ವಿಷಯಕ್ಕೆ ಹೋಗು

ಕ್ಯಾಪ್ಸಿಕಂ (ದೊಡ್ಡ ಮೆಣಸಿನಕಾಯಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಯಾಪ್ಸಿಕಂ
Fruit and longitudinal section
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
Capsicum

Species

Capsicum annuum
Capsicum baccatum
Capsicum buforum
Capsicum campylopodium
Capsicum cardenasii
Capsicum chacoense
Capsicum chinense
Capsicum coccineum
Capsicum cornutum
Capsicum dimorphum
Capsicum dusenii
Capsicum eximium
Capsicum flexuosum
Capsicum frutescens
Capsicum galapagoense
Capsicum geminifolium
Capsicum hookerianum
Capsicum lanceolatum
Capsicum leptopodum
Capsicum lycianthoides
Capsicum minutiflorum
Capsicum mirabile
Capsicum mositicum
Capsicum parvifolium
Capsicum pubescens
Capsicum rhomboideum
Capsicum schottianum
Capsicum scolnikianum
Capsicum tovarii
Capsicum villosum[]

ಹಣ್ಣಿಗಾಗಿ: ಚಿಲಿ ಪೆಪರ್(ದೊಣ್ಣೆ ಮೆಣಸಿನಕಾಯಿ)ಯನ್ನು ನೋಡಿ

ಕ್ಯಾಪ್ಸಿಕಂ ಎಂಬುದು ಸೊಲನಾಸಿಯ ಎಂದು ಕರೆಯುವ ಸೊಲೇನಮ್ ಕುಟುಂಬದಲ್ಲಿ ಹೂ ಬಿಡುವ ಸಸ್ಯದ ಜಾತಿಯಾಗಿದೆ. ಇದರ ಜಾತಿಗಳು ಅಮೇರಿಕಾ ಮೂಲದ್ದಾಗಿವೆ. ಇವುಗಳನ್ನು ನೂರಾರು ವರ್ಷಗಳ ಕಾಲ ಅಮೇರಿಕಾದ ಉಷ್ಣವಲಯದ ಜನರು ಬೆಳೆದಿದ್ದಾರೆ. ಅಲ್ಲದೇ ಈಗ ಇವುಗಳನ್ನು ಪ್ರಪಂಚದಾದ್ಯಂತ ಬೆಳೆಯಲಾಗುತ್ತಿದೆ. (ಇದನ್ನು ದೊಣ ಮೆಣಸಿನಕಾಯಿಯೂ ಎನ್ನಲಾಗುತ್ತದೆ.ದೊಡ್ಡ ಇದರ ತತ್ಭವ ರೂಪ ದೊಣ) ಕ್ಯಾಪ್ಸಿಕಂ ನ ಕೆಲವು ಜಾತಿಗಳನ್ನು ಸಂಬಾರ ಪದಾರ್ಥಗಳಾಗಿ , ತರಕಾರಿಗಳಾಗಿ ಮತ್ತು ಔಷಧಿಗಳಾಗಿ ಬಳಸಲಾಗುತ್ತದೆ. ಕ್ಯಾಪ್ಸಿಕಂ ಸಸ್ಯಗಳ ಹಣ್ಣು ಗಳನ್ನು ಅವುಗಳ ವಿಧ ಮತ್ತು ಸ್ಥಳವನ್ನು ಆಧರಿಸಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಇವುಗಳನ್ನು ಸಾಮಾನ್ಯವಾಗಿ ಚಿಲಿ ಪೆಪರ್(ದೊಣ್ಣೆ ಮೆಣಸಿನಕಾಯಿ), ಹಣ್ಣು ಮೆಣಸು ಅಥವಾ ಹಸಿ ಮೆಣಸು ಅಥವಾ ಬ್ರಿಟನ್ ನಲ್ಲಿ ಸಿಹಿ ಮೆಣಸು ಹಾಗು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮತ್ತು ಭಾರತೀಯ ಇಂಗ್ಲೀಷ್ ನಲ್ಲಿ ಸಾಂಕೇತಿಕವಾಗಿ ಕೇವಲ ಕ್ಯಾಪ್ಸಿಕಂ ಎಂದು ಕರೆಯಲಾಗುತ್ತದೆ. ಇದರ ಮೃದುವಾದ ಅತ್ಯಂತ ದೊಡ್ಡ ರೂಪವನ್ನು ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾ ದಲ್ಲಿ ಬೆಲ್ ಪೆಪರ್(ದೊಡ್ಡ ಮೆಣಸಿನಕಾಯಿ) ಎಂದು ಕರೆಯಲಾಗುತ್ತದೆ . ಇವುಗಳನ್ನು ಇತರ ರಾಷ್ಟ್ರಗಳಲ್ಲಿ ಪಪ್ರೀಕ(ಕೆಂಪು ಮೆಣಸು )ಎಂದು ಕೂಡ ಕರೆಯಲಾಗುತ್ತದೆ. (ಆದರೂ ಪಪ್ರೀಕ ಅನೇಕ ಕ್ಯಾಪ್ಸಿಕಂ ಹಣ್ಣಿನಿಂದ ಮಾಡಲಾದ ಮಸಾಲೆ ಪುಡಿಯನ್ನೂ ಕೂಡ ಸೂಚಿಸಬಲ್ಲದು). ಇದರ ಜಾತಿಯ ಹೆಸರು ಗ್ರೀಕ್ ಪದವಾದ καπτο (ಕ್ಯಾಪ್ಟೊ )ನಿಂದ ಹುಟ್ಟಿಕೊಂಡಿದೆ. ಇದು "ಕಚ್ಚುವುದು" ಅಥವಾ "ನುಂಗುವುದು" ಎಂಬ ಅರ್ಥವನ್ನು ಕೊಡುತ್ತದೆ.[]

ಚಿಲಿ ಎಂಬ ಮೂಲ ಮೆಕ್ಸಿಕನ್ ಪದ ( ಮೆಕ್ಸಿಕೊದಲ್ಲಿ ಈಗ ಚಿಲೆ )ನಹೌತಲ್ ನ ಚಿಲಿ ಅಥವಾ ಕ್ಸಿಲಿ ಎಂಬ ಪದದಿಂದ ಬಂದಿದೆ. ಇದು 3000 BC ಯಲ್ಲಿ ಬೆಳೆದಿರಬಹುದಾದ ಬೃಹತ್ ಪ್ರಮಾಣದ ಕ್ಯಾಪ್ಸಿಕಂ ನ ಉಪಜಾತಿಯನ್ನು ಸೂಚಿಸುತ್ತದೆ. ಇದನ್ನು ಪ್ಯುಬ್ಲಾ ಮತ್ತು ಒಕ್ಸಾಕಾದ ಕುಂಬಾರಿಕೆ ಕೆಲಸ ನಡೆಯುವ ಸ್ಥಳಗಳಲ್ಲಿ ಕಂಡು ಬಂದಿರುವ ಅವಶೇಷಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ.[]

ಕ್ಯಾಪ್ಸಿಕಂನಲ್ಲಿ ಕ್ಯಾಪ್ಸೈಸಿನ್

[ಬದಲಾಯಿಸಿ]

ಕ್ಯಾಪ್ಸಿಕಂ ನ ಬಹುಪಾಲು ಜಾತಿಗಳ ಹಣ್ಣುಗಳು ಕ್ಯಾಪ್ಸೈಸಿನ್ (ಮೀಥೈಲ್ ವೆನಿಲೀ ನೊನೆನ್ಮೈಡ್) ನನ್ನು ಒಳಗೊಂಡಿರುತ್ತವೆ. ಇದು ಲಿಪೊಫಿಲಿಕ್ ರಾಸಾಯನಿಕವಾಗಿದ್ದು ರೂಢಿಯಿಲ್ಲದವರು ತಿಂದಾಗ ಅವರ ಬಾಯಿಯಲ್ಲಿ ಉರಿಯನ್ನು ಉಂಟುಮಾಡುತ್ತದೆ. ಬಹುಪಾಲು ಸಸ್ತನಿಗಳು ಇದನ್ನು ಇಷ್ಟಪಡುವುದಿಲ್ಲ, ಆದರೆ ಪಕ್ಷಿಗಳ ಮೇಲೆ ಇದು ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ.[][] ಗಾಢವಾದ ಬಣ್ಣಗಳು ಪಕ್ಷಿಗಳನ್ನು ಆಕರ್ಷಿಸುವುದರಿಂದ ಅವು ಬೀಜಗಳನ್ನು ಚೆಲ್ಲಾಪಿಲ್ಲಿಗೊಳಿಸುವಾಗ ಕ್ಯಾಪ್ಸೈಸಿನ್ ನ ಸೋರುವಿಕೆ ಸಸ್ತನಿಗಳು ಹಣ್ಣನ್ನು ನಾಶಮಾಡದಂತೆ ತಪ್ಪಿಸುತ್ತದೆ.

ಕ್ಯಾಪ್ಸೈಸಿನ್ , ಅಂಡಧಾರಕ ಅಂಗಾಂಶ(ಪ್ಲಾಸೆಂಟಲ್ ಟಿಷ್ಯೂ)(ಇದು ಬೀಜಗಳನ್ನು ಹಿಡಿದಿಟ್ಟುಕೊಳ್ಳುತ್ತದೆ) ,ಆಂತರಿಕ ಸೂಕ್ಷ್ಮ ಪೊರೆಯಲ್ಲಿ ಬೃಹತ್ ಪ್ರಮಾಣದಲ್ಲಿರುತ್ತದೆ. ಕ್ಯಾಪ್ಸಿಕಂ ಜಾತಿಯ ಸಸ್ಯಗಳ ಹಣ್ಣುಗಳ ಇತರ ತಿರುಳಿನ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಅಧಿಕ ಪ್ರಮಾಣದ ಕ್ಯಾಪ್ಸೈಸಿನ್ ಸಂಗ್ರಹ, ಬೀಜಗಳ ಸುತ್ತಲಿರುವ ಬಿಳಿಯ ಪಿತ್(ಮೃದುವಾದ ಪದಾರ್ಥ)ನಲ್ಲಿ ಕಂಡುಬಂದರೂ, ಹೆಚ್ಚಾಗಿ ಎಲ್ಲರೂ ನಂಬಿರುವಂತೆ ಬೀಜಗಳು ಅವುಗಳಷ್ಟಕ್ಕೆ ಅವೇ ಕ್ಯಾಪ್ಸೈಸಿನ್ ಅನ್ನು ಉತ್ಪಾದಿಸುವುದಿಲ್ಲ.[]

ಕ್ಯಾಪ್ಸಿಕಂ ಗಳಲ್ಲಿ ಕ್ಯಾಪ್ಸೈಸಿನ್ ನ ಪ್ರಮಾಣ ವಿಭಿನ್ನವಾಗಿರುತ್ತದೆ. ಅಲ್ಲದೇ ಈ ಪ್ರಮಾಣ ತಳಿಗಳನ್ನು ಆಧರಿಸಿರುತ್ತದೆ. ಈ ಕಾರಣದಿಂದಾಗಿ ಬಹುಪಾಲು ಎಲ್ಲಾ ಕ್ಯಾಪ್ಸಿಕಂಸ್ ನ ವಿಧಗಳು ಹೀರಿಕೊಂಡಂತಹ ವಿಭಿನ್ನ ಉಷ್ಣಾಂಶವನ್ನು ಹೊಂದಿರುತ್ತವೆ. ಬೆಲ್ ಪೆಪರ್, ಇದು ಕ್ಯಾಪ್ಸೈಸಿನ್ ಇಲ್ಲದೇ ಇರುವಂತಹ ಏಕೈಕ ಕ್ಯಾಪ್ಸಿಕಂ ಆಗಿದೆ[]. ಇದು ಕ್ಯಾಪ್ಸಿಕಂ ಅನ್ಯುಮ್ ನ ತಳಿಯಾಗಿದ್ದು , ಸ್ಕೊವಿಲ್ಲೆ ಪಟ್ಟಿಯಲ್ಲಿ ಸೊನ್ನೆಯನ್ನು ಪಡೆದಿದೆ. ಅಪಸರಣದ ಜೀನ್ ನಿಂದಾಗಿ ಬೆಲ್ ಪೆಪರ್ ಗಳಲ್ಲಿ ಕ್ಯಾಪ್ಸೈಸಿನ್ ನ ಕೊರತೆಯುಂಟಾಗಿದೆ. ಇದು ಕ್ಯಾಪ್ಸೈಸಿನ್ ನನ್ನು ತೆಗೆದುಹಾಕುತ್ತದೆ. ಇದರ ಪರಿಣಾಮವಾಗಿ "ಖಾರವಾದ" ರುಚಿ ಸಾಮಾನ್ಯವಾಗಿ ಕ್ಯಾಪ್ಸಿಕಂ ನ ಉಳಿದ ಕುಟುಂಬಗಳಲ್ಲಿರುತ್ತದೆ.[]

ಚಿಲಿ ಪೆಪರ್ ಗಳು ಅಮೇರಿಕನ್ ಮೂಲದ ಔಷಧಿಯಲ್ಲಿ ಅತ್ಯಂತ ಮಹತ್ವ ಹೊಂದಿವೆ. ಅಲ್ಲದೇ ಕ್ಯಾಪ್ಸೈಸಿನ್ ಅನ್ನು ಆಧುನಿಕ ಔಷಧಿಯಲ್ಲಿ ಬಳಸಲಾಗುತ್ತದೆ. ಪ್ರಮುಖವಾಗಿ ಇದನ್ನು ಉಷ್ಣವಲಯದ ವೈದ್ಯಕೀಯ ಚಿಕಿತ್ಸೆಯಲ್ಲಿ ರಕ್ತಪರಿಚಲನೆ ಉತ್ತೇಜಕ ಮತ್ತು ಔಷಧವಾಗಿ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ,ಸಾಮಾನ್ಯವಾಗಿ ಕ್ಯಾಪ್ಸಿಕಂ ಅಥವಾ ಪೆಪರ್ ಸ್ಪ್ರೇ(ಮೆಣಸಿನ ಗೊಂಚಲು) ಎಂದು ಕರೆಯಲಾಗುವ ಕ್ಯಾಪ್ಸೈಸಿನ್ ನ ಏರಾಸಲ್(ವಾಯುದ್ರವ) ಸಾರವನ್ನು ಪೊಲೀಸ್ ಪಡೆ ಹೆಚ್ಚಾಗಿ ಬಳಸುತ್ತಿದೆ. ಈ ಪಡೆಯಲ್ಲಿ ವ್ಯಕ್ತಿಯನ್ನು ಅಶಕ್ತನಾಗಿಸಲು ಇದನ್ನು ಮೃತ್ಯುಕಾರಕವಲ್ಲದ ಅಸ್ತ್ರವಾಗಿ ಬಳಸಲಾಗುತ್ತದೆ. ಅಲ್ಲದೇ ಇದನ್ನು ಹೆಚ್ಚಾಗಿ ದೊಂಬಿಯನ್ನು ನಿಯಂತ್ರಿಸಲು ಹರಡಲಾಗುತ್ತದೆ, ಅಥವಾ ವೈಯಕ್ತಿಕ ವೈಷಮ್ಯಕ್ಕಾಗಿ ವ್ಯಕ್ತಿ ಇದನ್ನು ಬಳಸುತ್ತಾನೆ.

ಬ್ಲ್ಯಾಕ್ ಪೆಪರ್(ಕರಿಮೆಣಸು) ಮತ್ತು ಸಿಚುವನ್ ಪೆಪರ್ ಈ ರೀತಿಯ ಖಾರವಾದ ರುಚಿಯನ್ನು ನೀಡಿದರೂ ಕೂಡ, ಅವುಗಳು ಅನುಕ್ರಮವಾಗಿ ಪೈಪರಿನ್ ಮತ್ತು ಹೈಡ್ರಾಕ್ಸಿ-ಆಲ್ಫ್ ಸ್ಯಾನ್ ಸೂಲ್ ಎಂಬ ವಿಭಿನ್ನ ವಸ್ತುಗಳಿಂದ ಈ ರೀತಿಯ ಖಾರದ ಅನುಭವದ ರುಚಿ ನೀಡುತ್ತವೆ.

ಅಡುಗೆ ವಿಧಾನ

[ಬದಲಾಯಿಸಿ]
ಚಿಲಿ ಪೆಪರ್ ಗಳು()

ಕ್ಯಾಪ್ಸಿಕಂ ನ ಹಣ್ಣುಗಳನ್ನು ಮತ್ತು ಮೆಣಸನ್ನು ಬೇಯಿಸಿ ಅಥವಾ ಹಸಿಯಾಗಿ ತಿನ್ನಬಹುದು. ಸಾಮಾನ್ಯವಾಗಿ C. ಅನ್ಯುಮ್ ಮತ್ತು C. ಫುರ್ಟೆಸಿನ್ಸ್ ಜಾತಿಗಳ ವಿಧಗಳನ್ನು ಅಡುಗೆಗೆ ಬಳಸಿದರೂ, ಇತರ ಕೆಲವೊಂದು ತಳಿಗಳನ್ನೂ ಕೂಡ ಅಡುಗೆಗೆ ಚೆನ್ನಾಗಿ ಬಳಸಲಾಗುತ್ತದೆ.('ಸಿ'ಕ್ಯಾಲ್ಸಿಯಮ್ ಒಳಗೊಂಡ) ಇವುಗಳು ಚೀಸ್, ಮಾಂಸ ಅಥವಾ ಅಕ್ಕಿಯಂತಹ ಮಸಾಲೆ ತುಂಬಿ ಅಡುಗೆ ಮಾಡುವ ಪದಾರ್ಥಗಳಿಗೆ ತಕ್ಕದಾಗಿವೆ.

ಇವುಗಳನ್ನು ಹೆಚ್ಚಾಗಿ ಹಸಿಯಾದ ಮತ್ತು ಕತ್ತರಿಸಿರುವ ಎರಡೂ ರೀತಿಯ ಸಲಾಡ್ ನಲ್ಲಿಯೂ ಕೂಡ ಬಳಸಲಾಗುತ್ತದೆ. ಅಥವಾ ಕರಿದು ಮಾಡುವ ಅಡುಗೆಯಲ್ಲಿ ಅಥವಾ ಇತರ ಮಿಶ್ರಣದ ಅಡುಗೆಗಳಲ್ಲಿಯೂ ಬಳಸಲಾಗುತ್ತದೆ. ಅವುಗಳನ್ನು ತುಂಡು ತುಂಡಾಗಿ ಕತ್ತರಿಸಿ ಕರಿಯಬಹುದು , ಪೂರ್ತಿಯಾಗಿ ಅಥವಾ ಸ್ವಲ್ಪ ಭಾಗ ಮಾತ್ರವನ್ನು ಸುಡಬಹುದು; ಅಥವಾ ಅದನ್ನು ಕತ್ತರಿಸಿ ಸಾಲ್ಸಾ ಅಥವಾ ಇತರ ಸಾಸ್ ಗಳಲ್ಲಿ ಸೇರಿಸಬಹುದು.

ಅವುಗಳನ್ನು ಜ್ಯಾಮ್[೧೦] ರೂಪದಲ್ಲಿ ಸಂರಕ್ಷಿಸಿಡಬಹುದು. ಅಥವಾ ಒಣಗಿಸಿ, ಉಪ್ಪಿನಕಾಯಿ ಹಾಕುವ ಮೂಲಕ ಅಥವಾ ಘನೀಕರಣದ ಮೂಲಕ ಸಂರಕ್ಷಿಸಿಡಬಹುದು. ಒಣಗಿದ ಮೆಣಸಿನಕಾಯಿಯನ್ನು ಸಂಪೂರ್ಣವಾಗಿ ಪೂರ್ವಸ್ಥಿತಿಗೆ ತರಲಾಗುವುದು ಅಥವಾ ಅದನ್ನು ಕುಟ್ಟಿ ಅಥವಾ ಪುಡಿ ಮಾಡಿ ಸಂಸ್ಕರಿಸಿಡಲಾಗುತ್ತದೆ.

ಉಪ್ಪಿನ ದ್ರವದಲ್ಲಿ ಊರಿಕ್ಕಿದ ಅಥವಾ ಮ್ಯಾರಿನೇಡ್ ದ್ರವದಲ್ಲಿ ಅದ್ದಿದ ಮೆಣಸಿನಕಾಯಿಗಳನ್ನು ಹೆಚ್ಚಾಗಿ ಸ್ಯಾಂಡ್ ವಿಚ್ ಗಳಲ್ಲಿ ಅಥವಾ ಸಲಾಡ್ ಗಳಲ್ಲಿ ಬಳಸಲಾಗುತ್ತದೆ.   ಶೀತವಾತಾವರಣದಲ್ಲಿಟ್ಟ ಮೆಣಸಿನಕಾಯಿಯನ್ನು  ಸ್ಟ್ಯೂ(ಬಿಸಿನೀರಿನಲ್ಲಿ ಬೇಯಿಸಿ ಮಾಡಿದ ಮಾಂಸ ಮೊದಲಾದವುಗಳ ಭಕ್ಷ್ಯ), ಸೂಪ್ ಗಳಲ್ಲಿ ಮತ್ತು , ಸಾಲ್ಸಾಸ್ ನಲ್ಲಿ ಬಳಸಲಾಗುತ್ತದೆ. ಇದರ ಸಾರವನ್ನು ತೆಗೆಯಬಹುದು. ಅಲ್ಲದೇ ಅದನ್ನು ಹಾಟ್ ಸಾಸ್ ಗಳಿಗೆ ಸೇರಿಸಲಾಗುತ್ತದೆ.
ಜಜ್ಜಿದ ಕೆಂಪು ಮೆಣಸು

ರಿಚರ್ಡ್ ಪ್ಯಾಂಕ್ರುಸ್ಟ್ ನ ಪ್ರಕಾರ C. ಫ್ರುಟೆಸಿನ್ಸ್ (ಬಾರ್ಬರೆ ಎಂದು ಕರೆಯಲಾಗುತ್ತಿತ್ತು.) ಇಥಿಯೋಪಿಯಾದ ರಾಷ್ಟ್ರೀಯ ಅಡುಗೆಗೆ ಬೇಕಾದ ಅತ್ಯಂತ ಪ್ರಮುಖವಾದ ಸಾಮಗ್ರಿಯಾಗಿದೆ. 19 ನೇ ಶತಮಾನದ ಪೂರ್ವಾರ್ಧದಲ್ಲಿ "ಇವುಗಳಿಗೆ ಯೋಗ್ಯವಾದ ಮಣ್ಣಿರುವಂತಹ ಬೆಚ್ಚಗಿನ ವಾತಾವರಣದ ಪ್ರದೇಶಗಳಲ್ಲಿ ಇವುಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಯಲಾಯಿತು". ಎಲ್ಲಾ ಸ್ಥಳಗಳಲ್ಲಿಯೂ ಇದನ್ನು ಬೆಳೆದರೂ ಕೂಡ ಬಾರ್ಬರೆ ವಿಶೇಷವಾಗಿ ಯೆಜ್ಜು ವಿನ ಪ್ರಾಂತ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಕಂಡುಬರುತ್ತದೆ.ಇದನ್ನು ಇಲ್ಲಿಗೆ "ಹೆಚ್ಚಾಗಿ ಶೋವಾ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳು ಸರಬರಾಜು ಮಾಡುತಿದ್ದವು." ರೈತನಾಗಿದ್ದ ಆತ ಗೊಲಿಮಾ ನದಿಯ ಮೇಲಿನ ತೀರದ ಪ್ರದೇಶವನ್ನು ಸಂಪೂರ್ಣವಾಗಿ ಈ ಸಸ್ಯವನ್ನು ಬೆಳೆಯಲೆಂದು ಮೀಸಲಿಟ್ಟನು. ಇಲ್ಲಿ ಸಾವಿರಾರು ಎಕರೆ ಭೂಮಿಯನ್ನು ಈ ಸಸ್ಯಕ್ಕಾಗಿ ಮೀಸಲಿಡಲಾಗುತ್ತಿತ್ತು ಅಲ್ಲದೇ ಇದನ್ನು ವರ್ಷಪೂರ್ತಿ ಬೆಳೆಯಲಾಗುತ್ತಿತ್ತು.[೧೧]

2005ರಲ್ಲಿ 2,000 ಜನರ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಕ್ಯಾಪ್ಸಿಕಂ ಪೆಪರ್ ಬ್ರಿಟನ್ ನ 4 ನೇ ಮೆಚ್ಚಿನ ಅಡುಗೆಗೆ ಬಳಸುವಂತಹ ತರಕಾರಿಯಾಗಿದೆ ಎಂಬ ವಿಷಯವನ್ನು ಬಹಿರಂಗ ಪಡಿಸಿತು.[೧೨]

ಬಲ್ಗೇರಿಯ, ದಕ್ಷಿಣ ಸೈಬೀರಿಯಾ ಮತ್ತು ಮ್ಯಾಸೆಡೋನಿಯದಲ್ಲಿಯೂ ಕೂಡ ಮೆಣಸಿನಕಾಯಿಗಳು(ಪೆಪರ್ ಗಳು) ಅತ್ಯಂತ ಜನಪ್ರಿಯವಾಗಿವೆ. ಇವುಗಳನ್ನು ಶಾಪ್ಸ್ಕಾ ಸಲಾಟದಂತಹ ಸಲಾಡ್ ಗಳಲ್ಲಿ ತಿನ್ನಬಹುದು; ಅವುಗಳನ್ನು ಕರಿದು ಸುತ್ತಲೂ ಟಮೋಟೋ ಪೇಸ್ಟ್ , ಈರುಳ್ಳಿ , ಬೆಳ್ಳುಳ್ಳಿ ಮತ್ತು ಕೊತ್ತಂಬರಿಯನ್ನು ಹಾಕಲಾಗುತ್ತದೆ; ಅಥವಾ ತುಂಡು ಮಾಡಿದ ಮಾಂಸ, ಅನ್ನ, ಬೀನ್ಸ್ ಅಥವಾ ಮೃದುವಾದ ಚೀಸ್ ಮತ್ತು ಮೊಟ್ಟೆಗಳಂತಹ ವಿಭಿನ್ನ ವಸ್ತುಗಳಿಗೆ ಮಸಾಲೆಯ ರೂಪದಲ್ಲಿ ಬಳಸಲಾಗುತ್ತದೆ. ಅಲ್ಲದೇ ಮೆಣಸು, ಟಮೋಟೊ ಮತ್ತು ಮೆಣಸಿನಲ್ಲಿ ಅದ್ದಿ ಮಾಡುವ ಸಾಂಪ್ರದಾಯಿಕ —ಲ್ಯುಟೆಂಟಿಸಾ ಮತ್ತು ಅಜ್ವರ್ ಪ್ರದೇಶಗಳಲ್ಲಿ ರುಚಿಗೆ ಬೇಕಾದ ಪ್ರಮುಖ ಸಾಮಗ್ರಿಯಾಗಿದೆ. ತರಕಾರಿಗಳಿಂದ ಮಾಡಲಾಗುವ ವಿಭಿನ್ನ ರೀತಿಯ ಉಪ್ಪಿನಕಾಯಿ ಉದಾಹರಣೆಗೆ —ಟರ್ಶಿಯದಂತಹ ಉಪ್ಪಿನ ಕಾಯಿಯನ್ನು ಮಾಡಲು ಬೇಕಾಗುವ ಪ್ರಮುಖ ಸಾಮಗ್ರಿಯಾಗಿವೆ.

ಅಲ್ಲದೇ ಮೆಣಸಿನ ಕಾಯಿಗಳನ್ನು ಇಟ್ಯಾಲಿಯನ್ ಅಡುಗೆಗಳಲ್ಲೂ ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೇ ಇದರ ಕಾರವಾದ ರೂಪವನ್ನು ಇಟಲಿಯ ದಕ್ಷಿಣ ಭಾಗದಲ್ಲೆಲ್ಲಾ ಸಾಮಾನ್ಯ ಮಸಾಲೆ ಪದಾರ್ಥವೆಂಬಂತೆ ಬಳಸುತ್ತಾರೆ. (ಕೆಲವೊಮ್ಮೆ ಇದನ್ನು ಆಲಿವ್ ಎಣ್ಣೆಯೊಡನೆ ಬೆರೆಸಿ ತಿನ್ನಲು ನೀಡಲಾಗುತ್ತದೆ). ಕ್ಯಾಪ್ಸಿಕಂ ಪೆಪರ್ ಅನ್ನು ಅನೇಕ ಖಾದ್ಯಗಳಲ್ಲಿ ಬಳಸಲಾಗುತ್ತದೆ; ಅಲ್ಲದೇ ಅದನ್ನು ಉಪಯೋಗಿಸಿ ಅನೇಕ ರೀತಿಯ ಅಡುಗೆ ಮಾಡಬಹುದು; (ಸುಡುವುದು, ಕರಿಯುವುದು, ಅತಿಯಾಗಿ ಕರಿಯುವುದು). ಅಲ್ಲದೇ ಇದನ್ನು ಕೆಲವೊಂದು ನಡುಜಾ ದಂತಹ ರುಚಿಕರ ,ವಿಶೇಷವಾದ ಖಾದ್ಯಗಳಲ್ಲಿ ಮೂಲ ಸಾಮಗ್ರಿಯಾಗಿ ಬಳಸಲಾಗುತ್ತದೆ.

ಕ್ಯಾಪ್ಸಿಕಂಗಳನ್ನು ಶ್ರೀಲಂಕಾದಲ್ಲಿಯೂ ಕೂಡ ಬೃಹತ್ ಪ್ರಮಾಣದಲ್ಲಿ ಉಪಖಾದ್ಯವಾಗಿ(ನೆಂಚಿಕೊಂಡು ತಿನ್ನುವ ಖಾದ್ಯವಾಗಿ) ಬಳಸಲಾಗುತ್ತದೆ.

ಪರ್ಯಾಯ ಬಳಕೆಗಳು

[ಬದಲಾಯಿಸಿ]

ಕೆಲವೊಂದು ವರ್ಷಗಳಿಂದ ನಡೆಸಿದ ಸಂಶೋಧನೆಗಳಿಂದ ಕ್ಯಾಪ್ಸಿಕಂ ಅನ್ನು ಈಗ ಮಾರ್ಪಾಡುಗೊಳಿಸಲಾಗಿದೆ. ಅಲ್ಲದೇ ಅವುಗಳನ್ನು ಇತರ ಉದ್ದೇಶಗಳಿಗೆ ಮತ್ತು ಇತರ ತಿನಿಸುಗಳಿಗೆ ಬಳಸಲಾಗುತ್ತಿದೆ. ಉದಾಹರಣೆಗೆ ಡೈಯಟಿಂಗ್.(ಕೊಬ್ಬು ತಡೆಯಲು ಆಹಾರ ಕ್ರಮ ಬದಲಿಸಲೂ ಬಳಸಲಾಗುತ್ತದೆ.) ಆದರೂ,ಇದನ್ನು ನಿಮ್ಮ ಕುಟುಂಬದ ವೈದ್ಯರೊಡನೆ ಚರ್ಚಿಸಿ ನಂತರ ಬಳಸಿದರೆ ಉತ್ತಮ, ಏಕೆಂದರೆ ಇದು ನಿಮ್ಮ ದೇಹದ ಸ್ಥಿತಿಯನ್ನು ಹೆಚ್ಚಾಗಿ ಆಧರಿಸಿರುತ್ತದೆ. ನಿಮ್ಮ ದೇಹದ ರಕ್ತದ ಒತ್ತಡಕ್ಕೆ ಮತ್ತು ಕೊಬ್ಬಿನ ಮಟ್ಟಕ್ಕನುಸಾರವಾಗಿ ನೀವು ಯಾವ ರೀತಿಯಲ್ಲಿ ಮಸಾಲೆ ಪದಾರ್ಥವನ್ನು ಮತ್ತು ಹಾಟ್ ಸಾಸ್ ಅನ್ನು ತೆಗೆದುಕೊಂಡರೆ ಒಳ್ಳೆಯದು ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳುವುದು ಉತ್ತಮ. {{citation}}: Empty citation (help)

ಜಾತಿಗಳು ಮತ್ತು ವಿಧಗಳು

[ಬದಲಾಯಿಸಿ]
ಚಿತ್ರ:Peppermix.jpg
ಜೋಡಿಸಲಾದ ಜ್ಯಾಲಪೆನೊ, ಬನಾನ, ಚಿಲಿ, ಮತ್ತು ಹ್ಯಾಬೆನೆರೊ ಮೆಣಸಿನಕಾಯಿ

ಕ್ಯಾಪ್ಸಿಕಂ ಸರಿಸುಮಾರು 20 ರಿಂದ 27 ಜಾತಿಗಳನ್ನು ಒಳಗೊಂಡಿದೆ,[೧೩] ಇವುಗಳಲ್ಲಿ ಐದು ಮನೆಯಲ್ಲಿಬಳಸುವಂತಹವು ಆಗಿವೆ. ಅವು ಕೆಳಕಂಡಂತಿವೆ : C. ಅನ್ಯುಮ್ , C. ಬ್ಯಕಟಂ , C. ಚಿನೆನ್ಸ್ , C. ಫ್ರುಟೆಸಿನ್ಸ್ , ಮತ್ತು C. ಪ್ಯುಬ್ ಸಿನ್ಸ್ .[೧೪]. ಜಾತಿಗಳ ನಡುವೆ ಇರುವ ಜಾತಿವಿಕಾಸದ ಸಂಬಂಧವನ್ನು ಜೀವಿ ಭೌಗೋಳಿಕಶಾಸ್ತ್ರದ,[೧೫] ರಚನಾ ಶಾಸ್ತ್ರದ,[೧೬] ರಾಸಾಯನಿಕ ಸಂಯೋಜಿತ,[೧೭] ಮಿಶ್ರತಳಿ ಇಳಿಸುವ,[೧೮] ಮತ್ತು ತಳಿ[೧೩] ಯ ದತ್ತಾಂಶ(ಮಾಹಿತಿ)ವನ್ನು ಬಳಸಿಕೊಂಡು ಕಂಡುಹಿಡಿಯಲಾಗುತ್ತದೆ. ಕ್ಯಾಪ್ಸಿಕಂ ನ ಹಣ್ಣುಗಳು ಜಾತಿಗಳ ನಡುವೆ ಮತ್ತು ಜಾತಿಗಳ ಒಳಗೆಯೇ ಬಣ್ಣ, ಆಕಾರ ಮತ್ತು ಗಾತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ವಿಭಿನ್ನವಾಗಿರುತ್ತವೆ.ಈ ವಿಭಿನ್ನತೆ ವರ್ಗಗಳ ನಡುವೆ ಇರುವ ಸಂಬಂಧದ ಬಗ್ಗೆ ಗೊಂದಲವನ್ನು ಉಂಟುಮಾಡುತ್ತವೆ.[೧೯] ರಾಸಾಯನಿಕ ಸಂಯೋಜಿತ ಅಧ್ಯಯನಗಳು, ವಿಧಗಳು ಮತ್ತು ಜಾತಿಗಳ ನಡುವೆ ಇರುವ ವ್ಯತ್ಯಾಸವನ್ನು ವಿಂಗಡಿಸಲು ಸಹಾಯಮಾಡುತ್ತವೆ. ಉದಾಹರಣೆಗೆ, C. ಬ್ಯಕಟಂ ವಾರ್. ಬ್ಯಕಟಂ , C. ಬ್ಯಕಟಂ ವಾರ್.ಪೆಂಡ್ಯುಲಂ ಹೊಂದಿರುವ ಫ್ಲ್ಯಾವೊನಾಯ್ಡ್ಸ್ ಅನ್ನು ಹೊಂದಿವೆ. ಇದು ಎರಡು ಗುಂಪುಗಳು ಒಂದೇ ಜಾತಿಗೆ ಸೇರಿವೆ ಎಂದು ಸಂಶೋಧಕರು ನಂಬುವಂತೆ ಮಾಡಿದೆ.[೧೭]

ಇದೇ ಜಾತಿಯ ಅನೇಕ ವಿಧಗಳನ್ನು ಹಲವು ವಿಭಿನ್ನ ರೀತಿಗಳಲ್ಲಿ ಬಳಸಲಾಗುತ್ತದೆ; ಉದಾಹರಣೆಗೆ C. ಅನ್ಯುಮ್ "ಬೆಲ್ ಪೆಪರ್" ಅನ್ನು ಒಳಗೊಂಡಿದೆ. ಇದು ಹಣ್ಣಾಗದೆ ಹಸಿರು ಬಣ್ಣದಲ್ಲಿರುವಾಗ ಮಾರಾಟಕ್ಕಷ್ಟೇ ,ಅಲ್ಲದೇ ಕೆಂಪು , ಹಳದಿ ಅಥವಾ ಹಣ್ಣಾಗಿ ಕೇಸರಿ ಬಣ್ಣದಲ್ಲಿರುವಾಗಲೂ ಮಾರಾಟವಾಗುತ್ತದೆ. ಈ ಜಾತಿಗಳು ಇತರ ವಿಧಗಳನ್ನು ಮತ್ತು ಮಸಾಲೆಗಾಗಿ ಬಳಸುವ ಅನಾಹೆಮ್ ಮೆಣಸಿನಕಾಯಿಗಳನ್ನು, ಕಾರದ ಪುಡಿಯನ್ನು ಮಾಡಲು ಬಳಸುವ ಒಣಗಿಸಿದ ಆನ್ಕೊ ಮೆಣಸಿನಕಾಯಿಯನ್ನು , ಸ್ವಲ್ಪ ಖಾರವಾದ ಜಾಲಪೆನೊ, ಮತ್ತು ಚಿಪಾಟ್ಲ್ ಎಂದು ಕರೆಯುವ ಹೊಗೆಯಿಂದ ಶುದ್ಧೀಕರಿಸಲಾದ ಜಾಲಪೆನೊ ಹಣ್ಣನ್ನು ಒಳಗೊಂಡಿರುತ್ತದೆ.

ತೀಕ್ಷಣವಾಗಿರುವ(ಖಾರ) ಮೆಣಸಿನಕಾಯಿಯಲ್ಲಿರುವ ಬಹುಪಾಲು ಕ್ಯಾಪ್ಸೈಸಿನ್ ಎಲೆಯ ದಿಂಡಿನ (ವಿಭಾಜಕ ಭಿತ್ತಿ)ಎಪಿಡರ್ಮಿಸ್ (ಹೊರಪದರ) ಮೇಲಿನ ಗುಳ್ಳೆಯ ಮೇಲೆ ಸಂಗ್ರಹವಾಗಿರುತ್ತದೆ. ಇದು ಬೀಜಗಳು ಅಂಟಿಕೊಂಡಿರುವ ಹಣ್ಣಿನ ಭಾಗವನ್ನು ವಿಂಗಡಿಸುತ್ತದೆ.[೨೦] C. ಚಿನೆನ್ಸ್ ನ ಹಣ್ಣುಗಳಲ್ಲಿ ಕ್ಯಾಪ್ಸೈಸಿನ್ ಉತ್ಪಾದನೆಯ ಮೇಲೆ ಮಾಡಲಾದ ಅಧ್ಯಯನ, ಕ್ಯಾಪ್ಸೈಸಿನಾಯ್ಡ್ ಗಳು ಕೇವಲ ಕಾರವಾದ ಹಣ್ಣಿನ ಒಳ ಕಿರುಕುಳಿಯ ವಿಭಾಜಕ ಭಿತ್ತಿಯ ಎಪಿಡರ್ಮಿಕ (ಹೊರಚರ್ಮದ) ಕೋಶಗಳಲ್ಲಿ ಮಾತ್ರ ಉತ್ಪತ್ತಿಯಾಗುತ್ತವೆ ಎಂದು ತೋರಿಸಿದೆ. ಈ ಗುಳ್ಳೆಗಳು ಕೇವಲ ಕ್ಯಾಪ್ಸೈಸಿನಾಯ್ಡ್ ನ ಸಂಗ್ರಹದಿಂದ ಮಾತ್ರ ರೂಪುಗೊಳ್ಳುತ್ತವೆ. ಅಲ್ಲದೇ ಈ ಗುಳ್ಳೆ ಉಂಟಾಗುವುದು; ಮತ್ತು ಕಾರವನ್ನು ಪನ್ 1 ಎಂಬ ಒಂದು ಸ್ಥಾನ ನಿಯಂತ್ರಿಸುತ್ತಿದೆ. ಎರಡು ಸಹಿಸಿಕೊಳ್ಳಬಲ್ಲ ಆಲೀಲ್ ಗಳಲ್ಲಿ ಅವುಗಳ ಇರುವಿಕೆ C. ಚಿನೆನ್ಸ್ ಹಣ್ಣುಗಳಲ್ಲಿ ಕಾರದ ಅಂಶವಿಲ್ಲದಂತೆ ಮಾಡುತ್ತದೆ.[೨೧]

ಹಾಟ್ ಪೆಪರ್ ಗಳಲ್ಲಿ ಕ್ಯಾಪ್ಸೈಸಿನ್ ನ ಪ್ರಮಾಣ ವಿಧಗಳ ನಡುವೆ ಗಣನೀಯವಾಗಿ ಬದಲಾಗುತ್ತದೆ. ಅಲ್ಲದೇ ಇದನ್ನು ಸ್ಕೊವಿಲ್ಲೆ ಹೀಟ್ ಯುನಿಟ್ (SHU) ನಲ್ಲಿ ಅಳೆಯಲಾಗುತ್ತದೆ. ಬಹುತ್ ಜೊಲೊಕಿಯ ಪೆಪರ್ ಪ್ರಸ್ತುತದಲ್ಲಿರುವಂತಹ ಪ್ರಪಂಚದಲ್ಲಿಯೇ ಅತ್ಯಂತ ಕಾರವಾದ ಮೆಣಸಿನಕಾಯಿಯಾಗಿದೆ ಎಂದು SHU ಪರಿಗಣಿಸಿದೆ. ಇದರ ಖಾರದ ಪ್ರಮಾಣ 923,000 ದಷ್ಟಿದೆ ಎಂದು SHU ಅಳತೆ ಮಾಡಿದೆ.[೨೨]

ಜಾತಿಗಳ ಪಟ್ಟಿ

[ಬದಲಾಯಿಸಿ]
  • ಕ್ಯಾಪ್ಸಿಕಂ ಅನ್ಯುಮ್ L.
  • ಕ್ಯಾಪ್ಸಿಕಂ ಬ್ಯಕಟಂ L.
  • ಕ್ಯಾಪ್ಸಿಕಂ ಬುಫೋರಂ ಹನ್ಸ್.
  • ಕ್ಯಾಪ್ಸಿಕಂ ಕ್ಯಾಂಪಿಲೊಪೋಡಿಯಂ ಸೆಂಡಿಟಿನ್.
  • ಕ್ಯಾಪ್ಸಿಕಂ ಕಾರ್ಡೆನಸೀ ಹೇಸರ್ & P. G. Sm.
  • ಕ್ಯಾಪ್ಸಿಕಂ ಚಾಕೋಯೆನ್ಸಿ ಹನ್ಸ್.
  • ಕ್ಯಾಪ್ಸಿಕಂ ಚಿನೆನ್ಸ್ ಜಾಕ್.
  • ಕ್ಯಾಪ್ಸಿಕಂ ಕೊಕಿನಿಯಂ (ರುಸ್ಬಿ) ಹನ್ಸ್.
  • ಕ್ಯಾಪ್ಸಿಕಂ ಕಾರ್ನಟಮ್ (ಹಿರ್ನ್) ಹನ್ಸ್.
  • ಕ್ಯಾಪ್ಸಿಕಂ ಡಿಮಾರ್ಫಮ್ (ಮಿರ್ಸ್) ನ್ಟ್ಸೆ
  • ಕ್ಯಾಪ್ಸಿಕಂ ಡ್ಯುಸೆನಿ ಬಿಟ್ಟರ್
  • ಕ್ಯಾಪ್ಸಿಕಂ ಎಕ್ಸಿಮಿಮ್ ಹನ್ಸ್.
  • ಕ್ಯಾಪ್ಸಿಕಂ ಫ್ಲೆಕ್ಸೊಸಂ ಸೆಂಡಿಟಿನ್.
  • ಕ್ಯಾಪ್ಸಿಕಂ ಫ್ರುಟೆಸಿನ್ಸ್ L.
  • ಕ್ಯಾಪ್ಸಿಕಂ ಗ್ಯಾಲಾಪೆಜೋನ್ಸ್ ಹನ್ಸ್.
  • ಕ್ಯಾಪ್ಸಿಕಂ ಗೆಮಿನಿಫೋಲಿಂ (ಡ್ಯಾಮರ್) ಹನ್ಸ್.
  • ಕ್ಯಾಪ್ಸಿಕಂ ಹೂಕೆರಿಯನುಮ್ (ಮೀರ್ಸ್) ಕ್ನುಟ್ಸೆ
  • ಕ್ಯಾಪ್ಸಿಕಂ ಲ್ಯಾನ್ಸೆಲೊಲ್ಯಾಟಂ (ಗ್ರೀನ್ಮ್.) C.V.ಮಾರ್ಟನ್ & ಸ್ಟ್ಯಾಂಡ್ಲ್.
  • ಕ್ಯಾಪ್ಸಿಕಂ ಲೆಪ್ಟೊಪೊಡಂ (ಡ್ಯುನಲ್) ಕ್ನುಟ್ಸೆ
  • ಕ್ಯಾಪ್ಸಿಕಂ ಲೈಸಿಯಾನ್ ಥಾಯ್ಡಸ್ ಬಿಟ್ಟರ್
  • ಕ್ಯಾಪ್ಸಿಕಂ ಮಿನುಟಿಫ್ಲೂರಂ (ರುಸ್ಬಿ) ಹನ್ಸ್.
  • ಕ್ಯಾಪ್ಸಿಕಂ ಮಿರಬಿಲೆ ಮಾರ್ಟ್.ಎಕ್ಸ್ ಸೆಂಡಿಟಿನ್.
  • ಕ್ಯಾಪ್ಸಿಕಂ ಮೊಸಿಟಿಕಂ ಟೂಲೆಡೊ
  • ಕ್ಯಾಪ್ಸಿಕಂ ಪ್ಯಾರವಿಫೋಲಿಯಂ ಸೆಂಡಿಟಿನ್.
  • ಕ್ಯಾಪ್ಸಿಕಂ ಪ್ಯುಬ್ ಸಿನ್ಸ್ ರುಜ್ & ಪ್ಯಾವ್.
  • ಕ್ಯಾಪ್ಸಿಕಂ ರೋಂಬಾಯ್ಡೆಂ (ಡ್ಯುನಲ್) ಕ್ನುಟ್ಸೆ
  • ಕ್ಯಾಪ್ಸಿಕಂ ಸ್ಕಾಟಿಯನಂ ಸೆಂಡಿಟಿನ್.
  • ಕ್ಯಾಪ್ಸಿಕಂ ಸ್ಕಾಲ್ನಿಕಿಯನಮ್ ಹನ್ಸ್.
  • ಕ್ಯಾಪ್ಸಿಕಂ ಟೂವರಿ ಇಸ್ ಬಗ್ et al.
  • ಕ್ಯಾಪ್ಸಿಕಂ ವಿಲ್ಲೊಸುಮ್ ಸೆಂಡಿಟಿನ್.[]

ಸಾಂಪ್ರದಾಯಿಕವಾಗಿ ಈ ಕೆಳಕಂಡ ಹೆಸರುಗಳಿವೆ:

[ಬದಲಾಯಿಸಿ]
  • ಟ್ಯುಬೊಕ್ಯಾಪ್ಸಿಕಂ ಅನಾಮಲ್ಯುಂ (ಫ್ರ್ಯಾಂಚ್. ಅಂಡ್ ಸ್ಯಾವ್

.) ಮ್ಯಾಕಿನೊ (C. ಅನಾಮಲ್ಯು ಫ್ರ್ಯಾಂಚ್. ಅಂಡ್ ಸ್ಯಾವ್ .)

  • ವ್ಯಾಸೋಬಿಯ ಫ್ಯಸಸಿಕ್ಯೂಲಾಟ (ಮೀರ್ಸ್) ಹನ್ಸ್. ( C. ಗ್ರಾಂಡಿಫ್ಲೋರಂ ಕ್ನುಟ್ಸೆ)
  • ವೆದರಿಂಗಿಯಾ ಸ್ಟ್ರ್ಯಾಮೊನಿಫೋಲಿಯಾ ಕ್ನುತ್ (C. ಸ್ಟ್ರ್ಯಾಮೋನಿಪೋಲಿಯಂ (ಕ್ನುತ್) ಕ್ನುಟ್ಸೆ)[]

ಸಮಾನಾರ್ಥ ಮತ್ತು ಸಾಮಾನ್ಯ ಹೆಸರುಗಳು

[ಬದಲಾಯಿಸಿ]
ಕ್ಯಾಪ್ಸಿಕಂ ಅನ್ಯುಮ್ ತಳಿಗಳು

ಕ್ಯಾಪ್ಸಿಕಂ ಹಣ್ಣುಗಳಿಗೆ ಕೊಟ್ಟಿರುವ ಹೆಸರುಗಳು ಇಂಗ್ಲೀಷ್ ಭಾಷೆಯನ್ನು ಮಾತನಾಡುವ ರಾಷ್ಟ್ರಗಳಲ್ಲಿ ಬದಲಾಗುತ್ತವೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಭಾರತದಲ್ಲಿ, ಖಾರವಿಲ್ಲದ ಜಾತಿಗಳನ್ನು "ಕ್ಯಾಪ್ಸಿಕಂ" ಗಳೆಂದು ಕರೆದರೆ, ಖಾರವಿರುವ ಜಾತಿಗಳನ್ನು "ಚಿಲಿ/ಚಿಲಿಸ್" (ಡಬಲ್ L ಬಳಸಿ) ಎಂದು ಕರೆಯಲಾಗುತ್ತದೆ. ಪೆಪರಾನ್ಸಿನಿಯನ್ನು "ಸಿಹಿಯಾದ ಕ್ಯಾಪ್ಸಿಕಂ" ಎಂದು ಕೂಡ ಕರೆಯಲಾಗುತ್ತದೆ. "ಬೆಲ್ ಪೆಪರ್" ಗಳು ಎಂದು ಸಾಮಾನ್ಯವಾಗಿ ಬಳಸದಿದ್ದರೂ ಕೂಡ ಬೆಲ್ ಆಕಾರವನ್ನು ಹೊಂದಿರುವ ಮತ್ತು ಖಾರವಾಗಿರುವ C. ಅನ್ಯುಮ್ ಮತ್ತು ಇತರ ವಿಧಗಳನ್ನು ಹೆಚ್ಚಾಗಿ "ಬೆಲ್ ಚಿಲಿಸ್" ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮತ್ತು ಐರ್ಲೆಂಡ್ ನಲ್ಲಿ , ಖಾರರಹಿತ ವಿಧಗಳನ್ನು "ಬೆಲ್ ಪೆಪರ್" ಗಳು, "ಸಿಹಿ ಮೆಣಸು" ಗಳು ಅಥವಾ "ಮೆಣಸು" ಗಳು (ಅಥವಾ "ಹಸಿರು ಮೆಣಸುಗಳು," "ಕೆಂಪು ಮೆಣಸುಗಳು," ಇತ್ಯಾದಿ.) ಎಂದು ಕರೆಯಲಾಗುತ್ತದೆ. ಖಾರವಿರುವ ಮೆಣಸನ್ನು "ಚಿಲಿ/ಚಿಲಿಸ್" (ಡಬಲ್ L) ಅಥವಾ "ಚಿಲಿ ಪೆಪರ್ಸ್" ಎಂದು ಕರೆಯಲಾಗುತ್ತದೆ.

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮತ್ತು ಕೆನಡಾದಲ್ಲಿ ಖಾರವಿಲ್ಲದ ಸಾಮಾನ್ಯ ಜಾತಿಗಳನ್ನು "ಬೆಲ್ ಪೆಪರ್" ಗಳೆಂದು "ಸಿಹಿ ಮೆಣಸು" ಗಳೆಂದು "ಕೆಂಪು/ಹಸಿರು/ಇತ್ಯಾದಿ ಮೆಣಸುಗಳೆಂದು," ಅಥವಾ ಕೇವಲ "ಮೆಣಸೆಂದು" ಕರೆಯಲಾಗುತ್ತದೆ. ಖಾರವಿರುವ ಜಾತಿಗಳನ್ನು ಒಟ್ಟಾಗಿ "ಚಿಲೆ/ಚಿಲಿಸ್," "ಚಿಲಿ/ಚಿಲಿಸ್," ಅಥವಾ "ಚಿಲಿ/ಚಿಲೆ ಪೆಪರ್" ಗಳೆಂದು (ಕೇವಲ ಒಂದು L ), "ಖಾರವಾದ ಮೆಣಸಿನಕಾಯಿ"ಗಳೆಂದು, ಅಥವಾ ನಿರ್ದಿಷ್ಟವಾದ ವಿಧವೆಂದು (ಉದಾಹರಣೆಗೆ, ಬನಾನಾ ಪೆಪರ್) ಕರೆಯಲಾಗುತ್ತದೆ.

ಇದರ ಸಸ್ಯಗಳು ಆಹಾರಕ್ಕೆ ರುಚಿಕೊಡುವ ಬ್ಲ್ಯಾಕ್ ಪೆಪರ್(ಕರಿ/ಕಾಳು ಮೆಣಸು), ಪೈಪರ್ ನಿಗ್ರುಮ್/1} ನಂತಹ ಖಾರದ ರುಚಿಯನ್ನೇ ಹೊಂದಿರುವುದರಿಂದ "ಪೆಪರ್" (ಮೆಣಸು) ಎಂಬ ಹೆಸರು ಬಳಕೆಗೆ ಬಂದಿತು. ಆದರೆ ಈ ಸಸ್ಯಗಳೊಡನೆ ಹಾಗು ಸಿಚುವನ್ ಪೆಪರ್ ನೊಡನೆ ಸಸ್ಯವಿಜ್ಞಾನಕ್ಕೆ ಸಂಬಂಧಪಟ್ಟ ಯಾವುದೇ ಸಂಬಂಧವಿಲ್ಲ

ಪೊಲಿಶ್ ಮತ್ತು ಹಂಗೇರಿಯಾದಲ್ಲಿ , "ಪ್ಯಾಪ್ರೀಕ " ಮತ್ತು "ಪ್ಯಾಪ್ರೀಕ(ಕೆಂಪು ಮೆಣಸು " (ಅನುಕ್ರಮವಾಗಿ) ಎಂಬ ಪದವನ್ನು ಎಲ್ಲಾ ರೀತಿಯ ಕ್ಯಾಪ್ಸಿಕಂ ಪೆಪರ್ಸಿಹಿಯಾದ ತರಕಾರಿ, ಮತ್ತು ಖಾರವಾದ ಮಸಾಲೆ) ಗಳಿಗೂ ಬಳಸಲಾಗುತ್ತದೆ. ಅಲ್ಲದೇ ಒಣಗಿಸಲಾದ ಮತ್ತು ಪುಡಿಮಾಡಿ ಅವರೇ ತಯಾರಿಸಿದ ಸಂಬಾರ ಪದಾರ್ಥ (US ಇಂಗ್ಲೀಷ್ ಮತ್ತು ಕಾಮನ್ ವೆಲ್ತ್ ಇಂಗ್ಲೀಷ್ ಎರಡರಲ್ಲಿಯೂ ಪಪ್ರೀಕ(ಕೆಂಪು ಮೆಣಸು ಎಂದು ಕರೆಯಲಾಗುತ್ತದೆ.)ವನ್ನು ಕೂಡ ಸೂಚಿಸಲು ಬಳಸಲಾಗುತ್ತದೆ. ಹಣ್ಣು ಮತ್ತು ಸಂಬಾರ ಪದಾರ್ಥವನ್ನು ಕೂಡ "ಪ್ಯಾಪ್ರೀಕ್ ಒಸ್ಟ್ರ " (ಹಾಟ್ ಪೆಪರ್) ಅಥವಾ "ಪ್ಯಾಪ್ರೀಕಾ ಸ್ಲೊಡ್ಕ " (ಸ್ವೀಟ್ ಪೆಪರ್(ಸಿಹಿ ಮೆಣಸು)) ಎಂದು ಹೇಳಬಹುದಾಗಿದೆ. ಇದರ ಬದಲಿಗೆ "ಪಿಪರ್ಸ್ " (ಪೆಪರ್) ಎಂಬ ಪದ ಕೇವಲ ರುಬ್ಬಿರುವ ಅಥವಾ ಪುಡಿ ಮಾಡಿರುವ ಬ್ಲ್ಯಾಕ್ ಪೆಪರ್(ಕಾಳು ಮೆಣಸು) (ಇದರ ಹಸಿರು ,ಬಿಳಿ ಮತ್ತು ಕೆಂಪು ರೂಪವನ್ನು ಒಳಗೊಂಡಿದೆ) ಎಂಬ ಅರ್ಥವನ್ನು ಕೊಡುತ್ತದೆ ಆದರೆ ಇದು ಕ್ಯಾಪ್ಸಿಕಂ ಆಗಿರುವುದಿಲ್ಲ. ಕೆಲವೊಮ್ಮೆ ಖಾರವಾದ ಕ್ಯಾಪ್ಸಿಕಂ ಮಸಾಲೆಯನ್ನು ಕೂಡ "ಚಿಲಿ " ಎಂದು ಕರೆಯಲಾಗುತ್ತದೆ.

ಇಟಲಿ ಮತ್ತು ಇಟಾಲಿಯನ್ ಭಾಷೆಯಲ್ಲಿ ಹಾಗು ಜರ್ಮನ್ ಭಾಷೆಯನ್ನು ಮಾತನಾಡುವ ಸ್ವಿಜರ್ಲೆಂಡ್ ಭಾಗಗಳಲ್ಲಿ ಸಿಹಿ ಮೆಣಸಿನ ಬಗೆಗಳನ್ನು "ಪೆಪರೊನ್" ಎಂದು ಮತ್ತು ಖಾರವಾದ ಮೆಣಸಿನ ವಿಧಗಳನ್ನು "ಪೆಪರೊನ್ಸಿನೊ" (ಸಾಹಿತ್ಯಿಕವಾಗಿ "ಸ್ಮಾಲ್ ಪೆಪರ್")(ಚಿಕ್ಕ ಮೆಣಸು) ಎಂದು ಕರೆಯಲಾಗುತ್ತದೆ. ಫ್ರೆಂಚ್ನಲ್ಲಿ, ಕ್ಯಾಪ್ಸಿಕಂ ಅನ್ನು "ಪೈರಾನ್" ಎಂದು ಕರೆಯಲಾಗುತ್ತದೆ. ಜರ್ಮನ್ ನಲ್ಲಿ ಕ್ಯಾಪ್ಸಿಕಂ ಅನ್ನು "ಪ್ಯಾಪ್ರೀಕ(ಕೆಂಪು ಮೆಣಸು" ಎಂದು ಕರೆಯಲಾಗುತ್ತದೆ; ಡಚ್ ನಲ್ಲಿ, ಈ ಪದವನ್ನು ಬೆಲ್ ಪೆಪರ್ ಗಳಿಗೆ ಬಳಸಿದರೆ, "ಚಿಲಿ " ಪದವನ್ನು ಕೇವಲ ಖಾರದಪುಡಿಯನ್ನು ಸೂಚಿಸಲು ಬಳಸಲಾಗುತ್ತದೆ, ಮತ್ತು ಹಾಟ್ ಪೆಪರ್ ನ ಭಿನ್ನ ರೂಪಗಳನ್ನು "ಸ್ಪ್ಯಾನ್ಸೆ ಪೆಪರ್ " (ಸ್ಪ್ಯಾನಿಷ್ ಪೆಪರ್ ಗಳು) ಗಳು ಎಂದು ಕರೆಯಲಾಗುತ್ತದೆ. ಆದರೂ , ಸ್ವಿಜರ್ಲೆಂಡ್ ನಲ್ಲಿ ಕ್ಯಾಪ್ಸಿಕಂ ನಿಂದ ಮಾಡಲಾದ ಮಸಾಲೆ ಪುಡಿಯನ್ನು "ಪ್ಯಾಪ್ರೀಕ(ಕೆಂಪು ಮೆಣಸು" (ಜರ್ಮನ್ ಭಾಷೆಯನ್ನು ಮಾತನಾಡುವ ಪ್ರದೇಶದಲ್ಲಿ) ಮತ್ತು "ಪ್ಯಾಪ್ರೀಕ" (ಫ್ರೆಂಚ್ ಮತ್ತು ಇಟಲಿಯನ್ ಭಾಷೆಯನ್ನು ಮಾತನಾಡುವ ಪ್ರದೇಶದಲ್ಲಿ) ಎಂದು ಕರೆಯಲಾಗುತ್ತದೆ.

ಸ್ಪ್ಯಾನಿಷ್ ಭಾಷೆಯನ್ನು ಮಾತನಾಡುವ ರಾಷ್ಟ್ರಗಳಲ್ಲಿ ಪ್ರತಿಯೊಂದು ವಿಧಕ್ಕೂ ಮತ್ತು ತಯಾರಿಕೆಗೂ ಅನೇಕ ವಿಭಿನ್ನ ಹೆಸರುಗಳಿವೆ. ಮೆಕ್ಸಿಕೊದಲ್ಲಿ ಚಿಲೆ ಎಂಬ ಪದವನ್ನು "ಹಾಟ್ ಪೆಪರ್" ಗಳಿಗೆ ಬಳಸಲಾಗುತ್ತದೆ. ಅಲ್ಲದೇ ಖಾರವಿಲ್ಲದ ವಿಧಗಳನ್ನು ಪಿಮಿಂಟೊ ( ಪಿಮಿಂಟಾ ಎಂಬುದು ಪೆಪರ್ ಪದದ ಪುಲ್ಲಿಂಗವಾಚಕವಾಗಿದೆ.) ಎಂದು ಕರೆಯಲಾಗುತ್ತದೆ. ಚಿಲಿಯಂತಹ ಅನೇಕ ಇತರ ರಾಷ್ಟ್ರಗಳಾದ, ಪೆರು, ಪ್ಯುರಿಟೊ ರಿಕೊ, ಮತ್ತು ಅರ್ಜಂಟೈನಾ ಇವುಗಳ ಹೆಸರುಗಳಿಗೆ ಪರಸ್ಪರ ಸಂಬಂಧವಿಲ್ಲದಿದ್ದರೂ ಇವು ಅಜಿ ಎಂಬ ಪದವನ್ನು ಬಳಸುತ್ತವೆ. ಸ್ಪ್ಯೇನ್ ನಲ್ಲಿ ,ಖಾರವಿಲ್ಲದ ವಿಧಗಳನ್ನು ಪಿಮಿಂಟೊ ಎಂದು ಖಾರವಿರುವ ವಿಧಗಳನ್ನು ಗಿನ್ಡಿಲ್ಲಾ ಎಂದು ಕರೆಯಲಾಗುತ್ತದೆ. ಅರ್ಜಂಟೈನಾ ಮತ್ತು ಸ್ಪ್ಯೇನ್ ನಲ್ಲಿ C. ಚಾಕೋಯೆನ್ಸಿ ವಿಧವನ್ನು ಸಾಮಾನ್ಯವಾಗಿ "ಪುಟಪ್ಯಾರಿಯೊ" ಎಂದು ಕರೆಯಲಾಗುತ್ತದೆ. ಬಹುಶಃ ಇದರ ಅತಿಯಾದ ಖಾರದಿಂದಾಗಿ ಆಡು ಭಾಷೆಯಲ್ಲಿ ಇದು "God damn it"(ಅಯ್ಯೋ ದೇವರೇ ಈ ಖಾರ!) ಎಂಬ ಅರ್ಥವನ್ನು ಕೊಡುತ್ತದೆ. ಭಾರತೀಯ ಇಂಗ್ಲೀಷ್ ನಲ್ಲಿ "ಕ್ಯಾಪ್ಸಿಕಂ" ಪದವನ್ನು ಕ್ಯಾಪ್ಸಿಕಂ ಅನ್ಯುಮ್ಅನ್ನು ಸೂಚಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಖಾರವಾದ ಕ್ಯಾಪ್ಸಿಕಂ ನ ಉಳಿದೆಲ್ಲಾ ವಿಧಗಳನ್ನು ಚಿಲಿ ಎಂದು ಕರೆಯಲಾಗುತ್ತದೆ. ಉತ್ತರ ಭಾರತದಲ್ಲಿ ಮತ್ತು ಪಾಕಿಸ್ತಾನದಲ್ಲಿ , ಕ್ಯಾಪ್ಸಿಕಂ ಅನ್ಯುಮ್ ಅನ್ನು ಸ್ಥಳೀಯ ಭಾಷೆಗಳಲ್ಲಿ ಸಾಮಾನ್ಯವಾಗಿ "ಶಿಮ್ಲಾ ಮಿರ್ಚ್" ಎಂದು ಕರೆಯಲಾಗುತ್ತದೆ. ಶಿಮ್ಲಾ ಭಾರತದಲ್ಲಿರುವ ಪ್ರಸಿದ್ಧ ಗಿರಿಧಾಮವಾಗಿದೆ. (ಸ್ಥಳೀಯ ಭಾಷೆಯಲ್ಲಿ "ಮಿರ್ಚ್"ಎಂದರೆ ಚಿಲಿ ಎಂದು ಹೇಳಲಾಗುತ್ತದೆ).

ಜಪಾನೀ ಭಾಷೆಯಲ್ಲಿ ಟುಗಾರ್ಷಿ (唐辛子, トウガラシ "ಚೀನೀ ಸಾಸಿವೆ") ಎಂಬ ಪದ ಹಾಟ್ ಚಿಲಿ ಪೆಪರ್ ಗಳನ್ನು ಸೂಚಿಸುತ್ತದೆ, ಅಲ್ಲದೇ ವಿಶೇಷವಾಗಿ ಅದರಿಂದ ಮಾಡಲಾದ , ಆಹಾರಕ್ಕೆ ರುಚಿಯನ್ನು ನೀಡುವ ಮಸಾಲೆಯಂತೆ ಬಳಸುವ ಮಸಾಲೆ ಪುಡಿಯನ್ನು ಸೂಚಿಸಲು ಬಳಸಲಾಗುತ್ತದೆ. ಬೆಲ್ ಪೆಪರ್ ಗಳನ್ನು ಪಿಮ್ಯಾನ್ (ピーマン, ಫ್ರೆಂಚ್ ನ ಪಿಮೆಂಟ್ ಅಥವಾ ಸ್ಪ್ಯಾನಿಷ್ ನ ಪಿಮೆಂಟೊ ದಿಂದ ಬಂದ ಪದ) ಎಂದು ಕರೆಯಲಾಗುತ್ತದೆ.

ಕ್ಯಾಪ್ಸಿಕಂ ತಳಿಗಳ ಚಿತ್ರಗಳು

[ಬದಲಾಯಿಸಿ]

ಇವನ್ನೂ ಗಮನಿಸಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Capiscum L." Germplasm Resources Information Network. United States Department of Agriculture. 2009-09-01. Retrieved 2010-02-01.
  2. ೨.೦ ೨.೧ ೨.೨ "Species records of Capiscum". Germplasm Resources Information Network. United States Department of Agriculture. Retrieved 2010-06-23.
  3. Quattrocchi, Umberto (2000). CRC World Dictionary of Plant Names. Vol. 1 A-C. CRC Press. p. 431. ISBN 9780849326752.
  4. ಗಿಲ್-ಜುರ್ಡೊ, A. T., Il ಸೆನ್ಸೊ ಡೆಲ್ ಚಿಲೆ e ಡೆಲ್ ಪಿಕ್ಯಾಂಟೆ: ಡಾಲಾ ಟ್ರೆಡಿಜುಯೊನ್ ಕಲ್ಚರಲ್ ಅಲ್ಲಾ ರಾಪರೆಸೆನ್ಟೇಷನ್ ವಿಸಿವ ಇನ್ (G. ಮ್ಯಾನೆಟ್ಟಿ, ed.), ಸೆಮಿಯೊಫುಡ್: Cಕಮ್ಯುನಿಕೇಷನ್ ಅಂಡ್ ಕಲ್ಚರ್ ಆಫ್ ಮೀಲ್ ಸೆಂಟ್ರೊ ಸೈಂಟಿಫಿಕೊ ಎಡಿಟೊರೆ, ಟೊರಿನೊ, ಟೊರಿನೊ, ಇಟಲಿ, 2006:34–58
  5. Mason, J. R. (1991). "Taxon-specific differences in responsiveness to capsaicin and several analogues: Correlates between chemical structure and behavioral aversiveness". Journal of Chemical Ecology. 17 (12): 2539–2551. doi:10.1007/BF00994601. Archived from the original on 2020-01-26. Retrieved 2010-09-20. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
  6. Norman, D. M. (1992). "Capsaicin effects on consumption of food by Cedar Waxwings and House Finches". The Wilson Journal of Ornithology. 104: 549–551. {{cite journal}}: Unknown parameter |coauthors= ignored (|author= suggested) (help)
  7. New Mexico State University – College of Agriculture and Home Economics (2005). "Chile Information - Frequently Asked Questions". Archived from the original on ಮೇ 4, 2007. Retrieved May 17, 2007.
  8. "ಆರ್ಕೈವ್ ನಕಲು". Archived from the original on 2013-08-29. Retrieved 2010-09-20.
  9. "The World's Healthies Foods". Archived from the original on ಆಗಸ್ಟ್ 28, 2018. Retrieved February 23, 2010.
  10. "ಆರ್ಕೈವ್ ನಕಲು". Archived from the original on 2016-01-27. Retrieved 2010-09-20.
  11. Pankhurst, Richard (1968). Economic History of Ethiopia. Addis Ababa: Haile Selassie I University Press. pp. 193–194.
  12. Wainwright, Martin (2005-05-23). "Onions come top for British palates". The Guardian. London. Archived from the original on 2020-04-13. Retrieved 2007-10-30.
  13. ೧೩.೦ ೧೩.೧ Walsh, B.M. (2001). "Phylogenetic Relationships of Capsicum (Solanaceae) Using DNA Sequences from Two Noncoding Regions: The Chloroplast atpB-rbcL Spacer Region and Nuclear waxy Introns". International Journal of Plant Sciences. 162 (6): 1409–1418. doi:10.1086/323273. Archived from the original ([ಮಡಿದ ಕೊಂಡಿ]Scholar search) on 2015-09-04. Retrieved 2007-12-20. {{cite journal}}: External link in |format= (help); Unknown parameter |coauthors= ignored (|author= suggested) (help)
  14. Heiser Jr, C.B. (1969). "Names for the Cultivated Capsicum Species (Solanaceae)". Taxon. Taxon, Vol. 18, No. 3. 18 (3): 277–283. doi:10.2307/1218828. Retrieved 2007-12-20. {{cite journal}}: Unknown parameter |coauthors= ignored (|author= suggested) (help)
  15. Tewksbury, J.J. (2006). "Where did the Chili Get its Spice? Biogeography of Capsaicinoid Production in Ancestral Wild Chili Species" (PDF). Journal of Chemical Ecology. 32 (3): 547–564. doi:10.1007/s10886-005-9017-4. PMID 16572297. Archived from the original (PDF) on 2020-01-26. Retrieved 2007-12-20. {{cite journal}}: Unknown parameter |coauthors= ignored (|author= suggested) (help)
  16. Eshbaugh, W.H. (1970). "A Biosystematic and Evolutionary Study of Capsicum baccatum (Solanaceae)". Brittonia. Brittonia, Vol. 22, No. 1. 22 (1): 31–43. doi:10.2307/2805720. Retrieved 2007-12-20.
  17. ೧೭.೦ ೧೭.೧ Ballard, R.E. (1970). "A Chemosystematic Study of Selected Taxa of Capsicum". American Journal of Botany. American Journal of Botany, Vol. 57, No. 2. 57 (2): 225–233. doi:10.2307/2440517. Retrieved 2007-12-20. {{cite journal}}: Unknown parameter |coauthors= ignored (|author= suggested) (help)
  18. Pickersgill, B. (1971). "Relationships Between Weedy and Cultivated Forms in Some Species of Chili Peppers (Genus capsicum)". Evolution. Evolution, Vol. 25, No. 4. 25 (4): 683–691. doi:10.2307/2406949. Retrieved 2007-12-20.
  19. Eshbaugh, W.H. (1975). "Genetic and Biochemical Systematic Studies of Chili Peppers (Capsicum-Solanaceae)". Bulletin of the Torrey Botanical Club. Bulletin of the Torrey Botanical Club, Vol. 102, No. 6. 102 (6): 396–403. doi:10.2307/2484766. Retrieved 2007-12-20.
  20. Zamski, E. (1987). "Ultrastructure of Capsaicinoid-Secreting Cells in Pungent and Nonpungent Red Pepper (Capsicum annuum L.) Cultivars". Botanical Gazette. 148 (1): 1–6. doi:10.1086/337620. Retrieved 2007-12-20. {{cite journal}}: Unknown parameter |coauthors= ignored (|author= suggested) (help)
  21. Stewart Jr, C. (2007). "Genetic control of pungency in C. chinense via the Pun1 locus". Journal of Experimental Botany. 58 (5): 979. doi:10.1093/jxb/erl243. PMID 17339653. {{cite journal}}: |access-date= requires |url= (help); Unknown parameter |coauthors= ignored (|author= suggested) (help)
  22. Simon de Bruxelles (1 April, 2006). "The chilli so hot you need gloves". London: Times Newspapers Ltd. Archived from the original on 2011-01-12. Retrieved 4 November, 2009. {{cite news}}: Check date values in: |accessdate= and |date= (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]