ವಿಷಯಕ್ಕೆ ಹೋಗು

ಸದಸ್ಯ:ನಾ ಶ್ರೀ ಉಜಿರೆ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿಲಾಯುಗ

[ಬದಲಾಯಿಸಿ]
  • ಮಹಾ ಶಿಲಾಯುಗದ ಸಂಸ್ಕೃತಿಯ ಅವಶೇಷಗಳಾದ ಋುಷಿ ಗುಹೆಗಳು ಕೋಡೋಂ ಬೇಳೂರು ಪಂಚಾಯಿತಿಯ ಪರಪ್ಪ ಗ್ರಾಮದ ಬಾನದಲ್ಲಿ ಪತ್ತೆಯಾಗಿವೆ. ಕೆ.ಎಂ. ಗೋಪಾಲಕೃಷ್ಣನ್‌ ಎಂಬವರ ಹಿತ್ತಿಲನ್ನು ಸ್ವಚ್ಛಗೊಳಿಸುತ್ತಿದ್ದಾಗ ಎರಡು ಋುಷಿ ಗುಹೆಗಳು ಪತ್ತೆಯಾಗಿವೆ.
  • ಪಾರೆಯಲ್ಲಿ ಮರವೊಂದು ಬೆಳೆದು ದೊಡ್ಡದಾಗಿದ್ದು, ಇದು ಪಾರೆಯಲ್ಲಿ ಇಷ್ಟು ಚೆನ್ನಾಗಿ ಬೆಳೆಯಲು ಕಾರಣ ಏನು ಎಂದು ತಿಳಿಯಲು ಕಡಿದು ತೆರವುಗೊಳಿಸಿದಾಗ ಋುಷಿ ಗುಹೆಯ ಮೇಲ್ಭಾಗದಲ್ಲಿರುವ ದ್ವಾರ ಹಾಗೂ ಬಳಿಕ ಋುಷಿ ಗುಹೆ ಪತ್ತೆಯಾಗಿವೆ.
  • ಶಿಲಾ ಯುಗದ ಬಳಿಕ ಕಬ್ಬಿಣದ ಉಪಯೋಗ ಆರಂಭಿಸಿದ ಕಾಲಘಟ್ಟದಲ್ಲಿ ಜೀವಿಸಿದ್ದವರ ಸಂಸ್ಕೃತಿಯ ಗುರುತುಗಳು ಇದಾಗಿವೆ ಎಂದು ಋುಷಿ ಗುಹೆಗಳನ್ನು ಸಂದರ್ಶಿಸಿದ ಇತಿಹಾಸ ಸಂಶೋಧಕರು, ಕಾಞಂಗಾಡ್‌ ನೆಹರೂ ಕಲೆ ಮತ್ತು ವಿಜ್ಞಾನ ಕಾಲೇಜಿನ ಅಧ್ಯಾಪಕರಾದ ನಂದ ಕುಮಾರ್‌ ಕೋರೋತ್‌ ಹಾಗೂ ಸಿ.ಪಿ. ರಾಜೀವನ್‌ ಅಭಿಪ್ರಾಯಪಟ್ಟಿದ್ದಾರೆ.

ಗೋಪಾಲಕೃಷ್ಣನ್‌ ಅವರ ಪುತ್ರಿ, ಇತಿಹಾಸ ವಿದ್ಯಾರ್ಥಿನಿ ಶ್ರುತಿ ಈ ಗುಹೆಗಳ ಬಗ್ಗೆ ಇತಿಹಾಸ ಸಂಶೋಧಕರಿಗೆ ಮಾಹಿತಿ ನೀಡಿದ್ದರು.

  • ಕಾಸರಗೋಡು ಜಿಲ್ಲೆಯ ಪಣಙಾಡ್‌, ಬಂಗಳ, ತಲಯಡ್ಕ, ಉಮ್ಮಿಚ್ಚಿಪೊಯಿಲ್‌, ಪಾಯಂ, ಪಿಲಿಕ್ಕೋಡ್‌, ಚಂದ್ರವಯಲ್‌, ಮಾವುಳ್ಳಚ್ಚಾಲ್‌, ತಿಮಿರಿ ಮೊದಲಾ ಕಡೆಗಳಲ್ಲಿ ಪತ್ತೆಯಾದ ಗುಹೆಗಳೊಂದಿಗೆ ಸಾಮ್ಯತೆ ಇರುವ ಋುಷಿಗುಹೆಗಳು ಇದಾಗಿವೆ. ಮೇಲ್ಭಾಗದಲ್ಲಿ ಕವಾಟವಿದೆ. ಒಳಗೆ ಮಣ್ಣಿನ ಪಾತ್ರೆಗಳು, ಅದರಲ್ಲಿರುವ ವಸ್ತುಗಳಿಗೆ ಮಳೆ-ಬಿಸಿಲು ತಾಗದಂತೆ ಸುರಕ್ಷಿತವಾಗಿರುವಂತೆ ಗುಹೆಗಳನ್ನು ನಿರ್ಮಿಸಲಾಗಿದೆ.
  • ಮಹಾ ಶಿಲಾಯುಗ ಸಂಸ್ಕೃತಿ ಕಾಲ ಘಟ್ಟದಲ್ಲಿ ನಿರ್ಮಿಸಲಾದ ಇತರ ಋುಷಿ ಗುಹೆಗಳಂತೆ ಬಾನದ ಋುಷಿ ಗುಹೆಯಿಂದಲೂ ವರ್ಷಗಳ ಹಿಂದೆ ವಿವಿಧ ಆಕೃತಿಯಲ್ಲಿರುವ ಮಣ್ಣಿನ ಪಾತ್ರೆಗಳು ಲಭಿಸಿರಬಹುದು. ಋುಷಿಗಳ ಸಂಕೇತ ಎಂಬಂತೆ ಪ್ರದೇಶ ವಾಸಿಗಳು ಋುಷಿ ಗುಹೆಗಳನ್ನು ಕಾಣುತ್ತಾರೆಯೇ ವಿನಃ ಇತರ ಚಾರಿತ್ರಿಕ ಪ್ರಾಧಾನ್ಯತೆ ಪ್ರದೇಶ ನಿವಾಸಿಗಳಿಗೆ ತಿಳಿದಿಲ್ಲ.

ಋುಷಿ ಗುಹೆಗಳು, ಹಲವೆಡೆಗಳಲ್ಲಿ ಕಂಡುಬರುವ ಪ್ರಾಚೀನ ಶಿಲಾಚಿತ್ರಗಳು ಬಾನ ಮಹಾ ಶಿಲಾ ಯುಗದ ಮುನ್ನವೇ ಜನವಾಸ ಕೇಂದ್ರವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿವೆ ಎಂದು ಇತಿಹಾಸ ಸಂಶೋಧಕರು ತಿಳಿಸಿದ್ದಾರೆ.

  • ಪರಪ್ಪದಲ್ಲಿ ಮೂರನೇ ಶತಮಾನದ ಮೊದಲೇ ಜೂತ ವ್ಯಾಪಾರಿಗಳು ಕಬ್ಬಿಣ ರಫ್ತು ಮಾಡುತ್ತಿದ್ದರು ಎಂಬುದಕ್ಕೆ ನುಣುಪಾದ ಪಾರೆಗಳು, ಗುಣಮಟ್ಟದ ಕಬ್ಬಿಣದ ಆಯುಧಗಳನ್ನು ಬಳಸಿ ನಿರ್ಮಿಸಿದ ಋುಷಿ ಗುಹೆಗಳು ಸಾಕ್ಷಿಯಾಗಿವೆ. ಕ್ರಿಸ್ತ ಶಕ ಮೂರನೇ ಶತಮಾನ ಹಾಗೂ ಕ್ರಿಸ್ತ ಪೂರ್ವ ಮೂರನೇ ಶತಮಾನದ ಮಧ್ಯೆ ಮಹಾ ಶಿಲಾ ಯುಗದ ಸ್ಮಾರಕಗಳನ್ನು ನಿರ್ಮಿಸಿರುವುದಾಗಿ ಪ್ರಾಚ್ಯವಸ್ತು ಸಂಶೋಧಕರು ಕಾಲ ನಿರ್ಣಯ ವಿಜ್ಞಾನದ ಸಹಾಯದೊಂದಿಗೆ ತಿಳಿಸಿದ್ದಾರೆ.

೧. https://m.vijaykarnataka.com/district/kasaragodu/shilayuga/articleshow/63079823.cms

ಆದಿ ಮಾನವನ ಶಿಲಾಯುಧ

[ಬದಲಾಯಿಸಿ]
  • ಮಾನವರು ಬರವಣಿಗೆ ಕಲೆಯನ್ನು ಕಂಡು ಹಿಡಿಯುವ ಪೂರ್ವದ ಅವಧಿಯನ್ನು ಇತಿಹಾಸ ಪೂರ್ವಕಾಲ (ಪ್ರಾಗೈತಿಹಾಸ) ಎಂದು ಕರೆಯಲಾಗುತ್ತದೆ. ಈ ದೀರ್ಘ ಅವಧಿಯಲ್ಲಿ ಕಂಡು ಬಂದ ಶಿಲಾಯುಗದಲ್ಲಿ ಹಳೆ ಶಿಲಾಯುಗವೂ (ಆದಿ ಶಿಲಾಯುಗ) ಒಂದು.
  • ಇತಿಹಾಸಪೂರ್ವ ಕಾಲಘಟ್ಟದ ಮಾನವರ ಅಳಿವು, ಉಳಿವಿಗೆ ಪ್ರಾಚೀನ ಕಾಲದ ಶಿಲಾ ಪರಿಕರಗಳು ಅನಿವಾರ್ಯವೆಂಬಂತೆ ಕಂಡು ಬರುತ್ತವೆ. ಆ ಕಾಲದ ಜನರು, ಶಿಲೆ, ಕಟ್ಟಿಗೆ ಹಾಗೂ ಪ್ರಾಣಿಗಳ ಮೂಳೆಗಳಿಂದ ತಯಾರಿಸಿದ ಆಯುಧಗಳನ್ನೇ ಉಪಯೋಗಿಸುತ್ತಿದ್ದರು.
  • ಆದರೂ ಶಿಲೆಯಲ್ಲಿ ಸಿದ್ಧಪಡಿಸಿದ ಪರಿಕರಗಳು ಇತಿಹಾಸದ ಕಾಲಗರ್ಭದಲ್ಲಿ ಅಡಗಿದ ಸಂಗತಿಯನ್ನು ಪ್ರಚುರ ಪಡಿಸುವಲ್ಲಿ ಇವತ್ತಿಗೂ ನಮಗೆ ಅಧ್ಯಯನದ ಸಾಕ್ಷ್ಯಾಧಾರಗಳಾಗಿ ಉಳಿದುಕೊಂಡಿವೆ.
  • ಹಳೆ ಶಿಲಾಯುಗದ ಜನಾಂಗ ಮರ ಕಡಿಯಲು, ಸೌದೆ ಒಡೆಯಲು ಕಲ್ಲಿನಲ್ಲಿ ಮಾಡಿದ ಕೊಡಲಿಗಳನ್ನೇ ಉಪಯೋಗಿಸುತ್ತಿತ್ತು. ಆ ಶಿಲಾಯುಧಗಳು ನಯನಾಜೂಕಾಗಿ ಇರದೆ ಒರಟಾಗಿ ಇರುತ್ತಿದ್ದವು. ಕಪ್ಪು ಶಿಲೆಯಲ್ಲಷ್ಟೇ ಅವನ್ನು ತಯಾರಿಸುತ್ತಿದ್ದರು ಎಂಬುದು ಸಾಕ್ಷಾಧಾರಗಳಿಂದಲೇ ತಿಳಿದು ಬರುತ್ತದೆ.
  • ಆದಿ ಮಾನವರು ಆಹಾರಕ್ಕಾಗಿ ಬೇಟೆಯಾಡಲು ತಯಾರಿಸುತ್ತಿದ್ದ ಹಾಗೂ ಬಳಸುತ್ತಿದ್ದ ಶಿಲಾ ಪರಿಕರಗಳು ಕನ್ನಡನಾಡಿನ ಹಲವು ನೆಲೆಗಳಲ್ಲಿ ದೊರೆತಿವೆ. ಇದಕ್ಕೆ ಸಾಕ್ಷಿ ಎಂಬಂತೆ ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಕರಡಕಲ್ ಸೀಮೆ ವ್ಯಾಪ್ತಿಯಲ್ಲಿ ಹಳೆ ಶಿಲಾಯುಗದ ಜನ ಬಳಸುತ್ತಿದ್ದ ಶಿಲಾಯುಧಗಳು ದೊರೆತಿವೆ.
  • ಕರಡಕಲ್‌ನ ಶಿಕ್ಷಕ ಮಹಾಂತೇಶ ಸುರಪುರ ಎಂಬವರ ಹೊಲದಲ್ಲಿ (ಭಿಲ್ಲಮನ ಗುಡ್ಡದ ಹತ್ತಿರ) ಮಾಗಿ ಉಳುಮೆ ಮಾಡುವ ಸಂದರ್ಭದಲ್ಲಿ ಸಿಕ್ಕ ಕಪ್ಪು ಶಿಲೆಯ ಕೊಡಲಿಯಾಕಾರದ ಎರಡು ಶಿಲಾಯುಧಗಳು ಹಾಗೂ ಬೆಣಚುಕಲ್ಲಿನ ಒಂದು ಗುಂಡು ಕುತೂಹಲ ಮೂಡಿಸುತ್ತದೆ. ಪ್ರಾಗೈತಿಹಾಸಿಕ ರಚನೆಗೆ ಮುನ್ನುಡಿ ಬರೆಯುವ ಇಂತಹ ನೆಲೆಗಳ ಮೇಲೆ ಪ್ರಾಕ್ತನಾ ತಜ್ಞರು ಗಮನ ಹರಿಸಬೇಕಿದೆ.

ಉಲ್ಲೇಖ:

೧. https://www.prajavani.net/article/%E0%B2%86%E0%B2%A6%E0%B2%BF-%E0%B2%AE%E0%B2%BE%E0%B2%A8%E0%B2%B5%E0%%A8-%E0%B2%B6%E0%B2%BF%E0%B2%B2%E0%B2%BE%E0%B2%AF%E0%B3%81%E0%B2%A7