ಲಾರಾ ಡಾಕ್ರಿಲ್
ಲಾರಾ ಡಾಕ್ರಿಲ್ ಅವರು ೨೮ ಮೇ ೧೯೮೬ ರಂದು ಜನಿಸಿದರು.ಲಾರಾ ಡಾಕ್ರಿಲ್ ದಕ್ಷಿಣ ಲಂಡನ್ನ ಕವಿಯತ್ರಿ ಮತ್ತು ಸಚಿತ್ರಕಾರರಾಗಿದ್ದರು. ಆಕೆ ಒಬ್ಬ ಲೇಖಕಿ ಮತ್ತು ಅವರು ಹಲವಾರು ಸಣ್ಣ ಕಥೆಗಳನ್ನು ಬರೆದರು.ಲಾರಾರವರು ಚಿಕ್ಕ ವಯಸ್ಸಿನಿಂದಲೇ ಕುಟುಂಬ ಮತ್ತು ಸ್ನೇಹಿತರನ್ನು ಕುರಿತು ಹಲವಾರು ಕವಿತೆಗಳನ್ನು ಮತ್ತು ಕಥೆಗಳನ್ನು ಬರೆಯಲಾರ೦ಭಿಸಿದಳು.ದೇಶದಲ್ಲಿ ಅತ್ಯಂತ ಪ್ರತಿಭಾವಂತ ಲೇಖಕರು ಮತ್ತು ಕವಿಗಳಲ್ಲಿ ಒಬ್ಬರು ಲಾರಾ ಡಾಕ್ರಿಲ್.ಲಾರಾ ಬಿಡುವಿಲ್ಲದ ವ್ಯಕ್ತಿ.ಬರಹಗಾರಿ ಮತ್ತು ಸೃಜನಶೀಲ ಬರವಣಿಗೆ ಶಿಕ್ಷಕಿಯಾದ ಅವರು, ರೊಲ್ಡ್ ಡಹ್ಲ್ನಲ್ಲಿ ವರದಿಗಾರರಾಗಿದ್ದರು ಮತ್ತು ನ್ಯೂಸ್ನೈಟ್, ಬಿಬಿಸಿ ಬ್ರೇಕ್ಫಾಸ್ಟ್ ಮತ್ತು ಬಿಬಿಸಿ ವುಮನ್'ಸ್ ಅವರ್ನಲ್ಲಿ ಕೆಲಸ ಮಾಡಿದರು.ತ೦ದೆ,ತಾಯಿ, ಕಿರಿಯ ಸಹೋದರ ಮತ್ತು ಸಹೋದರಿಯೇ ಆಕೆಯ ಲೋಕ.ಲಾರಾರವರ ತಂದೆಯ ಹೆಸರು ಕೆರ್ರಿ, ಆತ ಮೊದಲು ವಾಹನ ಚಾಲಕರಾಗಿ ಕೆಲಸ ನಿರ್ವಹಿಸಿದರು, ನ೦ತರ ಕಾಳಜಿ ಕೆಲಸಗಾರರಾನಗಿ ಕೆಲಸ ನಿರ್ವಹಿಸಿದರು .ಅವರ ತಾಯಿಯ ಹೆಸರು ಜೈನ್. ಟೆಲಿವಿಷನ್ ಪ್ರದರ್ಶನಗಳನ್ನು ಮಾಡಲು ಕನಸುಗಳನ್ನು ಕಟ್ಟುವಾಗಲು ಕುಟುಂಬವನ್ನು ಬೆಳೆಸಲು ಅವರು ಪ್ರಯಾಸಪಟ್ಟರು.ಆಕೆಯ ತಾಯಿ ನಿಜವಾಗಿಯೂ ಒಳ್ಳೆಯ ಅಡುಗೆಯನ್ನು ಮಾಡಿ,ಸಂತೋಷದಿ೦ದ ಕುಟು೦ಬವನ್ನು ನೋಡಿಕೊ೦ಡಳು.ತಮಗೆ ಸಾಕಷ್ಟು ಹಣವಿಲ್ಲದಿದ್ದರು,ಇದ್ದ ಅಷ್ಟರಲ್ಲಿ ತೃಪ್ತಿ ಪಟ್ಟರು.
ಜೀವನ ಮತ್ತು ಕೃತಿಗಳು
[ಬದಲಾಯಿಸಿ]ಡಾಕ್ರಿಲ್ ಹುಟ್ಟಿ ಬೆಳೆದದ್ದು ಬ್ರಿಕ್ಸ್ಟನ್ ಎ೦ಬ ಸ್ಥಳದಲ್ಲಿ.ಕ್ರೊಯ್ಡಾನ್ನಲ್ಲಿ ದಿ ಬ್ರಿಟ್ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ಗೆ ಸೇರಿದರು.ಟೊಪ್ಶಾಪ್ನಲ್ಲಿ ಬ್ಯಾರಿ ಎಂ ಮೇಕ್ ಅಪ್ ಕೌಂಟರ್ನಲ್ಲಿ ಲಾರಾರವರ ಮೊದಲ ಕೆಲಸ ಮಾಡಿದರು.ಇಪ್ಪತ್ತೆರಡು ವರ್ಷ ವಯಸ್ಸಿನಲ್ಲಿ ಲಾರಾರವರು ದಿ ಟೈಮ್ಸ್ನ ಪ್ರಕಾರ ೨೦೦೮ ರ ಹತ್ತು ಸಾಹಿತ್ಯಿಕ ನಟರಲ್ಲಿ ಒಬ್ಬರು ಎಂದು ಹೆಸರು ಗಳಿಸಿದರು ಮತ್ತು ೨೦೦೯ ರಲ್ಲಿ ಎಲ್ಲೆ ಅವರ ಅತ್ಯುತ್ತಮ ಇಪ್ಪತ್ತು ಮುಖಗಳಲ್ಲಿ ಲಾರಾರನ್ನು ಆಯ್ಕೆ ಮಾಡಿಕೊ೦ಡರು.ಆಕೆಗೆ ತಂಡದೊ೦ದಿಗೆ ಕೆಲಸ ಮಾಡಲು ಎಲ್ಲಿಲದ ಆನ೦ದ, ಆದ್ದರಿಂದ ಗೀತರಚನೆ ಮತ್ತು ರಂಗಮಂದಿರ-ಬರಹಗಳನ್ನು ಖುಷಿಯಿ೦ದ ಮಾಡುದಳು. ಆಕೆ ಹಾಡುಗಾರರಾದ ಕೇಟ್ ನ್ಯಾಶ್ ಮತ್ತು ಅಡೆಲಿ ಹೊ೦ದಿಗೆ ಗೆಳೆತನ ಮಾಡಿಕೊ೦ಡಳು.ಅಡೆಲೆಳೊಂದಿಗೆ ಸ೦ಭ೦ದ ಮಾಡಿಕೊ೦ಡ ನ೦ತರ, ಅಡೆಲೆ ಅವರ ಹಾಡು "ಮೈ ಸೇಮ್" ತನ್ನ ಮೊದಲ ಆಲ್ಬಂಮಾಗಿ ಮಾಡಲು ಆಕೆಯನ್ನು ಪ್ರೇರೇಪಿಸಿತು.ರಾಯಲ್ ಆಲ್ಬರ್ಟ್ ಹಾಲ್ ಸಂಗೀತ ಕಚೇರಿಯಲ್ಲಿ ಅಡೆಲೆಯವರು "ಮೈ ಸೇಮ್" ಬಗ್ಗೆ ಮಾತನಾಡುವಾಗ, ಪ್ರೇಕ್ಷಕರಲ್ಲಿ ಲಾರಾ ಕಾಣಿಸಿಕೊಂಡರ೦ತೆ, "ರೆಮಿಡೀ" ಗಾಗಿ ಪ್ರೇರಣೆ ನೀಡಿದ್ದು ಲಾರಾ ಎ೦ದು ಅಡೆಲೆ ತನ್ನ ಪ್ರೇಕ್ಷಕರಿಗೆ ಹೇಳಿದರು. ಲಾರಾರವರು ಗ್ಲ್ಯಾಸ್ಟನ್ಬರಿ, ಲ್ಯಾಟಿಟ್ಯೂಡ್, ಕ್ಯಾಂಪ್ ಬೆಸ್ಟಿವಲ್, ದಿ ಬಿಗ್ ಚಿಲ್, ಉಡ್ಡರ್ಬೆಲ್ಲಿ ಮತ್ತು ಲಂಡನ್ ವರ್ಡ್ ಫೆಸ್ಟಿವಲ್ನಂತಹ ಸಂಗೀತಗೋಷ್ಠಿ ಮತ್ತು ಉತ್ಸವಗಳಲ್ಲಿ ಅಭಿನಯಿಸಿದರು.ಡಾಕ್ರಿಲ್ ನ್ಯೂಸ್ನೈಟ್ ರಿವ್ಯೂ ಮತ್ತು ವುಮನ್ ಅವರ್ನಲ್ಲಿ ಭೇಟಿ ನೀಡಿದರು.೨೦೧೨ ರಲ್ಲಿ ಫ್ಲೀಟಿಂಗ್ ಮ್ಯಾಗಝೀನ್ ಅವರು ಸಂದರ್ಶನ ನೀಡಿದರು, ಅಲ್ಲಿ ಅವರು ತನ್ನ ಪ್ರೀತಿಯ ಬಗ್ಗೆ ಚರ್ಚಿಸಿದರು.ಅವರು ಪ್ರಸ್ತುತ ಚಾರಿಟಿ ಫಸ್ಟ್ ಸ್ಟೋರಿಯ ಬರಹಗಾರಿಯಾಗಿದ್ದರು.ಡಾಕ್ರಿಲ್ನ ಮೊದಲ ಪುಸ್ತಕ, ಮಿಸ್ಟೇಕ್ಸ್ ಇನ್ ದಿ ಬ್ಯಾಕ್ಗ್ರೌಂಡ್.ಆಕೆ ತನ್ನ ಕವಿತೆಗಳನ್ನು ತನ್ನ ಸ್ವಂತ ರೇಖಾಚಿತ್ರಗಳೊಂದಿಗೆ ವಿವರಿಸಿದ್ದಳು.ಡಾಕ್ರಿಲ್ನ ಎರಡನೇ ಭಾಗವಾಗಿ ಪ್ರಕಟವಾದ ಕೃತಿ, ಅಗ್ಲಿ ಷಿ ಗರ್ಲ್.ಇದು ಡೈರಿ ರೂಪದಲ್ಲಿ ಒಂದು ಕಾದಂಬರಿಯಾಗಿತ್ತು, ಇದು ಸ್ನೇಹಿತರ ಮತ್ತು ಸ್ವಯಂ-ವಿಶ್ವಾಸಾರ್ಹತೆಯ ಕೊರತೆಯನ್ನು ಕಂಡುಕೊಳ್ಳುವ ಹುಡುಗಿಯ ಜೀವನವನ್ನು ಕುರಿತು ಬರೆದ ಕಾದ೦ಬರಿ.ಲಾರಾರವರ ಮತೊ೦ದು ಪುಸ್ತಕ ಎಕೋಸ್.ಎಕೋಸ್ ಎಂಬುದು ಲಂಡನ್ನಲ್ಲಿರುವ ಪ್ರಾಣಿಗಳು ಮತ್ತು ಆಹಾರ, ಶಾಲಾ ಮಕ್ಕಳು ಮತ್ತು ಭಿಕ್ಷುಕರು ಬಗ್ಗೆಯ ಒ೦ದು ಸಣ್ಣ ಕಥೆ. "ಡಾರ್ಸಿ ಬರ್ಡಾಕ್" (೨೦೧೪) ಎನ್ನುವುದು ಚಿಕ್ಕ ಹುಡುಗಿಯರ ದಿನಚರಿ ಮತು ಸ್ನೇಹಿತರೊ೦ದಿಗೆ ಅವಳ ಸಾಹಸಗಳು ಮತ್ತು ಅವರ ದುಷ್ಟ ನೆರೆಯವರೊಂದಿಗೆ ವಾದಗಳ ಬಗ್ಗೆ ಬರೆದ ಪುಸ್ತಕ.ಲೋರಲಿ (ಹಾಟ್ ಕೀ ಬುಕ್ಸ್, ೨೦೧೫) ಎ೦ಬ ಕಾದಂಬರಿ,ವರ್ಣರಂಜಿತ,ಕೆಚ್ಚೆದೆಯ, ಶ್ರೀಮಂತ ಮತ್ತು ಅದ್ಭುತದಿ೦ದ ಕೂಡಿದೆ. ಈ ಮತ್ಸ್ಯಕನ್ಯೆ ಕಥೆ ಮಸುಕಾದ ಹೃದಯಕ್ಕೆ ಅಲ್ಲ.ಪದಗಳೊಂದಿಗಿನ ಅವಳ ಉದ್ಧಟ ಮತ್ತು ವಿಶಿಷ್ಟತೆ ಸಂಗೀತ ಮತ್ತು ಉತ್ಸವಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿತು."ಡಾರ್ಸಿ ಬರ್ಡಾಕ್" ಲಾರಾ ಅವರ ಮತೊ೦ದು ಪುಸ್ತಕ ಮಕ್ಕಳಿಗಾಗಿ ಬರಯಲಾಗಿದೆ.ಹೊಸ ಮತ್ತು ರುಚಿಕರವಾದ ದುಃಖದಿಂದ ಕೂಡಿದ ಡಾರ್ಸಿ ಬರ್ಡಾಕ್ ,ಲಾರಾ ಡಾಕ್ರಿಲ್ ಮಕ್ಕಳ ಕಾದಂಬರಿಯಲ್ಲಿ ಅತ್ಯಾಕರ್ಷಕ ಹೊಸ ಪ್ರತಿಭೆ ಎಂದು ದೃಢವಾಗಿ ಸ್ಥಾಪಿಸಲಾಗಿದೆ.ಮಕ್ಕಳಿಗಾಗಿ ಲಾರಾ ಡಾಕ್ರಿಲ್ ಅವರ ಮೊದಲ ಪುಸ್ತಕವವೂ ವರ್ನದಿ೦ದ ಮತ್ತು ವಿನೋದದಿಂದ ತುಂಬಿದೆ.೨೦೧೪ ರ ವಾಟರ್ಸ್ಟೋನ್ಸ್ ಮಕ್ಕಳ ಪುಸ್ತಕ ಪ್ರಶಸ್ತಿಗಾಗಿ ಆಯ್ಕೆಯಾಗೆದೆ ಡಾರ್ಸಿ ಬರ್ಡಾಕ್. ಆಕೆಯ ಬರವಣಿಗೆ ಮತ್ತು ವಿವರಣೆಗಳನ್ನು ಅಭಿಮಾನಿಗಳನ್ನು ನಿರಿಕ್ಷೆಯಲ್ಲಿರಿಸುವುದಾಗಿ ಮಾಡಿದೆ.ಟಾಮ್ ಗೇಟ್ಸ್ ಮತ್ತು ಕ್ಲಾರಿಸ್ ಬೀನ್ರನ್ನು ಆನಂದಿಸುವ ಯುವ ಓದುಗರು ಆಫ್-ವಾಲ್ ಹಾಸ್ಯವನ್ನು ಆನಂದಿಸುವರು ಎ೦ಬುದು ಖಚಿತ ಎ೦ದು ಹೇಳಲಾಗಿದೆ.ಆಕೆ ವರ್ಷಗಳಿಂದ ದೇಶಾದ್ಯಂತದ ಹಂತಗಳಲ್ಲಿ ಪ್ರದರ್ಶನ ನೀಡುತ್ತಿದಾರೆ.ಉತ್ತಮವಾದ ಸುದ್ಧಿ ಪಟ್ಟಿಯಲ್ಲಿ ಲಾರಾ ಅವರ ಹೆಸರಿತ್ತು.
ಉಲ್ಲೇಖಗಳು
[ಬದಲಾಯಿಸಿ]
- ↑ https://en.wikipedia.org/wiki/Laura_Dockrill
- ↑ "ಆರ್ಕೈವ್ ನಕಲು". Archived from the original on 2016-12-23. Retrieved 2017-10-18.
- ↑ https://commons.wikimedia.org/wiki/Main_Page