ಸಂಗೀತಾ ಈಶ್ವರನ್
ಸಂಗೀತಾ ಈಶ್ವರನ್ ಅವರು ಭಾರತೀಯ ಭರತನಾಟ್ಯ ನೃತ್ಯಗಾರ್ತಿ, ಸಂಶೋಧನಾ ವಿದ್ವಾಂಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ. [೧] ಅವರಿಗೆ, ಯುವ ನೃತ್ಯಗಾರರಿಗೆ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. [೨] [೩]
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಈಶ್ವರನ್ ಭಾರತದ ಚೆನ್ನೈನಲ್ಲಿರುವ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ (ಎಮ್.ಸಿ .ಸಿ) ಗಣಿತಶಾಸ್ತ್ರದಲ್ಲಿ ಪದವಿ ಪಡೆದರು. [೪] ಅವರು ಐದನೇ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ಔಪಚಾರಿಕ ತರಬೇತಿಯನ್ನು ಪಡೆದರು. [೨] ಕಲಾನಿಧಿ ನಾರಾಯಣನ್ ಅವರು ಸ್ಥಾಪಿಸಿದ ನೃತ್ಯ ಶಾಲೆಯಾದ ಅಭಿಯಾನ ಸುಧಾರದ ಮೊದಲ ವಿದ್ಯಾರ್ಥಿಗಳಲ್ಲಿ ಒಬ್ಬರಾದರು. [೫]ಅವರು ನೃತ್ಯ, ಅಭಿನಯ, ಕಲರಿಪಯಟ್ಟು, ಕೂಚಿಪುಡಿ, ಕರ್ನಾಟಕ ಸಂಗೀತ ಮತ್ತು ನಟ್ಟುವಂಗಂ ವಾದ್ಯದಂತಹ ಲಲಿತಕಲೆಗಳಲ್ಲಿ ತರಬೇತಿ ಪಡೆದಿದ್ದರು. [೨]
ವೃತ್ತಿ
[ಬದಲಾಯಿಸಿ]ಈಶ್ವರನ ಅವರು ಕತ್ರಾಡಿ ಎನ್‌ಜಿಒದ ಸ್ಥಾಪಕರಾಗಿದ್ದರು. [೬]ಇವರು ಸಂಘರ್ಷ ಪರಿಹಾರದ ಉದ್ದೇಶಕ್ಕಾಗಿ ಲಲಿತಕಲೆಗಳನ್ನು ಬಳಸಿಕೊಳ್ಳುವ ಕತ್ರಾಡಿ ವಿಧಾನವನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಇವರು ಶಿಕ್ಷಣ ನೀಡುವ ಮೂಲಕ ಅಂಚಿನಲ್ಲಿರುವ ಮತ್ತು ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸುತ್ತಾರೆ. [೭] [೮] ಈಶ್ವರನ್ ಅವರು ದೌರ್ಜನ್ಯಕ್ಕೊಳಗಾದ ಮಕ್ಕಳು, ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಬೀದಿ ಮಕ್ಕಳು, ಮಾದಕ ವ್ಯಸನಿಗಳು ಮತ್ತು ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರೊಂದಿಗೆ ಕೆಲಸ ಮಾಡಿದ್ದಾರೆ. ಸಾಮಾಜಿಕ ಸುಧಾರಣೆಯನ್ನು ತರುವ ಪ್ರಯತ್ನದಲ್ಲಿ ನೃತ್ಯ ಮತ್ತು ರಂಗಭೂಮಿಯನ್ನು ಬಳಸುತ್ತಾರೆ. [೨] [೯] ಕತ್ರಾಡಿ ಅವರು ಅಮೇರಿಕನ್ ಹಣಕಾಸು ವಿಶ್ಲೇಷಕರಾಗಿ ಸಾಮಾಜಿಕ ಕಾರ್ಯಕರ್ತೆ ಲಿಜ್ ಹೇನ್ಸ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. [೧೦] ಅವರು ವಿಂಡ್ ಡ್ಯಾನ್ಸರ್ಸ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಇದು ಮಕ್ಕಳ ಶಿಕ್ಷಣಕ್ಕಾಗಿ ಜಾನಪದ ಕಲೆಗಳನ್ನು ಬಳಸಿಕೊಳ್ಳುತ್ತದೆ. [೧೧] ಕೂತು ಕಲಾವಿದ ತಿಲಗಾವತಿಯವರ ಸಹಯೋಗದೊಂದಿಗೆ ಈ ಟ್ರಸ್ಟ್ ಕೆಲಸ ಮಾಡುತ್ತದೆ. [೧೨]
ಈಶ್ವರನ್ ತಮ್ಮ ಯೋಜನೆಗಳಲ್ಲಿ ಚಿಕಿತ್ಸಿಕ ಮತ್ತು ಜಾಗೃತಿ ವೇದಿಕೆಗಳೊಂದಿಗೆ ಸಹಕರಿಸುತ್ತಾರೆ. ಈ ಕಾರಣದಿಂದಾಗಿ ಅವರನ್ನು "ಚಿಂತನಾ ನರ್ತಕಿ" ಎಂದು ವಿವರಿಸಲಾಗಿದೆ ಮತ್ತು ಸೌಂದರ್ಯದ ಆಕರ್ಷಣೆಯ ಸೀಮಿತ ವ್ಯಾಪ್ತಿಯನ್ನು ಮೀರಿ ಶಾಸ್ತ್ರೀಯ ನೃತ್ಯವನ್ನು ತಂದ ಕೀರ್ತಿಗೆ ಪಾತ್ರರಾಗಿದ್ದಾರೆ. [೯] ಅವರು ಯೂತ್ ಫಾರ್ ಪೀಸ್ ಎಂಬ ಯುನೆಸ್ಕೋ ಉಪಕ್ರಮದ ಸಂಯೋಜಕರಾಗಿದ್ದರು ಮತ್ತು ಮೆಕ್ಸಿಕೋ, ಬ್ರೆಜಿಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿದರು. ಇವರು ಹ್ಯಾಂಡಿಕ್ಯಾಪ್ ಇಂಟರ್‌ನ್ಯಾಶನಲ್ ವರ್ಲ್ಡ್ ವಿಷನ್ ಇಂಟರ್‌ನ್ಯಾಷನಲ್ ಮತ್ತು ಆಕ್ಸ್‌ಫ್ಯಾಮ್ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳೊಂದಿಗೆ (ಎನ್‌ಜಿಒ) ಸಹಕರಿಸಿದ್ದಾರೆ.[೧೩] [೯] ಅವರು ದೇಶ್ ಎಂಬ ಎನ.ಜಿ ಒ ನೊಂದಿಗೆ ಸಹ ಸಂಬಂಧ ಹೊಂದಿದ್ದರು. ಎಚ್‌ಐವಿ/ಏಡ್ಸ್ ರೋಗಿಗಳ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಕೆಲಸ ಮಾಡಿದರು. [೯]ಇವರು ಭಾರತದಲ್ಲಿ ಕೋವಿಡ್ - ೧೯ ವಲಸೆ ಬಿಕ್ಕಟ್ಟಿನ ಸಂದರ್ಭದಲ್ಲಿ ಚೆನ್ನೈ ವಲಸೆ ಕಾರ್ಯಪಡೆಯೊಂದಿಗೆ ಸ್ವಯಂಸೇವಕರಾಗಿದ್ದರು. [೧೪] [೧೫]
ಅವರು ೨೦೦೮ ರಿಂದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್‌ನಲ್ಲಿ ಫೆಲೋಶಿಪ್ ಅನ್ನು ಹೊಂದಿದ್ದಾರೆ. ಮತ್ತು ಏಷ್ಯಾ ಫೌಂಡೇಶನ್‌ನಲ್ಲಿ ಫೆಲೋಶಿಪ್ ಅನ್ನು ಹೊಂದಿದ್ದಾರೆ. [೧೬] [೯] ಇದಕ್ಕಾಗಿ ಅವರು ಕಾರ್ಯಕ್ರಮದ ಭಾಗವಾಗಿ ಥೈಲ್ಯಾಂಡ್, ಮ್ಯಾನ್ಮಾರ್, ಕಾಂಬೋಡಿಯಾ ಮತ್ತು ಇಂಡೋನೇಷ್ಯಾದಲ್ಲಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ. [೨] [೯]
ಉಲ್ಲೇಖಗಳು
[ಬದಲಾಯಿಸಿ]- ↑ Sivashankar, Nithya (30 November 2011). "Making a song and dance of it". The Hindu (in Indian English). ISSN 0971-751X. Retrieved 30 December 2020.
- ↑ ೨.೦ ೨.೧ ೨.೨ ೨.೩ ೨.೪ Sivashankar, Nithya (30 November 2011). "Making a song and dance of it". The Hindu (in Indian English). ISSN 0971-751X. Retrieved 30 December 2020.Sivashankar, Nithya (30 November 2011). "Making a song and dance of it". The Hindu. ISSN 0971-751X. Retrieved 30 December 2020.
- ↑ "Sangeeta Isvaran". Nature Conservation Foundation. Retrieved 30 December 2020.
- ↑ Devika, V. R (21 March 2019). "Where Koothu makes village girls liberated". The Hindu (in Indian English). ISSN 0971-751X. Retrieved 31 December 2020.
- ↑ Srikanth, Rupa (30 May 2013). "Ode to Muruga". The Hindu (in Indian English). ISSN 0971-751X. Retrieved 31 December 2020.
- ↑ Shekar, Anjana (30 May 2020). "In Chennai, migrant crisis made more difficult with the language barrier". The News Minute (in ಇಂಗ್ಲಿಷ್). Retrieved 31 December 2020.
- ↑ "Sangeeta Isvaran". Nature Conservation Foundation. Retrieved 30 December 2020."Sangeeta Isvaran". Nature Conservation Foundation. Retrieved 30 December 2020.
- ↑ Vijay, Hema (21 January 2012). "With society as stage". Deccan Herald (in ಇಂಗ್ಲಿಷ್). Archived from the original on 31 December 2020.
- ↑ ೯.೦ ೯.೧ ೯.೨ ೯.೩ ೯.೪ ೯.೫ Vijay, Hema (21 January 2012). "With society as stage". Deccan Herald (in ಇಂಗ್ಲಿಷ್). Archived from the original on 31 December 2020.Vijay, Hema (21 January 2012). "With society as stage". Deccan Herald. Archived from the original on 31 December 2020.
- ↑ Shivram, Praveena (23 March 2019). "Disc dance revolution with Bharatanatyam and Ultimate Frisbee". The Hindu (in Indian English). ISSN 0971-751X. Retrieved 31 December 2020.
- ↑ Subramanian, Lakshmi (6 December 2015). "Touch and feel". The Week. Retrieved 1 January 2021.
- ↑ Devika, V. R (21 March 2019). "Where Koothu makes village girls liberated". The Hindu (in Indian English). ISSN 0971-751X. Retrieved 31 December 2020.Devika, V. R (21 March 2019). "Where Koothu makes village girls liberated". The Hindu. ISSN 0971-751X. Retrieved 31 December 2020.
- ↑ Sivashankar, Nithya (30 November 2011). "Making a song and dance of it". The Hindu (in Indian English). ISSN 0971-751X. Retrieved 30 December 2020.Sivashankar, Nithya (30 November 2011). "Making a song and dance of it". The Hindu. ISSN 0971-751X. Retrieved 30 December 2020.
- ↑ Shekar, Anjana (30 May 2020). "In Chennai, migrant crisis made more difficult with the language barrier". The News Minute (in ಇಂಗ್ಲಿಷ್). Retrieved 31 December 2020.Shekar, Anjana (30 May 2020). "In Chennai, migrant crisis made more difficult with the language barrier". The News Minute. Retrieved 31 December 2020.
- ↑ Ashok, Sowmiya (2 June 2020). "No space on trains, no rented homes to go back to: From Chennai to Gurugram, workers left in limbo". Scroll.in (in ಅಮೆರಿಕನ್ ಇಂಗ್ಲಿಷ್). Retrieved 31 December 2020.
- ↑ "Sangeeta Isvaran". Indian Council for Cultural Relations. Retrieved 31 December 2020.