ವಿಷಯಕ್ಕೆ ಹೋಗು

ಎಬೋಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
2014ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಕಂಡು ಬಂದ ಎಬೋಲಾ ಸಾಂಕ್ರಾಮಿಕ ವೈರಾಣು

ಇಬೊಲ ರೋಗ (EVD) ಅಥವಾ ಎಬೊಲ ಹೆಮರಾಜಿಕ್ ಜ್ವರ (ಈ ಹೆಚ್ ಎಫ್), ಇದು ವೈರಾಣುವಿನಿಂದ ಉಂಟಾಗುವ ರೋಗ. [೧]

ಎಬೋಲಾ ಹರಡುವ ಕ್ರಮ
 • ಹರಡುವಿಕೆ: ಕೋತಿ ಅಥವಾ ಬಾವಲಿಯ ರಕ್ತದ ಸೋಂಕಿನಿಂದ,ಸೋಂಕಿನ ಗಾಳಿ ಅಥವಾ ರೋಗಿಯ ವೀರ್ಯದಿಂದ ಹರಡುತ್ತದೆ.

ಸಮಯ: ವೈರಸ್ ಸೋಂಕು ತಗುಲಿದ ಎರಡು ದಿನ ಅಥವಾ ಹೆಚ್ಚೆಂದರೆ ಮೂರು ವಾರಗಳ ಒಳಗೆ ಸಮಸ್ಯೆ ಶುರುವಾಗುತ್ತವೆ.

 • ಲಕ್ಷಣಗಳು: ಗಂಟಲು ನೋವು, ಸ್ನಾಯು ನೋವು ಮತ್ತು ತಲೆನೋವು, ಯಕೃತ್ತು ಮತ್ತು ಮೂತ್ರ ಕಾರ್ಯನಿರ್ವಹಣೆಯ ಹದಗೆಡುತ್ತದೆ. ಜೊತೆಗೆ ಸಾಮಾನ್ಯವಾಗಿ ವಾಕರಿಕೆ, ವಾಂತಿ ಮತ್ತು ಭೇದಿ, ಕೆಲವು ರೋಗಿಗಳು ರಕ್ತ-ಸ್ರಾವ ದಿಂದ ಕೂಡ ಬಳಲಬಹುದು.
 • ಚಿಕಿತ್ಸೆ ಅಥವಾ ಮದ್ದು: ೨೦೧೪ರವರೆಗೆ ಯಾವುದೇ ಚುಚ್ಚುಮದ್ದು ಕಂಡು ಹಿಡಿದಿಲ್ಲ.
 • ಸ್ಥಳ: ಆಫ್ರಿಕಾದ ಸಹಾರಾ (ಮರುಭೂಮಿ) ವ್ಯಾಪ್ತಿಯಲ್ಲಿ. (ಮುಖ್ಯವಾಗಿ ಕಾಂಗೋ, ಲೈಬೀರಿಯಾ, ಗಿನಿ ಮತ್ತು ಸಿಯೆರಾ ಲಿಯೋನ್‌ನಲ್ಲಿ ಕಾಣಿಸಿಕೊಂಡಿದೆ)
ಎಬೋಲಾ ರೋಗದ ಲಕ್ಷಣ

ಎಬೋಲಾ ಎಚ್ಚರಿಕೆ -ದಿ.9-8-2014[ಬದಲಾಯಿಸಿ]

ವಿಶ್ವ ಆರೋಗ್ಯ ಸಂಸ್ಥೆಯು ದಿ 8-8-2014 ದಂದು ಆಫ್ರಿಕಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ‘ಎಬೋಲಾ’ ಕಾಯಿಲೆ ಗಂಭೀರ ಅಂತರ¬ರಾಷ್ಟ್ರೀಯ ಮಟ್ಟದಲ್ಲಿ ತುರ್ತಾಗಿ ಪರಿಗಣಿಸಬೇಕಾದ ವಿಚಾರ ಎಂದು, ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಘೋಷಿಸಿದೆ. ಇದುವರೆಗೆ ಸುಮಾರು ಒಂದು ಸಾವಿರ ಜನರನ್ನು ಬಲಿ ತೆಗೆದುಕೊಂಡ ಈ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಎಲ್ಲರೂ ಸಹಾಯ ಮಾಡಬೇಕು ಎಂದು ಅದು ಅಂತರರಾಷ್ಟ್ರೀಯ ಸಮುದಾ¬ಯಕ್ಕೆ ಕರೆ ನೀಡಿದೆ.
೨೦೧೩ರ ಡಿಸೆಂಬರ್ ೬ರಂದು ಗಿನಿ ದೇಶದ ಮಿಲಿ¬ಯಾಂಡು ಎಂಬ ಹಳ್ಳಿಯಲ್ಲಿ ಎರಡು ವರ್ಷದ ಮಗು ಸತ್ತಿತು. ಮುಂದಿನ ಒಂದು ತಿಂಗಳಲ್ಲಿ ಆ ಮಗುವಿನ ಅಕ್ಕ, ತಾಯಿ, ಅಜ್ಜಿ ಸತ್ತರು. ಅವರ ಆರೈಕೆಗೆಂದು ಹೋಗಿದ್ದ ಸೂಲ¬ಗಿತ್ತಿ ಅಲ್ಲೇ ಸಮೀಪದ ಮೆಸೆಂಟಾ ಆಸ್ಪತ್ರೆಯಲ್ಲಿ ಸತ್ತಳು. ಆಕೆಯನ್ನು ಪರೀಕ್ಷಿಸಿದ ಆರೋಗ್ಯ ಕಾರ್ಯ¬ಕರ್ತನಿಗೆ ಫೆಬ್ರುವರಿ ೧೦ರಂದು ಸಾವು ಬಂತು. ಇವನಿಗೆ ಶುಶ್ರೂಷೆ ನೀಡಿದ ವೈದ್ಯರು ಫೆ. ೨೪ರಂದು ಸತ್ತರು. ಐದು ದಿನಗಳ ನಂತರ ಇದೇ ವೈದ್ಯರ ಸಮೀಪ ಸಂಬಂಧಿಯೊಬ್ಬ ಸಾವಪ್ಪಿದ. ಹತ್ತು ದಿನಗಳ ನಂತರ ವೈದ್ಯರ ಇಬ್ಬರು ತಮ್ಮಂದಿರು ಅಸು ನೀಗಿದರು.

", ನಾಗೇಶ ಹೆಗಡೆ ಪ್ರಜಾವಾಣಿ

ಪಶ್ಚಿಮ ಆಫ್ರಿಕಾದ ಸುಮಾರು 60 ಕಡೆಗಳಲ್ಲಿ ‘ಎಬೋಲಾ’ ಹಬ್ಬಿದ್ದು ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ತರಾತುರಿಯಲ್ಲಿ ಜಿನಿವಾದಲ್ಲಿ ಎರಡು ದಿನ ಸಭೆ ನಡೆಸಿ ‘ಜಾಗತಿಕ ಆರೋಗ್ಯ ತುರ್ತು ಸ್ಥಿತಿ’ ಘೋಷಣೆ ಮಾಡಿದರು
 • ಕಳೆದ 40 ವರ್ಷಗಳಲ್ಲಿ ಸಾಂಕ್ರಾ¬ಮಿಕ ರೋಗವೊಂದು ಇಷ್ಟೊಂದು ವ್ಯಾಪಕವಾಗಿ ಹಬ್ಬಿದ ಉದಾಹರಣೆ ಇಲ್ಲ.
 • ಆದ್ದರಿಂದ ಇದೊಂದು ಜಾಗತಿಕ ಗಂಡಾಂತರವೆಂದು ಭಾವಿಸಿ ತೊಂದರೆಯಲ್ಲಿ ಇರುವ ದೇಶಗಳಿಗೆ ಇತರ ರಾಷ್ಟ್ರಗಳು ಎಲ್ಲಾ ರೀತಿಯ ನೆರವು ನೀಡಬೇಕು ಎಂದು ಸಂಸ್ಥೆಯ ನಿರ್ದೇಶಕಿ ಡಾ. ಮಾರ್ಗರೆಟ್ ಚಾನ್ ಮನವಿ ಮಾಡಿದ್ದಾರೆ. ಪಶ್ಚಿಮ ಆಫ್ರಿಕಾ ದೇಶಗಳಾದ ಲೈಬೀರಿಯಾ, ಗಿನಿ ಮತ್ತು ಸಿಯೆರಾ ಲಿಯೋನ್‌ನಲ್ಲಿ ಈ ರೋಗವು ಭಾರಿ ಅನಾಹುತ ಎಸಗಿದೆ
 • ಭಾರತ ದೇಶದಲ್ಲಿ ಎಬೋಲಾ ಕಾಣಿಸಿಕೊಳ್ಳದಿದ್ದರೂ ಸರ್ಕಾರ ಅಗತ್ಯ ಮುನ್ನೆ¬ಚ್ಚರಿಕೆ ತೆಗೆದುಕೊಂಡಿದೆ. ವೈರಾಣು ಕಾಣಿಸಿಕೊಂಡ ದೇಶಗಳಿಂದ ಭಾರತಕ್ಕೆ ಬರುವ ಜನರ ಮೇಲೆ ನಿಗಾ ವಹಿಸಲಾಗಿದೆ ಎಂದಿದ್ದಾರೆ ಆರೋಗ್ಯ ಸಚಿವರು.
 • ಇದೇ ವೇಳೆ ಎಬೋಲಾ ಸೋಂಕು ಕಂಡುಬಂದಿರುವ ದೇಶಗಳಿಗೆ ಪ್ರವಾಸ ಕೈಗೊಳ್ಳದಿರಲು ಭಾರತೀಯರಿಗೆ ಸರ್ಕಾರ ಸೂಚಿಸಿದೆ. ಎಬೋಲಾ ಸೋಂಕು ಪತ್ತೆಯಾದ ದೇಶಗಳಲ್ಲಿ ಅಂದಾಜು 45,000 ಭಾರತೀಯರು ಇದ್ದಾರೆ.
 • ವಿಶ್ವಸಂಸ್ಥೆ (ಪಿಟಿಐ): ಪಶ್ಚಿಮ ಆಫ್ರಿಕಾದಲ್ಲಿ ತೀವ್ರವಾಗಿ ಹರಡುತ್ತಿರುವ ಮಾರಣಾಂತಿಕ ಎಬೋಲಾ ವೈರಸ್‌ ಸೋಂಕಿನ ಪರಿಣಾಮ ಹತ್ತು ಲಕ್ಷಕ್ಕೂ ಹೆಚ್ಚು ಜನರ ಮೇಲೆ ಉಂಟಾಗಿದ್ದು, ತಕ್ಷಣದಲ್ಲಿ ಸೋಂಕಿನ ನಿವಾರಣೆ ಸಾಧ್ಯವಿರದ ಕಾರಣ ಸೋಂಕು ಹರಡದಂತೆ ವಿಶೇಷ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
 • ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕಿ ಮಾರ್ಗರೇಟ್‌ ಚಾನ್‌ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ‘ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಮಾರಣಾಂತಿಕ ಎಬೋಲಾ ವೈರಸ್‌ ಸೋಂಕಿನ ಪರಿಣಾಮ ಎದುರಿಸುತ್ತಿದ್ದಾರೆ. ಇವರಿಗೆ ಆಹಾರ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕಿದೆ. ಸೋಂಕು ಹರಡುವುದನ್ನು ತಡೆಯಲು ವಿಶೇಷ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ತೀವ್ರ ಆರೋಗ್ಯ ಬಿಕ್ಕಟ್ಟು ತಲೆದೋರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ‘ಮಾರಣಾಂತಿಕ ಎಬೋಲಾ ಸೋಂಕಿನ ನಿವಾರಣೆಗೆ ವಿಶ್ವ ಆರೋಗ್ಯ ಸಂಸ್ಥೆ ಶ್ರಮ ವಹಿಸುತ್ತಿದ್ದು, ವಿಶ್ವ ಸಂಸ್ಥೆಯಿಂದಲೂ ಅಗತ್ಯ ಸಹಕಾರ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

 • ಇದುವರೆಗೆ ಎಬೋಲಾ ಸೋಂಕಿಗಾಗಿ ಯಾವುದೇ ಔಷಧಿಯನ್ನು ಕಂಡು ಹಿಡಿಯ¬ಲಾಗಿಲ್ಲ. ಸರ್ಕಾರ ಕೂಡ ಯಾವುದೇ ಹೊಸ ಔಷಧಿಯನ್ನು ಪ್ರಯೋಗಿಸಿ ನೋಡಲು ಅನುಮತಿ ನೀಡಿಲ್ಲ. ಆದರೆ, ಎಬೋಲಾ ತಡೆಯಲು ದಕ್ಷಿಣ ಆಫ್ರಿಕಾ ದೇಶಗಳ ಮಾರುಕಟ್ಟೆಗೆ ಅಮೆರಿಕ ಮೂಲದ ಕಂಪೆನಿಯೊಂದರ ‘ಜಡ್‌ಮ್ಯಾಪ್‌’ ಎನ್ನುವ ಅನಧಿಕೃತ ಔಷಧ ಈಗ ಲಗ್ಗೆ ಇಟ್ಟಿದೆ. ಆದರೆ, ಇದನ್ನು ಪ್ರಯೋಗಿಸಿ ನೋಡಿ ಯಶಸ್ವಿಯಾಗಿದ್ದರ ಬಗ್ಗೆ ಎಲ್ಲೂ ವರದಿಯಾಗಿಲ್ಲ (೧೪-೮-೨೦೧೪)

ರೋಗದ ಆರಂಭಿಕ ಹಾಗೂ ನಂತರದ ಲಕ್ಷಣಗಳು[ಬದಲಾಯಿಸಿ]

Ebola haemorrhagic fever is one of the most virulent viral diseases known to humankind, causing death in 50-90% of cases. The Ebola virus is transmitted by direct contact with the blood, secretions, organs or semen of infected persons. The Ebola virus was first identified in 1976 in the western equatorial province of Sudan and in the nearby region of Yambuku, northern Democratic Republic of the Congo, (then Zaire.)

", ([[೧]])

 • ರೋಗ ಲಕ್ಷಣ;- ಅತಿಯಾದ ಜ್ವರ ಮತ್ತು ಕೆಲವು ಸಂದರ್ಭಗಳಲ್ಲಿ ನಿಲ್ಲದ ರಕ್ತಸ್ರಾವ. ರೋಗಿಯ ಎಂಜಲು, ವೀರ್ಯ, ರಕ್ತದಿಂದ ರೋಗ ಹರಡುತ್ತದೆ. ರೋಗಿಗಳ ಆರೈಕೆ ಮಾಡುವವರಿಗೆ ರೋಗ ತಗಲುವ ಸಾಧ್ಯತೆ ಹೆಚ್ಚು.
 • 1976ರಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ರೋಗಕ್ಕೆ ಕಾಂಗೊ ಗಣರಾಜ್ಯದ ನದಿ ‘ಎಬೋಲಾ’ದ ಹೆಸರು ಇಡಲಾಗಿದೆ
 • ಹೆಮರಾಯಿಕ್ ಲಕ್ಷಣವೆಂದರೆ- ರಕ್ತ ಶ್ರಾವ ದೇಹದ ಒಳಗಡೆ ಮತ್ತು ಹೊರಭಾಗದಲ್ಲಿ. (ಚರ್ಮ‍ ಬಿರುಕುಗಳಲ್ಲಿ?)
 • ಆರಂಭಿಕ ಹಂತ : ತಲೆನೋವು, ಗಂಟಲು ನೋವು, ಮಾಂಸಖಂಡ ನೋವು, ಚರ್ಮದಮೇಲೆ ಬೊಕ್ಕೆ, ಜ್ವರ, ತೀವ್ರ ನಿಶಕ್ತಿ.
 • ಬೆಳವಣಿಗೆಯ ಹಂತ : ವಾಂತಿ ಬೇಧಿ, ಆಂತರಿಕ ಮತ್ತು ಬಾಹ್ಯ ರಕ್ತ ಶ್ರಾವ, ಮೂತ್ರ ಪಿಂಡ ಮತ್ತು ಯಕೃತ್ ಕಾರ್ಯದಲ್ಲಿ ತೊಂದರೆ

14-8-2014 ರವರೆಗಿನ ರೋಗ ಪೀಡಿತರು[ಬದಲಾಯಿಸಿ]

ವಿಶ್ವ ಆರೋಗ್ಯ ಸಂಸ್ಥೆಯ ವರದಿ :-

ರಾಜ್ಯ ಮತ್ತು ವಿವರ ಹೊಸ ಸೋಂಕು ನಿಶ್ಚಿತ ಅನುಮಾನ ಸಂಶಯಿತ ಸೋಂಕು ಒಟ್ಟು
ಗಿನಿ ರಾಜ್ಯ Guinea 4 369 133 8 510
ಸಾವು Deaths 4 242 133 2 377
ಲೈಬೀರಿಯಾ Liberia ರೋಗಿಗಳ ಸಂಖ್ಯೆ Cases 71 166 358 146 670
ಸಾವು Deaths 32 149 153 53 355
Nigeria ನೈಜೀರಿಯಾ ರೋಗಿಗಳ ಸಂಖ್ಯೆ Cases 0 10 0 2 12
ಸಾವು Deaths 1 0 3 0
Sierra Leone ಸಿಯೇರಾ ಲಿಯೊನ ರೋಗಿಗಳ ಸಂಖ್ಯೆ Cases 53 706 38 39 783
ಸಾವು Deaths 19 295 34 5 334
ಒಟ್ಟು ರೋಗಿಗಳ ಸಂಖ್ಯೆ Cases 128 1251 529 195 1975
ಒಟ್ಟು ಸಾವು Deaths 56 686 323 60 1069
(1) New cases were reported between 10 and 11 August 2014.

ಎಬೋಲಾರೋಗಕ್ಕೆ ಲಸಿಕೆ-ಔಷಧಿ[ಬದಲಾಯಿಸಿ]

ಮಾರಕ ರೋಗ ‘ಎಬೋಲಾ’ಕ್ಕೆ ಅಮೆರಿಕ ತಯಾರಿಸಿರುವ ಔಷಧಿ¬ಯನ್ನು ಲೈಬೀರಿಯಾದಲ್ಲಿ ಬಳಸಲು ಆರಂಭಿಸಲಾಗಿದೆ. ಅಮೆರಿಕದಿಂದ ಕಳೆದ ವಾರವೇ ಪೂರೈಕೆ¬ಯಾಗಿರುವ ಈ ಔಷಧಿಯನ್ನು ಇದೀಗ ದೇಶದಲ್ಲಿ ಎಬೋಲಾ ರೋಗಿಗಳಿಗೆ ನೀಡಲಾಗು ತ್ತಿದೆ ಎಂದು ಲೈಬೀರಿಯಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಹೊಸ ಔಷಧಿ ಬಳಸುತ್ತಿರುವ ರೋಗಿಗಳ ಪೈಕಿ ಲೈಬೀರಿಯಾದ ಎಬೋಲಾ ಪೀಡಿತವೈದ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲೈಬೀರಿಯಾ ಅಧ್ಯಕ್ಷ ಎಲೆನ್‌ ಜಾನ್ಸನ್‌ ಸಿರ್ಲೀಫ್‌ ಅವರ ಕೋರಿಕೆ ಮೇರೆಗೆ ‘ಜಿಮ್ಯಾಪ್‌’ (ZMAPP) ಎಂಬ ಈ ಔಷಧಿಯನ್ನು ಅಮೆರಿಕ ರವಾನಿಸಿದೆ ಎಂದು ಉಪ ಆರೋಗ್ಯ ಸಚಿವ ಟಾಲ್ಬರ್ಟ್‌ ನ್ಯೇನ್‌ಸ್ವಾ ತಿಳಿಸಿದ್ದಾರೆ.

ಲೈಬೀರಿಯಾದಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಎಬೋಲಾ ಸೋಂಕಿಗೆ ಒಳಗಾಗಿದ್ದ ಅಮೆರಿಕದ ಕೆಂಟ್‌ ಬ್ರಂಟ್ಲೆ ಮತ್ತು ನ್ಯಾನ್ಸಿ ರಿಟ್‌ಬೋಲ್‌ ಅವರಿಗೆ ಈ ಔಷಧಿಯನ್ನು ಮೊದಲ ಬಾರಿಗೆ ಪ್ರಯೋಗಿಸ¬ಲಾಗಿದ್ದು, ಅಲ್ಲಿಂದೀಚೆ ಅವರಲ್ಲಿ ಗಣನೀಯ ಚೇತರಿಕೆ ಕಂಡುಬರುತ್ತಿದೆ. ಆದರೆ ಎಬೋಲಾದಿಂದ ನರಳುತ್ತಿದ್ದ ಸ್ಪೈನ್‌ನ ಧರ್ಮಗುರು ಮಿಗುಯೆಲ್‌ ಪಜಾರೆಸ್‌ ಅವರಿಗೆ ಇದೇ ಔಷಧಿ ನೀಡಿದರೂ ಮೂರು ದಿನಗಳ ನಂತರ ಮ್ಯಾಡ್ರಿಡ್‌ನಲ್ಲಿ ಸಾವನ್ನಪ್ಪಿದ್ದರು.(19 AUGUST, 2014)

", ಪ್ರಜಾವಾಣಿ[[೨]]

 • ಇದುವರೆಗೆ ಎಬೋಲಾ ಸೋಂಕಿಗಾಗಿ ಯಾವುದೇ ಔಷಧಿಯನ್ನು ಕಂಡು ಹಿಡಿಯಲಾಗಿಲ್ಲ. ಸರ್ಕಾರ ಕೂಡ ಯಾವುದೇ ಹೊಸ ಔಷಧಿಯನ್ನು ಪ್ರಯೋಗಿಸಿ ನೋಡಲು ಅನುಮತಿ ನೀಡಿಲ್ಲ. ಆದರೆ, ಎಬೋಲಾ ತಡೆಯಲು ದಕ್ಷಿಣ ಆಫ್ರಿಕಾ ದೇಶಗಳ ಮಾರುಕಟ್ಟೆಗೆ ಅಮೆರಿಕ ಮೂಲದ ಕಂಪೆನಿಯೊಂದರ ‘ಜಡ್‌¬ಮ್ಯಾಪ್‌’(ZMAPP) ಎನ್ನುವ ಅನಧಿಕೃತ ಔಷಧ ಈಗ ಲಗ್ಗೆ ಇಟ್ಟಿದೆ. ಆದರೆ, ಇದನ್ನು ಪ್ರಯೋಗಿಸಿ ನೋಡಿ ಯಶಸ್ವಿಯಾಗಿದ್ದರ ಬಗ್ಗೆ ಎಲ್ಲೂ ವರದಿಯಾಗಿಲ್ಲ,,(15/08/2014);ಆ ಔಷಧವನ್ನು ಸದ್ಯಕ್ಕೆ ಅಮೆರಿಕ, ಯೂರೋಪ್‌ನಿಂದ ಆಫ್ರಿಕಕ್ಕೆ ಹೋಗಿದ್ದ ಬಿಳಿ ಜನರಿಗೆ ಮಾತ್ರ ಕೊಡಲಾಗುತ್ತಿದೆ. (??)

ಎಬೋಲಾ ವೈರಸ್[ಬದಲಾಯಿಸಿ]

ಎಬೋಲಾ ಮತ್ತು ಮಾರ್‌ಬರ್ಗ್ ಒಂದೇ ಬಗೆಯ ವೈರಾಣುಗಳು (virus)ಅವು ಹತ್ತಿರದ ಸಂಬಂಧಿಗಳು. ೧೯೭೦//1970 ರ ಹೊತ್ತಿಗೆ ಮಾರ್‌ಬರ್ಗ್ ರೋಗ ೧೫೦೦//1500 ಕ್ಕೂ ಹೆಚ್ಚುಜನರ ಸಾವಿಗೆ ಕಾರಣವಾಗಿದೆ. ಅದು ಆಫ್ರಿಕಾದ ಸತ್ತ ಮಂಗಗಳ ದೇಹದ ಭಾಗಗಳನ್ನು ಪರೀಕ್ಷಿಸಿದ ಕೆಲಸಗಾರರಿಗೆ ಮತ್ತು ಅವರಿಂದ ಇತರ ಮಾನವರಿಗೆ ಹಬ್ಬಿದೆ. ಅದೂ ಕೂಡ ರಕ್ತ ಶ್ರಾವ ಮೊದಲಾದ ಎಬೊಲಾದ ರೋಗ ಲಕ್ಷಣಗಳನ್ನು ಹೊಂದಿದೆ. ಇಲೆಕ್ಟ್ರಾನಿಕ್ ಸೂಕ್ಷ್ಮ ದರ್ಶಕ ಯಂತ್ರದಿಂಧ ನೋಡಿದಾಗ ಅದು ಹಾಗೂ ಎಬೋಲ ವೈರಸ್ ಇಂಗ್ಲಷ್ ಯು /ʊ ನಂತೆ ಅಥವಾ ಚಿಕ್ಕ ದಾರದ ತುಂಡುಗಳಂತೆ ಕಾಣುವುದು. ಮಾರ್‌ಬರ್ಗ್ ವೈರಾಣುವನ್ನು೧೯೬೭//1967 ರಲ್ಲಿ ಜರ್ಮನಿಯ . ಮಾರ್‌ಬರ್ಗ್ ಊರಿನ ಪ್ರಯೋಗ ಶಾಲೆಯಲ್ಲಿ ಬೇರ‍್ಪಡಿಸಿ ಪತ್ತೆಹಚ್ಚಲಾಯಿತು. ಆದ್ದರಿಂದ ಆ ಹೆಸರು ಬಂದಿದೆ. ಕಾಂಗೋ ರಾಜ್ಯದ ಎಬೋಲಾ ನದಿಯ ಹತ್ತಿರ ೧೯೭೬//1976 ರಲ್ಲಿ ಮೊದಲಿಗೆ ಈ ಎಬೋಲಾ ರೋಗ ಕಾರಕ ವೈರಾಣು ಕಾಣಿಸಿಕೊಂಡಿದ್ದು ಪತ್ತೆಯಾದ್ದರಿಂದ ಅದಕ್ಕೆ ಆ ಹೆಸರು ಕೊಡಲಾಗಿದೆ. ಈ ಎಬೋಲಾ ರೋಗದಿಂದ ಬಹಳ ಸಂಖ್ಯೆಯ ಗೊರಿಲ್ಲಾ ಮತ್ತು ಚಿಂಪಾಂಜಿಗಳು ಸತ್ತಿವೆ. ಅವುಗಳ ಸಂಪರ್ಕದಿಂದ ಮಾನವರಿಗೆ ಈ ರೋಗ ಅಂಟಿದೆ.(ಆಧಾರ:ಎನ್ಕಾರ್ಟ)

 • ಎಬೋಲಾ ಮತ್ತು ಮಾರ್‌ಬರ್ಗ್ ವೈರಾಣುಗಳು (virus), ಇಲೆಕ್ಟ್ರಾನಿಕ್ ಸೂಕ್ಷ್ಮ ದರ್ಶಕ ಯಂತ್ರದಿಂಧ ನೋಡಿದಾಗ-[ ʆ .. ʃ .. ₰ ..ڪ ..ʊ ..U-]ಈ ರೀತಿ ಕಾಣುತ್ತವೆ

ಆಧಾರ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. http://www.who.int/mediacentre/factsheets/fs103/en/
"https://kn.wikipedia.org/w/index.php?title=ಎಬೋಲಾ&oldid=1201827" ಇಂದ ಪಡೆಯಲ್ಪಟ್ಟಿದೆ