ವಿಷಯಕ್ಕೆ ಹೋಗು

ಮೂಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಧನು ರಾಶಿ ಮೂಲಾ ನಕ್ಷತ್ರ

ಮೂಲಾ ನಕ್ಷತ್ರ[ಬದಲಾಯಿಸಿ]


ಇದು ವೃಶ್ಚಿಕ ರಾಶಿ; ಈಗ ಸಾಯನ (ವೈಜ್ಞಾನಿಕ) ಪ್ರಕಾರ ಮೂಲಾ ಇದಕ್ಕೆ ಸೇರಿದೆ -ಕೊಂಡಿಯ ತುದಿಯಲ್ಲಿರುವುದೇ ಮೂಲಾ ನಕ್ಷತ್ರ[೧].
  • ಮೂಲಾನಕ್ಷತ್ರವು ಇಂಗ್ಲಿಷ್ ನಲ್ಲಿ ಲಾಮ್ಡಾ ಸ್ಕಾರ್ಪಿಐ ಎಂದು ಕರೆಯಲ್ಪಡುತ್ತದೆ . ಅದು ಧನು ರಾಶಿಯಲ್ಲಿ ಎರಡನೆಯ ಅತ್ಯಂತ ಪ್ರಕಾಶ ಮಾನ ನಕ್ಷತ್ರ. ಅದು ಒಂದು ಹಲವು ನಕ್ಷತ್ರಗಳ ಪುಂಜ. ದೂರದಲ್ಲಿರವ ನಮಗೆ ಒಂದೇ ನಕ್ಷತ್ರದಂತೆ ಕಾಣುವುದು. ಅದು ನಮ್ಮಿಂದ 570 ಕೋಟಿ ಜ್ಯೋತಿರ್ವರ್ಷದ ದೂರದಲ್ಲಿದೆ. ಒಂದು ಜ್ಯೋತಿರ್ವರ್ಷ ವೆಂದರೆ - ಒಂದು ಸೆಕೆಂಡಿಗೆ ೩೦೦೦೦೦ ಕಿಲೋಮೀಟರ್ ಹೋಗುವ ಬೆಳಕಿನ ಕಿರಣ ಒಂದು ವರ್ಷದಲ್ಲಿ ಹೋಗುವ ದೂರ. ಮೂಲಾ ನಕ್ಷತ್ರ ನಮ್ಮಿಂದ ಅಷ್ಟು ದೂರಲ್ಲಿರುವ ನಕ್ಷತ್ರಗಳ ಒಂದು ಪುಂಜ. ಅದು ಈಗ ವಿಜ್ಞಾನದ ಪ್ರಕಾರ ವೃಶ್ಚಿಕ ರಾಶಿಗೆ ಸೇರಿಹೋಗಿದೆ. ಹಿಂದೆ ಅದು ಚಂದ್ರನ ಜೊತೆ ಧನುರಾಶಿಯಲ್ಲಿರುವ ನಕ್ಷತ್ರವೆಂದು ತಿಳಿದಿದ್ದರು. ಜ್ಯೋತಿಷಿಗಳು ಈಗಲೂ ಹಾಗೆ ತಿಳಿದಿದ್ದಾರೆ.

ನಕ್ಷತ್ರ ದೋಷ[ಬದಲಾಯಿಸಿ]


  • ಪಾದ ಬೇಧದಿಂದ ಆನಕ್ಷತ್ರದಲ್ಲಿ ೧,೨,೩ ಪಾದಗಳಲ್ಲಿ ಜನಿಸಿದ ಹೆಣ್ಣು ಮಕ್ಕಳಿಂದ ತಂದೆ ತಾಯಿ ಮನೆಗೆ ಕೆಡುಕು ಎಂಬ ಆಧಾರವಿಲ್ಲದ ಮೂಢ ನಂಬುಗೆ ಬೆಳೆದುಬಂದಿದೆ. ಆದರೆ ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಅವರ ಮನೆಯವರೂ ಸುಖವಾಗಿರುವುದು ನಿಜ ಜೀವನದಲ್ಲಿ ಕಂಡುಬಂದಿದೆ. ಜಗತ್ತಿನಲ್ಲಿ ನೂರಕ್ಕೆ ೯೦-೯೮ ರಷ್ಟು ವಿವಾಹಗಳು ನಕ್ಷತ್ರ ನೋಡದೆ ನಡೆಯುತ್ತವೆ. ಭಾರತೀಯರಲ್ಲಿ ಕೆಲವರಲ್ಲಿ ಮಾತ್ರ ಈ ನಂಬುಗೆ ಇದೆ. ಪಶ್ಚಿಮದ ಜ್ಯೋತಿಷ್ಯ ಶಾಸ್ತ್ರದಲ್ಲಿ . ಈ ಮೂಢ ನಂಬುಗೆ ಇಲ್ಲ.

ನೋಡಿ :[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]

  1. ಜಗತ್ತುಗಳ ಹುಟ್ಟು ಸಾವು ಪುಟ ೨೭೫
"https://kn.wikipedia.org/w/index.php?title=ಮೂಲಾ&oldid=915922" ಇಂದ ಪಡೆಯಲ್ಪಟ್ಟಿದೆ