ಲಲಿತ್ ಜೆ. ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಲಿತ್ ಜೆ. ರಾವ್
ಹಿನ್ನೆಲೆ ಮಾಹಿತಿ
ಜನ್ಮನಾಮಲಲಿತ್ ರಾವ್
ಜನನ೬ ನವೆಂಬರ್ ೧೯೪೨
ಮೂಲಸ್ಥಳಬೆಂಗಳೂರು, ಕರ್ನಾಟಕ, ಭಾರತ
ಸಂಗೀತ ಶೈಲಿಭಾರತೀಯ ಶಾಸ್ತ್ರೀಯ ಸಂಗೀತ‌
ವೃತ್ತಿಎಂಜಿನಿಯರ್,ಗಾಯಕಿ

ಲಲಿತ್ ಜೆ. ರಾವ್ (ಜನನ ೬ ನವೆಂಬರ್ ೧೯೪೨)ರವರು ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಆಗ್ರಾ ಘರಾನಾ (ಹಾಡಿನ ಶೈಲಿ) ಪ್ರತಿನಿಧಿ.

ಜನನ[ಬದಲಾಯಿಸಿ]

ರಾವ್ ರವರು ೬ ನವೆಂಬರ್ ೧೯೪೨ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.[೧]

ಆರಂಭಿಕ ಜೀವನ[ಬದಲಾಯಿಸಿ]

ರಾವ್ ರವರು ತನ್ನ ಮೂರನೇ ವಯಸ್ಸಿನಲ್ಲಿ ಆಗ್ರಾ ಘರಾನಾ ಗಾಯಕ ಉಸ್ತಾದ್ ಫಯಾಜ್ ಖಾನ್ ರವರ ಸಂಗೀತಗೋಷ್ಠಿಯಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಪರಿಚಯವಾದರು. ಅವರು ರಾಮಾ ರಾವ್ ನಾಯ್ಕ ರಿಂದ ಸಂಗೀತವನ್ನು ಕಲಿಯಲು ಆರಂಭಿಸಿದರು ಮತ್ತು ೧೨ನೇ ವಯಸ್ಸಿನಲ್ಲಿ ಬೆಂಗಳೂರಿನ ಸಂಗೀತ ಸಭೆಯಲ್ಲಿ ತನ್ನ ಮೊದಲ ಸಂಗೀತ ಕಚೇರಿಯನ್ನು ಪ್ರದರ್ಶಿಸಿದರು. ತನ್ನ ೧೪ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಡೆದ ಆಲ್ ಇಂಡಿಯಾ ಕ್ಲಾಸಿಕಲ್ ಮ್ಯೂಸಿಕ್ ಸ್ಪರ್ಧೆಯನ್ನು ಗೆದ್ದರು.[೨]

ವೃತ್ತಿಜೀವನ[ಬದಲಾಯಿಸಿ]

ರಾವ್ ರವರು ಖ್ಯಾಲ್, ಧ್ರುಪದ್, ಧಮಾರ್, ಠುಮ್ರಿ, ತರಣ ಮತ್ತು ಹರಿ ಹಾಡುವುದರಲ್ಲಿ ಪ್ರವೀಣರಾಗಿದ್ದಾರೆ. ಅವರು ಫ್ರಾನ್ಸ್, ಯುಕೆ, ಯುಎಸ್ ಮತ್ತು ಕೆನಡಾದಲ್ಲಿ ಸಂಗೀತ ಕಚೇರಿಯನ್ನು ಪ್ರದರ್ಶಿಸಿದ್ದಾರೆ ಮತ್ತು ಅಖಿಲ ಭಾರತ ರೇಡಿಯೋದ ಉನ್ನತ ದರ್ಜೆಯ ಕಲಾವಿದರಾಗಿದ್ದಾರೆ. ರಾವ್ ರವರು ನಿಯಮಿತವಾಗಿ ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರದರ್ಶನ ನೀಡುತ್ತಾರೆ. "ಸಜನ್ ಮಿಲಾಪ್" ಎಂಬ ಸಂಸ್ಥೆಯನ್ನು ಸ್ಥಾಪಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ೧೯೮೯-೯೧ರವರೆಗೆ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಫೋರ್ಡ್ ಫೌಂಡೇಶನ್ ಅರ್ಚಿವಲ್ ಯೋಜನೆಯ ಮುಖ್ಯ ಸಂಯೋಜಕರಾಗಿದ್ದರು.[೩][೪]

ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://web.archive.org/web/20110615003824/http://www.itcsra.org/aspfiles/personwindow.asp?personid=223
  2. http://sunaad.org/gurus/smt-lalith-j-rao
  3. https://agragharana.wordpress.com/2008/02/14/lalith-j-rao/
  4. https://alchetron.com/Lalith-J-Rao#Partial-discography
  5. https://www.revolvy.com/page/Rajyotsava-Prashasti
  6. https://www.revolvy.com/page/Tana-and-Riri
  7. https://www.revolvy.com/page/Nishagandhi-Puraskaram