ಸದಸ್ಯ:Anusha chinnu/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರಿಸ್ಟೀನ ವಿಕ್ಟೋರಿಯಾ ಗ್ರಿಮ್ಮೀಯವರು ಮಾರ್ಚ್ ೧೨,೧೯೯೪ರಲ್ಲಿ ಮಾರ್ಲ್ಟನ್,ಹೊಸ ಜೆರ್ಸಿ,ಯು.ಎಸ್ ನಲ್ಲಿ ಜನಿಸಿದರು.ಇವರು ವೃತ್ತಿಪರ ಗಾಯಕಿಯಾಗಿದ್ದರು.ಇವರು ಪಿಯಾನೊ,ಗಿಟಾರ್,ಡ್ರಮ್ಸನ್ನು ನುಡಿಸುತ್ತಿದ್ದರು.ಇವರು೨೦೦೯ರಿಂದ ೨೦೧೬ರ ವರೆಗೆ ಉನ್ನತ ಗಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.ಇವರು ಕ್ರಿಯೇಟಿವ್ ಏಜೆನ್ಸಿ ಹಾಗು ಐಲ್ಯಾಂಡ್ ಲೇಬಲ್ಸ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.ಇವರು ಆಡಂ ಲೀವೈನ್ ,ಬಿಫ಼ೋರ್ ಯು ಎಝಿಟ್,ಸೆಲಿನಾ ಗೋಮೆಜ಼್ ಎಂಬ ಸಹಾಯಕ ಕೃತ್ಯಗಳನ್ನು ಬರೆದ್ದಿದ್ದರೆ.ಇವರು ಅಮೇರಿಕಾದಲ್ಲಿ ಹಾಡುಗಳನ್ನು ಸಂಯೋಜಿಸುವುದಲ್ಲದೆ ಹಾಡುತ್ತಿದ್ದರು.ಇವರು ಎನ್ ಬಿ ಸಿ ಕಾಂಪಿಟಿಷನಲ್ಲಿ ಭಾಗವಹಿಸಿದ್ದರಿಂದ ಇವರನ್ನು ಗುರುತಿಸುತ್ತಾರೆ.ಜೂನ್ ೨೦೧೧ರಲ್ಲಿ, ಇವರು ತಮ್ಮ ಚೊಚ್ಚಲ ವಿಸ್ತರಿಸಿದ ಹಾಡಾಗಿರುವ "ಫ಼ೈಂಡ್ ಮಿ" ಯನ್ನು ಬಿಡುಗಡೆಮಾಡುತ್ತಾರೆ.ಇವರ "ವಿತ್ ಲವ್" ಎಂಬ ಸ್ಟುಡಿಯೊ ಆಲ್ಬ್ಂಅನ್ನು ೨೦೧೩ರಲ್ಲಿ ಬಿಡುಗಡೆಮಾಡುತ್ತಾರೆ.ಇವರ "ಸೈಡ್ ಎ" ಎಂಬ ಎರಡನೆಯ ವಿಸ್ತರಿಸಿದ ಹಾಡನ್ನು ೨೦೧೬ರಲ್ಲಿ ಬಿಡುಗಡೆ ಮಾಡುತ್ತಾರೆ.ಇವರು ೨೦೧೪ರಲ್ಲಿ "ದಿ ವಾಯ್ಸ್"ನ ಆರನೆ ಋತುವಿನಲ್ಲಿ ಭಾಗವಹಿಸಿ ಮೂರನೆ ಸ್ತಾನವನ್ನು ಪಡೆಯುತ್ತಾರೆ.ಇವರ ಗುರುಗಳಾದ ಆಡೆಂ ಲೀವೈನ್ರವರು ಆ ಪ್ರದರ್ಶನದ ಕೊನೆಯಲ್ಲಿ ಪ್ರದರ್ಷಣದ ಪರಿಣಾಮವನ್ನು ಲೆಕ್ಕಿಸದೆ ಗ್ರಿಮ್ಮೀಯವರನ್ನು ತಮ್ಮ ೨೨೨ಲೇಬಲ್ ರೆಕಾರ್ಡ್ ನಲ್ಲಿ ಹಾಡಲು ಪ್ರಸ್ತಾಪಿಸಿದರು.ಅದಲ್ಲದೆ ಆಡೆಂಮ್ ಲೀವೈನ್ ರವರು ಗ್ರಿಮ್ಮೀಯವರಿಗೆ ತಮ್ಮ ಮತ್ತೊಂದು ಶೀರ್ಷಿಕೆಯಾದ "ಯಂಗ್ ಮನಿ ಮನರಂಜನೆ"ಯನ್ನು ಹಾಡುವ ಪ್ರಸ್ತಾಪವನ್ನು ಮುಂದಿಟ್ಟರು.ಅದರಂತೆ ಗ್ರಿಮ್ಮೀಯವರು ಆ ಪ್ರಸ್ತಾಪವನ್ನು ಒಪ್ಪಿಕೊಂಡರು.ಇವರು ಮರಣಹೊಂದುವ ಮುನ್ನ ಕಡಿಮೆ ಸಮಯದಲ್ಲಿ ಐಲ್ಯಾಂಡ್ ರೆಕಾರ್ಡ್ಗೆ ಹಾಡುವಂತೆ ಒಪ್ಪಂದಕ್ಕೆ ಸಹಿ ಮಾಡಿದ್ದರು.ಇವರು ಜೂನ್ ೧೦ ೨೦೧೬ರಂದು ಒರ್ಲ್ಯ್ಂಡೋ ಫ಼ೋರಿಡಾದಲ್ಲಿ ಹಾಡುತ್ತಿರುವಾಗ ಗುರಿಯಿಟ್ಟ ಗುಂಡೇಟಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ್ಡಿದ್ದರಿಂದ ಸಾವನ್ನಪ್ಪಿದ್ದರು. ಆರಂಭಿಕ ಜೀವನ: ಗ್ರಿಮ್ಮೀಯವರು ಟೀನಾ ಹಾಗು ಆಲ್ಬರ್ಟ್ ಎಂಬ ದಂಪತಿಗಳಿಗೆ ಜನಿಸಿದರು.ಗ್ರಿಮ್ಮೀಯವರ ತಾಯಿಯವರು ತಮಗೆ ಕ್ಯಾನ್ಸರ್ ಎಂಬ ಮೃತ್ಯು ರೋಗ ಇದೆ ಎಂದು ಅರಿಯುವ ಮುನ್ನ ಸ್ವಾಗತಗಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಗ್ರಿಮ್ಮೀಯವರ ತಂದೆಯವರು,ವೆರಿಝೋನ್ ಕಮ್ಯೂನಿಕೇಷನ್ಸ್ ನಲ್ಲಿ ೨೦೧೪ರವರೆಗೆ ಕಾರ್ಯ ನಿರ್ವಹಿಸಿದ್ದರೆ.ಗ್ರಿಮ್ಮೀಯವರು ಇಟ್ಯಾಲಿಯನ್ ಮತ್ತು ರೊಮಾನಿಯನ್ ಮೂಲದವರು.ಇವರು ಬೆಳೆದ್ದದ್ದು,ಮಾರ್ಲ್ಟನ್ ನ ಹೊಸ ಜೆರ್ಸಿಯಲ್ಲಿ.ಇವರು ತಮ್ಮ ಶಿಕ್ಷಣವನ್ನು "ಬೇಪಿಸ್ಟ್ ರೀಜನಲ್ ಎಲಿಮೆಂಟರಿ ಶಾಲೆ" ಹಾಗೂ "ಛೆರೋಕಿ ಪೌಢಶಾಲೆ"ಯಲ್ಲಿ ಪಡೆದರು.ಅವರು ತಮ್ಮನ್ನು ಕ್ರಿಸ್ಟೀನಾ ಎಂದು ಗುರುತಿಸಿಕೊಂಡರು.ಇವರ ಕುಟುಂಬ ಮೊದಲು ಮೆಡ್ ಫೋರ್ಟಲ್ಲಿರುವ ಫೆಲೋಷಿಪ್ ಮೈತ್ರಿ ಚಾಪೆಲ್ ನಲ್ಲಿ ಹಾಜರಾಗಿದ್ದರು. ನಂತರ ಇವರು ಕುಟುಂಬದ ಸಮೇತ ಲಾಸ್ ಏಂಜಲ್ಸ್ ಗೆ ತೆರಳಿದರು.ಗ್ರಿಮ್ಮೀಯವರ ತಂದೆ ಗ್ರಿಮ್ಮೀಯವರಲ್ಲಿರುವ ಹಾಡುವ ಪ್ರತಿಭೆಯನ್ನು ೬ ವಯಸ್ಸಿನ್ನಲ್ಲಿ ಗುರುತುಹಿಡಿದರು.ನಂತರ ಗ್ರಿಮ್ಮೀಯವರು ಹತ್ತನೇ ವಯಸ್ಸಿನಲ್ಲಿರುವಾಗ ಪಿಯಾನೊ ನುಡಿಸಲು ಆರಂಭಿಸಿದರು. ವೃತ್ತಿ ಜೀವನ: ೨೦೦೯-೨೦೧೦: ಗ್ರಿಮ್ಮೀ ಯವರು ಯುನಿಸೆಪ್ ಚಾರಿಟಿ ಸ್ಪರ್ಧೆಯಲ್ಲಿ ಹಾಗು ಸೆಲೇನ ಗೋಮ್ಜ಼್ ಅಂಡ್ ದ ಸೀನ್ ನಲ್ಲಿ ಹಿನ್ನಲೆ ಗಾಯಕಿಯಾಗಿ ಹಾಡನ್ನು ಹಾಡಿದ್ದಾರೆ.ಇವರು ಮೊದಲ ಯ್ಯೂ ಟ್ಯೂಬ್ ಸ್ಟಾರ್ಸ್ ಗಾಗಿ ಏರ್ಪಡಿಸಿದ್ದ "ಡಿಗಿ ಟೂರ್"ನಲ್ಲಿ ಕಾಣಿಸಿಕೊಂಡರು.ಗೋಮೆಜ಼್ ರವರು ಗ್ರಿಮ್ಮೀ ಯವರ ಮೆಂಟರಾಗಿದ್ದರು.ಗ್ರಿಮ್ಮೀಯವರು ಸೋಷೆಲ್ ೫೦ ರಲ್ಲಿ ಕಾಣಿಸಿಗೊಂಡಿದ್ದರು.ಗ್ರಿಮ್ಮೀಯವರು ಗೋಮೆಜ಼್ ರವರೊಡನೆ ೬ವಾರ ಪ್ರವಾಸ ಮಾಡಿದ್ದರು.ಯೂ ಟ್ಯೂಬ್ ಗುರುತಿಸುವಿಕೆ ಹಾಗು ಆವಿಷ್ಕಾರ-ಗ್ರಿಮ್ಮೀಯವರು ಯೂ ಟ್ಯೂಬ್ ಚಾನೆಲ್ ನಲ್ಲಿ ೨೦೦೯ರಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಲು ಆರಂಭಿಸಿದರು.ಆಗ ಅವರು ೧೫ಪ್ರಾಯದವರು.ಅವರ ಮೊದಲನೆ ವಿಡಿಯೋ "ಹನ್ನಾಹ್ ಮೋಂಟನ" ವಿನ "ಡೋಂಟ್ ವಾನ್ನ ಬೀ ಟೋರ್ನ್"ಎಂಬ ಮುಖ್ಯ ಪಟವಾಗಿತ್ತು.ಇವರು ೨೦೦೯ರಲ್ಲಿ "ಪಾರ್ಟಿ ಇನ್ ದ ಯು.ಎಸ್.ಎ" ಎಂಬ ಮುಖ್ಯ ಪುಟಕ್ಕೆ ಗುರುತು ಪಡೆದರು.೨೦೧೩ರಷ್ಟರಲ್ಲಿ ಇವರು ೩೭೫ ಮಿಲಿಯನ್ ವೀಕ್ಷಕರು ಹಾಗು ೨ಮಿಲಿಯನ್ ಗೂ ಹೆಚ್ಚು ಚಂದಾದಾರರಿದ್ದರು.ಇದು ಗ್ರಿಮ್ಮೀಯವರನ್ನು ಯೂ ಟ್ಯೂಬಿನಲ್ಲಿ ನಾಲ್ಕನೇಯ ಅಧಿಕ ಚಂದಾದಾರರುಳ್ಳ ಗಾಯಕಿಯಾಗಿ ಗುರುತಿಸಿಗೊಂಡರು.ಅದಲ್ಲದೆ ಇವರನ್ನು ನನ್ನ ಯೂ ಟ್ಯೂಬ್ ಸ್ಪರ್ಧೆಯಲ್ಲಿ ಸೆಲೆನ ಗೊಮೆಜ಼್, ರಿಹಾನ್ನ,ಜಸ್ಟಿನ್ ಬೈಬೆರ್ ರನ್ನು ಸೋಲಿಸಿ ಎರಡನೆ ಸ್ತಾನ ಪಡೆದರು.ಗ್ರಿಮ್ಮೀಯವರ ಗುರುತಿವಿಕೆ ಯ್ಯೂ ಟ್ಯೂಬ್ ನಲ್ಲಿ ಬೆಳೆಯುತ್ತಿದ್ದಂತೆಯೇ ಇವರನ್ನು ಗೋಮೇಜ಼್ ರವರು ಆವಿಷ್ಕಾರಿಸಿದರು. ೨೦೧೧:ಗ್ರಿಮ್ಮೀ ಯವರು ಜೂನ್ ೧೪ ೨೦೧೧ರಲ್ಲಿ "ಫೈಂಡ್ ಮಿ"ಎಂಬ ವಿಸ್ತಾರವಾದ ಹಾಡನ್ನು ಬಿಡುಗಡೆ ಮಾಡಿದರು.ಜೂನ್ ೧೧ ರಂದು ತಮ್ಮ ಚೊಚ್ಚಲ ಏಕ ಹಾಡು 'ಅಡ್ವೈಸ್"ಅನ್ನು ಸೆನ್ ಬಾಬಾಸ್ ರವರ ನಿರ್ದೇಶನದ ಮ್ಯೂಸಿಕ್ ವಿಡಿಯೋ ಜೊತೆಗೆ ರೇಡಿಯೋ ಡಿಸ್ನೀಗೆ ಯ್ಯೂ ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದರು.ಗ್ರಿಮ್ಮೀಯವರು "ನಾಟ್ ಫ್ರೆಜೇಲ್" ಎಂಬ ಹಾಡನ್ನು ಅಮೇರಿಕಾ ಮ್ಯೂಸಿಕ್ ಅವಾರ್ಡ್ ೨೦೧೧ ರಲ್ಲಿ ಹಾಡಿದರು. ೨೦೧೨-೧೩:ಗ್ರಿಮ್ಮೀಯವರು ಲಾಸ್ ಏಂಜಲ್ಸ್ ಗೆ ತೆರಳಿದ ನಂತರ,ಕ್ರಿಯೇಟಿವ್ ಆರ್ಟಿಸ್ಟ್ಸ್ ಏಜಂಸಿಯೊಡನೆ ಒಪ್ಪಂದ ಮಾಡಿಕೊಂಡರು.ಅವರು ತಮ್ಮ ತವರೂರಾದ ಜೆರ್ಸಿಯ ಯುವಕರ "ರೈಸಿಂಗ್ ಟೈಡ್"ಎಂಬ ಹೊಸ ಬ್ಯಾಂಡೊಡನೆ ಹಾಡುವುದಾಗಿ ಬಹಿರಂಗ ಪಡೆಸಿದರು.ನಂತರ ಅವರು ಗೋಮೆಜ಼್ ರೊಂದಿಗೆ ೨ನೇ ಆಲ್ಬ್ಂಆದ "ವಿತ್ ಲವ್"ಎಂಬ ಹಾಡನ್ನು ಹಾಡಿ ಆಗಸ್ಟ್ ೬, ೨೦೧೩ರಂದು ಬಿಡುಗಡೆ ಮಾಡಿದರು.ಅಕ್ಟೋಬರ್ ೩ರಂದು "ಟೆಲ್ ಮೈ ಮಾಮಾ"ಎಂಬ ಮ್ಯೂಸಿಕ್ ವಿಡಿಯೋಗೆ ಬಿಲ್ ಬೋರ್ಡ್.ಕಾಂನಲ್ಲಿ ವಿಷೇಶ ಪ್ರಧಾನ ನೀಡಲಾಗಿತ್ತು. ಧ್ವನಿಮೂದ್ರಿಕೆ:"ವಿತ್ ಲವ್","ಫೈಂಡ್ ಮೀ","ಸೈಡ್ ಎ","ಅಡ್ವೈಸ್","ಲಯ್ಯರ್ ಲಯ್ಯರ್","ಟೆಲ್ ಮೈ ಮಾಮಾ". ಪ್ರಶಸ್ತಿಗಳು:"ಅಮೇರಿಕನ್ ಮ್ಯೂಸಿಕ್ ಅವಾರ್ಡ್","ಐ ಹಾರ್ಟ್ ರೇಡಿಯೋ ರೈಸಿಂಗ್ ಸ್ಟಾರ್". ನಾಮಿನೇಷನ್ಗಳು:೨೦೧೩ ರಲ್ಲಿ "ಡಿಸ್ನೀ ಮ್ಯೂಸಿಕ್ ಅವಾರ್ಡ್",೨೦೧೫ರಲ್ಲಿ "ಟೀನ್ ಚಾಯ್ಸ್ ಅವಾರ್ಡ್".