಸಿ ಕಣಕ್ಕೆ ಇಳಿಸುತ್ತವೆ. ಸಾರ್ವಜನಿಕರು ಕೂಡ ಪಕ್ಷೇತರರಾಗಿ ಸ್ಪರ್ಧಿಸಲು ಅವಕಾಶ ಇರುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ ಒಟ್ಟು ೫೪೩ ಸ್ಥಾನಗಳಿವೆ. ಇವರೆಲ್ಲರೂ ಜನರು ಚಲಾಯಿಸುವ ಮತಗಳಿಂದ ಚುನಾಯಿತರಾಗುವವರು. ದೇಶದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಸ್ಥಾನಗಳನ್ನು ಸೃಜಿಸಲಾಗುತ್ತದೆ. ಅಲ್ಲದೆ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಲೋಕಸಭೆಯ ಎರಡು ಸ್ಥಾನಗಳು ಮೀಸಲಿರುತ್ತವೆ. ಲೋಕಸಭೆಯಲ್ಲಿ ಅಧಿಕಾರಕ್ಕೆ ಬರಲು ಒಂದು ಪಕ್ಷ ಅಥವಾ ವಿವಿಧ ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟವು ೨೭೨ ಸೀಟುಗಳ ಗಡಿಯನ್ನು ದಾಟಬೇಕು. ಕೇಂದ್ರ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೆ ಸಂಬಂಧಿಸಿದ ದಿನಾಂಕಗಳನ್ನು ಮತ್ತು ನಿಯಮಾವಳಿಗಳನ್ನು ಪ್ರಕಟಿಸುತ್ತದೆ. ೧೮ ವರ್ಷ ದಾಟಿದ ಭಾರತೀಯ ನಾಗರಿಕರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.

ಆಂಗ್ಲೋ ಇಂಡಿಯನ್ ಸದಸ್ಯತ್ವದ ರದ್ದತಿ

[ಬದಲಾಯಿಸಿ]

೧೯೫೨ರಿಂದ ೨೦೨೦ರವರೆಗೆ ಲೋಕಸಭೆಯಲ್ಲಿ ಎರಡು ಸ್ಥಾನಗಳನ್ನು ಆಂಗ್ಲೋ ಇಂಡಿಯನ್ ಸದಸ್ಯರಿಗೆ ಮೀಸಲಿರಿಸಲಾಗುತ್ತಿತ್ತು. ರಾಷ್ಟ್ರಪತಿಯವರು ಆಡಳಿತಾತ್ಮಕ ಸರಕಾರದ ಸಲಹೆಯ ಮೇರೆಗೆ ಈ ಎರಡು ಸ್ಥಾನಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಿದ್ದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಆಂಗ್ಲೋ-ಇಂಡಿಯನ್ ಸದಸ್ಯರನ್ನು ನೇಮಿಸುವುದನ್ನು ನಿಲ್ಲಿಸುವ ಮಸೂದೆಯನ್ನು ಜನವರಿ ೨೦೨೦ರಲ್ಲಿ ಸಂಸತ್ತಿನಲ್ಲಿ ಮಂಡಿಸಿತ್ತು. SC, ST ಮತ್ತು ಆಂಗ್ಲೋ-ಇಂಡಿಯನ್ ಸಮುದಾಯಗಳ ಸದಸ್ಯರ ನಾಮನಿರ್ದೇಶನ ಮಾಡುವ ಅವಕಾಶ ಜನವರಿ ೨೫, ೨೦೨೦ ರಂದು ರದ್ದಾಯಿತು. ಜನವರಿ ೨೦೨೦ರಲ್ಲಿ ಮಾಡಲಾದ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ ಭಾರತದ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮೀಸಲು ಈರಿಸಿದ್ದ ಆಂಗ್ಲೋ-ಇಂಡಿಯನ್ ಸ್ಥಾನಗಳನ್ನು ರದ್ದು ಮಾಡಲಾಯಿತು[]. ಲೋಕಸಭೆಯಲ್ಲಿ ಸದಸ್ಯತ್ವ ಹೊಂದಿದ್ದ ಕೊನೆಯ ಆಂಗ್ಲೋ ಇಂಡಿಯನ್ ಸದಸ್ಯರೆಂದರೆ- ರಿಚರ್ಡ್ ಹೇ ಮತ್ತು ಜಾರ್ಜ್ ಬೇಕರ್[].

ಲೋಕಸಭಾ ಕ್ಷೇತ್ರಗಳು

[ಬದಲಾಯಿಸಿ]

ದೇಶದಾದ್ಯಂತ ಒಟ್ಟು ೫೩೪ ಲೋಕಸಭಾ ಕ್ಷೇತ್ರಗಳು ಇವೆ.

ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು

[ಬದಲಾಯಿಸಿ]

ಈ ಲೋಕಸಭಾ ಚುನಾವಣೆಯನ್ನು ಎರಡು ಮೈತ್ರಿಕೂಟಗಳ ನಡುವಿನ ಸ್ಪರ್ಧೆ ಎಂದೇ ಹೇಳಬಹುದು. ಪ್ರಸ್ತುತ ಅಧಿಕಾರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಮತ್ತು ಐಎನ್‌ಡಿಐಎ- ಇವೇ ಆ ಎರಡು ಕೂಟಗಳು. ಇವಲ್ಲದೆ ಇನ್ನೂ ೬ ಪ್ರಮುಖ ರಾಷ್ಟ್ರೀಯ ಪಕ್ಷಗಳು- ಭಾಜಪ, ಕಾಂಗ್ರೆಸ್, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಬಹುಜನ ಸಮಾಜ ಪಕ್ಷ, ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಆಮ್ ಆದ್ಮಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿವೆ.

ಎನ್‌ಡಿಎಯಲ್ಲಿ ಒಟ್ಟು ೪೦ ಪಕ್ಷಗಳಿದ್ದು, ಇದರಲ್ಲಿ ೨ ರಾಷ್ಟ್ರೀಯ ಪಕ್ಷಗಳು, ಉಳಿದ ೩೮ ಪ್ರಾದೇಶಿಕ ಪಕ್ಷಗಳು. ಅದೇ ರೀತಿ ಐಎನ್‌ಡಿಐಎ ಮೈತ್ರಿಕೂಟದಲ್ಲಿ ಒಟ್ಟು ೪೦ ಪಕ್ಷಗಳಿವೆ. ಈ ಎರಡು ಮೈತ್ರಿಕೂಟಗಳ ಸದಸ್ಯ ಪಕ್ಷಗಳು ಸ್ಪರ್ಧಿಸಲಿರುವ ಲೋಕಸಭಾ ಸ್ಥಾನಗಳು ಈ ರೀತಿ ಇವೆ.

ಪ್ರಚಾರ

[ಬದಲಾಯಿಸಿ]

ಫಲಿತಾಂಶ

[ಬದಲಾಯಿಸಿ]

ಸರ್ಕಾರ ರಚನೆ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]