ಆಗಸ್ಟ್
ಆಗಸ್ಟ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಎಂಟನೆಯ ತಿಂಗಳು.[೧] ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ.[೨] ಆಗಸ್ಟ್ ವಿಶ್ವದ ಉತ್ತರಾರ್ಧದಲ್ಲಿ ಬೇಸಿಗೆಯ ಕೊನೆಯ ತಿಂಗಳು ಹಾಗೂ ದಕ್ಷಿಣಾರ್ಧದಲ್ಲಿ, ಇದು ಚಳಿಗಾಲದ ಕೊನೆಯ ತಿಂಗಳು. ಇದಕ್ಕೆ ಮೊದಲ ರೋಮನ್ ಚಕ್ರವರ್ತಿ ಅಗಸ್ಟಸ್ ಸೀಸರ್ ಅವರ ಹೆಸರನ್ನು ಇಡಲಾಗಿದೆ.[೩]
ಆಗಸ್ಟ್ ತಿಂಗಳು
[ಬದಲಾಯಿಸಿ]ಆಗಸ್ಟ್ ನ ಅರ್ಥವು ಪ್ರಾಚೀನ ರೋಮ್ ನಿಂದ ಬಂದಿದೆ: ಅಗಸ್ಟಸ್ ಎಂಬುದು ಲ್ಯಾಟಿನ್ ಪದವಾಗಿದ್ದು, ಇದರ ಅರ್ಥ "ಪೂಜ್ಯ" ಅಥವಾ "ಮಹಾನ್" ಎಂದು. ಇದು ಮೊದಲ ರೋಮನ್ ಚಕ್ರವರ್ತಿ ಗೈಯಸ್ ಸೀಸರ್‌ಗೆ ನೀಡಲಾದ ಬಿರುದು. ರೋಮನ್ ಸೆನೆಟ್ ಕ್ರಿ.ಪೂ ೮ ರಲ್ಲಿ ಚಕ್ರವರ್ತಿಯ ಗೌರವಾರ್ಥವಾಗಿ ಒಂದು ತಿಂಗಳಿಗೆ ಹೆಸರಿಡಲು ನಿರ್ಧರಿಸಿತು. ಅವರು ಹಳೆಯ ರೋಮನ್ ತಿಂಗಳಾದ ಸೆಕ್ಸ್ಟಿಲಿಯಸ್ ಅನ್ನು ಆಯ್ಕೆ ಮಾಡಿದರು ಮತ್ತು ಅದಕ್ಕೆ ಅಗಸ್ಟಸ್ ಎಂದು ಮರುನಾಮಕರಣ ಮಾಡಿದರು.[೪]
ಚಿಹ್ನೆಗಳು
[ಬದಲಾಯಿಸಿ]ಆಗಸ್ಟ್ ನ ಜನ್ಮಶಿಲೆಗಳೆಂದರೆ ಪೆರಿಡಾಟ್, ಸರ್ಡೋನಿಕ್ಸ್ ಮತ್ತು ಸ್ಪೈನೆಲ್.[೫] ಇದರ ಜನ್ಮ ಹೂವು ಗ್ಲಾಡಿಯೋಲಸ್ ಅಥವಾ ಗಸಗಸೆ ಹಾಗೂ ಇದರರ್ಥ ಸೌಂದರ್ಯ, ಪಾತ್ರದ ಶಕ್ತಿ, ಪ್ರೀತಿ, ಮದುವೆ ಮತ್ತು ಕುಟುಂಬ ಎಂಬುದಾಗಿದೆ.[೬] ಪಶ್ಚಿಮ ರಾಶಿಚಕ್ರ ಚಿಹ್ನೆಗಳೆಂದರೆ ಸಿಂಹ- ಆಗಸ್ಟ್ ೨೨ ರವರೆಗೆ ಮತ್ತು ಕನ್ಯಾ- ಆಗಸ್ಟ್ ೨೩ ರಿಂದ.[೭]
ರಜೆಗಳು / ಆಚರಣೆಗಳು
[ಬದಲಾಯಿಸಿ]- ಐರ್ಲ್ಯಾಂಡ್ ದೇಶದ ಹಲವು ಪ್ರಸಿದ್ಧ ಕದನಗಳು ಈ ತಿಂಗಳಿನಲ್ಲಿ ಸಂಭವಿಸಿವೆ.
- ಆಗಸ್ಟ್ ೧ - ಸ್ವಿಟ್ಜರ್ಲ್ಯಾಂಡ್ ದೇಶದ ರಾಷ್ಟ್ರೀಯ ದಿನ, ರಾಷ್ಟ್ರೀಯ ರಜೆ.
- ಆಗಸ್ಟ್ ೬ - ೧೮೦೬ರಲ್ಲಿ ರೋಮನ್ ಸಾಮ್ರಾಜ್ಯದ ದೊರೆಯಾಗಿದ್ದ ದೊರೆ ಫ್ರಾನ್ಸಿಸ್-೨ ನಿಂದ ರಾಜ ಪದವಿ ತ್ಯಾಗ.
- ಆಗಸ್ಟ್ ೬ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಜಪಾನ್ ದೇಶದ ಹಿರೋಶಿಮಾ ನಗರದ ಮೇಲೆ ಅಣುಬಾಂಬ್ ದಾಳಿ.[೮]
- ಆಗಸ್ಟ್ ೯ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಜಪಾನ್ ದೇಶದ ನಾಗಾಸಾಕಿ ನಗರದ ಮೇಲೆ ಆಣುಬಾಂಬ್ ದಾಳಿ.[೯]
- ಆಗಸ್ಟ್ ೯ - ೧೯೬೫ರಲ್ಲಿ ಮಲೇಷಿಯಾದಿಂದ ಬೇರ್ಪಡೆ ಹೊಂದಿ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ಸಿಂಗಾಪುರ.
- ಆಗಸ್ಟ್ ೧೪ - ೧೯೪೭ರಲ್ಲಿ ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾದ ದಿನ.
- ಆಗಸ್ಟ್ ೧೫ - ೧೭೬೯ರಲ್ಲಿ ಕೊರ್ಸಿಕಾದಲ್ಲಿ ನೆಪೋಲಿಯನ್ ಬೋನಾಪಾರ್ಟೆಯ ಜನನ.
- ಆಗಸ್ಟ್ ೧೫ - ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ದಿನ. ಈ ದಿನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ ಹಾಗೂ ರಾಷ್ಟ್ರೀಯ ರಜೆಯ ದಿನವಾಗಿದೆ.[೧೦]
- ಆಗಸ್ಟ್ ೧೫ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಅಣುಬಾಂಬ್ ದಾಳಿಯ ನಂತರ ಜಪಾನಿನ ದೊರೆ ಹಿರೋಹಿಟೊನಿಂದ ಜಪಾನಿನ ಶರಣಾಗತಿಯ ಘೋಷಣೆ.
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
ಉಲ್ಲೇಖಗಳು
[ಬದಲಾಯಿಸಿ]- ↑ https://www.timeanddate.com/calendar/months/august.html#:~:text=August%20is%20the%20last%20month%20of%20summer%20in,world%2C%20August%20is%20the%20last%20month%20of%20summer.
- ↑ https://www.timeanddate.com/calendar/months/august.html#:~:text=August%20is%20the%20last%20month%20of%20summer%20in,world%2C%20August%20is%20the%20last%20month%20of%20summer.
- ↑ https://www.timeanddate.com/calendar/months/august.html#:~:text=August%20is%20the%20last%20month%20of%20summer%20in,world%2C%20August%20is%20the%20last%20month%20of%20summer.
- ↑ https://www.timeanddate.com/calendar/months/august.html#:~:text=August%20is%20the%20last%20month%20of%20summer%20in,world%2C%20August%20is%20the%20last%20month%20of%20summer.
- ↑ https://www.americangemsociety.org/birthstones/august-birthstones/
- ↑ https://archive.ph/20120911093344/http://www.shgresources.com/gems/birthflowers/
- ↑ https://www.yourzodiacsign.com/calendar/2023/aguest/
- ↑ https://www.prajavani.net/explainer/nagasaki-marks-75-years-since-atomic-bombing-effects-of-nuclear-attack-752009.html
- ↑ https://www.prajavani.net/explainer/nagasaki-marks-75-years-since-atomic-bombing-effects-of-nuclear-attack-752009.html
- ↑ https://kannada.oneindia.com/news/india/independence-day-2023-here-is-the-history-theme-and-significance-of-the-77th-independence-day-307787.html