ವಿಷಯಕ್ಕೆ ಹೋಗು

ಗಂಗಾವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಂಗಾವತಿ

ಗಂಗಾವತಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೊಪ್ಪಳ
ನಿರ್ದೇಶಾಂಕಗಳು 15.43° N 76.53° E
ವಿಸ್ತಾರ
 - ಎತ್ತರ
16.53 km²
 - 406 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
93,249
 - 5641.2/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 583 227
 - +08533
 - KA-37

ಗಂಗಾವತಿ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ನಗರ ಪುರಸಭೆ ಮತ್ತು ತಾಲ್ಲೂಕು. ಇದು ಕಲ್ಯಾಣ-ಕರ್ನಾಟಕ ಪ್ರದೇಶದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ. ಕೊಪ್ಪಳ ಜಿಲ್ಲೆಯ ವಿಸ್ತೀರ್ಣ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಇದು ದೊಡ್ಡ ನಗರವಾಗಿದೆ.

ಭೂಗೋಳ

[ಬದಲಾಯಿಸಿ]

ಗಂಗಾವತಿಯು ಸರಾಸರಿ ೪೦ ಮೀಟರ್ (೧೩೩೨ ಅಡಿ) ಎತ್ತರದಲ್ಲಿದೆ ಮತ್ತು ತುಂಗಭದ್ರಾ ಅಣೆಕಟ್ಟಿನ ಸಮೀಪದಲ್ಲಿದೆ. ಇದು ಕೊಪ್ಪಳದ ತಾಲೂಕಾಗಿದೆ (ಆಡಳಿತ ವಿಭಾಗ), ಇದು ಹಿಂದೆ ರಾಯಚೂರಿನ ಭಾಗವಾಗಿತ್ತು.

ಗಂಗಾವತಿ ತಾಲೂಕಿನಲ್ಲಿ ಮೂವತ್ತೆಂಟು ಗ್ರಾಮ ಪಂಚಾಯತಿಗಳು ಅಥವಾ ಸ್ವ-ಆಡಳಿತ ಗ್ರಾಮಗಳಿವೆ.[]

ಸಾರಿಗೆ

[ಬದಲಾಯಿಸಿ]

ಗಂಗಾವತಿ ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ.

ಗಂಗಾವತಿಯು ರೈಲು ನಿಲ್ದಾಣವನ್ನು ಹೊಂದಿದೆ (ಗಂಗಾವತಿ ರೈಲು ನಿಲ್ದಾಣ) ಮತ್ತು ಇದು ಮಹಬೂಬ್‌ನಗರ-ಮುನಿರಾಬಾದ್ ರೈಲು ಮಾರ್ಗದಲ್ಲಿದೆ.

ಆರ್ಥಿಕ

[ಬದಲಾಯಿಸಿ]

ಗಂಗಾವತಿಯು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ಬೆಳೆ ಪ್ರಮುಖವಾಗಿದೆ ಹಾಗೂ ಅಕ್ಕಿ ಉದ್ಯಮ ಸಕ್ಕರೆ ಉತ್ಪಾದನೆಗೆ ಪ್ರಸಿದ್ಧವಾಗಿದೆ.[] ಇಲ್ಲಿನ ಸಕ್ಕರೆ ಕಾರ್ಖಾನೆ ಗಂಗಾವತಿ ಶುಗರ್ ಲಿಮಿಟೆಡ್ ಇದು ಗಂಗಾವತಿಯಿಂದ ೧೦ ಕಿ.ಮೀ ದೂರದಲ್ಲಿ ಮತ್ತು ಏಷ್ಯಾದ ಎರಡನೇ ಅತಿ ದೊಡ್ಡ ಸಕ್ಕರೆ ಕಾರ್ಖಾನೆ ಆಗಿದೆ.[]

ಜನಸಂಖ್ಯೆ

[ಬದಲಾಯಿಸಿ]

೨೦೧೧ರ ಭಾರತದ ಜನಗಣತಿಯ ಪ್ರಕಾರ, ಗಂಗಾವತಿಯು ೧೦೫೫೨೯ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೧% ಮತ್ತು ಮಹಿಳೆಯರು ೪೯% ರಷ್ಟಿದ್ದಾರೆ. ಗಂಗಾವತಿಯು ಸರಾಸರಿ ೫೭% ಸಾಕ್ಷರತೆಯನ್ನು ಹೊಂದಿದ್ದು, ರಾಷ್ಟ್ರೀಯ ಸರಾಸರಿ ೫೯.೫% ಗಿಂತ ಕಡಿಮೆಯಾಗಿದೆ: ಪುರುಷರ ಸಾಕ್ಷರತೆ ೬೭% ಮತ್ತು ಮಹಿಳಾ ಸಾಕ್ಷರತೆ ೪೮%. ಗಂಗಾವತಿಯಲ್ಲಿ ೧೫% ಜನಸಂಖ್ಯೆಯು ೬ ವರ್ಷದೊಳಗಿನವರು.[]

ಹೆಗ್ಗುರುತುಗಳು

[ಬದಲಾಯಿಸಿ]

ಗಂಗಾವತಿ ಬಳಿ ಐತಿಹಾಸಿಕ ಪ್ರಾಮುಖ್ಯತೆಯ ಗಮನಾರ್ಹ ಸ್ಥಳಗಳೆಂದರೆ ಹಂಪಿ, ಪಟ್ಟಣದ ನೈಋತ್ಯ ೧೪ ಕಿಲೋಮೀಟರ್ (೮.೭ ಮೈಲಿ)ಯಲ್ಲಿ ಯುಎನ್ಇಎಸ್‍ಸಿಓ ವಿಶ್ವ ಪರಂಪರೆಯ ತಾಣವಾಗಿದೆ. ಇದರಲ್ಲಿ ವಿರೂಪಾಕ್ಷ ದೇವಾಲಯ, ಕನಕಗಿರಿ ಮತ್ತು ಆನೆಗುಂಡಿ ಗ್ರಾಮಗಳು ಮತ್ತು ನವ ಬೃಂದಾವನದಲ್ಲಿರುವ ಗುರುಗಳ ಸಮಾಧಿಗಳು ಸೇರಿವೆ. ಹೇಮಗುಡ್ಡ ಗ್ರಾಮವು ೧೨ಕಿಲೋಮೀಟರ್ (೭.೫ ಮೈಲಿ) ದೂರದಲ್ಲಿದೆ. ಇದು ೧೪ ನೇ ಶತಮಾನದ ಸುರಕ್ಷಿತ-ಧಾಮದ ಹೇಮಗುಡ್ಡ ಕೋಟೆಯ ಸ್ಥಳವಾಗಿದೆ.[]

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Reports of National Panchayat Directory: Village Panchayat Names of Ganavathi, Koppal, Karnataka". Ministry of Panchayati Raj, Government of India. Archived from the original on 2013-02-13.
  2. "Gangavathi City Municipal Council - ಗಂಗಾವತಿ ನಗರಸಭೆ". Archived from the original on 19 January 2012. Retrieved 9 March 2012.
  3. Sivanandan, T. v. (6 May 2016). "Gangavati to get Asia's first Rice Technology Park". The Hindu.
  4. "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.
  5. "Safe Sanctuary" Archived 2014-02-22 ವೇಬ್ಯಾಕ್ ಮೆಷಿನ್ ನಲ್ಲಿ., Deccan Herald

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಗಂಗಾವತಿ&oldid=1258995" ಇಂದ ಪಡೆಯಲ್ಪಟ್ಟಿದೆ