ವೃಶ್ಚಿಕರಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೃಶ್ಚಿಕ ರಾಶಿ -ಸೂರ್ಯ, ಚಂದ್ರ ಮತ್ತು ಗ್ರಹಗಳ ಕಕ್ಷೆಗಳ ಸೀಮಿತವಾಗಿರುವಂತೆ ಭಾಸವಾಗುವ 12 ನಕ್ಷತ್ರ ಪುಂಜಗಳ (ಇವುಗಳಿಗೆ ರಾಶಿಗಳೆಂದು ಹೆಸರು) ಇಕ್ಕಟ್ಟು ಪಟ್ಟಿಯಲ್ಲಿ ಕಾಣುವ ಮತ್ತು ಹೆಸರಿಗೂ ಆಕಾರ ಕ್ಕೂ ಸಾಮ್ಯವಿರುವ ನಕ್ಷತ್ರರಾಶಿ (ಸ್ಕಾರ್ಪಿಯನ್). ಈ ಇಕ್ಕಟ್ಟು ಪಟ್ಟಿಯ ಹೆಸರು ರಾಶಿಚಕ್ರ. ಮೇಷದಿಂದ ತೊಡಗುವ ರಾಶಿಚಕ್ರದಲ್ಲಿ 8ನೆಯದು ವೃಶ್ಚಿಕ. ಇದರ ವಿಶಾಲ ಆಕಾರವನ್ನು ಲೇಪಿಸುವ ಸುಮಾರು 12-13 ನಕ್ಷತ್ರಗಳ ಪೈಕಿ ಎದ್ದು ಕಾಣುವುದು ಜ್ಯೇಷ್ಠಾ (ಅಂಟಾರೆಸ್). ಇದೊಂದು ರಕ್ತದೈತ್ಯ ನಕ್ಷತ್ರ (ರೆಡ್ ಜಯಂಟ್). ಚೇಳಿನ (ವೃಶ್ಚಿಕ) ತಲೆಭಾಗದ (ಅಂದರೆ ಪಶ್ಚಿಮ ಕಡೆಗಿರುವ) ಸುಮಾರು 3 ನಕ್ಷತ್ರಗಳ ಬಾಗು ರೇಖೆಗೆ ಅನೂರಾಧಾ (ಅಕೃಬ್) ಎಂದೂ ಕೊಂಡಿಬಾಲ ಭಾಗದ ಸುಮಾರು 5 ನಕ್ಷತ್ರಗಳಿಗೆ ಒಟ್ಟಾಗಿ ಮೂಲಾ (ಶೌಲಾ) ಎಂದು ಹೆಸರು. ಜ್ಯೇಷ್ಠಾ ನಮ್ಮಿಂದ 330 ಜ್ಯೋತಿರ್ವರ್ಷ ದೂರದಲ್ಲಿದೆ. ಇದೊಂದು ರಕ್ತ ಅತಿದೈತ್ಯ ತಾರೆ. ಸೌರವ್ಯಾಸದ 300 ಮಡಿ ಇದೆ ಇದರ ವ್ಯಾಸ! ಉಜ್ಜ್ವಲತಾಂಕ 0.9-1.1ರ ನಡುವೆ ವ್ಯತ್ಯಯವಾಗುತ್ತದೆ. ಇದಕ್ಕೊಂದು ಉಜ್ಜ್ವಲತಾಂಕ 6 ಇರುವ ಸಂಗಾತಿ ನಕ್ಷತ್ರವೂ ಇದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: