ವಿಷಯಕ್ಕೆ ಹೋಗು

ಸದಸ್ಯ:Yogeshraghava/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಷ್ಣರಸಾಯನವಿಜ್ಞಾನ

[ಬದಲಾಯಿಸಿ]

ಉಷ್ಣಲೋಹವಿದ್ಯೆ

[ಬದಲಾಯಿಸಿ]

ಖನಿಜಗಳಿಂದ ಆಯಾ ಲೋಹಗಳನ್ನು ಪಡೆಯುವ ಸಲುವಾಗಿ ಉನ್ನತ ಉಷ್ಣತೆಯಲ್ಲಿ ರಾಸಾಯನಿಕ ಕ್ರಿಯೆಗಳನ್ನು ನಡೆಸುವ ತಂತ್ರ (ಪೈರೋ ಮೆಟಲರ್ಜಿ)[]. ತಾಮ್ರವನ್ನು ಅದಿರಿನಿಂದ ಅಪಕರ್ಷಿಸಲು ಉಷ್ಣವನ್ನು ಬಳಸುವ ಪರಿಪಾಠ ಕ್ರಿ.ಪೂ. 3000ಕ್ಕೆ ಹಿಂದೆಯೂ ಇತ್ತು. ರಸಾಯನ ವಿಜ್ಞಾನ ಬೆಳೆದಂತೆ ಉನ್ನತ ಉಷ್ಣತೆಯನ್ನು ತಡೆಯಬಲ್ಲ ಯೋಗ್ಯ ವಸ್ತುಗಳು ರೂಪುಗೊಂಡಂತೆ ಮತ್ತು ಉಷ್ಣತಾ ನಿಯಂತ್ರಣ ಕಲೆ ಕರಗತವಾದಂತೆಲ್ಲ ಉಷ್ಣ ಲೋಹ ವಿದ್ಯೆಯ ತಂತ್ರಗಳೂ ಸುಧಾರಿತವಾಗಿ ಪರಿಪೂರ್ಣಗೊಂಡವು. 20ನೆಯ ಶತಮಾನದ ಮಧ್ಯಭಾಗದಲ್ಲಿ ಲೋಹೋತ್ಪತ್ತಿಗೆ ಇದೊಂದೇ ಪ್ರಮುಖ ವಿಧಾನವಾಗಿತ್ತು.

ಪ್ರಕ್ರಿಯೆಗಳು

[ಬದಲಾಯಿಸಿ]

ಲೋಹೋತ್ಪತ್ತಿಗೆ ಉನ್ನತ ಉಷ್ಣತೆಯನ್ನು ಬಳಸುವುದರಿಂದ ಹಲವು ಅನುಕೂಲಗಳಿವೆ. ಆಗ ರಾಸಾಯನಿಕ ಕ್ರಿಯಾವೇಗ ಹೆಚ್ಚುತ್ತದೆ. ಸಾಮಾನ್ಯ ಉಷ್ಣತೆಯಲ್ಲಿ ಇಂಗಾಲದಿಂದ ಸೀಸದ ಆಕ್ಸೈಡಿನ ಮತ್ತು ಮ್ಯಾಗ್ನೀಸಿಯಂನಿಂದ ಟಿಟ್ಯಾನಿ ಕ್ಲೋರೈಡಿನ ಅಪಕರ್ಷಣ ಮಂದಗತಿಯಲ್ಲಿ ಮುಂದುವರೆಯುವುದು. ಆದರೆ 600ಲಿ-800ಲಿಸೆ. ಉಷ್ಣತಾಮಿತಿಯಲ್ಲಿ ಗಣನೀಯವಾಗಿರುತ್ತದೆ. ರಾಸಾಯನಿಕ ಸಮಸ್ಥಿತಿ ಉಷ್ಣತೆಗೆ ಅನುಗುಣವಾಗಿರುವುದಷ್ಟೇ. ಉನ್ನತ ಉಷ್ಣತೆಯಲ್ಲಿ ಈ ಸಮತೋಲನ ಅಪೇಕ್ಷಿತ ದಿಕ್ಕಿನಲ್ಲಿ ವ್ಯತ್ಯಾಸವಾಗುವಂತೆ ಮಾಡಬಹುದು. ತತ್ಫಲವಾಗಿ ಕೆಳಮಟ್ಟದ ಉಷ್ಣದಲ್ಲಿ ಅಸಾಧ್ಯವೆನಿಸಿದ್ದ ಕ್ರಿಯೆಗಳು ಉನ್ನತ ಉಷ್ಣತೆಯಲ್ಲಿ ನಡೆಯುವಂತಾಗುವುವು. ಸುಮಾರು 900ಲಿ ಸೆ. ನಲ್ಲಿ ವಾಯುವಿರುವುದು ಸಾಧ್ಯವೇ ಇಲ್ಲ. ಆದರೆ ಉಷ್ಣತೆ ಹೆಚ್ಚಿದರೆ ಇದೇ ಕ್ರಿಯೆ ಸಹಜವಾಗಿ ಜರುಗುವುದು. ಅದಿರುಗಳನ್ನು ಅಪಕರ್ಷಿಸಿದಾಗ ಸಿಲಿಕಾ, ಅಲ್ಯೂಮಿನಾ, ಕ್ಯಾಲ್ಸಿಯಂ ಆಕ್ಸೈಡ್, ಫೆರಸ್ ಆಕ್ಸೈಡ್ ಇತ್ಯಾದಿ ಕಶ್ಮಲಗಳು ಅಪಕರ್ಷಿತವಾಗದೆ ಲೋಹದೊಂದಿಗೆ ಉಳಿದುಬಿಡುವುವು.ಆದಾಗ್ಯೂ ಲಭ್ಯವಾದ ಲೋಹ ದ್ರವ ಅಥವಾ ಆವಿಯ ರೂಪದಲ್ಲಿ ಇರುವುದರಿಂದ ಶೇಷವಸ್ತುಗಳಿಂದ ಅದನ್ನು ಬೇರ್ಪಡಿಸುವುದು ಸುಲಭ. 20ನೆಯ ಶತಮಾನದಲ್ಲಿ ಉಷ್ಣಲೋಹವಿದ್ಯಾ ಕ್ಷೇತ್ರದಲ್ಲಾಗಿರುವ ಅಗಾಧ ಪ್ರಗತಿಯ ಫಲವಾಗಿ ಈ ಕಲೆ ಇತರ ಆಧುನಿಕ ಲೋಹೋತ್ಪತ್ತಿ ವಿಧಾನಗಳ ಪೈಪೋಟಿಯನ್ನೂ ಸಹಿಸಿಕೊಂಡು ಜೀವಂತವಾಗಿದೆ. ಉನ್ನತ ಉಷ್ಣತೆಯಲ್ಲಿ ಜರುಗುವ ಕ್ರಿಯಾಸ್ವರೂಪದ ಅರಿವು, ಕುಲುಮೆಗಳಿಂದ ಉಷ್ಣ ಹಾಳಾಗದಂತೆ ಕಾಪಾಡುವ ಉತ್ತಮ ಅಸ್ತರಿಗಳ ತಯಾರಿಕೆ, ಕುಲುಮೆಗಳನ್ನು ಕಾಯಿಸಲು ವಿದ್ಯುವಿಧಾನದ ಬಳಕೆ, ಉಷ್ಣ ನಿಯಂತ್ರಿಸುವ ವಿದ್ಯುತ್ ಸಲಕರಣೆಗಳು, ಒತ್ತಡ ಮತ್ತು ನಿರ್ವಾತ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸಬಲ್ಲ ಯಂತ್ರೋಪಕರಣಗಳ ನಿರ್ಮಾಣ, ಅಗ್ಗದ ಬೆಲೆಯಲ್ಲಿ ಆಕ್ಸಿಜನ್ನಿನ ಪೂರೈಕೆ ಮೊದಲಾದ ಸುಧಾರಣೆಗಳು ಗಮನಾರ್ಹವಾದವು. 1925-58ರ ಅವಧಿಯಲ್ಲಿ ಕಬ್ಬಿಣೇತರ ಲೋಹಗಳ ಉತ್ಪಾದನೆಯಲ್ಲೇ ಅನುಷ್ಠಾನಕ್ಕೆ ಬಂದಿರುವ ಆಧುನಿಕ ವಿಧಾನಗಳು ಅನೇಕ. ಅವುಗಳಲ್ಲಿ ಕೆಲವನ್ನು ಮಾತ್ರ ಮುಂದೆ ಹೆಸರಿಸಲಾಗಿದೆ.ಸತುವಿನ ಅದಿರನ್ನು ಕರಗಿಸಲು ಅಹರ್ನಿಶಿ ಕೆಲಸ ಮಾಡುವ ನಿಲುಗುಲುಮೆ (ವರ್ಟಿಕಲ್ ರಿಟಾರ್ಟ್) ಬಳಕೆಗೆ ಬಂದಿದೆ[]. ಹೆಬ್ಬೆರಳು ಅಶುದ್ಧ ಸತುವಿನ ಸಂಸ್ಕರಣಕ್ಕೆ ಅಂಶಬಾಷ್ಪೀಭವನ ಪದ್ಧತಿಯನ್ನು ಜಾರಿಗೆ ತರಲಾಗಿದೆ. ನಿರ್ವಾತ ಕುಲುಮೆಯಲ್ಲಿ ಮ್ಯಾಗ್ನೀಸಿಯಂ ಮತ್ತು ಕ್ಯಾಲ್ಸಿಯಂ ಲೋಹಗಳನ್ನು ಅತ್ಯಾಧುನಿಕ ಕ್ರೋಲ್ ವಿಧಾನದಿಂದ ಉತ್ಪಾದಿಸಲಾಗುತ್ತಿದೆ. ಕೀಳುದರ್ಜೆಯ ನಿಕ್ಕಲ್ ಅದಿರುಗಳನ್ನು ಕರಗಿಸುವ ಸಲುವಾಗಿಯೇ ಆಕ್ಸಿಜನ್ನಿನಲ್ಲಿ ಉರಿಸುವ ಮಿಂಚಿನ ವಿಧಾನ (ಫ್ಲಾಶ್ ಸ್ಮೆಲ್ಟಿಂಗ್) ಹುಟ್ಟಿಕೊಂಡಿದೆ. ಹೆಬ್ಬೆರಳು ಸತುವಿನ ತಯಾರಿಕೆಗೂ ಊದುಕುಲುಮೆಯ ಅನ್ವಯ ಮತ್ತೊಂದು ಪ್ರಮುಖ ಮೈಲಿಗಲ್ಲು, ಯುರೇನಿಯಂ, ಕೋಬಾಲ್ಟ್, ಬೆಳ್ಳಿ, ಬಿಸ್ಮತ್, ಪಾದರಸ, ಮಾಲಿಬ್ಡಿನಂ, ಬೆರಿಲಿಯಂ, ಟಂಗ್‍ಸ್ಟನ್, ಚಿನ್ನ, ಜಿರ್ಕೋನಿಯಂ, ಟ್ಯಾಂಟಲಂ, ನಿಯೋಬಿಯಂ ಮತ್ತು ಇತರ ಅಪ್ರಧಾನ ಲೋಹಗಳೂ ಉಷ್ಣ ಲೋಹವಿದ್ಯಾ ವಿಧಾನದಿಂದಲೇ ತಯಾರಿಸಲ್ಪಡುತ್ತಿವೆ. ಕಬ್ಬಿಣ, ಉಕ್ಕು, ಫರೊಮ್ಯಾಂಗನೀಸ್ ಮತ್ತು ಫೆರೊಕ್ರೋಮ್ ಮಿಶ್ರಲೋಹಗಳು ಇತ್ಯಾದಿಗಳ ತಯಾರಿಕೆಗೆ ಸಂಪೂರ್ಣವಾಗಿ ಈ ವಿಧಾನವನ್ನು ಅವಲಂಬಿಸಿದೆ. ಅದಿರಿನಿಂದ ಲೋಹದವರೆಗೆ ಉತ್ಪಾದನಾ ಕ್ರಮ ಪೂರ್ತಿಯಾಗಿ ಉಷ್ಣಲೋಹ ವಿದ್ಯಾತಂತ್ರವಾಗಿರಬಹುದು. ಇಲ್ಲವೆ ಮೊದಲ ಹಂತಗಳಲ್ಲಿ ಮಾತ್ರ ಉನ್ನತ ಉಷ್ಣತೆ ಬಳಸಿ ಮುಂದೆ ಜಲಲೋಹತಂತ್ರವನ್ನಾಗಲೀ (ಹೈಡ್ರೋಮೆಟಲರ್ಜಿ)[] ಅಥವಾ ವಿದ್ಯುಲೋಹತಂತ್ರವನ್ನಾಗಲೀ (ಎಲೆಕ್ಟ್ರೋಮೆಟಲರ್ಜಿ) ಉಪಯೋಗಿಸಬಹುದುಂಟು.

ವಿಧಾನಗಳು

[ಬದಲಾಯಿಸಿ]

ಉಷ್ಣಲೋಹ ವಿದ್ಯಾ ವಿಧಾನಗಳು ಮೂರು ರೀತಿಯವಾಗಿರಬಹುದು: 1. ಅಣಿಗೊಳಿಸುವ ಕ್ರಿಯೆಗಳು( ಕಚ್ಚಾವಸ್ತುವನ್ನು ಮುಂದಿನ ಕ್ರಿಯಾ ಹಂತಗಳಿಗೆ ಅನುಗೊಳಿಸುವುದು ಇವುಗಳ ಕರ್ತವ್ಯ. ಸಲ್ಫೈಡ್ ಅದಿರುಗಳನ್ನು ಹುರಿದು ಆಕ್ಸೈಡುಗಳಾಗಿ ಪರಿವರ್ತಿಸುವುದು ಇದಕ್ಕೆ ಉದಾಹರಣೆ. 2. ಅಪಕರ್ಷಣ ವಿಧಿಗಳು(ಸಂಯುಕ್ತಗಳನ್ನು ಮೂಲ ಲೋಹಕ್ಕೆ ಮಾರ್ಪಡಿಸುವ ಘಟ್ಟವಿದು. ಹೆಮಟೈಟ್ ಅದಿರನ್ನು ಬೀಡು ಕಬ್ಬಿಣವಾಗಿ ಅಪಕರ್ಷಿಸುವುದು ಇದಕ್ಕೆ ನಿದರ್ಶನ. 3 ಸಂಸ್ಕರಣ ಕ್ರಿಯೆಗಳು(ಇವುಗಳ ಅನ್ವಯದಿಂದ ಅಶುದ್ಧ ಲೋಹದಲ್ಲಿರುವ ಕಲ್ಮಷಗಳನ್ನು ಹೋಗಲಾಡಿಸಿ ಅದರ ಶುದ್ಧತೆಯನ್ನು ಹೆಚ್ಚಿಸಲಾಗುವುದು. ಉದಾಹರಣೆಗೆ ಅಶುದ್ಧ ಸತುವನ್ನು ಕುದಿಸಿದಾಗ ಅದರಲ್ಲಿದ್ದ ಕಬ್ಬಿಣ, ಸೀಸ ಮತ್ತು ಕ್ಯಾಡ್ಮಿಯಂ ಲೋಹಗಳು ಆವಿಯ ರೂಪದಲ್ಲಿ ಪಾರಾಗುವುವು. ಹಿಂದುಳಿದ ಸತು ಹೆಚ್ಚು ಶುದ್ಧವಾಗಿರುವುದು. ಮೇಲ್ಕಂಡ ಮೂರು ಪ್ರಧಾನ ಕ್ರಿಯಾವಿಧಿಗಳನ್ನು ಮುಂದೆ ಒಂದೊಂದಾಗಿ ವಿವೇಚಿಸಲಾಗುವುದು.

ಅಣಿಗೊಳಿಸುವ ಕ್ರಿಯೆ

[ಬದಲಾಯಿಸಿ]

1. ಅಣಿಗೊಳಿಸುವ ಕ್ರಿಯೆಗಳು. ಸಲ್ಫೈಡುಗಳ ಹುರಿಯುವಿಕೆ: ಲೋಹದ ಸಲ್ಫೈಡುಗಳನ್ನು ಗಾಳಿ ಅಥವಾ ಆಕ್ಸಿಜನ್‍ನಿನಲ್ಲಿ ಹುರಿದಾಗ ಆಯಾ ಲೋಹದ ಆಕ್ಸೈಡುಗಳು ಅಥವಾ ಸಲ್ಫೈಡುಗಳಾಗಿ ಗಂಧಕದ ಡೈಆಕ್ಸೈಡ್ ಬಿಡುಗಡೆಯಾಗುವುದು. ಎಚ್ಚರದಿಂದ ಹುರಿದರೆ ಆಗುವ ಪ್ರಯೋಜನಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ. (1) ಖನಿಜ ವಸ್ತು ಮುಂದೆ ಇಂಗಾಲ ಅಥವಾ ಇಂಗಾಲದ ಮಾನಾಕ್ಸೈಡಿನಿಂದ ಅಪಕರ್ಷಿತವಾಗಲು ಅನುಕೂಲಿಸುವುದು. ಲೋಹದ ಸಲ್ಫೈಡುಗಳಿಗಿಂತ ಆಕ್ಸೈಡುಗಳು ಈ ಅಪಕರ್ಷಣಕಾರಿಗಳ ವರ್ತನೆಗೆ ಸುಲಭವಾಗಿ ಮಣಿಯುವುವು.(2) ಅದಿರಿನಲ್ಲಿ ಘನ ಲೋಹಗಳಿರಬಹುದು, ಅವು ತಮ್ಮ ಸಲ್ಫೈಡುಗಳ ದ್ರವ ಮಿಶ್ರಣವಾಗಲು (ಇದನ್ನು ಮೆಟ್ಟೆ ಎಂದು ಕರೆಯುವರು) ಸಾಕಾಗುವಷ್ಟು ಮಾತ್ರ ಗಂಧಕ ಉಳಿಯುವುದು. (3) ಲಭ್ಯವಸ್ತು ಆಮ್ಲಾವಶೋಷಣೆಗೆ ಮತ್ತು ವಿದ್ಯುದ್ವಿಶ್ಲೇಷಣೆಗೆ ಹದಗೊಳ್ಳುವುದು. ಹೇಗೆಂದರೆ ಅವಶೋಷಣೆಗೆ ಸಲ್‍ಫ್ಯೂರಿಕ್ ಆಮ್ಲವನ್ನು ಉಪಯೋಗಿಸುವುದು ಸರ್ವೇಸಾಮಾನ್ಯ. ಅದರಲ್ಲಿ ಲೋಹದ ಆಕ್ಸೈಡುಗಳು ಲೀನವಾಗುವಷ್ಟು ಸರಾಗವಾಗಿ ಲೋಹದ ಸಲ್ಫೈಡುಗಳು ಆಗುವುದಿಲ್ಲ.(4) ಬಿಡುಗಡೆಯಾದ ಗಂಧಕದ ಡೈಆಕ್ಸೈಡನ್ನು ದ್ರವರೂಪಕ್ಕೆ ತರಬಹುದು ಅಥವಾ ಸಲ್ಫ್ಯೂರಿಕ್ ಆಮ್ಲವಾಗಿ ಪರಿವರ್ತಿಸಬಹುದು. ಈ ಉಪ ಉದ್ಯಮ ಲಾಭದಾಯಕವಾಗಿರಲಿ ಅಥವಾ ಬಿಡಲಿ ಕಾನೂನಿನ ಪ್ರಕಾರ ಅದರ ವಿನಿಯೋಗವಾಗಲೇಬೇಕು. ಇಲ್ಲದಿದ್ದರೆ ಅದರ ಸೇವನೆಯಿಂದ ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಧಕ್ಕೆಯಾಗುತ್ತದೆ. ಉಷ್ಣತಾ ಮಿತಿ ಹುರಿಯಲು ಬಹಳ ಪ್ರಶಸ್ತವಾದುದು. ರೋಸ್ಟರಿನಿಂದ ಹೊರಬೀಳುವ ಅನಿಲದಲ್ಲಿ ಆಕ್ಸಿಜನ್ ಕೊಂಚವಾದರೂ ಇರುವಂತೆ ನೋಡಿಕೊಂಡರೆ, ಈ ಕ್ರಿಯೆ ನಡೆದಾಗ ಉಷ್ಣ ಹುಟ್ಟುವುದು. ಸ್ವಲ್ಪ ಗಂಧಕದ ಟ್ರೈ ಆಕ್ಸೈಡ್ ಇದ್ದೇ ತೀರುವುದು. ಉಷ್ಣವೇರಿದಂತೆ ಈ ಕ್ರಿಯೆಯ ಸಮತೋಲನ ಎಡದಿಂದ ಬಲಕ್ಕೆ ಸ್ಥಿತ್ಯಂತರವಾಗುವುದು. 1.000ಲಿಸೆ. ಸನಿಹದಲ್ಲಿ ಗಂಧಕದ ಟ್ರೈ ಆಕ್ಸೈಡಿನ ಪ್ರಮಾಣ ಅತ್ಯಲ್ಪವಾಗಿರುತ್ತದೆ. ಕಡಿಮೆ ಉಷ್ಣತೆಯಲ್ಲಿ ಅದರ ಪ್ರಮಾಣ ಹೆಚ್ಚಾಗಿರುವುದರಿಂದ ಆಕ್ಸೈಡುಗಳಿಗಿಂತ ಸಲ್ಫೇಟುಗಳಾಗುವುದು ಹೆಚ್ಚು ಸಂಭವನೀಯ. ಸಾಮಾನ್ಯ ಬಳಕೆಯಲ್ಲಿರುವ ಹುರಿಯೋಡುಗಳಲ್ಲಿ ಮಲ್ಟಿಪಲ್ ಹಾರ್ತ್, ಫ್ಲೂಯಿಡ್ ಬೆಡ್ ಮತ್ತು ಫ್ಲಾಷ್ ರೋಸ್ಟರುಗಳೆಂದು ಮೂರು ವಿಧಗಳಿವೆ. ರೋಟರಿಗೆ ಒದಗಿಸುವ ಕಚ್ಚಾವಸ್ತು ನಯವಾದ ಹುಡಿಯಂತಿರಬೇಕು. ಅಂದರೆ 10ನೆಯ ಸಂಖ್ಯೆಯ ಜರಡಿಯ ಮೂಲಕ ಹರಿದು ಹೋಗುವಷ್ಟು ಸೂಕ್ಷ್ಮವಾಗಿದ್ದರೆ ಸಾಕು. ಹಾಗಿದ್ದರೆ ಹುರಿಯಲ್ಪಟ್ಟ ವಸ್ತುವೂ ಅಷ್ಟೇ ನಯವಾದ ಪುಡಿಯಾಗಿರುವುದು. ರೋಸ್ಟರು ಹೊರಹಾಕುವ ಅನಿಲಗಳಲ್ಲಿ ದೂಳಿನ ಅಂಶ ಹೆಚ್ಚಾಗಿರುತ್ತದೆ. ಇದನ್ನು ಸಂಗ್ರಹಿಸಿ ರೋಸ್ಟರಿಗೇ ಹಿಂತಿರುಗಿಸುವ ಪ್ರತ್ಯೇಕ ವ್ಯವಸ್ಥೆಯಿರುವುದು. ಉಷ್ಣಲೋಹ ವಿದ್ಯಾಕ್ಷೇತ್ರಕ್ಕೆ ಫ್ಲೂಯಿಡ್ ಬೆಡ್ ರೋಸ್ಟರಿನ ಆಗಮನವಾದದ್ದು ಎರಡನೆಯ ಮಹಾಯುದ್ಧ ತರುವಾಯ. ಘನ ಅನಿಲ ಕ್ರಿಯೆಗಳನ್ನು ನಡೆಸಲು ಇದು ಬಲು ಸಹಾಯಕ. ರೋಟರಿನ ತಳ ಸರಂಧ್ರ. ಇದರ ಮೂಲಕ ಗಾಳಿಯನ್ನು ಹಾಯಿಸಲಾಗುವುದು. ಹುರಿಯಲ್ಪಡುತ್ತಿರುವ ಕಣಗಳು ಗಾಳಿಯ ವೇಗದಿಂದ ಬುಡಮೇಲಾಗಿ ನಿಕಟ ಮಿಶ್ರಣ ಲಭಿಸುವುದು. ಅತಿ ಸೂಕ್ಷ್ಮಕಣಗಳು ಮಾತ್ರ ಅನಿಲಪ್ರವಾಹದೊಡನೆ ಪಾರಾಗುವುದು. ತಿರುಪುವಾಹಕವೊಂದು (ಸ್ಕ್ರೂ ಕನ್ವೇಯರ್) ಸಾಂಕ್ರೀಕರಿಸಿದ ಸಲ್ಫೈಡಿನ ಅದಿರನ್ನು ನಿರಂತರವಾಗಿ ಪೂರೈಸುತ್ತಿರುತ್ತದೆ. ಬೆಡ್ಡಿನ ಮೇಲ್ಭಾಗದಲ್ಲಿರುವ ನಿಯೋಜಿತ ದ್ವಾರದ ಮೂಲಕ ಹುರಿಯಲ್ಪಟ್ಟ ದ್ರವವಸ್ತು ನಿರ್ಗಮಿಸುತ್ತದೆ. ಸಲ್ಫೈಡುಗಳ ದಹನದಿಂದ ಕ್ರಿಯೆಗೆ ಅಗತ್ಯವಾದ ಉಷ್ಣ ತಾನಾಗಿಯೇ ಒದಗುವುದು[].[]

ಉಲ್ಲೇಖನಗಳು

[ಬದಲಾಯಿಸಿ]