ವಿಷಯಕ್ಕೆ ಹೋಗು

ವಿಶ್ವ ಆರ್ಥಿಕ ವೇದಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
World Economic Forum
ಸ್ಥಾಪನೆ1971
ಶೈಲಿNon-profit organization
Legal statusFoundation
ಪ್ರಧಾನ ಕಚೇರಿCologny, Switzerland
ಪ್ರದೇಶ served
Worldwide
Klaus Martin Schwab
ಅಧಿಕೃತ ಜಾಲತಾಣhttp://www.weforum.org/

ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್‌ ಇಕನಾಮಿಕ್‌ ಫೋರಮ್‌-WEF ) ಎಂಬುದು ಜಿನಿವಾ-ಮೂಲದ, ಲಾಭಗಳಿಕೆಯ ಉದ್ದೇಶವಿಲ್ಲದ ಒಂದು ಪ್ರತಿಷ್ಠಾನವಾಗಿದ್ದು, ಸ್ವಿಜರ್‌ಲೆಂಡ್‌‌‌ನ ದಾವೋಸ್‌‌ನಲ್ಲಿ ನಡೆಯುವ ತನ್ನ ವಾರ್ಷಿಕ ಸಭೆಯಿಂದಾಗಿ ಸುಪರಿಚಿತವಾಗಿದೆ; ಆರೋಗ್ಯ ಮತ್ತು ಪರಿಸರ-ಸಂಬಂಧಿ ವಿಷಯಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಅತ್ಯಂತ ಜರೂರಾದ ಸಮಸ್ಯೆಗಳ ಕುರಿತು ಚರ್ಚಿಸಲು, ವ್ಯವಹಾರ ವಲಯದ ಅಗ್ರಗಣ್ಯ ನಾಯಕರು, ಅಂತರರಾಷ್ಟ್ರೀಯ ರಾಜಕೀಯ ನಾಯಕರು, ಆಯ್ದ ಬುದ್ಧಿಜೀವಿಗಳು ಮತ್ತು ಪತ್ರಕರ್ತರನ್ನು ಒಂದೆಡೆ ಸೇರಿಸುವ ವಾರ್ಷಿಕ ಸಭೆ ಇದಾಗಿದೆ. ಸಭೆಗಳು ಮಾತ್ರವೇ ಅಲ್ಲದೇ, ಸಂಶೋಧನಾ ವರದಿಗಳ ಒಂದು ಸರಣಿಯನ್ನೇ WEF ರೂಪಿಸುತ್ತದೆ ಮತ್ತು ವಲಯ-ಉದ್ದೇಶಿತ ಉಪಕ್ರಮಗಳಲ್ಲಿ ತನ್ನ ಸದಸ್ಯರನ್ನು ತೊಡಗಿಸುತ್ತದೆ.[] ಚೀನಾದಲ್ಲಿ "ಹೊಸ ಚಾಂಪಿಯನ್ನರ ವಾರ್ಷಿಕ ಸಭೆ"ಯನ್ನೂ (ಆನ್ಯುಯಲ್‌ ಮೀಟಿಂಗ್‌ ಆಫ್‌ ದಿ ನ್ಯೂ ಚಾಂಪಿಯನ್ಸ್‌) WEF ಸಂಘಟಿಸುತ್ತದೆ ಹಾಗೂ ವರ್ಷದಾದ್ಯಂತವೂ ಪ್ರಾದೇಶಿಕ ಸಭೆಗಳ ಒಂದು ಸರಣಿಯನ್ನು ಆಯೋಜಿಸುತ್ತದೆ. 2008ರಲ್ಲಿ ನಡೆದ ಆ ಪ್ರಾದೇಶಿಕ ಸಭೆಗಳಲ್ಲಿ, ಯುರೋಪ್‌ ಮತ್ತು ಮಧ್ಯ ಏಷ್ಯಾ, ಪೂರ್ವ ಏಷ್ಯಾ, ರಷ್ಯಾ CEO ದುಂಡುಮೇಜಿನ ಪರಿಷತ್ತು, ಆಫ್ರಿಕಾ, ಮಧ್ಯ ಪ್ರಾಚ್ಯ ಇವುಗಳ ಕುರಿತಾದ ಸಭೆಗಳು, ಮತ್ತು ಲ್ಯಾಟಿನ್‌ ಅಮೆರಿಕಾದ ಕುರಿತಾದ ವಿಶ್ವ ಆರ್ಥಿಕ ವೇದಿಕೆ ಇವೆಲ್ಲವೂ ಸೇರಿದ್ದವು. 2008ರಲ್ಲಿ ಇದು ದುಬೈನಲ್ಲಿ "ಸಮಿಟ್‌ ಆನ್‌ ದಿ ಗ್ಲೋಬಲ್‌ ಅಜೆಂಡಾ" ಎಂಬ ಶೃಂಗಸಭೆಯನ್ನು ಪ್ರಾರಂಭಿಸಿತು.

ಇತಿಹಾಸ

[ಬದಲಾಯಿಸಿ]

ಕ್ಲೌಸ್‌ ಮಾರ್ಟಿನ್‌ ಷ್ವಾಬ್‌ ಎಂಬ ಓರ್ವ ಜರ್ಮನ್‌-ಸಂಜಾತ ವ್ಯವಹಾರ-ವಿಷಯದ ಪ್ರಾಧ್ಯಾಪಕನಿಂದ 1971ರಲ್ಲಿ WEF ಸಂಸ್ಥಾಪಿಸಲ್ಪಟ್ಟಿತು. ಈತ ಜಿನಿವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ.[] ಇದಕ್ಕೆ ಮೂಲತಃ ಯುರೋಪಿಯನ್‌ ಮ್ಯಾನೇಜ್‌ಮೆಂಟ್‌ ಫೋರಮ್‌ ಎಂಬ ಹೆಸರಿಡಲಾಗಿತ್ತು. ನಂತರ 1987ರಲ್ಲಿ ಇದು ತನ್ನ ಹೆಸರನ್ನು ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್‌ ಇಕನಾಮಿಕ್‌ ಫೋರಮ್‌) ಎಂಬುದಾಗಿ ಬದಲಾಯಿಸಿಕೊಂಡಿತು. ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಘರ್ಷಣೆಗಳನ್ನು ಪರಿಹರಿಸುವುದಕ್ಕಾಗಿ ವೇದಿಕೆಯೊಂದರ ಒದಗಿಸುವಿಕೆಯನ್ನು ಒಳಗೊಳ್ಳಲೆಂದು ತನ್ನ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತರಿಸಲು ಅದು ಬಯಸಿತು.

1971ರ ಬೇಸಿಗೆಯಲ್ಲಿ, ದಾವೋಸ್‌ ಕಾಂಗ್ರೆಸ್‌ ಸೆಂಟರ್‌‌‌ನಲ್ಲಿ ಆಯೋಜಿಸಲಾದ ಮೊದಲ ಐರೋಪ್ಯ ವ್ಯವಸ್ಥಾಪನಾ ವಿಚಾರ ಸಂಕಿರಣಕ್ಕೆ (ಯುರೋಪಿಯನ್‌ ಮ್ಯಾನೇಜ್‌ಮೆಂಟ್‌ ಸಿಂಪೋಜಿಯಂ) ಪಾಶ್ಚಾತ್ಯ ಐರೋಪ್ಯ ಸಂಸ್ಥೆಗಳಿಗೆ ಸೇರಿದ 444 ಕಾರ್ಯನಿರ್ವಹಣಾಧಿಕಾರಿಗಳನ್ನು ಷ್ವಾಬ್‌ ಆಹ್ವಾನಿಸಿದ; ಐರೋಪ್ಯ ಆಯೋಗ ಮತ್ತು ಐರೋಪ್ಯ ಕೈಗಾರಿಕಾ ಸಂಘಗಳ ಆಶ್ರಯದ ಅಡಿಯಲ್ಲಿ ಆಯೋಜಿಸಲ್ಪಟ್ಟಿದ್ದ ಈ ವಿಚಾರ ಸಂಕಿರಣದಲ್ಲಿ, US ವ್ಯವಸ್ಥಾಪನಾ ಪರಿಪಾಠಗಳಿಗೆ ಐರೋಪ್ಯ ಸಂಸ್ಥೆಗಳನ್ನು ಪರಿಚಯಿಸಲು ಷ್ವಾಬ್‌ ಬಯಸಿದ್ದ. ಆಗ ಅವನು WEF ಸಂಘಟನೆಯನ್ನು ಜಿನಿವಾ ಮೂಲದ ಒಂದು ಲಾಭಗಳಿಕೆಯ ಉದ್ದೇಶವಿಲ್ಲದ ಸಂಘಟನೆಯಾಗಿ ಸಂಸ್ಥಾಪಿಸಿದ. ಅಷ್ಟೇ ಅಲ್ಲ, ಯುರೋಪಿನ ವ್ಯವಹಾರ ವಲಯದ ನಾಯಕರು ತಮ್ಮ ವಾರ್ಷಿಕ ಸಭೆಗಳನ್ನು ಪ್ರತಿ ವರ್ಷದ ಜನವರಿಯಲ್ಲಿ ದಾವೋಸ್‌ನಲ್ಲಿ ನಡೆಸುವಂತೆ ಅವರನ್ನು ಸೆಳೆದ.[]

ಎಲ್ಲಾ ಹಿತಾಸಕ್ತಿಗಳನ್ನೂ ಪರಿಗಣನೆಗೆ ತೆಗೆದುಕೊಂಡು ಮುನ್ನಡೆಯುವ ವ್ಯವಸ್ಥಾಪಕರ ಮೇಲೆ ಸಾಂಸ್ಥಿಕ ಯಶಸ್ಸು ಆಧರಿಸಿರುವ "ಹೂಡಿಕೆದಾರ" ವ್ಯವಸ್ಥಾಪನಾ ವಿಧಾನವನ್ನು ಷ್ವಾಬ್‌ ಅಭಿವೃದ್ಧಿಪಡಿಸಿದ: ಷೇರುದಾರರು, ಗಿರಾಕಿಗಳು ಮತ್ತು ಗ್ರಾಹಕರು ಮಾತ್ರವೇ ಅಲ್ಲದೆ, ಸರ್ಕಾರಗಳನ್ನೂ ಒಳಗೊಂಡಂತೆ, ಸಂಸ್ಥೆಯು ನೆಲೆಗೊಂಡಿರುವ ಸಮುದಾಯಗಳು ಹಾಗೂ ಸಂಸ್ಥೆಯ ಉದ್ಯೋಗಿಗಳನ್ನೂ ಪರಿಗಣನೆಗೆ ತೆಗೆದುಕೊಳ್ಳುವುದು ಈ ವ್ಯವಸ್ಥಾಪನಾ ವಿಧಾನದ ಪರಿಕಲ್ಪನೆಯಾಗಿತ್ತು.[] ಬ್ರೆಟನ್‌ ವುಡ್ಸ್‌‌ನ ನಿಶ್ಚಿತ ವಿನಿಮಯದರದ ಕಾರ್ಯವಿಧಾನದ ಕುಸಿತ ಹಾಗೂ ಅರಬ್‌-ಇಸ್ರೇಲಿನ ಯುದ್ಧವನ್ನು ಒಳಗೊಂಡಂತೆ, 1973ರಲ್ಲಿ ನಡೆದ ಘಟನೆಗಳಿಂದಾಗಿ ವಾರ್ಷಿಕ ಸಭೆಯು ತನ್ನ ಗಮನವನ್ನು ವ್ಯವಸ್ಥಾಪನಾ ವಿಷಯದಿಂದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳವರೆಗೆ ವಿಸ್ತರಿಸಬೇಕಾಗಿ ಬಂತು; ಮತ್ತು 1974ರ ಜನವರಿಯಲ್ಲಿ ರಾಜಕೀಯ ನಾಯಕರು ಮೊದಲ ಬಾರಿಗೆ ದಾವೋಸ್‌ಗೆ ಆಹ್ವಾನಿಸಲ್ಪಟ್ಟರು.[]

1992ರ ಜನವರಿಯಲ್ಲಿ, ದಾವೋಸ್‌ನಲ್ಲಿ ಆಯೋಜಿಸಲ್ಪಟ್ಟಿದ್ದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಫ್ರೆಡೆರಿಕ್‌ ಡಿ ಕ್ಲರ್ಕ್‌ ಮತ್ತು ನೆಲ್ಸನ್‌‌ ಮಂಡೇಲಾ ಪರಸ್ಪರ ಕೈಕುಲುಕುತ್ತಿರುವುದು.
2009ರ ಜನವರಿಯಲ್ಲಿನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಜಪಾನೀ ಪ್ರಧಾನಮಂತ್ರಿ ಟಾರೋ ಅಸೋ
ಕ್ಲೌಸ್‌ ಷ್ವಾಬ್‌, ಸಂಸ್ಥಾಪಕ ಮತ್ತು ಕಾರ್ಯಕಾರಿ ಸಭಾಪತಿ, ವಿಶ್ವ ಆರ್ಥಿಕ ವೇದಿಕೆ.

ವರ್ಷಗಳು ಉರುಳುತ್ತಾ ಹೋದಂತೆ, ದಾವೋಸ್‌ನ್ನು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವುದಕ್ಕಾಗಿರುವ ಒಂದು ತಟಸ್ಥ ವೇದಿಕೆಯಾಗಿ ರಾಜಕೀಯ ನಾಯಕರು ಬಳಸಲು ಶುರುಮಾಡಿದರು. ಗ್ರೀಸ್‌ ಮತ್ತು ಟರ್ಕಿ ದೇಶಗಳು 1988ರಲ್ಲಿ ದಾವೋಸ್‌ ಘೋಷಣೆಗೆ (ದಾವೋಸ್‌ ಡಿಕ್ಲರೇಷನ್‌) ಸಹಿಹಾಕಿದವು; ಯುದ್ಧದ ಅಂಚಿನಿಂದ ಹಿಮ್ಮೆಟ್ಟುವಲ್ಲಿ ಇದು ಅವರಿಗೆ ನೆರವಾಯಿತು. 1992ರಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ, ನೆಲ್ಸನ್‌‌ ಮಂಡೇಲಾ ಮತ್ತು ಮುಖ್ಯಸ್ಥ ಮಂಗೊಸುಥು ಬುಥೆಲೆಜಿ ಈ ಇಬ್ಬರನ್ನು ದಕ್ಷಿಣ ಆಫ್ರಿಕಾದ ಅಧ್ಯಕ್ಷ F. W. ಡಿ ಕ್ಲರ್ಕ್‌ ಭೇಟಿಯಾದ; ಇದು ದಕ್ಷಿಣ ಆಫ್ರಿಕಾದ ಹೊರಗಿನ ಅವರ ಮೊದಲ ಜಂಟಿ ಕಾಣಿಸುವಿಕೆಯಾಗಿತ್ತು. 1994ರ ವಾರ್ಷಿಕ ಸಭೆಯಲ್ಲಿ, ಇಸ್ರೇಲಿನ ವಿದೇಶಾಂಗ ಸಚಿವ ಷಿಮೋನ್‌ ಪೆರೆಸ್‌ ಮತ್ತು PLO ಸಭಾಪತಿ ಯಾಸರ್‌‌ ಅರಾಫತ್‌‌ ಇಬ್ಬರೂ ಗಾಜಾ ಮತ್ತು ಜೆರಿಕೊ ಕುರಿತಾದ ಒಂದು ಕರಡು ಒಪ್ಪಂದಕ್ಕೆ ಮುಂದಾದರು.[] 2008ರಲ್ಲಿ, ಉತ್ಪಾದಕ ಬಂಡವಾಳ ನೀತಿಯ ಕುರಿತಾಗಿ ಬಿಲ್‌ ಗೇಟ್ಸ್‌ ಒಂದು ವಿಷಯ ಮಂಡನಾತ್ಮಕ ಉಪನ್ಯಾಸವನ್ನು ನೀಡಿದ. ಉತ್ಪಾದಕ ಬಂಡವಾಳ ನೀತಿ ಎಂಬುದು ಬಂಡವಾಳ ನೀತಿಯ ಒಂದು ಸ್ವರೂಪವಾಗಿದ್ದು, ಇದು ಲಾಭಗಳನ್ನು ಹುಟ್ಟುಹಾಕುವುದರ ಜೊತೆಗೆ ಪ್ರಪಂಚದಲ್ಲಿ ಕಂಡುಬರುವ ಅನ್ಯಾಯಗಳು ಅಥವಾ ಪಕ್ಷಪಾತಗಳನ್ನೂ ಪರಿಹರಿಸುತ್ತದೆ; ಇದನ್ನು ನೆರವೇರಿಸುವುದಕ್ಕಾಗಿ, ಬಡವರ ಅಗತ್ಯಗಳಿಗೆ ಉತ್ತಮ ರೀತಿಯಲ್ಲಿ ಗಮನ ಹರಿಸಲು ಅದು ಮಾರುಕಟ್ಟೆಯ ಬಲಗಳನ್ನು ಬಳಸಿಕೊಳ್ಳುತ್ತದೆ.[][]

ಸಂಘಟನೆ

[ಬದಲಾಯಿಸಿ]

ಸ್ವಿಜರ್‌ಲೆಂಡ್‌ನ ಜಿನಿವಾದ ಕಲೋನಿ ಎಂಬಲ್ಲಿ WEF ತನ್ನ ಕೇಂದ್ರಕಾರ್ಯಾಲಯವನ್ನು ಹೊಂದಿದೆ. 2006ರಲ್ಲಿ, ಚೀನಾದ ಬೀಜಿಂಗ್‌‌‌‌‌ನಲ್ಲಿ, ಹಾಗೂ ನ್ಯೂಯಾರ್ಕ್‌ ನಗರದಲ್ಲಿ ಇದು ಪ್ರಾದೇಶಿಕ ಕಚೇರಿಗಳನ್ನು ತೆರೆಯಿತು. ಸದಾ ನಿಷ್ಪಕ್ಷಪಾತಿಯಾಗಿರಲು ಹೆಣಗಾಡುವ ಈ ಸಂಘಟನೆಯು ಯಾವುದೇ ರಾಜಕೀಯ, ಪಕ್ಷಾವಲಂಬಿ ಅಥವಾ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಂಟಿಕೊಂಡಿಲ್ಲ. "ಪ್ರಪಂಚದ ಸ್ಥಿತಿಗತಿಯನ್ನು ಸುಧಾರಿಸುವೆಡೆಗೆ ಸಂಘಟನೆಯು ಬದ್ಧತೆಯನ್ನು ಹೊಂದಿದೆ"[], ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯೊಂದಿಗೆ ವೀಕ್ಷಕ ಸ್ಥಾನಮಾನವನ್ನು ಹೊಂದಿದೆ. ಸಂಘಟನೆಯ ಮೇಲ್ವಿಚಾರಣೆಯನ್ನು ಸ್ವಿಸ್‌ ಒಕ್ಕೂಟದ ಸರ್ಕಾರವು ನೋಡಿಕೊಳ್ಳುತ್ತದೆ. ಪ್ರತಿಷ್ಠಾನ ಮಂಡಳಿಯು ಇದರ ಅತ್ಯುನ್ನತ ಆಡಳಿತ ಘಟಕವಾಗಿದ್ದು, 22 ಸದಸ್ಯರನ್ನು ಅದು ಒಳಗೊಂಡಿದೆ; ಹಿಂದಿನ ಬ್ರಿಟಿಷ್‌ ಪ್ರಧಾನಮಂತ್ರಿ ಟೋನಿ ಬ್ಲೇರ್‌‌ ಮತ್ತು ಜೋರ್ಡಾನ್‌‌ನ ರಾಣಿ ರಾನಿಯಾ ಈ ಸದಸ್ಯರಲ್ಲಿ ಸೇರಿದ್ದಾರೆ.

2009ರಲ್ಲಿ ನಡೆದ ಐದು-ದಿನಗಳ ವಾರ್ಷಿಕ ಸಭೆಯ ಅವಧಿಯಲ್ಲಿ, 91 ದೇಶಗಳಿಗೆ ಸೇರಿದ 2,500ಕ್ಕೂ ಹೆಚ್ಚಿನ ಸಹಭಾಗಿಗಳು ದಾವೋಸ್‌‌ನಲ್ಲಿ ಜಮಾವಣೆಗೊಂಡಿದ್ದರು. ಅವರ ಪೈಕಿ ಸುಮಾರು 75%ನಷ್ಟು (1,170) ಮಂದಿ ವ್ಯವಹಾರ ವಲಯದ ನಾಯಕರಾಗಿದ್ದು, ವಿಶ್ವದ ಅಗ್ರಗಣ್ಯ ಕಂಪನಿಗಳ ಪೈಕಿ ಸಂಘಟನೆಯಲ್ಲಿ ಸದಸ್ಯತ್ವ ಪಡೆದಿದ್ದ 1,000 ಕಂಪನಿಗಳಿಗೆ ಸೇರಿದ್ದ ಸದಸ್ಯರ ವಲಯದಿಂದ ಅವರು ಪ್ರಧಾನವಾಗಿ ಬಂದವರಾಗಿದ್ದರು. ಇವರೆಲ್ಲರ ಜೊತೆಗೆ, ಸಾರ್ವಜನಿಕ ವಲಯದಲ್ಲಿ ಪ್ರಸಿದ್ಧರಾಗಿದ್ದ 219 ವ್ಯಕ್ತಿಗಳೂ ಸಹ ಸಹಭಾಗಿಗಳಲ್ಲಿ ಸೇರಿದ್ದರು; ಸಂಸ್ಥಾನ ಅಥವಾ ಸರ್ಕಾರದ 40 ಮುಖ್ಯಸ್ಥರು, 64 ಸಂಪುಟ ಸಚಿವರು, ಅಂತರರಾಷ್ಟ್ರೀಯ ಸಂಘಟನೆಗಳ 30 ಮುಖ್ಯಸ್ಥರು ಅಥವಾ ಹಿರಿಯ ಅಧಿಕಾರಿಗಳು ಹಾಗೂ 10 ರಾಯಭಾರಿಗಳೂ ಈ ಸಹಭಾಗಿಗಳಲ್ಲಿ ಸೇರಿದ್ದರು. 432ಕ್ಕೂ ಹೆಚ್ಚಿನ ಸಹಭಾಗಿಗಳು ನಾಗರಿಕ ಸಮಾಜದಿಂದ ಬಂದವರಾಗಿದ್ದರು; ಸರ್ಕಾರೇತರ ಸಂಘಟನೆಗಳಿಗೆ ಸೇರಿದ 32 ಮುಖ್ಯಸ್ಥರು ಅಥವಾ ಪ್ರತಿನಿಧಿಗಳು, ಮಾಧ್ಯಮ-ವಲಯದ 225 ನಾಯಕರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಚಿಂತಕರ ಚಾವಡಿಗಳಿಗೆ ಸೇರಿದ್ದ 149 ನಾಯಕರು, ವಿಭಿನ್ನ ಧಾರ್ಮಿಕ ನಂಬಿಕೆಗಳಿಗೆ ಸೇರಿದ್ದ 15 ಧಾರ್ಮಿಕ ನಾಯಕರು ಹಾಗೂ 11 ಒಕ್ಕೂಟ ನಾಯಕರು ಈ ಸಹಭಾಗಿಗಳಲ್ಲಿ ಸೇರಿದ್ದರು.[೧೦]

ಸದಸ್ಯತ್ವ

[ಬದಲಾಯಿಸಿ]

WEF ಸಂಘಟನೆಗೆ ಅದರ 1000 ಸದಸ್ಯ ಕಂಪನಿಗಳು ಧನಸಹಾಯ ಮಾಡಿದ್ದವು. ಅವುಗಳಲ್ಲಿ ಒಂದಾಗಿದ್ದ ಜಾಗತಿಕ ಉದ್ಯಮವೊಂದು ವಿಶಿಷ್ಟ ಕಂಪನಿ ಎನಿಸಿಕೊಂಡಿದ್ದು, ಐದು ಶತಕೋಟಿ ಡಾಲರುಗಳಿಗೂ ಹೆಚ್ಚಿನ ವಹಿವಾಟನ್ನು ಅದು ಹೊಂದಿತ್ತು; ಆದರೂ ಸಹ, ಇಂಥ ಸದಸ್ಯ ಕಂಪನಿಯು ತಾನು ಮಾಡುತ್ತಿರುವ ಕೈಗಾರಿಕೆ ಮತ್ತು ಹಾಗೂ ನೆಲೆಗೊಂಡಿರುವ ಪ್ರದೇಶದ ಅನುಸಾರ ಬದಲಾಗುತ್ತ ಹೋಗುತ್ತದೆ ಎಂಬುದು ಗಮನಾರ್ಹ. ಇದರ ಜೊತೆಗೆ, ಈ ಉದ್ಯಮಗಳು ತಮ್ಮ ಕೈಗಾರಿಕಾ ವಲಯದಲ್ಲಿನ ಮತ್ತು/ಅಥವಾ ದೇಶದ ವ್ಯಾಪ್ತಿಯೊಳಗಿನ ಅಗ್ರಗಣ್ಯ ಕಂಪನಿಗಳ ಪೈಕಿ ಸ್ಥಾನವನ್ನು ಪಡೆದಿರುತ್ತವೆ ಮತ್ತು ತಮ್ಮ ಕೈಗಾರಿಕೆ ಮತ್ತು/ಅಥವಾ ಪ್ರದೇಶದ ಭವಿಷ್ಯಕ್ಕೆ ಆಕಾರನೀಡುವಲ್ಲಿ ಒಂದು ಅಗ್ರಗಣ್ಯ ಪಾತ್ರವನ್ನು ವಹಿಸುತ್ತವೆ. 2005ರ ವೇಳೆಗೆ ಇದ್ದಂತೆ, ಪ್ರತಿ ಸದಸ್ಯ ಕಂಪನಿಯೂ CHF 42,500ನಷ್ಟಿರುವ ವಾರ್ಷಿಕ ಸದಸ್ಯತ್ವದ ಒಂದು ಮೂಲಶುಲ್ಕವನ್ನು ಹಾಗೂ CHF 18,000ನಷ್ಟಿರುವ ವಾರ್ಷಿಕ ಸಭೆಯ ಶುಲ್ಕವನ್ನು ಪಾವತಿಸುತ್ತದೆ; ದಾವೋಸ್‌ನಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಸದರಿ ಸದಸ್ಯ ಕಂಪನಿಯ CEOನ ಪಾಲ್ಗೊಳ್ಳುವಿಕೆಯನ್ನು ಈ ಶುಲ್ಕವು ಒಳಗೊಂಡಿರುತ್ತದೆ. ಕೈಗಾರಿಕಾ ಪಾಲುದಾರರು ಮತ್ತು ಕಾರ್ಯತಂತ್ರದ ಪಾಲುದಾರರು ಕ್ರಮವಾಗಿ CHF 250,000 ಮತ್ತು CHF 500,000ನಷ್ಟು ಶುಲ್ಕವನ್ನು ಪಾವತಿಸುತ್ತಾರೆ; ವೇದಿಕೆಯ ಉಪಕ್ರಮಗಳಲ್ಲಿ ಒಂದು ಮಹತ್ತರವಾದ ಪಾತ್ರವನ್ನು ವಹಿಸಲು ಇದು ಅವರಿಗೆ ಅವಕಾಶ ನೀಡುತ್ತದೆ.[೧೧][೧೨]

ಇದರ ಜೊತೆಗೆ, ಈ ಉದ್ಯಮಗಳು ತಮ್ಮ ಕೈಗಾರಿಕಾ ವಲಯ ಮತ್ತು/ಅಥವಾ ದೇಶದ ವ್ಯಾಪ್ತಿಯೊಳಗಿನ ಅಗ್ರಗಣ್ಯ ಕಂಪನಿಗಳ ಪೈಕಿ ಸ್ಥಾನವನ್ನು ಪಡೆಯುತ್ತವೆ (ದಶಲಕ್ಷಗಟ್ಟಲೆ US ಡಾಲರುಗಳಲ್ಲಿರುವ ವಹಿವಾಟನ್ನು ಇದು ಸಾಮಾನ್ಯವಾಗಿ ಆಧರಿಸಿರುತ್ತದೆ; ಹಣಕಾಸಿನ ಸಂಸ್ಥೆಗಳಿಗೆ ಸಂಬಂಧಿಸಿ ಹೇಳುವುದಾದರೆ, ಸ್ವತ್ತುಗಳ ಮೇಲೆ ಮಾನದಂಡಗಳು ಆಧರಿಸಿರುತ್ತವೆ) ಮತ್ತು ವೇದಿಕೆಯ ಆಯ್ಕೆ ಸಮಿತಿಯಿಂದ ತೀರ್ಮಾನಿಸಲ್ಪಟ್ಟಂತೆ, ತಮ್ಮ ಕೈಗಾರಿಕೆ ಮತ್ತು/ಅಥವಾ ಪ್ರದೇಶದ ಭವಿಷ್ಯಕ್ಕೆ ಆಕಾರನೀಡುವಲ್ಲಿ ಒಂದು ಅಗ್ರಗಣ್ಯ ಪಾತ್ರವನ್ನು ಅವು ವಹಿಸುತ್ತವೆ.

ಒಂದು ವ್ಯಾಪಕ ಶ್ರೇಣಿಯಲ್ಲಿರುವ ವ್ಯವಹಾರ ವಲಯಗಳಿಂದ ಕೈಗಾರಿಕಾ ಪಾಲುದಾರರು ಬರುತ್ತಾರೆ. ನಿರ್ಮಾಣ, ವಾಯುಯಾನ, ತಂತ್ರಜ್ಞಾನ, ಪ್ರವಾಸೋದ್ಯಮ, ಆಹಾರ ಮತ್ತು ಪಾನೀಯ, ಎಂಜಿನಿಯರಿಂಗ್‌, ಮತ್ತು ಹಣಕಾಸಿನ ಸೇವೆಗಳು ಈ ವಲಯಗಳಲ್ಲಿ ಸೇರಿರುತ್ತವೆ. ತಮ್ಮ ಉದ್ದೇಶಿತ ಕೈಗಾರಿಕಾ ವಲಯಕ್ಕೆ ಬಹುಪಾಲು ತೊಂದರೆಯುಂಟುಮಾಡುವ ಜಾಗತಿಕ ಸಮಸ್ಯೆಗಳ ಕುರಿತಾಗಿ ಈ ಕಂಪನಿಗಳು ಜಾಗರೂಕವಾಗಿರುತ್ತವೆ.

ಚಟುವಟಿಕೆಗಳು

[ಬದಲಾಯಿಸಿ]

ದಾವೋಸ್‌ನಲ್ಲಿನ ವಾರ್ಷಿಕ ಸಭೆ

[ಬದಲಾಯಿಸಿ]
ಯುನೈಟೆಡ್‌ ಕಿಂಗಡಂನ ಅಂದಿನ ಪ್ರಧಾನಮಂತ್ರಿ ಗೋರ್ಡಾನ್‌ ಬ್ರೌನ್‌, ಮತ್ತು ಜೋರ್ಡಾನ್‌ನ ರಾಣಿ ರಾನಿಯಾ
2007ರ ಜನವರಿ 25ರಂದು ಸ್ವಿಜರ್‌ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 2007ರ ವಾರ್ಷಿಕ ಸಭೆಯಲ್ಲಿ, 'ರೂಲ್ಸ್‌ ಫಾರ್‌ ಎ ಗ್ಲೋಬಲ್‌ ನೈಬರ್‌ಹುಡ್‌ ಇನ್‌ ಎ ಮಲ್ಟಿಕಲ್ಚರಲ್‌ ವರ್ಲ್ಡ್‌' ಎಂಬ ಶೀರ್ಷಿಕೆಯ ಕಾರ್ಯಕ್ಷೇತ್ರದ ಅಧಿವೇಶನದ ಸಂದರ್ಭದಲ್ಲಿ ಸೆರೆಹಿಡಿಯಲಾದ, ಇರಾನ್‌ ಅಧ್ಯಕ್ಷ ಮೊಹಮ್ಮದ್‌ ಖಟಾಮಿಯ (1997-2005) ಚಿತ್ರ.

ದಾವೋಸ್‌ನ[೧೩] ಸ್ವಿಸ್‌ ಆಲ್ಪೈನ್‌‌ ವಿಹಾರಧಾಮದಲ್ಲಿ ಪ್ರತಿ ವರ್ಷದ ಜನವರಿ ತಿಂಗಳ ಅಂತ್ಯದಲ್ಲಿ ಆಯೋಜಿಸಲ್ಪಡುವ, ಆಹ್ವಾನವಿದ್ದವರಿಗೆ-ಮಾತ್ರವೇ ಪ್ರವೇಶವಿರುವ ವಾರ್ಷಿಕ ಸಭೆಯು WEFನ ಪ್ರಧಾನ ಕಾರ್ಯಕ್ರಮವಾಗಿದೆ. ತನ್ನ 1000 ಸದಸ್ಯ ಕಂಪನಿಗಳಿಗೆ ಸೇರಿದ CEOಗಳನ್ನು ಮಾತ್ರವೇ ಅಲ್ಲದೇ, ಆಯ್ದ ರಾಜಕಾರಣಿಗಳನ್ನು, ವಿದ್ವನ್ಮಂಡಲಗಳು, NGOಗಳು, ಧಾರ್ಮಿಕ ನಾಯಕರು ಮತ್ತು ಮಾಧ್ಯಮಗಳಿಗೆ ಸೇರಿದ ಪ್ರತಿನಿಧಿಗಳನ್ನು ಒಟ್ಟಾಗಿ ಸೇರಿಸುವ ಕೆಲಸವನ್ನು ಈ ಕಾರ್ಯಕ್ರಮವು ಮಾಡುತ್ತದೆ.[೧೪] ಐದು-ದಿನದ ಕಾರ್ಯಕ್ರಮಕ್ಕಾಗಿ ಸುಮಾರು 2200 ಸಹಭಾಗಿಗಳು ಜಮಾವಣೆಯಾಗುತ್ತಾರೆ ಮತ್ತು ಅಧಿಕೃತ ಕಾರ್ಯಸೂಚಿಯಲ್ಲಿರುವ ಸುಮಾರು 220 ವಿಚಾರ ಸಂಕಿರಣಗಳಿಗೆ ಹಾಜರಾಗುತ್ತಾರೆ. ಜಾಗತಿಕ ಕಾಳಜಿಯ ಪ್ರಮುಖ ಸಮಸ್ಯೆಗಳು (ಅಂತರರಾಷ್ಟ್ರೀಯ ಘರ್ಷಣೆಗಳು, ಬಡತನ ಮತ್ತು ಪರಿಸರೀಯ ಸಮಸ್ಯೆಗಳಂಥವು) ಮತ್ತು ಸಂಭವನೀಯ ಪರಿಹಾರೋಪಾಯಗಳ ಸುತ್ತಲೂ ಚರ್ಚೆಗಳು ಗಮನಹರಿಸುತ್ತವೆ.[] ಒಟ್ಟಾರೆಯಾಗಿ ಹೇಳುವುದಾದರೆ, ಆನ್‌ಲೈನ್‌‌, ಮುದ್ರಣ ಮಾಧ್ಯಮ, ರೇಡಿಯೋ ಮತ್ತು TV ಮಾಧ್ಯಮಗಳಿಗೆ ಸೇರಿದ ಸುಮಾರು 500 ಪತ್ರಕರ್ತರು ಇಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ಅಧಿಕೃತ ಕಾರ್ಯಸೂಚಿಯಲ್ಲಿರುವ ಎಲ್ಲಾ ವಿಚಾರ ಸಂಕಿರಣಗಳಿಗೆ ಅವರಿಗೆ ಪ್ರವೇಶಾವಕಾಶವನ್ನು ಒದಗಿಸಲಾಗುತ್ತದೆ; ಅಧಿಕೃತ ಕಾರ್ಯಸೂಚಿಯ ಪೈಕಿಯ ಕೆಲವೊಂದನ್ನು ಅಂತರ್ಜಾಲದಲ್ಲಿಯೂ ಪ್ರಸಾರ ಮಾಡಲಾಗುತ್ತದೆ.[೧೫]

ದಾವೋಸ್‌ನಲ್ಲಿ ನಡೆಯುವ ಎಲ್ಲಾ ಸರ್ವಸದಸ್ಯರ ಚರ್ಚೆಗಳು ಯುಟ್ಯೂಬ್‌‌‌ನಲ್ಲೂ[೧೬] ಲಭ್ಯವಿರುತ್ತವೆ; ಸಂಬಂಧಿತ ಚಿತ್ರಗಳು ಫ್ಲಿಕರ್‌‌[೧೭] ತಾಣದಲ್ಲಿ ಉಚಿತವಾಗಿ ಲಭ್ಯವಿದ್ದರೆ, ಪ್ರಮುಖ ಉಲ್ಲೇಖಗಳು ಟ್ವಿಟ್ಟರ್‌‌ ತಾಣದಲ್ಲಿ ಲಭ್ಯವಿರುತ್ತವೆ.[೧೮] 2007ರಲ್ಲಿ,

ಮೈಸ್ಪೇಸ್‌‌[೧೯] ಮತ್ತು ಫೇಸ್‌ಬುಕ್‌‌ನಂಥ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ WEF ಪುಟಗಳನ್ನು ತೆರೆಯಿತು.[೨೦] 2009ರ ವಾರ್ಷಿಕ ಸಭೆಯಲ್ಲಿ, ಯುಟ್ಯೂಬ್‌ನಲ್ಲಿನ [೨೧][೨೨] ದಾವೋಸ್‌ ಚರ್ಚೆಗಳಲ್ಲಿ ಭಾಗವಹಿಸಲು ವೇದಿಕೆಯು ಜನಸಾಮಾನ್ಯರನ್ನು ಆಹ್ವಾನಿಸಿತು. ಇದರಿಂದಾಗಿ ಓರ್ವ ಬಳಕೆದಾರನಿಗೆ ವಾರ್ಷಿಕ ಸಭೆಯಲ್ಲಿ ಖುದ್ದಾಗಿ ಭಾಗವಹಿಸಲು ಅವಕಾಶ ಕಲ್ಪಿಸಿದಂತಾಯಿತು. 2008ರಲ್ಲಿ, ಯೂಟ್ಯೂಬ್‌ನಲ್ಲಿ[೨೩] ಆಯೋಜಿಸಲಾದ ದಾವೋಸ್‌ ಪ್ರಶ್ನೆಯ ವ್ಯವಸ್ಥೆಯು, ದಾವೋಸ್‌ನಲ್ಲಿ ಜಮಾವಣೆಗೊಂಡ ವಿಶ್ವ ನಾಯಕರೊಂದಿಗೆ ಯುಟ್ಯೂಬ್‌ ಬಳಕೆದಾರರು ಪರಸ್ಪರ ಸಂವಹಿಸುವುದಕ್ಕೆ ಅವಕಾಶ ನೀಡಿತು; ಕಾಂಗ್ರೆಸ್‌ ಸೆಂಟರ್‌ನಲ್ಲಿನ ಯುಟ್ಯೂಬ್‌ ವಿಡಿಯೋ ಕೇಂದ್ರವೊಂದರಿಂದ ಉತ್ತರಿಸಲು ಸದರಿ ವಿಶ್ವ ನಾಯಕರಿಗೆ ಉತ್ತೇಜನ ದೊರಕಿದಂತಾಯಿತು.[೨೪] 2008ರಲ್ಲಿ, ಕ್ವಿಕ್‌[೨೫] ಮತ್ತು ಮೊಗಲಸ್‌[೨೬] ಎಂಬ ಮಾಧ್ಯಮಗಳಲ್ಲಿ ಪತ್ರಿಕಾಗೋಷ್ಠಿಗಳು ನೇರಪ್ರಸಾರವಾದವು ಹಾಗೂ ಭಾಷಣಕಾರರಿಗೆ ಯಾರುಬೇಕಾದರೂ ಪ್ರಶ್ನೆಗಳನ್ನು ಕೇಳಲು ಈ ವ್ಯವಸ್ಥೆಯು ಅವಕಾಶ ಕಲ್ಪಿಸಿಕೊಟ್ಟಿತು. 2006 ಮತ್ತು 2007ರಲ್ಲಿ, ಸೆಕೆಂಡ್‌ ಲೈಫ್‌‌ ತಾಣದಲ್ಲಿನ ರಾಯಿಟರ್ಸ್‌‌‌‌‌ನ ಶ್ರೋತೃವಿಭಾಗದಲ್ಲಿ ಆಯ್ದ ಸಹಭಾಗಿಗಳನ್ನು ಸಂದರ್ಶಿಸಲಾಯಿತು, ಮತ್ತು ಮುಕ್ತಾಯದ ವಿಚಾರ ಸಂಕಿರಣವನ್ನು ಬಿತ್ತರಿಸಲಾಯಿತು.[೨೭]

ಸಹಭಾಗಿಗಳು

[ಬದಲಾಯಿಸಿ]
2009ರಲ್ಲಿನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅಧ್ಯಕ್ಷ ಗ್ಲೋರಿಯಾ ಮ್ಯಾಕಪಾಗಲ್‌-ಅರೊಯೊ

2008ರಲ್ಲಿ, ಸಾರ್ವಜನಿಕ ವಲಯದಲ್ಲಿ ಪ್ರಸಿದ್ಧರಾಗಿರುವ ಸುಮಾರು 250 ವ್ಯಕ್ತಿಗಳು (ಸಂಸ್ಥಾನ ಅಥವಾ ಸರ್ಕಾರದ ಮುಖ್ಯಸ್ಥರು, ಸಂಪುಟ ಸಚಿವರುರಾಯಭಾರಿಗಳು, ಅಂತರರಾಷ್ಟ್ರೀಯ ಸಂಘಟನೆಯ ಮುಖ್ಯಸ್ಥರು ಅಥವಾ ಹಿರಿಯ ಅಧಿಕಾರಿಗಳು) ವಾರ್ಷಿಕ ಸಭೆಯಲ್ಲಿ ಭಾಗವಹಿಸಿದರು. ಅವರುಗಳೆಂದರೆ: ಅಬ್ದೌಲಯೆ ವಾಡೆ, ಅಬ್ದುಲ್ಲಾಹ್‌ ಅಹ್ಮದ್‌ ಬದಾವಿ, ಆಲ್ವರೊ ಉರಿಬೆ ವೇಲೆಜ್‌, ಆಂಡರ್ಸ್‌‌ ಫೋಗ್‌ ರಾಸ್‌ಮುಸ್ಸೆನ್‌, ಬಾನ್‌ ಕಿ-ಮೂನ್‌, ಕಾಂಡೊಲೀಜಾ ರೈಸ್‌, ಫೆರೆಂಕ್‌ ಗ್ಯುರ್ಕ್‌ಸ್ಯಾನಿ, ಫ್ರಾಂಕೋಯಿಸ್‌ ಫಿಲ್ಲಾನ್‌, ಗ್ಲೋರಿಯಾ ಮ್ಯಾಕಪಾಗಲ್‌ ಅರೊಯೊ, ಗೋರ್ಡಾನ್‌ ಬ್ರೌನ್‌, ಹಮಿದ್‌ ಕರ್ಜಾಯಿ, ಇಲ್ಹಾಮ್‌ ಆಲಿಯೆವ್‌, ಜಾನ್‌ ಪೀಟರ್‌ ಬಾಲ್ಕೆನೆಂಡೆ, ಲೀ ಬೋಲಿಂಗರ್‌, ಲೀ ಹ್ಸಿಯೆನ್‌ ಲೂಂಗ್‌, ಪರ್ವೆಜ್‌ ಮುಷರಫ್‌, ಜೋರ್ಡಾನ್‌‌ನ ರಾಣಿ ರಾನಿಯಾ, ರುಥ್‌ ಸಿಮನ್ಸ್‌‌, ಸಲಾಮ್‌ ಫಯ್ಯಾದ್‌, ಸಾಲಿ ಬೆರಿಷಾ, ಸೆರ್ಝ್‌ ಸರ್ಗ್‌ಸ್ಯಾನ್‌, ಷಿಮೋನ್‌ ಪೆರೆಸ್‌, ಟುಕುಫು ಝುಬೆರಿ, ಉಮಾರು ಮೂಸಾ ಯರ್‌‌'ಅದುವಾ, ವಾಲ್ಡಾಸ್‌ ಅದಮ್‌ಕುಸ್‌, ಯಾಸುವೊ ಫುಕುಡಾ, ವಿಕ್ಟರ್‌‌ A. ಯಶ್‌ಚೆಂಕೊ ಮತ್ತು ಝೆಂಗ್‌ ಪೀಯಾನ್‌.[೨೮]

‌‌ಅಲ್‌ ಗೋರ್, ಬಿಲ್‌ ಕ್ಲಿಂಟನ್‌, ಬಿಲ್‌ ಗೇಟ್ಸ್‌, ಮೈಕೇಲ್‌ ವೋಲ್ಫ್‌, ಬೊನೊ, ಪಾಲೋ ಕೊಯೆಲ್ಹೊ ಮತ್ತು ಟೋನಿ ಬ್ಲೇರ್‌‌ ಇವರೇ ಮೊದಲಾದವರೂ ಸಹ ದಾವೋಸ್‌ ವಾರ್ಷಿಕ ಸಭೆಯ ನಿಯತವಾದ ಹಾಜರಿದಾರರಾಗಿದ್ದಾರೆ. ಹಿಂದಿನ ಹಾಜರಿದಾರರಲ್ಲಿ ಇವರೆಲ್ಲ ಸೇರಿದ್ದಾರೆ: ಏಂಜೆಲಾ ಮೆರ್ಕೆಲ್‌, ಡ್ಮಿಟ್ರಿ ಮೆಡ್‌ವೆಡೆವ್‌, ಹೆನ್ರಿ ಕಿಸಿಂಜರ್‌‌, ನೆಲ್ಸನ್‌‌ ಮಂಡೇಲಾ, ರೇಮಂಡ್‌ ಬ್ಯಾರೆ, ಜೂಲಿಯನ್‌ ಲಾಯ್ಡ್‌‌ ವೆಬ್ಬರ್‌‌ ಮತ್ತು ಯಾಸರ್‌‌ ಅರಾಫತ್‌‌.

ಅಮೆರಿಕಾದ ಸ್ಯಾಮ್ಯುಯೆಲ್‌ ಹಂಟಿಂಗ್ಟನ್‌ ಎಂಬ ಓರ್ವ ವಿದ್ವಾಂಸ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಸಹಭಾಗಿಗಳನ್ನು "ದಾವೋಸ್‌ ಮ್ಯಾನ್‌" ಎಂಬುದಾಗಿ ಸಾಮೂಹಿಕವಾಗಿ ವರ್ಣಿಸಿದ; ಸಂಪೂರ್ಣವಾಗಿ ಅಂತರರಾಷ್ಟ್ರೀಯರೆಂಬುದಾಗಿ ತಮ್ಮನ್ನು ತಾವು ಕಂಡುಕೊಳ್ಳುವ ಸದಸ್ಯರನ್ನು ಹೊಂದಿರುವ, ಜಾಗತಿಕ ಮಟ್ಟದ ಒಂದು ಉತ್ಕೃಷ್ಟ ಸಮೂಹವನ್ನು ಉಲ್ಲೇಖಿಸಲೆಂದು ಅವನು ಈ ವಿವರಣೆಯನ್ನು ನೀಡಿದ.[೨೯][೩೦]

ಹೊಸ ಚಾಂಪಿಯನ್ನರ ವಾರ್ಷಿಕ ಸಭೆ

[ಬದಲಾಯಿಸಿ]

2007ರಲ್ಲಿ, ಹೊಸ ಚಾಂಪಿಯನ್ನರ ವಾರ್ಷಿಕ ಸಭೆಯನ್ನು (ಇದಕ್ಕೆ ಬೇಸಿಗೆಯ ದಾವೋಸ್‌ ಎಂದೂ ಕರೆಯಲಾಗುತ್ತದೆ) WEF ಹುಟ್ಟುಹಾಕಿತು. ಚೀನಾದಲ್ಲಿ ವಾರ್ಷಿಕವಾಗಿ ಆಯೋಜಿಸಲ್ಪಡುವ ಈ ಸಭೆಯು ಡೇಲಿಯನ್‌ ಮತ್ತು ಟಿಯಾಂಜಿನ್‌ ನಡುವಣ ಪರ್ಯಾಯವಾಗಿ ಬದಲಾಗುತ್ತಿರುತ್ತದೆ. ಜಾಗತಿಕ ಬೆಳವಣಿಗೆಯ ಕಂಪನಿಗಳು ಎಂಬುದಾಗಿ ವೇದಿಕೆಯಿಂದ ಕರೆಯಲ್ಪಟ್ಟಿರುವ ಕಂಪನಿಗಳ 1,500 ಪ್ರಭಾವಿ ಹೂಡಿಕೆದಾರರನ್ನು ಈ ಸಭೆಯು ಒಟ್ಟಾಗಿ ಸೇರಿಸುತ್ತದೆ. ಪ್ರಧಾನವಾಗಿ ಚೀನಾ, ಭಾರತ, ರಷ್ಯಾ, ಮೆಕ್ಸಿಕೊ, ಮತ್ತು ಬ್ರೆಜಿಲ್‌‌‌ನಂಥ ಕ್ಷಿಪ್ರವಾಗಿ ಬೆಳೆಯುತ್ತಿರುವ, ಅಭಿವೃದ್ಧಿಶೀಲ ದೇಶಗಳಿಗೆ ಈ ಪ್ರಭಾವಿ ಹೂಡಿಕೆದಾರರು ಸೇರಿದ್ದು, ಅಭಿವೃದ್ಧಿಹೊಂದಿದ ದೇಶಗಳಿಗೆ ಸೇರಿದ ಕ್ಷಿಪ್ರ ಬೆಳವಣಿಗೆಯ ಹೂಡಿಕೆದಾರರೂ ಇವರೊಂದಿಗೆ ಸೇರಿಕೊಳ್ಳುತ್ತಾರೆ ಎಂಬುದು ಗಮನಾರ್ಹ ಅಂಶ. ಮುಂದಿನ ಪೀಳಿಗೆಯ ಜಾಗತಿಕ ನಾಯಕರು, ವೇಗವಾಗಿ-ಬೆಳೆಯುತ್ತಿರುವ ಪ್ರದೇಶಗಳು, ಸ್ಪರ್ಧಾತ್ಮಕ ನಗರಗಳು ಹಾಗೂ ಭೂಮಂಡಲದೆಲ್ಲೆಡೆ ವ್ಯಾಪಿಸಿರುವ ತಂತ್ರಜ್ಞಾನದ ಪಥನಿರ್ಮಾಪಕರನ್ನೂ ಸಹ ಈ ಸಭೆಯು ತನ್ನಲ್ಲಿ ತೊಡಗಿಸಿಕೊಳ್ಳುತ್ತದೆ.[೩೧][೩೨] ಪ್ರತಿ ವಾರ್ಷಿಕ ಸಭೆಯಲ್ಲೂ ಮುಖ್ಯಸ್ಥನಾದ ವೆನ್‌ ಜಿಯಾಬಾವೊ ಸರ್ವಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುತ್ತಾನೆ.

ಪ್ರಾದೇಶಿಕ ಸಭೆಗಳು

[ಬದಲಾಯಿಸಿ]

ಪ್ರತಿ ವರ್ಷವೂ ಹತ್ತು ಪ್ರಾದೇಶಿಕ ಸಭೆಗಳು ನಡೆಯುತ್ತವೆ. ಸಾಂಸ್ಥಿಕ ವ್ಯವಹಾರದ ನಾಯಕರು, ಸ್ಥಳೀಯ ಸರ್ಕಾರದ ನಾಯಕರು ಮತ್ತು NGOಗಳ ನಡುವೆ ನಿಕಟ ಸಂಪರ್ಕವು ಏರ್ಪಡುವಲ್ಲಿ ಇವು ನೆರವಾಗುತ್ತವೆ. ಆಫ್ರಿಕಾ, ಪೂರ್ವ ಏಷ್ಯಾ, ಲ್ಯಾಟಿನ್‌ ಅಮೆರಿಕಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ಸಭೆಗಳು ಆಯೋಜಿಸಲ್ಪಟ್ಟಿವೆ. ಅತಿಥೇಯ ದೇಶಗಳ ಸಂಯೋಜನೆಯು ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆಯಾದರೂ, ಚೀನಾ ಮತ್ತು ಭಾರತ ದೇಶಗಳು ಹಿಂದಿನ ದಶಕದಲ್ಲಿ ಸಭೆಗಳನ್ನು ಸುಸಂಗತವಾಗಿ ಆಯೋಜಿಸಿವೆ.[೩೩]

ಯುವ ಜಾಗತಿಕ ನಾಯಕರು

[ಬದಲಾಯಿಸಿ]

ನಾಳಿನ ಜಾಗತಿಕ ನಾಯಕರಿಗೆ ಉತ್ತರಾಧಿಕಾರಿಗಳು ಎನಿಸಿಕೊಂಡಿರುವ ಯುವ ಜಾಗತಿಕ ನಾಯಕರ ಸಮುದಾಯವನ್ನು 2005ರಲ್ಲಿ WEF ಸ್ಥಾಪಿಸಿತು. ವಿಶ್ವದೆಲ್ಲೆಡೆ ಇರುವ 40 ವರ್ಷ ವಯೋಮಾನದ ನಾಯಕರು ಹಾಗೂ ಅಸಂಖ್ಯಾತ ಕಾರ್ಯವಿಧಾನಗಳು ಮತ್ತು ವಲಯಗಳಿಗೆ ಸೇರಿದ ನಾಯಕರನ್ನು ಇದು ಒಳಗೊಂಡಿದೆ. 2030ರಲ್ಲಿ ವಿಶ್ವವು ಹೇಗಿರಬಹುದು ಎಂಬುದನ್ನು ಕಂಡುಕೊಳ್ಳುವುದರ ಕಲ್ಪನಾದೃಷ್ಟಿಗೆ ಸಂಬಂಧಿಸಿದ ಕ್ರಿಯಾಯೋಜನೆಯೊಂದರ ಸೃಷ್ಟಿಯಾದ 2030ರ ಉಪಕ್ರಮದಲ್ಲಿ ಸದರಿ ನಾಯಕರು ತೊಡಗಿಸಿಕೊಂಡಿದ್ದಾರೆ. ಯುವ ಜಾಗತಿಕ ನಾಯಕರ ಪೈಕಿ ಇವರೆಲ್ಲರೂ ಸೇರಿದ್ದಾರೆ[೩೪] ಷಾಯ್‌ ಅಗಾಸ್ಸಿ, ಅನೌಶೇಷ್‌ ಅನ್ಸಾರಿ, ಮಾರಿಯಾ ಕನ್ಸ್ಯೂಯೆಲೊ ಅರೌಜೊ, ಲೆರಾ ಔವೆರ್‌ಬಾಕ್‌, ಫತ್ಮಿರ್‌ ಬೆಸಿಮಿ, ಇಯಾನ್‌ ಬ್ರೆಮ್ಮರ್‌‌, ಸೆರ್ಜೆ ಬ್ರಿನ್‌, ಟೈಲರ್‌ ಬ್ರೂಲೆ, ಪ್ಯಾಟ್ರಿಕ್‌ ಚಪ್ಪಾಟ್ಟೆ, ಒಲಾಫರ್‌‌ ಎಲಿಯಾಸನ್‌, ರೋಜರ್‌‌ ಫೆಡೆರರ್‌‌, ಜೆನ್ಸ್‌ ಮಾರ್ಟಿನ್‌ ಸ್ಕಿಬ್‌ಸ್ಟೆಡ್‌, ರಾಹುಲ್‌ ಗಾಂಧಿ, ಕೆನ್ನೆತ್‌ ಗ್ರಿಫಿನ್‌, ಕೆಲ್ಲಿ ಚೆನ್‌, ಸ್ಕಾಟ್‌ J. ಫ್ರೀಡ್‌ಹೀಮ್‌, ನಾರ್ವೆಯ ಯುವರಾಜ ಹಾಕೋನ್‌, ಅಬ್ದುಲ್‌‌ಸಲಾಮ್‌ ಹಯ್‌ಕಾಲ್‌, ಸಿಲ್ವಾನ ಕೊಚ್‌-ಮೆಹ್ರಿನ್‌, ಇರ್ಷಾದ್‌ ಮಂಜಿ, ಬೆಲ್ಜಿಯಂನ ರಾಜಕುಮಾರಿ ಮಥಿಲ್ಡೆ, ಆದಿತ್ಯ ಮಿತ್ತಲ್‌, ಯುವಿನ್‌ ನಾಯ್ಡು, ಗೇವಿನ್‌ ನ್ಯೂಸಮ್‌, ಲ್ಯಾರಿ ಪೇಜ್‌, ಲೆವಿಸ್‌ ಗೋರ್ಡಾನ್‌ ಪ್ಯೂಗ್‌, ಫಿಲಿಪೈನ್ಸ್‌‌‌ನ ಸೆನೆಟ್‌ ಸದಸ್ಯ ಮಾರ್‌ ರೋಕ್ಸಾಸ್‌, ಕ್ರಿಸ್ಟೋಫರ್‌‌ ಸ್ಕ್ಲಾಫರ್‌‌, ಅನೂಷ್ಕಾ ಶಂಕರ್‌, ಪ್ರೇಮಲ್‌ ಷಾ, ಜೋಷ್‌ ಸ್ಪಿಯರ್‌, ಪೀಟರ್‌ ಥಿಯೆಲ್‌, ಜಿಮ್ಮಿ ವೇಲ್ಸ್‌, ಮತ್ತು ನಿಕ್ಲಾಸ್‌ ಜೆನ್‌ಸ್ಟ್ರೋಮ್‌. ವಾರ್ಷಿಕ ಆಧಾರದ ಮೇಲೆ ಹೊಸ ಸದಸ್ಯರನ್ನು ಆರಿಸಲಾಗುತ್ತದೆ ಮತ್ತು ಯುವ ಜಾಗತಿಕ ನಾಯಕರ ವೇದಿಕೆಯು 1111 ಸದಸ್ಯರನ್ನು ಹೊಂದಲಿದೆ.[೩೫][೩೬][೩೭]

ಸಾಮಾಜಿಕ ಉದ್ಯಮಶೀಲರು

[ಬದಲಾಯಿಸಿ]

ಷ್ವಾಬ್‌ ಫೌಂಡೇಷನ್‌ ಫಾರ್‌ ಸೋಷಿಯಲ್‌ ಎಂಟ್ರಪ್ರೆನರ್‌ಷಿಪ್‌[೩೮] ಸಂಸ್ಥೆಯೊಂದಿಗಿನ ನಿಕಟ ಸಹಯೋಗದಲ್ಲಿ, ವಿಶ್ವದ ಅಗ್ರಗಣ್ಯ ಸಾಮಾಜಿಕ ಉದ್ಯಮಶೀಲರು ಅಭಿವೃದ್ಧಿಪಡಿಸಿದ ಮಾದರಿಗಳನ್ನು WEF ಸಂಘಟನೆಯು 2000ನೇ ಇಸವಿಯಿಂದಲೂ ಪ್ರವರ್ತಿಸುತ್ತಾ ಬಂದಿದೆ. ಸಮಾಜಗಳನ್ನು ಮುಂದಕ್ಕೆ ತರುವಲ್ಲಿ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಗಮನ ಹರಿಸುವಲ್ಲಿ, ಸಾಮಾಜಿಕ ಉದ್ಯಮಶೀಲರ ಪಾತ್ರವು ಒಂದು ಪ್ರಮುಖ ಅಂಶವಾಗಿದೆ ಎಂಬುದನ್ನು WEF ಎತ್ತಿ ತೋರಿಸುತ್ತದೆ.[೩೯][೪೦] ವೇದಿಕೆಯ ಪ್ರಾದೇಶಿಕ ಸಭೆಗಳು ಮತ್ತು ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲು ಆಯ್ದ ಸಾಮಾಜಿಕ ಉದ್ಯಮಶೀಲರಿಗೆ ಆಹ್ವಾನವು ದೊರೆಯುತ್ತದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಅಲ್ಲಿ ಭೇಟಿಮಾಡುವ ಅವಕಾಶವು ಅವರಿಗೆ ಲಭ್ಯವಾಗುತ್ತದೆ. ಉದಾಹರಣೆಗೆ, 2003ರ ವಾರ್ಷಿಕ ಸಭೆಯಲ್ಲಿ ಜೆರೂ ಬಿಲಿಮೋರಿಯಾ ಎಂಬಾಕೆಗೆ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಉಪ ಮಹಾ-ಕಾರ್ಯದರ್ಶಿಯಾದ ರಾಬರ್ಟೋ ಬ್ಲೋಸಿಸ್‌‌ ಎಂಬಾತನನ್ನು ಭೇಟಿಮಾಡುವ ಅವಕಾಶ ದೊರೆಯಿತು; ಈ ಮುಖಾಮುಖಿ ಭೇಟಿಯಿಂದಾಗಿ ಚೈಲ್ಡ್‌ ಹೆಲ್ಪ್‌ಲೈನ್‌ ಇಂಟರ್‌ನ್ಯಾಷನಲ್‌ ಎಂಬ ಆಕೆಯ ಸಂಘಟನೆಗೆ ಸಂಬಂಧಿಸಿದಂತೆ ಒಂದು ಪ್ರಮುಖ ಪಾಲುದಾರಿಕೆಯು ರೂಪುಗೊಳ್ಳಲು ಸಾಧ್ಯವಾಯಿತು.[೪೧]

ಸಂಶೋಧನಾ ವರದಿಗಳು

[ಬದಲಾಯಿಸಿ]

ಒಂದು ಚಿಂತಕರ ಚಾವಡಿಯಾಗಿಯೂ WEF ಸೇವೆ ಸಲ್ಲಿಸುತ್ತದೆ, ಹಾಗೂ ವೇದಿಕೆಯ ಸಮುದಾಯಗಳಿಗೆ ಕಾಳಜಿ ಮತ್ತು ಪ್ರಾಮುಖ್ಯತೆಯ ವಿಷಯಗಳಾಗಿ ಪರಿಣಮಿಸಿರುವ ಸಮಸ್ಯೆಗಳ ಕುರಿತಾಗಿ ಗಮನಹರಿಸುವ ಒಂದು ವ್ಯಾಪಕ ಶ್ರೇಣಿ ವರದಿಗಳನ್ನು ಅದು ಪ್ರಕಟಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸ್ಪರ್ಧಾತ್ಮಕತೆ, ಜಾಗತಿಕ ಅಪಾಯಗಳು ಮತ್ತು ಭವಿಷ್ಯದ ಘಟನಾವಳಿಗಳ ಕುರಿತಾದ ಚಿಂತನೆಯಂಥ ಕ್ಷೇತ್ರಗಳಲ್ಲಿ ಪ್ರಸ್ತುತತೆಯ ವರದಿಗಳನ್ನು ರೂಪಿಸುವುದರ ಕುರಿತಾಗಿ ಕಾರ್ಯತಂತ್ರದ ಅಂತರ್ದೃಷ್ಟಿಯ ತಂಡಗಳು ಗಮನಹರಿಸುತ್ತವೆ.

ಸ್ಪರ್ಧಾತ್ಮಕತೆಯ ತಂಡ Archived 2010-12-01 ವೇಬ್ಯಾಕ್ ಮೆಷಿನ್ ನಲ್ಲಿ. ವು ವಾರ್ಷಿಕ ಆರ್ಥಿಕ ವರದಿಗಳ ಒಂದು ಶ್ರೇಣಿಯನ್ನು ರೂಪಿಸುತ್ತದೆ (ಅವರಣಗಳಲ್ಲಿರುವುದು ಮೊದಲು ಪ್ರಕಟಿಸಲ್ಪಟ್ಟ ವರ್ಷ): ಜಾಗತಿಕ ಸ್ಪರ್ಧಾತ್ಮಕತೆಯ ವರದಿಯು (1979) ದೇಶಗಳು ಮತ್ತು ಆರ್ಥಿಕತೆಗಳ ಸ್ಪರ್ಧಾತ್ಮಕತೆಯನ್ನು ಅಳೆಯುತ್ತದೆ; ಜಾಗತಿಕ ಮಾಹಿತಿ ತಂತ್ರಜ್ಞಾನದ ವರದಿಯು (2001) ಅವುಗಳ IT ಸನ್ನದ್ಧತೆಯನ್ನು ಆಧರಿಸಿ ಅವುಗಳ ಸ್ಪರ್ಧಾತ್ಮಕತೆಯನ್ನು ಮೌಲ್ಯಮಾಪನ ಮಾಡುತ್ತದೆ; ಜಾಗತಿಕ ಲಿಂಗ ಅಂತರದ ವರದಿಯು (2005) ಪುರುಷರು ಮತ್ತು ಮಹಿಳೆಯರ ನಡುವಿನ ಅಸಮಾನತೆಯ ವಿಷಮಾವಸ್ಥೆಯ ಪ್ರದೇಶಗಳನ್ನು ಅವಲೋಕಿಸುತ್ತದೆ; ಜಾಗತಿಕ ಅಪಾಯಗಳ ವರದಿಯು (2006) ಪ್ರಮುಖವಾದ ಜಾಗತಿಕ ಅಪಾಯಗಳ ಕುರಿತು ಮೌಲ್ಯಮಾಪನ ಮಾಡುತ್ತದೆ; ಜಾಗತಿಕ ಪರ್ಯಟನೆ ಮತ್ತು ಪ್ರವಾಸೋದ್ಯಮದ ವರದಿಯು (2007) ಪರ್ಯಟನೆ ಮತ್ತು ಪ್ರವಾಸೋದ್ಯಮದ ಸ್ಪರ್ಧಾತ್ಮಕತೆಯನ್ನು ಅಳೆಯುತ್ತದೆ ಮತ್ತು ಜಾಗತಿಕ ವ್ಯಾಪಾರವನ್ನು ಅನುವುಗೊಳಿಸುವ ವರದಿಯು (2008) ರಾಷ್ಟ್ರಗಳ ನಡುವಿನ ವ್ಯಾಪಾರವನ್ನು ಸರಾಗಗೊಳಿಸುವ, ಬೃಹತ್‌‌ ಸಂಖ್ಯೆಯಲ್ಲಿರುವ ಕ್ರಮಗಳ ಒಂದು ದೇಶಾದ್ಯಂತದ ವಿಶ್ಲೇಷಣೆಯನ್ನು ಸಾದರಪಡಿಸುತ್ತದೆ.[೪೨]

ಜಾಗತಿಕ ವ್ಯಾಪ್ತಿಯನ್ನು ಹೊಂದಿವೆ ಎಂಬುದಾಗಿ ಪರಿಗಣಿಸಲ್ಪಟ್ಟಿರುವ, ವಿಭಿನ್ನ-ಕೈಗಾರಿಕಾ ಪ್ರಸ್ತುತತೆಯನ್ನು ಹೊಂದಿರುವ, ಅನಿಶ್ಚಿತವಾಗಿರುವ, 10 ಶತಕೋಟಿ US$ಗೂ ಹೆಚ್ಚಿನ ಪ್ರಮಾಣದ ಆರ್ಥಿಕ ಹಾನಿಯನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿರುವ, ಮಾನವಕುಲಕ್ಕೆ ಬೃಹತ್ತಾದ ಸಂಕಟವನ್ನು ತಂದೊಡ್ಡಬಲ್ಲ ಸಾಮರ್ಥ್ಯ ಹೊಂದಿರುವ ಹಾಗೂ ತಗ್ಗಿಸುವಿಕೆಗೆ ಸಂಬಂಧಿಸಿದಂತೆ ಒಂದು ಬಹು-ಹೂಡಿಕೆದಾರ ವಿಧಾನವನ್ನು ಬಯಸುವ ಅಪಾಯಗಳನ್ನು ನಿರ್ಣಯಿಸುವ ವಾರ್ಷಿಕ ವರದಿಯೊಂದನ್ನು ಗ್ಲೋಬಲ್‌ ರಿಸ್ಕ್‌ ನೆಟ್‌ವರ್ಕ್‌ Archived 2010-12-01 ವೇಬ್ಯಾಕ್ ಮೆಷಿನ್ ನಲ್ಲಿ. ರೂಪಿಸುತ್ತದೆ.[೪೩]

ಓದುಗರ ಊಹೆಗಳಿಗೆ ಸವಾಲೊಡ್ಡಲೆಂದು, ಆಧಾರವಾಗಿರುವ ನಿರ್ಣಾಯಕ ಅಂಶಗಳ ಕುರಿತಾಗಿ ಜಾಗೃತಿ ಮೂಡಿಸಲೆಂದು ಹಾಗೂ ಭವಿಷ್ಯದ ಕುರಿತಾದ ತಾಜಾ ಚಿಂತನೆಯನ್ನು ಉತ್ತೇಜಿಸಲೆಂದು ವಿನ್ಯಾಸಗೊಳಿಸಲಾದ, ಪ್ರಾದೇಶಿಕ, ಕೈಗಾರಿಕಾ-ಉದ್ದೇಶಿತ ಮತ್ತು ಸಮಸ್ಯೆ-ಉದ್ದೇಶಿತ ವರದಿಗಳ ಒಂದು ಶ್ರೇಣಿಯನ್ನು ಭವಿಷ್ಯದ ಚಿಂತನೆಗಳ ಯೋಜನಾ Archived 2009-07-29 ವೇಬ್ಯಾಕ್ ಮೆಷಿನ್ ನಲ್ಲಿ. ತಂಡವು ಅಭಿವೃದ್ಧಿಪಡಿಸುತ್ತದೆ.[೪೪] 2008–2009ರ ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ಸನಿಹದ- ಮತ್ತು ದೀರ್ಘಾವಧಿಯ ಸಂಭವನೀಯ ಪ್ರಭಾವಗಳ ಕುರಿತಾದ ಒಂದು ಪ್ರಮುಖ ಪ್ರಕಟಣೆಯಾದ ದಿ ಫ್ಯೂಚರ್‌ ಆಫ್‌ ದಿ ಗ್ಲೋಬಲ್‌ ಫೈನಾನ್ಷಿಯಲ್‌ ಸಿಸ್ಟಮ್‌: ಎ ನಿಯರ್‌-ಟರ್ಮ್‌ ಔಟ್‌ಲುಕ್‌ ಅಂಡ್‌ ಲಾಂಗ್‌-ಟರ್ಮ್‌ ಸಿನೆರಿಯೋಸ್‌ Archived 2009-08-13 ವೇಬ್ಯಾಕ್ ಮೆಷಿನ್ ನಲ್ಲಿ. ಹಾಗೂ ಪಿಂಚಣಿ ಮತ್ತು ಆರೋಗ್ಯ ರಕ್ಷಣೆಯ ಧನಸಹಾಯದ ಮೇಲೆ ಜನಸಂಖ್ಯಾಶಾಸ್ತ್ರದ ವರ್ಗಾವಣೆಗಳ ಪ್ರಭಾವದ ಕುರಿತಾದ ಭವಿಷ್ಯದ ಚಿಂತನೆಗಳನ್ನು ಒಳಗೊಂಡಿರುವ "ಫೈನಾನ್ಸಿಂಗ್‌ ಡೆಮೋಗ್ರಾಫಿಕ್‌ ಷಿಫ್ಟ್ಸ್‌: ಪೆನ್ಷನ್‌ ಅಂಡ್‌ ಹೆಲ್ತ್‌ಕೇರ್‌ ಸಿನೆರಿಯೋಸ್‌ ಟು 2030" Archived 2009-07-30 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಪ್ರಕಟಣೆಯನ್ನು ಇತ್ತೀಚಿನ ವರದಿಗಳು ಒಳಗೊಂಡಿವೆ.

ಉಪಕ್ರಮಗಳು

[ಬದಲಾಯಿಸಿ]

ಜಾಗತಿಕ ಆರೋಗ್ಯದ ಉಪಕ್ರಮ (ಗ್ಲೋಬಲ್‌ ಹೆಲ್ತ್‌ ಇನಿಷಿಯೆಟಿವ್‌-GHI) ಎಂಬ ಪರಿಕಲ್ಪನೆಗೆ 2002ರಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕೋಫಿ ಅನ್ನಾನ್‌ ಚಾಲನೆ ನೀಡಿದ. HIV/AIDS, TB, ಮಲೇರಿಯಾದಂಥ ಕಾಯಿಲೆಗಳು ಮತ್ತು ಆರೋಗ್ಯ ವ್ಯವಸ್ಥೆಗಳನ್ನು ನಿಭಾಯಿಸಲು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳಲ್ಲಿ ವ್ಯವಹಾರದ-ಅಸ್ತಿತ್ವಗಳನ್ನು ತೊಡಗಿಸುವುದು GHIನ ನಿಶ್ಚಿತಗುರಿಯಾಗಿದೆ.

2008ರ ನವೆಂಬರ್‌‌ನಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 'ಭಾರತದ ಆರ್ಥಿಕ ಶೃಂಗಸಭೆ'ಯಲ್ಲಿ ಹೆನ್ರಿ ಕಿಸಿಂಜರ್‌‌

2003ರಲ್ಲಿ ನಡೆದ ವಾರ್ಷಿಕ ಸಭೆಯ ಸಂದರ್ಭದಲ್ಲಿ ಪ್ರಾರಂಭಿಸಲ್ಪಟ್ಟ ಜಾಗತಿಕ ಶಿಕ್ಷಣದ ಉಪಕ್ರಮವು (ಗ್ಲೋಬಲ್‌ ಎಜುಕೇಷನ್‌ ಇನಿಷಿಯೆಟಿವ್‌-GEI) ಅಂತರರಾಷ್ಟ್ರೀಯ IT ಕಂಪನಿಗಳು ಮತ್ತು ಜೋರ್ಡಾನ್‌, ಈಜಿಪ್ಟ್‌ ಮತ್ತು ಭಾರತ ದೇಶಗಳ ಸರ್ಕಾರಗಳನ್ನು ಒಂದೆಡೆ ಸೇರಿಸಿದ್ದು, ಇದು ತರಗತಿಯ ಕೊಠಡಿಗಳಲ್ಲಿ ಹೊಸ PC ಯಂತ್ರಾಂಶವು ಬಳಕೆಗೆ ಬರಲು ಹಾಗೂ ಇ-ಕಲಿಕೆಯಲ್ಲಿ ಹೆಚ್ಚಿನ ಸ್ಥಳೀಯ ಶಿಕ್ಷಕರು ತರಬೇತಿ ಪಡೆಯುವಂತಾಗಲು ಕಾರಣವಾಗಿದೆ. ಮಕ್ಕಳ ಜೀವನಕ್ರಮಗಳ ಮೇಲೆ ಇದು ಒಂದು ನಿಜವಾದ ಪ್ರಭಾವವನ್ನು ಹೊಂದಿದೆ. ಆರೋಹಣೀಯ ಮತ್ತು ಊರ್ಜಿತವಾಗಬಲ್ಲ ಲಕ್ಷಣವನ್ನು ಹೊಂದಿರುವ GEI ಮಾದರಿಯು, ರ್ವಾಂಡಾ ಸೇರಿದಂತೆ ಇತರ ದೇಶಗಳಲ್ಲಿ ಒಂದು ಶೈಕ್ಷಣಿಕ ನೀಲನಕಾಶೆಯಾಗಿ ಬಳಸಲ್ಪಡುತ್ತಿದೆ.

ಹವಾಮಾನ ಬದಲಾವಣೆ ಮತ್ತು ನೀರಿಗೆ ಸಂಬಂಧಿಸಿದ ವಿಷಯಗಳನ್ನು ಪರಿಸರೀಯ ಉಪಕ್ರಮವು ಒಳಗೊಳ್ಳುತ್ತದೆ. 2005ರಲ್ಲಿ ಗ್ಲೆನೀಗಲ್ಸ್‌ನಲ್ಲಿ ನಡೆದ G8 ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆಯ ಕುರಿತಾದ ಗ್ಲೆನೀಗಲ್ಸ್‌ ಮಾತುಕತೆಯ ಅಡಿಯಲ್ಲಿ, ವಿಶ್ವ ಆರ್ಥಿಕ ವೇದಿಕೆಯೊಂದಿಗೆ UK ಸರ್ಕಾರವು ಮಾತನಾಡುತ್ತಾ, ಹಸಿರುಮನೆ ಅನಿಲದ ಹೊರಸೂಸುವಿಕೆಗಳ ತಗ್ಗಿಸುವಿಕೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಅಭಿವೃದ್ಧಿಪಡಿಸಲು ವ್ಯವಹಾರ ಸಮುದಾಯದೊಂದಿಗಿನ ಒಂದು ಮಾತುಕತೆಯನ್ನು ಸುಗಮಗೊಳಿಸುವಂತೆ ಕೇಳಿಕೊಂಡಿತು. CEOಗಳ ಒಂದು ಜಾಗತಿಕ ಸಮೂಹದಿಂದ ಅಂಗೀಕರಿಸಲ್ಪಟ್ಟ ಈ ಶಿಫಾರಸುಗಳನ್ನು, ಮುಂದೆ 2008ರ ಜುಲೈನಲ್ಲಿ ಟೋಕಿಯೋ/ಹೊಕಾಯ್ಡೊದಲ್ಲಿ ಆಯೋಜಿಸಲ್ಪಟ್ಟ G8 ಶೃಂಗಸಭೆಯ ನಾಯಕರ ಮುಂದೆ ಸಾದರಪಡಿಸಲಾಯಿತು.[೪೫][೪೬]

ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ನೀರಿನ ನಿರ್ವಹಣೆಯ ಕುರಿತಾಗಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸಲೆಂದು, ನೀರಿಗೆ ಸಂಬಂಧಿಸಿದ ಉಪಕ್ರಮವು ವಿಭಿನ್ನ ಹೂಡಿಕೆದಾರರನ್ನು ಒಂದೆಡೆ ಸೇರಿಸುತ್ತದೆ. ಅಭಿವೃದ್ಧಿ ಮತ್ತು ಸಹಕಾರಕ್ಕಾಗಿ ಮೀಸಲಾದ ಸ್ವಿಸ್‌ ಸಂಸ್ಥೆಯಾದ ಆಲ್ಕಾನ್‌ ಇಂಕ್‌., USAID ಇಂಡಿಯಾ, UNDP ಇಂಡಿಯಾ, ಭಾರತೀಯ ಕೈಗಾರಿಕಾ ಒಕ್ಕೂಟ (ಕಾನ್ಫೆಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ-CII), ರಾಜಾಸ್ಥಾನದ ಸರ್ಕಾರ ಹಾಗೂ NEPAD ಬಿಸಿನೆಸ್‌ ಫೌಂಡೇಷನ್‌ ಇವೇ ಆ ಹೂಡಿಕೆದಾರ ಸಂಸ್ಥೆಗಳಾಗಿವೆ.

ಭ್ರಷ್ಟಾಚಾರದ ವಿರುದ್ಧ ಸೆಣಸುವ ಒಂದು ಪ್ರಯತ್ನವಾಗಿ ಪಾರ್ಟ್‌ನರಿಂಗ್‌ ಎಗೇನ್ಸ್ಟ್‌ ಕರಪ್ಷನ್‌ ಇನಿಷಿಯೆಟಿವ್‌ (PACI) ಎಂಬ ಉಪಕ್ರಮಕ್ಕೆ, 2004ರ ಜನವರಿಯಲ್ಲಿ ದಾವೋಸ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಎಂಜಿನಿಯರಿಂಗ್‌ ಮತ್ತು ನಿರ್ಮಾಣ, ಶಕ್ತಿ ಮತ್ತು ಲೋಹಗಳು ಹಾಗೂ ಗಣಿಗಾರಿಕೆ ಉದ್ಯಮಗಳಿಗೆ ಸೇರಿದ CEOಗಳು ಚಾಲನೆ ನೀಡಿದರು. PACI ಎಂಬುದು ಪ್ರಾಯೋಗಿಕ ಅನುಭವ ಮತ್ತು ದ್ವಂದ್ವದ ಸನ್ನಿವೇಶಗಳ ಕುರಿತಾದ ಸಮಾನಸ್ಕಂದ ವಿಷಯಗಳ ವಿನಿಮಯಕ್ಕೆ ಸಂಬಂಧಿಸಿದ ಒಂದು ವೇದಿಕೆಯಾಗಿದೆ. ಸುಮಾರು 140 ಕಂಪನಿಗಳು ಇದಕ್ಕೆ ಸಹಿಹಾಕಿವೆ.[೪೭]

ಪ್ರಶಸ್ತಿಗಳು

[ಬದಲಾಯಿಸಿ]

ತಂತ್ರಜ್ಞಾನದ ಪಥನಿರ್ಮಾಪಕರ ಕಾರ್ಯಸೂಚಿ

[ಬದಲಾಯಿಸಿ]

ಹೊಸ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುತ್ತಿರುವ ಮತ್ತು ಅಭಿವೃದ್ಧಿಪಡಿಸುತ್ತಿರುವ ವಿಶ್ವದಾದ್ಯಂತದ ಕಂಪನಿಗಳನ್ನು, ತಂತ್ರಜ್ಞಾನದ ಪಥನಿರ್ಮಾಪಕರ ಕಾರ್ಯಸೂಚಿಯು ಗುರುತಿಸುತ್ತದೆ. ಪ್ರತಿ ವರ್ಷವೂ 30-50 ಕಂಪನಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. 2008ರ ವೇಳೆಗೆ ಇದ್ದಂತೆ, ಇಂಥ 391 ಕಂಪನಿಗಳು ಗುರುತಿಸಲ್ಪಟ್ಟಿವೆ. ಈ ಪ್ರಶಸ್ತಿಯನ್ನು ಮೊದಲಿಗೆ 2003ರಲ್ಲಿ ನೀಡಲಾಯಿತು.

ವಿಶ್ವದ ಸ್ಥಿತಿಗತಿಯನ್ನು ಸುಧಾರಿಸುವೆಡೆಗೆ ವಿಶ್ವ ಆರ್ಥಿಕ ವೇದಿಕೆಯು ಹೊಂದಿರುವ ಬದ್ಧತೆಗೆ ಅನುಸಾರವಾಗಿ, ತಂತ್ರಜ್ಞಾನದ ಪಥನಿರ್ಮಾಪಕರನ್ನು ಇದರ ಚಟುವಟಿಕೆಗಳೊಳಗೆ ಸಂಯೋಜಿಸಲಾಗಿದೆ; ಜಾಗತಿಕ ಕಾರ್ಯಸೂಚಿಯ ಕುರಿತಾದ ಭವಿಷ್ಯ-ಉದ್ದೇಶಿತ ಸಮಸ್ಯೆಗಳನ್ನು ಪೂರ್ವ ನಿಯಾಮಕವಾಗಿರುವ, ಪರಿವರ್ತನಶೀಲವಾಗಿರುವ ಮತ್ತು ಉದ್ಯಮಶೀಲತೆಯಿಂದ ಕೂಡಿದ ವಿಧಾನಗಳಲ್ಲಿ ಗುರುತಿಸುವ ಮತ್ತು ಅವುಗಳ ಕಡೆಗೆ ಗಮನ ಹರಿಸುವ ಉದ್ದೇಶವನ್ನು ಸದರಿ ಕಾರ್ಯಚಟುವಟಿಕೆಗಳು ಹೊಂದಿವೆ. ವಿಜ್ಞಾನಿಗಳು, ಶಿಕ್ಷಣ ತಜ್ಞರು, NGOಗಳು, ಮತ್ತು ವೇದಿಕೆಯ ಸದಸ್ಯರು ಹಾಗೂ ಪಾಲುದಾರರೊಂದಿಗೆ ಈ ಕಾರ್ಯನಿರ್ವಹಣಾಧಿಕಾರಿಗಳನ್ನು ಒಟ್ಟಾಗಿ ಸೇರಿಸುವುದರ ಮೂಲಕ, ತಂತ್ರಜ್ಞಾನಗಳನ್ನು ಹೇಗೆ ಬಳಸಿಕೊಳ್ಳಲು ಸಾಧ್ಯವಿದೆ ಎಂಬುದರ ಮೇಲೆ ಹೊಸಬೆಳಕು ಚೆಲ್ಲುವುದು ವೇದಿಕೆಯ ಉದ್ದೇಶವಾಗಿದೆ; ಉದಾಹರಣೆಗೆ, ಹೊಸ ಲಸಿಕೆಗಳನ್ನು ಕಂಡುಹಿಡಿಯುವುದು, ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸುವುದು ಮತ್ತು ಜಾಗತಿಕ ಸಂವಹನೆಯನ್ನು ವರ್ಧಿಸುವುದು ಇವೆಲ್ಲವೂ ಇದರ ವ್ಯಾಪ್ತಿಯಲ್ಲಿ ಬರುತ್ತವೆ.[೪೮]

ನಿರಾಶ್ರಿತರ ಓಟ

[ಬದಲಾಯಿಸಿ]

UNHCR ಮತ್ತು ಕ್ರಾಸ್‌ರೋಡ್ಸ್‌ ಫೌಂಡೇಷನ್‌ ಎಂಬ ಹೆಸರಿನ ಹಾಂಗ್‌ಕಾಂಗ್‌ ಮೂಲದ ದತ್ತಿಸಂಸ್ಥೆಯ ಸಹ-ಆಯೋಜನೆಯಲ್ಲಿ ಹಮ್ಮಿಕೊಳ್ಳಲಾದ ನಿರಾಶ್ರಿತರ ಓಟವು, 2009ರಿಂದ ಮೊದಲ್ಗೊಂಡು ವಿಶ್ವ ಆರ್ಥಿಕ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ಅನುಕರಣೆಯಾಗಿದೆ. ಹಿಂಸೆಯ ಅಥವಾ ಕಿರುಕುಳದ ಕಾರಣದಿಂದಾಗಿ ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಬೇಕಾದ ಬಲವಂತಕ್ಕೆ ಒಳಗಾದ ಜನರು ಅನುಭವಿಸಿದ, ಬಾರಿಬಾರಿ ಭಯಗೊಳಿಸುವ ಅಗ್ನಿಪರೀಕ್ಷೆಯ ಆಕ್ಷಣದ ಒಂದು ಚಿತ್ರವನ್ನು ಇದು ಒದಗಿಸುತ್ತದೆ. ಉದ್ದೇಶವನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಲೆಂದು WEFನಲ್ಲಿ ಅನನ್ಯ ಸ್ವರೂಪದ ಅನುಕರಣೆಯನ್ನು ಬಳಸಲಾಗುತ್ತಿದೆ; ನಿರಾಶ್ರಿತರ ಮತ್ತು ಆಂತರಿಕವಾಗಿ ಸ್ಥಳಾಂತರಿಸಲ್ಪಟ್ಟ ಜನರ ದುರವಸ್ಥೆಯನ್ನು ವಿಶ್ವದ ಅತ್ಯಂತ ಪ್ರಭಾವಿ ಜನರ ಪೈಕಿ ಕೆಲವರು ಅರ್ಥೈಸಿಕೊಳ್ಳುವುದಕ್ಕೆ ಹಾಗೂ ಅವನ್ನು ತಾದಾತ್ಮ್ಯಾನುಭವದಿಂದ ಗ್ರಹಿಸುವುದಕ್ಕೆ ನೆರವಾಗುವ ಮತ್ತು ಪೀಡಿತರಿಗೆ ನೆರವಾಗುವಲ್ಲಿ UNHCR ಹಮ್ಮಿಕೊಂಡಿರುವ ಪ್ರಯತ್ನಗಳಿಗೆ ಬೆಂಬಲ ಕೇಳುವ ಉದ್ದೇಶವನ್ನು ಈ ಅನುಕರಣೆಯು ಹೊಂದಿದೆ.[೪೯][೫೦]

1990ರ ದಶಕದ ಅಂತ್ಯಭಾಗದಲ್ಲಿ, G7, ವಿಶ್ವ ಬ್ಯಾಂಕು, WTO, ಮತ್ತು IMFಗಳ ಜೊತೆಯಲ್ಲಿ WEF ಸಂಘಟನೆಯೂ ಸಹ ಜಾಗತೀಕರಣ-ವಿರೋಧಿ ಕ್ರಿಯಾವಾದಿಗಳಿಂದ ಭಾರೀ ಟೀಕೆಗೆ ಒಳಗಾಯಿತು. ಬಂಡವಾಳ ನೀತಿ ಮತ್ತು ಜಾಗತೀಕರಣಗಳು ಬಡತನವನ್ನು ಹೆಚ್ಚಿಸುತ್ತಿವೆ ಮತ್ತು ಪರಿಸರವನ್ನು ನಾಶಪಡಿಸುತ್ತಿವೆ ಎಂಬುದು ಈ ಕ್ರಿಯಾವಾದಿಗಳ ಸಮರ್ಥನೆಯಾಗಿತ್ತು. ಆಸ್ಟ್ರೇಲಿಯಾದ ಮೆಲ್ಬೋರ್ನ್‌‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಭೆಗೆ ಬರುತ್ತಿದ್ದ 200 ಪ್ರತಿನಿಧಿಗಳ ಸಾಗಣೆಗೆ ತಡೆಯೊಡ್ಡುವ ಮೂಲಕ, 1500 ಪ್ರದರ್ಶನಕಾರರು ಈ ಸಭೆಗೆ ಅಡ್ಡಿಪಡಿಸಿದರು.[೫೧] ಬೊನೊ ಎಂಬ ರಾಕ್‌ ಸಂಗೀತದ ಗಾಯಕನು ಸದರಿ ಸಭೆಯ ಕುರಿತು ಮಾತನಾಡುತ್ತಾ ಇದು "ಹಿಮದಲ್ಲಿ ಕೊಬ್ಬಿದ ಬೆಕ್ಕುಗಳು" ಆಯೋಜಿಸಿರುವ ಸಭೆ ಎಂಬುದಾಗಿ ಕುಹಕವಾಗಿ ಉಲ್ಲೇಖಿಸಿದ್ದರ ವಿರುದ್ಧ ಪ್ರತಿಭಟಿಸಲೆಂದು, ದಾವೋಸ್‌ನಲ್ಲಿ ಪ್ರತಿಭಟನೆಗಳು ಪದೇ ಪದೇ ಆಯೋಜಿಸಲ್ಪಟ್ಟವು; ನೋಡಿ: ಸ್ವಿಜರ್‌ಲೆಂಡ್‌ನಲ್ಲಿನ WEF-ವಿರೋಧಿ ಪ್ರತಿಭಟನೆಗಳು, ಜನವರಿ 2003.[೫೨]

ನೊವಾಮ್‌ ಚೋಮ್ಸ್‌ಕಿ ಎಂಬ ಅಮೆರಿಕಾದ ಓರ್ವ ಭಾಷಾಶಾಸ್ತ್ರಜ್ಞ ಮತ್ತು ಸಾರ್ವಜನಿಕ ಬುದ್ಧಿಜೀವಿಯ ಅಭಿಪ್ರಾಯದ ಅನುಸಾರ, ಹೂಡಿಕೆದಾರರು ಮತ್ತು ವಿಶೇಷ ಹಕ್ಕುಪಡೆದ ಗಣ್ಯರು ಅಥವಾ ವಿಶ್ವ ಆರ್ಥಿಕ ವೇದಿಕೆಯ ಕೆಲವೊಂದು ಸಹಭಾಗಿಗಳ ದೃಷ್ಟಿಕೋನದಲ್ಲಿ ಜಾಗತೀಕರಣ ಎಂಬುದು ಒಂದು ಪ್ರಚಾರ ಪರಿಭಾಷೆಯಾಗಿದೆ.

ಚೋಮ್ಸ್‌ಕಿಯು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, "ಪ್ರಬಲವಾದ ಪ್ರಚಾರ ವ್ಯವಸ್ಥೆಗಳು "ಜಾಗತೀಕರಣ" ಎಂಬ ಶಬ್ದವನ್ನು ತಾವು ಒಲವು ತೋರುವ ಅಂತರರಾಷ್ಟ್ರೀಯ ಆರ್ಥಿಕ ಸಮಗ್ರೀಕರಣದ ಉದ್ದೇಶಿತ ರೂಪಾಂತರವನ್ನು ಉಲ್ಲೇಖಿಸಲೆಂದು ಮೀಸಲಿಟ್ಟಿವೆ; ಈ ರೂಪಾಂತರವು ಹೂಡಿಕೆದಾರರು ಮತ್ತು ಸಾಲದಾತರ, ಪ್ರಾಸಂಗಿಕವಾಗಿರುವ ಜನರ ಹಕ್ಕುಗಳಿಗೆ ವಿನಾಯಿತಿಯನ್ನು ನೀಡುತ್ತದೆ. ಈ ಬಳಕೆಯ ಅನುಸಾರ, ಮಾನವ ಜೀವಿಗಳ ಹಕ್ಕುಗಳಿಗೆ ವಿನಾಯಿತಿಯನ್ನು ನೀಡುವ ಅಂತರರಾಷ್ಟ್ರೀಯ ಸಮಗ್ರೀಕರಣದ ಒಂದು ವಿಭಿನ್ನ ಸ್ವರೂಪಕ್ಕೆ ಒಲವು ತೋರುವವರು 'ಜಾಗತಿಕತಾ-ವಿರೋಧಿ' ಎನಿಸಿಕೊಳ್ಳುತ್ತಾರೆ. ಅಸಹ್ಯ ಹುಟ್ಟಿಸುವ ಬಹುಪಾಲು ಕಾಮಿಸಾರ್‌‌ಗಳಿಂದ (ಸೋವಿಯೆಟ್‌ ಸರ್ಕಾರದಲ್ಲಿನ ಯಾವುದೇ ಇಲಾಖೆಯ ಮುಖ್ಯಾಧಿಕಾರಿಗಳು) ಬಳಸಲ್ಪಡುವ "ಸೋವಿಯೆಟ್‌-ವಿರೋಧಿ" ಎಂಬ ಪರಿಭಾಷೆಯ ರೀತಿಯಲ್ಲಿಯೇ, ಇದು ಭಿನ್ನಮತೀಯರನ್ನು ಉಲ್ಲೇಖಿಸಲೆಂದು ಇರುವ ಅಸಭ್ಯ ಪ್ರಚಾರವಾಗಿದೆ. ಇದು ಅಸಭ್ಯ ಮಾತ್ರವೇ ಅಲ್ಲದೇ ಹೆಡ್ಡತನದ ಪರಿಭಾಷೆಯೂ ಆಗಿದೆ. ಪ್ರಚಾರ ವ್ಯವಸ್ಥೆಯಲ್ಲಿ "ಜಾಗತೀಕರಣ-ವಿರೋಧಿ" ಎಂಬುದಾಗಿ ಕರೆಯಲ್ಪಡುವ ವಿಶ್ವ ಸಾಮಾಜಿಕ ವೇದಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ- ಇದು ಅಪರೂಪದ ವಿನಾಯಿತಿಗಳನ್ನು ಹೊಂದಿರುವ ಮಾಧ್ಯಮಗಳು, ಶಿಕ್ಷಿತ ವರ್ಗಗಳು ಇತ್ಯಾದಿಗಳನ್ನು ಒಳಗೊಂಡಿರುವುದು ಕಂಡುಬರುತ್ತದೆ. WSF ಸಂಘಟನೆಯು ಜಾಗತೀಕರಣದ ಒಂದು ಮಾದರಿ ಉದಾಹರಣೆಯಾಗಿದೆ. ಸ್ಪರ್ಧಾತ್ಮಕ ವಿಶ್ವ ಆರ್ಥಿಕ ವೇದಿಕೆಯಲ್ಲಿ ಸಭೆ ಸೇರುವ ಅಥವಾ ಭೇಟಿಮಾಡುವ ಅತೀವವಾಗಿ ಸಂಕುಚಿತ ಸ್ವರೂಪದ, ಹೆಚ್ಚಿನ ವಿಶೇಷ ಹಕ್ಕುಪಡೆದ ಗಣ್ಯರ, ಮತ್ತು ಪ್ರಚಾರ ವ್ಯವಸ್ಥೆಯಿಂದ "ಜಾಗತೀಕರಣದ-ಪರ" ಎಂದು ಕರೆಯಲ್ಪಡುವವರ ಹೊರತಾಗಿಯೂ, ಇದು ವಿಶ್ವದ ಎಲ್ಲ ಭಾಗಗಳಿಗೂ ಸೇರಿದ ಬೃಹತ್‌‌ ಸಂಖ್ಯೆಯ ಜನರ, ಓರ್ವರು ಭಾವಿಸಬಹುದಾದ ಜೀವನದ ಎಲ್ಲ ಮೂಲೆಗಳಿಗೂ ಸೇರಿದ ಜನರ ಒಂದು ಜಮಾವಣೆಯಾಗಿದೆ. ಮಂಗಳಗ್ರಹದಿಂದ ಈ ಪ್ರಹಸನವನ್ನು ವೀಕ್ಷಿಸುತ್ತಿರುವ ಓರ್ವ ವೀಕ್ಷಕನು, ಶಿಕ್ಷಿತ ವರ್ಗಗಳ ವಿಕಟವರ್ತನೆಗಳನ್ನು ನೋಡುತ್ತಾ ನಗುವನ್ನು ನಿಯಂತ್ರಿಸಲಾಗದೆಯೇ ಕುಸಿದುಬೀಳುತ್ತಾನೆ" ಎಂದು ನುಡಿದ.

2000ನೇ ಇಸವಿಯ ಜನವರಿಯಲ್ಲಿ, 1,000 ಪ್ರತಿಭಟನಾಕಾರರು ದಾವೋಸ್‌ನ ಬೀದಿಗಳ ಮೂಲಕ ಮೆರವಣಿಗೆ ನಡೆಸಿದರು ಮತ್ತು ಸ್ಥಳೀಯ ಮೆಕ್‌ಡೊನಾಲ್ಡ್‌‌'ಸ್‌‌ ಉಪಾಹಾರ ಮಂದಿರದ ಕಿಟಕಿಯನ್ನು ಪುಡಿಮಾಡಿದರು.[೫೩] ದಾವೋಸ್‌ ಸುತ್ತಲೂ ವ್ಯವಸ್ಥೆಗೊಳಿಸಲಾಗಿರುವ ಬಿಗಿ ಭದ್ರತಾ ಕ್ರಮಗಳು ಪ್ರದರ್ಶನಕಾರರನ್ನು ಆಲ್ಪೈನ್‌‌ ವಿಹಾರಧಾಮದಿಂದ ದೂರದಲ್ಲಿ ಇರಿಸಿವೆ ಮತ್ತು ಬಹುಪಾಲು ಪ್ರತಿಭಟನೆಗಳನ್ನು ಈಗ ಝೂರಿಚ್‌, ಬರ್ನ್‌ ಅಥವಾ ಬೇಸೆಲ್‌‌ನಲ್ಲಿ ಹಮ್ಮಿಕೊಳ್ಳಲಾಗುತ್ತದೆ.[೫೪] ವೇದಿಕೆಯಿಂದ ಹಾಗೂ ಸ್ವಿಸ್‌ ಮಂಡಲದ ಪ್ರಾಧಿಕಾರ ಮತ್ತು ರಾಷ್ಟ್ರೀಯ ಪ್ರಾಧಿಕಾರಗಳಿಂದ ಹಂಚಿಕೊಳ್ಳಲ್ಪಟ್ಟಿರುವ ಭದ್ರತಾ ಕ್ರಮಗಳ ಕುರಿತಾದ ವೆಚ್ಚಗಳು, ಸ್ವಿಸ್‌ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪದೇಪದೇ ಟೀಕೆಗೆ ಒಳಗಾಗಿವೆ.[೫೫]

ದಾವೋಸ್‌ನಲ್ಲಿ 2003ರ ಜನವರಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಪ್ರಾರಂಭವಾಗಿ ಸ್ವಿಸ್‌ ಪ್ರಾಟಿಸ್ಟೆಂಟ್‌ ಚರ್ಚುಗಳ ಒಕ್ಕೂಟದ ಸಹ-ಸಂಘಟನೆಯಲ್ಲಿ ರೂಪುಗೊಂಡ ಓಪನ್‌ ಫೋರಮ್‌ ದಾವೋಸ್‌[೫೬] ಎಂಬ ಒಂದು ಅಭಿವ್ಯಕ್ತಿ-ವೇದಿಕೆಯನ್ನು ಸಮಾನಾಂತರವಾಗಿ ಆಯೋಜಿಸಲಾಯಿತು; ಜಾಗತೀಕರಣದ ಕುರಿತಾದ ಚರ್ಚೆಯನ್ನು ಜನಸಾಮಾನ್ಯರಿಗೂ ಮುಕ್ತವಾಗಿರಿಸುವ ಉದ್ದೇಶವನ್ನು ಇದು ಹೊಂದಿತ್ತು. ಅಗ್ರಗಣ್ಯ ರಾಜಕಾರಣಿಗಳು ಮತ್ತು ವ್ಯವಹಾರ ನಾಯಕರನ್ನು ಒಳಗೊಂಡಿರುವ ಸದರಿ ಮುಕ್ತ ವೇದಿಕೆಯನ್ನು ಪ್ರತಿ ವರ್ಷವೂ ಸ್ಥಳೀಯ ಪ್ರೌಢಶಾಲೆಯಲ್ಲಿ ಆಯೋಜಿಸಲಾಗುತ್ತದೆ ಮತ್ತು ಸಾರ್ವಜನಿಕ ವಲಯದ ಸದಸ್ಯರೆಲ್ಲರೂ ಇದರಲ್ಲಿ ಉಚಿತವಾಗಿ ಪಾಲ್ಗೊಳ್ಳಬಹುದಾಗಿದೆ.[೫೭][೫೮]

ವಾರ್ಷಿಕ ಸಭೆಯು "ಆಡಂಬರ ಮತ್ತು ಚರ್ವಿತ ಚರ್ವಣತೆಯ ಮಿಶ್ರಣ" ಎಂಬುದಾಗಿಯೂ ಹೀಯಾಳಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಗಂಭೀರ ಅರ್ಥಶಾಸ್ತ್ರದ ವಿಷಯದಿಂದ ಆಚೆಗೆ ಹೊರಳುದಾರಿಯನ್ನು ತುಳಿಯುತ್ತಿರುವುದಕ್ಕಾಗಿ ಮತ್ತು ಅಲ್ಪಮಟ್ಟದಲ್ಲಿ ವಿಷಯದ ಅಗತ್ಯವನ್ನು ಈಡೇರಿಸುತ್ತಿರುವುದಕ್ಕಾಗಿಯೂ ಅದು ಟೀಕೆಗೂ ಒಳಗಾಗಿದೆ; ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ, ಅರ್ಥಶಾಸ್ತ್ರದಲ್ಲಿ ಅಲ್ಪ ಪರಿಣತಿಯನ್ನು ಹೊಂದಿರುವ ಅಥವಾ ಪರಿಣತಿಯನ್ನೇ ಹೊಂದಿಲ್ಲದ NGOಗಳು ವಾರ್ಷಿಕ ಸಭೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿರುವುದೂ ಸಹ ಟೀಕೆಗೆ ಒಳಗಾಗಿದೆ. ಪ್ರಮುಖರೆನಿಸಿಕೊಂಡಿರುವ ವ್ಯವಹಾರ-ವಲಯದ ಮತ್ತು ರಾಜಕೀಯ-ವಲಯದ ಪಾತ್ರಧಾರಿಗಳ ಜೊತೆಗೂಡಿಕೊಂಡು ಚೆನ್ನಾಗಿ ತಿಳಿದುಕೊಂಡಿರುವ ಪರಿಣಿತರೊಂದಿಗೆ ವಿಶ್ವದ ಆರ್ಥಿಕತೆಯ ಮೇಲೆ ಚರ್ಚೆಯೊಂದನ್ನು ನಡೆಸುವುದರ ಬದಲಿಗೆ, ದಾವೋಸ್‌ ಈಗ ವರ್ತಮಾನದ ಅಗ್ರಗಣ್ಯ ಮಾಧ್ಯಮದ ರಾಜಕೀಯ ಕಾರಣಗಳನ್ನು ಒಳಗೊಳ್ಳುತ್ತದೆ; ಜಾಗತಿಕ ಹವಾಮಾನ ಬದಲಾವಣೆ ಮತ್ತು ಆಫ್ರಿಕಾದಲ್ಲಿರುವ AIDS ಇದಕ್ಕೊಂದು ನಿದರ್ಶನವಾಗಿದೆ.[೫೯]

ಇವನ್ನೂ ನೋಡಿ

[ಬದಲಾಯಿಸಿ]
  • ಜಾಗತೀಕರಣ-ವಿರೋಧಿ ಆಂದೋಲನ
  • ಜಾಗತೀಕರಣ
  • ವಿಶ್ವ ಸಾಮಾಜಿಕ ವೇದಿಕೆ
  • ವಿಶ್ವ ಜ್ಞಾನ ವೇದಿಕೆ
  • ವಿಶ್ವ ಆರ್ಥಿಕತೆ

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ಪಿಗ್‌ಮನ್‌ ಪುಟಗಳು 41-42
  2. ಪಿಗ್‌ಮನ್‌ ಪುಟಗಳು 6-22
  3. ಕೆಲ್ಲರ್‌ಮನ್‌ ಪುಟ 229
  4. ಷ್ವಾಬ್‌ ಮತ್ತು ಕ್ರೂಸ್‌
  5. "ಇಂಟರ್‌‌ವ್ಯೂ: ಕ್ಲೌಸ್‌ ಷ್ವಾಬ್‌", ಫೈನಾನ್ಷಿಯಲ್‌ ಟೈಮ್ಸ್‌‌ , 22 ಜನವರಿ 2008, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು
  6. "WEF ಅಂಡ್‌ ದಾವೋಸ್‌: ಎ ಬ್ರೀಫ್‌ ಹಿಸ್ಟರಿ" Archived 2008-04-03 ವೇಬ್ಯಾಕ್ ಮೆಷಿನ್ ನಲ್ಲಿ., ಟೆಲಿಗ್ರಾಫ್‌ , 16 ಜನವರಿ 2008, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  7. "ಗೇಟ್ಸ್‌ ಪುಷಸ್‌ ‘ಕ್ರಿಯೇಟಿವ್‌ ಕ್ಯಾಪಿಟಲಿಸಂ’", ಫೈನಾನ್ಷಿಯಲ್‌ ಟೈಮ್ಸ್‌‌ , 25 ಜನವರಿ 2008, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  8. "''Gates calls for creative capitalism, Reuters (video)''". Reuters.com. 2009-02-09. Retrieved 2010-03-07.
  9. ಪಿಗ್‌ಮನ್‌ ಪುಟಗಳು 58-59
  10. "World Economic Forum — Annual Meeting 2009". Weforum.org. 2009-02-01. Archived from the original on 2012-09-17. Retrieved 2010-03-07.
  11. ಪಿಗ್‌ಮನ್‌ ಪುಟಗಳು 23-30
  12. ರೋಥ್‌ಕೋಫ್‌ ಪುಟ 272
  13. "ಎ ಬಿಗಿನರ್ಸ್‌' ಗೈಡ್‌ ಟು ದಾವೋಸ್‌", BBC ಆನ್‌ಲೈನ್‌‌, 16 ಜನವರಿ 2009, 2009ರ ಜನವರಿ 16ರಂದು ಮರುಸಂಪಾದಿಸಲಾಯಿತು.
  14. Q&A: ವರ್ಲ್ಡ್‌ ಇಕನಾಮಿಕ್‌ ಫೋರಂ 2009 , BBC ಆನ್‌ಲೈನ್‌‌, 16 ಜನವರಿ 2009, 2009ರ ಜನವರಿ 16ರಂದು ಮರುಸಂಪಾದಿಸಲಾಯಿತು.
  15. "Forum's homepage". Weforum.org. Retrieved 2010-03-07.[ಶಾಶ್ವತವಾಗಿ ಮಡಿದ ಕೊಂಡಿ]
  16. "Kanaal van WorldEconomicForum". YouTube. 2010-01-31. Retrieved 2010-03-07.
  17. "World Economic Forum's Photostream". Flickr. Retrieved 2010-03-07.
  18. [೧][ಮಡಿದ ಕೊಂಡಿ]
  19. CH. "World Economic Forum (Davos World Economic forum)". MySpace. Retrieved 2010-03-07.
  20. "World Economic Forum". Facebook. Retrieved 2010-03-07.
  21. "ಯುಟ್ಯೂಬ್‌ ವಾಂಟ್ಸ್‌ ಟು ಬ್ರಿಂಗ್‌ ಯು ಟು ದಿ ವರ್ಲ್ಡ್‌ ಇಕನಾಮಿಕ್‌ ಫೋರಂ ಇನ್‌ ದಾವೋಸ್‌", ಟೆಕ್‌ಕ್ರಂಚ್‌, 15 ಡಿಸೆಂಬರ್‌‌ 2008, 2008ರ ಡಿಸೆಂಬರ್‌‌ 15ರಂದು ಮರುಸಂಪಾದಿಸಲಾಯಿತು.
  22. "ದಿ ದಾವೋಸ್‌ ಡಿಬೇಟ್ಸ್‌", 2008ರ ಡಿಸೆಂಬರ್‌ 15ರಂದು ಮರುಸಂಪಾದಿಸಲಾಯಿತು.
  23. "Kanaal van thedavosquestion". YouTube. Retrieved 2010-03-07.
  24. "ದಿ ಸೂಪರ್‌-ಆವ್‌ಸಮ್‌ ಯುಟ್ಯೂಬ್‌ ರೂಮ್‌ ಅಟ್‌ ದಾವೋಸ್‌", ಟೆಕ್‌ಕ್ರಂಚ್‌, 26 ಜನವರಿ 2008, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  25. "worldeconomicforum on Qik | 30 videos recorded with mobile phones". Qik.com. 2008-02-11. Archived from the original on 2009-02-18. Retrieved 2010-03-07.
  26. "World Economic Forum 2010". Mogulus.com. Archived from the original on 2009-05-04. Retrieved 2010-03-07.
  27. "ಗೆಟಿಂಗ್‌ ಎ ಸೆಕೆಂಡ್‌ ಲೈಫ್‌ ಇನ್‌ ದಾವೋಸ್‌", CNN, 26 ಜನವರಿ 2007, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  28. http://www.weforum.org/pdf/AM_2008/AM08_PublicFiguresList.pdf Archived 2008-10-29 ವೇಬ್ಯಾಕ್ ಮೆಷಿನ್ ನಲ್ಲಿ. "ದಾವೋಸ್‌ 2008 ಗೆಸ್ಟ್‌ ಲಿಸ್ಟ್‌" Archived 2008-06-11 ವೇಬ್ಯಾಕ್ ಮೆಷಿನ್ ನಲ್ಲಿ., ಟೆಲಿಗ್ರಾಫ್‌ , 19 ಜನವರಿ 2008, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  29. "ದಾವೋಸ್‌ ಮ್ಯಾನ್‌'ಸ್‌ ಡೆತ್‌ ವಿಶ್‌", ದಿ ಗಾರ್ಡಿಯನ್‌ , 3 ಫೆಬ್ರುವರಿ 2008, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  30. "ಇನ್‌ ಸರ್ಚ್‌ ಆಫ್‌ ದಾವೋಸ್‌ ಮ್ಯಾನ್‌" Archived 2010-02-15 ವೇಬ್ಯಾಕ್ ಮೆಷಿನ್ ನಲ್ಲಿ., ಟೈಮ್‌ , 23 ಜನವರಿ 2005, 2008ರ ಆಗಸ್ಟ್‌ 29ರಂದು ಮರುಸಂಪಾದಿಸಲಾಯಿತು.
  31. "ವರ್ಲ್ಡ್‌ ಇಕನಾಮಿಕ್‌ ಫೋರಂ: ದಿ ಇನಾಗರಲ್‌ ಆನ್ಯುಯಲ್‌ ಮೀಟಿಂಗ್‌ ಆಫ್‌ ದಿ ನ್ಯೂ ಚಾಂಪಿಯನ್ಸ್‌", China.org, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  32. ಸಮ್ಮರ್‌ ದಾವೋಸ್‌ ಟು ಪುಟ್‌ ಡೇಲಿಯನ್‌ ಆನ್‌ ಬಿಸಿನೆಸ್‌ ಮ್ಯಾಪ್‌ Archived 2012-10-03 ವೇಬ್ಯಾಕ್ ಮೆಷಿನ್ ನಲ್ಲಿ., ಪೀಪಲ್‌‌'ಸ್‌ ಡೇಲಿ, 1 ಆಗಸ್ಟ್‌‌ 2007, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  33. "World Economic Forum — Events". Weforum.org. Retrieved 2010-03-07.
  34. "ಮೀಟ್‌ ಸಮ್‌ ಆಫ್‌ ದಿ ಅಂಡರ್‌-40ಸ್‌ ಸೆಲೆಕ್ಟೆಡ್‌ ಟು ಜಾಯಿನ್‌ ಫೋರ್ಸಸ್‌ ಟು ಶೇಪ್‌ ಎ ಬೆಟರ್‌ ಫ್ಯೂಚರ್‌", ನ್ಯೂಸ್‌ವೀಕ್‌ , 29 ಮೇ 2005, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  35. "ಆರ್ಕೈವ್ ನಕಲು". Archived from the original on 2008-12-19. Retrieved 2010-11-22.
  36. "SOHO中国". SOHO China. Archived from the original on 2012-02-08. Retrieved 2010-03-07.
  37. "David Aikman explains about the Young Global Leaders". YouTube. 2007-10-31. Retrieved 2010-03-07.
  38. "Schwab Foundation for Social Entrepreneurship — Home". Schwabfound.org. Archived from the original on 2019-05-04. Retrieved 2010-03-07.
  39. "ದಾವೋಸ್‌ ಡೈರಿ: ಮೀಟಿಂಗ್ಸ್‌ ಆಫ್‌ ಮೈಂಡ್ಸ್‌", BBC, 31 ಜನವರಿ 2005, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  40. ಮೈಕ್‌ ಮೂರ್‌‌, ಪುಟ 209
  41. ಬಾರ್ನ್‌ಸ್ಟೀನ್‌ ಪುಟ 272
  42. ಪಿಗ್‌ಮನ್‌ ಪುಟಗಳು 43, 92-112
  43. 2009ರ ಜಾಗತಿಕ ಅಪಾಯದ ವರದಿ Archived 2009-02-25 ವೇಬ್ಯಾಕ್ ಮೆಷಿನ್ ನಲ್ಲಿ., ವಿಶ್ವ ಆರ್ಥಿಕ ವೇದಿಕೆ.
  44. "World Economic Forum — Scenario Planning". Weforum.org. Archived from the original on 2009-07-29. Retrieved 2010-03-07.
  45. "ಬಿಸಿನೆಸ್‌ ಚೀಫ್ಸ್‌ ಅರ್ಜ್‌ ಕಾರ್ಬನ್‌ ಕರ್ಬ್ಸ್‌", BBC, 20 ಜೂನ್‌ 2008, 2008ರ ಸೆಪ್ಟೆಂಬರ್‌‌ 3ರಂದು ಮರುಸಂಪಾದಿಸಲಾಯಿತು.
  46. "ಬಿಸಿನೆಸ್‌ ಚೀಫ್ಸ್‌ ಕಾಲ್‌ ಫಾರ್‌ G8 ಕ್ಲೈಮೇಟ್‌ ಲೀಡರ್‌ಷಿಪ್‌", ರಾಯಿಟರ್ಸ್‌‌, 19 ಜೂನ್‌ 2008, 2008ರ ಸೆಪ್ಟೆಂಬರ್‌‌ 3ರಂದು ಮರುಸಂಪಾದಿಸಲಾಯಿತು,
  47. ಪಿಗ್‌ಮನ್‌ ಪುಟ 115
  48. "World Economic Forum — Technology Pioneers". Weforum.org. Archived from the original on 2009-10-01. Retrieved 2010-03-07.
  49. United Nations High Commissioner for Refugees (2010-01-29). "VIPs share refugee experience in Davos; UNHCR co-launches business partnership site". UNHCR. Retrieved 2010-03-07.
  50. "Displaced person | Marketplace World Economic Forum | Marketplace from American Public Media". Publicradio.org. 2010-01-29. Archived from the original on 2016-03-06. Retrieved 2010-03-07.
  51. "ಇಕನಾಮಿಕ್‌ ಟಾಕ್ಸ್‌ ಓಪನ್‌ ಮೈನಸ್‌ 200 ಡೆಲಿಗೇಟ್ಸ್‌: ಡೆಮಾನ್ಸ್‌ಟ್ರೇಟರ್ಸ್‌ ಹರಾಸ್‌ ಮೆಲ್ಬೋರ್ನ್‌ ಕಾನ್ಫರೆನ್ಸ್‌", ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌‌ , 12 ಸೆಪ್ಟೆಂಬರ್‌‌ 2000, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  52. "ಬೊನೊ ಟೀಮ್ಸ್‌ ಅಪ್‌ ವಿತ್‌ ಅಮೆಕ್ಸ್‌, ಗ್ಯಾಪ್‌ ಫಾರ್‌ ಪ್ರಾಡಕ್ಟ್‌ ರೆಡ್‌" Archived 2008-09-08 ವೇಬ್ಯಾಕ್ ಮೆಷಿನ್ ನಲ್ಲಿ., ಫೋರ್ಬ್ಸ್‌ , 21 ಜನವರಿ 2006, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  53. "ದಿ ದಾವೋಸ್‌ ಬಜ್‌‌", ಫೋರ್ಬ್ಸ್‌ , 22 ಜನವರಿ 2008, 2008ರ ಆಗಸ್ಟ್‌ 29ರಂದು ಮರುಸಂಪಾದಿಸಲಾಯಿತು.
  54. ಪೊಲೀಸ್‌ ಅರೆಸ್ಟ್‌ 100 ದಾವೋಸ್‌ ಪ್ರೊಟೆಸ್ಟರ್ಸ್‌ Archived 2008-03-23 ವೇಬ್ಯಾಕ್ ಮೆಷಿನ್ ನಲ್ಲಿ., CNN, 28 ಜನವರಿ 2001: 8:24AM EST, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು
  55. "ಟೈಟ್‌ ಸೆಕ್ಯುರಿಟಿ ಸರೌಂಡ್ಸ್‌ ದಾವೋಸ್‌", CNN, 25 ಜನವರಿ 2001, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.
  56. "Open Forum Davos, Schweizerischer Evangelischer Kirchenbund". Openforumdavos.ch. Retrieved 2010-03-07.
  57. ಪಿಗ್‌ಮನ್‌ ಪುಟ 130
  58. "Open Forum". YouTube. Retrieved 2010-03-07.
  59. "ದಾವೋಸ್‌: ಬೀನ್‌ಫೆಸ್ಟ್‌ ಆಫ್‌ ಪಾಂಪ್‌ ಅಂಡ್‌ ಪ್ಲಾಟಿಟ್ಯೂಡ್‌" Archived 2011-06-12 ವೇಬ್ಯಾಕ್ ಮೆಷಿನ್ ನಲ್ಲಿ., ಟೈಮ್ಸ್‌ ಆನ್‌ಲೈನ್‌‌, 22 ಜನವರಿ 2006, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.

ಉಲ್ಲೇಖನದ ಪುಸ್ತಕಗಳು

[ಬದಲಾಯಿಸಿ]
  • ಮೈಕೇಲ್‌ ವೋಲ್ಫ್‌, ದಿ ಎಂಟರ್‌ಟೈನ್‌ಮೆಂಟ್‌ ಇಕಾನಮಿ: ಹೌ ಮೆಗಾ-ಮೀಡಿಯಾ ಫೋರ್ಸಸ್‌ ಆರ್‌ ಟ್ರಾನ್ಸ್‌‌ಫಾರ್ಮಿಂಗ್‌ ಅವರ್‌ ಲೈವ್ಸ್‌ , ರ್ಯಾಂಡಂ ಹೌಸ್‌ನಿಂದ ಪ್ರಕಟಿತ, 1999, ISBN 0-8129-3042-8, 336 ಪುಟಗಳು.
  • ಬಾರ್ಬರಾ ಕೆಲ್ಲರ್‌ಮನ್‌, ರೀಇನ್ವೆಂಟಿಂಗ್‌ ಲೀಡರ್‌ಷಿಪ್‌: ಮೇಕಿಂಗ್‌ ದಿ ಕನೆಕ್ಷನ್‌ ಬಿಟ್ವೀನ್‌ ಪಾಲಿಟಿಕ್ಸ್‌ ಅಂಡ್ ಬಿಸಿನೆಸ್‌ , SUNY ಪ್ರೆಸ್‌‌ನಿಂದ ಪ್ರಕಟಿತ, 1999, ISBN 0-7914-4072-9, 268 ಪುಟಗಳು.
  • ‌‌ಡೇವಿಡ್ ಬಾರ್ನ್‌ಸ್ಟೀನ್‌, ಹೌ ಟು ಚೇಂಜ್‌ ದಿ ವರ್ಲ್ಡ್‌: ಸೋಷಿಯಲ್‌ ಎಂಟರ್‌ಪ್ರೆನ್ಯೂರ್ಸ್‌ ಅಂಡ್‌ ದಿ ಪವರ್‌ ಆಫ್‌ ನ್ಯೂ ಐಡಿಯಾಸ್‌ , ಆಕ್ಸ್‌‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌ USನಿಂದ ಪ್ರಕಟಿತ, 2007, ISBN 0-19-533476-0, 358 ಪುಟಗಳು.
  • ಡೇವಿಡ್‌‌ ರೋಥ್‌ಕೋಫ್‌, ಸೂಪರ್‌‌ಕ್ಲಾಸ್‌: ದಿ ಗ್ಲೋಬಲ್‌ ಪವರ್‌ ಎಲೈಟ್‌ ಅಂಡ್‌ ದಿ ವರ್ಲ್ಡ್‌ ದೆ ಆರ್‌ ಮೇಕಿಂಗ್‌‌ , ಫರಾರ್‌‌, ಸ್ಟ್ರೌಸ್‌ ಮತ್ತು ಗಿರೌಕ್ಸ್‌ರಿಂದ ಪ್ರಕಟಿತ, 2008, ISBN 0-374-27210-7, 400 ಪುಟಗಳು.
  • ಜೆಫ್ರಿ ಅಲೆನ್‌ ಪಿಗ್‌ಮನ್‌, ಗ್ಲೋಬಲ್‌ ಇನ್‌ಸ್ಟಿಟ್ಯೂಷನ್ಸ್‌: ದಿ ವರ್ಲ್ಡ್‌ ಇಕನಾಮಿಕ್‌ ಫೋರಂ - ಎ ಮಲ್ಟಿ-ಸ್ಟೇಕ್‌ಹೋಲ್ಡರ್‌ ಅಪ್ರೋಚ್‌ ಟು ಗ್ಲೋಬಲ್‌ ಗವರ್ನೆನ್ಸ್‌ , ರೌಟ್‌ಲೆಡ್ಜ್‌‌ನಿಂದ ಪ್ರಕಟಿತ, 2007, ISBN 978-0-415-70204-1, 175 ಪುಟಗಳು.
  • ಕ್ಲೌಸ್‌ M. ಷ್ವಾಬ್‌ ಮತ್ತು ಹೀನ್‌‌ ಕ್ರೂಸ್‌, ಮಾಡರ್ನೆ ಅಂಟರ್‌ನೆಹ್ಮೆನ್ಸ್‌ಫಹ್ರಂಗ್‌ ಇಮ್‌ ಮ್ಯಾಸ್ಕಿನೆನ್‌ಬೌ , ವೆರೀನ್‌ ಡಿಟಿಯಿಂದ ಪ್ರಕಟಿತ. ಮ್ಯಾಸ್ಕಿನೆನ್‌ಬೌ-ಆನ್ಸ್‌‌ಟ್‌. ಇ.ವಿ. ; ಮ್ಯಾಸ್ಕಿನೆನ್‌ಬೌ-ವೆರ್ಲ್‌, 1971.
  • ‌ಮೈಕ್ ಮೂರ್‌‌, ಎ ವರ್ಲ್ಡ್‌ ವಿಥೌಟ್‌ ವಾಲ್ಸ್‌: ಫ್ರೀಡಮ್‌, ಡೆವಲಪ್‌ಮೆಂಟ್‌, ಫ್ರೀ ಟ್ರೇಡ್‌ ಅಂಡ್‌ ಗ್ಲೋಬಲ್‌ ಗವರ್ನೆನ್ಸ್‌ , ಕೇಂಬ್ರಿಜ್‌ ಯೂನಿವರ್ಸಿಟಿ ಪ್ರೆಸ್‌ನಿಂದ ಪ್ರಕಟಿತ, 2003, ISBN 0-521-82701-9, 292 ಪುಟಗಳು.

ಬಾಹ್ಯ ಕೊಂಡಿಗಳು

[ಬದಲಾಯಿಸಿ]