ವಿಷಯಕ್ಕೆ ಹೋಗು

ಜಲಂಧರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಲಂಧರ್
Jalandhar
city
Government
 • Divisional CommissionerS.R.Ladhar
Population
 (2001)
 • Total೭,೦೯,೨೫೫

ಜಲಂಧರ್ (ಪಂಜಾಬಿ:ਜਲੰਧਰ, ಹಿಂದಿ: जलंधर ), ಎಂಬುದು ಭಾರತದ ಪಂಜಾಬ್ ರಾಜ್ಯದ ಜಲಂಧರ್ ಜಿಲ್ಲೆಯ ಒಂದು ನಗರ. ಹಿಂದೂ ಪುರಾಣದ ಪ್ರಕಾರ, ಜಲಂಧರ ಎಂಬುದು ಸತ್ಯಯುಗದಲ್ಲಿದ್ದ ಒಬ್ಬ ರಾಕ್ಷಸನ ನಾಮಸೂಚಕ ಸಾಮ್ರಾಜ್ಯ. ಮಹಾಭಾರತದ ಅವಧಿಯಲ್ಲಿ ಈ ಪ್ರದೇಶವನ್ನು ಪ್ರಸ್ಥಲ ಎಂದು ಕರೆಯಲಾಗುತ್ತಿತ್ತು ಜೊತೆಗೆ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಜುಲ್ಲುಂದುರ್ ಎಂಬ ಹೆಸರಿನಿಂದ ಪರಿಚಿತವಾಗಿತ್ತು.

ಪುರಾಣಗಳಲ್ಲಿ

[ಬದಲಾಯಿಸಿ]

ಜಲಂಧರ ಎಂಬ ದೈತ್ಯ ಇಲ್ಲಿ ವಾಸವಾಗಿದ್ದನೆಂದೂ ಈ ರಾಕ್ಷಸನ ಉಪಟಳ ಅತಿಯಾದಾಗ ಶ್ರೀವಿಷ್ಣು ಈತನನ್ನು ಕೊಂದನೆಂದೂ ಪದ್ಮಪುರಾಣದಲ್ಲಿ ಹೇಳಿದೆ. 7ನೆಯ ಶತಮಾನದ ಪೂರ್ವಾರ್ಧದಲ್ಲಿ ಇಲ್ಲಿಗೆ ಭೇಟಿ ಕೊಟ್ಟ ಚೀನೀ ಯಾತ್ರಿಕ ಹ್ಯೂಯೆನ್‍ತ್ಸಾಂಗ್‍ನ ಯಾತ್ರಾವೃತ್ತದಲ್ಲಿ ಜಲಂಧರ ಉಲ್ಲೇಖವಿದೆ. ಈ ಸುಂದರ ನಗರದ ಸುತ್ತಳತೆ 2 ಮೈ. ಇತ್ತೆಂದೂ ಇಲ್ಲಿ ನಗರಧನ್ ಎಂಬ ಪ್ರಸಿದ್ಧ ಬೌದ್ಧ ವಿಹಾರವಿತ್ತೆಂದೂ ತಾನು ಅಲ್ಲಿ ಚಂದ್ರವರ್ಮನೆಂಬ ವಿದ್ವಾಂಸನ ಕೈಕೆಳಗೆ ಬೌದ್ಧ ಗ್ರಂಥಗಳನ್ನು ಅಧ್ಯಯನ ಮಾಡಿದುದಾಗಿಯೂ ಅವನು ಹೇಳಿದ್ದಾನೆ. ಯೋಗಿನೀ ತಂತ್ರದಲ್ಲಿ ಜಲಂಧರ-ದೋಅಬ್ ಪ್ರದೇಶವನ್ನು ತ್ರಿಗರ್ತ ಎಂದು ಹೇಳಲಾಗಿದೆ. ಇಲ್ಲಿ ವಿಶ್ವಮುಖಿ ದೇವಿಯ ಒಂದು ದೇವಾಲಯವುಂಟು. ಐವತ್ತೊಂದು ಶಕ್ತಿ ಪೀಠಗಳಲ್ಲಿ ಇದು ಒಂದು.

ಇತಿಹಾಸ

[ಬದಲಾಯಿಸಿ]
ಚಿತ್ರ:Jalandhar After a Shower gopal1035.jpg
ಮಳೆಯ ನಂತರ ಕಂಡು ಬಂದ ಸಮೃದ್ಧ ವನರಾಜಿ
BMC ಚೌಕ್

ಜಲಂಧರ್ ಮುಲ್ತಾನ್‌ನ ಜೊತೆಯಲ್ಲಿ ಕಟೋಚ್ ರಾಜರತ್ರಿಗರ್ತ‌ ಸಾಮ್ರಾಜ್ಯದ(ಪಂಜಾಬ್ ಪ್ರದೇಶ)ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ನಗರವಾಗಿದೆ. ಇತಿಹಾಸದಲ್ಲಿ ಇದರ ಉಲ್ಲೇಖವನ್ನು ಸುಮಾರು A.D. ೧೦೦ರಷ್ಟು ಹಿಂದಕ್ಕೆ ಗುರುತಿಸಬಹುದಾಗಿದೆ.[] ಜಲಂಧರ್ ಡೋಅಬ್(ಬಿಯಾಸ್ ಹಾಗು ಸಟ್ಲೆಜ್ ನದಿಗಳ ನಡುವೆ ನಗರವನ್ನು ಸುತ್ತುವರಿದ ಪ್ರದೇಶ) ಅಲೆಕ್ಸಾಂಡರ್ ದಿ ಗ್ರೇಟ್ ನ ಸಾಮ್ರಾಜ್ಯದ ಪೂರ್ವದಿಕ್ಕಿನ ಭೂಪ್ರದೇಶವೆಂದು ಗುರುತಿಸಲ್ಪಟ್ಟಿತ್ತು. ಆತ ಈ ಪೂರ್ವದಿಕ್ಕಿನ ಭೂಪ್ರದೇಶವನ್ನು ಗುರುತಿಸುವ ಸಲುವಾಗಿ ಬೃಹತ್ ಗಾತ್ರದ ಆಲ್ಟಾರ್(ಎತ್ತರದ ರಚನೆಗಳು)ಗಳನ್ನು ನಿರ್ಮಿಸುತ್ತಾನೆ. ಅಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಅಲೆಕ್ಸಾಂಡ್ರಿಯಾ ಎಂಬ ನಗರವನ್ನು ಸ್ಥಾಪಿಸಿ ಹಲವು ಮ್ಯಾಸಿಡೋನಿಯನ್ ಮಾಜಿ ಯೋಧರನ್ನು ಆ ಪ್ರದೇಶದಲ್ಲಿ ಬಿಡುತ್ತಾನೆ.

ಏಳನೇ ಶತಮಾನದಲ್ಲಿ, ಹರ್ಷವರ್ಧನನ ಆಳ್ವಿಕೆಯಲ್ಲಿ ಭಾರತಕ್ಕೆ ಪ್ರಸಿದ್ಧ ಚೈನೀಸ್ ಪ್ರವಾಸಿಗ ಹಾಗು ಯಾತ್ರಿ ಹುಯನ್ಸಾಂಗ್‌ಭೇಟಿ ನೀಡಿದಾಗ, ಜಲಂಧರ ಅಥವಾ ತ್ರಿಗರ್ತ ಸಾಮ್ರಾಜ್ಯವು ರಾಜ ಉತಿತೋನ ಆಳ್ವಿಕೆಗೆ ಒಳಪಟ್ಟಿತ್ತು (ಈತನನ್ನು ಅಲೆಕ್ಸಾಂಡರ್ ಕನ್ನಿಂಗ್‌ಹ್ಯಾಮ್ ಕಟೋಚ್ ಸಾಮ್ರಾಜ್ಯದ ದೊರೆ ರಜಪೂತ್ ರಾಜ ಅತ್ತರ್ ಚಂದ್ ಜೊತೆ ಗುರುತಿಸುತ್ತಾನೆ). ಸಾಮ್ರಾಜ್ಯವು ಪೂರ್ವದಿಂದ ಪಶ್ಚಿಮಕ್ಕೆ ೧೬೭ ಮೈಲಿಗಳು (೨೬೯ ಕೀ.) ಹಾಗು ಉತ್ತರದಿಂದ ದಕ್ಷಿಣಕ್ಕೆ ೧೩೩ ಮೈಲಿ (೨೧೪ ಕೀ.) ವಿಸ್ತರಿಸಿತ್ತು, ಈ ರೀತಿಯಾಗಿ ಗುಡ್ಡಗಾಡಿನ ರಾಜ್ಯಗಳಾದ ಚಂಬಾ, ಮಂಡಿ ಹಾಗು ಸುಕೆತ್ (ಹಿಮಾಚಲ ಪ್ರದೇಶ) ಹಾಗು ಸತದ್ರು ಅಥವಾ ಸಿರ್ಹಿಂದ್ ಸಮತಲ ಪ್ರದೇಶಗಳನ್ನು ಒಳಗೊಂಡಿತ್ತು. ಹುಯನ್‌ಸಾಂಗ್ ನಗರಕ್ಕೆ ಭೇಟಿ ನೀಡಿದಾಗ, ಜಲಂಧರ್ ಮೂಲ ನಗರವು ವಾಸ್ತವವಾಗಿ ಒಂದು ದೊಡ್ಡ ನಗರವಾಗಿರುವುದರ ಜೊತೆಗೆ ಮೈಲುಗಟ್ಟಲೆ ವ್ಯಾಪ್ತಿಯನ್ನು ಹೊಂದಿತ್ತು. ಅಲ್ಲದೆ ರಜಪೂತ ಸಾಮ್ರಾಜ್ಯದ ರಾಜಧಾನಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು.[] ರಾಜ ಉತಿತೋ ಹರ್ಷವರ್ಧನನ ಒಬ್ಬ ಅಧೀನ ರಾಜನಾಗಿದ್ದ. ಆಗಾಗ್ಗೆ ಅಡೆತಡೆಗಳುಂಟಾದರೂ, ರಜಪೂತ ರಾಜರುಗಳು ೧೨ನೇ ಶತಮಾನದವರೆಗೂ ರಾಷ್ಟ್ರದ ಮೇಲೆ ತಮ್ಮ ಆಡಳಿತವನ್ನು ಹೊಂದಿದ್ದರೆಂದು ಕಂಡುಬರುತ್ತದೆ, ಆದರೆ ಅವರ ರಾಜಧಾನಿ ಜಲಂಧರ್ ಆಗಿತ್ತು ಹಾಗೂ ಕಾಂಗ್ರ ಒಂದು ಪ್ರಬಲ ನೆಲೆಯಾಗಿ ರೂಪುಗೊಂಡಿತ್ತು.

ಭಾರತಕ್ಕೆ ೩೯೯ ಹಾಗು ೪೧೧ C.E.ಯಲ್ಲಿ ಭೇಟಿ ನೀಡಿದ ಚೈನೀಸ್ ಯಾತ್ರಿ ಫಾ ಹಿಯೆನ್ ಪ್ರಕಾರ, ಭಾರತದಲ್ಲಿ ಹಲವು ಪ್ರಮುಖ ಬೌದ್ಧ ಧರ್ಮದ ವಿಹಾರಗಳಿದ್ದವು. ಜಲಂಧರ್ ಡೋಅಬ್(ಒಟ್ಟುಗೂಡುವ ಎರಡು ನದಿಗಳ ನಡುವಣ ಪ್ರದೇಶ)ನಲ್ಲಿ ಬೌದ್ಧ ಧರ್ಮದ ೫೦ರಷ್ಟು ವಿಹಾರಗಳಿದ್ದವು. ಬೌದ್ಧ ಧರ್ಮವನ್ನು ಒಂದು ದೊಡ್ಡ ಸಂಖ್ಯೆಯಲ್ಲಿ ಜನರು ಸ್ವೀಕರಿಸಿದ್ದರು. ಕೆಲವು ಇತಿಹಾಸಜ್ಞರು ಹಾಗು ವಿದ್ವಾಂಸರ ಪ್ರಕಾರ ಆರು ಬೌದ್ಧ ಮತೀಯ ಸಭೆಯಲ್ಲಿ ನಾಲ್ಕನೇ ಬೌದ್ಧ ಮತೀಯ ಸಭೆಯು ಮೊದಲ ಶತಮಾನ ADಯಲ್ಲಿ ರಾಜಾ ಕನಿಷ್ಕನ ಆಡಳಿತದಲ್ಲಿ ನಡೆಯಿತು. ಮಹಾಯಾನ ಬೌದ್ಧ ಧರ್ಮದ ನಾಲ್ಕನೇ ಮತೀಯ ಸಭೆಯು ನಗರದಲ್ಲಿ ನಡೆಯಿತು, ಜೊತೆಗೆ ಸಭೆಯಲ್ಲಿ ಬುದ್ಧನನ್ನು ದೇವರೆಂದು ಗುರುತಿಸಲಾಯಿತು[].

ಎಂಟನೆ ಶತಮಾನದಿಂದ ಹತ್ತನೇ ಶತಮಾನ ADಯವರೆಗೆ ನಡೆದ ನಾಥ್ ಚಳವಳಿಗೆ ಜಲಂಧರ್ ಪ್ರಮುಖ ಸ್ಥಳವಾಗಿತ್ತು, ಪ್ರಮುಖ ಸಂತರೆನಿಸಿದ್ದ ಜಲಂಧರ್ ನಾಥ್ ರ ಸಮಾಧಿಯ ಸ್ಥಳವು ನಂತರ ಹದಿನೈದನೆ ಶತಮಾನದಲ್ಲಿ ಅಸ್ತಿತ್ವದಲ್ಲಿರುವ ಇಮಾಮ್ ನಸೀರ್-ಉದ್-ದಿನ್-ಚಿಸ್ತಿಯ ಪವಿತ್ರ ಸ್ಥಳವೆನಿಸಿತು[].

ಹತ್ತನೇ ಶತಮಾನದ ಕಡೆಯ ಭಾಗದಿಂದ ೧೦೧೯ ADಯವರೆಗೂ, ಜಿಲ್ಲೆಯನ್ನು ಪಂಜಾಬ್ ನ ಶಾಹಿ ಸಾಮ್ರಾಜ್ಯವು ಒಳಗೊಂಡಿತ್ತು. ಜೊತೆಗೆ ಜಲಂಧರ್ ಆ ಪ್ರದೇಶದ ಒಂದು ಪ್ರಮುಖ ನಗರವಾಗಿತ್ತು. ಸುಮಾರು ೧೧೮೮ ಹೊತ್ತಿಗೆ ನಗರವು ಗ್ಹೊರ್‌ನ ಇಬ್ರಾಹಿಮ್ ಶಾಹ್‌ನ ಆಳ್ವಿಕೆಗೆ ಒಳಪಟ್ಟಿತು.[] ಮುಘಲರ ಆಳ್ವಿಕೆಯಲ್ಲಿ ಜಲಂಧರ್ ಒಂದು ಸರ್ಕಾರ್ ನ ರಾಜಧಾನಿಯಾಗಿತ್ತು.[]

ಇಸವಿ ೧೭೫೮ರಲ್ಲಿ ಕಟೋಚ್ ಸಾಮ್ರಾಜ್ಯದ ಮಹಾರಾಜ ಘಮಂಡ್ ಚಂದ್‌ನನ್ನು ದುರಾನಿಗಳು ನಿಜಾಮ್ ಆಫ್ ಜಲಂಧರ್ ನನ್ನಾಗಿ ಮಾಡಿದರು (ನಿಜಾಮ್ ಆದ ಮೊದಲ ರಜಪೂತ) ಇಸವಿ ೧೯೪೭ರ ವಿಭಜನೆಗೆ ಮುಂಚೆ ಹಲವು ರಜಪೂತರು ಜಲಂಧರ್ ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಾಗಿದ್ದರು. ರಾಷ್ಟ್ರದ ವಿಭಜನೆಯ ನಂತರ ಹಲವು ಮಂಜ್ ಹಾಗು ರಾವಲ್ ರಜಪೂತರು ಪಂಜಾಬ್ ನ ಪಾಕಿಸ್ತಾನದ ಭಾಗದಲ್ಲಿ ನೆಲೆಯಾದರೆ ಕೆಲವರು ಇತರ ರಾಷ್ಟ್ರಗಳಿಗೆ ವಲಸೆ ಹೋದರು.

ಜಲಂಧರ್‌ ಅನ್ನು ೧೭೫೭ರಲ್ಲಿ ಸಿಖ್ಖರು ವಶಪಡಿಸಿಕೊಂಡರು[ಸೂಕ್ತ ಉಲ್ಲೇಖನ ಬೇಕು] ಜೊತೆಗೆ ೧೭೬೬ರಲ್ಲಿ ಫೈಜುಲ್ಲಹ್ ಪುರಿಯ ಕೂಟವು ನಗರವನ್ನು ವಶಪಡಿಸಿಕೊಂಡಿತು. ರಂಜಿತ್ ಸಿಂಗ್ ೧೮೧೧ರಲ್ಲಿ ನಗರವನ್ನು ಆಕ್ರಮಣ ಮಾಡುತ್ತಾನೆ, ಜೊತೆಗೆ ೧೮೪೬ರಲ್ಲಿ ಜಲಂಧರ್ ಮೊದಲ ಆಂಗ್ಲೋ-ಸಿಖ್ ಯುದ್ಧದ ನಂತರ ಬ್ರಿಟಿಷರು ಸ್ವಾಧೀನಪಡಿಸಿಕೊಂಡ ಭೂಪ್ರದೇಶದ ಕೇಂದ್ರ ಕಾರ್ಯಸ್ಥಾನವಾಯಿತು.[] ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಜಲಂಧರ್ ಅದೇ ಹೆಸರಿನೊಂದಿಗೆ ವಿಭಾಗ ಹಾಗು ಜಿಲ್ಲೆಯ ಕೇಂದ್ರ ಕಾರ್ಯ ಸ್ಥಾನವಾಯಿತು. ಇಸವಿ ೧೯೦೧ರ ಜನಗಣತಿಯ ಪ್ರಕಾರ, ನಗರದ ಜನಸಂಖ್ಯೆಯು ೬೭,೫೩೫ರಷ್ಟಿತ್ತು. ಇದರಲ್ಲಿ ೧೪,೭೧೫ ಹಿಂದೂಗಳು, ೪೦,೦೮೧ ಮುಸ್ಲಿಮರು, ೯೦೧ ಸಿಖ್ಖರು, ಹಾಗು ೧,೫೪೩ ಕ್ರೈಸ್ತ ಧರ್ಮದವರಿದ್ದರು.[] ಇಸವಿ ೧೯೪೭ರಲ್ಲಿ ಸ್ವಾತಂತ್ರ್ಯ ಹಾಗು ಭಾರತದ ವಿಭಜನೆಯೊಂದಿಗೆ ಮುಸ್ಲಿಂ ಜನಸಂಖ್ಯೆಯು ಪಾಕಿಸ್ತಾನಕ್ಕೆ ವಲಸೆ ಹೋದರೆ ಹಿಂದೂಗಳು ಹಾಗು ಸಿಖ್ಖರು ಇನ್ನೊಂದು ದಿಕ್ಕಿನಿಂದ ಭಾರತಕ್ಕೆ ಆಗಮಿಸಿದರು.[]

ಭೂಗೋಳ

[ಬದಲಾಯಿಸಿ]

ಹವಾಮಾನ

[ಬದಲಾಯಿಸಿ]

ನಗರವು ತಂಪಾದ ಚಳಿಗಾಲ ಹಾಗು ಬಿಸಿಲಿಂದ ಕೂಡಿದ ಬೇಸಿಗೆ ಕಾಲದೊಂದಿಗೆ ಒಂದು ಆರ್ದ್ರ ಉಪೋಷ್ಣವಲಯದ ಹವಾಮಾನವನ್ನು ಹೊಂದಿದೆ. ಏಪ್ರಿಲ್ ನಿಂದ ಜೂನ್ ತಿಂಗಳವರೆಗೂ ಬೇಸಿಗೆಯ ಕಾಲಾವಧಿಯಾಗಿದ್ದು ನವೆಂಬರ್‌ನಿಂದ ಫೆಬ್ರವರಿಯವರೆಗೂ ಚಳಿಗಾಲವಾಗಿರುತ್ತದೆ. ಬೇಸಿಗೆಯಲ್ಲಿ ತಾಪಮಾನವು ಸರಾಸರಿ ಸುಮಾರು ೪೮ ಡಿಗ್ರಿ ಸೆಲ್ಷಿಯಸ್ ಗರಿಷ್ಠತೆಯನ್ನು ಹೊಂದಿದ್ದರೆ ಸುಮಾರು ೨೫ ಡಿಗ್ರಿ ಸೆಲ್ಷಿಯಸ್ ಗಳ ಕನಿಷ್ಠ ತಾಪಮಾನವನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ತಾಪಮಾನವು ಗರಿಷ್ಠ ೧೯ ಡಿಗ್ರಿ ಸೆಲ್ಷಿಯಸ್ ನಷ್ಟಿದ್ದರೆ ಕನಿಷ್ಠ ತಾಪಮಾನವು -೫ ಡಿಗ್ರಿ ಸೆಲ್ಷಿಯಸ್ ಇರುತ್ತದೆ. ಒಟ್ಟಾರೆಯಾಗಿ ಹವಾಮಾನವು ಶುಷ್ಕತೆಯಿಂದ ಕೂಡಿದ್ದು ಜುಲೈ-ಆಗಸ್ಟ್ ತಿಂಗಳಲ್ಲಿ ಬರುವ ನೈಋತ್ಯ ಮುಂಗಾರು ಅವಧಿಯಲ್ಲಿ ಇದಕ್ಕೆ ಹೊರತಾಗಿದೆ. ಸರಾಸರಿ ವಾರ್ಷಿಕ ಮಳೆಯ ಪ್ರಮಾಣವು ಸುಮಾರು ೭೦ ಸೆಂ.ನಷ್ಟಿರುತ್ತದೆ.

ಆರ್ಥಿಕ ಸ್ಥಿತಿ

[ಬದಲಾಯಿಸಿ]
ಚಿತ್ರ:Jalandhar Public Activity gopal1035.jpg
ನಗರದ ಪ್ರತಿಯೊಂದು ಸಮಾರಂಭದಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ
ಜಲಂಧರ್ ಬಸ್ ನಿಲ್ದಾಣ

ಜಲಂಧರ್ ಚರ್ಮದ ಉಪಕರಣಗಳ ಸಣ್ಣ ಚೀಲಗಳ ಹಾಗು ಏಪ್ರನ್‌ಗಳ ವಿಶ್ವದ ಅತ್ಯಂತ ದೊಡ್ಡ ಉತ್ಪಾದನೆ ಸ್ಥಳವೆನಿಸಿದೆ. ಇದನ್ನು ಪ್ರಮುಖವಾಗಿ ಅಮೆರಿಕನ್ ಹಾಗು ಯುರೋಪಿಯನ್ ಗ್ರಾಹಕರು ಜಲಂಧರ್‌ನ ಕಾರ್ಖಾನೆಗಳಿಂದಲೇ ಖರೀದಿಸುತ್ತಾರೆ. ನಗರವು ರಾಷ್ಟ್ರದ ಕ್ರೀಡಾ ಸಾಮಗ್ರಿಗಳನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸರಬರಾಜು ಮಾಡುತ್ತದೆ. ಜಲಂಧರ್ ೬೦ರ ದಶಕದ ಪ್ರಾರಂಭದಲ್ಲಿ ಭಾರತದಲ್ಲಿ ಗಾಂಧಿ ಸರ್ಕಾರದ ಹಸಿರು ಕ್ರಾಂತಿಯ ಕೇಂದ್ರ ಭಾಗವಾಗಿತ್ತು. ಸಸ್ಯ ತಳಿ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವ ಪ್ರಸಿದ್ಧ ವಿಜ್ಞಾನಿ Dr. ದಿಲ್ಬಾಗ್ ಸಿಂಗ್ ಅತ್ವಾಲ್, ಭಾರತ ಮೊದಲ ಹೆಚ್ಚಿನ ಇಳುವರಿಯ ಗೋದಿ ತಳಿಯಾದ ಕಲ್ಯಾಣ್‌ ಅನ್ನು ಅಭಿವೃದ್ಧಿಪಡಿಸಿದರು. ಗೋದಿ ತಳಿಗೆ ಜಲಂಧರ ನಗರದ ನೈಋತ್ಯ ದಿಕ್ಕಿನಲ್ಲಿರುವ ತಮ್ಮ ತವರು ಗ್ರಾಮವಾದ ಕಲ್ಯಾಣಪುರದ 6 miles (9.7 km)ಹೆಸರನ್ನು ಅವರು ಇರಿಸಿದ್ದಾರೆ. ನಂತರ Dr. ಅತ್ವಾಲ್ ಇಂಟರ್ನ್ಯಾಷನಲ್ ರೈಸ್ ಇನ್ಸ್ಟಿಟ್ಯೂಟ್, ಇಂಟರ್ನ್ಯಾಷನಲ್ ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸರ್ವೀಸ್ ಮುಂತಾದವುಗಳ ಮುಖ್ಯಸ್ಥರಾದರು. Dr. ಅತ್ವಾಲ್ ರಾಕೆಫೆಲ್ಲರ್ ಇನ್ಸ್ಟಿಟ್ಯೂಟ್‌ನ ಹಿರಿಯ ಉಪಾಧ್ಯಕ್ಷ ಹುದ್ದೆಯಿಂದ ಮುಂಚಿತವಾಗಿ ನಿವೃತ್ತಿಯನ್ನು ಪಡೆದರು. ಕಲ್ಯಾಣಪುರ್ ಗ್ರಾಮ (ಇದೀಗ ಜಲಂಧರ್ ನಗರದ ಒಂದು ಭಾಗ) ಪ್ರಮುಖ ವಿಜ್ಞಾನಿಗಳಾದ Dr. ರಘಬೀರ್ ಸಿಂಗ್, Dr. ರಾಜ್ಬೀರ್ ಕೌರ್, Dr. ಇಕ್ಬಾಲ್ ಸಿಂಗ್ ಅತ್ವಾಲ್‌ರಿಗೆ ಜನ್ಮನೀಡಿದ ಗ್ರಾಮವಾಗಿದೆ. ಜಲಂಧರ್ ವಿದ್ಯುತ್ ಉಪಕರಣ ತಯಾರಿಕಾ ಕಾರ್ಖಾನೆಗಳಿಗೂ ಸಾಕಷ್ಟು ಹೆಸರುವಾಸಿಯಾಗಿದೆ. ಕಾರ್ಖನೆಗಳಾದ ಹೇಜಲ್ ಇಂಡಿಯ, ಸ್ಟ್ಯಾಂಡರ್ಡ್ ಸ್ವಿಚ್ ಗೇರ್ಸ್ ಹಾಗು ಅಪೆಕ್ಸ್ ಎಲೆಕ್ಟ್ರಿಕಲ್ಸ್, ಜಲಂಧರ್ ನಲ್ಲಿ ನೆಲೆಯಾಗಿವೆ. ಅಂತಾರಾಷ್ಟ್ರೀಯ ಕ್ರೀಡಾ ಮಾರುಕಟ್ಟೆಯು ಜಲಂಧರ್ ನಲ್ಲಿದೆ. ಪ್ರಮುಖ ಕ್ರೀಡಾ ಬ್ರ್ಯಾಂಡ್ ಗಳಾದ BAS ವ್ಯಾಂಪೈರ್, ಭಾಸೀನ್ ರ ಬಾಸ್ಪೋ, JJ ಜೋನೆಕ್ಸ್, ಸಿಂಡಿಕೇಟ್ ಸ್ಪೋರ್ಟ್ಸ್ ಮುಂತಾದವುಗಳು, ವಿಶ್ವದ ಈ ಭಾಗದಿಂದ ಬಂದಿವೆ. ಜಲಂಧರ್ Uk ಪ್ರವಾಸಿಗರಿಗೆ ಸಾಕಷ್ಟು ಹೆಸರುವಾಸಿಯಾಗಿದೆ ಏಕೆಂದರೆ ಇಲ್ಲಿ ಮಸ್ಸಿ D's! ಇದೆ.

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

ನಗರದ ಹಲವು ಜನರ ಪ್ರಥಮ ಭಾಷೆ ಪಂಜಾಬಿಯಾಗಿದೆ. ದಿ ವರ್ಲ್ಡ್ ಪಂಜಾಬಿ ಮೀಟಿಂಗ್ ನ್ನು ೨೦೦೭ರಲ್ಲಿ ಜಲಂಧರ್ ನಲ್ಲಿ ಆಯೋಜಿಸಲಾಗಿತ್ತು, ಜೊತೆಗೆ ಸಮ್ಮೇಳನದಲ್ಲಿ ಭಾಗವಹಿಸಿದವರು ಪಂಜಾಬಿ ಭಾಷೆಯು ತನ್ನ ಜೀವಶಕ್ತಿಯನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದರು[]. ಆದಾಗ್ಯೂ, ಪಂಜಾಬ್‌ನಲ್ಲಿ ಹಲವರು ಭಾಷಾಭಿಮಾನವನ್ನು ಪ್ರದರ್ಶಿಸುತ್ತಾರೆ, ಜೊತೆಗೆ ಕೆಲವು ವಿದ್ವಾಂಸರು ಪಂಜಾಬಿ ವಾಸ್ತವವಾಗಿ ವಸಾಹತುಶಾಹಿ ಮುಕ್ತದ ಒಂದು ದೇಶೀಯ ಮಾಧ್ಯಮವಾಗಿ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು[]. ಜಲಂಧರ್‌ನ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಮೊದಲನೇ ತರಗತಿಯಿಂದಲೇ ಕಲಿಸುತ್ತಿರುವಾಗಿನಿಂದ ನಗರದಲ್ಲಿ ಈ ಭಾಷೆಯೂ ಸಹ ಜನಪ್ರಿಯತೆಯನ್ನು ಗಳಿಸುತ್ತಿದೆ. ಜೊತೆಗೆ ರಾಜ್ಯದಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಣವು ಸ್ಫೋಟಗೊಂಡಿದೆ.[].

ಕಳೆದ ೧೯೯೧ರ ಜನಗಣತಿಯ ಪ್ರಕಾರ, ಜಲಂಧರ್ ನಗರದ ಪ್ರಮುಖ ಧರ್ಮಗಳೆಂದರೆ ಹಿಂದೂ ಧರ್ಮ (೫೪.೫೪%) ಹಾಗು ಸಿಖ್ ಧರ್ಮ(೪೫.೪೬%). ಜನಸಂಖ್ಯೆಯಲ್ಲಿ ಇತರ ಧರ್ಮಗಳ ಪ್ರಮಾಣವು ಸುಮಾರು ೨.೧೭%ನಷ್ಟಿದೆ. ನಗರವು ರೋಮನ್ ಕ್ಯಾಥೊಲಿಕ್ ಡಯೊಸಿಸ್ ಆಫ್ ಜುಲ್ಲುಂದುರ್(ಬಿಷಪ್ ಆಡಳಿತದ ಪ್ರದೇಶ)ಸ್ಥಾನವಾಗಿತ್ತು.

ಮಾಧ್ಯಮ

[ಬದಲಾಯಿಸಿ]

ದಿನಪತ್ರಿಕೆಗಳು, ರಾಷ್ಟ್ರೀಯ ದೂರದರ್ಶನ ಹಾಗು ಬಾನುಲಿ ಕೇಂದ್ರಗಳಿಗೆ ಪ್ರಾದೇಶಿಕ ಕಾರ್ಯಸ್ಥಾನವಾಗಿರುವ ನಗರವು ಪ್ರದೇಶದ ಮಾಧ್ಯಮ ಕೇಂದ್ರವೆನಿಸಿದೆ.

ಪ್ರಮುಖ ದಿನಪತ್ರಿಕೆಗಳು

[ಬದಲಾಯಿಸಿ]

ಶೈಕ್ಷಣಿಕ ಸಂಸ್ಥೆಗಳು

[ಬದಲಾಯಿಸಿ]

DAV ಆಯುರ್ವೇದಿಕ್ ಕಾಲೇಜ್ ಜಲಂಧರ್ ಭಾರತದ ಅತ್ಯಂತ ಹಳೆಯ ಆಯುರ್ವೇದಿಕ್ ಕಾಲೇಜ್‌ಗೆ ನೆಲೆಯಾಗಿದೆ. DAV ಆಯುರ್ವೇದಿಕ್ ಕಾಲೇಜನ್ನು ೧೮೯೮ರಲ್ಲಿ ಸ್ಥಾಪಿಸಲಾಯಿತು. ಆದಾಗ್ಯೂ ಇದನ್ನು ಮೂಲತಃ ಲಾಹೋರ್ ನಲ್ಲಿ ಪ್ರತಿಷ್ಠಾಪಿಸಲಾಗಿತ್ತು. ೧೯೪೭ರ ವಿಭಜನೆಯ ನಂತರ, ಕಾಲೇಜು ಲಾಹೋರ್‌ನಿಂದ ಇಂದಿನ ಜಲಂಧರ್‌ನ ಗ್ರ್ಯಾಂಡ್ ಟ್ರಂಕ್ ರೋಡ್‌ಗೆ ಸ್ಥಳಾಂತರವಾಯಿತು. ಉನ್ನತ ಶಿಕ್ಷಣಕ್ಕೆ ಈ ಕಾಲೇಜು ರಾಜ್ಯದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದೆಂದು ಖ್ಯಾತಿ ಪಡೆದಿದೆ.[ಸೂಕ್ತ ಉಲ್ಲೇಖನ ಬೇಕು] ಕಾಲೇಜಿನ ಲಾಹೋರ್ ಕ್ಯಾಂಪಸ್, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಬ್ರಿಟಿಶ್ ಪೋಲಿಸ್ ಅಧಿಕಾರಿ J.P. ಸಾಂಡರ್ಸ್‌ರನ್ನು ಗುಂಡಿಕ್ಕಿ ಹತ್ಯೆಗೈದ ಸ್ಥಳವಾಗಿ ಹೆಸರು ಪಡೆದಿದೆ.

ಎನ್‌ಐಟಿ, ಜಲಂಧರ್

[ಬದಲಾಯಿಸಿ]

ಡಾ. ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಲಂಧರ್ (ಹಿಂದಿನ ರೀಜನಲ್ ಎಂಜಿನಿಯರಿಂಗ್ ಕಾಲೇಜ್) ರಾಷ್ಟ್ರದ ಹದಿನೆಂಟನೆ ಎನ್‌ಐಟಿಯಾಗಿದೆ. ಸರ್ಕಾರದ ಆಡಳಿತದಲ್ಲಿರುವ ಈ ಸಂಸ್ಥೆಗೆ, ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್ ಇಂಪಾರ್ಟೆನ್ಸ್(ರಾಷ್ಟ್ರೀಯ ಪ್ರಾಮುಖ್ಯತೆಯ ಶಿಕ್ಷಣ ಸಂಸ್ಥೆ)ಎಂಬ ಬಿರುದನ್ನು ನೀಡಲಾಗಿದೆ. ಇದನ್ನು ೧೯೮೭ರಲ್ಲಿ ಆರಂಭಿಸಲಾಯಿತು.[೧೦]

DAVIET ಜಲಂಧರ್

[ಬದಲಾಯಿಸಿ]

DAV ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ (DAVIET) ಜಲಂಧರ್ ಕಳೆದ ೨೦೦೧ರಿಂದ ಕಾರ್ಯನಿರ್ವಹಿಸುತ್ತಿದೆ.[೧೧] ಸರಕಾರದ ಆಡಳಿತದಲ್ಲಿಲ್ಲದ,ರಾಷ್ಟ್ರದ ಅತ್ಯಂತ ದೊಡ್ಡ ಶೈಕ್ಷಣಿಕ ಸಂಸ್ಥೆಯಾದ DAV ಕಾಲೇಜ್ ಟ್ರಸ್ಟ್ ಹಾಗು ಮ್ಯಾನೇಜ್ಮೆಂಟ್ ಸೊಸೈಟಿ ವತಿಯಿಂದ ಕಾರ್ಯ ನಿರ್ವಹಣೆಯಲ್ಲಿರುವ ಕಾಲೇಜು ಎಂಬ ವೈಶಿಷ್ಠ್ಯತೆಯನ್ನು ಪಡೆದಿದೆ.[೧೧] ಸಂಸ್ಥೆಯು B.ಟೆಕ್ ಪ್ರೋಗ್ರಾಮ್‌ಗಳನ್ನು ಇಂಜಿನಿಯರಿಂಗ್‌ನ ಆರು ವಿಭಾಗಗಳಲ್ಲಿ ಒದಗಿಸುತ್ತದೆ. ಅದೆಂದರೆ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಇನ್ಫಾರ್ಮೇಶನ್ ಟೆಕ್ನಾಲಜಿ, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಾಗು ಸಿವಿಲ್ ಇಂಜಿನಿಯರಿಂಗ್‌ಗಳ ಜೊತೆಗೆ M.ಟೆಕ್ ಮಾರ್ಗದರ್ಶಕ ಸಂಶೋಧಕ ಪ್ರೋಗ್ರಾಮ್‌ಗಳಿಗೆ ಅವಕಾಶ ಮಾಡಿಕೊಡುತ್ತದೆ. ಸಂಸ್ಥೆಯು ಇತ್ತೀಚಿಗೆ MBA ಪ್ರೋಗ್ರಾಮ್ ಆರಂಭಿಸಿದೆ.

ಲಯಲ್‌ಪುರ್ ಖಾಲ್ಸಾ ಕಾಲೇಜ್

[ಬದಲಾಯಿಸಿ]
ಲಯಲ್‌ಪುರ್ ಖಾಲ್ಸಾ ಕಾಲೇಜ್

ಲಯಲಪುರ್ ಖಾಲ್ಸಾ ಕಾಲೇಜ್-ಕಲೆ, ವಿಜ್ಞಾನ ಹಾಗು ವಾಣಿಜ್ಯ ವಿಭಾಗಗಳನ್ನು ಹೊಂದಿರುವ ಈ ಕಾಲೇಜು-೧೯೪೮ರಲ್ಲಿ ಜಲಂಧರ್‌ನಲ್ಲಿ ನೆಲೆಗೊಳ್ಳುವ ಮೊದಲು ಪಾಕಿಸ್ತಾನದ ಲಯಲಪುರ್‌ನಲ್ಲಿ ಮೂಲತಃ ಸ್ಥಾಪಿತವಾಗಿತ್ತು.

ಜಲಂಧರ್ ದಂಡುಪ್ರದೇಶ

[ಬದಲಾಯಿಸಿ]
ನಾಗರೀಕರ ಪ್ರವೇಶಕ್ಕೆ ಮುಕ್ತವಾಗಿರುವ ವಜ್ರ ಗೋ ಕಾರ್ಟಿಂಗ್ ಬಹುದೊಡ್ಡ ಒಂದು ಆಕರ್ಷಣೆಯಾಗಿದೆ
ಕ್ಯಾಂಟ್ ಎಂದೂ ಸಹ ಕರೆಯಲಾಗುವ ದಂಡುಪ್ರದೇಶವು ಹಿಂದಿನ ಬ್ರಿಟಿಷರ ಯುಗದ ಕಟ್ಟಡಗಳಿಂದ ಹರಡಿಕೊಂಡಿದೆ.
ಚಿತ್ರ:Jalandhar Niku Park gopal1035.jpg
ಸಮುದಾಯವು ಮಾರುಕಟ್ಟೆಗಳು, ಮನರಂಜನಾ ಉದ್ಯಾನವನಗಳು, ಮುಂತಾದವುಗಳಲ್ಲಿ ವಿಶೇಷವಾಗಿ ವಾರಾಂತ್ಯಗಳಲ್ಲಿ ಕೂಡುತ್ತವೆ

ಜಲಂಧರ್ ದಂಡುಪ್ರದೇಶದ ನಿರ್ಮಾಣವು ೧೮೪೮ರಲ್ಲಿ ಆರಂಭಗೊಂಡಿತು. ಇದು ತನ್ನ ಪ್ರಾಚೀನತೆಗೆ ಹೆಸರಾಗಿರುವುದು ಮಾತ್ರವಲ್ಲದೆ, ರಾಷ್ಟ್ರದ ಅತ್ಯಂತ ಹಳೆಯ ದಂಡುಪ್ರದೇಶವಾಗಿರುವುದರ ಜೊತೆಗೆ ಪಾಕಿಸ್ತಾನಕ್ಕೆ ಸಾಮೀಪ್ಯವನ್ನು ಹೊಂದಿದೆ. ಇದು 1920ರ ಕನ್ನೌಟ್ ರೇಂಜರ್ಸ್ ಮ್ಯೂಟಿನಿ ಯಲ್ಲಿ ಐರಿಶ್ ಸಿಪಾಯಿಗಳು ಯೂನಿಯನ್ ಧ್ವಜವನ್ನು ಐರಿಶ್ ರಿಪಬ್ಲಿಕ್ಧ್ವಜದೊಂದಿಗೆ ಬದಲಾಯಿಸಿದಾಗ ಇದು ಪ್ರಮುಖವಾಗಿ ಕಾಣಿಸಿಕೊಂಡಿತ್ತು.[೧೨]

ಪ್ರಸಿದ್ಧ ವ್ಯಕ್ತಿಗಳು

[ಬದಲಾಯಿಸಿ]

ಕಂದಾಯ ಮಂತ್ರಿ ಹಾಗು ಕಪುರ್ತಲ ರಾಜ್ಯದ ಮುಖ್ಯಮಂತ್ರಿ. ಜನನ ಜುಲ್ಲಂಧರ್, ನಿಧನ.

ಲಾಹೋರ್‌ ಬಸ್ತಿ ದನಿಶ್ಮಂಧನ್ ಜುಲ್ಲಂಧರ್. 

ಹಫೀಜ್ ಜುಲ್ಲಂಧರಿ, ಕವಿ, ಇವರು ಪ್ರಸಕ್ತ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ರಚಿಸಿದರು

[೧೩]

ಜಲಂಧರ್ ಸುತ್ತಮುತ್ತಲಿನ ಗ್ರಾಮಗಳು

[ಬದಲಾಯಿಸಿ]

ಸಂಸಾರ್ಪುರ್, ಶಾಕೋಟ್ ಹಾಗು ಮಾಲ್ಸಿಯನ್ ಅಕಾ ಮಾಲಾ , ಕಾಲ ಬಾಕ್ರ (ಉಪನಗರ), ಶೆಖೆಯ್ ಪಿಂಡ್, ಖುಸ್ರೋಪುರ್, ಚಿತ್ತಿ, ತಲಹನ್, ಸಲೇಂಪುರ್ ಮಸಂಡ, ಪರಸ್ರಾಮ್ ಪುರ್, ಸೋಫಿ ಪಿಂಡ್, ಮಿಥಾಪುರ್, ವಡಾಲ, ಧಲಿವಾಲ್, ಸುಚಿ ಪಿಂಡ್, ಕಪೂರ್ ಪಿಂಡ್, ಲಾಮ್ಬ್ರ, ಲಾಧೆವಾಲಿ, ನೌಗಜ್ಜ, ನಾಗ್ರ, ಮಕ್ಸೂದನ್, ಕರ್ತಾರ್ಪುರ್, ತಲ್ವಂಡಿ ಸಲೇಂ, ಉಗ್ಹಿ, ಕಾಂಗ್ ಸಾಹ್ಬು, ವಿಲೇಜ್ ಗಿಲ್, ಸಫಿಪುರ್, ಚಾಮಿಯರ, ಗಖಾಲ್, ಮಂಡ್, ಸಂಗಲ್-ಸೋಹಲ್, ತಾಜ್ಪುರ್, ಚಾಹೇರು, ಮಾಹೇರು, ಪರಾಗಪುರ್, ನಂದನ್ ಪುರ್, ಬಿಧಿಪುರ್, ಜಮ್ಷೆರ್, ಜಂಡಿಯಾಲಾ, ದಿವಲಿ, ಕಂಗ್ನಿವಾಲ್, ಸಮರೈ-ಖಾಸ್, ಸರ್ಹಲಿ, ಹಾಗು ಬಿಯಾಸ್ ಪಿಂಡ್

  1. "census of 2001 via archive.org" (PDF). Archived (PDF) from the original on 2007-09-27. Retrieved 2007-09-27.
  2. ೨.೦ ೨.೧ "tourism". National Informatics Centre. Retrieved 2009-04-01.
  3. ೩.೦ ೩.೧ ೩.೨ ೩.೩ ಜುಲ್ಲುಂದುರ್ ಟೌನ್ - ಇಂಪೀರಿಯಲ್ ಗ್ಯಾಜೆಟಿರ್ ಆಫ್ ಇಂಡಿಯ, ಸಂ. 14, ಪುಟ. 231.
  4. Tinker, Hugh (1966). South Asia: A Short History. Frederick A. Praeger.
  5. ಜಲಂಧರ್ Archived 2010-08-11 ವೇಬ್ಯಾಕ್ ಮೆಷಿನ್ ನಲ್ಲಿ. Govt. ಆಫ್ ಪಂಜಾಬ್ (ಭಾರತ) ಅಂತರಜಾಲ.
  6. "ರೆಫ್ಯೂಜ್ ಇನ್ ಮೆಮೊರೀಸ್ - ಡಾನ್". Archived from the original on 2008-12-07. Retrieved 2010-07-27.
  7. ವರ್ಲ್ಡ್ ಪಂಜಾಬಿ ಮೀಟಿಂಗ್ ಕಿಕ್ಕ್ಸ್ ಆಫ್; 27 ಪಾಕ್ ನ್ಯಾಶನಲ್ಸ್ ಫೈಲ್ ಟು ಗೆಟ್ ವೀಸಾ ಇಂಡಿಯನ್ ಎಕ್ಸ್‌ಪ್ರೆಸ್ - ಫೆಬ್ರವರಿ ೧೬, ೨೦೦೭
  8. ಹೌ ಇಂಗ್ಲಿಷ್ ಇಸ್ ಹೆಲ್ಪ್ ಫುಲ್ ದಿ ಟ್ರಿಬ್ಯೂನ್, ಚಂಡಿಗಡ್ಹ್ - ಮೇ ೨೪, ೨೦೦೫
  9. ಮೊಫುಸ್ಸಿಲ್ ಟೌನ್ಸ್ ಆಸ್ ಕೋಚಿಂಗ್ ಹಬ್ಸ್ ಫಾರ್ ಹೈಯರ್ ಎಜುಕೇಶನ್ ಟೈಮ್ಸ್ ಆಫ್ ಇಂಡಿಯ - ಜುಲೈ ೧೨, ೨೦೦೫
  10. "About". National Institute of Technology. Archived from the original on 2009-04-23. Retrieved 2009-04-01.
  11. ೧೧.೦ ೧೧.೧ "About". DAV Institute of Engineering & Technology. Archived from the original on 2015-02-05. Retrieved 2009-04-01.
  12. "Jalandhar Cantt". National Informatics Centre. Archived from the original on 2009-04-03. Retrieved 2009-04-01.
  13. ಮೇಲೆ ನೀಡಲಾದಂತಹ 'ಪ್ರಸಿದ್ಧ ವ್ಯಕ್ತಿಗಳ' ಬಗ್ಗೆ ಸಂಶೋಧನೆ ಹಾಗು ಮಾಹಿತಿಯನ್ನು ಸರ್ದಾರ್ ಕೇವಲ್ ಸಿಂಗ್ ಜಗ್ಪಾಲ್ ನೀಡಿದ್ದಾರೆ, ಇವರು ಒಬ್ಬ ನಿವೃತ್ತ ಶಿಕ್ಷಣ ತಜ್ಞ & ವಾಯುಯಾನ ವಿಜ್ಞಾನ ಇಂಜಿನಿಯರ್ (ಇಂಗ್ಲೆಂಡ್)

ಖೇರಾ, ಧಿನ, ಜನ್ಡಿಯಾಲ, ಚನನಪುರ್

ರಂಧಾವ ಮಸಂದನ್

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಜಲಂಧರ್&oldid=1125083" ಇಂದ ಪಡೆಯಲ್ಪಟ್ಟಿದೆ