ಶ್ರೀಕರ್ ಎಲ್.ಭಂಡಾರಕರ್

ವಿಕಿಪೀಡಿಯ ಇಂದ
Jump to navigation Jump to search
ಶ್ರೀಕರ್ ಎಲ್.ಭಂಡಾರಕರ್[೧]

ಶ್ರೀಕರ್ ಎಲ್.ಭಂಡಾರಕರ್ ಅವರು ಲೇಖಕರು, ಅಂಕಣ ಬರಹಗಾರರು, ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತ್ತಕೋತ್ತರ ಅಧ್ಯಯನ ವಿಭಾಗದಲ್ಲಿ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[೨]ಆಳ್ವಾಸ್ ನ್ಯೂಸಿಯಂ ಭಾರತದ ಮೊದಲ ನ್ಯೂಸಿಯಂ[೩] ಹಾಗೂ ಪ್ರಪಂಚದ ಎರಡನೆಯ ನ್ಯೂಸಿಯಂ. ವಾಷಿಂಗ್ಟನ್ ನಲ್ಲಿನ ನ್ಯೂಸಿಯಂ ಪ್ರಪಂಚದ ಮೊದಲ ನ್ಯೂಸಿಯಂ.[೪]

ಜನನ[ಬದಲಾಯಿಸಿ]

ಇವರು ೧೨ ಮೇ ೧೯೩೯ ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ತಂದೆ ಬಿ.ಲಕ್ಷ್ಮಣ ರಾವ್ ತಾಯಿ ಸುನಂದರಾವ್ ರವರ ಪುತ್ರ. [೫]

ವಿದ್ಯಾಭ್ಯಾಸ[ಬದಲಾಯಿಸಿ]

 • ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಿಂದ ಎಸ್ಸೆಸ್ಸೆಲ್ಸಿ ತೇರ್ಗಡೆಯಾದರು.
 • ೧೯೬೦ ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಐಚ್ಛಿಕ ವಿಷಯಗಳಲ್ಲೊಂದಾಗಿ ಪ್ರಾವಿಣ್ಯಕ್ಕಾಗಿ ಘಟಿಕೋತ್ಸವದಲ್ಲಿ ಕುಲಾಧಿಪತಿ ಜಯಚಾಮರಾಜ ಒಡೆಯರಿಂದ ಬಿ.ಎ. ಪದವಿ ಪಡೆದರು.
 • ೧೯೬೨ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ರಾಜನೀತಿಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದರು.

ವೃತ್ತಿ ಜೀವನ[ಬದಲಾಯಿಸಿ]

ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಿಂದ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಮುಂಚಿನಿಂದಲು ಬರಹಗಾರರಾಗಿದ್ದಾರೆ. ಅಲ್ಲಿಯ ಸಂತ ಫಿಲೋಮಿನಾ ಕಾಲೇಜಲ್ಲಿ ಇಂಟರ್ಮಿಡಿಯೇಟ್ ಕಲಿತಾಗಿಂದ ಹವ್ಯಾಸಿ ಪತ್ರಕರ್ತರಾಗಿದ್ದರು. ಅಮೇರಿಕಾದ ದಿ ಸ್ಯಾನ್ ಪ್ರಾನ್ಸಿಸ್ಕೊ ಕ್ರಾನಿಕಲ್ ದೈನಿಕದಲ್ಲಿ ಲೇಖನಗಳು ಅಚ್ಚಾದದ್ದು ಆ ನಿಟ್ಟಿನಿಂದಲೆ. ಬಿ.ಎ.ವ್ಯಾಸಂಗದ ಕಾಲದಲ್ಲಿ ಬೆಂಗಳೂರಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ ಪುಣೆಯ ಸಕಾಳ್ ದೈನಿಕದ ಬಾತ್ಮೀದಾರ. ಅನಂತರವೂ ವಾರ್ತಪತ್ರಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಂ.ಎ ವಿದ್ಯಾರ್ಥಿಯಾಗಿದ್ದಾಗ ಮೈಸೂರು ಪತ್ರಿಕೆ ದೈನಿಕದ ವರದಿಗಾರರಾಗಿದ್ದರು. ೧೯೬೨ ರಲ್ಲಿ ಬೆಂಗಳೂರಿನ ಸಂಯುಕ್ತ ಕರ್ನಾಟಕದ ಸಂಪಾದಕೀಯ ವಿಭಾಗದಲ್ಲಿ ವೃತ್ತಿಪರತೆ ಪ್ರಾರಂಭಿಸಿದರು. ೧೯೬೩ ರಿಂದ ೬೯ ರವರೆಗೆ ಮಣಿಪಾಲದ ದಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನಿನ ಲೋಕ ಸಮಪರ್ಕಾಧಿಯಾಗಿ ದಿ ಅಕಾಡೆಮಿ ಬುಲೆಟಿನ್ ಮಾಸಪತ್ರಿಕೆ ಮತ್ತು ಹೊಸ ಮಣಿಪಾಲ್ ರೆಕಾರ್ಡ್ ವಾರಪ್ರಿಕೆಯ ಸಂಪಾದಕರಾಗಿದ್ದರು. ಬೆಂಗಳೂರಿನ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್,ಕನ್ನಡ ಪ್ರಭ ಮತ್ತು ಇಂಡಿಯನ್ ಎಕ್ಸ್ಪ್ರೆಸ್ ವರದಿಗಾರರಾಗಿದ್ದರು. ೧೯೭೧ ರಿಂದ ೧೭೭೩ರವರೆಗೆ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮೊದಲ ಉಪನ್ಯಾಸಕರಾಗಿದ್ದರು. ಮಹಾರಾಜ ಕಾಲೇಜಲ್ಲೂ ಆ ಅವಧಿಯಲ್ಲಿ, ಮಂಗಳೂರು ಮತ್ತು ಭಾರತೀಯ ವಿಧ್ಯಾಭವನದಲ್ಲಿ ೧೯೭೩-೭೪ ಹಾಗೂ ೧೯೭೫-೭೬ ರಲ್ಲಿ ಕೂಡ ಕಾರ್ಯನಿರ್ವಹಿಸಿದ್ದಾರೆ.[೬] ೧೯೭೫ ರಂದ ಬೆಂಳೂರಿನಲ್ಲಿ ಭಾಷಾಂತರಕಾರನಾಗಿ ಸ್ವೋದ್ಯೋಗ ಮಾಡಿದರು. ಮುಕ್ತ ಭಾಷಾಂತರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪ್ರಾಪ್ತಿಯಾಗಿದೆ. ೨೦೧೮ ಜನವರಿ ೧೬ ರಿಂದ ಅವರಿಗೆ ಪ್ರಸಕ್ತ ಹುದ್ದೆಗಳಿಸಿದ್ದಾರೆ. ವಿಶ್ವದ ಎರಡನೇಯ ನ್ಯೂಸಿಯಂ ಆಳ್ವಾಸ್ ನಲ್ಲಿ ಸಂಯೋಜಕರಾಗಿ ,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ ವಿಭಾದಲ್ಲಿ ಕಾರ್ಯ ನಿರ್ವಹಿಸುತ್ತದ್ದಾರೆ . ೧೯೬೦ರಿಂದ ಸಂಗ್ರಹಿಸಿದ ವಿವಿಧ ಪತ್ರಿಕೆಗಳ ಭಂಡಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ್ಷ ಡಾ.ಮೋಹನ್ ಆಳ್ವರಿಗೆ ಸಮರ್ಪಣೆ ಮಾಡಿದ್ದಾರೆ.[೭] [೮]

ಕೃತಿಗಳು[ಬದಲಾಯಿಸಿ]

 • .ಕಸ್ತೂರಿ ಶ್ರೀನಿವಾಸನ್(ಇಂಗ್ಲಿಷ್ ಹಾಗೂ ಕನ್ನಡ) 'ದಿ ಹಿಂದೂ' ಸಂಪಾದಕರ ಜೀವನ ಕಥನ.
 • .ಪತ್ರಿಕಾ ಪ್ರಪಂಚ (ಬರಹಗಳ ಸಂಕಲನ)
 • .ಆಧುನಿಕ ಭಾರತದಲ್ಲಿ ಪತ್ರಿಕೋದ್ಯಮ(ಭಾಷಾಂತರ)
 • .ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಕರಣೆಯಲ್ಲಿ ಬೆಂಗಳೂರು ಪಟ್ಟಣ ಮತ್ತು ಗ್ರಾಮಾಂತರ ಜಿಲ್ಲೆಗಳ ಪತ್ರಿಕಾ ಇತಿಹಾಸ.

ಪರಿಸಮಾಪ್ತಿ[ಬದಲಾಯಿಸಿ]

 • ಚಿಕ್ಕಂದಿನಲ್ಲಿ ಅಣ್ಣನ ಹಸ್ತ ಲಿಖಿತ ಪತ್ರಿಕೆಯ ಪ್ರಭಾವಕೊಳಗಾದರು. ಮಾಧ್ಯಮಿಕ ವಿದ್ಯಾರ್ಥಿ ಇದ್ದಾಗಿನಿಂದ ಪತ್ರಿಕೆಗಳನ್ನು ಒದುವುದು ಇವರ ಹವ್ಯಾಸ.ಅನ್ಯ ಉದ್ಯೋಗದಲ್ಲಿ ತೊಡಗದೆ ಪತ್ರಿಕ ರಂಗದಲ್ಲಿ ಆಸಕ್ತಿಯನ್ನು ಹೊಂದಿದ್ದರು. ೧೯೫೬ ರಿಂದ ಸೈಕಲಿಗರಾಗಿರದ್ದರು. ೧೯೬೩ ರಿಂದ ರೇಡಿಯೋ ಕೇಳುವ ಹವ್ಯಾಸವನ್ನು ಹೊಂದಿದ್ದರು. ದಿನಕ್ಕೆ ಬೇರೆ ಬೇರೆ ೧೫ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಹೊಂದಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

 1. "Search results for "Shrikar l.bandarkar" - Wikimedia Commons". commons.wikimedia.org. Retrieved 22 February 2020.
 2. "Newseum | Alva's College, Moodbidri". Retrieved 22 February 2020.
 3. "Newseum". Retrieved 22 February 2020.
 4. "Washington's Newseum Offered a Lot, but Was Flawed from the Start". National Review. 16 December 2019. Retrieved 22 February 2020.
 5. https://alvascollege.com/college/facilities/newseum/img_0377/
 6. https://picpanzee.com/tag/alvasnewseum
 7. https://www.youtube.com/watch?v=1eEXJvTq_Ww
 8. https://www.youtube.com/watch?v=azlp3wDxbYM