ಶಿರಸಿ ಮಾರಿಕಾಂಬಾ ಜಾತ್ರೆ

ವಿಕಿಪೀಡಿಯ ಇಂದ
Jump to navigation Jump to search

ಶಿರಸಿ ಮಾರಿಕಾಂಬಾ ಜಾತ್ರೆ ಅಥವಾ ಶಿರಸಿ ಮಾರಿ ಜಾತ್ರೆ ಅಥವಾ ಶಿರಸಿ ಮಾರೆಮ್ಮನವರ ಜಾತ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವ. ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ನಡೆಯುತ್ತದೆ. ಮುನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬರುತ್ತಿರುವ ಈ ಜಾತ್ರೆಯನ್ನು ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂದು ಹೇಳಲಾಗುತ್ತದೆ.

ಇತಿಹಾಸ[ಬದಲಾಯಿಸಿ]

ಅಂದಿನ ವಿರಾಟ ನಗರವಾಗಿದ್ದ ಈಗಿನ ಹಾನಗಲ್‌ಲಿನಲ್ಲಿ ಧರ್ಮರಾಯನು ದೇವಿಯನ್ನು ಸ್ತುತಿಸಿದನು ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಚಾಲುಕ್ಯರ ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ.

ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಇಟ್ಟಿದ್ದರು. ಅದನ್ನು ಕೆಲವು ಕಳ್ಳರು ಅಪಹರಿಸಿ ಶಿರಸಿಗೆ ತಂದರು. ಆಭರಣಗಳನ್ನು ಹಂಚಿಕೊಂಡ ನಂತರ ಆ ವಿಗ್ರಹವನ್ನು ಪೆಟ್ಟಿಗೆಯಲ್ಲಿಟ್ಟು ಕೆರೆಗೆ ಎಸೆದರು. ಆ ಕೆರೆಯು ದೇವಿಕೆರೆ ಎಂದು ಹೆಸರಾಗಿದೆ.

ಬಸವ ಎಂಬ ಭಕ್ತನೊಬ್ಬ ಪ್ರತಿ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗುತ್ತಿದ್ದ. ಆದರೆ ಒಂದು ಬಾರಿ ಅವನನ್ನು ಜನರು ತಡೆದು ಪೀಡಿಸಿದರು. ಅದರಿಂದ ಬೇಸರಗೊಂಡು ಅವನು ಮುಂದಿನ ವರ್ಷ ಜಾತ್ರೆಗೆ ಹೋಗದೆ ಶಿರಸಿಯಲ್ಲಿಯೇ ದೇವಿಯ ಆರಾಧನೆ ಮಾಡಿದನು. ಒಂದು ರಾತ್ರಿ ದೇವಿ ಅವನಿಗೆ ನಾನು ದ್ಯಾಮವ್ವ. ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ. ನನ್ನನ್ನು ಮೇಲೆತ್ತು ಎಂದು ಹೇಳಿದಂತೆ ಕನಸು ಬಿತ್ತು. ಅವನು ಅದನ್ನು ಆ ಊರಿನ ಪ್ರಮುಖರಿಗೆ ತಿಳಿಸಿದನು. ಅದರಂತೆ ಊರವರು ಕೆರೆಯ ಸುತ್ತ ಸೇರಲಾಗಿ ಬಸವನು ಮೂರು ಸುತ್ತು ಕೆರೆಯನ್ನು ಸುತ್ತಿ ದೇವಿಯನ್ನು ಸ್ತುತಿಸಿದನು. ಕೆರೆಯ ಮೇಲೆ ತೇಲುತ್ತಿರುವ ಪೆಟ್ಟಿಗೆಯು ಕಂಡುಬಂದಿತು. ಅದರಲ್ಲಿನ ವಿಗ್ರಹದ ಭಾಗಗಳನ್ನು ಒಟ್ಟು ಸೇರಿಸಲಾಗಿ ದೇವಿಯ ವಿಗ್ರಹವು ಮೂಡಿಬಂದಿತು.

ನಂದಿಕೇಶ್ವರ ಮಠದ ಸ್ವಾಮಿಗಳು ದೇವಿಯ ವಿಗ್ರಹವನ್ನು ಶಿರಸಿಯಲ್ಲಿ ಸ್ಥಾಪಿಸಲು ಅನುಮತಿ ಕೋರಿ ಸೋಂದಾ ಸಂಸ್ಥಾನದ ರಾಜರಾಗಿದ್ದ ಮಹಾರಾಜಾ ಸದಾಶಿವರಾವ್ ೨ ಅವರನ್ನು ಕೇಳಿದರು. ಅದರಂತೆ ಕ್ರಿ.ಶ. ೧೬೮೯ರಲ್ಲಿ, ಅಂದರೆ ಶಾಲಿವಾಹನ ಶಕೆ ೧೬೧೧ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿಯಂದು, ಮಂಗಳವಾರ ದೇವಿಯನ್ನು ಈಗಿನ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.[೧]

ಮಾರಿಕಾಂಬೆಯ ವಿಗ್ರಹ[ಬದಲಾಯಿಸಿ]

ಕೆಂಪು ಚಂದನದ ಕಲ್ಪನೆಯಿಂದ ಕಡೆದ ಅಷ್ಟಭುಜವುಳ್ಳ ಏಳು ಅಡಿ ಎತ್ತರದ ಕಲಾಪೂರ್ಣ ವಿಗ್ರಹ, ಕೆಂಪು ಮೈಬಣ್ಣ, ಮಂದಹಾಸದ ಮುಖಾರವಿಂದ, ಶಕ್ತಿ ಮತ್ತು ಹಸ್ತದಲ್ಲಿರುವ ಎಲ್ಲಾ ಆಯುಧಗಳಿಂದಲೂ ದೇವಿ ಪರಿಭೂಷಿತಳು. ಬಲಮುರಿ ಶಂಖವೂ ಮಾರಿಕಾಂಬೆಯ ಬಲಹಸ್ತವೊಂದರದಲ್ಲಿದೆ. ಶಿರಸಿಯ ಧಾರ್ಮಿಕ ಪಂಗಡವರು, ಶಿರಸಿಯ ವೈಭವಕ್ಕೆ ಮತ್ತು ಸಂಪನ್ಮೂಲಕ್ಕೆ ತಾಯಿಯ ಬಲಮುರಿ ದರ್ಶನವೇ ಕಾರಣವೆಂದು ಬಲವಾಗಿ ನಂಬಿದ್ದಾರೆ. ಇದರ ಸ್ಥಾಪನೆ ಸುಮಾರು, ಕ್ರಿ. ಶ. ೧೬೮೯ ರಲ್ಲಿ ಆಯಿತು. ಮೈಸೂರಿನ ಭವಾನಿ, ಕೊಲ್ಲೂರಿನ ಮೂಕಾಂಬಿಕೆ, ಶಿರಸಿಯ ಮಾರಿಕಾಂಬೆ ಇವರೆಲ್ಲಾ ಅಕ್ಕ-ತಂಗಿಯರೆಂದು ಹೇಳುತ್ತಾರೆ.

ಜಾತ್ರೆಯ ವಿಧಿ-ವಿಧಾನಗಳು[ಬದಲಾಯಿಸಿ]

ವೇದಾಧ್ಯಯನದ ಹಂಬಲದಿಂದ ಸುಳ್ಳುಹೇಳಿ ಮದುವೆಯಾದ ಮಾದಿಗರ ಹುಡುಗನಿಂದ ಮೋಸ ಹೋದ ಬ್ರಾಹ್ಮಣ ಕನ್ಯೆ, ಸಿಟ್ಟಿಗೆದ್ದು ಆತನನ್ನು ಉರಿವ ಬೆಂಕಿಗೆ ಎಸೆದು, ತಾನೂ ಸತ್ತುಹೋದ ಕತೆಯ ಒಂದು ಸಾಂಕೇತಿಕ ಭೂಮಿಕೆಯೇ ಈ ಸ್ಥಳದ ಜಾತ್ರೆಯ ವಿಧಿ-ವಿಧಾನಗಳಾಗಿವೆ.

ಹೊರಬೀಡು[ಬದಲಾಯಿಸಿ]

ರಥ ತಯಾರಿಕೆ[ಬದಲಾಯಿಸಿ]

ಅಂಕೆ ಹಾಕುವುದು[ಬದಲಾಯಿಸಿ]

ಮೇಟಿ ದೀಪ[ಬದಲಾಯಿಸಿ]

ಲಗ್ನ[ಬದಲಾಯಿಸಿ]

ಲಗ್ನದಿಂದ ಜಾತ್ರೆಯ ಆರಂಭ. ಈ ದಿನವೇ ದೇವಿಯ ಪ್ರತಿಷ್ಠೆಯಾಗಿ ಲಗ್ನದ ಕಾರ್ಯನಡೆಯುತ್ತದೆ. ನಾಡಿಗರು ಧಾರೆಯೆರೆದು ಕೊಡುತ್ತಾರೆ. ಲಗ್ನದ ಹೋಳಿಗೆ ಊಟದ ಸಮಾರಂಭವೂ ಆಗುತ್ತದೆ. ಲಗ್ನವಾದ ಹೆಣ್ಣನ್ನು ಗಂಡನ ಮನೆಗೆ ಕಳಿಸುವ ಕಾರ್ಯವೇ ರಥೋತ್ಸವ. ಅನಂತರ ಮಾತಂಗಿ ಚಪ್ಪರಕ್ಕೆ ಬೆಂಕಿ ಹಚ್ಚಿ ದೇವಿಯ ವಿಗ್ರಹವನ್ನು ಹೊತ್ತುಕೊಂಡು ಹೋಗಲಾಗುವುದು. ದೇವಿಯ ವೈಧವ್ಯಕ್ಕಾಗೆ ವಿಲಾಪ ಮಾಡುತ್ತಾ, ಇದಕ್ಕೆ ಕಾರಣರಾದವರನ್ನು ಶಪಿಸುತ್ತಾ, ಆಸಾದಿಗಳು ದೇವಿಯನ್ನು ಹೊತ್ತುಕೊಂಡೊಯ್ಯುವರು. ೧೨ ದಿನಗಳ ಸೂತಕ ಮುಗಿದ ಮೇಲೆ, ದೇವಸ್ಥಾನದಲ್ಲಿ ಪುನಃ ದೇವಿಯ ಸ್ಥಾಪನೆ. ಒಂದು ವಿಶಿಷ್ಟವಾದ ಜಾತ್ರಾ ಉತ್ಸವ ಪರಂಪರೆ ಇಲ್ಲಿನ ವೈಶಿಷ್ಟ್ಯವೆನ್ನಬಹುದು.

ಬಲಿ[ಬದಲಾಯಿಸಿ]

ಉಳಿದ ವಿಧಿ-ವಿಧಾನಗಳು ಉಳಿದ ದೇವಿ ಜಾತ್ರೆಗಳಂತೆಯೇ ಇದ್ದರೂ ಇಲ್ಲಿ ಪ್ರಾಣಿ ಬಲಿ ನಡೆಯುವುದಿಲ್ಲ ಎಂಬುದು ವಿಶೇಷ. ಮಾರಿಗೆ ಬಿಟ್ಟ ಕೋಣನನ್ನು ಜಾತ್ರೆಗೆ ಮೊದಲು ಊರಿನ ತುಂಬಾ ಸುತ್ತಿಸುತ್ತಾರೆ. ನಂತರ ಜಾತ್ರೆಯ ವೇಳೆಯಲ್ಲಿ ಕೋಣನ ಬಲಿಯ ಬದಲಾಗಿ ಸಾತ್ವಿಕ ಬಲಿಯನ್ನು(ಬೂದಕುಂಬಳಕಾಯಿ)ನೀಡಲಾಗುತ್ತದೆ.ಹಿಂದೆ ಉಳಿದ ಕಡೆಗಳಲ್ಲಿ ನಡೆಯುವಂತೆ ಕೋಣನ ಬಲಿ ನಡೆಯುತ್ತಿತ್ತು. ೧೯೬೩ರಲ್ಲಿ ಶ್ರೀಧರ ಸ್ವಾಮಿಗಳು ದೇವಿಯ ಉಗ್ರತೆಯನ್ನು ಕಡಿಮೆ ಮಾಡಿ ಪ್ರಾಣಿ ಬಲಿ ನಿಲ್ಲಿಸಿದರು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಇತಿಹಾಸದಲ್ಲಿ ಗಾಂಧೀಜಿಯವರು ಬಲಿಯನ್ನು ನಿಲ್ಲಿಸಿದರು ಎಂದು ಕೂಡ ದಾಖಲಾಗಿದೆ.

ರಥೋತ್ಸವ[ಬದಲಾಯಿಸಿ]

ಜಾತ್ರೆಯ ವಿಶೇಷ[ಬದಲಾಯಿಸಿ]

ಅನೇಕ ಯಕ್ಷಗಾನ ಮೇಳಗಳು, ಸರ್ಕಸ್ ಕಂಪೆನಿಗಳು, ಜಾತ್ರೆಯ ಸಮಯದಲ್ಲಿ ಬರುತ್ತವೆ. ಖಾನಾವಳಿಗಳು, ದರ್ಶಿನಿಗಳು, ಹಾಗೂ ಹಲವಾರುಬಗೆಯ ಮನರಂಜನೆಯ ಸಾಧನಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ.

ಉಲ್ಲೇಖಗಳು[ಬದಲಾಯಿಸಿ]