ವಿಷಯಕ್ಕೆ ಹೋಗು

ಅಂಗರಚನಾವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಡ್ರಿಯಾಸ್ ವೆಸಲಿಯಸ್ಡಿ ಹ್ಯೂಮಾನಿ ಕಾರ್ಪೋರಿಸ್ ಫ್ಯಾಬ್ರಿಕ, 1543 ರಲ್ಲಿನ ದೊಡ್ಡ, ವಿವರವಾದ ಚಿತ್ರಗಳಲ್ಲಿ ಒಂದಾಗಿದೆ

ಅಂಗರಚನಾಶಾಸ್ತ್ರ (Greek anatomē, "dissection") ಎಂಬುದು ಜೀವಿಗಳ ರಚನೆ ಮತ್ತು ಅವುಗಳ ಭಾಗಗಳ ಅಧ್ಯಯನಕ್ಕೆ ಸಂಬಂಧಿಸಿದ ಜೀವಶಾಸ್ತ್ರ ಶಾಖೆಯಾಗಿದೆ.[] ಅಂಗರಚನಾವಿಜ್ಞಾನ (anatomy) ಜೀವಿಗಳ ದೇಹರಚನೆ ಕುರಿತ ಅಧ್ಯಯನ.[][] ಅಂಗರಚನಾವಿಜ್ಞಾನದಲ್ಲಿ ಜೀವಿಗಳ ಆಕಾರ, ವಿವಿಧ ಅಂಗಗಳ ಜೋಡಣೆ, ಪರಸ್ಪರ ಸಂಬಂಧಗಳು, ವಿವಿಧ ಅಂಗಗಳು ಯಾವುದರಿಂದ ಮಾಡಲ್ಪಟ್ಟಿವೆಯೋ ಅವುಗಳ ಅಧ್ಯಯನ ಕೂಡಾ ಸೇರಿರುತ್ತದೆ.

ಅಂಗರಚನಾವಿಜ್ಞಾನ ಸೂತ್ರಗಳ ಸಮೀಕ್ಷೆ

[ಬದಲಾಯಿಸಿ]

ಅಂಗರಚನಾವಿಜ್ಞಾನ ಲೇಖನದಲ್ಲಿ ಆಕಾರ ರಚನೆಗಳನ್ನು ಕುರಿತ ಜೀವವಿಜ್ಞಾನದ ಈ ಶಾಖೆಯಲ್ಲಿನ ಸೂತ್ರಗಳ ಸಮೀಕ್ಷೆಯಿದೆ. ಮಾನವನೂ ಸೇರಿದಂತೆ ಉನ್ನತ ಕಶೇರುಕಗಳ ವಿಶಿಷ್ಟರಚನೆಯ ಯೋಜನೆಯೂ ಅಲ್ಲದೆ, ಅಂಗರಚನಾವಿಜ್ಞಾನದ ಚರಿತೆಯನ್ನೂ ವಿಭಾಗಗಳನ್ನೂ ಅಲ್ಲಿ ಅಡಕವಾಗಿ ಕೊಟ್ಟಿದೆ. ಇದಕ್ಕೆ ತೀರ ಹತ್ತಿರ ಸಂಬಂಧದ ಸಸ್ಯಶಾಸ್ರ್ತಗಳ ರಚನೆಯ ಕ್ಷೇತವನ್ನು ಸಸ್ಯಗಳು ಮತ್ತು ಸಸ್ಯಶಾಸ್ರ್ತದಲ್ಲಿ ಕೊಟ್ಟಿದೆ. ಇದರ ಮುಖ್ಯ ವಿಭಾಗಗಳು ಸಸ್ಯಶಾಸ್ರ್ತ(ಲೇಖನಗಳು) ಎಂಬಲ್ಲಿ ಸೂಚಿತವಾಗಿವೆ. ಅಂಗರಚನಾವಿಜ್ಞಾನ ತುಲನಾತ್ಮಕದಲ್ಲಿ ಜೀವವಿಕಾಸದ ಕಲ್ಪನೆಗೆ ಮೂಲವಸ್ತುವನ್ನು ಒದಗಿಸಿ ಅದನ್ನು ಆಧಾರಗೊಳಿಸಲು ಅಪಾರ ಪುರಾವೆಗಳನ್ನು ಈಚೆಗೆ ಇತ್ತಿರುವ ಅಂಗರಚನಾವಿಜ್ಞಾನದ ಶಾಖೆಯ ಚರ್ಚೆ ಇದೆ. ಸಜಾತೀಯತಾ ವಿಜ್ಞಾನ (ಹೋಮಾಲಜಿ)ದಲ್ಲಿ ವಿಕಾಸ ತತ್ತ್ವಕ್ಕೆ ಅನ್ವಯಿಸುವ ಪ್ರಾಣಿಗಳ ರಚನೆಯ ಮುಖ್ಯ ಹೋಲಿಕೆಗಳು, ಸದೃಶ ಜೀವಿಗಳೆನಿಸಿಕೊಂಡ ಇತರ ಪ್ರಾಣಿಗಳಲ್ಲಿ ಕಾಣುವ ಮೇಲು ಮೇಲಿನ ಹೋಲಿಕೆಗಳು ಪ್ರತಿಪಾದಿತವಾಗಿವೆ. ವಿಕಾಸದ ಫಲವಾಗಿರುವ ಆಕಾರ ರಚನೆಯ ಚರ್ಚೆಗಳು ಮಾನವಶಾಸ್ರ; ಜೀವವಿಜ್ಞಾನ; ವಿಕಾಸ, ಜೈವಿಕ; ಮಾನವನ ವಿಕಾಸ; ನಷ್ಟವಂಶ ಜೀವಿಶಾಸ್ತ್ರ; ಸಸ್ಯ ಪ್ರಾಣಗಳ ರೂಪಗಳನ್ನು ವಿಂಗಡಿಸಲು ಬಳಸಿರುವ ವಿಧಾನಗಳನ್ನು ವಿವರಿಸುವ ವರ್ಗೀಕರಣ ಜೀವವಿಜ್ಞಾನದಲ್ಲೂ (ಟ್ಯಾಕ್ಸಾನಮಿ) ಇವೆ. ಅಂಗರಚನಾವಿಜ್ಞಾನ (ಮಿಣಿದರ್ಶಕ)ದಲ್ಲಿ ಜೀವಿಗಳ ಅಂಗಗಳ ಮತ್ತು ಅವುಗಳ ಕಟ್ಟಡದ ತುಂಡುಗಳಾಗಿರುವ ಪುಟಾಣಿ ಜೀವಕಣಗಳ ರಚನೆಯನ್ನೂ ರಚನಾವಿನ್ಯಾಸವನ್ನೂ ಚರ್ಚಿಸಿದೆ.

ಅಂಗರಚನೆಯ ಬೆಳವಣಿಗೆಯನ್ನು ಕಂಡುಹುಡುಕುವ ವಿಧಾನ

[ಬದಲಾಯಿಸಿ]

ಮೊದಲಿನ ಒರಟು ಉಪಕರಣಗಳ ಕಾಲದಿಂದ, ಅಣುಗಳ ಇಲ್ಲವೇ ಇನ್ನೂ ಚಿಕ್ಕ ವಸ್ತುಗಳ(ವೈರಸ್) ಕೆಲವು ಗೊತ್ತಾದ ಮಾದರಿಗಳನ್ನೂ ಕಣ್ಣಿಗೆ ಕಾಣುವಂತೆ ಮಾಡಬಲ್ಲಂಥ ಶಕ್ತಿಯುತ ವಿದ್ಯುದಂಶಸೂಕ್ಷ್ಮದರ್ಶಕ (ಎಲೆಕ್ಟ್ರಾನ್ ಮೈಕೋಸ್ಕೋಪ್) ದ ಯುಗದ ತನಕ ಈ ವಿಜ್ಞಾನದಲ್ಲಿನ ಬೆಳವಣಿಗೆಯನ್ನೂ ವಿವರಿಸಿದೆ. ಜೀವಿಗಳ ಎಲ್ಲ ರೂಪಗಳ ಭೌತಿಕ ಮೂಲ ವಸ್ತುವಾದ ಜೀವದ್ರವ್ಯ (ಪ್ರೊಟೊ ಪ್ಲಾಸ್ಮ್) ಜೀವಕಣದ ರಚನೆಯಲ್ಲಿ ಕಿರಿಕಿರಿಯ ಚೂರುಗಳಾಗಿ ಹೊಂದಿಕೊಳ್ಳುವ ಓರಣವನ್ನು ಜೀವಕಣದಲ್ಲಿ ಹೇಳಿದೆ. ಈ ಜೀವಕಣಗಳ ತಂಡಗಳಿಂದಾಗುವ ಅಂಗಾಂಶದ ಮಾದರಿಗಳನ್ನುಅಂಗಾಂಶ ವಿಜ್ಞಾನದಲ್ಲಿ ವರ್ಣಸಿದೆ. ಅಂಡ ಫಲವಂತವಾದಾಗಿನಿಂದ ಹುಟ್ಟಿ ಹೊರಬರುವ ತನಕ ಆಗುವ ಬೆಳವಣಿಗೆಯ ಅಂಗರಚನೆಯನ್ನು ಅಂಡವಿಜ್ಞಾನ ಮತ್ತು ಬೆಳವಣಿಗೆಯಲ್ಲಿ ಚರ್ಚಿಸಿದೆ. ಅಂಗರಚನಾಶಾಸ್ತ್ರದಲ್ಲಿ ಅಡಕವಾಗಿ ಕೊಟ್ಟಿರುವ, ಮುಪ್ಪಿನಕಾಲದಲ್ಲಿ ಅಂಗರಚನೆಯಲ್ಲಿ ಕಾಣುವ ಬದಲಾಣೆಗಳನ್ನು ಮುಪ್ಪುವಿಜ್ಞಾನ(ಜೆರಾಂಟಾಲಜಿ) ಮತ್ತು ಕೆಳವವಿಜ್ಞಾನ (ಜೆರಿಯಾಟ್ರಿಕ್ಸ್)ದಲ್ಲಿ ವಿವರಿಸಿದೆ. ಕೃತಕ ಸಾಧನಗಳಿಂದ ಮೈಯ ಭಾಗಗಳಿಗೆ ಬದಲಿ ಜೋಡಿಸುವುದು ನ್ಯೂನತಾಪೂರಣ ವಿಜ್ಞಾನದಲ್ಲಿದೆ. ಕಸಿ ಮಾಡುವಿಕೆ, ಅಂಗಾಂಶದ ಮತ್ತು ಅಂಗದ, ಇದೇ ವಿಚಾರವನ್ನೇ ಕುರಿತದ್ದು.

ಅಂಗರಚನಾವಿಜ್ಞಾನ ಶರೀರಕ್ರಿಯಾ ವಿಜ್ಞಾನಗಳ ನ‌ಡುವಣ ವ್ಯತ್ಯಾಸ

[ಬದಲಾಯಿಸಿ]

ಅಂಗರಚನಾವಿಜ್ಞಾನ ಶರೀರಕ್ರಿಯಾವಿಜ್ಞಾನಗಳ ನ‌ಡುವಣ ವ್ಯತ್ಯಾಸ ಬಹುಮಟ್ಟಿಗೆ ಒತ್ತಿ ಹೇಳುವುದರಲ್ಲಿ ಇರುವ ವಿಚಾರವಿಷ್ಟೆ. ತೋಳು, ಕಣ್ಣು, ಕೈ ಇಲ್ಲವೇ ಒಂದು ಒಳಗಣ ಅಂಗ ಯಾವುದನ್ನೇ ಆಗಲಿ, ಆ ಅಂಗಗಳೊಂದಿಗೆ ವಿಕಾಸಗೊಂಡಿರುವ ನಿಜಕೆಲಸಗಳನ್ನು ಸೂಚಿಸದೆಯೆ ಅದರ ಆಕಾರ ರಚನೆಗಳ ಪೂರ್ಣ ವಿವರಣೆ ಹೇಗೂ ಅಸಾಧ್ಯ. ಆದ್ದರಿಂದಲೇ ಶರೀರಕ್ರಿಯಾ ವಿಜ್ಞಾನ (ಲೇಖನಗಳು) ವನ್ನು ನೋಡಬೇಕು.

ಮಾನವನ ಅಂಗಭಾಗಗಳ ರಚನೆ

[ಬದಲಾಯಿಸಿ]
ಎಂಆರ್‌ಐ ಸ್ಕ್ಯಾನ್‌ನಿಂದ ನೋಡಿದಂತೆ ತಲೆಯ ಸಗಿಟಲ್ ವಿಭಾಗಗಳನ್ನು ತೋರಿಸುವ ಆಧುನಿಕ ಅಂಗರಚನಾ ತಂತ್ರ

ಮಾನವನ ಮೈಯ ಅಂಗ, ಅಂಗಭಾಗಗಳ ರಚನೆಯನ್ನು ಚರ್ಚಿಸಿರುವ ಅನೇಕ ಲೇಖನಗಳ ಉದಾಹರಣೆಗಳಿವು: ಜಠರಗರುಳಿನ ನಾಳಿ; ಧಮನಿಗಳು(ಆರ್ಟರಿ), ಎಲುಬು; ಮಿದುಳು; ರಕ್ತಸುತ್ತಾಟದ ಮಂಡಲ; ಕೂಡಿಸುವ ಮತ್ತು ಆನಿಸುವ ಅಂಗಾಂಶಗಳು; ಕಣ್ಣು, ಮಾನವನ; ಗುಂಡಿಗೆಯ ಅಂಗರಚನೆ, ಕೀಲುಗಳು, ತಂತುಗಟ್ಟುಗಳು; ಈಲಿ; ಹಾಲುರಸ; ಹಾಲುರಸಮಂಡಲ; ನರ; ನರಮಂಡಲ; ವಾಸನಿಕ ಮಂಡಲ; ಸಂತಾನೋತ್ಪತ್ತಿ ಮಂಡಲ; ಉಸಿರಾಟದ ಮಂಡಲದ ಅಂಗರಚನೆ; ಎಲುಗಟ್ಟು, ಬೆನ್ನೆಲುಬಿಯ; ತಲೆಬುರುಡೆ; ಬೆನ್ನುಹುರಿ; ಮೂತ್ರದ ಮಂಡಲ; ಸಿರಗಳು. ಮೈಯ ಅಂಗಭಾಗಗಳಿಗೆ ಸಂಬಂಧಿಸಿದ ಹೆಚ್ಚಿನ ವಿಚಾರಗಳು ಅವುಗಳಿಗೆ ಸಂಬಂಧಿಸಿದ ಲೇಖನಗಳಲ್ಲಿವೆ.[] ಕೈಯ ಲೇಖನದಲ್ಲಿರುವ ಚರ್ಚೆಯೊಂದಿಗೆ, ಎಲುಬು; ಕೀಲುಗಳು; ತಂತುಪಟ್ಟಿಗಳು ಲೇಖನಗಳಲ್ಲಿನ ಭಾಗಗಳನ್ನೂ ಸೇರಿಸಿಕೊಳ್ಳಬೇಕು. ಮಾಂಸಲಿಯ(ಪ್ಯಾನ್‍ಕ್ರಿಯಾಸ್) ವಿಚಾರ ಇನ್ನೊಂದು ಉದಾಹರಣೆ. ಈ ಅಂಗದ ಮುಖ್ಯ ಚರ್ಚೆ ಮಾಂಸಲಿಯಲ್ಲಿ ಇದ್ದರೂ ಅದರ ಸಂಬಂಧಕ ವಿಚಾರಗಳನ್ನು ಬೇರೆಡೆಗಳಲ್ಲೂ ಕೊಟ್ಟಿದೆ. ಜಠರಗರುಳಿನ ನಾಳಿಯ ರೋಗಗಳು; ಸಿಹಿಮೂತ್ರ; ಪಚನ ಇನ್ಸುಲಿನ್; ನಿರ್ನಾಳ ಗ್ರಂಥಿ ಕಾರ್ಯವಿಜ್ಞಾನ; ಚೋದನಿಕಗಳು; ಪಿಂಡವಿಜ್ಞಾನ ಮತ್ತು ಬೆಳವಣಿಗೆ, ಪ್ರಾಣಿಯ ಬಹುಪಾಲು ಮುಖ್ಯ ಲೇಖನಗಳನ್ನು ಮೊದಲಿಕಗಳಾಗಿ ಇಟ್ಟುಕೊಂಡು ಮುಂದಿನ ಓದಿಗೆ ಮಿಕ್ಕವನ್ನು ನೋಡಬಹುದು. ಒಂದು ವಿಷಯದ ಸಮೀಕ್ಷೆಯ ಲೇಖನವಾಗೇ ಅಲ್ಲದೆ ಸಂಬಂಧಕ ಬರಹಗಳ ಗೊತ್ತಾದ ವಿಭಾಗಗಳಿಗೂ ಮೈಯಲ್ಲಿನ ಯಾವುದೇ ಭಾಗದ ಪೂರ್ಣ ವಿಷಯಗಳಿಗೂ ವಿಷಯಸೂಚಿ ಕೈಪಿಡಿ. ಅಂಗರಚನಾಶಾಸ್ತ್ರದಲ್ಲಿನ ಅನೇಕ ಮುಂದಾಳುಗಳ ಸಾಧನೆಯನ್ನು ಜೀವನ ಚರಿತೆಯ ಲೇಖನಗಳಲ್ಲಿ ಕಾಣಬಹುದು. ವೈದ್ಯವಿದ್ಯೆ ಮತ್ತು ಶಸ್ತ್ರವೈದ್ಯ (ಲೇಖನಗಳು) ದಲ್ಲಿ ಇನ್ನಷ್ಟು ಕುತೂಹಲಕರ ವಿಷಯಗಳನ್ನುಓದಬಹುದು.

ಪ್ರಪಂಚದಲ್ಲಿ ಇನ್ನೆಲ್ಲೂ ಅಂಗರಚನೆಯ ಅಂಗಕ್ರಿಯೆಗಳ ಕಲ್ಪನೆಯ ವಾಸನೆಯೇ ಇಲ್ಲದಿದ್ದಾಗ, ಪ್ರಾಚೀನ ಭಾರತದಲ್ಲಿ ಎಲ್ಲೆಲ್ಲೂ ಪ್ರಚಲಿತವಾಗಿದ್ದ ಆಯುರ್ವೇದದಲ್ಲಿ ಹೇಳಿರುವ ಅಂಗರಚನೆಗಳ ತಿಳಿವಳಿಕೆಯನ್ನು ಅಂಗರಚನಾವಿಜ್ಞಾನ, ಆಯುರ್ವೇದದಲ್ಲಿ ವಿಜ್ಞಾನ ಎಂಬ ಲೇಖನದಲ್ಲಿ ಕೊಟ್ಟಿದೆ. ಇಂದಿನ ವೈಜ್ಞಾನಿಕ ವೈದ್ಯದಲ್ಲಿ ಇರುವುದಕ್ಕೂ ಚೆನ್ನಾದ ಹೋಲಿಕೆಗಳು ಇಲ್ಲಿ ಬಹಳ ಇರುವುದನ್ನೂ ಗಮನಿಸಬಹುದು.

ಇವನ್ನೂ ನೋಡಿ

[ಬದಲಾಯಿಸಿ]

ಅಂಗರಚನಾವಿಜ್ಞಾನ (ಆಯುರ್ವೇದದಲ್ಲಿ)

ಅಂಗರಚನಾಶಾಸ್ತ್ರ, ಒಟ್ಟಾರೆ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Merriam Webster Dictionary
  2. https://www.britannica.com/science/anatomy
  3. ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಕೋಶ. ನವಕರ್ನಾಟಕ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್. pp. ೨. ISBN 818467198-9.
  4. "Studying medicine". Medschools Online. Archived from the original on 28 January 2013. Retrieved 27 June 2013.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: