ಲೂಸಿಯ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಲೂಸಿಯಾ
LuciaKannada.jpg
ತಿನ್ಬೇಡಕಮ್ಮಿ
ನಿರ್ದೇಶನಪವನ್ ಕುಮಾರ್
ನಿರ್ಮಾಪಕಆಡಿಯನ್ಸ್ ಫಿಲ್ಮ್ಸ್ ಮತ್ತು ಹೋಂ ಟಾಕೀಸ್
ಲೇಖಕಪವನ್ ಕುಮಾರ್
ಪಾತ್ರವರ್ಗಸತೀಶ್ ನೀನಾಸಂ
ಶ್ರುತಿ ಹರಿಹರನ್
ಶ್ರುತಿ ಹರಿಹರನ್
ಸಂಗೀತಪೂರ್ಣಚನಂದ್ರ ತೇಜಸ್ವಿ
ಸಂತೋಶ್ ನಾರಾಯಣ್
ಛಾಯಾಗ್ರಹಣಸಿದ್ಧಾರ್ಥ ನೂನಿ
ಸಂಕಲನಸನತ್ ಸುರೇಶ್ ಮತ್ತು ಪವನ್ ಕುಮಾರ್
ಬಿಡುಗಡೆಯಾಗಿದ್ದು೨೦ ಜುಲೈ, ೨೦೧೩ (ಲಂಡನ್ ಫಿಲ್ಮ್ ಫೆಸ್ಟಿವಲ್)
ಸೆಪ್ಟೆಂಬರ್ ೬, ೨೦೧೩ (ಭಾರತ)
ದೇಶಭಾರತ
ಭಾಷೆಕನ್ನಡ
ಬಂಡವಾಳ೦.೭೫ crore (US$೧,೬೬,೫೦೦)
ಬಾಕ್ಸ್ ಆಫೀಸ್೩.೦೦ crore (US$೬,೬೬,೦೦೦)

ಲೂಸಿಯಾ ಒಂದು ರೋಮಾಂಚಕ, ಮನೋವೈಜ್ಞಾನಿಕ ಸತ್ವವಿರುವ ಕನ್ನಡದ ಚಲನಚಿತ್ರ. ಈ ಚಲನಚಿತ್ರವನ್ನು ಪವನ್ ಕುಮಾರ್ ರಚಿಸಿ ನಿರ್ದೇಶಿಸಿದರು[೧]. ಸತೀಶ್ ನೀನಾಸಂ, ಶೃತಿ ಹರಿಹರನ್ ಮತ್ತು ಅಚ್ಯುತ್ ಅವರು ಈ ಚಿತ್ರದಲ್ಲಿ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಒಬ್ಬ ವಿಜ್ಞಾನಿಯ ಪಾತ್ರದಲ್ಲಿ ಸ್ವತಹ ನಿರ್ದೇಶಕ ಪವನ್ ಅವರು ಕೆಲವು ಕ್ಷಣಗಳ ಮಟ್ಟಿಗೆ ತೆರೆಯಮೇಲೆ ಕಾಣಿಸಿಕೊಳ್ಳುತ್ತಾರೆ.

ಭಾರತೀಯ ಚಿತ್ರೋದ್ಯಮದಲ್ಲಿಯೇ ಮೊದಲಬಾರಿಗೆ ಪ್ರೇಕ್ಷಕರೇ ನಿರ್ಮಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ಚಿತ್ರ ಬಿಡುಗಡೆಗೂ ಮುನ್ನ ಲಂಡನ್ ನಲ್ಲಿ ನಡೆದ ೨೦೧೩ ರ ಭಾರತೀಯ ಚಲನಚಿತ್ರ ಉತ್ಸವದಲ್ಲಿ ಪ್ರೇಕ್ಷಕರ ಮನ್ನಣೆಗೆ ಒಳಪಡಿಸಿದ ಚಿತ್ರ[೨].

ತಾರಾಗಣ[ಬದಲಾಯಿಸಿ]

 • ನಿಕ್ಕಿ ಪಾತ್ರದಲ್ಲಿ ಸತೀಶ್ ನೀನಾಸಂ
 • ಶ್ವೇತಾ ಪಾತ್ರದಲ್ಲಿ ಶ್ರುತಿ ಹರಿಹರನ್
 • ಸಂಜಯ್ ಪಾತ್ರದಲ್ಲಿ ಸಂಜಯ್
 • ಶಂಕ್ರಣ್ಣ ಪಾತ್ರದಲ್ಲಿ ಅಚ್ಯುತ್ ಕುಮಾರ್
 • ಕೃಷ್ಣ (ಪೋಲಿಸ್ ಪಾತ್ರದಲ್ಲಿ)

ನಿರ್ಮಾಣ ಮತ್ತು ಹಿನ್ನೆಲೆ[ಬದಲಾಯಿಸಿ]

೨೦೧೧ರ ಡಿಸೆಂಬರ್ ನಲ್ಲಿ ಪವನ್ ಕುಮಾರ್ರವರು ತಮ್ಮ ಲೈಫು ಇಷ್ಟೇನೆಚಿತ್ರದ ನಂತರದ ಯೋಜನೆ, ಲೂಸಿಯಾ ಎಂದು ಘೋಷಿಸಿದರು. ಲೈಫು ಇಷ್ಟೇನೆ ಚಿತ್ರದ ಮೂಲಕ ಸಾಕಷ್ಟು ಯಶಸ್ಸು ಕಂಡಿದ್ದ ಪವನ್ ಅವರು ಲೂಸಿಯಾಗಾಗಿ ಸುಮಾರು ಎರಡು ತಿಂಗಳುಗಳ ಕಾಲ ನಟರಿಗಾಗಿ ಮತ್ತೆ ನಿರ್ಮಾಪಕರಿಗಾಗಿ ಹುಡುಕಾಡಿದರು. ಆದರೆ, ಯಾವುದೇ ನಿರ್ಮಾಕರು ಲೂಸಿಯಾ ಚಿತ್ರಕ್ಕೆ ಹಣ ಹೂಡಲು ಆಸಕ್ತಿ ತೋರದೆ ಇದ್ದಾಗ, Making Enemies[೩] ಎಂಬ ಶೀರ್ಷಿಕೆಯಡಿ ತಮ್ಮ ಬ್ಲಾಗಿನಲ್ಲಿ ಒಂದು ಪ್ರಕಟಣೆಯನ್ನ ಬರೆದರು. ತಮ್ಮ ಈ ಪ್ರಕಟನೆಗೆ ಬಂದ ಪ್ರತಿಕ್ರಿಯೆಗಳುನ್ನು ಕಂಡು, ಪವನ್ ಅವರು ಪ್ರೇಕ್ಷಕರಿಂದಲೇ ಚಿತ್ರ ನಿರ್ಮಾಣಕ್ಕೆ ಹಣ ಹೊಂದಿಸಲು ಪ್ರೇರಿತರಾದರು[೪].

ಸಾಂಪ್ರದಾಯಿಕ ಚಿತ್ರ ನಿರ್ಮಾಣದ ವ್ಯವಸ್ಥೆಯನ್ನ ಬದಿಗಿಟ್ಟು, ಭಾರತೀಯ ಚಿತ್ರೋದ್ಯಮದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ crowdfunding ತಂತ್ರವನ್ನ ಅಳವಡಿಸಿಕೊಂಡ ಚಲನಚಿತ್ರ ಇದು. ಕೇವಲ ೨೭ ದಿನಗಳಲ್ಲಿ ನಿರ್ಮಾಣಕ್ಕೆ ಬೇಕಿದ್ದ ೫೦ ಲಕ್ಷಗಳನ್ನು ಪ್ರೇಕ್ಷಕರ ಮೂಲಕವೇ ಹೊಂದಿಕೆಯಾಯಿತು. ನಂತರ ಚಲನಚಿತ್ರದ ಎಲ್ಲಾ ಬಗೆಯ ಕೆಲಸಗಳಿಗೆ ಹೊಸ ಪ್ರತಿಭೆಗಳ ಹುಡುಕಾಟ ಆರಂಭವಾಯಿತು. ಚಲನಚಿತ್ರದ ನಾಯಕ, ನಾಯಕಿ, ಸಂಗೀತ ನಿರ್ದೇಶಕ, ಹಾಡುಗಾರರು, ಸಹಾಯಕ ನಿರ್ದೇಶನ, ಕಲಾ ನಿರ್ದೇಶನ ಎಲ್ಲ ಬಗೆಯ ಕೆಲಸಗಳಿಗೂ ಹೊಸ ಪ್ರತಿಭೆಗಳಿಂದ ಹೊಸತನಕ್ಕೆ ನಾಂದಿ ಹಾಡುತ್ತಾರೆ. ಈ ಮೂಲಕ ಕನ್ನಡ ಚಲಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಪರಿಚಯವಾಯಿತು. ಈ ರೀತಿ ಚಲನಚಿತ್ರ ನಿರ್ಮಾಣಕ್ಕೆ ಪ್ರೇಕ್ಷಕರನ್ನೇ ನೇರವಾಗಿ ಬಂಡವಾಳಗರರನ್ನಾಗಿ ಮಾಡಿ ಹೊಸತನವನ್ನು ಪ್ರದರ್ಶಿಸಿದ್ದಕ್ಕೆ ಲಂಡನ್ನಿನ ಬ್ರಿಟಿಷ್ ಕೌನ್ಸಿಲ್ ರವರು ಲೂಸಿಯಾಗೆ ಅಂತರಾಷ್ಟ್ರೀಯ ಮನ್ನಣೆಯನ್ನು ಕೊಟ್ಟಿದ್ದಾರೆ.

ಮೊದಲಿಗೆ, ಪವನ್ ಅವರು ಪ್ರಮುಖ ನಟನ ಪಾತ್ರಕ್ಕೆ ದಿಗಂತ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ, ನಂತರ ಆ ಪಾತ್ರಕ್ಕೆ ಸತೀಶ್ ನೀನಾಸಂ ಅವರನ್ನು ಆರಿಸಿದರು[೫]. ೦.೭೫ crore (US$೧,೬೬,೫೦೦) ವ್ಯಚ್ಛದಲ್ಲಿ ಈ ಚಿತ್ರವನ್ನ ತಯಾರು ಮಾಡಲಾಯಿತು. ಕನ್ನಡ ಕಿರುತೆರೆ ವಾಹಿನಿ ಉದಯ ಟಿವಿ (Udaya TV) ಈ ಚಿತ್ರದ ಸ್ಯಾಟಿಲೈಟ್ ಹಕ್ಕುಗಳನ್ನ ೦.೯೫ crore (US$೨,೧೦,೯೦೦) ಗಳಿಗೆ ಕೊಂಡುಕೊಂಡಿತು.

ಸಂಗೀತ ಸುರುಳಿ[ಬದಲಾಯಿಸಿ]

ಚಿತ್ರದ ಸಂಗೀತವನ್ನು ನವ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ನಿರ್ದೇಶಿಸಿದರು. ಮೂಲತಹ ಪೂರ್ಣ ಅವರು ಒಬ್ಬ ಸಾಫ್ಟ್ವೇರ್ ಇಂಜಿನೀರ್. ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ, ಯೋಗರಾಜ್ ಭಟ್ ಮತ್ತು ರಘು ಶಾಸ್ತ್ರಿ ಅವರು ಸಾಹಿತ್ಯ ರಚಿಸಿದ್ದಾರೆ[೬].

ಹಾಡುಗಳು[ಬದಲಾಯಿಸಿ]

# ಶೀರ್ಷಿಕೆ ಹಾಡಿದವರು ಸಾಹಿತ್ಯ
"ತಿನ್ಬೇಡಕಮ್ಮಿ" ಪೂರ್ಣಚಂದ್ರ ತೇಜಸ್ವಿ ಎಸ ವಿ., ಅರುಣ್ ಎಂ ಸಿ., ಬಪ್ಪಿ ಬ್ಲಾಸಂ ಪೂರ್ಣಚಂದ್ರ ತೇಜಸ್ವಿ ಎಸ ವಿ.
"ನೀ ತೊರೆದ" ಉದಿತ್ ಹರಿತಾಸ್, ಅನನ್ಯ ಭಟ್ ರಘು ಶಾಸ್ತ್ರಿ
"ಜಮ್ಮ ಜಮ್ಮ" ನವೀನ ಸಜ್ಜು ಪೂರ್ಣಚಂದ್ರ ತೇಜಸ್ವಿ ಎಸ ವಿ.
"ಯಾಕೋ ಬರ್ಲಿಲ್ಲ" ನಾವೀನ್ ಸಜ್ಜು ಪೂರ್ಣಚಂದ್ರ ತೇಜಸ್ವಿ ಎಸ ವಿ.
"ಹೇಳು ಶಿವ" ನವೀನ ಸಜ್ಜು, ಯೋಗರಾಜ್ ಭಟ್, ರಕ್ಷಿತ್ ನಗರ್ಲೆ ಯೋಗರಾಜ್ ಭಟ್
"ಜಮ್ಮ ಜಮ್ಮ - ಪ್ಯಾಥೋ" ನವೀನ ಸಜ್ಜು ಪೂರ್ಣಚಂದ್ರ ತೇಜಸ್ವಿ ಎಸ ವಿ.
"ತಿನ್ಬೇಡಕಮ್ಮಿ" (Bonus track) ಸಂಗೀತ ರಾಜೀವ್, ನಿತಿನ್ ಆಚಾರ್ಯ, ಸ್ಪರ್ಶ ಆರ.ಕೆ. ಪೂರ್ಣಚಂದ್ರ ತೇಜಸ್ವಿ ಎಸ ವಿ.

ಚಿತ್ರ ಬಿಡುಗಡೆ[ಬದಲಾಯಿಸಿ]

ಜುಲೈ ೨೦, ೨೦೧೩ರಂದು ಲಂಡನ್ ಇಂಡಿಯಾಯನ್ ಚಲನಚಿತ್ರೋಸವದಲ್ಲಿ ಈ ಚಿತ್ರ ಮೊದಲು ಪ್ರದರ್ಶನ ಕಂಡಿದ್ದು[೭].

ಪಿವಿಆರ್ ಸಿನೆಮಾಸ್ ಈ ಚಿತ್ರವನ್ನ ಸೆಪ್ಟೆಂಬರ್ ೬, ೨೦೧೩ರಂದು "Director’s Rare" ವಿಭಾಗದಲ್ಲಿ ಭಾರತದಾದ್ಯಂತ ಬಿಡುಗಡೆ ಮಾಡಿದರು. ಇಂಗ್ಲೀಶ್ ಅಡಿಬರಹಗಳ ಜೊತೆ ಬೆಂಗಳೂರು, ಚೆನ್ನೈ, ಕೊಚಿ, ಹೈದೆರಬಾದ್, ಮುಂಬಯಿ, ಪುಣೆ, ಅಹೆಮೆದಬಾದ್, ಸೂರತ್, [ಡೆಲ್ಲಿ] ಗಳಲ್ಲಿ ಕೂಡ ಈ ಚಿತ್ರವನ್ನೂ ಬಿಡುಗಡೆ ಮಾಡಲಾಗಿತ್ತು.[೮] ಲೂಸಿಯಾ ಪಾಕಿಸ್ತಾನ್ನಲ್ಲಿ ಕೂಡ ಬಿಡುಗಡೆಗೆ ಸಜ್ಜಾಗಿತ್ತು.[೯][೧೦]

ಉಲ್ಲೇಖಗಳು[ಬದಲಾಯಿಸಿ]

 1. "Crowd-funding show gains pace with Kannada movie Lucia, over 100 people invest through Facebook & blog". The Economic Times. 13 April 2013. Italic or bold markup not allowed in: |publisher= (help)
 2. "Crowd-funded 'Lucia' wins smash hit 4th edition of LIFF". London Indian Film Festival. Italic or bold markup not allowed in: |publisher= (help)
 3. Making Enemies ಪವನ್ ಅವರ ಬ್ಲಾಗ್ ನ ಒಂದು ಲೇಖನ.
 4. Swimming Against TheTide : Postnoon
 5. Satish replaces Diganth in Kannada film 'Lucia'
 6. Lucia Song Lyrics
 7. Lucia to premiere at LIFF - The New Indian Express A first for a Kannada film, Lucia will be premiered at the London Indian Film Festival on July 20 along with other B-Town movies like Monsoon Shootout and Bombay Talkies.
 8. Kannada film Lucia to have a nationwide release - Rediff.com Movies
 9. Pawan Kumar's Kannada film 'Lucia' to be released in Pakistan - IBNLive
 10. Lucia to be released in Pakistan? - The Times of India

ಇತರೆ ಕೊಂಡಿ ಮತ್ತಿ ಸಂಪರ್ಕಗಳು[ಬದಲಾಯಿಸಿ]