ಹಳದಿ ಕಣಗಿಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಳದಿಕಣಗಿಲೆ[ಬದಲಾಯಿಸಿ]

ಹಳದಿಕಣಗಿಲೆ

ಇದು ನಿತ್ಯಹರಿದ್ವರ್ಣ ಉಷ್ಣವಲಯದ ಪೊದೆ ಸಸ್ಯ ಅಥವಾ ಸಣ್ಣ ಮರವಾಗಿದೆ. ಇದರ ಎಲೆಗಳು ಹಸಿರು ಬಣ್ಣದಲ್ಲಿರುತ್ತದೆ. ಇದು ಚೀನಿ ಅದೃಷ್ಟಅಡಿಕೆಗೆ ಹೋಲುತ್ತದೆ. ಇದರ ವೈಜ್ಞಾನಿಕ ಹೆಸರು ಕ್ಯಾಸ್ಸೆಬೇಲಾ ಥೆವೆಟಿಯಾ.[೧]

ಇತರೆ ಹೆಸರುಗಳು[ಬದಲಾಯಿಸಿ]

ವಿವರಣೆ[ಬದಲಾಯಿಸಿ]

ಈ ಸಸ್ಯವು ಬಿಹಾರ, ದೆಹಲಿ, ಗುಜರಾತ್,ಪಂಜಾಬ್,ಚೀನಾ, ಬಲೂಚಿಸ್ತಾನ್, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಲ್ಲಿ ಪ್ರಚಲಿತದಲ್ಲಿದೆ. ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದಾದ್ಯಂತ ಇದು ಒಂದು ಸ್ಥಳೀಯ ವಿಷಕಾರಿ ಸಸ್ಯವಾಗಿದೆ. ಈ ಸಸ್ಯವನ್ನು ಅಲಂಕಾರಿಕ ವ್ಯಾಪರಕ್ಕಾಗಿ ಬಳಸಲಾಗುತ್ತದೆ. ಇದನ್ನು ವೆಸ್ಟ್ ಇಂಡೀಸ್ನ ಅದೃಷ್ಟ ಅಡಿಕೆ ಎಂದೂ ಸಹ ಕರೆಯಲಾಗುತ್ತದೆ.[೩]

ದೈಹಿಕರಚನೆ[ಬದಲಾಯಿಸಿ]

ಇದರ ಕಾಂಡವು ಬೂದು ಬಣ್ಣವನ್ನು ಹೊಂದಿರುತ್ತದೆ. ಹೂವುಗಳು ಬೇಸಿಗೆಯ ಕಾಲದಲ್ಲಿ ಅರಳುತ್ತವೆ. ಸುಧೀರ್ಘ ಕೊಳವೆಯ ಆಕಾರದ ಹಾಗೂ ಕೆಲವೊಮ್ಮೆ ಪರಿಮಳಯುಕ್ತ ಹಳದಿ ಹೂವುಗಳನ್ನು ಹೊಂದಿದೆ. ಇದರ ಫಲವು ಆಳವಾದ ಕೆಂಪು-ಕಂದು ಬಣ್ಣದಲ್ಲಿದ್ದು, ದೊಡ್ಡ ಬೀಜದಿಂದ ಸುತ್ತುವರೆಯುತ್ತದೆ.[೪]

ಧಾರ್ಮಿಕ ಪ್ರಾಮುಖ್ಯತೆ[ಬದಲಾಯಿಸಿ]

ಇದರ ಪ್ರಕಾಶಮಾನವಾದ ಹಳದಿ ಬಣ್ಣದ ಹೂವುಗಳನ್ನು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅದರಲ್ಲೂ ಹಿಂದೂಧರ್ಮದ ಶಿವನನ್ನು ಪೂಜಿಸುವುದಕ್ಕೆ ಬಳಸಲಾಗುತ್ತದೆ.

ಉಪಯೋಗಗಳು[ಬದಲಾಯಿಸಿ]

  • ಚರ್ಮದ ಕಾಯಿಲೆಗಳ ಸಂದರ್ಭದಲ್ಲಿ ಗಾಯಗಳಿಗೆ ಬಳಸಲಾಗುತ್ತದೆ.
  • ಇದನ್ನು ಅಲಂಕಾರಿಕ ಸಸ್ಯ ಎಂದು ಬೆಳೆಸಲಾಗುತ್ತದೆ.
  • ಈ ಸಸ್ಯವನ್ನು ಉದ್ಯಾನವನಗಳಲ್ಲಿ ನೆಡಲಾಗುತ್ತದೆ.
  • ಹಿಮ ಪೀಡಿತ ಪ್ರದೇಶಗಳಲ್ಲಿ ಇದು ಕಂಟೇನೆರ್ ಸಸ್ಯವಾಗಿದೆ.
  • ಇದು ಹೆಚ್ಚಿನ ಮಣ್ಣುಗಳನ್ನು ಸಹಿಸಿಕೊಳ್ಳುತ್ತದೆ ಮತ್ತು ಬರಸಹಿಷ್ಣುವಾಗಿರುತ್ತದೆ.\

ಉಲ್ಲೇಖಗಳು[ಬದಲಾಯಿಸಿ]