ಡೆಂಗೇ
ಗೋಚರ
ಡೆಂಗಿಜ್ವರ / ಡೆಂಗ್ಯೂ | |
---|---|
Classification and external resources | |
ICD-10 | A90 |
ICD-9 | 061 |
DiseasesDB | 3564 |
MedlinePlus | 001374 |
eMedicine | med/528 |
MeSH | ಡೆಂಗಿ/ಡೆಂಗ್ಯೂ&field=entry#TreeC02.782.417.214 C02.782.417.214 |
ಡೆಂಗಿ ಮತ್ತು ಡೆಂಗ್ಯೂ(ಡೆಂಗೆ) ರಕ್ತಸ್ರಾವ ಜ್ವರಗಳು ಉಷ್ಣವಲಯಗಳಲ್ಲಿ ಕಾಣಿಸಿಕೊಳ್ಳುವ, ಅಪಾಯಕಾರಿಯಾದ ತೀವ್ರ ಜ್ವರ ಲಕ್ಷಣದ ಉಷ್ಣವಲಯದ ರೋಗಗಳು, ಮತ್ತು ಫ್ಲೇವವೈರಸ್ ಪ್ರಜಾತಿ, ಫ್ಲೇವೈವಿರೈಡೇ ಕುಟುಂಬದ ನಾಲ್ಕು ನಿಕಟವಾಗಿ ಸಂಬಂಧಿಸಿದ ವೈರಾಣು ಸಿಯರಟೈಪ್ಗಳಿಂದ ಉಂಟಾಗುತ್ತವೆ.(ಹಳೆಯ ಸಂ)ಇದರಿಂದ 3 ದಿನ ದಲ್ಲಿ ಸಾವುಉಂಟಾಗುತ್ತವೆ
ಡೆಂಗಿ
[ಬದಲಾಯಿಸಿ]- ಡೆಂಗಿ ಜ್ವರ/ಡೆಂಗ್ಯೂ ಜ್ವರವು ವೈರಸ್ನಿಂದ ಉಂಟಾಗುವ ಸೊಳ್ಳೆ ಹರಡುವ ಉಷ್ಣವಲಯದ ರೋಗ. ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ಆದ ನಂತರ ಮೂರು ಅಥವಾ ಹದಿನಾಲ್ಕು ದಿನಗಳಲ್ಲಿ ಲಕ್ಷಣ ತೋರುವುದು. ಇದರ ಲಕ್ಷಣ , ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು, ಮತ್ತು ವಿಶಿಷ್ಟ ಚರ್ಮದ ಗುಳ್ಳೆಗಳ ಅಥವಾ ದಡಸಲು/ದದ್ದುಗಳನ್ನು ಒಳಗೊಂಡಿರಬಹುದು. ಗುಣಮುಖವಾಗಲು ಸಾಮಾನ್ಯವಾಗಿ ಕಡಿಮೆ ಎಂದರೆ ಎರಡು ರಿಂದ ಏಳು ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಅಪರೂಪದ ಸಂದರ್ಭಗಳಲ್ಲಿ ಈ ಒಂದು ಸಣ್ಣ ಪ್ರಮಾಣದ ರೋಗವು ಮಾರಣಾಂತಿಕವಾದ ಡೆಂಗಿ ಹೆಮರಾಜಿಕ್ ಜ್ವರವಾಗಿ (dengue hemorrhagic fever) ಪರಿಣಮಿಸಬಹುದು. ಪರಿಣಾಮವಾಗಿ ರಕ್ತಸ್ರಾವ, ರಕ್ತದ ಕಿರುಬಿಲ್ಲೆಗಳು ಕಡಿಮೆ ಮಟ್ಟಕ್ಕೆ ಇಳಿಯುಯವುದು,(low levels of blood platelets and blood plasma) ಹಾಗೂ ರಕ್ತದ ಪ್ಲಾಸ್ಮಾದ ಸೋರಿಕೆ, ಅಥವಾ ಡೆಂಗಿಯ ಗಾಬರಿ ಲಕ್ಷಣಗಳಾದ, ಅಪಾಯಕಾರಿ ಕಡಿಮೆ ರಕ್ತದ ಒತ್ತಡ ಸಂಭವಿಸುತ್ತದೆ.
- ಡೆಂಗಿ 'ಏಡಿಸ್'(Aedes type), ರೀತಿಯ ಪ್ರಮುಖವಾಗಿ ಹಲವಾರು ಜಾತಿಗಳ ಎ ಈಜಿಪ್ಟಿ ಸೊಳ್ಳೆಗಳಿಂದ ಹರಡುವುದು. ವೈರಸ್`ಗಳು ವಿವಿಧ ರೀತಿಯ ಐದು ಬಗೆ ಇವೆ. ಒಂದು ರೀತಿಯ ವೈರಸ್ ಸಾಮಾನ್ಯವಾಗಿ ರೋಗದಿಂದ ಆಜೀವ ವಿನಾಯಿತಿ (ರೋಗನಿರೋಧ ಶಕ್ತಿ) ನೀಡುತ್ತದೆ. ಸೋಂಕು ಆದರೆ ಇತರ ಬಗೆಯವು ಅಲ್ಪಾವಧಿಗೆ ಮಾತ್ರ ವಿನಾಯಿತಿ ನೀಡುತ್ತದೆ. ಒಂದು ವಿಭಿನ್ನ ರೀತಿಯ ನಂತರದ ಒಂದು ವಿಭಿನ್ನ ರೀತಿಯ ನಂತರದ ಸೋಂಕು ತೀವ್ರ ತೊಡಕುಗಳು ಮತ್ತು ಅಪಾಯವನ್ನು ಹೆಚ್ಚಿಸುತ್ತದೆ. ವೈರಸ್ ಅಥವಾ ಅದರ ಆರಎನಎ ಪ್ರತಿಕಾಯಗಳ ಪತ್ತೆ ಸೇರಿದಂತೆ ರೋಗ ಖಚಿತಪಡಿಸಲು ಅನೇಕ ಪರೀಕ್ಷೆಗಳು ಲಭ್ಯವಿದೆ.[೧][೨]
ಕಂಡುಬರುವ ಪ್ರದೇಶ
[ಬದಲಾಯಿಸಿ]- ಇದು, ಉತ್ತರ ಆರ್ಜಂಟೀನಾ, ಉತ್ತರ ಆಸ್ಟ್ರೇಲಿಯಾ, ಸಂಪೂರ್ಣ ಬಾಂಗ್ಲಾದೇಶ, ಬಾರ್ಬೇಡೋಸ಼್, ಬಲಿವೀಯಾ,, ಕ್ಯಾಂಬೋಡಿಯಾ, ಕೋಸ್ಟಾ ರೀಕಾ, ಡಮಿನಿಕಾದ ಗಣರಾಜ್ಯ, ಗ್ವಾಟಮಾಲಾ, ಗಾಯಾನಾ, ಹಾಂಡೂರಸ್, ಭಾರತ, ಇಂಡನೀಷ್ಯಾ, ಜಮೇಯ್ಕಾ, ಮಲೇಷ್ಯಾ, ಮೆಕ್ಸಿಕೋ, ಪಾಕಿಸ್ತಾನ, ಪ್ಯಾನಮಾ, ಪ್ಯಾರಗ್ವಾಯ್, ಫಿಲಪೀನ್ಸ್, ಪ್ವೆರ್ಟ ರೀಕೋ, ಸಮೋವಾ, ಸಿಂಗಪೋರ್, ಶ್ರೀಲಂಕಾ, ಸೂರನಾಮ್, ತೈವಾನ್, ಥಾಯ್ಲಂಡ್, ಟ್ರಿನಿಡ್ಯಾಡ್, ಮತ್ತು ವಿಯೆಟ್ನಾಮ್, ಹಾಗೂ ದಕ್ಷಿಣ ಚೀನಾವನ್ನು ಒಳಗೊಂಡಂತೆ, ಉಷ್ಣವಲಯಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ಡೆಂಗೇ ಗ್ರಾಮೀಣ ಪ್ರದೇಶಗಳಲ್ಲಿ ಹರಡಿದಂತೆ ನಗರ ಜಿಲ್ಲೆಗಳಲ್ಲೂ ಹರಡುವುದರಿಂದ ಮಲೇರಿಯಾಕ್ಕಿಂತ ಭಿನ್ನವಾಗಿದೆ. ಡೆಂಗೆ ಜ್ವರವು ಸಂಕ್ರಾಮಿಕ ರೋಗ .(ಹಿಂದಿನ ಸಂ:ಉ??)
ಭಾರತ:ಕರ್ನಾಟಕದಲ್ಲಿ ಡೆಂಗಿ ಮುಖ್ಯ ಸಂಕ್ಷಿಪ್ತ ವಿವರ
[ಬದಲಾಯಿಸಿ]- ಉಪ- ಉಷ್ಣವಲಯ ಮತ್ತು ಉಷ್ಣವಲಯ ದೇಶಗಳಲ್ಲಿ, ಸುಮಾರು 2.5 ಶತಕೋಟಿ ಜನಸಂಖ್ಯೆಯಲ್ಲಿ ಡೆಂಗೆ ರೋಗದ ಅಪಾಯ ಇರುತ್ತದೆ. 1953-1954ರಲ್ಲಿ ಫಿಲಿಪ್ಪೀನ್ಸ್ನಿಂದ ಈ ಸಾಂಕ್ರಾಮಿಕವು ಭಾರತಕ್ಕೆ ಬಂದಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಡೆಂಗೆ ಜ್ವರ ಅಪಾಯವನ್ನು 1970ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು.
- ಹೆಮರಾಜಿಕ್ ಜ್ವರ , ಡೆಂಗಿ ಶಾಕ್ ಸಿಂಡ್ರೋಮ್ 1993 ರಲ್ಲಿ ಮೊದಲ ಬಾರಿಗೆ ವರದಿಯಾಯಿತು. ಈ ಡೆಂಗಿ ವೈರಸಿನ ಸೋಂಕು ಮುಂಗಾರಿನ ಕಾಲದಲ್ಲಿ ಹೆಚ್ಚಳ ತೋರಿಸಿದೆ.
ಡೆಂಗಿ ಜ್ವರ ಬಂದಾಗ ಎಚ್ಚರಿಕೆ
[ಬದಲಾಯಿಸಿ]- ದೇಹವು ಬಿಸಿಯಾಗಿದ್ದೂ, ಕೈ ಮತ್ತು ಕಾಲು ತಣ್ಣಗಿರುವಾಗ ಸಾಂಪ್ರದಾಯಿಕ ನೋವು ನಿವಾರಕಗಳನ್ನು, ಸ್ಟಿರಾಯ್ಡ್ ಗಳನ್ನು, ರಕ್ತ ಅಥವಾ ಪ್ಲೇಟ್ಲೆಟ್ ವರ್ಗಾವಣೆ ಮಾಡಬಾರದು.
- ಯಾವುದೇ ಔಷಧಗಳಿಂದ ಪ್ಲೇಟ್ಲೆಟ್ ಎಣಿಕೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ, ಡೆಂಗಿಯನ್ನು ಆರಂಭದಲ್ಲಿಯೇ ಪತ್ತೆ ಮಾಡುವುದರಿಂದ ಮತ್ತು ಸರಿಯಾದ ರೀತಿ ನಿರ್ವಹಣೆ ಮಾಡುವುದರಿಂದ ಈ ರೋಗದ ತೊಡಕುಗಳನ್ನು ತಡೆಯಬಹುದು.
- ಪ್ಲೇಟ್ಲೆಟ್ ಎಣಿಕೆ 50,000ಕ್ಕೂ ಹೆಚ್ಚಿದ್ದಲ್ಲಿ, ಉತ್ತಮ ಹಸಿವು, ರೋಗಿಯ ಸಾಮಾನ್ಯ ಸ್ಥಿತಿಯಲ್ಲಿ ಉತ್ತಮ ಬದಲಾವಣೆ ಕಂಡುಬಂದಲ್ಲಿ, ಪ್ಯಾರಾಸಿಟಮಾಲ್ ಬಳಸದೆ 24 ಗಂಟೆಗಳ ಕಾಲ ಜ್ವರ ಬಾರದ ಸಂದರ್ಭದಲ್ಲಿ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೆ ಮಾಡಬಹುದು.
ಜ್ವರದ ಲಕ್ಷಣ ವಿವರ
[ಬದಲಾಯಿಸಿ]- 1. ದೆಹಲಿ....15,625
- 2. ಪಂಜಾಬು..6,342
- 3. ಹರಿಯಾಣ..6,452
- 4. ಕರ್ನಾಟಕ..4,158
- 5. ಗುಜರಾತು..3,569
- (ಆಧಾರ: ವಿಶ್ವ ಆರೋಗ್ಯ ಸಂಸ್ಥೆ)
- ಡೆಂಗಿ ಜ್ವರದ ಲಕ್ಷಣಗಳು
ತಲೆನೋವು, ಸ್ನಾಯು, ಮೂಳೆ ಮತ್ತು ಕೀಲು ನೋವು, ವಾಕರಿಕೆ, ವಾಂತಿ, ಕಣ್ಣಿನ ನೋವು, ಚರ್ಮದ ದದ್ದು, ಇತ್ಯಾದಿ ಡೆಂಗುವಿನ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ. ಆದ್ದರಿಂದ, ಸೊಳ್ಳೆಗಳನ್ನು ತಪ್ಪಿಸುವುದು, ಶುಚಿತ್ವವನ್ನು ಕಾಪಾಡಿಕೊಳ್ಳುವುದು, ನೀರು ಸಂಗ್ರಹವಾಗಲು ಬಿಡದಿರುವುದು ಮುಂಜಾಗ್ರತಾ ಕ್ರಮಗಳು ನಮ್ಮನ್ನು ಡೆಂಗ್ಯೂ ಯಿಂದ ರಕ್ಷಿಸಬಹುದು. [೩] ಇನ್ನಷ್ಟು ಡೆಂಗಿ ಜ್ವರದ ಲಕ್ಷಣಗಳ ಪಟ್ಟಿ ಇಲ್ಲಿದೆ ನೋಡಿ.
- ಕಣ್ಣು ನೋವು
- ಜಂಟಿ ಮತ್ತು ಸ್ನಾಯು ನೋವು
- ಹಸಿವಾಗದಿರುವುದು,ಉದರದ ಅಸ್ವಸ್ಥತೆ
- ತುರಿಕೆ
- 103 ಡಿಗ್ರಿಗಿಂತಲೂ ಹೆಚ್ಚಿನ ಜ್ವರ
- ಚಿಕ್ಕ ಮಕ್ಕಳಿಗೆ ಶೀತ , ಭೇದಿ, ತುರಿಕೆ ಮತ್ತು ತೀವ್ರ ಸಂದರ್ಭಗಳಲ್ಲಿ ರೋಗಗ್ರಸ್ತವಾಗುವಿಕೆ
- ಪ್ಲೇಟ್ಲೆಟ್ ಕೌಂಟ್ ಇಳಿಕೆಯಾಗುವುದು
- ಅತಿಯಾದ ಸುಸ್ತು.
ಆರೈಕೆ
[ಬದಲಾಯಿಸಿ]ಡೆಂಗಿ: ರೋಗಿ ಏನೆಲ್ಲಾ ಅನುಸರಿಸಬೇಕು?
- ಹೆಚ್ಚಿನ ವಿಶ್ರಾಂತಿಯಲ್ಲಿರುವುದು ಬಹುಮುಖ್ಯ
- ಜ್ವರಕ್ಕೆ ಔಷಧವಾಗಿ ಪ್ಯಾರಸಿಟಮಾಲ್ ಬಳಸಿ
- ಪ್ಯಾರಸಿಟಮಾಲ್ ನುಂಗಿಯೂ ಜ್ವರ ಹೆಚ್ಚಿದ್ದರೆ ಒದ್ದೆ ಬಟ್ಟೆಯಲ್ಲಿ ದೇಹವನ್ನು ಒರೆಸಿ.
- ನೀರಿನ ಹೊರತಾಗಿಯೂ ರಸ, ಸಾರು, ಅಂಬಲಿಯಂತಹ ದ್ರವಗಳ ಸೇವನೆಯಿರಲಿ.
- ಸೂಪ್, ಹಣ್ಣಿನ ರಸವನ್ನು - ಒಂದು ದಿನದಲ್ಲಿ ಎರಡೂವರೆ ಲೀಟರ್ಗಳವರೆಗೆ ಕುಡಿಯಬೇಕು.
- ಸಾಂಪ್ರದಾಯಿಕ ನೋವು ನಿವಾರಕಗಳು ರೀತಿಯ ಮಾತ್ರೆಗಳನ್ನು ಆದಷ್ಟು ತಪ್ಪಿಸಬೇಕು.
- ಅತಿಯಾದ ಸುಸ್ತು ಕಂಡುಬಂದಲ್ಲಿ ಅದು ಪ್ಲೇಟ್ಲೆಟ್ ಕಡಿಮೆಯಾಗಿರುವ ಲಕ್ಷಣವೂ ಆಗಿರಬಹುದು. ಆದ್ದರಿಂದ ಯಾವುದೇ ಬದಲಾವಣೆಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ.
- ಹೊಟ್ಟೆ ನೋವು, ಎದೆನೋವು, ವಾಂತಿ, ರಕ್ತಸ್ರಾವ, ಮೂಗು, ವಸಡು ಮತ್ತು ಮಲಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ.
ಹೆಚ್ಚಿನ ಕ್ರಮ
[ಬದಲಾಯಿಸಿ]ಇಸವಿ | ಭಾರತದಲ್ಲಿ ಸೋಂಕಿನ ಸಂಖ್ಯೆ |
---|---|
2007 | 0ಇಂದ 10,000 |
2008 | 10,000+ |
2009 | 10,000 ರಿಂದ 20,000 |
2010 | 20,000ರಿಂದ 30,000 |
2011 | 10,000ರಿಂದ 20,000 |
2012 | 40,000 ದಿಂದ 50,000 |
2013 | 30,000ರಿಂದ 40,000 |
ಆಧಾರ : | ಭಾರತದ ಕೇಂದ್ರ ಆರೋಗ್ಯ ಸಚಿವಾಲಯ |
ವರದಿ: | ಪ್ರಜಾವಾಣಿ |
- ಡೆಂಗಿ ಲಕ್ಷಣಗಳು ಕಾಣಿಸಿಕೊಂಡಾಗ ದಿನಕ್ಕೆ 2-3 ಎಳನೀರು ಸೇವನೆ ಇರಲಿ. ಇದು ದೇಹಕ್ಕೆ ಪುಷ್ಟಿ ನೀಡುತ್ತದೆ.
- ಪಪ್ಪಾಯಿ ಹಣ್ಣಿನಲ್ಲಿ ಪ್ಲೇಟ್ಲೆಟ್ಗಳನ್ನು ಹೆಚ್ಚಿಸಿ ಜ್ವರ ಕಡಿಮೆ ಮಾಡುವ ಗುಣವಿದೆ. ಪ್ರತಿ ದಿನವೂ ಪಪ್ಪಾಯಿ ಎಲೆಯನ್ನು ಅರೆದು ಆ ರಸವನ್ನು ಒಂದು ಚಮಚದಷ್ಟು ಸೇವಿಸಿದರೆ ಜ್ವರವು ಅತಿ ಬೇಗನೆ ಕಡಿಮೆಯಾಗುವುದು. ರಸದೊಂದಿಗೆ ಪಪ್ಪಾಯಿ ಹಣ್ಣೂ ಇರಲಿ.
- ಜ್ವರ ಬಂದಾಗ ಸಾಮಾನ್ಯ ಆಹಾರಕ್ಕಿಂತ ಗಂಜಿ ಸೇವನೆ ಒಳ್ಳೆಯದು. ಇದರೊಂದಿಗೆ ಹಣ್ಣುಗಳನ್ನು ಸೇವಿಸಿದರೆ ದೇಹಕ್ಕೆ ಹೆಚ್ಚಿನ ದ್ರವ ಸಿಗುತ್ತದೆ. ಇದು ಸುಸ್ತನ್ನೂ ಕಡಿಮೆಗೊಳಿಸುತ್ತದೆ.
- ಡೆಂಗಿ ಜ್ವರ ಕಡಿಮೆ ಮಾಡುವಲ್ಲಿ ಟೀ ಪಾತ್ರವೂ ಇದೆ. ಆದರೆ ಸಾಮಾನ್ಯ ಟೀ ಅಲ್ಲದೆ, ಮಸಾಲಾ ಟೀ ತಯಾರಿಸಿ ಕುಡಿಯಬಹುದು. ಏಲಕ್ಕಿ ಬೆರೆಸಿದ ಟೀ ಈ ಸಮಯದಲ್ಲಿ ಆರೋಗ್ಯಕ್ಕೆ ಒಳ್ಳೆಯದು.
- ಹಣ್ಣಿನ ಜ್ಯೂಸ್ನೊಂದಿಗೆ ಸೂಪ್ ಕೂಡ ಕುಡಿಯಿರಿ. ಡೆಂಗಿ ಜ್ವರ ಬಂದರೆ ಪ್ರೊಟೀನ್ ಹೊಂದಿರುವ ಆಹಾರ ಒಳ್ಳೆಯದು. ಅದರಲ್ಲೂ ಹೆಚ್ಚಾಗಿ ಮೀನು ಮತ್ತು ಕೋಳಿ ಮಾಂಸ ಸೇವಿಸಬೇಕು.
- ನಿಂಬೆ ಜ್ಯೂಸ್ ನಿಮ್ಮಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಹಾಗೂ ಡೆಂಗಿ ವೈರಸ್ ಅನ್ನು ನಾಶಪಡಿಸಲು ಸಹಕಾರಿ. ನಿಂಬೆಯೊಂದಿಗೆ ತರಕಾರಿ ಜ್ಯೂಸ್ ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ.
- ಡೆಂಗಿ ಜ್ವರ ಬಂದರೆ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಭಯವಿಲ್ಲ. ವಿಳಂಬ ಮಾಡಿದರೆ ಮಾತ್ರ ಕಷ್ಟ. ಡೆಂಗಿ ಜ್ವರ ಒಮ್ಮೆ ಬಂತೆಂದರೆ ಚೇತರಿಸಿಕೊಳ್ಳಲು ವಾರಗಟ್ಟಲೆ ಸಮಯ ಬೇಕು. ಈ ಸಮಯದಲ್ಲಿ ಚಿಕಿತ್ಸೆ ಮಾತ್ರವಲ್ಲ, ನಿಮ್ಮ ಆಹಾರ ಕ್ರಮ ಕೂಡ ಸರಿಯಾಗಿದ್ದರೆ ಡೆಂಗಿ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಬಹುದು.
- ಡೆಂಗಿ ಬಂದವರು ತಿನ್ನಬೇಕಾದ ಮುಖ್ಯ ಹಣ್ಣೆಂದರೆ ಕಿತ್ತಳೆ. ಇದರಲ್ಲಿ ಪೋಷಕಾಂಶ ಮತ್ತು ವಿಟಮಿನ್ಗಳು ಇದ್ದು, ಪಪ್ಪಾಯಿ ಎಲೆ ತಿನ್ನುವುದರಿಂದ ನಿಮ್ಮ ರಕ್ತದ ಲ್ಲಿರುವ ಪ್ಲೆಟ್ಲಟ್ ಜಾಸ್ತಿ ಸಹಾಯ ಮಾಡುತ್ತದೆ ಸಹಾಯ, ಮೂತ್ರ ವಿಸರ್ಜನೆಗೆ ಆಗಾಗ ಹೋಗುವಂತೆ ಮಾಡುವುದು. ಇದರಿಂದ ಡೆಂಗಿ ಬ್ಯಾಕ್ಟೀರಿಯಾಗಳು ಹೊರ ಹೋಗುವುದು.
ಡೆಂಗಿ ಹರಡುವ ಬಗೆ
[ಬದಲಾಯಿಸಿ]- ಡೆಂಗಿ ಈಡಿಸ್ ಎಂಬ ಸೊಳ್ಳೆಗಳಿಂದ ಹರಡುವ ಸೋಂಕು. ಹೂವಿನ ಕುಂಡ, ಬೀಸಾಕಿದ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ ಇವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದಲೇ ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತವೆ. ಆದ್ದರಿಂದ ಇವುಗಳನ್ನು ಶುಚಿಗೊಳಿಸಿ ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ನೋಡಿಕೊಳ್ಳಬೇಕು. [೪]
ಸೋಂಕಿನ ವಿವರ
[ಬದಲಾಯಿಸಿ]- ಏಡಿಸ್ ಈಜಿಪ್ಟಿ, ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಒಣ ಇಟ್ಟುಕೊಂಡು ಹೂದಾನಿಗಳ, birdbaths, ಹಳೆಯ ಟೈರ್, ಪಾತ್ರೆಗಳು, ಇತ್ಯಾದಿ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ಗುಂಡಿಗಳಿಗೆ ಸಂಗ್ರಹಿಸುತ್ತದೆ ಎಂದು ಸಿಹಿ ನೀರಿನಲ್ಲಿ ಡೆಂಗ್ಯೂ ಸೋಂಕು, ತಳಿಗಳ ಹರಡುವ ಸೊಳ್ಳೆ.
- ದೆಹಲಿ ಎಣಿಕೆ
- 2016 (ಜುಲೈ 9 ರವರೆಗೆ): 39 ಪ್ರಕರಣಗಳಲ್ಲಿ ಯಾವುದೇ ಸಾವು
- 2015: 15.867 ಪ್ರಕರಣಗಳ, 60 ಸಾವು
- 2014: 995 ಪ್ರಕರಣಗಳಲ್ಲಿ ಮೂರು ಸಾವುಗಳು
- 2013: 5.574 ಪ್ರಕರಣಗಳಲ್ಲಿ ಆರು ಸಾವು
- 2012: 2,093 ಪ್ರಕರಣಗಳಲ್ಲಿ ನಾಲ್ಕು ಸಾವುಗಳು
- 2011: 1,131 ಪ್ರಕರಣಗಳಲ್ಲಿ, ಎಂಟು ಸಾವು
- 2010: 6.259 ಪ್ರಕರಣಗಳಲ್ಲಿ, ಎಂಟು ಸಾವು
- ಓದಿ: ಎಂಟು ಡೆಂಗ್ಯೂ ಪ್ರಕರಣಗಳು ಒಂದು ವಾರದಲ್ಲಿ ದೆಹಲಿಯಲ್ಲಿ
- ಭಾರತ ಎಣಿಕೆ
- 2016 (ಜೂನ್ 28 ರವರೆಗೆ): 8,307 ಪ್ರಕರಣಗಳ, 10 ಸಾವು
- 2015: 99.913 ಪ್ರಕರಣಗಳಲ್ಲಿ; 220 ಸಾವುಗಳು
- 2014: 40.571 ಪ್ರಕರಣಗಳಲ್ಲಿ 137 ಸಾವುಗಳು
- 2013: 75.808 ಪ್ರಕರಣಗಳಲ್ಲಿ, 193 ಸಾವುಗಳು
- 2012: 50.222 ಪ್ರಕರಣಗಳಲ್ಲಿ, 242 ಸಾವುಗಳು
- 2011: 18.860 ಪ್ರಕರಣಗಳಲ್ಲಿ, 169 ಸಾವುಗಳು
- 2010: 28.292 ಪ್ರಕರಣಗಳಲ್ಲಿ 110 ಸಾವುಗಳು
- ಮೂಲ: ರಾಷ್ಟ್ರೀಯ ರೋಗ ಹರಡುವ ಕಂಟ್ರೋಲ್ ಕಾರ್ಯಕ್ರಮ
- Source: National Vector Borne Disease Control Programme:[೫]
ಮಹಾರಾಷ್ಟ್ರದಲ್ಲಿ ಡೆಂಗಿ
[ಬದಲಾಯಿಸಿ]- ೧೫-೭-೨೦೧೬
- ಮಹಾರಾಷ್ಟ್ರ ಸರಕಾರ ಈಗ ಏಡಿಸ್ ಈಜಿಪ್ಟಿ ಸೊಳ್ಳೆಯ ಡೆಂಗ್ಯೂ ಮರಿಹುಳುಗಳು ತಳಿ ಪರಿಶೀಲಿಸಲು ವಸತಿ ಆವರಣದಲ್ಲಿ ಪ್ರವೇಶಿಸಲು ಅಧಿಕಾರಿಗಳಿಗೆ ಅದಿಕಾರನೀಡಿ ಕಾನೂನು ಸಕ್ರಿಯಗೊಳಿದೆ. ಒಂದು 'ಸೂಚಿತ ರೋಗ' ಎಂದು ಡೆಂಗ್ಯೂ ವರ್ಗೀಕರಿಸಿರುವುದಾಗಿ, ರಾಜ್ಯದ ಸಾರ್ವಜನಿಕ ಆರೋಗ್ಯ ಸಚಿವ ಡಾ ದೀಪಕ್ ಸಾವಂತ್ ಹೇಳಿದ್ದಾರೆ.
- ಸಾವಂತ್ ಡೆಂಗ್ಯೂ ಕಳೆದ ವರ್ಷ 442 ಪ್ರಕರಣಗಳಲ್ಲಿ ಎರಡು ಸಾವುಗಳು ವರದಿಯಾಗಿದ್ದವು,ಹೇಳಿದರು. ಈ ವರ್ಷ, ಡೆಂಗ್ಯೂ 14,203 ಸಂದರ್ಭಗಳಲ್ಲಿ ಬೆಳಕಿಗೆ ಬಂದಿವೆ, ಮತ್ತು ಎರಡು ಸಾವುಗಳು ಇಲ್ಲಿಯವರೆಗೆ ವರದಿಯಾಗಿವೆ; ಡೆಂಗ್ಯೂ ಸಂದರ್ಭದಲ್ಲಿ ಮರಣ ಪ್ರಮಾಣ ಕುಸಿದಿದೆ. ಸುಮಾರು 2,800 ಆರೋಗ್ಯ ಕಾರ್ಯಕರ್ತರ ನಿಯೋಜನೆ ಮಾಡಲಾಗಿದೆ. ಡೆಂಗ್ಯೂ ಪ್ರಕರಣಗಳನ್ನು ನಿಭಾಯಿಸಲು ವೈದ್ಯಕೀಯ ತರಬೇತಿಯನ್ನು ನೀಡಿದೆ. ಈ ವರ್ಷದ ಜೂನ್ ಕೊನೆಯ ವರೆಗೆ 9,378 ಪ್ರಕರಣಗಳು ಕಂಡುಬಂದಿದೆ, ಆದರೆ ಕಳೆದ ವರ್ಷ 14,201 ಮಲೇರಿಯಾ ಪ್ರಕರಣಗಳನ್ನು, ಪತ್ತೆ ಮಾಡಲಾಗಿತ್ತು. [೬]
ರೋಗ ತಡೆಗೆ ಲಸಿಕೆ
[ಬದಲಾಯಿಸಿ]- ಸೊಳ್ಳೆಗಳಿಂದ ಹರಡುವ ಕಾಯಿಲೆಗಳನ್ನು ತಡೆಗಟ್ಟಲು ಸಸ್ಯ ಮೂಲ ಬಳಸಿ ತಯಾರಿಸಬಹುದಾದ ಲಸಿಕೆಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದು ಉಳಿದ ಲಸಿಕೆಗಳಿಗಿಂತ ಕಡಿಮೆ ಬೆಲೆ, ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತವೆನಿಸಿದೆ. ಜಿಕಾ ವೈರಸ್ನಿಂದ ಉಂಟಾಗುವ ಸೋಂಕು ತಡೆಗಟ್ಟಲು ಸಂಶೋಧನೆ ಕೈಗೊಂಡಿರುವ ಅಮೆರಿಕದ ‘ಆರಿಜೋನಾ ಸ್ಟೇಟ್ ವಿಶ್ವವಿದ್ಯಾಲಯ’ದ ವಿಜ್ಞಾನಿಗಳು ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. (ಪರವಾನಗಿ ದೊರಕಬೇಕು).
- ಜಿಕಾ ವೈರಾಣುಗಳು ಪ್ರೊಟಿನ್ನಿಂದ ಕೂಡಿದ ಹೊದಿಕೆಗಳನ್ನು ಹೊಂದಿದ್ದು ರಾಸಾಯನಿಕಗಳಿಗೆ ಪ್ರತಿಯಾಗಿ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸುತ್ತವೆ. ವೈರಾಣುಗಳ ಈ ವಿಶೇಷ ಸಾಮರ್ಥ್ಯವನ್ನು ತಿಳಿದ ವಿಜ್ಞಾನಿಗಳು ಮೊದಲು ಬ್ಯಾಕ್ಟೀರಿಯಾಗಳಲ್ಲಿ ಪ್ರೊಟೀನ್ ಹೊದಿಕೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನಂತರ ತಂಬಾಕು ಸಸ್ಯಗಳಲ್ಲಿ ‘ಡೊಮೇನ್3’ ಕಾರ್ಯವ್ಯಾಪ್ತಿ ರೂಪಿಸಿ ಪ್ರಯೋಗ ನಡೆಸಿದ್ದಾರೆ. ಇದರಿಂದ ಲಸಿಕೆ ಸಿದ್ಧಪಡಿಸಲು ಸಹಕಾರಿಯಾಗಿದೆ. ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದಾರೆ. ಪ್ರತಿಕಾಯ ಹಾಗೂ ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸಿರುವ ಲಸಿಕೆ ಇಲಿಗಳ ದೇಹದಲ್ಲಿ ಜಿಕಾ ವೈರಸ್ ವಿರುದ್ಧ ಯಶಸ್ವಿಯಾಗಿರುವುದು ಕಂಡುಬಂದಿದೆ.‘ಲಸಿಕೆಯು ಜೀಕಾ ವೈರಸ್ ವಿರುದ್ಧ ಪ್ರಬಲವಾಗಿ ಕಾರ್ಯನಿರ್ವಹಿಸುವ ಜತೆಗೆ ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ’. ಇದು ಡೆಂಗ್ಯು, ಕಾಮಾಲೆ ಜ್ವರದ ಚಿಕಿತ್ಸೆಗೂ ಪೂರಕವಾಗಿದೆ.’ 2015ರಲ್ಲಿ ಜಿಕಾ ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿತ್ತು. ಅಮೆರಿಕದಲ್ಲಿ ಲಕ್ಷಾಂತರ ಜನರಿಗೆ ಹರಡಿ ಆತಂಕ ಸೃಷ್ಟಿಯಾಗಿತ್ತು. ಜಿಕಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಗರ್ಭಿಣಿಯರು ಮಿದುಳು ತೊಂದರೆಗೆ ಒಳಗಾದ ಮಕ್ಕಳನ್ನು ಹೆರುವಂತಾಯಿತು.[೭]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ http://www.who.int/denguecontrol/mosquito/en/
- ↑ http://www.wrbu.org/generapages/aedes.htm
- ↑ "ಡೆಂಗ್ಯೂ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ". kannadanews.today. October 21, 2021.
- ↑ ಆಧಾರ:ಭಾರತ ಕೇಂದ್ರ ಆರೋಗ್ಯ ಸಚಿವಾಲಯ;ವರದಿ ಪ್ರಜಾವಾಣಿ-೨೮-೬-೨೦೧೬.
- ↑ ಹೆಚ್ಚಿನ ವಿವರಕ್ಕೆ:[[೧]]
- ↑ http://www.hindustantimes.com/mumbai-news/dengue-now-a-notified-disease-in-maharashtra-14-203-cases-reported-so-far/story-3MYckXfNh8reaJfsUrYxSP.html
- ↑ ‘ಜಿಕಾ’ ಸೋಂಕು ತಡೆಗೆ ಲಸಿಕೆ ಅಭಿವೃದ್ಧಿ