ವಿಷಯಕ್ಕೆ ಹೋಗು

ಸ್ಯಾಮ್ಯುಯೆಲ್ ಹಾನಿಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಯಾಮ್ಯುಯೆಲ್ ಹಾನಿಮನ್
ಸ್ಯಾಮ್ಯುಯೆಲ್ ಹಾನಿಮನ್
ಜನನ(೧೭೫೫-೦೪-೧೦)೧೦ ಏಪ್ರಿಲ್ ೧೭೫೫
ಮರಣJuly 2, 1843(1843-07-02) (aged 88)
ರಾಷ್ಟ್ರೀಯತೆಜರ್ಮನ್
ಕಾರ್ಯಕ್ಷೇತ್ರಗಳುಹೋಮಿಯೋಪಥಿ
ಸ್ಯಾಮ್ಯುಯೆಲ್ ಹಾನಿಮನ್ 1841

ಕ್ರಿಶ್ಚಿಯನ್ ಫ್ರೆಡರಿಕ್ ಸ್ಯಾಮ್ಯುಯೆಲ್ ಹಾನಿಮನ್ (೧೭೫೫-೧೮೪೩) ಜರ್ಮನ್ ವೈದ್ಯಪ್ರವೀಣ, ಹೋಮಿಯೋಪಥಿ ಔಷಧ ಪದ್ಧತಿಯ ಜನಕನೆಂದು ಖ್ಯಾತರಾದವರು.[] ಜರ್ಮನಿಯ ಮೈಸನ್ ಎಂಬಲ್ಲಿ ೧೭೫೫, ಏಪ್ರಿಲ್ ೧೦ ರಂದು ಜನಿಸಿದರು.[] ತುಂಬಾ ಪ್ರತಿಭಾವಂತ ಹಾಗು ಬಡವರಾದ ಇವರು ತಮ್ಮ ವಿದ್ಯಾಭ್ಯಾಸವನ್ನು ಶಾಲಾ ಮುಖ್ಯಸ್ಥರ ಖರ್ಚಿನಲ್ಲೇ ಮುಗಿಸಿದರು. ಲೈಪ್‌ಜಿಗ್ ಎಂಬಲ್ಲಿ ವಿದ್ಯಾಭ್ಯಾಸ ಪಡೆದ. ಕ್ರಿ.ಶ ೧೭೭೯ ರಲ್ಲಿ ಎರ್ಲಾಂಚೆನ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿಯನ್ನು ಪಡೆದರು.[] ಪ್ರಿನ್ಸಿಪಲ್ಸ್ ಆಫ್ ರೇಷನಲ್ ಮೆಡಿಸಿನ್ ಎಂಬ ಪುಸ್ತಕದಲ್ಲಿ ತಮ್ಮ ಹೊಸ ವೈದ್ಯಪದ್ಧತಿಯ ರೂಪುರೇಷೆಗಳನ್ನು ನಿರೂಪಿಸಿದರು.

ಅಲೊಪತಿ ವೈದ್ಯಪದ್ಧತಿಯನ್ನು ಹತ್ತು ವರ್ಷ ಪರ್ಯಂತ ಅಭ್ಯಾಸ ಮಾಡಿದ. ಮೂಲವಾದ ಸಿಂಕೋನ ಮರದ ತೊಗಟೆ ಕ್ವಿನೈನ್ ಔಷಧಿಯ ಆಕರವೆಂಬುದು ಗೊತ್ತಿತ್ತು. ಈ ತೊಗಟೆಯ ಔಷಧೀಯ ಗುಣ ಕುರಿತು ಆರು ವರ್ಷ ಕಾಲ ಪ್ರಯೋಗಮಾಡಿ, ಅವು ರೋಗಿಯಲ್ಲಿ ಯಾವ ರೋಗ ಲಕ್ಷಣಗಳನ್ನು ಔಷಧಿಗಳು ನಿವಾರಿಸುವುವೋ ಅವನ್ನೇ ಆರೋಗ್ಯವಂತನಲ್ಲಿ ಮೂಡಿಸುತ್ತವೆ ಎಂಬ ತೀರ್ಮಾನಕ್ಕೆ ಈತ ಬಂದ. ಪ್ರಖ್ಯಾತವಾದ ಈತನ ಮೂಲಭೂತ ತತ್ತ್ವ ಸಿಮಿಲಿಯ ಸಿಮಿಲಿಬಿಸ್ ಕ್ಯೂರೆಂಟೂರ್ (ಸದೃಶ ಲಕ್ಷಣಯುತ ಔಷಧೀಯ ಪದಾರ್ಥಗಳು ಸದೃಶಲಕ್ಷಣಗಳ ರೋಗ ನಿವಾರಕಗಳು - ಲೈಕ್ ಕ್ಯೂರ್ಸ್ ಲೈಕ್) ಎಂಬ ಸಿದ್ಧಾಂತಕ್ಕೆ ಇದು ಮೂಲವಾಯಿತು.[] ಇದು ಅಲೊಪತಿ ವೈದ್ಯಪದ್ಧತಿಯ ನಂಬಿಕೆಗಳಿಗೆ ವಿರುದ್ಧವಾಗಿತ್ತು. ಈತನೇ ಶೋಧಿಸಿದ ಔಷಧದ ಶಕ್ತೀಕರಣ (ಪೊಟೆಂಟೈಸೇಷನ್) ಮತ್ತು ಅತ್ಯಲ್ಪ ಪ್ರಮಾಣದ ಔಷಧಿಯ ಬಳಕೆ ಇವು ಔಷಧಿ ವ್ಯಾಪಾರಿಗಳನ್ನು ಕೆರಳಿಸಿತು. ಆದ್ದರಿಂದ ಈತ ತನ್ನ ರೋಗಿಗಳಿಗೆ ಔಷಧಿಯನ್ನು ಉಚಿತವಾಗಿ ನೀಡುತ್ತಿದ್ದ. ಅಂದಿನ ಕಾನೂನಿಗೆ ಸಮ್ಮತವಲ್ಲದ ರೀತಿಯಲ್ಲಿ ಆತ ವ್ಯವಹರಿಸುತ್ತಿದ್ದ ಕಾರಣ, 1798 ರಿಂದ 1810 ರ ತನಕ ಈತ ಅನೇಕ ಸಾರಿ ಬಂಧನಕ್ಕೊಳಗಾಗಿ ಎಲ್ಲೂ ನೆಲೆಕಾಣದೆ ಅನೇಕ ಊರುಗಳನ್ನು ಸುತ್ತಿದ. ಮುಂದೆ ಲೈಪ್‍ಜಿಗ್‌ಗೆ ಹಿಂತಿರುಗಿ 1821ರ ತನಕ ತನ್ನ ವೈದ್ಯಕೀಯ ಪದ್ಧತಿಯನ್ನು ಆರಂಭಿಸಿದ. ಅಲ್ಲಿಂದ ಮತ್ತೆ ಹೊರದೂಡಲ್ಪಟ್ಟು, ಮೊದಲು ಕೋತೆನ್‌ಗೆ ಮತ್ತೆ 1835 ರಲ್ಲಿ ಪ್ಯಾರಿಸ್‌ಗೆ ಹೋಗಿ ನೆಲಸಿದ. ಶೇಷಾಯುಷ್ಯದ ಬಹು ಕಾಲವನ್ನು ಅನೇಕ ಔಷಧಗಳ ‘ಪ್ರೂವಿಂಗ್’ ಗಾಗಿ (ಸ್ಥಿರೀಕರಣ) ವಿನಿಯೋಗಿಸಿದ. ಅವುಗಳ ಲಕ್ಷಣಗಳನ್ನು ಒಳಗೊಂಡ ‘ಮೆಟೀರಿಯ ಮೀಡಿಕ ಪ್ಯೂರ (1817)’ ಎಂಬ ಗ್ರಂಥವನ್ನೂ ಹೋಮಿಯೊಪತಿ ತತ್ತ್ವಗಳನ್ನು ಒಳಗೊಂಡ ‘ಆರ್ಗನಾನ್ ಆಫ್ ಮೆಡಿಸಿನ್ (1833)’ ಎಂಬ ಗ್ರಂಥವನ್ನೂ ದೀರ್ಘಕಾಲೀನ ವ್ಯಾಧಿಗಳಿಗೆ ಸಂಬಂಧಿಸಿದಂತೆ ‘ಕ್ರಾನಿಕ್ ಡಿಸೀಸಸ್ (1838)’ ಎಂಬ ಗ್ರಂಥವನ್ನು ರಚಿಸಿದ.

ಆರೋಗ್ಯವಂತ ವ್ಯಕ್ತಿಗೆ ಬಹುದಿನಗಳ ಕಾಲ ಗಿಡಮೂಲಿಕೆ, ಪ್ರಾಣಿಮೂಲದ ಅಥವಾ ಖನಿಜಾಂಶದ ಯಾವುದೇ ವಸ್ತುವನ್ನು ನೀಡಿದಾಗ, ಅದು ಅವನ ದೇಹದಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ, ಮತ್ತು ಅದೇ ರೀತಿಯ ಗುಣಲಕ್ಷಣ ರೋಗಿಯಲ್ಲಿ ಕಂಡುಬಂದಾಗ, ಅದೇ ಔಷಧಿ ನೀಡಿ ರೋಗಿಯನ್ನು ಗುಣಪಡಿಸಬಹುದು ಎಂದು ಇವರು ಅನೇಕ ಪ್ರಯೋಗಗಳ ಮೂಲಕ ಕಂಡು ಹಿಡಿದರು. ಅಷ್ಟೇ ಅಲ್ಲದೆ ಹೆಚ್ಚು ಔಷಧ ನೀಡಿದಾಗ ಉಂಟಾಗುವ ಅಡ್ಡ ಪರಿಣಾಮದ ಬಗ್ಗೆಯೂ ತಿಳಿಸಿದರು.[]

ಹೋಮಿಯೊಪತಿ ಔಷಧಗಳು ಮುಖ್ಯವಾಗಿ ಸಸ್ಯ, ಪ್ರಾಣಿ ಮತ್ತು ಖನಿಜ ಮೂಲದವಾಗಿದ್ದುವು. ಸಹಜವಾದ ಈ ಪದ್ಧತಿಯನ್ನು ಈತನ ಅನುಯಾಯಿಗಳು ಪ್ರಚಾರಗೊಳಿಸಿದರು. ಹಾನಿಮಾನ್‌ನ ಕೊನೆ ದಿನಗಳ ವೇಳೆಗೆ ಈ ಪದ್ಧತಿ ಯುರೋಪ್ ಮತ್ತು ಉತ್ತರ ಅಮೆರಿಕಗಳಲ್ಲಿ ಸಾಕಷ್ಟು ಪ್ರಚಾರ ಪಡೆದು ಪ್ರಸಿದ್ಧ ವೈದ್ಯಪದ್ಧತಿಯಾಗಿ ರೂಪುಗೊಂಡಿತ್ತು. ಆದರೆ ಅಂದಿನ ಸಾಮಾನ್ಯ ಪದ್ಧತಿ ವೈದ್ಯರುಗಳ (ಅಲೊಪತಿ) ಕೆಂಗಣ್ಣಿಗೆ ಗುರಿಯಾಗಿ ಏಳುಬೀಳುಗಳನ್ನು ಕಂಡಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. Ladyman J (2013). "Chapter 3: Towards a Demarcation of Science from Pseudoscience". In Pigliucci M, Boudry M (eds.). Philosophy of Pseudoscience: Reconsidering the Demarcation Problem. University of Chicago Press. pp. 48–49. ISBN 978-0-226-05196-3. Yet homeopathy is a paradigmatic example of pseudoscience. It is neither simply bad science nor science fraud, but rather profoundly departs from scientific method and theories while being described as scientific by some of its adherents (often sincerely).
  2. Though some sources do state that he was born in the early hours of 11 April 1755, Haehl, Richard (1922). Samuel Hahnemann his Life and Works. Vol. 1. p. 9. Hahnemann, was born on 10 April at approximately twelve o'clock midnight.
  3. http://www.heilkunst.com/biography.html
  4. "Hahnemann Biography". Retrieved 13 January 2009.
  5. "ಆರ್ಕೈವ್ ನಕಲು". Archived from the original on 2012-10-29. Retrieved 2013-07-24. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)

ಹೊರಗಿನ ಕೊಂಡಿಗಳು

[ಬದಲಾಯಿಸಿ]