ವಿಷಯಕ್ಕೆ ಹೋಗು

ಹಳದಿ ಎದೆಯ ಹರಟೆಮಲ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mixornis gularis
Calls of rubicapilla (southern India)
Conservation status
Scientific classification e
Unrecognized taxon (fix): Mixornis
ಪ್ರಜಾತಿ:
M. gularis
Binomial name
Mixornis gularis
(Horsfield, 1822)
Distribution of Mixornis gularis
Synonyms

Macronus gularis

Pin-striped tit-babbler
Calls of rubicapilla (southern India)
Scientific classification Edit this classification
Kingdom: Animalia
Phylum: Chordata
Class: Aves
Order: Passeriformes
Family: Timaliidae
Genus: Mixornis
Species:
M. gularis
Binomial name
Mixornis gularis

(Horsfield, 1822)
Distribution of Mixornis gularis
Synonyms

Macronus gularis

ಪಿನ್-ಸ್ಟ್ರೈಪ್ಡ್ ಟಿಟ್-ಬ್ಯಾಬ್ಲರ್ ( ಮಿಕ್ಸರ್ನಿಸ್ ಗುಲಾರಿಸ್ ), ಇವನ್ನು ಹಳದಿ-ಎದೆಯ ಹರಟೆಮಲ್ಲ ಎಂದೂ ಕರೆಯುತ್ತಾರೆ, ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಓಲ್ಡ್ ವರ್ಲ್ಡ್ ಬಾಬ್ಲರ್ ಕುಟುಂಬ ಟಿಮಾಲಿಡೆಯಲ್ಲಿನ ಒಂದು ಜಾತಿಯ ಪಕ್ಷಿ.

ವ್ಯವಸ್ಥಾಶಾಸ್ತ್ರ ಮತ್ತು ವರ್ಗೀಕರಣಶಾಸ್ತ್ರ

[ಬದಲಾಯಿಸಿ]

ಹಳದಿ-ಎದೆಯ ಹರಟೆಮಲ್ಲ ಹಕ್ಕಿಯನ್ನು 1822 ರಲ್ಲಿ ಅಮೇರಿಕಾದ ನಿಸರ್ಗತಜ್ಞ ಥಾಮಸ್ ಹಾರ್ಸ್ಫೀಲ್ಡ್ ಅವರು ಸುಮಾತ್ರಾದಲ್ಲಿ ಸಂಗ್ರಹಿಸಿದ ಮಾದರಿಯನ್ನು ಆಧರಿಸಿ, ಟಿಮಾಲಿಯಾ ಗುಲಾರಿಸ್ ಎಂಬ ವೈಜ್ಞಾನಿಕ ಹೆಸರಿನಿಂದ ವಿಜ್ಞಾನಪ್ರಪಂಚಕ್ಕೆ ಪರಿಚಯಿಸಿದರು. [] [] ಹಳದಿ-ಎದೆಯ ಹರಟೆಮಲ್ಲ ಹಕ್ಕಿಗಳನ್ನು ಮೊದಲು ಮ್ಯಾಕ್ರೋನಸ್ ಕುಲದಲ್ಲಿ ಗುರುತಿಸಲಾಗಿತ್ತು ಆದರೆ 2019 ರಲ್ಲಿ ಪ್ರಕಟವಾದ ಆಣ್ವಿಕ ವಂಶೋತ್ಪತ್ತಿ (molecular phylogenetic‌‌)ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ, [] ಇಂಗ್ಲೆಂಡಿನ ಪ್ರಾಣಿಶಾಸ್ತ್ರಜ್ಞ ಎಡ್ವರ್ಡ್ ಬ್ಲೈತ್ ರು 1842 ರಲ್ಲಿ ಮಿಕ್ಸರ್ನಿಸ್ ಕುಲಕ್ಕೆ ಸ್ಥಳಾಂತರಿಸಿದರು. [] [] ಕುಲದ ವೈಜ್ಞಾನಿಕ ಹೆಸರನ್ನು ಹೀಗೆ ಅರ್ಥೈಸಬಹುದು, ಪ್ರಾಚೀನ ಗ್ರೀಕ್ನ - ಮಿಕ್ಸಿಸ್ ಅಂದರೆ "ಮಿಶ್ರ" ಅಥವಾ "ಜೊತೆಯಾಗಿರುವುದು", ಮತ್ತು ಓರ್ನಿಸ್ ಅಂದರೆ "ಪಕ್ಷಿ" . ಹಕ್ಕಿಯ ನಿರ್ದಿಷ್ಟ ವಿಶೇಷಣ - ಗುಲಾರಿಸ್, ಆಧುನಿಕ ಲ್ಯಾಟಿನ್ ನಲ್ಲಿ "ಗಂಟಲು". [] ಹಳದಿ-ಎದೆಯ ಹರಟೆಮಲ್ಲ ಹಕ್ಕಿಗಳು ಡ್ಯುಮೆಟಿಯಾ ಮತ್ತು ಟಿಮಾಲಿಯಾ ಕುಲಗಳನ್ನು ಒಳಗೊಂಡಿರುವ ಗುಂಪಿಗೆ ಸೇರಿದೆ. []

ವಿಶಿಷ್ಟವಾದ ಬೋರ್ನಿಯ ಮತ್ತು ಜಾವಾದ ಜೀವಸಂದಣಿಯನ್ನು ನಿಗೆಲ್ ಕಾಲರ್ ನಡೆಸಿದ ರೂಪಶಾಸ್ತ್ರದ ಅಧ್ಯಯನದ ಆಧಾರದ ನಂತರ ಈ ಜಾತಿಗಳನ್ನು ಪ್ರತ್ಯೇಕಿಸಿ, ಬೋಲ್ಡ್-ಸ್ಟ್ರೈಪ್ಡ್ ಟಿಟ್-ಬ್ಯಾಬ್ಲರ್ ( ಮಿಕ್ಸಾರ್ನಿಸ್ ಬೋರ್ನೆನ್ಸಿಸ್ ) ಎಂದು ಮರುನಾಮಕರಣ ಮಾಡಲಾಗಿದೆ. []

ಈ ಹಕ್ಕಿಯ ಜೀವಸಂದಣಿಯಲ್ಲಿ, ಈವರೆಗೆ 13 ಉಪಜಾತಿಗಳನ್ನು ಗುರುತಿಸಲಾಗಿದ್ದು ಅವುಗಳ ನೆಲೆಯ ಪ್ರದೇಶ ಕೆಳಗಿನಂತಿವೆ: []

  • M. g. rubicapilla (Tickell, 1833) - ನೇಪಾಳ, ಭೂತಾನ್ ಮತ್ತು ಈಶಾನ್ಯ ಭಾರತದಿಂದ ಬಾಂಗ್ಲಾದೇಶ ಮತ್ತು ಪೂರ್ವ-ಮಧ್ಯ ಭಾರತ
  • M. g. ticehursti Stresemann, 1940 - ಪಶ್ಚಿಮ ಮ್ಯಾನ್ಮಾರ್
  • M. g. sulphureus (Rippon, 1900) - ಪೂರ್ವ ಮ್ಯಾನ್ಮಾರ್, ಪಶ್ಚಿಮ ಥೈಲ್ಯಾಂಡ್ ಮತ್ತು ನೈಋತ್ಯ ಯುನ್ನಾನ್ (ದಕ್ಷಿಣ ಚೀನಾ)
  • M. g. lutescens Delacour, 1926 - ಆಗ್ನೇಯ ಯುನ್ನಾನ್ (ದಕ್ಷಿಣ ಚೀನಾ), ಉತ್ತರ, ಈಶಾನ್ಯ ಥೈಲ್ಯಾಂಡ್ ಮತ್ತು ಉತ್ತರ ಇಂಡೋಚೈನಾ
  • M. g. kinneari Delacour & Jabouille, 1924 - ಮಧ್ಯ ವಿಯೆಟ್ನಾಂ
  • M. g. saraburiensis (Deignan, 1956) - ಪೂರ್ವ-ಮಧ್ಯ ಥೈಲ್ಯಾಂಡ್ ಮತ್ತು ಪಶ್ಚಿಮ ಕಾಂಬೋಡಿಯಾ
  • M. g. versuricola Oberholser, 1922 - ಪೂರ್ವ ಕಾಂಬೋಡಿಯಾ ಮತ್ತು ದಕ್ಷಿಣ ವಿಯೆಟ್ನಾಂ
  • M. g. condorensis Robinson, 1921 - ಕಾನ್ ಸನ್ ದ್ವೀಪ (ದಕ್ಷಿಣ ವಿಯೆಟ್ನಾಂನಿಂದ)
  • M. g. connectens (Kloss, 1918) – ಟೆನಾಸ್ಸೆರಿಮ್ (ಆಗ್ನೇಯ ಮ್ಯಾನ್ಮಾರ್), ಥೈಲ್ಯಾಂಡ್‌ನ ಕರಾವಳಿ ಕೊಲ್ಲಿಯಿಂದ ಮಧ್ಯ ಮಲಯ ಪರ್ಯಾಯ ದ್ವೀಪಕ್ಕೆ ( ಚೆರ್ಸೋನೆಸೊಫಿಲಸ್ ಅನ್ನು ಒಳಗೊಂಡಿದೆ) []
  • M. g. archipelagicus Oberholser, 1922 - ಮೆರ್ಗುಯಿ ದ್ವೀಪಸಮೂಹ (ನೈಋತ್ಯ ಮ್ಯಾನ್ಮಾರ್)
  • M. g. inveteratus Oberholser, 1922 - ಆಗ್ನೇಯ ಥೈಲ್ಯಾಂಡ್ ಮತ್ತು ಕಾಂಬೋಡಿಯಾದ ಕರಾವಳಿ ದ್ವೀಪಗಳು
  • M. g. gularis (Horsfield, 1822) - ದಕ್ಷಿಣ ಮಲಯ ಪೆನಿನ್ಸುಲಾ, ಸುಮಾತ್ರಾ, ಬನ್ಯಾಕ್ ದ್ವೀಪಗಳು (ಉತ್ತರ ಸುಮಾತ್ರದ ಪಶ್ಚಿಮ) ಮತ್ತು ಬಟು ದ್ವೀಪಗಳು (ಮಧ್ಯ ಸುಮಾತ್ರದ ಪಶ್ಚಿಮ)
  • M. g. woodi Sharpe, 1877 - ಪಲವಾನ್ ಗುಂಪು (ನೈಋತ್ಯ ಫಿಲಿಪೈನ್ಸ್)

ವಿವರಣೆ

[ಬದಲಾಯಿಸಿ]

ಈ ಜಾತಿಯು ಹಳದಿ ಹುಬ್ಬು ಮತ್ತು ಕೆಂಗಂದು ಕಿರೀಟವನ್ನು ಹೊಂದಿದೆ. ಹಳದಿ ಬಣ್ಣದ ಗಂಟಲ ಮೇಲೆ ಕಂದು ಬಣ್ಣದ ಗೆರೆಗಳಿರುತ್ತವೆ. ಹಕ್ಕಿಯ ಧ್ವನಿ ಜೋರಾಗಿ ಪುನರಾವರ್ತಿತವಾದ ಚಾಂಕ್-ಚಾಂಕ್-ಚಾಂಕ್-ಚಾಂಕ್-ಚಾಂಕ್ ನಂತಿದ್ದು, ಸಿಂಪಿಗ (ಸಾಮಾನ್ಯ ಟೈಲರ್ ಬರ್ಡ್) ವನ್ನು ನೆನಪಿಸುತ್ತದೆ.

ನೆಲಮಟ್ಟದ ಗಿಡ ಪೊದೆಗಳಲ್ಲಿ, ಸಣ್ಣ ಗುಂಪುಗಳಲ್ಲಿ ಆಹಾರವನ್ನರಸುತ್ತವೆ. ಫೆಬ್ರವರಿಯಿಂದ ಜುಲೈವರೆಗೆ ಪೂರ್ವಮುಂಗಾರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಹುಲ್ಲು ಮತ್ತು ಎಲೆಗಳಿಂದ ಮಾಡಿದ ಸಡಿಲವಾದ ಚೆಂಡಿನ ಆಕಾರದ ಗೂಡನ್ನು ನಿರ್ಮಿಸುತ್ತವೆ.

ಪ್ರಸರಣ

[ಬದಲಾಯಿಸಿ]
ಇಂಡೋನೇಷ್ಯಾದ ಬಿಂಟಾನ್‌ನಲ್ಲಿ

ಬಾಂಗ್ಲಾದೇಶ, ಭೂತಾನ್, ಬ್ರೂನಿಯೆ, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ನೇಪಾಳ, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ವ್ಯಾಪಕವಾಗಿ ಹರಡಿವೆ.

ಭಾರತದಲ್ಲಿ, ಉತ್ತರ ಪೂರ್ವ ಘಟ್ಟ ಮತ್ತು ದಕ್ಷಿಣ ಭಾರತದಲ್ಲಿ ‍ (ಕೇವಲ ಕಬಿನಿ ಜಲಾಶಯ -ಮುದುಮಲೈನಲ್ಲಿ ಮಾತ್ರ) ವಿಂಗಡಿತ ಜೀವಸಂದಣಿ ದಾಖಲಾಗಿದೆ, ಈ ಎರಡು ಪ್ರದೇಶಗಳ ವಿಶಾಲ ಅಂತರದ ನಡುವೆ ಈ ಹಕ್ಕಿಗಳ ಸುಳಿವಿಲ್ಲ . 1939ರಲ್ಲಿ ಕಬಿನಿ ಜಲಾಯದ ಬಳಿ ಇರುವ ಅಂತರಸಂತೆಯಿಂದ ಸಲೀಂ ಅಲಿ ಈ ಹಕ್ಕಿಯನ್ನು ದಾಖಲಿಸಿದ್ದರು. ಈ ಆರಂಭಿಕ ಸಂಗ್ರಹಣೆಯ ನಂತರ ಇಲ್ಲಿಂದ ಮತ್ತೆ ಈ ಹರಟೆಮಲ್ಲ ಹಕ್ಕಿಗಳನ್ನು ಕಂಡ ಯಾವುದೇ ದಾಖಲೆಗಳಿಲ್ಲ. 2004 ರಲ್ಲಿ ಮುದುಮಲೈನ ಮಾಸಿನಗುಡಿ ಪ್ರದೇಶದಿಂದ ಮರುದಾಖಲಾತಿಯ ನಂತರ ಮತ್ತೆ ಕಾಣಿಸಿಕೊಂಡಿಲ್ಲ [೧೦]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ BirdLife International (2016). "Mixornis gularis". IUCN Red List of Threatened Species. 2016: e.T22735162A95104150. doi:10.2305/IUCN.UK.2016-3.RLTS.T22735162A95104150.en. Retrieved 12 November 2021. ಉಲ್ಲೇಖ ದೋಷ: Invalid <ref> tag; name "iucn status 12 November 2021" defined multiple times with different content
  2. Horsfield, Thomas (1822). Zoological researches in Java, and the neighbouring islands. London: Printed for Kingsbury, Parbury, & Allen. Part 3. Plate [43], fig. 2, text.
  3. Mayr, Ernst; Paynter, Raymond A. Jr, eds. (1964). Check-List of Birds of the World. Vol. 10. Cambridge, Massachusetts: Museum of Comparative Zoology. p. 321.
  4. ೪.೦ ೪.೧ Cai, T.; Cibois, A.; Alström, P.; Moyle, R.G.; Kennedy, J.D.; Shao, S.; Zhang, R.; Irestedt, M.; Ericson, P.G.P. (2019). "Near-complete phylogeny and taxonomic revision of the world's babblers (Aves: Passeriformes)". Molecular Phylogenetics and Evolution. 130: 346–356. doi:10.1016/j.ympev.2018.10.010. PMID 30321696.
  5. Blyth, Edward (1842). "Report from the curator". Journal of the Asiatic Society of Bengal. 11, Part 2 (128): 788-799 [794, note].
  6. ೬.೦ ೬.೧ Gill, Frank; Donsker, David; Rasmussen, Pamela, eds. (August 2022). "Babblers & fulvettas". IOC World Bird List Version 12.2. International Ornithologists' Union. Retrieved 22 September 2022.
  7. Jobling, James A. (2010). The Helm Dictionary of Scientific Bird Names. London: Christopher Helm. pp. 257, 181. ISBN 978-1-4081-2501-4.
  8. Collar, N.J. (2006). "A partial revision of the Asian babblers ( Timaliidae )". Forktail. 22: 85–112.
  9. Cros, E.; Rheindt, F.E. (2017). "Massive bioacoustic analysis suggests introgression across Pleistocene land bridges in Mixornis tit-babblers". Journal of Ornithology. 158 (2): 407–419. doi:10.1007/s10336-016-1411-x.
  10. Praveen J., Job K. Joseph & Nick Lethaby (2004) Sighting of Yellow-breasted Babbler Macronous gularis in South India.