ಮೋಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೮ ನೇ ಸಾಲು: ೧೮ ನೇ ಸಾಲು:


== ಷಡ್ದರ್ಶನಗಳಲ್ಲಿ ಮೋಕ್ಷ==
== ಷಡ್ದರ್ಶನಗಳಲ್ಲಿ ಮೋಕ್ಷ==
::'''ಸಾಂಖ್ಯದರ್ಶನ'''
:ಸಾಂಖ್ಯದರ್ಶನದ ಪ್ರಕಾರ ಪುರುಷನು ಪ್ರಕೃತಿಯ ಸಂಪರ್ಕವನ್ನು ಪೂರ್ತಿಯಾಗಿ ಕಳೆದು ಕೊಳ್ಳುವುದೇ ಮೋಕ್ಷ . ಪ್ರಕೃತಿಸಂಬಂಧದಿಂದ ಬದ್ಧತೆ ಯಾಗುತ್ತದೆ ; ಕರ್ತೃತ್ವ ಭೋರ್ಕ್ತೃತ್ವ ದಿಂದ ದುಃಖ ; ಪ್ರಕೃತಿಯೇ ಬಂಧಕ್ಕೆ ಕಾರಣವೆಂಬ ಅರಿವೇ ಅಪವರ್ಗ ಅಥವಾ ಕೈವಲ್ಯಕ್ಕೆ ದಾರಿ. ಕೈವಲ್ಯ ಪುರುಷನ ನಿಜ ಸ್ವರೂಪ ಸ್ಥಿತಿ . ದುಃಖದ ಲೇಶವೂ ಇಲ್ಲರ ಸ್ಥಿತಿ. ಅಲ್ಲಿ ಆನಂದವೂಇಲ್ಲ ದುಃಖವೂ ಇಲ್ಲ. '''ಜೀವನ್ಮುಕ್ತಿ''' '''ವಿದೇಹ ಮುಕ್ತಿ''' ಎಂಬ ಅರಡೂ ಬಗೆಯ ಮುಕ್ತಿ ಇದೆ.
::'''ಯೋಗ ದರ್ಶನ'''
::'''ಯೋಗ ದರ್ಶನ'''
:ಯೋಗ ದರ್ಶನವೂ ಸಾಂಖ್ಯ ಮತವನ್ನೊಪ್ಪುತ್ತದೆ.Sದರೆ ಧ್ಯಾನ ಮಾಡುವ ವಸ್ತುವಿನಲ್ಲಿ ಮನಸ್ಸು ಲೀನವಾದರೆ -ಅದು '''ಸಂಪ್ರಜ್ಞಾತ ಸಮಾಧಿ''' -ಅದೇ '''ಕೈವಲ್ಯ'''. ವಿಶುದ್ಧ ಚೈತನ್ಯವು ತಾನೇತಾನಾಗಿರುವುದು -'''ಅಸಂಪ್ರಜ್ಞಾತ ಸಮಾಧಿ''' . ಇದು ನಿಜವಾದ ಕೈವಲ್ಯ ಸ್ಥಿತಿ. ಇದು ಯೋಗದ ಗುರಿ. ಇದಕ್ಕೆ ಯಮ, ನಿಯಮಾದಿಗಳು ಸಾಧನೆಯ ದಾರಿ.
ಮೂದುವರಯುವುದು / ಮುಂದುವೆದಿದೆ.
::'''ನ್ಯಾಯ ದರ್ಶನ'''
:ನ್ಯಾಯದರ್ಶನವೂ ಯೋಗ ದರ್ಶನದ ಸಾಧನೆಗಳನ್ನು ಒಪ್ಪಿದೆ ; ದುಃಖದ ನಿವೃತ್ತಿಯನ್ನು -ಅಪವರ್ಗ ಅಥವಾ ಮೋಕ್ಷವೆನ್ನುತ್ತದೆ. ಇದು-ಮೋಕ್ಷ , ಅಜ್ಞಾನದ ನಿವೃತ್ತಿ ಅಥವಾ ಜ್ಞಾನ ಪ್ರಾಪ್ತಿಯಿಂದ ಸಾಧ್ಯ. ಮುಕ್ತಾವಸ್ಥೆಯಲ್ಲಿ ಆತ್ಮನಲ್ಲಿ ಯಾವ ಗೂಣಗಳೂ ಇರುವುದಿಲ್ಲ. ಎಲ್ಲಾ ಸಂಸ್ಕಾರ , ಭಾವನೆಗಳಿಂದ ಅತೀತವಾಗಿದ್ದು -ಆತ್ಮನ ವಿಶುದ್ಧ ರೂಪ. ಆನಂದವೂ ಇಲ್ಲ -ದುಃಖವೂ ಇಲ್ಲ. ಆತ್ಮನಲ್ಲಿ ಚೈತನ್ಯವುಂಟಾಗುವುದು ಶರೀರ ಸಂಪರ್ಕದಿಂದ ಮಾತ್ರಾ .
::'''ವೈಶೇಷಿಕ ದರ್ಶನ'''
:ವೈಶೇಷಿಕ ದರ್ಶನವೂ ಮೋಕ್ಷ ವಿಚಾರದಲ್ಲಿ , ನ್ಯಾಯ ದರ್ಶನದ ಮತವನ್ನೇ ಅನುಸರಿಸುತ್ತದೆ. ಆತ್ಮನಲ್ಲಿ ಆನಂದವೂ ಇಲ್ಲ , ದುಃಖವೂ ಇಲ್ಲ. ಆದರೆ ಈ ಅಭಿಪ್ರಾಯವು ಟೀಕೆಗೆ ಒಳಗಾದ್ದರಿಂದ ನಂತರದ ವೈಶೇಷಿಕರು ಮೋಕ್ಷದಲ್ಲಿ ನಿರತಿಶಯ ಸುಖವಿದೆಯೆಂದು ಹೇಳಿದ್ದಾರೆ.
::'''ಪೂರ್ವ ಮೀಮಾಂಸಕರು (ಕರ್ಮವಾದಿಗಳು)'''
ಮುಂದುವರಯುವುದು / ಮುಂದುವರೆದಿದೆ.


== ನೋಡಿ ==
== ನೋಡಿ ==

೧೮:೧೩, ೧೪ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

ಮೋಕ್ಷ ಯೋಗದಲ್ಲಿ ಒಂದು ಮುಖ್ಯ ಪರಿಕಲ್ಪನೆ.ಇಲ್ಲಿ ಇದು ಎಚ್ಚರದ,ಸ್ವಾತಂತ್ರ್ಯದ ಮತ್ತು ಬಿಡುಗಡೆಯ ಸ್ಥಿತಿ.[೧]

ಮೋಕ್ಷ - ಪೀಠಿಕೆ

ಮೋಕ್ಷವೆಂದರೆ, ಹಿಂದೂ ಮತ್ತು ಜೈನ ಧರ್ಮದ ಪ್ರಕಾರ, ಜನನ-ಮರಣದ ಚಕ್ರಗಳಿಂದ ಜೀವಚರಗಳಿಗೆ ಸಿಗುವ ಮುಕ್ತಿ. ಪ್ರತಿಯೊಬ್ಬನ ಪರಮೋಚ್ಚ ಗುರಿ ಇದಾಗಿರುತ್ತದೆ. ಇದು ಭಾರತೀಯ ದರ್ಶನನಗಳ ಪ್ರಕಾರ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದು-ಮೋಕ್ಷ ಕೊನೆಯದು. ಧರ್ಮ,ಅರ್ಥ ಮತ್ತು ಕಾಮ ಉಳಿದ ಮೂರು.ಮನುಷ್ಯನ ಮರಣ ಸಂಭವಿಸಿದಾಗ ದೇಹದೊಳಗಿನ ಆತ್ಮ ಮರುಹುಟ್ಟು ಪಡೆಯದೆ ಪರಮಾತ್ಮನಲ್ಲಿ ಐಕ್ಯ ಹೊಂದುವುದು. ಈ ಸ್ಥಿತಿ ಸ್ವರ್ಗಕ್ಕಿಂತ ಶ್ರೇಷ್ಠ. ಎಕೆಂದರೆ ಸ್ವರ್ಗ ಪ್ರಾಪ್ತಿ ಕೇವಲ ಮನುಷ್ಯನ ಪಾಪ ಪುಣ್ಯಗಳನ್ನು ಆಧರಿಸಿದ್ದು ಅದು ಮುಗಿದ ಮೇಲೆ ಕರ್ಮಾನುಸಾರ ಮರು ಹುಟ್ಟು ಪಡೆಯಬೇಕಾಗುತ್ತದೆ.ಆದರೆ ಮುಕ್ತಿ ಅಥವಾ ಮೋಕ್ಷದ ಸ್ಥಿತಿ ಅನಂತಕಾಲ ಅನಂದಾತಿಶಯದಲ್ಲಿ ಇರುವಂತಹ ಸ್ಥಿತಿ.ಈ ವಿಚಾರಸಲ್ಲಿ ಭಾರತೀಯ ದರ್ಶನಗಳಲ್ಲಿ ಒಮ್ಮತವಿಲ್ಲ ; ಒಂದೊಂದು ದರ್ಶನದಲ್ಲಿ ಒಂದೊಂದು ರೀತಿ ಹೇಳಿದೆ. (ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ);ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷವು ಒಂದು ಚರ್ಚಾವಿಷಯವಾಗಿದೆ.

ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

ಮೋಕ್ಷವೆಂದರೆ ಬಿಡುಗಡೆ; ಜನ್ಮಾಂತರ ಚಕ್ರದ ಅಂತ್ಯ.ಅಂತ್ಯವಿಲ್ಲದ ಆನಂದ ಮಯ ಸ್ಥಿತಿ . ಭಾರತೀಯ ತಾತ್ವಿಕ -ಧಾರ್ಮಿಕ ಜೀವನದ ಅಂತಿಮ ಗುರಿ. ಅದು ಪರಮ (ಅಂತಿಮ) ಪುರುಷಾರ್ಥ.

ನಿರೀಶ್ವರವಾದಿಗಳಲ್ಲಿ ಮೋಕ್ಷ

ಚರ್ವಾಕರು ಮೋಕ್ಷವೆನ್ನುವುದು ಕೇವಲ ಕಲ್ಪನೆ ಎನ್ನುತ್ತಾರೆ . ಅವರ ದೃಷ್ಟಿಯಲ್ಲಿ ಸಾವೇ ಬಿಡುಗಡೆ . ಏಕೆಂದರೆ ಅವರಿಗೆ ಪುನರ್ಜನ್ಮದಲ್ಲಿ ಮತ್ತು ದೇವರಲ್ಲಿ ನಂಬುಗೆ ಇಲ್ಲ.
ಜೈನರು
ಜೈನರು ದೇವರು ಅಥವಾ ಮೂಲಚೈತನ್ಯ ಪರಬ್ರಹ್ಮವನುಪ್ಪುವುದಿಲ್ಲ . ಅವರ ಮೋಕ್ಷದ ವ್ಯಾಖ್ಯೆ ಬೇರೆಯೇ ಇದೆ.
ಜೈನರು ಕರ್ಮ ಕ್ಷಯವೇ ಮೋಕ್ಷವೆನ್ನುತ್ತಾರೆ. ಕರ್ಮ ಒಂದು ಭೌತವಸ್ತು -ಪುದ್ಗಲ. ರಾಗ, ದ್ವೇಷ, ಅಜ್ಞಾನ , 'ಆಶ್ರವ' ರೀತಿಯಲ್ಲಿ (ಕೊಳವೆ ನೀರಿನಂತೆ ) ಜೀವ ನಲ್ಲಿ ತುಂಬುವುದು. 'ಸಮ್ಯಕ್ ಜ್ಞಾನ' , 'ಸಮ್ಯಕ್ ದರ್ಶನ' , 'ಸಮ್ಯಕ್ ಚಾರಿತ್ರ್ಯ'ದಿಂದ ಈ ಕರ್ಮದ ಆಸ್ರವ ನಿಂತು (ನೀರು ತುಂಬುವುದು ನಿಂತಂತೆ.) 'ಸಂವರ' ಸ್ಥಿತಿ ತಲುಪುವುದು. ನಂತರ 'ನಿರ್ಜರಾ'ದಿಂದ -ಕಾಯ ಕ್ಲೇಶಗಳಿಂದ , ಒಳಗಿರುವ ಕರ್ಮವನ್ನು ಹೊರಹಾಕಿ ಕರ್ಮ ಕ್ಷಯವಾದ ಮೇಲೆ ಮುಕ್ತಿ . ಈ ಮುಕ್ತ ಜೀವವು ಲೋಕಾಕಾಶದಲ್ಲಿ 'ಶಿದ್ಧಶಿಲೆ' ಯೆಂಬ ಅತ್ಯುನ್ನತ ಸ್ಥಾನವನ್ನು ಪಡೆಯುತ್ತದೆ. ಅಲ್ಲಿ 'ಅನಂತ ಜ್ಞಾನ' , 'ಅನಂತ ದರ್ಶನ' , 'ಅನಂತ ವೀರ್ಯ(ಶಕ್ತಿ)' , ಸಂಪನ್ನರಾಗಿ ಜೀವವು, ಅನಂತ ಶಾಂತಿ ಪಡೆಯುತ್ತದೆ. ಸಾಧನೆಯಿಂದ ಇದನ್ನು ಎಲ್ಲರೂ ಪಡೆಯಬಹುದು.
ಬೌದ್ಧರು
ಬೌದ್ಧರು ಜೈನರಂತೆ ದೇವರು ಅಥವಾ ಮೂಲಚೈತನ್ಯ ಪರಬ್ರಹ್ಮವನುಪ್ಪುವುದಿಲ್ಲ . ಅವರ ಮೋಕ್ಷದ ವ್ಯಾಖ್ಯೆಯೂ ಬೇರೆಯೇ ಇದೆ.
ಬೌದ್ಧರು ನೋಕ್ಷವನ್ನು 'ನಿರ್ವಾಣ' ಎನ್ನುತ್ತಾರೆ. ನಿರ್ವಾಣನ್ನುವುದಕ್ಕೆ ಅಕ್ಷರಾರ್ಥ -ಅಳಿಸಿಹೋಗುವುದು / ನಂದಿಹೋಗುವುದು.
ಆರ್ಯಸತ್ಯ ಗಳಲ್ಲಿ 'ಅಜ್ಞಾನ'ವೇ ಬಂಧಕ್ಕೆ ಕಾರಣ. ದುಃಖ , ದುಃಖಮೂಲ, ದುಃಖ ನಿವಾರಣಾ ಮಾರ್ಗ , ದುಃಖ ನಿವಾರಣ- 'ಈ ನಾಲ್ಕನ್ನು' ಚೆನ್ನಾಗಿ ತಿಳಿದು -'ಆರ್ಯ ಅಷ್ಟಾಂಗ ಮಾರ್ಗ'ವನ್ನು ಅನುಸರಿಸಿದರೆ ದುಃಖದಿಂದ ಬಿಡುಗಡೆ ದೊರೆಯುತ್ತದೆ. ಸಂಸಾರಕ್ಕೆ ಕಾರಣವಾದ , ವಾಸನೆಗಳೆಲ್ಲಾ ಅಳಿದು ಜ್ಞಾನೋದಯವಾಗುತ್ತದೆ . ಈ ಹಂತ ಪಡೆದವನು ಅರ್ಹತ್ ಆಗುತ್ತಾನೆ. ವೈಬಾಷಿಕರು ಅರ್ಹತನು ಆಸ್ರವ ಕ್ಷಯ ನಂತರ ಜೀವಿಸಿದ್ದರೆ ಅದು 'ಸೋಪಧಿಶೇಷ ಸ್ಥಿತಿ' ; ಮರಣಾನಂತರದ್ದು 'ನಿರುಪಧಿಶೇಷ ಸ್ಥಿತಿ'. ಹೀಗೆ ಎರಡು ಬಗೆ 'ಮೋಕ್ಷ' ವಿದೆ ಎನ್ನುತ್ತಾರೆ. ವಿಜ್ಞಾನವಾದಿಗಳು 'ಕ್ಲೇಷಾವರಣ', 'ಜ್ಞೇಯಾವರಣ' , ನಾಶವೇ ಮೋಕ್ಷ ವೆನ್ನುತ್ತಾರೆ ; ಮಾದ್ಯಮಿಕರು 'ಶೂನ್ಯತಾ ಪ್ರಾಪ್ತಿ'ಯೇ ಮೋಕ್ಷವೆನ್ನುತ್ತಾರೆ.

ಷಡ್ದರ್ಶನಗಳಲ್ಲಿ ಮೋಕ್ಷ

ಸಾಂಖ್ಯದರ್ಶನ
ಸಾಂಖ್ಯದರ್ಶನದ ಪ್ರಕಾರ ಪುರುಷನು ಪ್ರಕೃತಿಯ ಸಂಪರ್ಕವನ್ನು ಪೂರ್ತಿಯಾಗಿ ಕಳೆದು ಕೊಳ್ಳುವುದೇ ಮೋಕ್ಷ . ಪ್ರಕೃತಿಸಂಬಂಧದಿಂದ ಬದ್ಧತೆ ಯಾಗುತ್ತದೆ ; ಕರ್ತೃತ್ವ ಭೋರ್ಕ್ತೃತ್ವ ದಿಂದ ದುಃಖ ; ಪ್ರಕೃತಿಯೇ ಬಂಧಕ್ಕೆ ಕಾರಣವೆಂಬ ಅರಿವೇ ಅಪವರ್ಗ ಅಥವಾ ಕೈವಲ್ಯಕ್ಕೆ ದಾರಿ. ಕೈವಲ್ಯ ಪುರುಷನ ನಿಜ ಸ್ವರೂಪ ಸ್ಥಿತಿ . ದುಃಖದ ಲೇಶವೂ ಇಲ್ಲರ ಸ್ಥಿತಿ. ಅಲ್ಲಿ ಆನಂದವೂಇಲ್ಲ ದುಃಖವೂ ಇಲ್ಲ. ಜೀವನ್ಮುಕ್ತಿ ವಿದೇಹ ಮುಕ್ತಿ ಎಂಬ ಅರಡೂ ಬಗೆಯ ಮುಕ್ತಿ ಇದೆ.
ಯೋಗ ದರ್ಶನ
ಯೋಗ ದರ್ಶನವೂ ಸಾಂಖ್ಯ ಮತವನ್ನೊಪ್ಪುತ್ತದೆ.Sದರೆ ಧ್ಯಾನ ಮಾಡುವ ವಸ್ತುವಿನಲ್ಲಿ ಮನಸ್ಸು ಲೀನವಾದರೆ -ಅದು ಸಂಪ್ರಜ್ಞಾತ ಸಮಾಧಿ -ಅದೇ ಕೈವಲ್ಯ. ವಿಶುದ್ಧ ಚೈತನ್ಯವು ತಾನೇತಾನಾಗಿರುವುದು -ಅಸಂಪ್ರಜ್ಞಾತ ಸಮಾಧಿ . ಇದು ನಿಜವಾದ ಕೈವಲ್ಯ ಸ್ಥಿತಿ. ಇದು ಯೋಗದ ಗುರಿ. ಇದಕ್ಕೆ ಯಮ, ನಿಯಮಾದಿಗಳು ಸಾಧನೆಯ ದಾರಿ.
ನ್ಯಾಯ ದರ್ಶನ
ನ್ಯಾಯದರ್ಶನವೂ ಯೋಗ ದರ್ಶನದ ಸಾಧನೆಗಳನ್ನು ಒಪ್ಪಿದೆ ; ದುಃಖದ ನಿವೃತ್ತಿಯನ್ನು -ಅಪವರ್ಗ ಅಥವಾ ಮೋಕ್ಷವೆನ್ನುತ್ತದೆ. ಇದು-ಮೋಕ್ಷ , ಅಜ್ಞಾನದ ನಿವೃತ್ತಿ ಅಥವಾ ಜ್ಞಾನ ಪ್ರಾಪ್ತಿಯಿಂದ ಸಾಧ್ಯ. ಮುಕ್ತಾವಸ್ಥೆಯಲ್ಲಿ ಆತ್ಮನಲ್ಲಿ ಯಾವ ಗೂಣಗಳೂ ಇರುವುದಿಲ್ಲ. ಎಲ್ಲಾ ಸಂಸ್ಕಾರ , ಭಾವನೆಗಳಿಂದ ಅತೀತವಾಗಿದ್ದು -ಆತ್ಮನ ವಿಶುದ್ಧ ರೂಪ. ಆನಂದವೂ ಇಲ್ಲ -ದುಃಖವೂ ಇಲ್ಲ. ಆತ್ಮನಲ್ಲಿ ಚೈತನ್ಯವುಂಟಾಗುವುದು ಶರೀರ ಸಂಪರ್ಕದಿಂದ ಮಾತ್ರಾ .
ವೈಶೇಷಿಕ ದರ್ಶನ
ವೈಶೇಷಿಕ ದರ್ಶನವೂ ಮೋಕ್ಷ ವಿಚಾರದಲ್ಲಿ , ನ್ಯಾಯ ದರ್ಶನದ ಮತವನ್ನೇ ಅನುಸರಿಸುತ್ತದೆ. ಆತ್ಮನಲ್ಲಿ ಆನಂದವೂ ಇಲ್ಲ , ದುಃಖವೂ ಇಲ್ಲ. ಆದರೆ ಈ ಅಭಿಪ್ರಾಯವು ಟೀಕೆಗೆ ಒಳಗಾದ್ದರಿಂದ ನಂತರದ ವೈಶೇಷಿಕರು ಮೋಕ್ಷದಲ್ಲಿ ನಿರತಿಶಯ ಸುಖವಿದೆಯೆಂದು ಹೇಳಿದ್ದಾರೆ.
ಪೂರ್ವ ಮೀಮಾಂಸಕರು (ಕರ್ಮವಾದಿಗಳು)

ಮುಂದುವರಯುವುದು / ಮುಂದುವರೆದಿದೆ.

ನೋಡಿ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಗೀತೆ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

ಉಲ್ಲೇಖಗಳು

  1. see:
    • Mircea Eliade (1958, Reprinted: 2009), Yoga: Immortality and Freedom, Princeton University Press, ISBN 978-0691142036, pp 33-34;
    • Sarah Strauss (2005), Positioning Yoga, Berg/Oxford International, ISBN 1-85973-739-0, pp 15



"https://kn.wikipedia.org/w/index.php?title=ಮೋಕ್ಷ&oldid=425337" ಇಂದ ಪಡೆಯಲ್ಪಟ್ಟಿದೆ