ನೀನಾಸಂ ಸತೀಶ್

ವಿಕಿಪೀಡಿಯ ಇಂದ
Jump to navigation Jump to search
ನೀನಾಸಂ ಸತೀಶ್
ಜನನ
ಶಿವಕುಮಾರ್

ಜೂನ್ ೨೦
ರಾಷ್ಟ್ರೀಯತೆಭಾರತೀಯ
ವೃತ್ತಿ
  • ನಟ
  • ಹಾಡುಗಾರ
  • ನಿರ್ಮಾಪಕ
  • ಹಾಡು ಬರಹಗಾರ
ಜೀವಿತಾವಧಿ೨೦೦೮ – ಈ ವರೆಗೂ
ನೀನಾಸಂ ಸತೀಶ್
ಮಧ್ಯಮ
ಶೈಲಿ
ಪ್ರಭಾವಗಳು

ಸತೀಶ್ ನೀನಾಸಂ ಎಂದೇ ಖ್ಯಾತಿಗಳಿಸಿರುವ (ಶಿವಕುಮಾರ್) ಇವರು ಜನಿಸಿದ್ದು ಮಂಡ್ಯ ಜಿಲ್ಲೆಯ ಯಳದಳ್ಳಿಲ್ಲಿ . ಇವರ ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಸ್ವಂತ ಊರಿನಲ್ಲೇ. ಇವರು ಸಿನಿಮಾರಂಗದಲ್ಲಿ ನಟಿಸಬೇಕೆಂದು ಆಸಕ್ತಿ ಇರುವುದರಿಂದ ಇವರು ಡಿಪ್ಲಮೋ ಇನ್ ಅಕ್ಟಿಂಗ್ ಎಂಬ ಎರಡು ವರ್ಷದ ಕೋರ್ಸ್ ಮುಗಿಸಿದ ನಂತರ ಇವರಿಗೆ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶಗಳು ದೊರೆತವು.

ಗಿರೀಶ್ ಕಾರ್ನಡ್, ಪೂರ್ಣಚಂದ್ರ ತೇಜಸ್ವಿ, ಯು.ಆರ್ ಅನಂತಮೂರ್ತಿ, ಬಿ.ವಿ ಕಾರಂತ್, ಸೇರಿದಂತೆ ಹಲವು ಸಾಹಿತಿಗಳು ಇವರಿಗೆ ಸ್ಫೂರ್ತಿಯಾಗಿದ್ದರು. ನಂತರ ಇವರು 2008ರಲ್ಲಿ ಇವರ ಸಿನಿಮಾ ಜೀವನ ಪ್ರಾರಂಭವಾಯಿತು. "ಲೈಫ್ ಇಷ್ಟೇನೇ", ಪಂಚರಂಗಿ, ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಹಿಸಿದ್ದಾರೆ. ನಂತರ "ಲುಸಿಯಾ" ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ನೀನಾಸಂ ಸತೀಶ್ ಆಗಿ ಹೊರ ಹೊಮ್ಮಿದರು. ರಾಕೆಟ್ ಚಿತ್ರಕ್ಕೆ ನಿರ್ದೇಶನ, ನಿರ್ಮಾಪಕ, ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡರು.