3ಜಿ
ಅಂತಾರಾಷ್ಟ್ರೀಯ ಮೊಬೈಲ್ ದೂರಸಂಪರ್ಕ ವ್ಯವಸ್ಥೆಗಳು-2000 (ಐಎಂಟಿ ---2000) , ಇದು 3ಜಿ ಅಥವಾ 3ನೇ ಪೀಳಿಗೆ ಎಂದು ತಿಳಿಯಲಾಗಿದ್ದು. ಮೊಬೈಲ್ ದೂರವಾಣಿಗಳು ಮತ್ತು ಮೊಬೈಲ್ ದೂರಸಂಪರ್ಕ ವ್ಯವಸ್ಥೆಗಳ ಸೇವೆಗಳ ಲಕ್ಷಣಗಳು ಅಂತಾರಾಷ್ಟ್ರೀಯ ದೂರಸಂಪರ್ಕ ಕೇಂದ್ರದಿಂದ ಪೂರೈಸಲ್ಪಟ್ಟ ಅತ್ಯುತ್ತಮ ದರ್ಜೆಯ ಸೇವೆಯಾಗಿ ಪರಿಗಣಿಸಲಾಗುತ್ತದೆ.[೧] ಈ ಪ್ರಕಾರದ ಅಪ್ಲಿಕೇಶನ್‌ನಲ್ಲಿ ವೈರ್‌ಲೆಸ್ ದೂರವಾಣಿ, ಮೊಬೈಲ್ ಇಂಟರ್ನೆಟ್ ಅವಕಾಶ, ವೀಡಿಯೋ ಕರೆಗಳು ಮತ್ತು ಮೊಬೈಲ್ ಟಿವಿ ಮುಂತಾದ ಎಲ್ಲ ಸೇವೆಗಳೂ ಒಂದೇ ಮೊಬೈಲ್ ನಲ್ಲಿಯೇ ದೊರೆಯುತ್ತದೆ. ಹಳೆಯ 2ಜಿ ಮತ್ತು 2.5ಜಿ ಗುಣಮಟ್ಟಗಳಿಗೆ ಹೋಲಿಸಿದರೆ, ಐಎಂಟಿ-2000 ಲಕ್ಷಣದ ಪ್ರಕಾರ 3ಜಿ ಪದ್ಧತಿಯು ಒಂದೇ ಸಮಯದಲ್ಲಿ ಮಾತು ಮತ್ತು ದತ್ತಾಂಶ ಸೇವೆಗಳಿಗೆ ಹಾಗೂ ಗರಿಷ್ಠ ಮಿತಿಯ ದತ್ತಾಂಶ ದರಗಳನ್ನು ಕನಿಷ್ಠ 200 ಕೆಬಿಐಟಿ/ಎಸ್ ನಲ್ಲಿ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 3ಜಿ ತಂತ್ರಜ್ಞಾನವು ಸಾಮಾನ್ಯವಾಗಿ 3.5ಜಿ ಮತ್ತು 3.75ಜಿ ಮಟ್ಟದ ಸೇವೆಯನ್ನು ನೀಡುತ್ತದೆ ಅಲ್ಲದೆ ಅನೇಕ ಎಂಬಿಐಟಿ/ಎಸ್‌ನ ಮೊಬೈಲ್ ಬ್ರಾಡ್ ಬ್ಯಾಂಡ್ ಅವಕಾಶವನ್ನು ಲ್ಯಾಪ್ ಟಾಪ್ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್ ಫೋನ್‌ಗಳಿಗೆ ನೀಡಿದೆ. ಕೆಳಗಿನ ಗುಣಮಟ್ಟಗಳು 3ಜಿ ಮಾದರಿಯಲ್ಲಿದೆ:
- ಯುಎಂಟಿಎಸ್ ಸಿಸ್ಟಮ್ 3ಜಿಪಿಪಿ ಗುಣಮಟ್ಟ ನಿರ್ಧಾರಿತವಾದ ವ್ಯವಸ್ಥೆಯನ್ನು 2001 ರಲ್ಲಿ ಮೊದಲ ಬಾರಿ ಪ್ರಾಥಮಿಕವಾಗಿ ಯುರೋಪ್, ಜಪಾನ್, ಚೀನಾ, (ಆದರೆ ರೆಡಿಯೋ ಇಂಟರ್ ಫೇಸ್‌ಗೆ ಬೇರೆಯದೇ ವ್ಯವಸ್ಥೆಯನ್ನು ನೀಡಲಾಗಿತ್ತು) ಮತ್ತು ಇತರ ಜಿಎಸ್ಎಂ 2ಜಿ ಪದ್ಧತಿಯ ವ್ಯವಸ್ಥೆಯ ಹತೋಟಿ ಇರುವ ಪ್ರದೇಶಗಳಲ್ಲಿ ಬಿಡುಗಡೆ ಮಾಡಲಾಯಿತು. ಮೊಬೈಲ್ ದೂರವಾಣಿಗಳು ಯುಎಂಟಿಎಸ್ ಮತ್ತು ಜಿಎಸ್ಎಂ ಮಿಶ್ರತಳಿಯ ಮಾದರಿಯದ್ದಾಗಿದೆ. ಅನೇಕ ರೇಡಿಯೋ ಇಂಟರ್ ಫೇಸ್‌ಗಳು ಇಂತಹದೇ ವ್ಯವಸ್ಥೆಯಲ್ಲಿನ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ:
- ಮೂಲಭೂತವಾದ ಮತ್ತು ಹೆಚ್ಚು ವಿಸ್ತಾರವಾಗಿರುವ ರೇಡಿಯೋ ಇಂಟರ್ ಫೇಸ್ ಅನ್ನು ಡಬ್ಲ್ಯೂ-ಸಿಡಿಎಂಎ ಎಂದು ಕರೆಯಲಾಗುತ್ತದೆ.
- ಟಿಡಿ-ಎಸ್ ಸಿಡಿಎಂಎ ರೇಡಿಯೋ ಇಂಟರ್ ಫೇಸ್, 2009 ರಲ್ಲಿ ವಾಣಿಜ್ಯೀಕರಣಗೊಂಡಿತು ಮತ್ತು ಚೀನಾದಲ್ಲಿ ಮಾತ್ರ ಮಾರಾಟಕ್ಕಿಡಲಾಯಿತು.
- ಇತ್ತೀಚೆಗೆ ಬಂದ ಯುಎಂಟಿಎಸ್, ಎಚ್ಎಸ್ಪಿಎ+, ಅತ್ಯಂತ ಗರಿಷ್ಠ ಮಟ್ಟದ ದತ್ತಾಂಶ ದರ 56 ಎಂಬಿಟ್/ಎಸ್ ನ್ನು ಡೌನ್ ಲಿಂಕ್ ನಲ್ಲಿ ಸಿದ್ಧಾಂತದಲ್ಲಿ (ನೀಡಲಾಗುತ್ತಿರುವ ಸೇವೆಗಳಲ್ಲಿ 28 ಎಂಬಿಟ್/ಎಸ್) ಮತ್ತು 22 ಎಂಬಿಟ್/ಎಸ್ ಅಪ್ ಲಿಂಕ್ ನಲ್ಲಿ ನೀಡಬಲ್ಲದು.
- ಸಿಡಿಎಂಎ2000 ಪದ್ಧತಿ, 2002 ರಲ್ಲಿ ಮೊದಲ ಬಾರಿಗೆ ಮಾರಾಟವಾಯಿತು, 3ಜಿಪಿಪಿ2 ನಿಂದ ಗುಣಮಟ್ಟ ತಯಾರಿಸಲ್ಪಟ್ಟಿತು, ಐಎಸ್-95 2ಜಿ ಗುಣಮಟ್ಟದ ಜೊತೆಗೆ ವಿಶೇಷವಾಗಿ ಉತ್ತರ ಅಮೇರಿಕಾ ಹಾಗೂ ದಕ್ಷಿಣ ಕೋರಿಯಾದಲ್ಲಿ ಉಪಯೋಗಿಸಲ್ಪಟ್ಟಿತು. ಮೊಬೈಲ್ ದೂರವಾಣಿಗಳು ಸಿಡಿಎಂಎ2000 ಮತ್ತು ಐಎಸ್-95 ಮಿಶ್ರತಳಿಗಳ ಮಾದರಿಯವು. ಇತ್ತೀಚಿನ ಬಿಡುಗಡೆಯಾದ ಈವಿಡಿಒ ರೆವ್ ಬಿ ಗರಿಷ್ಠ ಮಟ್ಟದ ದರ 14.7 ಎಂಬಿಟ್/ಎಸ್ ಹರಿವಿನ ದಿಕ್ಕನ್ನು ಮಾರುತ್ತವೆ.
ಮೇಲಿನ ಪದ್ಧತಿಗಳು ಮತ್ತು ರೇಡಿಯೋ ಇಂಟರ್ ಫೇಸ್‌ಗಳು ರೇಡಿಯೋ ರವಾನೆ ತಂತ್ರಜ್ಞಾನ ಹರಡಲ್ಪಟ್ಟ ವಿದ್ಯುತ್ಕಾಂತೀಯ ಗುಣಸಾಮ್ಯತೆಯ ಆಧಾರವನ್ನು ಹೊಂದಿವೆ. ಯಾವಾಗ ಜಿಎಸ್ಎಂ ಇಡಿಜಿಇ ಗುಣಮಟ್ಟವು (“2.9ಜಿ”), ಡಿಇಸಿಟಿ ತಂತಿ ರಹಿತ ದೂರವಾಣಿಗಳು ಮತ್ತು ಮೊಬೈಲ್ ವಿಮಾಕ್ಸ್ ಗುಣಮಟ್ಟಗಳು ಅಲ್ಲದೆ, ಐಎಂಟಿ-2000 ಅಗತ್ಯಗಳನ್ನು ವಿದ್ಯುಕ್ತವಾಗಿ ಪೂರೈಸುತ್ತವೆ ಮತ್ತು ಐಟಿಯು ನಿಂದ 3ಜಿ ಗುಣಮಟ್ಟಗಳು ಎಂದು ಒಪ್ಪಿಕೊಳ್ಳಲ್ಪಟ್ಟಿವೆ, ಇವು ಮೂಲದಲ್ಲಿ 3ಜಿ ಮುದ್ರೆಯನ್ನು ಹೊಂದಿಲ್ಲ, ಮತ್ತು ಸಂಪೂರ್ಣವಾಗಿ ಬೇರೆ ತಂತ್ರಜ್ಞಾನಗಳನ್ನು ಆಧರಿಸಿವೆ. ಕೋಶೀಯ ಗುಣಮಟ್ಟಗಳ ಒಂದು ಹೊಸ ಪೀಳಿಗೆಯು 1981/1982 ರಲ್ಲಿ 1ಜಿ ಪದ್ಧತಿಗಳು ಪರಿಚಯಿಸಲ್ಪಟ್ಟ ವರ್ಷದಿಂದ ಹೆಚ್ಚುಕಡಿಮೆ ಪ್ರತಿ ಹತ್ತನೇ ವರ್ಷಕ್ಕೆ ಕಂಡುಬರುತ್ತಿದೆ. ಪ್ರತಿ ಪೀಳಿಗೆಯು ಹೊಸ ಆವರ್ತನ ವಾಗ್ದಾನಗಳಿಂದ, ಅತ್ಯಂತ ಹೆಚ್ಚಿನ ದತ್ತಾಂಶ ದರಗಳಿಂದ ಮತ್ತು ಹಿಮ್ಮುಖ ಹೊಂದಿಕೆಯಾಗುವ ರವಾನೆ ತಂತ್ರಜ್ಞಾನದೊಂದಿಗೆ ನಿರೂಪಿಸಲ್ಪಟ್ಟಿವೆ. 3ಜಿಪಿಪಿ ಉದ್ದನೆಯ ಪರಿಮಿತಿ ಅರಳುವಿಕೆ (ಎಲ್ ಟಿಇ)ಯ ಗುಣಮಟ್ಟದ ಪ್ರಥಮ ಬಿಡುಗಡೆಯು ಐಎಂಟಿ-ಅಡ್ವಾನ್ಸ್ಡ್ ಎಂದು ಕರೆಯುವ ಐಟಿಯು 4ಜಿ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸುವುದಿಲ್ಲ. ಎಲ್ ಟಿಇ ಮೊದಲ ಬಿಡುಗಡೆಯು 3ಜಿ ಜೊತೆಗೆ ಹಿಮ್ಮುಖ ಹೊಂದಿಕೆಯಾಗದು, ಆದರೆ ಇದು ಒಂದು ಪೂರ್ವ-4ಜಿ ಅಥವಾ 3.9ಜಿ ತಂತ್ರಜ್ಞಾನ, ಏನೇ ಆದರೂ ಕೆಲವು ಬಾರಿ "4ಜಿ" ಮುದ್ರೆಯ ಸೇವೆ ನೀಡುವವರಿಂದ ಆಗುತ್ತದೆ. ವೈಮಾಕ್ಸ್ ಮತ್ತೊಂದು ಉನ್ನತ ತಂತ್ರಜ್ಞಾನವಾಗಿದ್ದು 4ಜಿ ಎಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಸ್ಥೂಲ ಅವಲೋಕನ
[ಬದಲಾಯಿಸಿ]3ಜಿ (ಯುಎಂಟಿಎಸ್ ಮತ್ತು ಸಿಡಿಎಂಎ2000) ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯು 1992ರಲ್ಲಿ ಆರಂಭವಾಯಿತು. 1999 ರಲ್ಲಿ ಐಟಿಯು ಐದು ರೇಡಿಯೋ ಇಂಟರ್ ಪೇಸ್ ಗಳನ್ನು ಐಎಂಟಿ-2000 ಗಾಗಿ ಐಟಿಯು-ಆರ್ ಎಂ. 1457 ಶಿಫಾರಸ್ಸಿನ ಒಂದು ಭಾಗವಾಗಿ ಅನುಮೋದಿಸಿತು; ವಿಮಾಕ್ಸ್ 2007 ರಲ್ಲಿ ಸೇರಿಸಲ್ಪಟ್ಟಿತು.[೨] ಅದರಲ್ಲಿ ಕ್ರಾಂತಿಕಾರಕ ಗುಣಮಟ್ಟ ಗಳಿದ್ದು ಅವುಗಳೆಂದರೆ ಮೊದಲೇ ಇರುವ 2ಜಿ ಜಾಲಬಂಧಗಳಂತೆಯೇ ಇರುವ ಎಲ್ಲ ಹೊಸ ಜಾಲಬಂಧಗಳು ಹಾಗೂ ಆವರ್ತನ ನಿಗದಿಪಡಿಸುವಿಕೆಗೆ ಅಗತ್ಯವಾದ ಕ್ರಾಂತಿಕಾರಕ ಗುಣಮಟ್ಟ ಗಳು ಹಿಮ್ಮುಖ-ಹೊಂದಿಕೊಂಡಿರುವ ವಿಸ್ತರಣೆಯಾಗಿವೆ.[೩] ನಂತರದ ಗುಂಪೆಂದರೆ ಯುಎಂಟಿಎಸ್, ಐಎಂಟಿ-2000ಗಾಗಿ ಗುಣಮಟ್ಟಗಳ ಅಭಿವೃದ್ಧಿಯಿಂದ ರಚಿತವಾಗಿರುವಂತಹುದು, ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿದ ಗುಣಮಟ್ಟಗಳಾದ ಡಿಇಸಿಟಿ ಮತ್ತು ವಿಮಾಕ್ಸ್ ಗಳಂತಹುದನ್ನೇ ಒಳಗೊಂಡಿರುವಂತಹುದು. ಏಕೆಂದರೆ ಅವು ಐಎಂಟಿ-2000 ಲಕ್ಷಣಗಳಿಗೆ ಹೊಂದಿಕೊಂಡಿವೆ.
[೪] | ||||||||
ಐಟಿಯು ಐಎಂಟಿ-2000 | ಸಾಮಾನ್ಯ ಹೆಸರು(ಗಳು) | ದತ್ತಾಂಶದ ಪಟ್ಟೆಯಗಲ | 4G -ಪೂರ್ವ | | ಎರಡು ಭಾಗಗಳುಳ್ಳ | ವಾಹಿನಿ | ವಿವರಣೆ | ಭೌಗೋಳಿಕ ಪ್ರದೇಶ | |
---|---|---|---|---|---|---|---|---|
ಟಿಡಿಎಂಎ ಏಕ-ವಾಹಕ (ಐಎಂಟಿ-ಎಸ್ ಸಿ) | EDGE (UWC-136)
ಇಡಿಜಿಇ (ಯುಡಬ್ಲ್ಯೂಸಿ-136) |
ಇಡಿಜಿಇ ವಿಕಸನ | ಯಾವುದೂ ಇಲ್ಲ | ಎಫ್ ಡಿಡಿ | ಟಿಡಿಎಂಎ | ಜಿಎಸ್ಎಂ/ಜಿಪಿಆರ್ ಎಸ್ ಗೆ ವಿಕಸಿತ ಏರುವಿಕೆ[nb ೧] | ಜಪಾನ್ ಮತ್ತು ದಕ್ಷಿಣ ಕೊರಿಯಾ ಬಿಟ್ಟು ಜಗತ್ತಿನೆಲ್ಲೆಡೆ | |
ಸಿಡಿಎಂಎ ಬಹು-ವಾಹಕ (ಐಎಂಟಿ-ಎಂಸಿ) | ಸಿಡಿಎಂಎ2000 | ಇವಿ-ಡಿಓ | ಯುಎಂಬಿ[nb ೨] | ಸಿಡಿಎಂಎ | evolutionary upgrade to cdmaOne (IS-95)ಸಿಡಿಎಂಎ ಒಂದು(ಐಎಸ್-೯೫)ಗೆ ವಿಕಸಿತ ಏರಿಕೆ | ಅಮೇರಿಕನ್ನರು, ಏಶಿಯಾ, ಇತರ ಕೆಲವರು | ||
ಸಿಡಿಎಂಎ ನೇರ ಹರವು (ಐಎಂಟಿ-ಡಿಎಸ್) | ಯುಎಂಟಿಎಸ್[nb ೩] | ಡಬ್ಲ್ಯೂ-ಸಿಡಿಎಂಎ[nb ೪] | ಎಚ್ಎಸ್ ಪಿಎ | ಎಲ್ ಟಿಇ | ಕ್ರಾಂತಿಕಾರಕ ಗುಣಮಟ್ಟಗಳ ಗುಂಪು. | ವಿಶ್ವಾದ್ಯಂತ | ||
ಸಿಡಿಎಂಎ ಟಿಡಿಡಿ (ಐಎಂಟಿ-ಟಿಸಿ) | ಟಿಡಿ‑ಸಿಡಿಎಂಎ[nb ೫] | ಟಿಡಿಡಿ | ಯುರೋಪ್ | |||||
ಟಿಡಿ‑ಸಿಡಿಎಂಎ[nb ೬] | ಚೀನಾ | |||||||
ಎಫ್ ಡಿಎಂಎ/ಟಿಡಿಎಂಎ (ಐಎಂಟಿ‑ಎಫ್ ಟಿ) | ಡಿಇಸಿಟಿ | ಯಾವುದೂ ಇಲ್ಲ | ಎಫ್ ಡಿಎಂಎ/ಟಿಡಿಎಂಎ | ಕಡಿಮೆ-ದೂರದ; ನಿಸ್ತಂತು ದೂರವಾಣಿಗೆ ಗುಣಮಟ್ಟ | ಯುರೋಪ್, ಯುಎಸ್ಎ | |||
ಐಪಿ-ಓಎಫ್ ಡಿಎಂಎ | ಕೊಲ್ಸ್ ಪಾನ್="2" | ವಿಮಾಕ್ಸ್ (ಐಇಇಇ 802.16) | ಒಎಫ್ ಡಿಎಂಎ | ವಿಶ್ವಾದ್ಯಂತ |
- ↑ ಒಂದು ಪಿಡಿಸಿ ಅಥವಾ ಡಿಎಎಂಪಿಎಸ್ ಗೆ ಏರಿಕೆಯಾದಂತೆಯೇ ಉಪಯೋಗಿಸಬಹುದು.
- ↑ development halted in favour of LTE.[೫]
- ↑ also known as FOMA;[೬] UMTS is the common name for a standard that encompasses multiple air interfaces.
- ↑ also known as UTRA-FDD; W-CDMA is sometimes used as a synonym for UMTS, ignoring the other air interface options.[೬]
- ↑ ಯುಟಿಆರ್ಎ ಟಿಡಿಡಿ 3.84 ಎಂಸಿಪಿಎಸ್ ಅತಿ ಹೆಚ್ಚು ಚಿಪ್ ದರ (ಎಚ್ಎಸ್ಆರ್) ಎಂದು ಕೂಡ ತಿಳಿಯಲ್ಪಟ್ಟಿದೆ
- ↑ ಯುಟಿಆರ್ಎ-ಟಿಡಿಡಿ ೧.೨೮ ಎಂಸಿಪಿಎಸ್ ಕಡಿಮೆ ಚಿಪ್ ದರ (ಎಲ್ ಸಿಆರ್) ಎಂದು ಕೂಡ ತಿಳಿಯಲ್ಪಟ್ಟಿದೆ
ಇಡಿಜಿಇ ಯು 3ಜಿ ಅಂಶಳನ್ನು ಪೂರೈಸಿದಾಗ, ಹೆಚ್ಚಿನ ಜಿಎಸ್ಎಂ/ಯುಎಂಟಿಎಸ್ ದೂರವಾಣಿಗಳು ಕಾರ್ಯನೀತಿಯಲ್ಲಿ ಇಡಿಜಿಇ ("೨. 75ಜಿ") ಮತ್ತು ಯುಎಂಟಿಎಸ್ ("3ಜಿ")
ಇತಿಹಾಸ
[ಬದಲಾಯಿಸಿ]ಪ್ರಥಮ ವಾಣಿಜ್ಯ-ಪೂರ್ವ 3ಜಿ ಜಾಲಬಂಧವು ಎನ್ ಟಿಟಿ ಡೊಕೊಮೊದಿಂದ ಜಪಾನ್ ನಲ್ಲಿ ಫೋಮಾ ಮುದ್ರೆಯೊಂದಿಗೆ, 2001 ರ ಮೇ ನಲ್ಲಿ ಡಬ್ಲ್ಯೂ-ಸಿಡಿಎಂಎ ತಂತ್ರಜ್ಞಾನದ ಬಿಡುಗಡೆ-ಪೂರ್ವದಲ್ಲಿ ಸ್ಥಾಪಿಸಲ್ಪಟ್ಟಿತು.[೭] 3ಜಿ ಯ ಪ್ರಥಮ ವಾಣಿಜ್ಯ ಸ್ಥಾಪನೆಯು ಕೂಡ ಎನ್ ಟಿಟಿ ಡೊಕೊಮೊನಿಂದ ಜಪಾನ್ ನಲ್ಲಿ 2001 ರ ಅಕ್ಟೋಬರ್ 1 ರಂದು ಸ್ಥಾಪಿಸಲ್ಪಟ್ಟಿತು, ಆದಾಗ್ಯೂ ಅದು ಪ್ರಾರಂಭದಲ್ಲಿ ಕೆಲವು ಮಟ್ಟಿಗೆ ನಿಗದಿತ ಪರಿಮಿತಿಯಲ್ಲಿತ್ತು;[೮][೯] ವಿಸ್ತಾರವಾದ ಲಭ್ಯತೆಯು ಭರವಸೆ ಇಡಬಹುದಾದ ಸುವ್ಯಕ್ತತೆಗೆ ಸಂಬಂಧಿಸಿದಂತೆ ನಿಧಾನವಾಯಿತು.[೧೦] ಎರಡನೇ ಜಾಲಬಂಧ ವಾಣಿಜ್ಯಿಕವಾಗಿ ಎಸ್ ಕೆ ಟೆಲಿಕಾಂ ನಿಂದ ದಕ್ಷಿಣ ಕೊರಿಯಾದಲ್ಲಿ 1ಎಕ್ಸ್ಇವಿ-ಡು ತಂತ್ರಜ್ಞಾನದೊಂದಿಗೆ 2002 ರ ಜನವರಿಯಲ್ಲಿ ಆರಂಭವಾಯಿತು. 2002 ರ ಮೇ ನಲ್ಲಿ ದಕ್ಷಿಣ ಕೊರಿಯಾದ ದ್ವಿತೀಯ 3ಜಿ ಜಾಲಬಂಧವು ಕೆಟಿ ಯಿಂದ ಇವಿ-ಡು ಮೇಲೆ ಆರಂಭವಾಯಿತು ಮತ್ತು ಹೀಗೆ ಕೋರಿಯನ್ನರು 3ಜಿ ನಿರ್ವಹಣೆಯಲ್ಲಿನ ಸ್ಪರ್ಧೆ ನೋಡುವವರಲ್ಲಿ ಮೊದಲಿಗರಾದರು. ಯುರೋಪಿನ ಮೊದಲ ವಾಣಿಜ್ಯ-ಪೂರ್ವ ಜಾಲಬಂಧವು ಇಸಲ್ ಆಫ್ ಮ್ಯಾನ್ ನಲ್ಲಿ ಮ್ಯಾಂಕ್ಸ್ ಟೆಲಿಕಾಂ ನಿಂದ ಇತ್ತು, ನಂತರ ನಿರ್ವಹಣೆಯು ಬ್ರಿಟಿಷ್ ಟೆಲಿಕಾಂ ಮಾಲಿಕತ್ವಕ್ಕೆ ಸೇರಿತು, ಮತ್ತು ಯುರೋಪ್ ನಲ್ಲಿ ಪ್ರಥಮ ವಾಣಿಜ್ಯಿಕ ಜಾಲಬಂಧವು ಟೆಲಿನಾರ್ ನಿಂದ 2001 ರ ಡಿಸೆಂಬರ್ ನಲ್ಲಿ ವ್ಯವಹಾರಕ್ಕಾಗಿ ಯಾವುದೇ ವಾಣಿಜ್ಯಿಕ ಹ್ಯಾಂಡ್ ಸೆಟ್ ಇಲ್ಲದೆ, ಗ್ರಾಹಕರಿಗೆ ಪಾವತಿಯೂ ಇಲ್ಲದೆ ತೆರೆಯಿತು. ಇವೆರಡೂ ಡಬ್ಲ್ಯೂ-ಸಿಡಿಎಂಎ ತಂತ್ರಜ್ಞಾನದಲ್ಲಿ ಇದ್ದವು. ಸಂಯುಕ್ತ ರಾಜ್ಯಗಳ ಪ್ರಥಮ ವಾಣಿಜ್ಯಿಕ 3ಜಿ ಜಾಲಬಂಧವು ಮೊನೆಟ್ ಮೊಬೈಲ್ ನೆಟ್ ವರ್ಕ್ ನಿಂದ ಸಿಡಿಎಂಎ2000 1ಎಕ್ಸ್ ಇವಿ-ಡು ತಂತ್ರಜ್ಞಾನದಲ್ಲಿ ಆರಂಭವಾಯಿತು, ಆದರೆ ಈ ಜಾಲಬಂಧ ಪೂರೈಕೆದಾರರು ನಂತರ ನಿರ್ವಹಣೆಯನ್ನು ಮುಚ್ಚಿಬಿಟ್ಟರು. ಯುಎಸ್ಎ ನಲ್ಲಿ ಎರಡನೇ 3ಜಿ ಜಾಲಬಂಧ ನಿರ್ವಹಣೆಯು 2003 ರ ಅಕ್ಟೋಬರ್ ನಲ್ಲಿ ವೆರಿಜೊನ್ ವೈರ್ ಲೆಸ್ ನದ್ದು, ಇದು ಕೂಡ ಸಿಡಿಎಂಎ2000 1ಎಕ್ಸ್ ಇವಿ-ಡು ಮೇಲೆಯೇ ಆಗಿತ್ತು. ಎಟಿ&ಟಿ ಮೊಬಿಲಿಟಿ ಕೂಡ ತನ್ನ 3ಜಿ ಜಾಲಬಂಧವಾದ ಎಚ್ಎಸ್ ಯುಪಿಎ ಗೆ ಸಂಪೂರ್ಣ ಸುಧಾರಿಸಿಕೊಂಡ ಒಂದು ನಿಜವಾದ 3ಜಿ ಜಾಲಬಂಧವಾಗಿದೆ. ದಕ್ಷಿಣ ಹೆಸಿಮಿಸ್ಪಿಯರ್ ನಲ್ಲಿನ ಮೊದಲ ವಾಣಿಜ್ಯ-ಪೂರ್ವ ಪ್ರದರ್ಶನ ಜಾಲಬಂಧವು ಅಡೆಲೇಡ್ ನಲ್ಲಿ ದಕ್ಷಿಣ ಆಷ್ಟ್ರೇಲಿಯಾದ ಎಂ.ನೆಟ್ ಕಾರ್ಪೋರೇಶನ್ ನಿಂದ ಫೆಬ್ರುವರಿ 2002 ರಲ್ಲಿ ಯುಎಂಟಿಎಸ್ ನ್ನು ಉಪಯೋಗಿಸಿಕೊಂಡು 2100 ಮೆಗಾಹರ್ಟ್ಸ್ ನ ಮೇಲೆ ಕಟ್ಟಲ್ಪಟ್ಟಿತು. ಇದು 2002 ರ ಐಟಿ ವರ್ಡ್ ಕಾಂಗ್ರೆಸ್ ಗೆ ಪ್ರಥಮ ಪ್ರದರ್ಶನ ಜಾಲಬಂಧವಾಗಿತ್ತು. ಪ್ರಥಮ ವಾಣಿಜ್ಯಿಕ 3ಜಿ ಜಾಲಬಂಧವು ಹುಚಿಸನ್ ಟೆಲಿಕಮ್ಯುನಿಕೇಶನ್ಸ್ ನಿಂದ ಥ್ರೀ ಮುದ್ರೆಯೊಂದಿಗೆ 2003 ರ ಮಾರ್ಚ್ ನಲ್ಲಿ ಸ್ಥಾಪಿಸಲ್ಪಟ್ಟಿತು. ಎಮ್ಟೆಲ್ ಮೊದಲ 3ಜಿ ಜಾಲಬಂಧವನ್ನು ಆಫ್ರಿಕಾದಲ್ಲಿ ಸ್ಥಾಪಿಸಿತು 2007 ರ ಜೂನ್ ನಲ್ಲಿ 200 ದಕ್ಷಲಕ್ಷ 3ಜಿ ಚಂದಾದಾರರು ಸಂಪರ್ಕಿಸಲ್ಪಟ್ಟರು. 3 ದಶಲಕ್ಷ ಮೊಬೈಲ್ ದೂರವಣಿ ಚಂದಾದಾರರಲ್ಲಿ ಜಗತ್ತಿನಾದ್ಯಂತ ಇದು ಕೇವಲ 6.7% ರಷ್ಟಿದೆ. ಮೊದಲು 3ಜಿ ಸ್ಥಾಪನೆಯಾದ ದೇಶಗಳಾದ - ಜಪಾನ್ ಮತ್ತು ದಕ್ಷಿಣ ಕೊರಿಯಾ – ಗಳಲ್ಲಿ 3ಜಿ ಒಳಹರಿಯುವಿಕೆಯು 70% ಕ್ಕಿಂತಲೂ ಹೆಚ್ಚಿದೆ.[೧೧] ಯುರೋಪ್ ನಲ್ಲಿ ಇಟಲಿಯು ಪ್ರಮುಖ ದೇಶವಾಗಿದ್ದು ಮೂರರಲ್ಲಿ ಒಂದು ಚಂದಾದಾರರು 3ಜಿ ಗೆ ಬದಲಾಗಿದ್ದಾರೆ. 3ಜಿ ಗೆ ಬದಲಾದ ಯುಕೆ, ಆಸ್ಟ್ರಿಯಾ, ಆಸ್ಟ್ರೇಲಿಯಾ ಮತ್ತು ಸಿಂಗಪೂರಗಳು ಸೇರಿದಂತೆ ಇತರ ಪ್ರಮುಖ ದೇಶಗಳಲ್ಲಿ 20% ಸ್ಥಾನಾಂತರದ ಮಟ್ಟ ಇದೆ. ಗೊಂದಲಗೊಳ್ಳುವಂತಹ ಲೆಕ್ಕಾಚಾರವೆಂದರೆ ಸಿಡಿಎಂಎ2000 1ಎಕ್ಸ್ ಆರ್ ಟಿಟಿ ಗ್ರಾಹಕರನ್ನು 3ಜಿ ಗ್ರಾಹಕರು ಎಂದೇ ಲೆಕ್ಕ ಹಾಕುವುದು. ಒಂದು ವೇಳೆ ಈ ಲಕ್ಷಣವನ್ನು ಉಪಯೋಗಿಸಿದರೆ ಒಟ್ಟು 3ಜಿ ಆಧಾರಿತ ಚಂದಾದಾರರು ಜಗತ್ತಿನಾದ್ಯಂತ 2007 ರ ಜೂನ್ ನಲ್ಲಿ 475 ದಶಲಕ್ಷ ದಷ್ಟು ಮತ್ತು 15.8% ಚಂದಾದಾರರು ಇದ್ದರು. [[ಚಿತ್ರ:Example.jpg]]
ಅನುಸರಣೆ/ಅಳವಡಿಕೆ
[ಬದಲಾಯಿಸಿ]2007 ರ ಡಿಸೆಂಬರ್ ನಲ್ಲಿ, ಜಾಗತಿಕ ಮೊಬೈಲ್ ಪೂರೈಕೆದಾರರ ಸಂಘಟನೆ (ಜಿಎಸ್ಎ) ಪ್ರಕಾರ 190 3ಜಿ ಜಾಲಬಂಧಗಳು 40 ದೇಶಗಳಲ್ಲಿ ಮತ್ತು 154 ಎಚ್ಎಸ್ಡಿಪಿಎ ಜಾಲಬಂಧಗಳು 71 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಏಶಿಯಾ, ಯುರೋಪ್, ಕೆನಡಾ ಮತ್ತು ಯುಎಸ್ಎ ಗಳಲ್ಲಿ ದೂರಸಂಪರ್ಕ ಸಂಸ್ಥೆಗಳು ಡಬ್ಲ್ಯೂ-ಸಿಡಿಎಂಎ ತಂತ್ರಜ್ಞಾನವನ್ನು ಸುಮಾರು 100 ರಷ್ಟು ಅಂತಿಮ ರೂಪುರೇಖೆಗಳ ಬೆಂಬಲದೊಂದಿಗೆ 3ಜಿ ಮೊಬೈಲ್ ಜಾಲಬಂಧವನ್ನು ನಿರ್ವಹಿಸಲು ಉಪಯೋಗಿಸುತ್ತಾರೆ. 3ಜಿ ಜಾಲಬಂಧಗಳ ಪಾತ್ರವಹಿಸುವಿಕೆಯು ಕೆಲವು ದೇಶಗಳಲ್ಲಿ ಹೆಚ್ಚುವರಿ ವಿದ್ಯುತ್ಕಾಂತೀಯ ತರಂಗದ ಅನುಮತಿ ಶುಲ್ಕಗಳ ಅಪಾರ ವೆಚ್ಚದ ಕಾರಣ ತಡವಾಯಿತು. (ಟೆಲಿಕಾಮ್ ಗಳು ಅಪ್ಪಳಿಸುವುದನ್ನು ನೋಡಿ.) ಅನೇಕ ದೇಶಗಳಲ್ಲಿ, 3ಜಿ ಜಾಲಬಂಧಗಳು ಒಂದೇ ರೀತಿಯ ರೇಡಿಯೋ ಆವರ್ತನಗಳನ್ನು 2ಜಿ ಯಂತೆ ಉಪಯೋಗಿಸುವುದಿಲ್ಲ, ಆದ್ದರಿಂದ ಮೊಬೈಲ್ ನಿರ್ವಾಹಕರು ಸಂಪೂರ್ಣವಾಗಿ ಹೊಸ ಜಾಲಬಂಧವನ್ನು ನಿರ್ಮಿಸಬೇಕು ಮತ್ತು ಸಂಪೂರ್ಣ ಹೊಸ ಆವರ್ತನಗಳಿಗೆ ಅನುಮತಿಯನ್ನು ಪಡೆಯಬೇಕು; ಒಂದು ವಿನಾಯಿತಿ ಎಂದರೆ ಸಂಯುಕ್ತ ರಾಜ್ಯಗಳ ವಾಹಕಗಳು ಇತರ ಸೇವೆಗಳಂತಹ ಆವರ್ತನಗಳಲ್ಲಿಯೇ 3ಜಿ ನಿರ್ವಹಣೆ ಸೇವೆಯನ್ನು ನಿರ್ವಹಿಸುತ್ತಾರೆ. ಕೆಲವು ಯುರೋಪಿಯನ್ ದೇಶಗಳಲ್ಲಿ ಅನುಮತಿ ಶುಲ್ಕಗಳು ವಿಶೇಷವಾಗಿ ಹೆಚ್ಚಾಗಿದ್ದು, ನಿಗದಿತ ಸಂಖ್ಯೆಯ ಅನುಮತಿಗಳನ್ನು ನೀಡುವುದು ಮತ್ತು ಮುಚ್ಚಲ್ಪಟ್ಟ ಹರಾಜು ಹಾಗೂ 3ಜಿ ಗಳ ಸಂಭಾವ್ಯತೆ ಮೇಲೆ ಪ್ರಾಥಮಿಕ ಪ್ರಚೋದನೆ ಮೂಲಕ ಸರ್ಕಾರದಿಂದ ಆಸರೆ ನೀಡಲ್ಪಡುತ್ತದೆ. ಮುಂತಾದ ನಿಧಾನಗಳು ಹೊಸ ಪದ್ಧತಿಗೆ ಸಾಧನಗಳನ್ನು ಸುಧಾರಿಸಿಕೊಳ್ಳುವ ಖರ್ಚುಗಳ ಕಾರಣದಿಂದ ಉಂಟಾಗುತ್ತವೆ.
ಯುರೋಪ್
[ಬದಲಾಯಿಸಿ]ಯುರೋಪ್ ನಲ್ಲಿ, ಸಮೂಹ ಮಾರುಕಟ್ಟೆ ವಾಣಿಜ್ಯಿಕ 3ಜಿ ಸೇವೆಗಳು 2003 ರ ಮಾರ್ಚ್ ಆರಂಭದಲ್ಲಿ 3 ರಿಂದ (ಪಾರ್ಟ್ ಆಫ್ ಹುಚಿಸನ್ ವ್ಹಾಮ್ ಪಾವ್) ಯುಕೆ ಮತ್ತು ಇಟಲಿಯಲ್ಲಿ ಪರಿಚಯಿಸಲ್ಪಟ್ಟವು. 3ಜಿ ನಿರ್ವಾಹಕರು ಯುರೋಪ್ ನ ರಾಷ್ಟ್ರೀಯ ಜನಸಂಖ್ಯೆಯ 80% ರಷ್ಟನ್ನು 2005 ರ ಅಂತ್ಯಕ್ಕೆ ಆವರಿಸಿಕೊಳ್ಳಬೇಕು ಎಂದು ಯುರೋಪ್ ನ ಕೇಂದ್ರೀಯ ಸಮಿತಿಯು ಸಲಹೆ ನೀಡಿದೆ.
ಕೆನಡಾ
[ಬದಲಾಯಿಸಿ]ಕೆನಡಾದಲ್ಲಿ ಬೆಲ್ ಮೊಬಿಲಿಟಿ, ಸಾಸ್ಕ್ ಟೆಲ್[೧೨] ಮತ್ತು ಟೆಲಸ್ ಒಂದು 3ಜಿ ಇವಿಡಿಓ ಜಾಲಬಂಧವನ್ನು 2005 ರಲ್ಲಿ ಆರಂಭಿಸಿದವು.[೧೩] ಪೂರ್ವ ಕೆನಡಾದಲ್ಲಿ 2006 ರ ಕೊನೆಯಲ್ಲಿ ಯುಎಂಟಿಎಸ್ ತಂತ್ರಜ್ಞಾನವನ್ನು ಎಚ್ಎಸ್ ಡಿಪಿಎ ಸೇವೆಗಳ ಜೊತೆಗೆ ಕಾರ್ಯಗತಗೊಳಿಸುವುದರಲ್ಲಿ ರೋಜರ್ಸ್ ವೈರ್ ಲೆಸ್ ಪ್ರಥಮವಾಗಿದೆ.[೧೪] 2010 ರ ಚಳಿಗಾಲದ ಓಲಿಂಪಿಕ್ಸ್ ನಿಂದ ಅಲೆದಾಟದ ಕಂದಾಯದ ಮೇಲೆ ತಾವು ಕಳೆದುಕೊಳ್ಳಬಹುದು ಎಂದು ಅವರು ಅಂದುಕೊಂಡ ಕಾರಣ ಬೆಲ್ ಮತ್ತು ಟೇಲಸ್ ಒಂದು ಜಂಟಿ ಸಾಹಸವನ್ನು ಮಾಡಿದವು ಮತ್ತು ಹಂಚಿಕೊಳ್ಳಲ್ಪಟ್ಟ ಎಚ್ಎಸ್ಡಿಪಿಎ ಜಾಲಬಂಧವನ್ನು ನೋಕಿಯಾ ಸೀಮೆನ್ಸ್ ತಂತ್ರಜ್ಞಾನ ಉಪಯೋಗಿಸಿಕೊಂಡು ಮುಗಿಸಿದರು.
ಇರಾಕ್
[ಬದಲಾಯಿಸಿ]ಇರಾಕ್ ನ ಮೊದಲ 3ಜಿ ನಿರ್ವಾಹಕವೆಂದರೆ ಮೊಬಿಟೆಕ್ ಇರಾಕ್ . ಇದು ವಾಣಿಜ್ಯಿಕವಾಗಿ 2007 ರ ಫೆಬ್ರುವರಿಯಲ್ಲಿ ಸ್ಥಾಪಿಸಲ್ಪಟ್ಟಿತು.
ಟರ್ಕಿ
[ಬದಲಾಯಿಸಿ]ಟರ್ಕ್‌ಸೆಲ್, ಅವಿಯಾ ಮತ್ತು ವೋಡಾಫೋನ್ನ 3ಜಿ ನೆಟ್‌ವರ್ಕ್ ಗಳು 2009 ಜುಲೈ 30ರಂದು ಒಂದೇ ಸಮಯದಲ್ಲಿ ಅಧಿಕೃತವಾಗಿ ಪ್ರಾರಂಭವಾದವು. ಟರ್ಕ್‌ಸೆಲ್ ಹಾಗೂ ವೋಡಾಫೋನ್‌ನ 3ಜಿ ಸೇವೆ ಎಲ್ಲ ಪ್ರಾಂತೀಯ ಕೇಂದ್ರಗಳಲ್ಲೂ ಪ್ರಾರಂಭವಾದವು. ಅವಿಯಾ ಸೇವೆಗಳು ಮಾತ್ರ 16 ಪ್ರಾಂತೀಯ ಕೇಂದ್ರಗಳಲ್ಲಿ ಪ್ರಾರಂಭವಾದವು. ಟರ್ಕಿಯಲ್ಲಿ ಏಕಸ್ವಾಮ್ಯತೆ ಹೊಂದಿರುವ ಟರ್ಕ್‌ಸೆಲ್ ಮೊಬೈಲ್ ಸೇವಾ ಕೇಂದ್ರವು ನಂಬರ್ ಪೋರ್ಟಬಲಿಟಿಯನ್ನು ಅನುಷ್ಠಾನಕ್ಕೆ ತಂದಿತು. ಆಗ ಮೊಬೈಲ್ ವಿತರಕರು ತರಾಂಗಾಂತರದ ಆವರ್ತನ ಶ್ರೇಣಿಯ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು, 3ಜಿ ತರಂಗಗಳನ್ನು ಎಲ್ಲ ಮೊಬೈಲ್ ಕಾರ್ಯನಿರ್ವಾಹಕರಿಗೆ ವಿತರಣೆ ಮಾಡಿತು. ಟರ್ಕ್‌ಸೆಲ್‌ಗೆ ಎ ಬ್ಯಾಂಡ್ ವೋಡಾಫೋನ್‌ಗೆ ಬಿ ಹಾಗೂ ಅವಿಯಾಗೆ ಸಿ ಬ್ಯಾಂಡ್ ನೀಡಲಾಗಿದೆ. ಪ್ರಸ್ತುತ ಟರ್ಕ್‌ಸೆಲ್ ಮತ್ತು ವೋಡಾಫೋನ್ ಕಂಪನಿಗಳು ಹೆಚ್ಚು ಜನಸಂದಣಿ ಇರುವ ನಗರ ಹಾಗೂ ಪಟ್ಟಣಗಳಲ್ಲಿ ತಮ್ಮ 3ಜಿ ನೆಟ್‌ವರ್ಕ್ ಸೇವೆಗಳನ್ನು ನೀಡಿ, ತಮ್ಮ ಪ್ರಾಬಲ್ಯ ಸ್ಥಾಪಿಸಿದೆ.
ಫಿಲಿಫೈನ್ಸ್
[ಬದಲಾಯಿಸಿ]ಫಿಲಿಪ್ಪೀನ್ಸ್‌ನಲ್ಲಿ ಡಿಸೆಂಬರ್ 2008ರಲ್ಲಿ 3ಜಿ ಸೇವೆಗಳು ಆರಂಭವಾದವು.[೧೫]
ಸಿರಿಯಾ
[ಬದಲಾಯಿಸಿ]ಎಂಟಿಎನ್ ಸಿರಿಯಾವು ಸಿರಿಯಾದಲ್ಲಿ ಮೊದಲ 3ಜಿ ಸೇವಾಕೇಂದ್ರವಾಗಿ ಪ್ರಾರಂಭವಾಯಿತು. ಇದನ್ನು ವಾಣಿಜ್ಯೀಕರಣವಾಗಿ ಮೇ 2010ರಲ್ಲಿ ಪ್ರಾರಂಭಿಸಲಾಯಿತು.
ಚೀನಾ
[ಬದಲಾಯಿಸಿ]ಚೀನಾದ ಅತಿ ದೊಡ್ಡ ಮೊಬೈಲ್ ಸೇವಾಕೇಂದ್ರವಾದ ಚೀನಾ ಮೊಬೈಲ್ ಜಿಎಸ್‌ಎಂ ಗ್ರಾಹಕರನ್ನು ಆಧಾರವಾಗಿಟ್ಟುಕೊಂಡು ದೂರವಾಣಿ ಕ್ಷೇತ್ರಗಳನ್ನು ಪುನರ್‌ಸಂಯೋಜಿಸಿತು. ಇದಕ್ಕಾಗಿ ಮೇ 2008ರಲ್ಲಿ 3ಜಿ ನೆಟ್‌ವರ್ಕ್‌ಗಳನ್ನು ಎಲ್ಲೆಡೆ ಪ್ರಾರಂಭಿಸಿತು. ಚೀನಾ ಯುನಿಕಾಂ ತನ್ನ ಜಿಎಸ್‌ಎಂ ಗ್ರಾಹಕರನ್ನು ಆಧಾರವಾಗಿಟ್ಟುಕೊಂಡಿತು. ಆದರೆ ತನ್ನ ಸಿಡಿಎಂಎ2000 ಗ್ರಾಹಕರ ತಳಹದಿ ಮೇಲಿದ್ದ ಯೋಜನೆಯನ್ನು ಕೈಬಿಟ್ಟಿತು. ಮತ್ತು ಜಾಗತಿಕವಾಗಿ ಬೇಡಿಕೆಯಲ್ಲಿರುವ 3ಜಿಯನ್ನು ಡಬ್ಲ್ಯುಸಿಡಿಎಂಎ (ಯುಎಂಟಿಎಸ್) ಶ್ರೇಣಿಯಲ್ಲಿ ಪ್ರಾರಂಭಿಸಿತು. ಸಿಡಿಎಂಎ2000 1x ಇವಿ-ಡಿಓ ಶ್ರೇಣಿಯ 3ಜಿ ಸೇವೆಯನ್ನು ಪ್ರಾರಂಭಿಸಿದಾಗ ಚೀನಾ ಯುನಿಕಾಂನ ಸಿಡಿಎಂಎ2000 ಗ್ರಾಹಕರು ಚೀನಾ ಟೆಲಿಕಾಂ ಸೇವೆಯನ್ನು ಪಡೆದರು. ಇದರನ್ವಯ ಚೀನಾವು ಎಲ್ಲ ಮೂರೂ ಕೋಶೀಯ ಟೆಕ್ನಾಲಜಿಯ 3ಜಿ ಶ್ರೇಣಿಯ ವಾಣಿಜ್ಯೀಕರಣ ಸೇವೆಯನ್ನು ಹೊಂದಿದಂತಾಗುತ್ತದೆ. ಕೊನೆಗೆ 2009 ಜನವರಿಯಲ್ಲಿ ಚೀನಾದ ಉದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲ್ಲ ಮೂರೂ ಶ್ರೇಣಿಗಳಿಗೂ ಪರವಾನಿಗೆಯನ್ನು ನೀಡಿತು. ಅವುಗಳಾದ ಟಿಡಿ-ಎಸ್‌ಸಿಡಿಎಂಎಯನ್ನು ಚೀನಾ ಮೊಬೈಲ್ ಕಂಪನಿಗೆ, ಡಬ್ಲ್ಯೂ-ಸಿಡಿಎಂಎಯನ್ನು ಚೀನಾ ಯುನಿಕಾಂಗೆ ಹಾಗೂ ಸಿಡಿಎಂಎ2000 ಅನ್ನು ಚೀನಾ ಟೆಲಿಕಾಂಗೆ ನೀಡಿತು. 3ಜಿ ಸೇವೆಯನ್ನು 2009 ಅಕ್ಟೋಬರ್ 1ರಂದು ಪ್ರಾರಂಭಿಸಲಾಯಿತು. ಇದು ಚೀನಾದ 60ನೇ ಗಣರಾಜ್ಯೋತ್ಸವ ದಿನವಾಗಿತ್ತು.
ಉತ್ತರ ಕೊರಿಯಾ
[ಬದಲಾಯಿಸಿ]2008ರಿಂದ ಉತ್ತರ ಕೋರಿಯಾವು 3ಜಿ ತರಂಗಾಂತರ ಸೇವೆಯನ್ನು ಪ್ರಾರಂಭಿಸಿತು. ಇದನ್ನು ಕೋರಿಯೋಲಿಂಕ್ ಎಂದು ಕರೆಯಲಾಗುತ್ತದೆ. ಇದನ್ನು ಈಜಿಪ್ಟ್‌ನ ಒರಾಸ್ಕಾಂ ಟೆಲಿಕಾಂ ಹೋಲ್ಡಿಂಗ್ ಮತ್ತು ಕೊರಿಯಾ ಸರ್ಕಾರಾಧೀನ ಕೊರಿಯಾ ಪೋಸ್ಟ್ ಹಾಗೂ ಟೆಲಿಕಮ್ಯುನಿಕೇಶನ್ಸ್ ಕಾರ್ಪೋರೇಷನ್(ಕೆಪಿಟಿಸಿ) ಸಹಭಾಗಿತ್ವದಲ್ಲಿ ಉತ್ತರ ಕೋರಿಯಾದಲ್ಲಿ 3ಜಿ ತರಂಗಾಂತರ ಸೇವೆಯನ್ನು ಪ್ರಾರಂಭಿಸಲಾಯಿತು. ಇಲ್ಲಿನ ಬಿಜಿನೆಸ್ ವೀಕ್ ಪತ್ರಿಕೆಯಲ್ಲಿ ಒರಸ್ಕಾಂ ಹೇಳಿರುವಂತೆ ಮೇ 2010ರಲ್ಲಿ ಕಂಪನಿಯು 125,661 ಗ್ರಾಹಕರನ್ನು ಹೊಂದಿತ್ತು. ಈಜಿಪ್ಟ್‌ನ ಕಂಪನಿಯು ಕೊರಿಯೋಲಿಂಕ್ ನ 75ರಷ್ಟು ಶೇರನ್ನು ಹೊಂದಿತ್ತು. ಮತ್ತು ಇದು ಮೊಬೈಲ್ ಟೆಕ್ನಾಲಜಿಗಳ ಮೂಲಭೂತ ವ್ಯವಸ್ಥೆಗಳ ಮೇಲೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೂಡಿಕೆ ಮಾಡುತ್ತಿದೆ. ಇದು ಪ್ಯೋಂಗ್‌ಯಂಗ್ ಮತ್ತು 5 ಹೆಚ್ಚುವರಿ ನಗರಗಳು ಹಾಗೂ 8 ಹೆದ್ದಾರಿಗಳು ಹಾಗೂ ರೇಲ್ವೆಗಳನ್ನು ಹೊಂದಿದೆ. ಇದರ ಒಂದೇ ಒಂದು ಸ್ಪರ್ಧಿ ಎಂದರೆ ಸನ್‌ನೆಟ್ ಸಂಸ್ಥೆ, ಇದು ಜಿಎಸ್ಎಂ ಟೆಕ್ನಾಲಜಿಯನ್ನು ಬಳಸುತ್ತಿದೆ. ಮತ್ತು ಕಳಪೆ ಕರೆ ಗುಣಮಟ್ಟ ಹಾಗೂ ಸಂಪರ್ಕ ಕಡಿತದಿಂದ ತೊಂದರೆಯನ್ನು ಅನುಭವಿಸುತ್ತಿತ್ತು.[೧೬] ಈ ನೆಟ್‌ವರ್ಕ್‌ನಲ್ಲಿ ದೂರವಾಣಿ ಸಂಖ್ಯೆಯು +850 (0)192ರಿಂದ ಪ್ರಾರಂಭವಾಗುತ್ತದೆ.[೧೭]
ಆಫ್ರಿಕಾ
[ಬದಲಾಯಿಸಿ]2004 ನವೆಂಬರ್ ನಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ಪ್ರಥಮವಾಗಿ ಆಫ್ರಿಕಾದಲ್ಲಿ 3ಜಿ ಟೆಕ್ನಾಲಜಿಯ 3ಜಿ ವೀಡಿಯೋ ಕಾಲ್ ಅನ್ನು ವೋಡಾಕಾಮ್ ನೆಟವರ್ಕ್ ಸಹಾಯದಿಂದ ಬಳಸಲಾಯಿತು. 2004ರಲ್ಲಿ ಮೌರೀಚಿಯಸ್ ನಲ್ಲಿ ಎಮ್ಟೆಲ್-ಲಿಮಿಟೆಡ್ ನಿಂದ ವಾಣ್ಯೀಜ್ಯೀಕರಣವಾಗಿ ಪ್ರಥಮವಾಗಿ ಆರಂಭಿಸಲಾಯಿತು. 2006ರ ಅಂತ್ಯದಲ್ಲಿ ಮೊರೊಕೋದಲ್ಲಿ 3ಜಿ ಸೇವೆಯನ್ನು ವನಾ ಎಂಬ ಹೊಸ ಕಂಪನಿ ಪ್ರಾರಂಭಿಸಿತು. ಪೂರ್ವ ಆಫ್ರಿಕಾ(ತಾಂಜಾನಿಯಾ)ದಲ್ಲಿ 2007ರಲ್ಲಿ 3ಜಿ ಸೇವೆಯನ್ನು ವೋಡಾಕಾಮ್ ತಾಂಜಾನಿಯಾ ಪ್ರಾರಂಭಿಸಿತು.
ಭಾರತ
[ಬದಲಾಯಿಸಿ]2008ರಲ್ಲಿ ಭಾರತದಲ್ಲಿ 3ಜಿ ಯು ತನ್ನ ಕಾರ್ಯಕ್ಷೇತ್ರದ ಮೂಲಕ ಪ್ರವೇಶಿಸಿತು. 3ಜಿ ಸೇವೆಯ ಮೊಬೈಲ್ ಹಾಗೂ ಡಾಟಾ ಸೇವೆಯನ್ನು ಭಾರತ ಸರ್ಕಾರ ತನ್ನ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ಗೆ ಪ್ರಾರಂಭಿಸಲು ಅನುಮತಿ ನೀಡಿತು.(ಬಿಎಸ್ಎನ್ಎಲ್). ನಂತರದಲ್ಲಿ ದಿಲ್ಲಿ ಮತ್ತು ಮುಂಬೈಗಳಲ್ಲಿ 3ಜಿಯನ್ನು ಎಂಟಿಎನ್ಎಲ್ ಪ್ರಾರಂಭಿಸಿತು. ಏಪ್ರಿಲ್ 2010ರಲ್ಲಿ ರಾಷ್ಟ್ರವ್ಯಾಪಿ 3ಜಿ ನಿಸ್ತಂತು ತರಂಗಗಳ ಹರಾಜನ್ನು ಮಾಡಲಾಯಿತು. ಖಾಸಗೀ ಸಹಭಾಗಿತ್ವದ ಕಂಪನಿಯಾದ ಟಾಟಾ ಡೊಕೋಮೋ ಭಾರತದಲ್ಲಿ ಖಾಸಗಿಯಾಗಿ 2010 ನವೆಂಬರ್ 5ರಂದು ಮೊದಲು 3ಜಿ ಸೇವೆಯನ್ನು ಪ್ರಾರಂಭಿಸಿತು. ಮತ್ತು ಎರಡನೆಯದಾಗಿ 2010 ಡಿಸೆಂಬರ್ 13ರಂದು ರಿಲೆಯನ್ಸ್ ಕಮ್ಯುನಿಕೇಷನ್ ಈ ಸೇವೆಯನ್ನು ಪ್ರಾರಂಭಿಸಿತು. ಉಳಿದ ವಿತರಕ ಸಂಸ್ಥೆಗಳಾದ ಭಾರತಿ ಏರ್‌ಟೆಲ್, ವೋಡಾಫೋನ್, ಐಡಿಯಾ ಮತ್ತು ಏರ್‌ಸೆಲ್ ಕಂಪನಿಗಳು 3ಜಿ ಸೇವೆಯನ್ನು ಜನವರಿ 2011ರಲ್ಲಿ ಆರಂಭಿಸಲು ಕಾಯುತ್ತಿದೆ.ನವೆಂಬರ್ 20 2010 3ಜಿ ಟೆಕ್ನಾಲಜಿ ತರಂಗಗಳ ಹೆಚ್ಚು ಬೇಡಿಕೆಯ ಕಾಲವಾಗಿತ್ತು).
ವೈಶಿಷ್ಟ್ಯಗಳು
[ಬದಲಾಯಿಸಿ]ಮಾಹಿತಿ ದರಗಳು
[ಬದಲಾಯಿಸಿ]ಐಟಿಯು ವು 3ಜಿ ಸಲಕರಣೆಗಳು ಮತ್ತು ವಿತರಕರ ಮೇಲೆ ಡಾಟಾ ದರಗಳ ಬಳಕೆದಾರರ ಬೇಡಿಕೆಗಳ ಬಗ್ಗೆ ನಿಖರವಾದ ವ್ಯಾಖ್ಯಾನವನ್ನು ನೀಡಿಲ್ಲ. ಈ ಬಳಕೆದಾರರು 3ಜಿ ಸೇವೆಯನ್ನು ಕೊಂಡುಕೊಂಡಾಗ ಯಾವುದೇ ಒಂದು ಶ್ರೇಣಿಯಲ್ಲಿ ಗುರುತಿಸಲು ಸಾಧ್ಯವಿಲ್ಲ ಮತ್ತು ದರದಲ್ಲೂ ಸಹ ನಿಖರತೆ ಇರುವುದಿಲ್ಲ. ಐಎಂಟಿ- 2000 ಹೆಚ್ಚಿನ ಸಂವಹನ ದರವನ್ನು ವಿಧಿಸಿತು. 2 ಎಂಬಿಗೆ ಅತಿ ಕಡಿಮೆ ಡಾಟಾ ದರವನ್ನು ಸ್ಥಿರ ಹಾಗೂ ಚಲಿಸುವ ಬಳಕೆದಾರರಿಗಾಗಿ ನಿಗದಿ ಮಾಡಲಾಯಿತು. ಮತ್ತು 384 ಕೆಬಿಯನ್ನು ಸಂಚಾರಿ ವಾಹನಗಳಿಗೆ ನಿಗದಿಗೊಳಿಸಲಾಯಿತು. ಐಟಿಯುಗೆ ನಿಖರವಾಗಿ ಅತಿ ಕಡಿಮೆ ಅಥವಾ ಸರಾಸರಿ ದರವನ್ನು ಅಥವಾ 3ಜಿಯ ಎರಡು ವ್ಯವಸ್ಥೆಯಲ್ಲಿ ಆರಿಸಲು ಆಗಲಿಲ್ಲ. ಆದ್ದರಿಂದ ಹಲವಾರು ರೀತಿಯ ದರಗಳಲ್ಲಿ 3ಜಿ ಯು ಮಾರಾಟವಾಗಿ ಗ್ರಾಹಕರ ಬಯಕೆಯಲ್ಲೊಂದಾದ ಬ್ರಾಡ್‌ಬ್ಯಾಂಡ್ ಡಾಟವನ್ನು ಉದ್ದೇಶಪೂರ್ವಕವಾಗಿ ಪರಿಚಯಿಸಿತು.[೧೮]
ಭದ್ರತೆ
[ಬದಲಾಯಿಸಿ]3ಜಿ ನೆಟ್‌ವರ್ಕ್ ಗಳು ಈ ಹಿಂದೆ ಇದ್ದ 2ಜಿ ತರಂಗಗಳಿಗಿಂತ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ. ಯುಇ (ಬಳಕೆದಾರರ ಸಲಕರಣೆಗಳು) ಅನ್ನು ಬಳಕೆ ಮಾಡುವುದರಿಂದ ನೆಟ್‌ವರ್ಕ್ ಮೇಲೆ ಹಿಡಿತವಿರುತ್ತದೆ. ಉದ್ದೇಶಪೂರ್ವಕವಾಗಿ ಬಳಕೆದಾರ ನೆಟ್‌ವರ್ಕ್ ಅನ್ನು ಬಳಸಬಹುದಾಗಿದ್ದು, ಇದರಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. 3ಜಿ ನೆಟ್‌ವರ್ಕ್ ಕೆಎಎಸ್‌ಯುಎಂಐ ಘಟಕವು ರಹಸ್ಯವಾಗಿ ಹಳೆಯ ಎ5/1 ಬದಲಾಗಿ ಗುಪ್ತಲಿಪಿಗಳನ್ನು ಬದಲಾಯಿಸಿತು. ಆದಾಗ್ಯೂ ಕೆಎಎಸ್‌ಯುಎಂಐನ ಗುಪ್ತಲಿಪಿಯನ್ನು ಕೆಲವು ಸಂಖ್ಯೆಗಳ ಸರಣಿಗಳ ಮೂಲಕ ಕಂಡುಹಿಡಿಯಲಾಯಿತು.[೧೯] 3ಜಿ ನೆಟ್‌ವರ್ಕ್ ವ್ಯವಸ್ಥೆಯ ರಕ್ಷಣೆಗೆ ಸೇರಿಕೊಳ್ಳುವಂತೆ, ಅರ್ಜಿಗಳ ಕೆಲಸಗಳು ನಡೆದ ನಂತರ ಕೊನೆಯಿಂದ ಕೊನೆ ತನಕದ ರಕ್ಷಣೆ ಸಿಕ್ಕಿತು. ಐಎಂಎಸ್ ಇದನ್ನು ಹೊಂದಿದಾಗ ಇದು ಸೇರ್ಪಡೆಯಾಯಿತು. ಆದರೂ ಇದು 3ಜಿ ಆಸ್ತಿಯಾಗಿ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ.
ಅಪ್ಲಿಕೇಶನ್‌ಗಳು
[ಬದಲಾಯಿಸಿ]ಆವರ್ತನ ಶ್ರೇಣಿ ಮತ್ತು ಸ್ಥಳ ಪರಿಚಯವು 3ಜಿ ವ್ಯವಸ್ಥೆಯಲ್ಲಿ ಸಿಗುತ್ತದೆ. 3ಜಿ ರಚನೆಯು ಈ ಮೊದಲೇ ಬಳಸುತ್ತಿರುವ ಮೊಬೈಲ್ ಫೋನ್ ಬಳಕೆದಾರರಿಗಾಗಲ್ಲದೇ. ಉಳಿದ ಅರ್ಜಿಗಳು ಇಂತಿವೆ:
- ಮೊಬೈಲ್ ಟಿವಿ - ನಿರ್ವಾಹಕನು ಟಿವಿ ಚಾನಲ್ ಅನ್ನು ತನ್ನ ಮೊಬೈಲ್‌ಗೆ ನೇರವಾಗಿ ಖಾತೆದಾರನಾಗಿ ವೀಕ್ಷಿಸಬಹುದು.
- ವೀಡಿಯೋ ಆನ್ ಡಿಮಾಂಡ್ (ಇಚ್ಛೆಗೆ ಮೇಲೆ ವೀಕ್ಷಣೆ)- ಬಳಕೆದಾರ ಇಷ್ಟಪಟ್ಟರೆ ವಿತರಕರು ಆತನ ಮೊಬೈಲ್ ಫೋನ್‌ಗೆ ಸಿನಿಮಾವನ್ನು ಕಳುಹಿಸುತ್ತಾರೆ.
- ವೀಡಿಯೋ ಕಾನ್ಫರೆನ್ಸಿಂಗ್ (ವಿಡಿಯೋ ಸಮಾಲೋಚನೆ)- ಬಳಕೆದಾರರು ತಾವು ಮಾತನಾಡುತ್ತಿರುವ ವ್ಯಕ್ತಿಯನ್ನು ಮೊಬೈಲ್ ಮೂಲಕ ವೀಕ್ಷಣೆ ಮಾಡುತ್ತಾ ಸಂಭಾಷಣೆ ಮಾಡುಬಹುದು.
- ಟೆಲಿ ಮೆಡಿಸಿನ್ (ಫೋನ್ ಮೂಲಕ ವೈದ್ಯಕೀಯ)- ವೈದ್ಯಕೀಯ ವಿತರಕ ಏಕಾಂಗಿ ಬಳಕೆದಾರರಿಗೆ ಔಷಧಿಗಳ ಬಗ್ಗೆ ಸಲಹೆಗಳನ್ನು ನೀಡುತ್ತಾರೆ. (ಅವಶ್ಯಕತೆ ಇದ್ದಲ್ಲಿ)
- ಸ್ಥಳ ಆಧಾರಿತ ಸೇವೆ -ಅವಶ್ಯಕತೆ ಇದ್ದಲ್ಲಿ ಬಳಕೆದಾರರಿಗೆ ತಾವಿರುವ ಸ್ಥಳ ಅಥವಾ ಬೇರೆ ಸ್ಥಳಗಳ ಹವಾಮಾನ ಅಥವಾ ಸಂಚಾರ ವ್ಯವಸ್ಥೆಯ ಸ್ಥಿತಿಗತಿಗಳನ್ನು ಫೋನ್‌ಗೆ ವಿತರಕರು ಕಳುಹಿಸುತ್ತಾರೆ. ಅಥವಾ ಸಮೀಪವಿರುವ ವ್ಯಾಪಾರಗಳಿಗೆ ಅಥವಾ ಸ್ನೇಹಿತರ ಭೇಟಿಯಾಗಲು ಇದು ಸಹಾಯವನ್ನು ಮಾಡುತ್ತದೆ.
ವಿಕಸನ
[ಬದಲಾಯಿಸಿ]3ಜಿಪಿಪಿ ಮತ್ತು 3ಜಿಪಿಪಿ2 ಎರಡೂ ಸಹ ಪ್ರಸ್ತುತ 3ಜಿ ಶ್ರೇಣಿಯಡಿ ಕಾರ್ಯನಿರ್ವಹಿಸುತ್ತಿದೆ. ಇವು ಎಲ್ಲ ಐಪಿ ನೆಟ್‌ವರ್ಕ್‌ಗಳ ಆಡಳಿತ ವ್ಯವಸ್ಥೆಯ ಆಧಾರದಲ್ಲಿ ಮತ್ತು ಮುಂದುವರಿದ ನಿಸ್ತಂತು ಟೆಕ್ನಾಲಜಿಯಲ್ಲಿ ಬಳಸಲಾಗುತ್ತಿದ್ದು, ಅವುಗಳಾದ ಎಂಐಎಂಒ ಆಗಿದೆ. ಈ ವಿವರಣೆಗಳನ್ನು ಈಗಾಗಲೇ ದೃಶ್ಯ ಸಹಿತ ವೈಶಿಷ್ಠ್ಯಗಳನ್ನು ಐಎಂಟಿ-ಮುಂದುವರಿದ (4ಜಿ) ಹೊಂದಿದೆ. ಆದಾಗ್ಯೂ ಸಣ್ಣ ಆವರ್ತಕ ಶ್ರೇಣಿಯ ಅವಶ್ಯಕ ವಸ್ತುಗಳ 4ಜಿ ಪ್ರಮಾಣ ಕಡಿಮೆಯಾಯಿತು. (ಇದು 1 ಜಿಬಿ ಸ್ಥಿರ ಮತ್ತು 100 ಎಂಬಿ ಯು ಮೊಬೈಲ್ ಬಳಕೆಗೆ ಮೀಸಲು), ಈ ಶ್ರೇಣಿಗಳನ್ನು 3.9ಜಿ ಅಥವಾ ಪ್ರೀ-4ಜಿ ಎಂದು ವರ್ಗೀಕರಣ ಮಾಡಲಾಯಿತು. 3ಜಿಪಿಪಿ ಯೋಜನೆಯು 4ಜಿ ಗುರಿಯನ್ನು ಮುಟ್ಟಲು ಮುಂದುವರಿದ ಎಲ್‌ಟಿಇ ಟೆಕ್ನಾಲಜಿಯನ್ನು ಬಳಿಸಿಕೊಂಡಿತು. ಆದಾಗ್ಯೂ ಕ್ಯುಲ್‌ಕಾಮ್ ಯುಎಂಬಿಯನ್ನು ಎಲ್‌ಟಿಇ ಸಮೂಹಕ್ಕೆ ಸಹಕಾರಿಯಾಗುವಂತೆ ಅಭಿವೃದ್ಧಿಪಡಿಸಿದೆ.[೫] 2009 ಡಿಸೆಂಬರ್ 14ರಂದು, ಟೆಲಿಯಾ ಸೊನೆರಾ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದರು. ‘ವಿಶ್ವದಲ್ಲೇ ಮೊದಲ ಬಾರಿಗೆ ನಮ್ಮ ಗ್ರಾಹಕರಿಗೆ 4ಜಿ ಸೇವೆಯನ್ನು ನೀಡಲು ಆಹ್ವಾನಿಸುತ್ತಿರುವ ಮೊದಲ ಕಂಪನಿಯಾಗಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ’ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು.[೨೦] ಅವರ ಎಲ್‌ಟಿಇ ನೆಟ್‌ವರ್ಕ್ ಅನ್ನು ಸ್ಥಾಪಿಸಿದಾಗ, ಪ್ರಾಥಮಿಕವಾಗಿ ಅವರು ಪ್ರೀ-4ಜಿ ಸೇವೆಯನ್ನು (ಅಥವಾ 3ಜಿ ನಂತರದ ) ತನ್ನ ಗ್ರಾಹಕರಿಗೆ ಸ್ಟಾಕ್ ಹೋಮ್, ಸ್ವೀಡನ್ ಮತ್ತು ಓಸ್ಲೋ, ನಾರ್ವೆಗಳನ್ನು ಆಹ್ವಾನಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ ಕ್ಲಿಂಟ್ ಸ್ಮಿತ್, ಡೇನಿಯಲ್ ಕೊಲ್ಲಿನ್ಸ್. "3ಜಿ ವೈರ‍್ಲೆಸ್ ನೆಟ್‌ವರ್ಕ್", ಪುಟ 136. 2000.
- ↑ ITU. "ITU Radiocommunication Assembly approves new developments for its 3G standards". press release1 June 2009.
- ↑ ITU. "What really is a Third Generation (3G)(3G) Mobile Technology1 June 2009" (PDF). Archived (PDF) from the original on 8 ಸೆಪ್ಟೆಂಬರ್ 2008. Retrieved 22 ಜನವರಿ 2011.
- ↑ ITU-D Study Group 2. "Guidelines on the smooth transition of existing mobile networks to IMT-2000 for developing countries (GST); Report on Question 18/21 June 2009" (PDF).
{{cite web}}
: CS1 maint: numeric names: authors list (link) - ↑ ೫.೦ ೫.೧ Qualcomm halts UMB project, Reuters, 13 November 2008
- ↑ ೬.೦ ೬.೧ 3GPP notes that “there currently existed many different names for the same system (eg FOMA, W-CDMA, UMTS, etc)”; "Draft summary minutes, decisions and actions from 3GPP Organizational Partners Meeting#6, Tokyo, 9 October 2001" (PDF). p. 7.
- ↑ "The history of UMTS and 3G development".
- ↑ "World's first 3G launch on 1 October severely restricted (hktdc.com)".
- ↑ "broadbandmag.co.uk/3G grinds to a start". Archived from the original on 2009-04-23. Retrieved 2011-01-22.
- ↑ "DoCoMo Delays 3G Launch". Archived from the original on 2012-12-08. Retrieved 2021-07-20.
- ↑ "Plus 8 Star presentation, "Is 3G a Dog or a Demon – Hints from 7 years of 3G Hype in Asia"". Plus8star.com. 2008-06-11 2010-09-06. Archived from the original on 2012-02-18. Retrieved 2011-01-22.
{{cite web}}
: Check date values in:|date=
(help) - ↑ http://www.nortel.com/corporate/news/newsreleases/2005b/06_30_05_sasktel.html
- ↑ http://www.cellphones.ca/news/post001469/
- ↑ Kapica Jack (2006-11-02 2010-03-22). "Rogers unveils new wireless network". The Globe and Mail. Archived from the original on 2009-10-03.
{{cite news}}
: Check date values in:|date=
(help) - ↑ http://www.physorg.com/news9436.html
- ↑ "Cell phone demand stays strong in North Korea". Business Week. 2009-12-08 2010-09-06.
{{cite web}}
: Check date values in:|date=
(help) - ↑ ಉತ್ತರ ಕೊರಿಯಾದಲ್ಲಿಯ ದೂರವಾಣಿ ಸಂಖ್ಯೆಗಳು
- ↑ "Cellular Standards for the Third Generation". ITU. 1 December 2005. Archived from the original on 24 ಮೇ 2008. Retrieved 22 ಜನವರಿ 2011.
- ↑ "Security for the Third Generation (3G) Mobile System" (PDF). Network Systems & Security Technologies. Archived from the original (PDF) on 2003-09-12. Retrieved 2011-01-22.
- ↑ "first in the world with 4G services". TeliaSonera. 2009-12-14 2010-09-06.
{{cite web}}
: Check date values in:|date=
(help)